Connect with us

ವಾಹನ ತಪಾಸಣೆ ವೇಳೆ ಹಿರಿ ಜೀವವನ್ನು ಪೊಲೀಸರು ಹೀಗಾ ನಡೆಸಿಕೊಳ್ಳೋದು.?

Published

on

ವಾಹನ ತಪಾಸಣೆ ವೇಳೆ ಹಿರಿ ಜೀವವನ್ನು ಪೊಲೀಸರು ಹೀಗಾ ನಡೆಸಿಕೊಳ್ಳೋದು.?

ಮಂಗಳೂರು: ವಾಹನ ತಪಾಸಣೆ ವೇಳೆ ಪೊಲೀಸರು ಹಿರಿ ಜೀವವೊಂದರ ಬಳಿ ಹೀನಾಯ ರೀತಿಯಲ್ಲಿ ವರ್ತಿಸಿಕೊಂಡ ಘಟನೆ ಮಂಗಳೂರಿನ ಲಾಲ್ ಭಾಗ್ ಬಳಿ ನಡೆದಿದೆ.

ಮಾಹಾಮಾರಿ ಕೊರೊನಾ ಹಿನ್ನಲೆ ದೇಶಾದ್ಯಾಂತ ಲಾಕ್ ಡೌನ್ ಆಗಿದೆ. ಈ ಹಿನ್ನಲೆ ದ.ಕ.ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಅಳವಡಿಸಲಾಗಿದೆ.

ಅದರಲ್ಲೂ ಜಿಲ್ಲೆ ಹಾಟ್ ಸ್ಪಾಟ್ ಆಗಿ ಗುರುತಿಸಿಕೊಂಡಿದ್ದು ಇನ್ನಷ್ಟು ಕ್ರಮಗಳು ಕಠಿಣವಾಗಿದೆ.

ಹಾಗಾಗಿ ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಪೊಲೀಸರ ಕರ್ತವ್ಯಗಳು ನಿಜವಾಗಿಯೇ ಸಾರ್ವಜನಿಕರ ಹಿತದೃಷ್ಟಿಯಿಂದ ಉತ್ತಮವೇ.

ಆದರೆ ಕೆಲವೊಂದು ಕಡೆ ಪೊಲೀಸರ ವರ್ತನೆ ಬೆಚ್ಚಿ ಬೀಳಿಸುವಂತಿದೆ. ಮಂಗಳೂರು ನಗರದ ಲಾಲ್ ಭಾಗ್ ಜಂಕ್ಷನ್ ನಲ್ಲಿಯೂ ಇಂತಹುದೇ ಒಂದು ಘಟನೆ ನಡೆದಿದೆ.

ವಯೋ ವೃದ್ದರೊಬ್ಬರು ತಮ್ಮ ಕಾರಿನಲ್ಲಿ ಕೆಲಸದ ನಿಮಿತ್ತ ಹೊರಹೋಗಿದ್ದಾರೆ. ಈ ಸಂದರ್ಭ ಪೊಲೀಸರು ತಪಾಸಣೆ ಮಾಡಿ, ‘ಎಲ್ಲಿಗೆ ಹೋಗಬೇಕು’ ಅಂತ ಏರು ಧ್ವನಿಯಲ್ಲಿ ವಿಚಾರಿಸಿದ್ದಾರೆ.

ಅದಕ್ಕೆ ಅಸಹಾಯಕ ಸ್ಥಿತಿಯಲ್ಲಿದ್ದ ಹಿರಿಯ ನಿವೃತ್ತ ಸಿ.ಎ ಸುರೇಶ್ ರಾವ್, ನನಗೆ ಅರ್ಜೆಂಟಾಗಿ ಹೋಗಬೇಕು ನನ್ನನ್ನು ಬಿಟ್ಟುಬಿಡಿ ಅಂತ ಬೇಡ್ಕೊಂಡಿದ್ದಾರೆ.

ಆದ್ರೆ ಪೊಲೀಸರು ಸೀನಿಯರ್ ಸಿಟಿಜನ್ ಅನ್ನೋದನ್ನು ಕೂಡ ಮರೆತು ಅವರನ್ನು ಸತಾಯಿಸಿದ್ದಾರೆ.

ಸುರೇಶ್ ರಾವ್ ಅವರು ವಯೋಸಹಜರಾಗಿದ್ದು, ಮರೆಗುಳಿತನ, ರಕ್ತದೊತ್ತಡ ಖಾಯಿಲೆಗಳಿಂದ ಬಳಲುತ್ತಿದ್ದಾರೆ ಅಂತ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಇನ್ನೊಂದು ಕಡೆ ಅವರ ವಾಗ್ವಾದವನ್ನು ಪೊಲಿಸರು ವೀಡಿಯೋ ಮಾಡಿದ್ದು ಎಷ್ಟು ಸರಿ ಅನ್ನೋ ಮಾತುಗಳು ಕೂಡ ಕೇಳಿ ಬರಲಾರಂಭಿಸಿದೆ.

ಸಮಾಧಾನವಾಗಿ ಸಾರ್ವಜನಿಕರಿಗೆ ತಿಳಿಹೇಳಬೇಕಾದ ಪೊಲೀಸರ ಈ ವರ್ತನೆ ವಿರುದ್ದ ಪರವಿರೋದ ಚರ್ಚೆಗಳು ಆರಂಭವಾಗಿದೆ.

ಮಾತ್ರವಲ್ಲದೆ ಉರ್ವ ಪೊಲೀಸ್ ಠಾಣೆಯಲ್ಲಿ ಸುರೇಶ್ ರಾವ್ ವಿರುದ್ದ ಪ್ರಕರಣ ಕೂಡ ದಾಖಲಾಗಿದೆ.

Advertisement
Click to comment

Leave a Reply

Your email address will not be published. Required fields are marked *

LATEST NEWS

ಭೀಕರ ಅಪಘಾತ; ಟೋಲ್ ಸಿಬ್ಬಂದಿಯನ್ನು 50 ಮೀಟರ್ ಎಳೆದೊಯ್ದ ಟ್ರಕ್!

Published

on

ಉತ್ತರ ಪ್ರದೇಶ: ಟೋಲ್‌ ಪ್ಲಾಜಾದಲ್ಲಿ ಕಾಯುತ್ತಿದ್ದ ಎರಡು ಕಾರುಗಳಿಗೆ ಹಿಂದಿನಿಂದ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಟೋಲ್‌ ಸಿಬ್ಬಂದಿ ಮತ್ತು ಹಲವು ಪ್ರಯಾಣಿಕರಿಗೆ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ಶನಿವಾರ(ಜ.17) ಮಧ್ಯಾಹ್ನ ನಡೆದಿದೆ.


ಮಾತ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾನ್ಪುರ ಹೆದ್ದಾರಿಯಲ್ಲಿರುವ ಸೆಮ್ರಿ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದ್ದು, ಫಾಸ್ಟ್​ ಟ್ಯಾಗ್ ವರ್ಕ್​ ಆಗಲಿಲ್ಲ ಎಂಬ ಕಾರಣಕ್ಕೆ ಎರಡು ಕಾರುಗಳು ಟೋಲ್​ನಲ್ಲೇ ನಿಂತಿದ್ದವು. ಟೋಲ್ ಸಿಬ್ಬಂದಿ ಟ್ಯಾಗ್​ ಸ್ಕ್ಯಾನ್ ಮಾಡುತ್ತಿದ್ದಾಗ ಹಿಂದಿನಿಂದ ಅತಿ ವೇಗದಲ್ಲಿ ಬಂದ ಟ್ರಕ್ ನಿಂತಿದ್ದ ಎರಡು ಕಾರುಗಳಿಗೆ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ: ರಸ್ತೆ ವಿಭಜಕಕ್ಕೆ ಎಸ್ ಯುವಿ ಡಿ*ಕ್ಕಿ; 5 ಮಂದಿ ಸಾ*ವು

ಡಿಕ್ಕಿಯ ರಭಸಕ್ಕೆ ಸಿಬ್ಬಂದಿ ಕಾರಿನ ಬಾನೆಟ್ ಮೇಲೆ ಬಿದ್ದಿದ್ದು, ಟ್ರಕ್ ಅವರನ್ನು ಸುಮಾರು 50 ಮೀಟರ್‌ಗಳಿಗಿಂತಲೂ ಹೆಚ್ಚು ದೂರ ಎಳೆದೊಯ್ದಿದೆ. ಪ್ಲಾಜಾದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.ಸ್ಥಳೀಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Continue Reading

BIG BOSS

ಹನುಮಂತ ಪ್ರಕಾರ ಬಿಗ್ ಬಾಸ್ ಗೆಲ್ಲೋದು ಇವರೇ ಅಂತೆ!

Published

on

BBK12 : ಬಿಗ್ ಬಾಸ್ ಸೀಸನ್ 12 ಕೊನೆಯ ಹಂತಕ್ಕೆ ಬಂದು ನಿಂತಿದೆ. ಸದ್ಯ ಯಾರಿಗೆ ಬಿಗ್ ಬಾಸ್ ವಿನ್ನರ್ ಪಟ್ಟ ಸಿಗಲಿದೆ ಅನ್ನೋ ಕುತೂಹಲ ಬಿಗ್ ಬಾಸ್ ವೀಕ್ಷಕರದ್ದು.  ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ಈಗಾಗಲೇ ಬಹುತೇಕ ಮಂದಿ ವೋಟ್ ಮಾಡಿದ್ದು, ಫಿನಾಲೆಯತ್ತ ದೃಷ್ಟಿ ನೆಟ್ಟಿದ್ದಾರೆ.

ಬಿಗ್ ಬಾಸ್‌ 11ರಲ್ಲಿ ವೈಲ್ಡ್ ಕಾರ್ಡ್ ಪಡೆದಿದ್ದವರು ಗಾಯಕ ಹನುಮಂತ ಲಮಾಣಿ. ಆ ಸೀಸನ್‌ನ ವಿಜೇತರಾಗಿ ಹೊರಬಂದು ಇತಿಹಾಸ ಸೃಷ್ಟಿಸಿದ್ದರು. ವೈಲ್ಡ್ ಕಾರ್ಡ್ ಮೂಲಕ ಒಳಗೆ ಹೋದವರು ಗೆದ್ದು ತೋರಿಸಬಹುದೆಂದು ತೋರಿಸಿಕೊಟ್ಟಿದ್ದರು ಹನುಮಂತ. ಇದೀಗ ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರು ಅನ್ನೋ ಭವಿಷ್ಯ ನುಡಿದಿದ್ದಾರೆ.

ಯಾರು ವಿನ್ನರ್ ?

ಗಿಲ್ಲಿ ಅಣ್ಣ ನನ್ನ ಫೇವರಿಟ್, ಅವರೇ ವಿನ್ನರ್ ಆಗ್ತಾರೆ ಎಂದು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಹನುಮಂತ ಹೇಳಿದ್ದಾರೆ.

ಈ ಬಾರಿಗೆ ಗಿಲ್ಲಿ ಚೆನ್ನಾಗಿ ಆಟವಾಡಿದ್ದಾರೆ. ಅವರು ಗೆಲ್ಲುವ ವಿಶ್ವಾಸ ನನಗೆ ಇದೆ. ಬಿಗ್ ಬಾಸ್ ಮನೆಯಲ್ಲಿ ಯಾವುದೇ ಭೇದ ಭಾವ ಮಾಡುವುದಿಲ್ಲ. ಈ ಬಾರಿ ಅತಿ ಹೆಚ್ಚು ವೋಟಿಂಗ್ ಆಗಿದೆ. ಅತಿ ಹೆಚ್ಚು ವೋಟು ಗಿಲ್ಲಿನಟ ತೆಗೆದುಕೊಂಡಿದ್ದಾರೆ. ನಾನು ಸಹ ಗಿಲ್ಲಿ ನಟನಿಗೆ ವೋಟ್ ಮಾಡಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ : BBK12: ಗಿಲ್ಲಿ ವಿನ್ನರ್ ಆದ್ರೂ ನಿಲ್ಲದ ಕಿಚ್ಚು: ರಕ್ಷಿತಾ ಪರ ಸೋಷಿಯಲ್ ಮೀಡಿಯಾ ವಾರ್; ಯಾಕೆ ಗೊತ್ತಾ?

ನನ್ನ ಫೇವರಿಟ್ ಗಿಲ್ಲಿ ಅಣ್ಣ. ಎಲ್ಲರಿಗೂ ಆಲ್ ದಿ ಬೆಸ್ಟ್. ಸೋತೋರು ಬೇಜಾರ್ ಮಾಡ್ಕೋಬೇಡಿ. ಎಲ್ಲರಿಗೂ ಆಲ್ ದಿ ಬೆಸ್ಟ್, ಗಿಲ್ಲಿ ಅಣ್ಣನಿಗೆ ವಿಶೇಷ ಆಲ್ ದಿ ಬೆಸ್ಟ್. ಸುದೀಪ್ ಸರ್ ಮುಂದೆ ನಿಲ್ಲೋದೆ ಪುಣ್ಯ. ಫೈನಲ್ ವರೆಗೂ ಹೋಗೋದೆ ಪುಣ್ಯ  ಎಂದಿದ್ದಾರೆ.

Continue Reading

LATEST NEWS

ಹಾರಿಸಿದ್ದ ಗಾಳಿಪಟ ಹಿಡಿಯಲು ಹೋಗಿ ಯುವಕ ಸಾ*ವು

Published

on

ಮಂಗಳೂರು/ಬೀದರ್ : ಹಾರಿಸಿದ್ದ ಗಾಳಿಪಟ ಹಿಡಿಯಲು ಹೋಗಿ ಕಟ್ಟಡದ ಮೇಲಿಂದ ಬಿ*ದ್ದು ಯುವಕ ಮೃ*ತಪಟ್ಟಿರುವ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ವಾಂಜರಿ ಬಡಾವಣೆಯಲ್ಲಿ ನಡೆದಿದೆ.

19 ವರ್ಷದ ಶಶಿಕುಮಾ‌ರ್ ಶಿವಾನಂದ ಮೃ*ತ ಯುವಕ. ಶಶಿ ಕುಮಾರ್ ಖಾಸಗಿ ಕಾಲೇಜಿನ ಕಟ್ಟಡದ ಮೇಲೆ ಗಾಳಿಪಟ ಹಾರಿಸಲು ಹೋಗಿದ್ದ. ಗಾಳಿಪಟ ಹಾರಿಸುವಾಗ ದಾರ ತುಂ*ಡಾಗಿದ್ದು. ಈ ವೇಳೆ ಹಾರಿ ಹೋಗುತ್ತಿದ್ದ ಗಾಳಿಪಟ ಹಿಡಿಯಲು ಹೋಗಿ, ಕಟ್ಟಡದ ಮೇಲಿಂದ ಬಿ*ದ್ದಿದ್ದಾನೆ.

ಇದನ್ನೂ ಓದಿ : ಗಿಲ್ಲಿ ಫ್ಯಾನ್ಸ್ ಅಬ್ಬರ ಕಂಡು ಬೆಚ್ಚಿಬಿದ್ದ ಬಿಗ್ ಬಾಸ್ ಮನೆ ಮಂದಿ; ಸುದೀಪ್ ಕೊಟ್ಟ ಸುಳಿವೇನು?

ಪರಿಣಾಮ ಸ್ಥಳದಲ್ಲೇ ಕೊನೆ*ಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page