Connect with us

NATIONAL

ಭಾರತದ ಕೆಲ ಪ್ರದೇಶಗಳನ್ನು ಸೇರಿಸಿ ನಕ್ಷೆ ಬಿಡುಗೆ ಮಾಡಿದ ಪಾಕಿಸ್ತಾನಕ್ಕೆ ಭಾರತ ತೀಕ್ಷ ಪ್ರತಿಕ್ರೀಯೆ..!

Published

on

ಭಾರತದ ಕೆಲ ಪ್ರದೇಶಗಳನ್ನು ಸೇರಿಸಿ ನಕ್ಷೆ ಬಿಡುಗೆ ಮಾಡಿದ ಪಾಕಿಸ್ತಾನಕ್ಕೆ ಭಾರತ ತೀಕ್ಷ ಪ್ರತಿಕ್ರೀಯೆ..!

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಮತ್ತು ಗುಜರಾತ್‌ನ ಕೆಲವು ಭಾಗಗಳು ತನ್ನ ಪ್ರದೇಶದ ಭಾಗವೆಂದು ಹೇಳಿಕೊಂಡು ಪಾಕಿಸ್ಥಾನ “ಹೊಸ ರಾಜಕೀಯ ನಕ್ಷೆ” ಬಿಡುಗಡೆ ಮಾಡುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಇದನ್ನು ‘ರಾಜಕೀಯ ಮೂರ್ಖತನ’ ಎಂದು ಕರೆದ ಭಾರತ ಈ ಹಾಸ್ಯಾಸ್ಪದ ಹಕ್ಕುಗಳಿಗೆ ಕಾನೂನು ಮಾನ್ಯತೆ ಅಥವಾ ಅಂತರರಾಷ್ಟ್ರೀಯ ವಿಶ್ವಾಸಾರ್ಹತೆ ಇಲ್ಲ ಎಂದು ಖಡಕ್ ಸಂದೇಶ ರವಾನಿಸಿದೆ. ಪಾಕಿಸ್ತಾನದ ಫೆಡರಲ್ ಕ್ಯಾಬಿನೆಟ್ ಮಂಗಳವಾರ ನಕ್ಷೆಯನ್ನು ಅನುಮೋದಿಸಿದೆ ಎಂದು ಹೇಳಲಾಗಿದೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತಮ್ಮ ದೇಶದ ಹೊಸ ರಾಜಕೀಯ ನಕ್ಷೆಯನ್ನು ಇಸ್ಲಾಮಾಬಾದ್‌ನಲ್ಲಿ ಬಿಡುಗಡೆ ಮಾಡಿದ ಕೆಲವೇ ಗಂಟೆಗಳ ನಂತರ ನವದೆಹಲಿಯಿಂದ ಈ ಕಠಿಣ ಪ್ರತಿಕ್ರಿಯೆ ನೀಡಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಭಾರತ ಸರ್ಕಾರದ ಐತಿಹಾಸಿಕ ನಿರ್ಧಾರ ಒಂದು ವರ್ಷ ಪೂರ್ಣಗೊಳ್ಳುವ ಒಂದು ದಿನದ ಮೊದಲು ಪಾಕಿಸ್ತಾನ ನಕ್ಷೆಯಲ್ಲಿ ಈ ವಿವಾದಾತ್ಮಕ ಬದಲಾವಣೆಗಳನ್ನು ಮಾಡಲಾಗಿದೆ.

ನವದೆಹಲಿಯ ಸಂಕ್ಷಿಪ್ತ ಹೇಳಿಕೆಯಲ್ಲಿ ವಿದೇಶಾಂಗ ಸಚಿವಾಲಯವು “ಪಾಕಿಸ್ತಾನದ ರಾಜಕೀಯ ನಕ್ಷೆ” ಎಂದು ಕರೆಯಲ್ಪಡುವದನ್ನು ನಾವು ನೋಡಿದ್ದೇವೆ, ಅದನ್ನು ಪ್ರಧಾನಿ ಇಮ್ರಾನ್ ಖಾನ್ ಬಿಡುಗಡೆ ಮಾಡಿದ್ದಾರೆ.

ಇದು ರಾಜಕೀಯ ಮೂರ್ಖತನದ ಕೃತ್ಯವಾಗಿದ್ದು, ಇದರಲ್ಲಿ ಭಾರತದ ಗುಜರಾತ್ ರಾಜ್ಯಗಳು ಮತ್ತು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಕೇಂದ್ರಾಡಳಿತ ಪ್ರದೇಶಗಳ ಕೆಲ ಪ್ರದೇಶಗಳನ್ನು ಅಸಂಬದ್ಧವಾಗಿ ತನ್ನದೆಂದು ಹೇಳಿಕೊಳ್ಳುತ್ತಿದೆ.

ಇಂತಹ ಹಾಸ್ಯಾಸ್ಪದ ವಿಷಯಗಳಿಗೆ ಕಾನೂನು ಮಾನ್ಯತೆ ಅಥವಾ ಅಂತರರಾಷ್ಟ್ರೀಯ ವಿಶ್ವಾಸಾರ್ಹತೆ ಇಲ್ಲ.

ವಾಸ್ತವವಾಗಿ ಈ ಹೊಸ ಪ್ರಯತ್ನವು ಗಡಿಯಾಚೆಗಿನ ಭಯೋತ್ಪಾದನೆಯ ಮೂಲಕ ಈ ಪ್ರದೇಶವನ್ನು ವಶಪಡಿಸಿಕೊಳ್ಳಲು ಪಾಕಿಸ್ತಾನವು ಆಸಕ್ತಿ ಹೊಂದಿದೆ ಎಂಬುದನ್ನು ಖಚಿತಪಡಿಸುತ್ತದೆ ಎಂದಿದ್ದಾರೆ.

LATEST NEWS

ಯೆಮನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್

Published

on

ಮಂಗಳೂರು/ನವದೆಹಲಿ: ಯೆಮನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ 37 ವರ್ಷದ ನರ್ಸ್ ನಿಮಿಷಾ ಪ್ರಿಯಾಗೆ ಸಹಾಯ ಮಾಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.


ನಿಮಿಷಾ ಪ್ರಿಯಾ ಮರಣದಂಡನೆಗೂ ಕೇವಲ 2 ದಿನಗಳ ಮೊದಲು ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ವಿಚಾರಣೆ ನಡೆಸಲಿದೆ. ಜುಲೈ 16ರಂದು ಯೆಮೆನ್​ನಲ್ಲಿ ನಿಮಿಷಾ ಗಲ್ಲಿಗೇರಲಿದ್ದಾರೆ. ಹೀಗಾಗಿ, ರಾಜತಾಂತ್ರಿಕ ಮಾರ್ಗಗಳನ್ನು ಆದಷ್ಟು ಬೇಗ ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠವು ಜುಲೈ 14ರಂದು ಈ ಪ್ರಕರಣದ ವಿಚಾರಣೆ ನಡೆಸಲಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠವು ಈ ಪ್ರಕರಣವನ್ನು ಜುಲೈ 14ರಂದು ವಿಚಾರಣೆಗೆ ನಿಗದಿಪಡಿಸಿದೆ. ನಿಮಿಷಾ ಅವರಿಗೆ 2017ರಲ್ಲಿ ತಮ್ಮ ಬ್ಯುಸಿನೆಸ್ ಪಾರ್ಟನರ್ ಅನ್ನು ಕೊಂದ ಆರೋಪದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಕೇರಳದ ಪಾಲಕ್ಕಾಡ್ ಜಿಲ್ಲೆಯ ನರ್ಸ್ ಆಗಿರುವ ನಿಮಿಷಾ ಪ್ರಿಯಾ (38) ಅವರು 2017ರಲ್ಲಿ ಯೆಮೆನ್​ಗೆ ಉದ್ಯೋಗಕ್ಕೆ ತೆರಳಿದ್ದರು. ಅವರಿಗೆ 2020ರಲ್ಲಿ ಮರಣದಂಡನೆ ವಿಧಿಸಲಾಯಿತು. ಅವರ ಅಂತಿಮ ಮೇಲ್ಮನವಿಯನ್ನು 2023ರಲ್ಲಿ ತಿರಸ್ಕರಿಸಲಾಗಿತ್ತು.

ಇದನ್ನೂ ಓದಿ: ಕೇರಳದ ನರ್ಸ್ ಗೆ ಯೆಮೆನ್ ನಲ್ಲಿ ಮರಣದಂಡನೆ; ಏನಿದು ಪ್ರಕರಣ ?

ನಿಮಿಷಾ ಪ್ರಿಯಾ ಪ್ರಸ್ತುತ ಯೆಮೆನ್‌ನ ರಾಜಧಾನಿ ಸನಾದಲ್ಲಿರುವ ಜೈಲಿನಲ್ಲಿದ್ದಾರೆ. ರಾಜತಾಂತ್ರಿಕ ಮಾರ್ಗಗಳ ಮೂಲಕ ನಿಮಿಷಾ ಪ್ರಿಯಾ ಅವರಿಗೆ ಸಹಾಯ ಮಾಡಲು ಕಾನೂನು ಬೆಂಬಲ ನೀಡುವ “ಸೇವ್ ನಿಮಿಷಾ ಪ್ರಿಯಾ – ಇಂಟರ್ನ್ಯಾಷನಲ್ ಆಕ್ಷನ್ ಕೌನ್ಸಿಲ್” ಎಂಬ ಸಂಸ್ಥೆ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿಯನ್ನು ಸಲ್ಲಿಸಿತ್ತು. ನಿಮಿಷಾ ಪ್ರಿಯಾಳ ಮರಣದಂಡನೆಗೆ ತಾತ್ಕಾಲಿಕ ದಿನಾಂಕವನ್ನು ಯೆಮೆನ್ ಆಡಳಿತವು ಜುಲೈ 16 ರಂದು ನಿಗದಿಪಡಿಸಿದೆ ಎಂದು ಹೇಳುವ ಮಾಧ್ಯಮ ವರದಿಯನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ತುರ್ತಾಗಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ.

Continue Reading

LATEST NEWS

ದೆಹಲಿ ಮತ್ತು ಎನ್‌ಸಿಆರ್ ಪ್ರದೇಶದಲ್ಲಿ 4.4 ತೀವ್ರತೆಯ ಪ್ರಬಲ ಭೂಕಂಪನ

Published

on

ನವದೆಹಲಿ: ದೆಹಲಿ ಮತ್ತು ಎನ್‌ಸಿಆರ್ ಪ್ರದೇಶದಲ್ಲಿ 4.4 ತೀವ್ರತೆ ಪ್ರಬಲ ಭೂಕಂಪನ ಸಂಭವಿಸಿದ ಘಟನೆ ಇಂದು (ಜು. 10) ಮುಂಜಾನೆ ನಡೆದಿದೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಈ ಮಾಹಿತಿ ತಿಳಿಸಿದ್ದು, ಬೆಳಗ್ಗೆ 9:04ರ ಸುಮಾರಿಗೆ ಭೂಮಿ ಕಂಪಿಸಿದೆ ಎಂದು ಹೇಳಿದೆ.1 ನಿಮಿಷ ಕಾಲ ಭೂಕಂಪನದ ಅನುಭವವಾಗಿದೆ.

ಇದನ್ನೂ ಓದಿ: ಸುಳ್ಯ: ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ತುಳಿದು ವ್ಯಕ್ತಿ ಸಾವು

ಭೂಮಿ ಕಂಪಿಸಿದ್ದರಿಂದ ಜನರು ಗಾಬರಿಗೊಂಡು ಮನೆಯಿಂದ ಹೊರಗೆ ಓಡಿದ್ದಾರೆ. ಯಾವುದೇ ಹಾನಿ ಹಾಗೂ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಹರಿಯಾಣದ ಜಜ್ಜರ್‌ನಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿದೆ.

Continue Reading

LATEST NEWS

7 ಪ್ರಯೋಗ ಯಶಸ್ವಿ; ಶುಭಾಂಶು ಶುಕ್ಲಾ ಭೂಮಿಗೆ ಮರಳುವ ದಿನಾಂಕ ಫಿಕ್ಸ್?

Published

on

ಮಂಗಳೂರು/ನವದೆಹಲಿ: ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾನಿಗಳು ಭೂಮಿಗೆ ವಾಪಸ್ಸಾಗಲು ದಿನಾಂಕ ನಿಗದಿಯಾಗಿದೆ.


ಜೂ.25ರಂದು ಉಡಾವಣೆಗೊಂಡ ಫಾಲ್ಕನ್-9 ರಾಕೆಟ್, ಜೂ.26ರಂದು ತಲುಪಿತ್ತು. ಅಂದಿನಿಂದಲೂ ಹಲವು ಪ್ರಯೋಗಗಳಲ್ಲಿ ತೊಡಗಿರುವ ಶುಭಾಂಶು ಮತ್ತವರ ತಂಡವು ಜು.10ರಂದು ಐಎಸ್‌ಎಸ್‌ನಿಂದ ಮರಳುವ ಸಾಧ್ಯತೆ ಇದ್ದು, ಇಸ್ರೋ-ಆಕ್ಸಿಯಂ ಸಂಸ್ಥೆಗಳು ಇದಕ್ಕಾಗಿ ತಯಾರಿ ನಡೆಸಿವೆ.

7 ಪ್ರಯೋಗ ಯಶಸ್ವಿ
ಶುಭಾಂಶು ಶುಕ್ಲಾ ಅವರ 14 ದಿನಗಳ ಬಾಹ್ಯಾಕಾಶ ವಾಸ್ತವ್ಯ ಮುಗಿಯುತ್ತಾ ಬಂದಿದ್ದು, ಈಗಾಗಲೇ 7 ಪ್ರಯೋಗಳನ್ನು ಪೂರ್ಣಗೊಳಿಸಿದ್ದು, ಈ ಪೈಕಿ 4 ಪ್ರಯೋಗಗಳು ಕರ್ನಾಟಕದ ವಿಜ್ಞಾನಿಗಳು ಸಿದ್ದಪಡಿಸಿದ್ದಾರೆ.

ನಾನು ಇಲ್ಲಿ ಭಾರಿ ಬ್ಯುಸಿಯಾಗಿದ್ದೇನೆ ಎಂದ ಶುಭಾಂಶು ಶುಕ್ಲಾ
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಗುರುತ್ವಾಕರ್ಷಣಾ ಶಕ್ತಿ ಇರಲ್ಲ. ಹೀಗಾಗಿ ಐಎಸ್ಎಸ್​ನಲ್ಲಿ ಕೆಲಸ ಮಾಡುವುದು ಅದ್ಭುತ ಅನುಭವ. ದೇಶಾದ್ಯಂತ ಇರುವ ಶಿಕ್ಷಣ ಸಂಸ್ಥೆಗಳು ವಿನ್ಯಾಸಗೊಳಿಸಿದ ಪ್ರಯೋಗಗಳನ್ನು ಮಾಡುವುದು ಅದ್ಭುತ ಅನುಭವ ಎಂದು ಬುಧವಾರ ಶುಭಾಂಶು ಶುಕ್ಲಾ ಹೇಳಿದ್ದಾರೆ. ಬಾಹ್ಯಾಕಾಶ ನಿಲ್ದಾಣ ಹಾಗೂ ಸಂಶೋಧಕರ ಮಧ್ಯೆ ಬ್ರಿಡ್ಜ್ ಆಗಿ ನಾನು ಕೆಲಸ ಮಾಡುವುದಕ್ಕೆ ಹೆಮ್ಮೆಯಾಗುತ್ತಿದೆ. ಸಂಶೋಧಕರ ಪರವಾಗಿ ನಾನು ಸಂಶೋಧನೆ ನಡೆಸುತ್ತಿದ್ದೇನೆ. ನಾನು ಇಲ್ಲಿ ಭಾರಿ ಬ್ಯುಸಿಯಾಗಿದ್ದೇನೆ ಎಂದು ಶುಭಾಂಶು ಶುಕ್ಲಾ ಹೇಳಿದ್ದಾರೆ.

ಇದನ್ನೂ ಓದಿ: ನಾಳೆ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತರಿಕ್ಷಯಾನ; ಬಾಹ್ಯಾಕಾಶದಲ್ಲೂ ಶುಭಾಂಶುಗೆ ಮನೆಯೂಟ!

ಫ್ಲೋರಿಡಾದ ಕರಾವಳಿ ತೀರಕ್ಕೆ ವಾಪಸ್
ದಿ ಆಕ್ಸಿಮ್-4 ಕ್ರ್ಯೂಗಳು ಈ ವಾರ ಭೂಮಿಗೆ ವಾಪಸ್ ಬರಲಿದ್ದಾರೆ. ಇದಕ್ಕೆ ಎಲ್ಲ ಪರಿಸ್ಥಿತಿಗಳು ಅನುಕೂಲಕಾರಿಯಾಗಿರಬೇಕು. ಅಧಿಕೃತವಾಗಿ ನಾಸಾ, ಇಸ್ರೋ ಗಗನಯಾನಿಗಳು ಭೂಮಿಗೆ ವಾಪಸ್ ಬರುವ ನಿಖರ ಸಮಯ, ದಿನಾಂಕವನ್ನು ಘೋಷಿಸಿಲ್ಲ. ಅಮೆರಿಕಾದ ಫ್ಲೋರಿಡಾದ ಕರಾವಳಿ ತೀರಕ್ಕೆ ನಾಲ್ವರು ಗಗನಯಾನಿಗಳು ಕ್ಯಾಪ್ಸುಲಾನಲ್ಲಿ ಬರಲಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page