Connect with us

BANTWAL

ಬಂಟ್ವಾಳದ ಪೊಲೀಸ್‌ ಕಾನ್‌ಸ್ಟೇಬಲರ ‘ಮನ ಮಿಡಿದ’ ಕಥೆ

Published

on

ಬಂಟ್ವಾಳ: ಪೊಲೀಸರಿಗೆ ಹೃದಯವೇ ಇಲ್ಲ. ಅವರ ಮಾತು ಕಟು, ಮನುಷತ್ವವೇ ಇಲ್ಲದವರು ಎಂಬ ಆರೋಪದ ನಡುವೆ ಪೊಲೀಸ್‌ ಪೇದೆಯೊಬ್ಬರು ಕೆಲವು ಮನೆಯ ಕಷ್ಟಕ್ಕೆ ಸ್ಪಂದಿಸಿದ ಮನಮುಟ್ಟುವ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಇಲ್ಲಿನ ಪಾಣೆಮಂಗಳೂರು ವಾರ್ಡ್ ಬೀಟ್ ಪೊಲೀಸ್ ಪ್ರವೀಣ್ ಅವರೇ ಈ ಕಥೆಯ ಹೀರೋ.

ಮೂಲತಃ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶಿವಪುರ ನಿವಾಸಿ ಪ್ರವೀಣ್  ಬಂಟ್ವಾಳ ನಗರ ಠಾಣೆಯ ಪೊಲೀಸ್ ಆಗಿದ್ದು, ಇವರ ಜನಪರ ಕಾಳಜಿ ಸೇವೆ ಇತರರಿಗೆ ಮಾದರಿಯಾಗಿದೆ.  ಇವರು ಲಾಕ್ ಡೌನ್ ಅವಧಿಯಲ್ಲಿ ಪಾಣೆಮಂಗಳೂರು ಸಮೀಪ ಇರುವ ಜೈನರಪೇಟೆ ಪರಿಸರದಲ್ಲಿ ಸುತ್ತಾಡುವ ವೇಳೆ ಇವರ ಕಣ್ಣಿಗೆ ಬಿದ್ದ ಎರಡು ಮನೆಯ ಸ್ಥಿತಿ ಮನಸ್ಸಿಗೆ ತುಂಬಾ ಬೇಸರ ತಂದಿತ್ತು. ಆ ದಿನವೇ ಅವರಿಗೇನಾದರೂ ಸಹಾಯಮಾಡಬೇಕು ಎಂದು  ನಿಶ್ಚಯ ಮಾಡಿದ್ದರು.

 

ಸ್ಥಳೀಯ ಪುರಸಭಾ ಸದಸ್ಯ ಇದ್ರೀಸ್ ಅವರಿಗೆ ತಿಳಿಸಿ, ಜೈನರ ಪೇಟೆ ವಾರ್ಡ್ ನಲ್ಲಿ ಅರ್ಥಿಕ ವಾಗಿ ತೀರಾ ಬಡತನದಲ್ಲಿ ರುವ  ಒಟ್ಟು ಹತ್ತು ಮನೆಗಳನ್ನು ಗುರುತಿಸಿ, ಸ್ವತಃ ಆ  ಮನೆಗಳಿಗೆ ಪ್ರವೀಣ್ ತೆರಳಿ ದೈನಂದಿನ ಆಹಾರದ ಕಿಟ್  ತಲುಪಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದೆ. ‘ಪೊಲೀಸರಲ್ಲಿ ನಾನು ಬದಲಾದಾಗ ಮಾತ್ರ ಸಮಾಜ ಬದಲಾಗುತ್ತದೆ.  ನಾವು ಶುದ್ಧ ವಾಗಿರಬೇಕು ಅವಾಗ ಸಮಾಜ ಸ್ವಚ್ಛವಾಗಿರಬೇಕು’ ಎಂಬುದು ಅವರ ಮಾತು.

ತಂದೆಯ ಅನಾರೋಗ್ಯದ ಮಧ್ಯೆಯೂ ಸಮಾಜಕ್ಕೆ ತಾನು ಏನಾದರೂ ನೀಡಬೇಕು ಎಂಬುದು ಇವರ ಹಂಬಲ, ಅದು ತಾನು ಸ್ವತಃ ದುಡಿದ ಹಣದಲ್ಲಿ ಮಾತ್ರ ಎಂಬುದು ಇವರ ಸಿದ್ದಾಂತವಾಗಿದೆ. ಸದ್ಯ ಇವರ ಈ ಮಹಾತ್ಕಾರ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಏನೇ ಹೇಳಿ ಬಡವರ ಬಗ್ಗೆ ಇವರಿಗೆ ಇದ್ದ ಕಾಳಜಿಗೆ ಸಲಾಂ ಹೊಡೆಯಲೇಬೇಕು.

Advertisement
Click to comment

Leave a Reply

Your email address will not be published. Required fields are marked *

BANTWAL

ಬಂಟ್ವಾಳ: ಗರ್ಭಿಣಿ ಪತ್ನಿಯನ್ನು ಕೊಲೆಗೈದು ಪತಿ ನೇಣು ಬಿಗಿದು ಆತ್ಮಹತ್ಯೆ

Published

on

ಬಂಟ್ವಾಳ: ಗರ್ಭಿಣಿ ಪತ್ನಿಯನ್ನು ಕೊಲೆಗೈದು ಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಬಡಗುಂಡಿ ಎಂಬಲ್ಲಿ ನಡೆದಿದೆ.

ಬಡಗುಂಡಿ ನಿವಾಸಿ ತಿಮ್ಮಪ್ಪ ರಾಮ ಮೂಲ್ಯ (50) ಪತ್ನಿಯನ್ನು ಕೊಲೆಗೈದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಅವರ ಪತ್ನಿ ಜಯಂತಿ (40) ಕೊಲೆಯಾದ ಮಹಿಳೆ. ನಿನ್ನೆ ರಾತ್ರಿ ತಿಮ್ಮಪ್ಪ ರಾಮ ಮೂಲ್ಯ ತನ್ನ ಹೆಂಡತಿ ಜಯಂತಿ ಜತೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು, ಜಗಳ ವಿಕೋಪಕ್ಕೆ ತಿರುಗಿ ಜಯಂತಿ ಅವರಿಗೆ ಹಲ್ಲೆ ಮಾಡಿ, ಕತ್ತು ಹಿಚುಕಿ ಸಾಯಿಸಿರುತ್ತಾನೆ. ಬಳಿಕ ತಿಮ್ಮಪ್ಪ ಕೂಡಾ ಅಡುಗೆ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.

ಈ ಘಟನೆಗೆ ಸಂಬಂಧಿಸಿದಂತೆ, ಮೃತ ಜಯಂತಿ ಅವರ ತಂಗಿ ಫರಂಗಿಪೇಟೆಯ ಸುಜಾತಾ ಮತ್ತು ಮೃತ ತಿಮ್ಮಪ್ಪ ಅವರ ಅಣ್ಣ ಸಜೀಪ ಮೂಡ ನಿವಾಸಿ ವಿಶ್ವನಾಥ ಅವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

READ IN ENGLISH : https://www.nammakudlaenglish.com/bantwal-man-kills-pregnant-wife-dies-by-suicide/

ಇದನ್ನೂ ಓದಿ: ಬೆಂಗಳೂರು: ಮರದ ಕೊಂಬೆ ಬಿದ್ದು ಮೆದುಳು ನಿಷ್ಕ್ರಿಯಗೊಂಡಿದ್ದ ಅಕ್ಷಯ್ ಸಾವು

ತಿಮ್ಮಪ್ಪ ಅವರ ಮನೆ ಸಜೀಪ ಮೂಡ ಗ್ರಾಮದ ಮಿತ್ತಮಜಲಿನಲ್ಲಿದ್ದು, ಜಯಂತಿಯ ಮನೆ ಬಡಗುಂಡಿಯಲ್ಲಿದೆ. ಅವರಿಗೆ 15 ವರ್ಷಗಳ ಹಿಂದೆ ಮದುವೆಯಾಗಿದ್ದು, ಈವರೆಗೆ ಮಕ್ಕಳಾಗಿರಲಿಲ್ಲ. ಸದ್ಯ ಜಯಂತಿ ಗರ್ಭಿಣಿಯಾಗಿದ್ದು, ಜುಲೈ 2 ರಂದು ಸೀಮಂತ ನಡೆಸಲು ದಿನಾಂಕ ನಿಗದಿಯಾಗಿತ್ತು ಎನ್ನಲಾಗಿದೆ. ಇದೀಗ ದಂಪತಿ ಮಧ್ಯೆ ನಡೆದ ಜಗಳಕ್ಕೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ಭೇಟಿ ನೀಡಿ ಪ್ರಕರಣ ದಾಖಲಿಸಿ ಕೊಂಡು ತನಿಖೆ ಮುಂದುವರಿಸಿದ್ದಾರೆ.

Continue Reading

BANTWAL

ಬಂಟ್ವಾಳ: ಪಾಣೆಮಂಗಳೂರು ಹಳೆ ಸೇತುವೆ ಸಂಚಾರ ನಿಷೇಧ

Published

on

ಬಂಟ್ವಾಳ: ತಾಲೂಕಿನ ಪಾಣೆಮಂಗಳೂರು ಹಳೆಯ ಉಕ್ಕಿನ ಸೇತುವೆಯು ಶಿಥಿಲಾವಸ್ಥೆಗೆ ತಲುಪಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸಂಚಾರ ನಿಷೇಧ ಮಾಡಿ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಡಿ.ಭಟ್ ಅವರು ಆದೇಶಿಸಿದ್ದಾರೆ.


ಮುಂದಿನ ದಿನಗಳಲ್ಲಿ ಯಾವುದೇ ಅನಾಹುತ ಆಗಬಾರದೆಂಬ ನಿಟ್ಟಿನಲ್ಲಿ ಮತ್ತು ಸೇತುವೆಯ ಧಾರಣಾ ಸಾಮರ್ಥ್ಯ ಪರಿಶೀಲನೆ ಮಾಡಿ ವರದಿ ಬಂದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವಂತೆ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಆದೇಶ ಮಾಡಿದ್ದಾರೆ.

ಇದನ್ನೂ ಓದಿ: ಜೂನ್.16 ರಿಂದ 20ರ ವರೆಗೆ ನಂದಿ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧ

ಪಾಣೆಮಂಗಳೂರಿನ ಉಕ್ಕಿನ ಸೇತುವೆ 111 ವರ್ಷವನ್ನು ಪೂರೈಸಿದ್ದು, ಅವಿಭಜಿತ ದ.ಕ. ಜಿಲ್ಲೆಯ ಮೊದಲ ಸಂಪರ್ಕ ಸೇತುವೆ ಎನ್ನುವ ಹೆಗ್ಗಳಿಕೆಯೂ ಈ ಸೇತುವೆಗಿದೆ. ಇನ್ನು ಪಾಣೆಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದ್ದು ಸ್ಥಳೀಯರಿಗೆ ಸಂಚಾರದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.

 

 

 

 

Continue Reading

BANTWAL

ಬಂಟ್ವಾಳ: ಅಡಿಕೆ ವ್ಯಾಪಾರಿಯಿಂದ ರೈತರಿಗೆ ಪಂಗನಾಮ; 10 ಕೋಟಿ ವಂಚಿಸಿ ಪರಾರಿ

Published

on

ಬಂಟ್ವಾಳ: ಅಡಿಕೆ ವ್ಯಾಪಾರಿಯೊಬ್ಬರು ಕೃಷಿಕರಿಂದ ಅಡಿಕೆ ಖರೀದಿಸಿ ಹಣ ಬಾಕಿ ಇರಿಸಿ ವಂಚಿಸಿ ನಂಬಿಕೆ ದ್ರೋಹ ಎಸಗಿದ ಆರೋಪದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಮೈಂದಾಳ ನಿವಾಸಿ ನೌಫಲ್‌ ಮಹಮ್ಮದ್‌ ಈ ಪ್ರಕರಣದ ಆರೋಪಿಯಾಗಿದ್ದು, ಇದೀಗ ಆತ ಗ್ರಾಹಕರ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಆರೋಪಿಸಲಾಗಿದೆ. ಆತ ಸುಮಾರು 94 ಲಕ್ಷ ರೂಪಾಯಿಗೂ ಆಧಿಕ ಮೊತ್ತದ ಹಣ ಬಾಕಿ ಇರಿಸಿ ವಂಚನೆ ಎಸಗಿರುವುದಾಗಿ ಆಪಾದಿಸಲಾಗಿದೆ. ನಾವೂರು ಗ್ರಾಮದ ನಿವಾಸಿ ಪ್ರವೀಣ್‌ ಡಿ’ ಸೋಜಾ ಎಂಬವರು ನೀಡಿದ ದೂರಿನಂತೆ ಎಫ್.ಐ.ಆರ್. ದಾಖಲಾಗಿದೆ.

ಅಡಿಕೆ ಮಾರಾಟ ಮಾಡುವ ವೇಳೆ ನೌಫಲ್ ಮಾರಾಟಗಾರರಿಗೆ ಸ್ವಲ್ಪ ಹಣವನ್ನು ಕೊಡುತ್ತಿದ್ದು, ಬಳಿಕ ಕೆಲವು ದಿನಗಳ ಬಳಿಕ ಹಣವನ್ನು ಕೊಡುತ್ತಿರುವ ಪ್ರಕ್ರಿಯೆ ನಡೆಯುತ್ತಿತ್ತು. ಮಾರ್ಚ್ 8 ರಂದು ಬೆಳಗ್ಗೆ ಪ್ರವೀಣ್ ಅವರು ನೌಫಲ್‌ ಮಹಮ್ಮದ್‌ ಅಂಗಡಿಗೆ ವಾಹನದಲ್ಲಿ ಹೋಗಿ ಸುಮಾರು 6.5 ಕ್ವಿಂಟಾಲ್‌ ಅಡಿಕೆಯನ್ನು ಮಾರಾಟ ಮಾಡಿದ ಬಗ್ಗೆ ಅಂದಾಜು 3,50,000 ರೂ ಹಣವನ್ನು ನೀಡಿರಲಿಲ್ಲ. ಜೂನ್ 9ರಂದು ರಾತ್ರಿ ಪ್ರವೀಣ್ ಗೆ ನೌಫಲ್ ಕರೆ ಮಾಡಿ, ತಾನು ನಷ್ಟದಲ್ಲಿದ್ದು, ಬಾಕಿ ಹಣವನ್ನು ಸ್ವಲ್ಪ ಸ್ವಲ್ಪವಾಗಿ ನೀಡುವುದಾಗಿ ಮೆಸೇಜ್‌ ಕಳುಹಿಸಿದ್ದಾಗಿ ದೂರಲಾಗಿದೆ.

ಇದನ್ನೂ ಓದಿ: ಕಾಶಿ ವಿಶ್ವನಾಥ ಮಂದಿರದಲ್ಲಿ 21 ನಕಲಿ ಅರ್ಚಕರು ಅರೆಸ್ಟ್

ಇದರಿಂದ ಗಾಬರಿಗೊಂಡ ಪ್ರವೀಣ್, ಜೂನ್ 10ರಂದು ಬೆಳಿಗ್ಗೆ ಅಂಗಡಿಗೆ ಹೋಗಿ ನೋಡಿದಾಗ ಬೀಗ ಹಾಕಿದ್ದು, ಮನೆಗೂ ಬೀಗ ಹಾಕಲಾಗಿತ್ತು. ಆರೋಪಿಯ ಮೊಬೈಲ್ ಸ್ವಿಚ್ಡ್‌ ಆಫ್‌ ಆಗಿದ್ದು, ಹಣ ಪಡೆಯಲು ಬಾಕಿಯಿದ್ದ ಇತರ 24 ಜನರು ಕೂಡಾ ಸ್ಥಳದಲ್ಲಿದ್ದರು. ಆರೋಪಿಯು ತನ್ನೊಂದಿಗೆ ಅಡಿಕೆ ಮತ್ತು ಕರಿಮೆಣಸು ವ್ಯಾಪಾರ ಮಾಡಿಕೊಂಡಿದ್ದವರಿಗೆ ಒಟ್ಟು 94,77,810 ರೂಪಾಯಿ ನೀಡದೆ ನಂಬಿಕೆ ದ್ರೋಹ ಮತ್ತು ವಂಚನೆ ಮಾಡುವ ಉದ್ದೇಶದಿಂದ ತಲೆಮರೆಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಬಂಟ್ವಾಳ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page