Connect with us

DAKSHINA KANNADA

 ಮಂಗಳೂರು ಪೊಲೀಸ್‌ ಕಮೀಷನರ್‌ ಮುಸ್ಲಿಂ ಸಮುದಾಯದ ಕ್ಷಮೆ ಕೋರಬೇಕು: PFI

Published

on

ಮಂಗಳೂರು: ದ.ಕ.ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ರೀತಿಯ ದುಷ್ಕೃತ್ಯಗಳ ಹೆಸರಿನಲ್ಲಿ ಮುಸ್ಲಿಮ್ ಸಮುದಾಯವನ್ನು ಗುರಿಪಡಿಸುತ್ತಿರುವುದು ಖಂಡನಾರ್ಹವಾಗಿದೆ.

ಈ ಬಗ್ಗೆ ಹಲವು ಪ್ರಕರಣದಲ್ಲಿ ತನಿಖೆ ಪೂರ್ಣಗೊಳ್ಳುವ ಮೊದಲೇ ಮುಸ್ಲಿಂ ಯುವಕರನ್ನುಸಾರ್ವಜನಿಕವಾಗಿ ಅಪರಾಧಿಗಳನ್ನಾಗಿ ಬಿಂಬಿಸಿದ್ದು, ಹಾಗೂ ಜನರಿಗೆ ತಪ್ಪು ಮಾಹಿತಿ ನೀಡುವ ಮೂಲಕ ಅಮಾಯಕ ಮುಸ್ಲಿಂ ಹಾಗೂ ಸಮುದಾಯದ ಮೇಲಾದ ಮಾನಹಾನಿಗೆ ಮಂಗಳೂರು ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌ ಕ್ಷಮೆಯಾಚಿಸಬೇಕು ಎಂದು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಆಗ್ರಹಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಎ.ಕೆ ಆಶ್ರಫ್‌, ಜಿಲ್ಲೆಯಲ್ಲಿ ಸರಣಿ ದುಷ್ಕೃತ್ಯಗಳು ನಡೆದಾಗಲೆಲ್ಲಾ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಮುಸ್ಲಿಮರನ್ನು ಗುರಿಪಡಿಸಿಕೊಂಡು ಅಪಪ್ರಚಾರಗಳನ್ನು ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ.

ಜೊತೆಗೆ ಪ್ರಚೋದನಾಕಾರಿ ಭಾಷಣಗಳನ್ನು ಮಾಡುತ್ತಾ ಶಾಂತಿ ಕದಡಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಇದರ ಬೆನ್ನಲ್ಲೇ ನಡೆಯುವ ಪೊಲೀಸರ ಕೋಮು ಪೂರ್ವಾಗ್ರಹಪೀಡಿತ ತನಿಖೆಗಳು ಕಳವಳಕಾರಿಯಾಗಿವೆ.

ಇದೀಗ ಮಂಗಳೂರಿನ ನಂದಿಗುಡ್ಡೆಯಲ್ಲಿ ಕೊರಗಜ್ಜ ದೈವಸ್ಥಾನ ಕಟ್ಟೆಯನ್ನು ಅಪವಿತ್ರಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ದೇವದಾಸ್ ದೇಸಾಯಿ ಎಂಬಾತನನ್ನು ಬಂಧಿಸಿದ್ದಾರೆ. ತಾನು 18 ಕಡೆ ಇಂತಹ ದುಷ್ಕೃತ್ಯಗಳನ್ನು ಎಸಗಿದ್ದೆ ಎಂಬ ವಿಚಾರವನ್ನು ಆರೋಪಿ ಒಪ್ಪಿಕೊಂಡಿರುವುದನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಜೊತೆಗೆ ಕೃತ್ಯ ನಡೆಸಿರುವುದರ ಬಗ್ಗೆ ಆರೋಪಿಯ ಹೇಳಿಕೆಯೂ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.
ಇದಕ್ಕೂ ಮೊದಲು ಮಂಗಳೂರು ನಗರದ ಸುತ್ತಮುತ್ತಲಿನ ದೈವಸ್ಥಾನಗಳ ಕಾಣಿಕೆ ಹುಂಡಿಗಳಿಗೆ ಅಪಚಾರ ಎಸಗಿದ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಹೇಳಿ ಪೊಲೀಸರು ಜೋಕಟ್ಟೆ ಪರಿಸರದ ರಹೀಂ ಮತ್ತು ತೌಫೀಕ್ ಎಂಬ ಇಬ್ಬರು ಯುವಕರನ್ನು ಮಾಧ್ಯಮದವರ ಮುಂದೆ ಹಾಜರುಪಡಿಸಿದ್ದರು. ಆರೋಪಿಗಳು ತಮ್ಮ ಕೃತ್ಯಗಳನ್ನು ಒಪ್ಪಿಕೊಂಡಿದ್ದಾರೆಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಸ್ವತಃ ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದರು. ಮಾಧ್ಯಮಗಳಲ್ಲೂ ಪೊಲೀಸ್ ಕಮಿಷನರ್ ಅವರ ಹೇಳಿಕೆಗಳು ಪ್ರಕಟವಾಗಿದ್ದವು. ಇವರಿಬ್ಬರ ಬಂಧನದ ಬಳಿಕ ಒಟ್ಟು ಮುಸ್ಲಿಮ್ ಸಮುದಾಯವನ್ನು ಸಂಶಯದ ದೃಷ್ಟಿಯಿಂದ ನೋಡಲಾಯಿತು ಎಂದು ಅಶ್ರರ್ಪ್ ಆರೋಪಿಸಿದರು.
ಜೋಕಟ್ಟೆಯಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದ ಮುಸ್ಲಿಮ್ ಯುವಕ ಕೊರಗಜ್ಜನ ಕಟ್ಟೆ ಅಪವಿತ್ರಗೊಳಿಸಿದ್ದರಿಂದಲೇ ರಕ್ತ ವಾಂತಿ ಮಾಡಿ ಸತ್ತಿದ್ದಾನೆಂದು ಹೇಳಿ ಭಾವನಾತ್ಮಕವಾಗಿ ಪ್ರಚೋದಿಸುವ ಹುನ್ನಾರವೂ ನಡೆಯಿತು. ಜಿಲ್ಲೆಯ ಪೊಲೀಸ್ ಇಲಾಖೆಯೂ ತನಿಖೆಗೆ ಮುನ್ನವೇ ಮುಸ್ಲಿಮರನ್ನು ಅರೋಪಿ ಸ್ಥಾನದಲ್ಲಿ ನಿಲ್ಲಿಸಿಬಿಟ್ಟಿತು.
ಸತತ 4 ದಿನಗಳ ಕಾಲ ವಿಚಾರಣೆ ನಡೆಸಿದ ಬಳಿಕವೂ ಪೊಲೀಸರಿಗೆ, ರಹೀಂ ಮತ್ತು ತೌಫೀಕ್ ಎಂಬ ಇಬ್ಬರು ಯುವಕರ ವಿರುದ್ಧವೂ ಯಾವುದೇ ಸಾಕ್ಷ್ಯಾಧಾರ ದೊರಕಲಿಲ್ಲ. ನಂತರದಲ್ಲಿ ಈ ಘಟನೆಗಳ ಸಂಬಂಧ ಯಾವುದೇ ಪ್ರಕರಣ ದಾಖಲಿಸದೇ ಅವರಿಬ್ಬರನ್ನೂ ಬಿಡುಗಡೆಗೊಳಿಸಲಾಗಿತ್ತು. ಬಂಧನದ ವೇಳೆ ಪೊಲೀಸರು ನಡೆಸಿದ ಪತ್ರಿಕಾಗೋಷ್ಠಿ ಅಮಾಯಕರ ಬಿಡುಗಡೆಯ ವೇಳೆ ನಡೆಯದಿರುವುದು ಮಾತ್ರ ವಿಪರ್ಯಾಸವಾಗಿದೆ ಎಂದರು.
ಕೆಲ ಸಮಯಗಳ ಹಿಂದೆ ಜೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಕರ್ಕೇರ ಮೂಲ ದೈವಸ್ಥಾನದಲ್ಲಿ ಮೂರ್ತಿಗಳನ್ನು ಭಗ್ನಗೊಳಿಸಿದ ಘಟನೆ ನಡೆದಿತ್ತು. ಈ ವೇಳೆ ಘಟನೆಯನ್ನು ಮುಂದಿಟ್ಟುಕೊಂಡು ಪ್ರತಿಭಟನೆ, ಕೋಮುಪ್ರಚೋದನಕಾರಿ ಹೇಳಿಕೆಗಳ ಮೂಲಕ ಶಾಂತಿ ಕದಡುವ ಪ್ರಯತ್ನ ನಡೆಸಿತ್ತು. ಆದರೆ ಆ ಘಟನೆಯಲ್ಲಿ ಆರೋಪಿ ರೋಹಿತಾಶ್ವ ಎಂಬಾತನ ಬಂಧನವಾಗಿತ್ತು.
ಮಂಜನಾಡಿ ವಿಷ್ಣುಮೂರ್ತಿ ಜನಾರ್ದನ ದೈವಸ್ಥಾನದಲ್ಲಿ ಕಾಣಿಕೆ ಡಬ್ಬಿ ಕಳವು ಮತ್ತು ಇತರ ಬೈಕುಗಳು ಕಳವಾದ ಘಟನೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೊಂಟೆಪದವು ನಿವಾಸಿ ತಾರನಾಥ್ ಮೋಹನ್ ಎಂಬಾತನನ್ನು ಬಂಧಿಸಿದ್ದು, ಈತ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಉಳ್ಳಾಲ ಪ್ರಖಂಡದ ಸಂಚಾಲಕನಾಗಿದ್ದ ಎಂಬ ಮಾಹಿತಿಯೂ ಬಹಿರಂಗವಾಗಿತ್ತು.

ಈ ಹಿಂದೆ ಕೊಣಾಚೆಯ ಕಾರ್ತಿಕ್ ರಾಜ್ ಕೊಲೆ ನಡೆದಾಗಲೂ ಪೊಲೀಸರು ಅಮಾಯಕ ಮುಸ್ಲಿಮ್ ಯುವಕರನ್ನು ಠಾಣೆಯಲ್ಲಿಟ್ಟು ನಿರಂತರವಾಗಿ ಚಿತ್ರಹಿಂಸೆ ನೀಡಿದ್ದರು. ಕೆಲ ಸಮಯಗಳ ಬಳಿಕ ಹತ್ಯೆಯಲ್ಲಿ ಕಾರ್ತಿಕ್ ರಾಜ್ ಸಹೋದರಿ ಮತ್ತು ಪ್ರಿಯಕರನ ಪಾತ್ರವಿರುವುದು ಬಹಿರಂಗವಾಗಿತ್ತು ಎಂದರು.

ಜಿಲ್ಲಾ ಪೊಲೀಸರ ಕೋಮು ಪೂರ್ವಾಗ್ರಹಪೀಡಿತ ತನಿಖೆಗಳೂ ಆತಂಕ ಹುಟ್ಟಿಸುತ್ತಿವೆ. ತನಿಖೆಯಲ್ಲಿ ನೈಜ ಆರೋಪಿಗಳು ಪತ್ತೆಯಾದಾಗ ಪೊಲೀಸರು ಘಟನೆಯನ್ನು ಕೇವಲವಾಗಿ ಪ್ರಸ್ತುತಪಡಿಸುತ್ತಿರುವುದು ಕಂಡು ಬರುತ್ತಿದೆ.

ಪೊಲೀಸ್ ಇಲಾಖೆಯ ಇಂತಹ ವರ್ತನೆಗಳು ಯಾವುದೇ ಕಾರಣಕ್ಕೂ ಸಹಿಸುವಂಥದ್ದಲ್ಲ. ತನಿಖೆ ಪೂರ್ಣಗೊಳ್ಳುವ ಮುನ್ನವೇ ಪೊಲೀಸ್ ಇಲಾಖೆ ಮುಸ್ಲಿಮ್ ಯುವಕರನ್ನು ಸಾರ್ವಜನಿಕವಾಗಿ ಅಪರಾಧಿಗಳನ್ನಾಗಿ ಬಿಂಬಿಸಿದ್ದು ಯಾರನ್ನು ತೃಪ್ತಿಪಡಿಸಲು ಎಂಬುದು ಬಹಿರಂಗವಾಗಬೇಕು.

ಅಮಾಯಕ ಮುಸ್ಲಿಮ್ ಯುವಕರನ್ನು ಬಂಧಿಸಿ ಜನರಿಗೆ ತಪ್ಪು ಮಾಹಿತಿ ನೀಡಿದ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು, ಅಮಾಯಕ ಯುವಕರು ಮತ್ತು ಒಟ್ಟು ಮುಸ್ಲಿಮ್ ಸಮುದಾಯದ ಮೇಲಾದ ಮಾನಹಾನಿಗೆ ಕ್ಷಮೆ ಯಾಚಿಸಬೇಕು ಎಂದು ಅವರು ಆಗ್ರಹಿಸಿದರು.

DAKSHINA KANNADA

ಪುತ್ತೂರು: ರೈಲಿನಿಂದ ಜಾರಿ 25 ಅಡಿ ಆಳಕ್ಕೆ ಬಿದ್ದ ಯುವಕ

Published

on

ಪುತ್ತೂರು: ರೈಲಿನಿಂದ ಜಾರಿ ಯುವಕನೊಬ್ಬ 25 ಅಡಿ ಆಳಕ್ಕೆ ಬಿದ್ದು ಬಳಿಕ ಪವಾಡ ಸದೃಶವಾಗಿ ಬದುಕುಳಿದ ಘಟನೆ ಕಡಬದ ಸವಣೂರು ಎಂಬಲ್ಲಿ ನಡೆದಿದೆ.

ಉದಯ್ ಕುಮಾರ್ ರೈಲಿನಿಂದ ಬಿದ್ದ ಯುವಕ. ಈತ ಮಂಗಳೂರಿನಿಂದ ಬೆಂಗಳೂರು ಕಡೆಗೆ ರೈಲಿನಲ್ಲಿ ಹೊರಟಿದ್ದನು. ಆದರೆ ಬಾಗಿಲ ಬಳಿ ನಿಂತಿದ್ದರಿಂದ ಆಕಸ್ಮತ್‌ ಆಗಿ ರೈಲಿನಿಂದ 25 ಅಡಿ ಆಳಕ್ಕೆ ಜಾರಿ ಮೋರಿ ಬಳಿ ಬಿದ್ದಿದ್ದ. ರಾತ್ರಿ ವೇಳೆ ಈತ ಬಿದ್ದಿದ್ದರಿಂದ ಸಹ ಪ್ರಯಾಣಿಕರಿಗೆ ಮಾತ್ರ ತಿಳಿದಿತ್ತು.

ನಂತರ ರೈಲು ಮುಂದಿನ ನಿಲ್ದಾಣ ತಲುಪಿದಾಗ ರೈಲ್ವೇ ಮಾಸ್ಟರ್ಗೆ ವಿಷಯವನ್ನು ತಿಳಿಸಿದರು. ಆದರೆ ಯುವಕ ಎಲ್ಲಿ ಬಿದ್ದ ಎಂಬುದಾಗಿ ಯಾರಿಗೂ ತಿಳಿದಿರಲಿಲ್ಲ. ರಾತ್ರಿಯಾದ್ದರಿಂದ ಹುಡುಕಲು ಸಹ ಸಾಧ್ಯವಾಗಲಿಲ್ಲ.

ಆದರೆ ಮರುದಿನ ಬೆಳಗ್ಗೆ ಯುವಕ ಮೋರಿಯ ಬಳಿ ನರಳಾಡುವುದನ್ನು ಸ್ಥಳೀಯರು ಗಮನಿಸಿ ಕೂಡಲೇ ಆತನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವಕನ ಮುಖ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ. ಹೀಗೆ 15 ಗಂಟೆಯ ಬಳಿಕ ಈತ ಪತ್ತೆಯಾಗಿರುವುದು ವಿಶೇಷವೇ ಸರಿ.

Continue Reading

DAKSHINA KANNADA

ಮಾವಿನ ಮಿಡಿ ಕೊಯ್ಯಲು ಹೋಗಿ ದುರಂ*ತ; ಮರದಿಂದ ಬಿ*ದ್ದು ವ್ಯಕ್ತಿ ಸಾ*ವು

Published

on

ಸುಳ್ಯ : ಮಾವಿನ ಮರ ಏರಿ ಮಾವಿನ ಮಿಡಿಗಳನ್ನು ಕೊಯ್ಯುತ್ತಿದ್ದ ವೇಳೆ ಮರದ ಕೊಂಬೆ ತುಂಡಾಗಿ ಬಿದ್ದು ವ್ಯಕ್ತಿಯೊಬ್ಬರು ಮೃ*ತ ಪಟ್ಟಿದ್ದಾರೆ. ಸುಳ್ಯ ತಾಲೂಕಿನ ಉಬರಡ್ಕ ಎಂಬಲ್ಲಿ ಈ ಘಟನೆ ನಡೆದಿದ್ದು, ಜನಾರ್ದನ ಪೂಜಾರಿ ಮೃ*ತ ದುರ್ದೈವಿ.

ಉಬರಡ್ಕದ ನೆಯ್ಯೋಣಿ ನಿವಾಸಿಯಾಗಿದ್ದ ಇವರು ಮಾರ್ಚ್ 22 ರಂದು ಮಾವಿನ ಮರದಿಂದ ಮಾವಿನ ಮಿಡಿ ಕೊಯ್ಯುತ್ತಿದ್ದರು. ಈ ವೇಳೆ ಕೊಂಬೆ ತುಂಡಾಗಿದೆ. ಪರಿಣಾಮ ಕೊಂಬೆಯ ಸಹಿತ ಮರದಿಂದ ಕೆಳಗೆ ಬಿ*ದ್ದ ಅವರಿಗೆ ಗಂಭೀ*ರ ಸ್ವರೂಪದ ಗಾ*ಯಗಳಾಗಿತ್ತು.

ಇದನ್ನೂ ಓದಿ : ಬೆಳ್ತಂಗಡಿ : ಟಿಸಿ ಬಳಿಯಲ್ಲಿ ಮೆಸ್ಕಾಂ ಸಿಬ್ಬಂದಿಯ ಮೃ*ತದೇಹ ಪತ್ತೆ

ಸೊಂಟ ಹಾಗೂ ತಲೆಗೆ ಏಟಾಗಿದ್ದ ಅವರನ್ನು ತಕ್ಷಣ ಸುಳ್ಯದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಜನಾರ್ದನ ಪೂಜಾರಿ ಮೃ*ತಪಟ್ಟಿದ್ದಾರೆ.

Continue Reading

DAKSHINA KANNADA

ಬೆಳ್ತಂಗಡಿ : ಟಿಸಿ ಬಳಿಯಲ್ಲಿ ಮೆಸ್ಕಾಂ ಸಿಬ್ಬಂದಿಯ ಮೃ*ತದೇಹ ಪತ್ತೆ

Published

on

ಬೆಳ್ತಂಗಡಿ : ಮೆಸ್ಕಾಂ ಇಲಾಖೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಲೈನ್ ಮ್ಯಾನ್ ಆಗಿ ಕರ್ತವ್ಯದಲ್ಲಿದ್ದ ಸಿಬ್ಬಂದಿಯೊಬ್ಬರ ಮೃ*ತದೇಹ ಟ್ರಾನ್ಸ್ ಫಾರ್ಮರ್ ಒಂದರ ಬಳಿ ಪತ್ತೆಯಾಗಿದೆ.  ಬುಧವಾರ(ಮಾ.26) ಸಂಜೆ ವೇಳೆಯಲ್ಲಿ ಮೃ*ತದೇಹ ಪತ್ತೆಯಾಗಿದ್ದು, ಸಾ*ವು ಆಕಸ್ಮಿಕವೋ ಅಥವಾ ದು*ರ್ಘಟನೆಯೋ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಬೆಳ್ತಂಗಡಿ ತಾಲೂಕಿನ ನಾರವಿಯ ಅಡಿಂಜೆ ಎಂಬಲ್ಲಿ ಈ ಘಟನೆ ನಡೆದಿದ್ದು, ಮೃ*ತ ವ್ಯಕ್ತಿ ಕಿಟ್ಟಿ ಎಂದೇ ಫೇಮಸ್ ಆಗಿದ್ದ  ಸುಧಾಕರ್(50) ಎಂಬವರದ್ದಾಗಿದೆ. ನಾರಾವಿಯ ತುಂಬೆ ಗುಡ್ಡೆ ಎಂಬಲ್ಲಿಯ ನಿವಾಸಿಯಾಗಿದ್ದ ಸುಧಾಕರ್ ಕಳೆದ 27 ವರ್ಷಗಳಿಂದ ಮೆಸ್ಕಾಂ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬುಧವಾರ ಸಂಜೆ ಟ್ರಾನ್ಸ್ ಫಾರ್ಮರ್ ಬಳಿ ಹೋಗಿದ್ದ ಇವರು ಅಲ್ಲೇ ಮೃ*ತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಇದನ್ನೂ ಓದಿ : ಕೋಟ : ಅಜ್ಜಿಯ ಚಿನ್ನದ ಸರ ಕದ್ದಿದ್ದ ಆರೋಪಿ ಅರೆಸ್ಟ್

ಕೈನಲ್ಲಿ ಸಣ್ಣದೊಂದು ಗಾ*ಯ ಹೊರತು ಪಡಿಸಿದರೆ ಬೇರೆ ಯಾವುದೇ ಅನುಮಾನಾಸ್ಪದವಾದ ಕುರುಹು ಇಲ್ಲವಾಗಿದೆ. ಹಾಗಂತ ನಿನ್ನೆ ಸಂಜೆಯ ವೇಳೆ ಪರಿಸರದಲ್ಲಿ ಗುಡುಗು ಹಾಗು ಸಿಡಿಲು ಕೂಡ ಇತ್ತು. ಹಾಗಾಗಿ ಟ್ರಾನ್ಸ್ ಫಾರ್ಮರ್ ಬಳಿ ಹೋಗಿದ್ದಾಗ ಸಿಡಿಲು ಬಡಿಯಿತಾ ಅಥವಾ ವಿದ್ಯುತ್ ಪ್ರವಹಿಸಿತಾ ಅನ್ನೋ ಅನುಮಾನವೂ ಇದೆ.

ಸದ್ಯ ಮೃ*ತದೇಹವನ್ನು ಮ*ರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದ್ದು, ವರದಿ ಬಂದ ಬಳಿಕವಷ್ಟೇ ಸಾ*ವಿಗೆ ನಿಖರ ಕಾರಣ ಗೊತ್ತಾಗಲಿದೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page