Connect with us

ಗುಡ್ ನ್ಯೂಸ್: ರಾಜ್ಯದಲ್ಲಿ ಮೊದಲ ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ಚಾಲನೆ.!!

Published

on

ಗುಡ್ ನ್ಯೂಸ್: ರಾಜ್ಯದಲ್ಲಿ ಮೊದಲ ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ಚಾಲನೆ.!!

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತ ರೋಗಿಗಳಿಗೆ ಇಂದಿನಿಂದ ಪ್ಲಾಸ್ಮಾ ಥೆರಪಿ ಆರಂಭವಾಗುತ್ತಿದ್ದು, ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಚಾಲನೆ ನೀಡಿದರು.

ಇಂದು (ಎಪ್ರಿಲ್ 25) ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆಗಾಗಿ ಮೊದಲ ಪ್ಲಾಸ್ಮಾ ಥೆರಪಿ ಕ್ಲಿನಿಕಲ್ ಪ್ರಯೋಗ ಆರಂಭವಾಗಿದ್ದು, ಇಂದಿನಿಂದ ಥೆರಪಿ ಪ್ರಯೋಗ ನಡೆಯಲಿದೆ.

ಕರ್ನಾಟಕದಲ್ಲಿಯೂ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. 474 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರೆ. 18 ಮಂದಿ ಈ ಮಹಾಮಾರಿಗೆ ಬಲಿಯಾಗಿದ್ದಾರೆ.

ನಿನ್ನೆ ಒಂದೇ ದಿನ 26 ಹೊಸ ಪ್ರಕರಣಗಳು ದಾಖಲಾಗಿದ್ದು, ರಾಜ್ಯ ಸರ್ಕಾಕ್ಕೆ ತಲೆ ನೋವಾಗಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ಹತ್ತಿಕ್ಕಲು ಕೇರಳ ಮಾದರಿಯ ಪ್ಲಾಸ್ಮ ಚಿಕಿತ್ಸೆಗೆ ಮುಂದಾಗಿದೆ.

ಇನ್ನು ಪ್ಲಾಸ್ಮಾ ಥೆರಪಿಗೆ ಚಾಲನೆ ನೀಡಿ ಮಾತನಾಡಿದ ಸಚಿವ ಸುಧಾಕರ್, ರಾಜ್ಯದಲ್ಲಿ ಹೊಸ ಪ್ರಯತ್ನಕ್ಕೆ ಚಾಲನೆ ನೀಡಿದ್ದು, ಇದೊಂದು ಐತಿಹಾಸಿಕ ದಿನ ಎಂದು ಬಣ್ಣಿಸಿದರು.

ಕೆಲ ರಾಜ್ಯಗಳಲ್ಲಿ ಮಾಡದ ಕೆಲಸವನ್ನು ನಮ್ಮ ರಾಜ್ಯದಲ್ಲಿ ಮಾಡಲಾಗುತ್ತಿದೆ. ಇದರಿಂದ ರೋಗಿಗಳು ಗುಣಮುಖರಾಗಲಿದ್ದಾರೆಂಬುದು ವೈದ್ಯಕೀಯವಾಗಿ ನಮ್ಮ ನಂಬಿಕೆ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು, ರಾಜ್ಯದಲ್ಲಿ ಕೊರೊನಾ ತಡೆಗೆ ಹಲವು ಕ್ರಮ ಕೈಗೊಳ್ಳಲಾಗಿದೆ.

ಇದರ ಪರಿಣಾಮವಾಗಿ ನಾವು 3ನೇ ಸ್ಥಾನದಿಂದ 11 ಸ್ಥಾನಕ್ಕೆ ಇಳಿದಿದ್ದೇವೆ. ಇನ್ನು ಮಾರಕ ಸೋಂಕಿನ ವಿರುದ್ಧ ಸಚಿವ ಸುಧಾಕರ್ ಅವರೊಂದಿಗೆ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು.

ಇನ್ನು ಅನೇಕ ದೇಶಗಳು ಪ್ಲಾಸ್ಮಾ ಥೆರಪಿಗೆ ಮನ್ನಣೆ ನೀಡಿವೆ. ಈ ನಿಟ್ಟಿನಲ್ಲಿ ನಾವು ಸಾಗೋಣ ಎಂದು ಕರೆ ನೀಡಿದರು.

ಇನ್ನು ರೋಗಿಗೆ ಪ್ಲಾಸ್ಮಾವನ್ನು ದಾನ ಮಾಡುವ ದಾನಿಯ ಹೆಸರು ಹಾಗೂ ಅದನ್ನು ಪಡೆಯುವವರ ಹೆಸರನ್ನು ಬಹಿರಂಗಪಡಿಸುವುದಿಲ್ಲ.

ಗುಣಮುಖರಾದವರು ಸ್ವಯಂಪ್ರೇರಿತರಾಗಿ ಪ್ಲಾಸ್ಮಾ ದಾನ ಮಾಡಲು ಮುಂದಾಗಬೇಕು. ಈ ಕುರಿತಂತೆ ಸರ್ಕಾರದ ಪರವಾಗಿ ಮನವಿ ಮಾಡುವುದಾಗಿ ತಿಳಿಸಿದರು. ಇನ್ನು ಈ ಪ್ರಯೋಗದ ಬಗ್ಗೆ ಸಚಿವ ಶ್ರೀರಾಮುಲು ನಿನ್ನೆಯೇ ಟ್ವೀಟ್ ಮಾಡಿದ್ದರು.

ಈ ಚಿಕಿತ್ಸೆಗೆ ಕೊರೋನಾದಿಂದ ಗುಣಮುಖನಾದ ವ್ಯಕ್ತಿಯ ರಕ್ತಕಣಗಳನ್ನು ಬಳಕೆ ಮಾಡಲಾಗುತ್ತದೆ.

ಗುಣಮುಖನಾದ ವ್ಯಕ್ತಿಯ ರೋಗನಿರೋಧಕ ಶಕ್ತಿಯನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ. ರೋಗ ನಿರೋಧಕ ಶಕ್ತಿ ರೂಪುಗೊಂಡು 3ರಿಂದ 7 ದಿನಗಳಲ್ಲಿ ಗುಣಮುಖರಾಗುವ ನಿರೀಕ್ಷೆಯಿದೆ.

ದೆಹಲಿಯಲ್ಲೂ ಪ್ಲಾಸ್ಮಾ ಥೆರಪಿಯ ಪ್ರಯೋಗ ನಡೆಸಲಾಗಿದ್ದು ಅಲ್ಲಿಯೂ ಯಶಸ್ಸು ಕಂಡಿದೆ.

Advertisement
Click to comment

Leave a Reply

Your email address will not be published. Required fields are marked *

LATEST NEWS

ಪೋಷಕರ ಲೈಂ*ಗಿಕತೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ; ರಣವೀರ್ ಅಲ್ಹಾಬಾದಿಯಾಗೆ ಸಂಕಷ್ಟ!

Published

on

ನವದೆಹಲಿ :  ‘ಇಂಡಿಯಾ ಗಾಟ್ ಲ್ಯಾಟೆಂಟ್’ ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡುವ ಮೂಲಕ ಜನಪ್ರಿಯ ಯೂಟ್ಯೂಬರ್ ಮತ್ತು ಪಾಡ್‌ಕ್ಯಾಸ್ಟರ್ ರಣವೀರ್ ಅಲ್ಹಾಬಾದಿಯಾ, ಹಾಸ್ಯನಟ ಸಮಯ್ ರೈನಾ ಮತ್ತು ಇತರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪೋಷಕರು ಮತ್ತು ಲೈಂ*ಗಿಕತೆ ಕುರಿತು ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಬಿಯಲ್ ಬೈಸೆಪ್ಸ್ ಹೆ ಎಂದೇ ಖ್ಯಾತರಾಗಿರುವ ರಣವೀರ್ ವೀಡಿಯೋ ಬಿಡುಗಡೆ ಮಾಡಿ ಕ್ಷಮೆಯಾಚಿಸಿದ್ದರು. ಹೇಳಿಕೆ ತೀವ್ರತೆ ಪಡೆಯುತ್ತಿದ್ದಂತೆ ಆಶಿಶ್ ಚಂಚಲಾನಿ, ಜಸ್ಪ್ರೀತ್ ಸಿಂಗ್, ಅಪೂರ್ವ ಮಖಿಜಾ, ರಣವೀರ್ ಅಲ್ಹಾಬಾದಿಯಾ, ಸಮಯ್ ರೈನಾ ಮತ್ತು ಇತರರ ವಿರುದ್ಧ ಪೊಲೀಸರು ಸೋಮವಾರ(ಫೆ.10) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಂದು(ಫೆ.11) ರಣವೀರ್ ಅಲಹಾಬಾದಿಯಾ ಮತ್ತು ಇತರರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಏನಿದು ಪ್ರಕರಣ?

‘ಇಂಡಿಯಾ ಗಾಟ್ ಲ್ಯಾಟೆಂಟ್’ ಕಾರ್ಯಕ್ರಮದಲ್ಲಿ ಯೂಟ್ಯೂಬರ್‌ಗಳಾದ ಆಶಿಶ್ ಚಂಚಲಾನಿ, ಜಸ್ಪ್ರೀತ್ ಸಿಂಗ್, ಅಪೂರ್ವ ಮಖಿಜಾ, ರಣವೀರ್ ಅಲ್ಹಾಬಾದಿಯಾ, ಸಮಯ್ ರೈನಾ ಭಾಗವಹಿಸಿದ್ದರು.  ಈ ವೇಳೆ ರಣವೀರ್ ಅಲ್ಹಾಬಾದಿಯಾ ಪೋಷಕರ ಲೈಂ*ಗಿಕತೆ ಬಗ್ಗೆ ಯುವಕನೊಬ್ಬನಲ್ಲಿ ಪ್ರಶ್ನೆ ಕೇಳಿದ್ದರು. ಈ ವೀಡಿಯೋ ವೈರಲ್ ಆಗಿತ್ತು. ರಣವೀರ್ ಪ್ರಶ್ನೆ ಬಗ್ಗೆ ಭಾರೀ ಆಕ್ರೋಶ ಕೇಳಿ ಬಂದಿತ್ತು. ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಸೇರಿದಂತೆ ಅನೇಕ ಗಣ್ಯರೂ  ಆಕ್ಷೇ*ಪ ವ್ಯಕ್ತಪಡಿಸಿದ್ದರು.

ಸಂಚಿಕೆ ಪ್ರಸಾರಕ್ಕೆ ನಿರ್ಬಂಧ :

ಯೂಟ್ಯೂಬರ್ ಮತ್ತು ಪಾಡ್‌ಕ್ಯಾಸ್ಟರ್ ರಣವೀರ್ ಅಲ್ಹಾಬಾದಿಯಾ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾದ ಹಿನ್ನೆಲೆ ಅವರು ಭಾಗಿಯಾಗಿದ್ದ ಇಂಡಿಯಾ ಗಾಟ್  ಲ್ಯಾಟೆಂಟ್‌ನ ಸಂಚಿಕೆಯ ಪ್ರಸಾರಕ್ಕೆ ಬ್ರೇಕ್ ಹಾಕಲಾಗಿದೆ.

ಇದನ್ನೂ ಓದಿ : ಈ ರಾಶಿಯವರು ಮದುವೆಯಾದರೆ ಭೂಲೋಕದಿ ಸಾಕ್ಷಾತ್ ಶಿವ-ಪಾರ್ವತಿ ವಿವಾಹವಾದಂತೆ

ಈ ಬಗ್ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಸಲಹೆಗಾರ ಕಾಂಚನ್ ಗುಪ್ತಾ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.  ಇಂಡಿಯಾ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ರಣವೀರ್ ಅಲ್ಹಾಬಾದಿಯಾ ಅವರ ಆಕ್ಷೇಪಾರ್ಹ ಹೇಳಿಕೆ ಇರುವ ಸಂಚಿಕೆ ಪ್ರಸಾರವನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

Continue Reading

LATEST NEWS

ಆರ್‌ಸಿಬಿಗೆ ಮತ್ತೆ ಕೊಹ್ಲಿಯೇ ನಾಯಕ ?

Published

on

ಮಂಗಳೂರು/ಬೆಂಗಳೂರು : ಈ ಬಾರಿಯ ಐಪಿಎಲ್‌ನಲ್ಲಿ ಮತ್ತೆ ವಿರಾಟ್ ಕ್ಯಾಪ್ಟನ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. 2021ರಲ್ಲಿ ಆರ್‌ಸಿಬಿ ನಾಯಕತ್ವ ತೊರೆದಿರುವ ವಿರಾಟ್ ಕೊಹ್ಲಿ ಇದೀಗ ಮತ್ತೆ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025)ಸೀಸನ್-18ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕ ಯಾರು ಅನ್ನೋ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ. ಆದರೆ ಈ ಬಾರಿ ಆರ್‌ಸಿಬಿ ತಂಡವನ್ನು ವಿರಾಟ್ ಕೊಹ್ಲಿಯೇ ಮುನ್ನಡೆಸಲಿದ್ದಾರೆ ಎಂಬ ಸುಳಿವು ಸಿಕ್ಕಿದೆ.

ಇಂಗ್ಲೆಂಡ್ ವಿರುದ್ದದ ಎರಡನೇ ಏಕದಿನ ಪಂದ್ಯದಲ್ಲಿ ಸುರೇಶ್ ರೈನಾ ಕಾಮೆಂಟರಿ ಬಾಕ್ಸ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ರೈನಾ ಸಂಭಾಷಣೆ ನಡೆಸಿದ್ದಾರೆ. ಇಂಗ್ಲೆಂಡ್ ಆಟಗಾರ ಆರ್‌ಸಿಬಿ ನಾಯಕನ ಕುಶಲೋಪರಿ ವಿಚಾರಿಸಿದ್ದಾರೆ ಎಂದು ಕಾಮೆಂಟರಿಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಗಂಡ ಮಾಡಿದ ಸಾಂಬಾರನ್ನು ಎರಡು ವರ್ಷಗಳ ಬಳಿಕ ತಿಂದ ಹೆಂಡತಿ..!

ಇತ್ತ ಸುರೇಶ್ ರೈನಾ ಹಾಗೂ ವಿರಾಟ್ ಕೊಹ್ಲಿ ನಡುವೆ ಉತ್ತಮ ಬಾಂಧವ್ಯವಿದೆ. ಹೀಗಾಗಿ ಅವರಿಗೆ ಆರ್‌ಸಿಬಿ ತಂಡದ ಮುಂದಿನ ನಾಯಕ ಯಾರೆಂಬುದು ಗೊತ್ತಿದೆ. ಇದೇ ಕಾರಣದಿಂದಾಗಿ ವಿರಾಟ್ ಕೊಹ್ಲಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿನ ನಾಯಕ ಎಂದು ಸುರೇಶ್ ರೈನಾ ಬಹಿರಂಗವಾಗಿ ಹೇಳಿದ್ದಾರೆ.

9 ವರ್ಷಗಳ ಕಾಲ ಆರ್‌ಸಿಬಿ ಕ್ಯಾಪ್ಟನ್ ಆಗಿ ತಂಡವನ್ನು 143 ಪಂದ್ಯಗಳಲ್ಲಿ ಮುನ್ನಡೆಸಿರುವ ವಿರಾಟ್ ಕೊಹ್ಲಿ 66 ಪಂದ್ಯಗಳಲ್ಲಿ ಜಯ ತಂದುಕೊಟ್ಟಿದ್ದಾರೆ. ಅಲ್ಲದೇ ಕಿಂಗ್ ಕೊಹ್ಲಿ ನಾಯಕತ್ವದಲ್ಲೇ ಆರ್‌ಸಿಬಿ 2016ರಲ್ಲಿ ಫೈನಲ್‌ಗೆ ಪ್ರವೇಶಿಸಿದರೆ, 3ಬಾರಿ ಪ್ಲೇಆಫ್ಸ್ ಆಡಿತ್ತು.

 

 

Continue Reading

LIFE STYLE AND FASHION

ಈ ರಾಶಿಯವರು ಮದುವೆಯಾದರೆ ಭೂಲೋಕದಿ ಸಾಕ್ಷಾತ್ ಶಿವ-ಪಾರ್ವತಿ ವಿವಾಹವಾದಂತೆ

Published

on

ಹಿಂದೂ ಧರ್ಮವು ಸಂಪ್ರದಾಯಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ವಿವಾಹದ ಸಂದರ್ಭ ಜಾತಕ ನೋಡಿಕೊಳ್ಳುವ ಪದ್ಧತಿ ಇದೆ. ಜೋಡಿಯ ಜಾತಕ ಕೂಡಿದರೆ ಮಾತ್ರ ಮದುವೆ ಮಾತುಕತೆ ಮುಂದುವರೆಸಲಾಗುತ್ತದೆ. ಜಾತಕದಲ್ಲಿ ಏನಾದರೂ ದೋಷ ಕಂಡು ಬಂದರೆ, ಅದಕ್ಕೆ ತಕ್ಕದಾದ ಪರಿಹಾರಗಳನ್ನು ಮಾಡಿದ ನಂತರ ಮದುವೆ ಕಾರ್ಯ ಮುಂದುವರೆಸುತ್ತಾರೆ. ಶಾಸ್ತ್ರಗಳ ಪ್ರಕಾರ, ಕೆಲವೊಂದು ರಾಶಿಗಳು ಜೋಡಿಯಾದರೆ ಸಾಕ್ಷಾತ್‌ ಶಿವ-ಪಾರ್ವತಿಯೇ ವಿವಾಹವಾದ ಲೆಕ್ಕ ಎಂದು ಹೇಳಲಾಗುತ್ತದೆ. ಅಂತಹ ಅಪೂರ್ವ ಗುಣಲಕ್ಷಣಗಳನ್ನು ಹೊಂದಿರುವ ರಾಶಿಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

1. ಮೇಷ ಮತ್ತು ವೃಶ್ಚಿಕ :

ಜೋತಿಷ್ಯದ ಪ್ರಕಾರ, ಈ ಎರಡು ರಾಶಿಗಳು ವಿವಾಹವಾದರೆ ಶಿವ ಪಾರ್ವತಿ ಮದುವೆಯಾದಂತೆ ಹೇಳಲಾಗಿದೆ. ಇದಕ್ಕೆ ಮುಖ್ಯ ಕಾರಣ ಶಿವನ ಉಗ್ರ ಶಕ್ತಿ (ಮೇಷ) ಮತ್ತು ಪಾರ್ವತಿಯ ಶಾಂತ ಗುಣ (ವೃಶ್ಚಿಕ). ಈ ಎರಡು ಭಾವನೆಗಳು ಒಂದಾದರೆ ಒಳ್ಳೆಯದು. ಎಷ್ಟೇ ಉಗ್ರ ಸ್ವಭಾವವಿದ್ದರೂ ಅದನ್ನು ಶಾಂತಗುಣದ ಮೂಲಕ ತಣ್ಣಗಾಗಿಸಬಹುದು ಎಂಬುದು ಇದರ ಅರ್ಥ.

2. ವೃಷಭ ಮತ್ತು ಕರ್ಕಾಟಕ :

ಪಾರ್ವತಿಯ ತಾಳ್ಮೆ ಮತ್ತು ಶಿವನ ಸ್ಥಿರತೆಯನ್ನು ಪ್ರತಿಬಿಂಬಿಸುವ ರಾಶಿಗಳಿವು. ವೃಷಭ ರಾಶಿಯು ವಿಶ್ವಾಸವನ್ನು ಸೂಚಿಸಿದರೆ, ಕರ್ಕಾಟಕ ಭಾವನಾತ್ಮಕ ಅಂಶವನ್ನು ಬಿಂಬಿಸುತ್ತದೆ. ಇವೆರಡು ರಾಶಿಗಳು ಒಂದಾದರೆ ನಿರಂತರ ಪ್ರೀತಿ ಮತ್ತು ತಿಳುವಳಿಕೆಗೆ ಕೊರತೆಯೇ ಇಲ್ಲದಂತಾಗುತ್ತದೆ.

 

ಇದನ್ನೂ ಓದಿ : ಭೂಮಿ ತಾಯಿ ಮುಟ್ಟಾಗಿದ್ದಾಳೆ; ತುಳುನಾಡಿನಲ್ಲಿ ‘ಕೆಡ್ಡಸ’ ದ ಸಂಭ್ರಮ

 

3. ಮಿಥುನ ಮತ್ತು ಧನು ರಾಶಿ :

ಪುರಾಣಗಳ ಪ್ರಕಾರ, ಈ ಎರಡು ರಾಶಿಗಳು ಶಿವನ ನಿಶ್ಚಲತೆ ಮತ್ತು ಪಾರ್ವತಿಯ ಶಾಂತತೆಯನ್ನು ತೊಡಗಿಸಿಕೊಂಡಿರುತ್ತದೆ. ಈ ರಾಶಿಗಳ ಬಂಧವು ಕ್ರಿಯಾತ್ಮಕ ಮತ್ತು ಜ್ಞಾನದಾಯಕವಾಗಿರುತ್ತದೆ.

4. ಕನ್ಯಾ ರಾಶಿ ಮತ್ತು ಮಕರ :

ಜೋತಿಷ್ಯದ ಪ್ರಕಾರ, ಈ ರಾಶಿಗಳು ದೈವಿಕ ಜೋಡಿಯ ಪ್ರಾಯೋಗಿಕ ಮತ್ತು ಆಧ್ಯಾತ್ಮಿಕ ಭಾಗವನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ ಜವಾಬ್ದಾರಿ ಮತ್ತು ಮಹತ್ವಾಕಾಂಕ್ಷೆಯ ಮೇಲೆ ಗಮನವನ್ನು ತರುತ್ತವೆ. ಶಿವ ಮತ್ತು ಪಾರ್ವತಿಯ ನಡುವಿನ ಸ್ಥಿರ ಮತ್ತು ಉದ್ದೇಶಪೂರ್ವಕ ಸಂಪರ್ಕದಂತೆಯೇ ಈ ಎರಡು ರಾಶಿಯವರು ಬಾಳುತ್ತಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page