Connect with us

LATEST NEWS

PM ಮೋದಿ ಸೋದರ ಪ್ರಯಾಣಿಸುತ್ತಿದ್ದ ಕಾರು ಅಪಘಾತ-ಪ್ರಹ್ಲಾದ್ ಮೋದಿಗೆ ಗಂಭೀರ ಗಾಯ..

Published

on

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಅವರು ಪ್ರಯಾಣಿಸುತ್ತಿದ್ದ ಕಾರು ಇಂದು ಮೈಸೂರು ತಾಲೂಕಿನ ಕಡಕೊಳ ಬಳಿ ಅಪಘಾತಕ್ಕೀಡಾಗಿದ್ದು, ಪ್ರಹ್ಲಾದ್ ಮೋದಿ, ಅವರ ಪುತ್ರ ಹಾಗೂ ಸೊಸೆ ಗಂಭೀರವಾಗಿ ಗಾಯಗೊಂಡಿದ್ದಾರೆ.


ಪ್ರಹ್ಲಾದ್ ಮೋದಿ ಅವರು ತಮ್ಮ ಕುಟುಂಬದೊಂದಿಗೆ ಬೆಂಗಳೂರಿನಿಂದ ಬಂಡೀಪುರಕ್ಕೆ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

ವಿಷಯ ತಿಳಿಯುತ್ತಿದ್ದಂತೆ ಮೈಸೂರು ಎಸ್​ಪಿ ಸೀಮಾ ಲಾಟ್ಕರ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಗಾಯಾಳುಗಳನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಲ್ಲದೆ ಮುಖ್ಯಮಂತ್ರಿಯವರ ಕಾರ್ಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

LATEST NEWS

ಸಿಐಎಸ್ಎಫ್ ಕಾನ್ಸ್ಟೇಬಲ್ ಚಾಣಕ್ಷತನ; ಅಷ್ಟಕ್ಕೂ ಆ ವ್ಯಕ್ತಿಯ ಲ್ಯಾಪ್‌ಟಾಪ್‌ನಲ್ಲಿ ಏನಿತ್ತು..!

Published

on

ಮಂಗಳೂರು/ಮುಂಬೈ : ವಿಮಾನ ನಿಲ್ದಾಣದ ಭದ್ರತೆಗಾಗಿ ನಿಯೋಜಿಸಲಾದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಕಾನ್‌ಸ್ಟೇಬಲ್ ಒಬ್ಬರ ಚಾಣಕ್ಷತನದಿಂದಾಗಿ ಖದೀಮ ಒಬ್ಬ ಸಿಕ್ಕಿಬಿದ್ದಿದ್ದಾನೆ.

ಈ ಪ್ರಕರಣ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಆರೋಪಿಯನ್ನು ಭರತ್‌ಭಾಯ್ ಗೋವಿಂದ್‌ಭಾಯ್ ನಥಾನಿ ಎಂದು ಗುರುತಿಸಲಾಗಿದ್ದು, ಯುವಕನನ್ನು ಸಿಐಎಸ್‌ಎಫ್ ಸಿಬ್ಬಂದಿಗಳು ಬಂಧಿಸಿದ್ದಾರೆ.

ಅಷ್ಟಕ್ಕೂ ಏನಿದೂ ಪ್ರಕರಣ?

ಉಪ ನಿರ್ದೇಶಕ (ಗುಪ್ತಚರ) ಅಜಯ್ ದಹಿಯಾ ಅವರ ಪ್ರಕಾರ, ಈ ಘಟನೆ ಫೆಬ್ರವರಿ 12ರಂದು ತಡರಾತ್ರಿ ನಡೆದಿದೆ. ಮಧ್ಯಾಹ್ನ 1.20ರ ಸುಮಾರಿಗೆ, ಭರತ್‌ಭಾಯ್ ಗೋವಿಂದ್‌ಭಾಯ್ ನಥಾನಿ ಎಂಬ ಪ್ರಯಾಣಿಕ ಮುಂಬೈ  ವಿಮಾನ ನಿಲ್ದಾಣದ ಟರ್ಮಿನಲ್-2ಕ್ಕೆ ಆಗಮಿಸಿದ್ದನು. ಭರತ್‌ಭಾಯ್  NOK ಏರ್‌ಲೈನ್ಸ್ ವಿಮಾನ DD-939ರಲ್ಲಿ ಟರ್ಮಿನಲ್ 2ರಿಂದ ಬೆಳಗಿನ ಜಾವ 3 ಗಂಟೆಗೆ ಬ್ಯಾಂಕಾಕ್‌ಗೆ ತೆರಳಬೇಕಿತ್ತು.

ವಿಮಾನ ನಿಲ್ದಾಣದಲ್ಲಿ ಚೆಕ್‌-ಇನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಭರತ್‌ಭಾಯ್ ವಿಮಾನ ನಿಲ್ದಾಣ ಪೂರ್ವ ಭದ್ರತಾ ತಪಾಸಣೆಗಾಗಿ ಸಿಐಎಸ್‌ಎಫ್ ತಪಾಸಣಾ ಕೇಂದ್ರವನ್ನು ತೆರಳಿದರು.

ಇದನ್ನೂ ಓದಿ: ಪ್ರೇಮಿಗಳ ದಿನದಂದು ನಡೆದೇ ಹೋಯ್ತು ದುಷ್ಕೃತ್ಯ!

ಚಾಣಕ್ಷತನ ಮೆರೆದ ಕಾನ್‌ಸ್ಟೇಬಲ್ ಸುಬೋಧ್

ಭದ್ರತಾ ಸಿಬ್ಬಂದಿ ಪರಿಶೀಲನೆಗಾಗಿ, ಯುವಕನ ಲ್ಯಾಪ್‌ಟಾಪ್ ಮತ್ತು ಇತರ ವಸ್ತುಗಳನ್ನು ಎಕ್ಸ್-ರೇ ಯಂತ್ರದಲ್ಲಿ ಇರಿಸಿದರು. ಬಳಿಕ ಸಿಐಎಸ್‌ಎಫ್ ಕಾನ್‌ಸ್ಟೇಬಲ್ ಸುಬೋಧ್ ಕುಮಾರ್ ಎಕ್ಸ್-ರೇ ಯಂತ್ರದ ಮಾನಿಟರಿಂಗ್‌ನ್ನು ಗಮನಿಸಿದ ಲ್ಯಾಪ್‌ಟಾಪ್‌ನಲ್ಲಿ ಅನುಮಾನಸ್ಪದ ವಸ್ತು ಇರುವುದನ್ನು ಗಮನಿಸಿದ್ದಾರೆ. ಇನ್ನೊಂದು ಬಾರಿ ಲ್ಯಾಪ್‌ಟಾಪ್‌ನ್ನು ಎಕ್ಸ್‌-ರೇ ಮಾಡಿದ ನಂತರ ಈ ಅನುಮಾನ ನಿಜವಾಗಿದೆ. ಕಾನ್‌ಸ್ಟೇಬಲ್ ಸುಬೋಧ್ ಕುಮಾರ್ ತಕ್ಷಣವೇ ಸ್ಥಳದಲ್ಲಿದ್ದ ಸಿಐಎಸ್‌ಎಫ್ ಸಬ್‌ಇನ್‌ಸ್ಪೆಕ್ಟರ್ ಮುಖೇಶ್ ಕುಮಾರ್ ಮೀನಾ ಅವರಿಗೆ ಮಾಹಿತಿ ನೀಡಿದರು.

ಲ್ಯಾಪ್‌ಟಾಪ್‌ ಮೇಲಿನ ಅನುಮಾನ ದೃಢವಾಗುತ್ತಿದ್ದಂತೆ, ಭಯಭೀತನಾದ ಭರತ್‌ಭಾಯ್ ತನ್ನ ಲಗೇಜ್‌ಗಳನ್ನು ಬಿಟ್ಟು ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾನೆ. ಆದರೆ ಸಿಐಎಸ್‌ಎಫ್ ಸಿಬ್ಬಂದಿಗಳು ಆತನ ಪ್ಲಾನ್ ಅನ್ನು ಉಲ್ಟಾ ಮಾಡಿದ್ದಾರೆ. ಆತನ ಸಮ್ಮುಖದಲ್ಲೇ ಲ್ಯಾಪ್‌ಟಾಪ್‌ನ್ನು ತೆರೆಯಲಾಯಿತು. ಈ ವೇಳೆ ಭದ್ರತಾ ಸಿಬ್ಬಂದಿಗಲೇ ಒಂದು ಕ್ಷಣ ಬೆಚ್ಚಿಬಿದ್ದಿದ್ದರು.

ಲ್ಯಾಪ್‌ಟಾಪ್‌ನಲ್ಲಿತ್ತು ಬೆಲೆ ಬಾಳುವ ವಜ್ರಗಳು

ಲ್ಯಾಪ್‌ಟಾಪ್‌ನ್ನು ತೆರೆದ ಅಧಿಕಾರಿಗಳು ಬ್ಯಾಟರಿ ಹಿಂಭಾಗದಲ್ಲಿ 2147.20 ಕ್ಯಾರೆಟ್ ತೂಕದ, 26 ಸಣ್ಣ ಸಣ್ಣ ಸಿಂಥೆಟಿಕ್ ವಜ್ರಗಳ ಪ್ಯಾಕೆಟ್‌ಗಳು ಪತ್ತೆಯಾಗಿದೆ. ವಜ್ರ ಕಳ್ಳಸಾಗಣಿಕೆಯಾಗಿರುವುದರಿಂದ ಈ ಪ್ರಕರಣವು ಕಸ್ಟಮ್ಸ್ ವಾಯು ಗುಪ್ತಚರ ಘಟಕಕ್ಕೆ  ಸೇರುತ್ತದೆ. ಸ್ಥಳಕ್ಕೆ ಆಗಮಿಸಿದ ಕಸ್ಟಮ್ಸ್ ಅಧಿಕಾರಿಗಳ ತಂಡ ವಶಪಡಿಸಿಕೊಂಡ ವಜ್ರಗಳ ಬೆಲೆ ಸುಮಾರು 4.93 ಕೋಟಿ ಎಂದು ಅಂದಾಜಿಸಿದೆ. ಈ ಪ್ರಕರಣದ ಆರೋಪಿಯಾದ ಭರತ್‌ಭಾಯ್‌ನನ್ನು ಸಿಐಎಸ್‌ಎಫ್ ಅಧಿಕಾರಿಗಳು, ಕಸ್ಟಮ್ಸ್‌ಗೆ ಹಸ್ತಾಂತರಿಸಿದ್ದಾರೆ.

 

 

 

 

 

 

Continue Reading

LATEST NEWS

14 ದಿನದ ಮಗುವನ್ನು ಬಿಟ್ಟು ನೇಣಿಗೆ ಶರಣಾದ ಮಹಿಳೆ

Published

on

ಮಡಿಕೇರಿ: ಬಾಣಂತಿಯೋರ್ವರು, 14 ದಿನದ ಮಗುವನ್ನು ಬಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕೊಟ್ಟೋಳಿಯಲ್ಲಿ ಜರುಗಿದೆ.

ಕಾವೇರಮ್ಮ ನೇಣಿಗೆ ಶರಣಾದ ಮಹಿಳೆ. ದಿನೇಶ್-ಕಾವೇರಮ್ಮ ಮದುವೆಯಾಗಿ ಸುಮಾರು 4 ವರ್ಷಗಳು ಕಳೆದಿದೆ. ಪತಿ ದಿನೇಶ್ ತಮ್ಮ ಮನೆಯ ಸನೀಹದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಮನೆಯಲ್ಲಿ ಮಗುವಿನ ಕೂಗಾಟ ಕೇಳಿ ಬಂದು ನೋಡಿದ್ದಾರೆ. ಕಾವೇರಮ್ಮ ಸ್ನಾನದ ಕೋಣೆಯಲ್ಲಿ ಸೀರೆಯಿಂದ ನೇಣುಬಿಗಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಮನೆಯಲ್ಲಿ ಪತಿ ಹಾಗೂ ಅತ್ತೆ ಇಲ್ಲದ ಸಂದರ್ಭದಲ್ಲಿ ಕಾವೇರಮ್ಮ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿಲ್ಲ.

Continue Reading

DAKSHINA KANNADA

ಉದ್ಘಾಟನೆಯ ರಾಜಕೀಯ ಮೇಲಾಟಕ್ಕೆ ರೋಗಿಗಳಿಗೆ ಪೇಚಾಟ..!

Published

on

ಮಂಗಳೂರು: ಕಾಮಗಾರಿಗಳ ಉದ್ಘಾಟನೆಯ ವಿಚಾರದಲ್ಲಿ ಮಂಗಳೂರು ನಗರದಲ್ಲಿ ಹಗ್ಗ ಜಗ್ಗಾಟ ಆರಂಭವಾಗಿದ್ದು, ಇದೀಗ ಉದ್ಘಾಟನೆಗೊಂಡು ಸ್ಥಳಾಂತರಗೊಂಡಿದ್ದ ಸೇವಾ ಕೇಂದ್ರಗಳಿಗೆ ಬೀಗ ಬಿದ್ದಿದೆ. ಇದರಿಂದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಚಿಕಿತ್ಸಾ ಕೇಂದ್ರ, ಹಾಗೂ ಮಹಾನಗರ ಪಾಲಿಕೆ ಸಿಬ್ಬಂದಿಗಳ ವಸತಿ ಗೃಹ ಕಳೆದ ಭಾನುವಾರು ಉದ್ಘಾಟನೆಗೊಂಡಿತ್ತು. ಸಂಸದ ಬ್ರಿಜೇಶ್ ಚೌಟ , ಶಾಸಕ ವೇದವ್ಯಾಸ್ ಕಾಮತ್, ಮೇಯರ್ ಮನೋಜ್ ಕುಮಾರ್ ಅವರು ಈ ಕಾಮಗಾರಿಗಳ ಉದ್ಘಾಟನೆ ಮಾಡಿದ್ದರು.

ಮಂಗಳಾದೇವಿ ವಾರ್ಡ್‌ನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಈ ಕಾಮಗಾರಿಗಳನ್ನು ಮಾಡಲಾಗಿದ್ದು ಸ್ಥಳೀಯ ಕಾರ್ಪೋರೇಟರ್ ಪ್ರೇಮಾನಂದ ಶೆಟ್ಟಿ ಅವರು ಇದರ ಮುತುವರ್ಜಿ ವಹಿಸಿದ್ದರು. ಭಾನುವಾರ ಉದ್ಘಾಟನೆಗೊಂಡಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಶು ಚಿಕಿತ್ಸಾ ಕೇಂದ್ರಗಳು ಅಂದೇ ಹಳೆ ಕಟ್ಟಡದಿಂದ ಸ್ಥಳಾಂತರವಾಗಿ ಕಾರ್ಯಾರಂಭ ಮಾಡಿತ್ತು. ಜನರೂ ಕೂಡಾ ಈ ಕೇಂದ್ರಗಳಿಗೆ ಬಂದು ಸೇವೆಯನ್ನು ಪಡೆಯುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದು, ಖಾಸಗಿ ಆಸ್ಪತ್ರೆಗಳಿಗೆ ಹೋಗುವ ಜಂಟಾಟ ತಪ್ಪಿದ ಖುಷಿಯಲ್ಲಿದ್ರು. ಆದ್ರೆ ಶುಕ್ರವಾರ ಪ್ರಾಥಮಿಕ ಆರೋಗ್ಯ ಕೇಂದ್ರ ಬಂದ್ ಆಗಿದ್ದು, ಚಿಕಿತ್ಸೆಗಾಗಿ ಬಂದ ರೋಗಿಗಳು ಬೀಗ ನೋಡಿ ವಾಪಾಸಾಗಿದ್ದಾರೆ.

ಈ ಕಾಮಗಾರಿಗಳ ಉದ್ಘಾಟನೆಯ ವಿಚಾರವಾಗಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಅಸಮಾದಾನ ವ್ಯಕ್ತಪಡಿಸಿ ಅಧಿಕಾರಿಗಳ ಮೇಲೆ ಕ್ರಮಕ್ಕೆ ಸೂಚಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತಾರದೆ ಶಿಷ್ಠಾಚಾರ ಉಲ್ಲಂಘಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಪ್ರವಾಸ ಕೈಗೊಂಡಿದ್ದು ಮತ್ತೆ ಈ ಕಾಮಗಾರಿಗಳನ್ನು ಉದ್ಘಾಟನೆ ಮಾಡಲಿದ್ದಾರೆ. ಹೀಗಾಗಿ ಶುಕ್ರವಾರ ಈ ಕೇಂದ್ರಗಳನ್ನು ಬಂದ್ ಮಾಡಿಸಲಾಗಿದೆ. ಅಧಿಕಾರಿಗಳು ಈ ಕೇಂದ್ರಗಳನ್ನು ಬಂದ್ ಮಾಡಿರುವ ವಿಚಾರಕ್ಕೆ ಶಾಸಕ ವೇದವ್ಯಾಸ್ ಕಾಮತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ರೀತಿಯ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರಿಗೆ ಈ ಬಗ್ಗೆ ಮಾಹಿತಿ ಇತ್ತಾದ್ರೂ ಬರಲಾಗುವುದಿಲ್ಲ ಎಂದು ಹೇಳಿದ್ದಾಗಿ ಶಾಸಕರು ಹೇಳಿದ್ದಾರೆ. ಹಾಗಂತ ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂಬ ಕಾರಣಕ್ಕೆ ಮತ್ತೊಂದು ಬಾರಿ ಉದ್ಘಾಟನೆ ಮಾಡುವ ಔಚಿತ್ಯವನ್ನು ಶಾಸಕ ವೇದವ್ಯಾಸ್ ಕಾಮತ್ ಪ್ರಶ್ನೆ ಮಾಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page