Connect with us

DAKSHINA KANNADA

ಪಿಲಿಪರ್ಬ-2025 ಸೀಸನ್ 4ಕ್ಕೆ ವಿದ್ಯುಕ್ತ ಚಾಲನೆ

Published

on

ಮಂಗಳೂರು : ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದಡಿಯಲ್ಲಿ ನಳಿನ್ ಕುಮಾರ್ ಕಟೀಲ್ ಅವರ ಮಾರ್ಗದರ್ಶನ ಹಾಗೂ ಶಾಸಕ ಡಿ.ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಮಂಗಳೂರು ನಗರದ ಕೇಂದ್ರ ಮೈದಾನದಲ್ಲಿ ನಡೆಯುತ್ತಿರುವ ಕುಡ್ಲದ ಪಿಲಿಪರ್ಬ-2025 ಸೀಸನ್ 4 ರ ಉದ್ಘಾಟನಾ ಸಮಾರಂಭ ನಡೆಯಿತು.

ಪಿಲಿಪರ್ಬವು ತುಳುನಾಡಿನ ಗತವೈಭವದ ಘನಪರಂಪರೆಯನ್ನು ಮೆಲುಕು ಹಾಕುವ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನ ಪ್ರಯತ್ನವಾಗಿದ್ದು, ಸಾಂಪ್ರದಾಯಿಕ ಕಲೆಯಾಗಿರುವ ಈ ಹುಲಿವೇಷಕ್ಕೆ ಇಂದು ಸ್ಪರ್ಧಾಕೂಟವಾಗಿ ರೂಪ ತಾಳಿದೆ. ಜಿಲ್ಲೆಯ ಅನುಭವಿ ಹಾಗೂ ನುರಿತ ತೀರ್ಪುಗಾರರ ಸಮ್ಮುಖದಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ 10 ಹುಲಿವೇಷ ತಂಡಗಳು ಭಾಗವಹಿಸಲಿದ್ದಾರೆ.  ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದ  ಗಣ್ಯರು ಶುಭ ಹಾರೈಸಿ ಹುಲಿವೇಷ ತಂಡಗಳನ್ನು ಪ್ರೋತ್ಸಾಹಿಸಲು ಆಗಮಿಸಿದ ಎಲ್ಲರಿಗೂ ಹಾರ್ದಿಕ ಸ್ವಾಗತವನ್ನು ಕೋರಿದರು.

ಸ್ಪರ್ಧಾಕೂಟವು ಇಂದು(ಸೆ.30) ರಾತ್ರಿಯವರೆಗೂ  ಅದ್ದೂರಿಯಾಗಿ ಸಾಗಲಿದ್ದು, ಅಂತಿಮವಾಗಿ ವಿಜೇತ ತಂಡದ ಘೋಷಣೆಯಾಗಲಿದೆ.

ಇದನ್ನೂ ಓದಿ : ಸ್ಪರ್ಧಿಗಳಿಗೆ ಶಾ*ಕ್ ಕೊಟ್ಟ ಬಿಗ್ ಬಾಸ್…ಮೂರನೇ ವಾರಕ್ಕೆ ಫಿನಾಲೆ!

ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸಂಸದ ಬ್ರಿಜೇಶ್ ಚೌಟ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್, ವಿ.ಕೆ ಫರ್ನಿಚರ್ಸ್‌ನ ವಿಠ್ಠಲ್ ಕುಲಾಲ್, ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷ ದಿವಾಕರ್ ಪಾಂಡೇಶ್ವರ, ಪ್ರಮುಖರಾದ  ನರೇಶ್ ಶೆಣೈ, ಅಶ್ವಿತ್ ಕೊಟ್ಟಾರಿ, ಲಲಿತ್ ಮೆಂಡನ್, ಕಿರಣ್ ಶೆಣೈ, ಚೇತನ್ ಕಾಮತ್, ಸಹಾನ್, ಜಗದೀಶ್ ಕದ್ರಿ, ವಿಖ್ಯಾತ್ ಶೆಟ್ಟಿ, ಅನಿಲ್ ಬೋಳೂರು, ಸಂಜಯ್ ಪೈ, ನರೇಶ್ ಪ್ರಭು ಹಾಗೂ ಬಿಜೆಪಿ ನಿಕಟ ಪೂರ್ವ ಪಾಲಿಕೆ ಸದಸ್ಯರುಗಳ ಸಹಿತ ಅನೇಕ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.

DAKSHINA KANNADA

ಕಾರು – ಆಟೋ ನಡುವೆ ಅಪ*ಘಾತ; ಮೂವರಿಗೆ ಗಂಭೀರ ಗಾ*ಯ

Published

on

ಪುತ್ತೂರು: ಕಾರು ಮತ್ತು ಆಟೋ ನಡುವೆ ಅಪ*ಘಾತ ಸಂಭವಿಸಿ ಮೂವರು ಗಾ*ಯಗೊಂಡಿರುವ ಘಟನೆ ಮಂಜಲ್ಪಡ್ಪು ಎಂಬಲ್ಲಿ ನಡೆದಿದೆ.

ಆಟೋ ಚಾಲಕ, ಬಂಟ್ವಾಳ ತಾಲೂಕಿನ ಮುಡಿಪು ಬಳಿಯ ಪಜೀರ್ ನಿವಾಸಿ, ಸುನಿಲ್ ಪಿಂಟೋ(37), ಪಜೀರ್ ನಿವಾಸಿಗಳಾದ ಉಸ್ಮಾನ್(57)  ಮತ್ತು ವಿದ್ಯಾರ್ಥಿನಿ ಫಾತಿಮತ್ ಮುರ್ಷಿದಾ(17) ಗಾ*ಯಾಳುಗಳು.

ಸುನಿಲ್ ಮತ್ತು ಉಸ್ಮಾನ್ ಅವರ ಕಾಲುಗಳಿಗೆ ತೀವ್ರ ಏಟು ತಗುಲಿದ್ದು, ಮುರ್ಷಿದಾ ಅವರ ತಲೆಗೆ ಗಾ*ಯವಾಗಿದೆ. ಮೂವರಿಗೂ ಪುತ್ತೂರಿನಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಪಜೀರ್‌ನಿಂದ ಆಟೋ ಬಾಡಿಗೆಗೆ ಗೊತ್ತು ಮಾಡಿಕೊಂಡು ಔಷಧಕ್ಕೆಂದು ಬಂದಿದ್ದ ಉಸ್ಮಾನ್ ಮರಳುವಾಗ ಪುತ್ತೂರು ಹೊರವಲಯದ ಕುಂಬ್ರದ ಶಿಕ್ಷಣ ಸಂಸ್ಥೆಯೊಂದರಲ್ಲಿ ಕಲಿಯತ್ತಿರುವ ತನ್ನ ಮೊಮ್ಮಗಳು ಮುರ್ಷಿದಾಳನ್ನು ಕೂರಿಸಿಕೊಂಡು ಪಜೀರ್‌ನತ್ತ ಹೋಗುತ್ತಿದ್ದರು.

ಇದನ್ನೂ ಓದಿ : ರಕ್ಷಿತಾ ಚಪ್ಪಲಿ ತೋರಿಸಿದ್ದು ನಿಜಾನಾ? ಸುದೀಪ್ ಬಿಚ್ಚಿಟ್ರು ಅಸಲಿ ಸತ್ಯ!

ಮಂಜಲ್ಪಡ್ಪು ತಲುಪುವಾಗ ಎದುರಿನಿಂದ ಬರುತ್ತಿದ್ದ ಕಾರೊಂದು ಲಾರಿಯನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಆಟೋ ಮತ್ತು ಕಾರಿನ ನಡುವೆ ಮಖಾಮುಖಿ ಡಿ*ಕ್ಕಿ ಸಂಭವಿಸಿದೆ. ಘಟನೆಯಿಂದ ಕಾರು ಮತ್ತು ಆಟೋಗಳೆರಡೂ ಜಖಂಗೊಂಡಿದೆ. ಪುತ್ತೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

DAKSHINA KANNADA

ಕಟೀಲು ಏಳೂ ಮೇಳಕ್ಕೆ ನಂದಿನಿಯ ಶೃಂಗದ ಸೇವೆ

Published

on

ಮೂಲ್ಕಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತರ ಯಕ್ಷಗಾನ ಮಂಡಳಿಯ ಏಳೂ ಮೇಳಗಳ ಆರಂಭತ್ಸೋತ್ಸವ ಶುಭ ಸಂದರ್ಭದಲ್ಲಿ ಸ್ವರ್ಗೀಯ ಮಚ್ಚಾರು ಪಡಿಲು ಶ್ಯಾಮಲ ಚಂದು ಪೂಜಾರಿಯವರ ಸ್ಮರಣಾರ್ಥ ಪದ್ಮನಾಭ ಕಟೀಲು ದುಬಾಯಿ ಮತ್ತು ಮನೆಯವರಿಂದ ಕಟೀಲು ಏಳೂ ಮೇಳಕ್ಕೆ ನಂದಿನಿಯ ಶೃಂಗದ ಸೇವೆ ಸಮರ್ಪಿಸಲಿದ್ದಾರೆ.

ನ.16ರಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಯಕ್ಷಗಾನ ಮಂಡಳಿಯ ಏಳನೆಯ ಮೇಳದ ಪದಾರ್ಪಣೆ ಹಾಗೂ ಏಳು ಮೇಳಗಳ ತಿರುಗಾಟ ಆರಂಭ ಸಲುವಾಗಿ ನವೆಂಬರ್ 15ರಂದು ಬಜಪೆಯಿಂದ ಕಟೀಲುವರೆಗೆ ಮೇಳಗಳ ದೇವರು, ಪರಿಕರಗಳ ಮೆರವಣಿಗೆ ನಡೆಯಲಿದೆ.

Continue Reading

DAKSHINA KANNADA

ಆಲ್ ನ್ಯೂ ಹ್ಯೂಂಡೈ ವೆನ್ಯೂ ಬೆಳ್ತಂಗಡಿ ಮಾರುಕಟ್ಟೆಗೆ ಬಿಡುಗಡೆ

Published

on

ಬೆಳ್ತಂಗಡಿ: ಅದ್ವೈತ್ ಹುಂಡೈ ಕಂಪೆನಿ ತನ್ನ ವಿಶಿಷ್ಟ ಗುಣಮಟ್ಟ ಮತ್ತು ಸೇವೆಯಿಂದ ವಿಶ್ವಾಸಾರ್ಹ ಗ್ರಾಹಕರನ್ನು ಹೊಂದಿದೆ. ಇದು ಕರ್ನಾಟಕದಾದ್ಯಂತ 23 ಶೋ ರೂಂಗಳು, 37 ಸೇವಾ ಕೇಂದ್ರಗಳು, 4 ಪ್ರಿ-ಒನ್ಡ್ ಕಾರು ಶೋರೂಮ್‌ಗಳ ಬೃಹತ್ ಜಾಲ ಬಲದಿಂದ ದೇಶದ ಅಗ್ರಗಣ್ಯ ಡೀಲರ್ ಆಗಿರುವ ಅದ್ವೈತ್ ಹ್ಯೂಂಡೈ ದಕ್ಷಿಣ ಮಂಗಳೂರಿನ ಬೈಕಂಪಾಡಿ ಕುಂಟಿಕಾನ, ಸುಳ್ಯ, ಬೆಳ್ತಂಗಡಿಯಲ್ಲಿ ಸೇವಾ ಕೇಂದ್ರವನ್ನು ಹೊಂದಿದೆ. ಹುಂಡೈ ವೆನ್ಯೂ ಅನ್ನು ಮೊದಲು 2019 ರಲ್ಲಿ ಬಿಡುಗಡೆ ಮಾಡಲಾಯಿತು.


ಇದೀಗ ನೂತನ ಆಲ್ ನ್ಯೂ ಹ್ಯೂಂಡೈ ವೆನ್ಯೂ ಕಾರು ಬೆಳ್ತಂಗಡಿ ಮಾರುಕಟ್ಟೆಗೆ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ಬೆಳ್ತಂಗಡಿಯ ಅದ್ವೈತ್ ಹೂಂಡೈ ಶೋರೂಂನಲ್ಲಿ ನೆರೆವೇರಿತು.
ನೂತನ ಕಾರನ್ನು ರೈಡಿಂಗ್ ಜೋಡಿ ಯೂಟ್ಯೂಬ್ ಚಾನೆಲ್‌ನ ಶ್ಯಾಮ್ ಪ್ರಸಾದ್ ಕಾಮತ್ ಮತ್ತು ಶೈನಿ ಕಾಮತ್ ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು.

2019ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡ ಹ್ಯೂಂಡೈ ವೆನ್ಯೂ ಇದೀಗ 6 ವರ್ಷಗಳ ಬಳಿಕ ಹೊಸ ರೂಪದಲ್ಲಿ 2ನೇ ಪೀಳಿಗೆಯ ಆಲ್ ನ್ಯೂ ವೆನ್ಯೂ ಭಾರತೀಯ ಗ್ರಾಹಕರಿಗೆ ಪರಿಚಯವಾಗಿದ್ದು, ಹೊಸ ತಂತ್ರಜ್ಞಾನ, ಭದ್ರತೆ ಮತ್ತು ಶೈಲಿಯ ಪರಿಪೂರ್ಣ ಮಿಶ್ರಣವಾದ ಹೊಸ ಹ್ಯೂಂಡೈ ವೆನ್ಯೂ ತನ್ನ ವಿನೂತನ ಶೈಲಿ ನಮತ್ತು ಆಧುನಿಕ ತಂತ್ರಜ್ಞಾನದಿಂದ ವಾಹನ ಪ್ರಿಯರ ಗಮನ ಸೆಳೆದಿದೆ.

ಹ್ಯೂಂಡೈಯ ಹೊಸ ತಲೆಮಾರಿನ ವೆನ್ಯೂ ವಾಹನ ಪ್ರಿಯರ ಹೊಸ ಆಕರ್ಷಣೆ ಆಗಿ ಮೂಡಿ ಬಂದಿದೆ. ಬಿಡುಗಡೆ ಸಮಾರಂಭದಲ್ಲಿ ಬೆಳ್ತಂಗಡಿ ಅದ್ವೈತ್ ಹುಂಡೈ ಇದರ ಮಾರಾಟ ವ್ಯವಸ್ಥಾಪಕ ಭರತ್ ಶೆಟ್ಟಿ, ಸೇವಾ ವ್ಯವಸ್ಥಾಪಕ ವಿಷ್ಣು ಕುಮಾರ್, ಬಾಡಿ ಶಾಪ್ ಮ್ಯಾನೇಜರ್ ಗಣೇಶ್ ಪ್ರಸಾದ್ ಉಪಸ್ಥಿತರಿದ್ದರು.

ಇದನ್ನು ಓದಿ: ‘ಆಲ್ ನ್ಯೂ ಹ್ಯೂಂಡೈ ವೆನ್ಯೂ’ ಕಾರು ಮಂಗಳೂರು ಮಾರುಕಟ್ಟೆಗೆ ಬಿಡುಗಡೆ

ಹ್ಯೂಂಡೈ ವೆನ್ಯೂ ಕಾರಿನ ವಿಶಿಷ್ಟ ಗುಣಲಕ್ಷಣಗಳ ಬಗ್ಗೆ ನೋಡೋದಾದ್ರೆ 65 ಕ್ಕೂ ಹೆಚ್ಚು ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ವಿಶಿಷ್ಟ ವಿನ್ಯಾಸ, ಕಾರ್ಯಕ್ಷಮತೆಯುಳ್ಳ ಚಾಲಿತ ಚಕ್ರಗಳು, ಬ್ರಾಂಡೆಡ್ ಡ್ಯುಯಲ್-ಟೋನ್ ಲೆದರೆಟ್ ಸೀಟು, 6 ಏರ್‌ಬ್ಯಾಗ್‌ಗಳು, 360 ಡಿಗ್ರಿ ಕ್ಯಾಮೆರಾಗಳು, ಹೊಸ ಮಾದರಿಯು ಉತ್ತಮ ನಿಲುಗಡೆ ಶಕ್ತಿಯನ್ನು ನೀಡಲು ನಾಲ್ಕು ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. ಇದು ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಸಹ ಒಳಗೊಂಡಿದೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page