Connect with us

LATEST NEWS

ಪೊಡವಿಗೊಡೆಯನ ಊರಿಗೆ ಇಂದು ಪ್ರಧಾನಿ ಮೋದಿ ಆಗಮನ

Published

on

ಉಡುಪಿ: ಪ್ರಧಾನಿಯಾಗಿ ನರೇಂದ್ರ ಮೋದಿಯವರು ಇಂದು ಪ್ರಥಮ ಬಾರಿಗೆ ಉಡುಪಿಯ ಶ್ರೀಕೃಷ್ಣಮಠಕ್ಕೆ ಭೇಟಿ ನೀಡುತ್ತಿದ್ದು, ಅವರ ಭವ್ಯ ಸ್ವಾಗತಕ್ಕೆ ಕೃಷ್ಣನಗರಿ ಸಜ್ಜಾಗಿ ನಿಂತಿದೆ.

ಪ್ರಧಾನಿ ಮೋದಿ ಇವತ್ತು ಕೃಷ್ಣನೂರು ಉಡುಪಿಗೆ ಬರುತ್ತಿದ್ದಾರೆ. ಕೃಷ್ಣಮಠದ ವಿಶ್ವಪರ್ಯಾಯ ನಡೆಯುತ್ತಿದ್ದು, ಇದರ ಭಾಗವಾಗಿ ಲಕ್ಷ ಕಂಠ ಗೀತಾ ಪರಾಯಣ ಹಮ್ಮಿಕೊಳ್ಳಲಾಗಿದೆ. ಅಂದರೆ ಒಂದು ಲಕ್ಷಕ್ಕೂ ಹೆಚ್ಚು ಜನ ಭಕ್ತರು ಇಂದು ಕೃಷ್ಣಮಠದ ಕಾರ್ಯಕ್ರಮದಲ್ಲಿ ಭಗವದ್ಗೀತೆ ಪಠಿಸಲಿದ್ದಾರೆ. ಇದೇ ಐತಿಹಾಸಿಕ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಸಾಕ್ಷಿ ಆಗಲಿದ್ದಾರೆ. ಸ್ವತಃ ಮೋದಿಯೇ ಭಗವದ್ಗೀತೆಯ 15 ನೇ ಅಧ್ಯಾಯದ ಶ್ಲೋಕಗಳನ್ನು ಪಠಿಸಲಿದ್ದಾರೆ. ಗೀತೆಯಲ್ಲಿ ಹೆಚ್ಚಿನ ಮಹತ್ವ ಹೊಂದಿರುವ 15 ನೇ ಅಧ್ಯಾಯದ ಕೊನೆಯ 10 ಶ್ಲೋಕಗಳನ್ನು ಪಠಿಸಲಿದ್ದಾರೆ.

ಕೃಷ್ಣನೂರಿಗೆ ನಮೋ!

  • ಬೆಳಗ್ಗೆ 10.25ಕ್ಕೆ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸದ್ದಾರೆ ಮೋದಿ.
  • ಸೇನಾ ಹೆಲಿಕಾಪ್ಟರ್ ಮೂಲಕ ಹೊರಟು ಉಡುಪಿಯ ಆದಿ ಉಡುಪಿಗೆ 10.55 ಕ್ಕೆ ಮೋದಿ ಆಗಮನ.
  • ಸ್ವಾಗತ ಪ್ರಕ್ರಿಯೆ ಮುಗಿದು ಭದ್ರತಾ ಪ್ರಕ್ರಿಯೆ ಸಿದ್ದಗೊಂಡ ನಂತರ ರೋಡ್ ಶೋ ಆರಂಭವಾಗಲಿದೆ.
  • ಬನ್ನಂಜೆ ನಾರಾಯಣ ಗುರು ಸರ್ಕಲ್ ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆ ಮಾಡುತ್ತಾ ಮುಂದೆ ಸಾಗಲಿದ್ದಾರೆ.
  • ಸಿಟಿ ಬಸ್ ನಿಲ್ದಾಣ ದಾಟಿ ಕಲ್ಸಂಕ ಜಂಕ್ಷನ್ ಮೂಲಕ ಕೃಷ್ಣಮಠದ ಪಾರ್ಕಿಂಗ್ ಏರಿಯಾ ಪ್ರವೇಶ.
  • ಸೋದೆಮಠ ವಾದಿರಾಜ ಮಾರ್ಗ ಮೂಲಕ ರಥಬೀದಿ ಪ್ರವೇಶ.
  • ಅಷ್ಟಮಠಗಳ ರಥಬೀದಿ ಪ್ರದಕ್ಷಿಣಾ ಮಾರ್ಗದಲ್ಲಿ ಮೋದಿ ವಾಹನ ಮೂಲಕ ಆಗಮನ.

ಕೃಷ್ಣ ಮಠದಲ್ಲಿ ಏನೆಲ್ಲ ಕಾರ್ಯಕ್ರಮ?

ಪ್ರಧಾನಿ ಮೋದಿ ಚಿನ್ನದ ಕವಚ ಅಳವಡಿಸಿದ ಕನಕನ ಕಿಂಡಿ ಲೋಕಾರ್ಪಣೆ ಮಾಡಿ, ಸ್ವರ್ಣ ಖಚಿತ ಕನಕನ ಕಿಂಡಿಯ ಮೂಲಕ ಶ್ರೀ ಕೃಷ್ಣದೇವರ ದರ್ಶನ ಮಾಡಲಿದ್ದಾರೆ. ಬಳಿಕ ಕನಕನ ಗುಡಿಯಲ್ಲಿ ಕನಕದಾಸರ ದರ್ಶನ, ಪುಷ್ಪಾರ್ಚನೆ ಮಾಡಲಿದ್ದಾರೆ.

ನಂತರ ಕೃಷ್ಣ ಮಠದ ಮುಖ್ಯದ್ವಾರದ ಮೂಲಕ ಪ್ರವೇಶ ಮಾಡಲಿದ್ದಾರೆ. ಅಲ್ಲಿ ಅವರಿಗೆ ಪೂರ್ಣ ಕುಂಭ ಸ್ವಾಗತ ಸಹಿತ, ಪುತ್ತಿಗೆ ಮಠದ ಪ್ರಮುಖರು ಸ್ಥಳೀಯ ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಮಧ್ವ ಸರೋವರದಲ್ಲಿ  ತೀರ್ಥ ಪ್ರೋಕ್ಷಣೆ ಮಾಡಿ ಕೃಷ್ಣ ಮಠದೊಳಗೆ ಪ್ರವೇಶ ಮಾಡಲಿದ್ದಾರೆ. ಕನಕ ನವಗ್ರಹ ಕಿಂಡಿಯ ಮೂಲಕ ಕೃಷ್ಣನ ದರ್ಶನ ಮಾಡಲಿದ್ದಾರೆ. ನಂತರ ಸ್ವರ್ಣ ಲೇಪಿತ ತೀರ್ಥ ಮಂಟಪ ಉದ್ಘಾಟನೆ ಮಾಡಲಿದ್ದಾರೆ.

ಪುತ್ತಿಗೆ ಸ್ವಾಮೀಜಿಯವರ ಸನ್ಯಾಸ ಜೀವನದ 50ನೇ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಎರಡು ಕೋಟಿ ವೆಚ್ಚದಲ್ಲಿ ತೀರ್ಥ ಮಂಟಪಕ್ಕೆ ಸ್ವರ್ಣ ಲೇಪನ ಮಾಡಲಾಗಿದೆ. ಮಠಾಧೀಶರು ಗಣ್ಯರ ಉಪಸ್ಥಿತಿಯಲ್ಲಿ ದೀಪ ಬೆಳಗುವ ಮೂಲಕ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯಪ್ರಾಣ ದೇವರ ದರ್ಶನ, ಗರುಡ ದೇವರ ದರ್ಶನದ ಬಳಿಕ ಅಷ್ಟಮಠಾಧೀಶರೊಂದಿಗೆ ಮೋದಿ ಮಾತುಕತೆ ನಡೆಸಲಿದ್ದಾರೆ. ದೇವರ ಮುಂದೆ ಪ್ರಧಾನಿ ಮೋದಿಯವರಿಗೆ ಕೃಷ್ಣದೇವರ ಪ್ರಸಾದ ವಿತರಣೆ ಗೌರವಾರ್ಪಣೆ ಮಾಡಲಾಗುತ್ತದೆ.

ಸರ್ವಜ್ಞ ಪೀಠ ವೀಕ್ಷಣೆ- ಮಠದೊಳಗಿನ ವಿವಿಧ ಗುಡಿಗಳ ದರ್ಶನ- ಪಕ್ಕದಲ್ಲಿರುವ ಗೋಶಾಲೆಗೆ ವೀಕ್ಷಣೆ ಸಾಧ್ಯತೆ ಇದೆ. ಗೀತಾ ಮಂದಿರದಲ್ಲಿ ನೂತನ ಅನಂತಪದ್ಮನಾಭ ದೇವರ ಪ್ರತಿಮೆ ಅನಾವರಣ ಮಾಡಲಿದ್ದಾರೆ. ಗೋಡೆ ತುಂಬ ಶಿಲೆಯಲ್ಲಿ ಬರೆದಿರುವ ಗೀತೆಗಳ ಬರಹ ಹಾಗೂ ಧ್ಯಾನ ಮಂದಿರ ವೀಕ್ಷಣೆ, ಧ್ಯಾನ ಮಾಡಲಿದ್ದಾರೆ ಮೋದಿ. ಗೀತಾ ಮಂದಿರದಲ್ಲೇ ಲಘು ಉಪಹಾರ ಸ್ವೀಕಾರ. ತುಳುನಾಡಿನ ತಿಂಡಿಗಳ ಮೋದಿ ಸವಿಯಲಿದ್ದಾರೆ.

ಬಳಿಕ ಲಕ್ಷ ಕಂಠ ಭಗವದ್ಗೀತಾ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಂದ ಸ್ವಾಗತಿಸಲಿದ್ದಾರೆ. ಮೋದಿಯೊಂದಿಗೆ ಸಾವಿರಾರು ಮಂದಿ ಶ್ಲೋಕ ಪಠಣ ಮಾಡಿದ್ದಾರೆ. ಅದಾದ ಬಳಿಕ ಅಲ್ಲಿಂದ ಹೊರಟು ಮಂಗಳೂರಿನಿಂದ ವಿಶೇಷ ವಿಮಾನ ಮೂಲಕ ಗೋವಾಕ್ಕೆ ತೆರಳಿ ಪರ್ತಗಾಳಿ ಮಠಕ್ಕೆ ತೆರಳಲಿದ್ದಾರೆ.

LATEST NEWS

ವಿದ್ಯುತ್ ಕಂಬಕ್ಕೆ ಕಾರು ಡಿ*ಕ್ಕಿ; ಇಬ್ಬರು ಸಾ*ವು

Published

on

ಮಂಗಳೂರು/ಭಟ್ಕಳ :  ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿ*ಕ್ಕಿಯಾದ  ಪರಿಣಾಮ ಇಬ್ಬರು ಸಾ*ವನ್ನಪ್ಪಿದ ಘಟನೆ ಭಟ್ಕಳದ ವೆಂಕಟಾಪುರದ ಬಳಿ ನಡೆದಿದೆ.

ಭಟ್ಕಳದ ಆಜಾದ್ ನಗರ ನಿವಾಸಿ 15 ವರ್ಷದ ಬಿಲಾಲ್  ಹಾಗೂ 20 ವರ್ಷದ ಆಯಾನ್ ಮೃ*ತ ದುರ್ದೈ*ವಿಗಳು.

ಬಿಲಾಲ್ ಸ್ಥಳದಲ್ಲೇ ಸಾ*ವನ್ನಪ್ಪಿದ್ದು, ಚಾಲನೆ ಮಾಡುತ್ತಿದ್ದ ಆಯಾನ್ ಗಾ*ಯಗೊಂಡಿದ್ದ. ಆತನನ್ನು ಉಡುಪಿಯ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.‌

ಇದನ್ನೂ ಓದಿ : BBK12: ಗಿಲ್ಲಿ ವಿನ್ನರ್ ಆದ್ರೂ ನಿಲ್ಲದ ಕಿಚ್ಚು: ರಕ್ಷಿತಾ ಪರ ಸೋಷಿಯಲ್ ಮೀಡಿಯಾ ವಾರ್; ಯಾಕೆ ಗೊತ್ತಾ?

ಶಿರಾಲಿಯಿಂದ ಭಟ್ಕಳಕ್ಕೆ ಕಾರಿನಲ್ಲಿ ಬರುತ್ತಿದ್ದಾಗ ಈ ಅಪ*ಘಾತ ನಡೆದಿದೆ. ಅಪ*ಘಾತ ಸಂಬಂಧ ಭಟ್ಕಳ ಶಹರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

BIG BOSS

ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ; ಗಮನ ಸೆಳೆದ ಕಿಚ್ಚ ಸುದೀಪ್ ಪೋಸ್ಟ್ !

Published

on

BBk12 :  ಕನ್ನಡ ಬಿಗ್ ಬಾಸ್ ಸೀಸನ್ 12 ಕೊನೆಯ ಹಂತದಲ್ಲಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಬಿಗ್ ಬಾಸ್ ವಿನ್ನರ್ ಯಾರು ಅನ್ನೋದು ಹೊರ ಬೀಳಲಿದೆ. ಬಿಗ್ ಬಾಸ್ ಫಿನಾಲೆ ಹಂತದಲ್ಲಿರುವಾಗ ಕಿಚ್ಚ ಸುದೀಪ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಸತತ 12 ಸೀಸನ್‌ಗಳನ್ನು ಕಿಚ್ಚ ಸುದೀಪ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇದೀಗ ಸೀಸನ್ 12 ಮುಕ್ತಾಯಗೊಳ್ಳುವ ಹಂತದಲ್ಲಿರುವಾಗ ಕಿಚ್ಚ ಸುದೀಪ್ ಸೋಸಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡು ಸ್ಪರ್ಧಿಗಳಿಗೆ ಅಭಿನಂದನೆ ತಿಳಿಸಿದ್ದಾರೆ.

ಕಿಚ್ಚ ಪೋಸ್ಟ್ ಏನು?

ಕಿಚ್ಚ ತನ್ನಫೋಟೋವೊಂದನ್ನು ಹಂಚಿಕೊಂಡಿದ್ದಾರೆ.  ಇಂದು ಸೂರ್ಯ ಮುಳುಗುವ ವೇಳೆಗೆ ಬಿಗ್‌ಬಾಸ್ ಸೀಸನ್ – 12 ಮುಕ್ತಾಯಗೊಳ್ಳಲಿದೆ. ಈ ಸೀಸನ್‌ನ ಬೆಳವಣಿಗೆ ಮತ್ತು ಅದ್ಭುತ ಪ್ರಯಾಣ ಮುಂದಿನ ಪೀಳಿಗೆಗೆ ಸಾಕ್ಷಿಯಾಗಿದೆ. ಅಚಲ ಬೆಂಬಲಕ್ಕಾಗಿ ಪ್ರತಿಯೊಬ್ಬ ವೀಕ್ಷಕರಿಗೂ ನನ್ನ ಹೃತ್ತೂರ್ವಕ ಕೃತಜ್ಞತೆಗಳು.

ಇದನ್ನೂ ಓದಿ :  ಹನುಮಂತ ಪ್ರಕಾರ ಬಿಗ್ ಬಾಸ್ ಗೆಲ್ಲೋದು ಇವರೇ ಅಂತೆ!

ಎಲ್ಲಾ ಸ್ಪರ್ಧಿಗಳಿಗೆ ಮತ್ತು ಸೀಸನ್‌ನ ವಿಜೇತರಿಗೆ ಹೃತ್ತೂರ್ವಕ ಅಭಿನಂದನೆಗಳು. ಈ ಅದ್ಭುತ ಯಶಸ್ಸಿಗೆ ಇಡೀ ಬಿಗ್‌ಬಾಸ್ ತಾಂತ್ರಿಕ ತಂಡಕ್ಕೆ ಅಭಿನಂದನೆಗಳು. ನೀವೆಲ್ಲರೂ ಇಲ್ಲದೆ ಬಿಗ್‌ಬಾಸ್ ಕಾರ್ಯಕ್ರಮವಿಲ್ಲ. ಹೊಸ ಸೀಸನ್ – 13 ಪ್ರಾರಂಭವಾಗುವವರೆಗೆ ಬಿಗ್‌ ಬಾಸ್ ವಿಶ್ರಾಂತಿ ಪಡೆಯಲು ಗೌರವಯುತವಾಗಿ ಮುಖ್ಯದ್ವಾರವನ್ನು ಮುಚ್ಚುತ್ತೇವೆ ಎಂದು ಬರೆದುಕೊಂಡಿದ್ದಾರೆ.

Continue Reading

LATEST NEWS

ಭೀಕರ ಅಪಘಾತ; ಟೋಲ್ ಸಿಬ್ಬಂದಿಯನ್ನು 50 ಮೀಟರ್ ಎಳೆದೊಯ್ದ ಟ್ರಕ್!

Published

on

ಉತ್ತರ ಪ್ರದೇಶ: ಟೋಲ್‌ ಪ್ಲಾಜಾದಲ್ಲಿ ಕಾಯುತ್ತಿದ್ದ ಎರಡು ಕಾರುಗಳಿಗೆ ಹಿಂದಿನಿಂದ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಟೋಲ್‌ ಸಿಬ್ಬಂದಿ ಮತ್ತು ಹಲವು ಪ್ರಯಾಣಿಕರಿಗೆ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ಶನಿವಾರ(ಜ.17) ಮಧ್ಯಾಹ್ನ ನಡೆದಿದೆ.


ಮಾತ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾನ್ಪುರ ಹೆದ್ದಾರಿಯಲ್ಲಿರುವ ಸೆಮ್ರಿ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದ್ದು, ಫಾಸ್ಟ್​ ಟ್ಯಾಗ್ ವರ್ಕ್​ ಆಗಲಿಲ್ಲ ಎಂಬ ಕಾರಣಕ್ಕೆ ಎರಡು ಕಾರುಗಳು ಟೋಲ್​ನಲ್ಲೇ ನಿಂತಿದ್ದವು. ಟೋಲ್ ಸಿಬ್ಬಂದಿ ಟ್ಯಾಗ್​ ಸ್ಕ್ಯಾನ್ ಮಾಡುತ್ತಿದ್ದಾಗ ಹಿಂದಿನಿಂದ ಅತಿ ವೇಗದಲ್ಲಿ ಬಂದ ಟ್ರಕ್ ನಿಂತಿದ್ದ ಎರಡು ಕಾರುಗಳಿಗೆ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ: ರಸ್ತೆ ವಿಭಜಕಕ್ಕೆ ಎಸ್ ಯುವಿ ಡಿ*ಕ್ಕಿ; 5 ಮಂದಿ ಸಾ*ವು

ಡಿಕ್ಕಿಯ ರಭಸಕ್ಕೆ ಸಿಬ್ಬಂದಿ ಕಾರಿನ ಬಾನೆಟ್ ಮೇಲೆ ಬಿದ್ದಿದ್ದು, ಟ್ರಕ್ ಅವರನ್ನು ಸುಮಾರು 50 ಮೀಟರ್‌ಗಳಿಗಿಂತಲೂ ಹೆಚ್ಚು ದೂರ ಎಳೆದೊಯ್ದಿದೆ. ಪ್ಲಾಜಾದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.ಸ್ಥಳೀಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page