Connect with us

DAKSHINA KANNADA

ದುಬಾರಿ ಬೈಕ್ ಬೇಡಿಕೆಯ ಹಠ : ಕಿನ್ನಿಗೋಳಿ ಫೋಟೋಗ್ರಾಫರ್ ಬಾವಿಗೆ ಹಾರಿ ಆತ್ಮಹತ್ಯೆ..!

Published

on

ಮಂಗಳೂರು : ಮಂಗಳೂರು  ಹೊರವಲಯದ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಸಮೀಪದ ಕಾಪಿಕಾಡ್ ಉರೇಕಾ ಬಳಿ ಫೋಟೋಗ್ರಾಫರ್ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಯುವಕನನ್ನು ರಾಹುಲ್ ಕಾಲಿನ್ ಫರ್ನಾಂಡಿಸ್ (26) ಎಂದು ಗುರುತಿಸಲಾಗಿದೆ.ಮೃತ ಯುವಕ ಕಿನ್ನಿಗೋಳಿಯಲ್ಲಿ ಆರ್. ಸಿ. ಹೆಸರಿನ ಫೋಟೋ ಸ್ಟುಡಿಯೋ ನಡೆಸುತ್ತಿದ್ದು, ಬುಧವಾರ ರಾತ್ರಿ 10 ಗಂಟೆ ಬಳಿಕ
ಮಗ ನಾಪತ್ತೆಯಾಗಿರುವುದನ್ನು ಕಂಡು ಗಾಬರಿಯಾಗಿ ಹುಡುಕಾಟ ನಡೆಸಿದಾಗ ಮನೆ ಹಿಂಬದಿಯಲ್ಲಿರುವ ಬಾವಿಯಲ್ಲಿ ಮಗನ ಮೃತದೇಹ ಪತ್ತೆಯಾಗಿದೆ.
ಮೃತ ಯುವಕ ರಾಹುಲ್ ಕಳೆದ ದಿನದ ಹಿಂದೆ ನನಗೆ ದುಬಾರಿ ಬೈಕ್ ಬೇಕು ಎಂದು ತಂದೆ ಜೊತೆ ಹಠಹಿಡಿದಿದ್ದ ಬೈಕ್ ತೆಗೆದುಕೊಡದ ಕಾರಣ ಅತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೋಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿದ್ದಾರೆ.

DAKSHINA KANNADA

ಜಪ್ಪಿನಮೊಗರು ನಾರಾಯಣಗುರು ಮಂದಿರದಲ್ಲಿ ಆರೋಗ್ಯ ತಪಾಸಣಾ ಶಿಬಿರ

Published

on

ಮಂಗಳೂರು : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಮತ್ತು ಜಪ್ಪಿನಮೊಗರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಜಂಟಿ ಆಶ್ರಯದಲ್ಲಿ ಎನ್.ಜಿ. ವರ್ಲ್ಡ್ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಮತ್ತು ಗುರುಗಳ ಪ್ರತಿಷ್ಠಾ ವರ್ಧಂತ್ಯುತ್ಸವದ ಪ್ರಯುಕ್ತ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣೆ ಮತ್ತು ದಂತ ಚಿಕಿತ್ಸಾ ಶಿಬಿರವನ್ನು ಭಾನುವಾರ(ಫೆ.08) ಜಪ್ಪಿನಮೊಗರು ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಆಯೋಜಿಸಲಾಗಿತ್ತು.

ಕಂಕನಾಡಿ ಗರೋಡಿಯ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕ್ಷೇತ್ರದ ಮೊಕ್ತೇಸರ ಚಂದ್ರನಾಥ್ ಅತ್ತಾವರ  ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಆರೋಗ್ಯವನ್ನು ದೇವರು ಕರುಣಿಸುತ್ತಾರೆ ಎಂಬುದು  ನಮ್ಮ ನಂಬಿಕೆ. ಆದರೆ ಆರೋಗ್ಯವನ್ನು ಕಾಪಾಡಿಕೊಂಡು ಬರುವಲ್ಲಿ ನಮ್ಮ ಪಾತ್ರವೂ ಇದೆ. ಉತ್ತಮ ಜೀವನ ಶೈಲಿಯನ್ನು ರೂಢಿಸಿಕೊಂಡು ಬರುವುದು ನಮ್ಮ ಜವಾಬ್ದಾರಿ. ಹಾಗಿರುವಾಗ ಇಂತಹ ಶಿಬಿರಗಳು ಸಹಕಾರಿಯಾಗುತ್ತವೆ ಎಂದರು.

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಮಾತನಾಡಿ, ಜನರ ಆರೋಗ್ಯವನ್ನು ಕಾಪಾಡಿಕೊಂಡು ಬರಬೇಕೆಂಬ ಉದ್ದೇಶದಿಂದ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲಾಗುತ್ತಿದೆ. ಸಹಕಾರಿ ಸಂಘಗಳ ಸದಸ್ಯರಿಗೆ ಯಶಸ್ವಿನಿ ಆರೋಗ್ಯ ವಿಮೆಯ ಪ್ರಯೋಜನ ಲಭಿಸುತ್ತಿದ್ದು, ಅದರ ಪ್ರಯೋಜನ ಪಡೆಯಬೇಕೆಂದರು.  ಜಪ್ಪಿನಮೊಗರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಮನೋಜ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಇದನ್ನೂ ಓದಿ :WATCH VIDEO : ಉಡುಪಿ : ಕಬ್ಯಾಡಿಯಲ್ಲಿ ಕಾಂಪೌಂಡ್‌ನಲ್ಲಿ ಅಡ್ಡಾಡಿದ ಚಿರತೆ; ವೀಡಿಯೋ ವೈರಲ್!

ಕದ್ರಿಯ ಮಂಗಳ ಕಾಲೇಜು, ಮಂಗಳ ಆಸ್ಪತ್ರೆ ಮತ್ತು ಮಂಗಳ ಕಿಡ್ನಿ ಫೌಂಡೇಶನ್ ಹಾಗೂ ಮುಕ್ಕ ಶ್ರೀನಿವಾಸ್ ಇನಿಸ್ಟಿಟ್ಯೂಟ್‌ ಆಫ್‌ ಡೆಂಟಲ್ ಸಾಯನ್ಸ್ ಇದರ ತಜ್ಞ ವೈದ್ಯರು ವೈದ್ಯಕೀಯ ತಪಾಸಣೆಯನ್ನು ನಡೆಡಿಕೊಟ್ಟರು.

Continue Reading

DAKSHINA KANNADA

ದೇಶದ ಆರ್ಥಿಕ ಪ್ರಗತಿಗೆ ಪೂರಕವಾಗಿದೆ ಕೇಂದ್ರ ಬಜೆಟ್ : ಎಸ್.ಎಸ್.ನಾಯಕ್

Published

on

ಮಂಗಳೂರು : ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಈ ವರ್ಷದ ಬಜೆಟ್‌ ದೇಶದ ಆರ್ಥಿಕ ಪ್ರಗತಿಗೆ ಪೂರಕವಾದ ಬಜೆಟ್‌ ಆಗಿದೆ ಎಂದು ಹಿರಿಯ ಲೆಕ್ಕಪರಿಶೋಧಕ, ಆರ್ಥಿಕ ತಜ್ಞ ಎಸ್‌. ಎಸ್‌. ನಾಯಕ್‌  ಅಭಿಪ್ರಾಯ ಪಟ್ಟಿದ್ದಾರೆ. ಮಂಗಳೂರು ಪ್ರಾಡಕ್ಟಿವಿಟಿ ಕೌನ್ಸಿಲ್‌ ವತಿಯಿಂದ ಲೇಡಿಹಿಲ್‌ ನ ಸೀ ವ್ಯೂ ಹೊಟೇಲ್‌ ಸಭಾಂಗಣದಲ್ಲಿ ಶನಿವಾರ(ಫೆ.07)ಏರ್ಪಡಿಸಿದ್ದ ಡಿ ಕೋಡಿಂಗ್ ಯೂನಿಯನ್ ಬಜೆಟ್ 2026 ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

ಈ ಬಾರಿಯ ಬಜೆಟ್‌ನಲ್ಲಿ ವಿಶೇಷವಾಗಿ ಯಾವ ಕೊಡುಗೆಯನ್ನೂ ನೀಡಿಲ್ಲ ಎಂದು ಕೆಲವರು ಟೀಕೆ ಮಾಡುತ್ತಾರೆ. ಆದರೆ ಇಂತಹ ಆರೋಪದಲ್ಲಿ ಹುರುಳಿಲ್ಲ. ಏಕೆಂದರೆ ಬಜೆಟ್‌ನ್ನು ಪೂರ್ತಿಯಾಗಿ ಓದಿ ಆರ್ಥೈಸಿಕೊಳ್ಳದವರು ಮಾತ್ರ ಈ ರೀತಿಯಾಗಿ ಹೇಳಿಕೆ ನೀಡುತ್ತಾರೆ ಎಂದರು.

ಈ ಬಜೆಟ್‌ನಲ್ಲಿ ಅನೇಕ ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. ಯಾವುದೇ ಹೆಚ್ಚುವರಿ ತೆರಿಗೆಯನ್ನು ಹಾಕದೆ ಜನರಿಗೆ ಅನೇಕ ಪ್ರಯೋಜನಗಳನ್ನು ನೀಡಿದೆ. ಭಾರತವು ಜಗತ್ತಿನ ಅತಿ ವೇಗದ ಆರ್ಥಿಕ ಶಕ್ತಿಯಾಗಿ ಮೂಡಿಬರುತ್ತಿದ್ದು, ಅದಕ್ಕೆ ಪೂರಕವಾಗಿ ಈ ಬಜೆಟ್‌ ಬಂದಿದೆ.  ಬಂಡವಾಳ ವೆಚ್ಚದಲ್ಲಿ ಏರಿಕೆಯಾಗಿದ್ದು, 12.20 ಲಕ್ಷ ಕೋಟಿ ರೂಪಾಯಿ  ಮೀಸಲಿಡಲಾಗಿದೆ. ಇದು ಬಜೆಟ್‌ ಗಾತ್ರದ ಶೇಕಡಾ 22.80 ಆಗಿದ್ದು, ಆರ್ಥಿಕ ಪ್ರಗತಿಗೆ ಪೂರಕವಾಗಿದೆ. ಮುಂಬರುವ ದಿನಗಳಲ್ಲಿ ದೇಶದ ನಂ.1 ಆರ್ಥಿಕ ಶಕ್ತಿಯಾಗಿ ಮೂಡಿಬರಲು ಸಹಾಯಕವಾಗಿದೆ ಎಂದರು.

ಇದನ್ನೂ ಓದಿ : ಮಂಗಳೂರು : ಕೆಎಂಸಿ ಆಸ್ಪತ್ರೆಯಲ್ಲಿ ‘ಕ್ಯಾನ್ಸರ್ ತಪ್ಪಿಸೋಣ’ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ

ಕೆನರಾ ಬ್ಯಾಂಕ್‌ ಮಂಗಳೂರು ವೃತ್ತ ಕಚೇರಿಯ ಜನರಲ್‌ ಮ್ಯಾನೇಜರ್‌ ಮತ್ತು ಮುಖ್ಯಸ್ಥ  ಮಂಜುನಾಥ್‌ ಬಿ. ಸಿಂಘೈ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಒಮಾನ್ ದೇಶದ ಸಿಬಿಎಫ್‌ಎಸ್‌- ಸೆಂಟರ್‌ ಫಾರ್‌ ಟ್ರೈನಿಂಗ್‌ ಇದರ ನಿರ್ದೇಶಕ ಡಾ.ಕೆ. ರಾಜೇಶ್‌ ನಾಯಕ್‌, ಮಂಗಳೂರು ಪ್ರಾಡಕ್ಟಿವಿಟಿ ಕೌನ್ಸಿಲ್‌ನ ಅಧ್ಯಕ್ಷ ಯು.ರಾಮರಾವ್‌ ಮತ್ತಿತರರು ಉಪಸ್ಥಿತರಿದ್ದರು.

Continue Reading

DAKSHINA KANNADA

ಮಂಗಳೂರು : ಕೆಎಂಸಿ ಆಸ್ಪತ್ರೆಯಲ್ಲಿ ‘ಕ್ಯಾನ್ಸರ್ ತಪ್ಪಿಸೋಣ’ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ

Published

on

ಮಂಗಳೂರು : ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ, ‘ಕ್ಯಾನ್ಸರ್ ತಪ್ಪಿಸೋಣ’ ಎಂಬ ಶೀರ್ಷಿಕೆಯ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ಶನಿವಾರ(ಫೆ.7) ಆಯೋಜಿಸಲಾಗಿತ್ತು. ಈ  ಕಾರ್ಯಾಗಾರದಲ್ಲಿ  ವೈದ್ಯರು, ಹಿರಿಯ ನಾಗರಿಕರು, ಯುವಕರು ಮತ್ತು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ತಜ್ಞ ವೈದ್ಯರು ಸ್ತನ, ಹೊಟ್ಟೆ, ಶ್ವಾಸಕೋಶ, ಕೊಲೊರೆಕ್ಟಲ್, ಪ್ರಾಸ್ಟೇಟ್ ಮತ್ತು ರಕ್ತ ಕ್ಯಾನ್ಸರ್ ಸೇರಿದಂತೆ ಪ್ರಮುಖ ಕ್ಯಾನ್ಸರ್‌ಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ನಿದ್ರೆಯ ಸಮಯದಲ್ಲಿ ಸ್ಮಾರ್ಟ್‌ಫೋನ್ ವಿಕಿರಣಕ್ಕೆ ಒಡ್ಡಿಕೊಳ್ಳುವುದು, ಮೈಕ್ರೋವೇವ್ ಆಹಾರದ ಬಳಕೆ, ನಾನ್-ಸ್ಟಿಕ್ ಕುಕ್‌ ವೇರ್ ಮತ್ತು ಏರ್ ಫ್ರೈಯರ್‌ಗಳು, ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಬಿಸಿ ಆಹಾರ ಸೇವನೆ, ನಿಷ್ಕ್ರಿಯ ಧೂಮಪಾನ ಮತ್ತು  ಹೆಚ್ಚುತ್ತಿರುವ ಸಂಸ್ಕರಿಸಿದ ಮತ್ತು ಜಂಕ್ ಫುಡ್‌ನ ಸೇವನೆ ಹೀಗೆ ಹಲವಾರು ಜೀವನಶೈಲಿಗೆ ಸಂಬಂಧಿಸಿದ ಅಪಾಯಕಾರಿ ಅಂಶಗಳ ಬಗ್ಗೆ ವೈದ್ಯರು ಚರ್ಚಿಸಿದರು. ಆರಂಭಿಕ ಹಂತದಲ್ಲಿ ಪತ್ತೆಯಾದರೆ ಅನೇಕ ಕ್ಯಾನ್ಸರ್‌ ಗಳನ್ನು ಗುಣಪಡಿಸಬಹುದು. ರೋಗ ಲಕ್ಷಣಗಳನ್ನು ನಿರ್ಲಕ್ಷಿಸಬಾರದು ಎಂದು ಸಾರ್ವಜನಿಕರಿಗೆ ತಿಳಿ ಹೇಳಿದರು.

ಇದನ್ನೂ ಓದಿ : WATCH VIDEO : ಉಡುಪಿ : ಕಬ್ಯಾಡಿಯಲ್ಲಿ ಕಾಂಪೌಂಡ್‌ನಲ್ಲಿ ಅಡ್ಡಾಡಿದ ಚಿರತೆ; ವೀಡಿಯೋ ವೈರಲ್!

ತಜ್ಞರ ಸಮಿತಿಯಲ್ಲಿ ಹೆಮಟಾಲಜಿ ಮತ್ತು ಜನರಲ್ ಮೆಡಿಸಿನ್ ಡಾ.ಪ್ರಶಾಂತ್ ಬಿ, ಪೀಡಿಯಾಟ್ರಿಕ್ ಹೆಮಟೊ ಆಂಕೊಲಾಜಿ ಡಾ. ಹರ್ಷ ಪ್ರಸಾದ್, ಸ್ತನ ಶಸ್ತ್ರಚಿಕಿತ್ಸೆ ತಜ್ಞ ಡಾ. ಬಾಸಿಲಾ ಅಮೀರ್ ಅಲಿ, ಸರ್ಜಿಕಲ್ ಆಂಕೊಲಾಜಿ ಡಾ. ಕಾರ್ತಿಕ್ ಕೆ.ಎಸ್ ಮತ್ತು ವೈದ್ಯಕೀಯ ಆಂಕೊಲಾಜಿ ಡಾ. ಸಾನ್ಯೊ ಪಿ ಡಿಸೋಜಾ ಉಪಸ್ಥಿತರಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page