Connect with us

DAKSHINA KANNADA

“ಹುಚ್ಚು ಕಟ್ಟಿದವರನ್ನ ಹುಚ್ಚು ಕಟ್ಟಿಸುತ್ತೇನೆ.. ಹಣವನ್ನ ಆಸ್ಪತ್ರೆಗೆ ಸುರಿಸುತ್ತೇನೆ”: ದೈವದ ನುಡಿ ಕುರಿತು ದೈವಸ್ಥಾನದ ಆಡಳಿತ ಮಂಡಳಿ ಸ್ಪಷ್ಟನೆ

Published

on

ಮಂಗಳೂರು: “ಹುಚ್ಚು ಕಟ್ಟಿದವರನ್ನ ಹುಚ್ಚು ಕಟ್ಟಿಸುತ್ತೇನೆ.. ಹಣವನ್ನ ಆಸ್ಪತ್ರೆಗೆ ಸುರಿಸುತ್ತೇನೆ” ಎಂದು ದೈವ ನುಡಿದಿತ್ತು ಎಂಬ ಬಗ್ಗೆ ಇದೀಗ ಸ್ವತಃ ದೈವಸ್ಥಾನದ ಆಡಳಿತ ಮಂಡಳಿಯಿಂದಲೇ ಸ್ಪಷ್ಟಿಕರಣ ಬಂದಿದೆ.


ಹೌದು, ಶ್ರೀ ಬ್ರಹ್ಮದೇವರು-ಇಷ್ಟ ದೇವತಾ ಬಲವಂಡಿ-ಪಿಲಿಚಾಂಡಿ ದೈವಸ್ಥಾನ, ಪಡುಪೆರಾರ-ಕ್ಷೇತ್ರದಲ್ಲಿ ಶತಮಾನ ಕಾಲದ ಸಂಪ್ರದಾಯದಂತೆ ಇತ್ತೀಚೆಗೆ ಪುದ್ದರ್-ಮೆಚ್ಚಿ ಜಾತ್ರೆ ನಡೆದಿತ್ತು. ಈ ಸಂದರ್ಭದಲ್ಲಿ ದೈವದ ಪಾತ್ರಿ-ದೈವವು ನೀಡಿದ ಅಭಯ ನುಡಿ ವಿಚಾರದಲ್ಲಿ ಗೊಂದಲ ಭಿನ್ನಭಿಪ್ರಾಯ ಏರ್ಪಟ್ಟಿರುವುದು ಕ್ಷೇತ್ರದ ಆಡಳಿತ ಮಂಡಳಿಯ ಗಮನಕ್ಕೆ ಬಂದಿದ್ದು, ಇದೀಗ ಸ್ಪಷ್ಟಿಕರಣ ಕೊಟ್ಟಿದೆ.

ಮಾಧ್ಯಮ ಹೇಳಿಕೆಯಲ್ಲಿ ಏನಿದೆ?
ಮಂಗಳೂರು ತಾಲೂಕು ಶ್ರೀ ಬ್ರಹ್ಮ ದೇವರು -ಇಷ್ಟ ದೇವತಾ ಬಲವಾಂಡಿ ಪಿಲಿಚಾಂಡಿ ದೈವಸ್ಥಾನ -ಪಡುಪೆರಾರ ಕ್ಷೇತ್ರದಲ್ಲಿ ನಡೆದ ಬಲವಾಂಡಿ-ಪಿಲಿಚಾಂಡಿ ದೈವಗಳ ಪುದರ್ -ಮೆಚ್ಚಿ ಜಾತ್ರೆ ಸಮಯದ ದೈವಪಾತ್ರಿ ದರ್ಶನ -ದೈವದ ನಡೆ-ನುಡಿಗಳ ಬಗ್ಗೆ ಉಂಟಾದ ಗೊಂದಲ-ಭಿನ್ನಾಭಿಪ್ರಾಯ ವಿಚಾರದಲ್ಲಿ ಆಡಳಿತ ಮಂಡಳಿಯ ಸ್ಪಷ್ಟಿಕರಣ ನೀಡುತ್ತಿದೆ. ಬ್ರಹ್ಮ ದೇವರು -ಇಷ್ಟ ದೇವತಾ ಬಲವಾಂಡಿ -ಪಿಲಿಚಾಂಡಿ ದೈವಸ್ಥಾನ, ಪಡುಪೆರಾರ-ಕ್ಷೇತ್ರದಲ್ಲಿ ಶತಮಾನದ ಕಾಲದ ಕಟ್ಟು ಕಟ್ಟಳೆಯಂತೆ, ಗುತ್ತು ಬರ್ಕೆ ಮಹನೀಯರು ಹಾಗೂ ಗ್ರಾಮಸ್ಥರು, ಸಾರ್ವಜನಿಕರ ಕೂಡವಿಕೆಯಿಂದ ನಡೆಸಲ್ಪಡುವ ಪುರ್-ಮೆಚ್ಚಿ ಜಾತ್ರೆಯು ಇತ್ತೀಚಿಗೆ ಕ್ಷೇತ್ರದಲ್ಲಿ ನಡೆದಿರುತ್ತದೆ. ಈ ಸಂದರ್ಭದಲ್ಲಿ ದೈವದ ಪಾತ್ರಿ-ದೈವವು ನೀಡಿದ ಅಭಯ ನಡೆ ನುಡಿಗಳ ವಿಚಾರದಲ್ಲಿ ಗೊಂದಲ ಭಿನ್ನಾಭಿಪ್ರಾಯ ಏರ್ಪಟ್ಟಿರುವುದು ಕ್ಷೇತ್ರದ ಆಡಳಿತ ಮಂಡಳಿಯ ಗಮನಕ್ಕೆ ಬಂದಿರುತ್ತದೆ.

ಕ್ಷೇತ್ರದ ಬಲವಾಂಡಿ -ಪಿಲಿಚಾಂಡಿ ದೈವದ ನರ್ತನದ ಬಳಿಕ ನಡೆಯುವ ನಡೆ ನುಡಿಗಳ ಸಂದರ್ಭದಲ್ಲಿ ಕೆಲವೊಂದು ಯುವಕರುಗಳು ದೈವ-ದೇವರ, ಆಚಾರ-ವಿಚಾರದಲ್ಲಿ ಆಗುತ್ತಿರುವ ಅಪಪ್ರಚಾರ ವಿಚಾರದಲ್ಲಿ ದೈವದ ಸಮಕ್ಷಮ ನಿವೇದನೆ ಮಾಡಿ ಕೊಂಡಿರುತ್ತಾರೆ. ಈ ಬಗ್ಗೆ ದೈವವು ಸೂಕ್ತ ಅಭಯವನ್ನು ನೀಡಿರುತ್ತದೆ ವಿನಾ: ಯಾವುದೇ ಚಲನಚಿತ್ರ, ಅದರಲ್ಲೂ ಮುಖ್ಯವಾಗಿ ಪ್ರಸ್ತುತ ಪ್ರಚಾರದಲ್ಲಿರುವ ಕಾಂತರ-1 ಬಗ್ಗೆ ಯಾವುದೇ ಅಭಯ ನುಡಿಯನ್ನು ದೈವವು ನೀಡಿರುವುದಿಲ್ಲ.

ಮೇಲಿನಂತೆ ಶ್ರೀ ಕ್ಷೇತ್ರ ಪೆರಾರದದಲ್ಲಿ ನಡೆದ ಜಾತ್ರ ಸಂದರ್ಭದಲ್ಲಿನ ದೈವ ನಡೆ-ನುಡಿಯಲ್ಲಿ ಯಾವುದೇ ನಿರ್ದಿಷ್ಟ ವ್ಯಕ್ತಿಗಳು, ಚಲನಚಿತ್ರದ ಬಗ್ಗೆ ಯಾವುದೇ ಅಭಯ-ನುಡಿ ನೀಡುವ ಸಂದರ್ಭ ಬಂದಿರುವ ಕಾರಣ, ಪ್ರಸ್ತುತ ಈ ವಿಚಾರದಲ್ಲಿನ ಗೊಂದಲ-ಭಿನ್ನಾಭಿಪ್ರಾಯಗಳಿಗೆ ಅಲ್ಲದೇ ಈ ಗೊಂದಲ ಶ್ರೀ ಕ್ಷೇತ್ರದ ದೈವ-ದೇವರು-ಆಡಳಿತ ಮಂಡಳಿಯು ಹೊಣೆಗಾರರಲ್ಲವೆಂದು ಈ ಮೂಲಕ ಸ್ಪಷ್ಟಪಡಿಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

DAKSHINA KANNADA

ಡಿ. 13, 14 ರಂದು ಮಂಗಳೂರಿನಲ್ಲಿ ಸೌಹಾರ್ದ ಕ್ರಿಸ್ಮಸ್ ಉತ್ಸವ

Published

on

ಮಂಗಳೂರು: ಮಂಗಳೂರಿನ ಮದರ್ ತೆರೆಸಾ ವಿಚಾರ ವೇದಿಕೆ ಮತ್ತು ಕ್ಯಾಥೊಲಿಕ್ ಸಭಾ ಮಂಗಳೂರು ಪ್ರದೇಶ್‌ ಇವುಗಳ ಜಂಟಿ ಆಶ್ರಯದಲ್ಲಿ ಡಿಸೆಂಬರ್ 13 ಮತ್ತು 14 ರಂದು ಕದ್ರಿ ಪಾರ್ಕ್‌ ನಲ್ಲಿ ಸೌಹಾರ್ದ ಕ್ರಿಸ್ಮಸ್ ಉತ್ಸವವನ್ನು ಆಯೋಜಿಸಲಾಗಿದೆ.

ಎರಡು ದಿನಗಳ ಈ ಉತ್ಸವದ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳು ಮಧ್ಯಾಹ್ನ 2.30 ರಿಂದ ರಾತ್ರಿ 9.30 ರ ತನಕ ನಡೆಯಲಿವೆ ಎಂದು ಮದರ್ ತೆರೆಸಾ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕ್ರಿಸ್ಮಸ್‌ ಖೇಲ್‌ ಸ್ಪರ್ಧೆಗಳು, ಕ್ರಿಸ್ಮಸ್ ಕ್ಯಾರಲ್‌ಗಳ ಗಾಯನ ಸ್ಪರ್ಧೆ, ಕೇಕ್ ಸ್ಪರ್ಧೆ, ಸ್ಟಾರ್ ಸ್ಪರ್ಧೆ, ವೈನ್‌ ಮೇಳ, ಆಹಾರ ಮಳಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಇದನ್ನೂ ಓದಿ: ‘ನಶೆ ಮುಕ್ತ ಮಂಗಳೂರು’ ಅಭಿಯಾನ-ಸ್ಪೀಕರ್ ಯು.ಟಿ ಖಾದರ್ ಅವರಿಂದ ಉದ್ಘಾಟನೆ

ವೇದಿಕೆಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ, ಕ್ಯಾಥೊಲಿಕದ ಸಭಾ ಅಧ್ಯಕ್ಷ ಸಂತೋಷ್ ಡಿ’ಸೋಜಾ, ಕಾರ್ಯಕ್ರಮದ ಸಂಚಾಲಕ ಸ್ಟ್ಯಾನಿ ಲೋಬೊ ಮತ್ತು ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Continue Reading

DAKSHINA KANNADA

‘ನಶೆ ಮುಕ್ತ ಮಂಗಳೂರು’ ಅಭಿಯಾನ-ಸ್ಪೀಕರ್ ಯು.ಟಿ ಖಾದರ್ ಅವರಿಂದ ಉದ್ಘಾಟನೆ

Published

on

ಮಂಗಳೂರು: ಮಂಗಳೂರು ನಗರ ಪೊಲೀಸ್ ಸಹಭಾಗಿತ್ವದಲ್ಲಿ ಮೇಕ್ ಎ ಚೇಂಜ್ ಫೌಂಡೇಶನ್‌ ಪ್ರಯುಕ್ತ “ನಶೆ ಮುಕ್ತ ಮಂಗಳೂರು’  ಅಭಿಯಾನವನ್ನು 102 ಕಾರ್ಯಕ್ರಮಗಳ ಸಹಿತ ಬ್ರಹತ್ ಮಟ್ಟದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಪೌಂಡೇಶನ್‌ನ ಸುಹೈಲ್ ಕಂದಕ್ ತಿಳಿಸಿದ್ದಾರೆ.

ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಅಭಿಯಾನದ ಉದ್ಘಾಟನೆಯನ್ನು ಸ್ಪೀಕರ್ ಯು ಟಿ ಖಾದರ್ ನೆರವೇರಿಸುವರು. ಸಂಸದ ಬ್ರಿಜೇಶ್ ಚೌಟ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಚ್ ವಿ ದರ್ಶನ್, ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿರುತ್ತಾರೆ ಎಂದರು.

ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಅಭಿಯಾನವನ್ನು ಆಯೋಜಿಸುತ್ತಿದ್ದು ಇದರ ಅಂಗವಾಗಿ ರಾಜ್ಯಮಟ್ಟದ ವ್ಯಾಪ್ತಿಯಲ್ಲಿ ಹಲವು ಸ್ಪರ್ಧೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಂಗಳೂರು ನಗರ ಎಸಿಪಿ ರವೀಶ್ ನಾಯಕ್, ಕಾಂಗ್ರೆಸ್ ನಾಯಕ ವಿಕಾಸ್ ಶೆಟ್ಟಿ, ಬಾರ್ನ್ ಅಗೇನ್ ರಿಕವರಿ ಸೆಂಟರ್, ಬೀನಾ ಸಲ್ದಾನ ಮೊದಲಾದವರಿದ್ದರು.

 

Continue Reading

DAKSHINA KANNADA

ಬಂಟ್ವಾಳ : ವೆಲಂಕಣಿ ಮಾತೆ ದೇವಾಲಯ ಫರ್ಲ: ವಾರ್ಷಿಕ ಮಹೋತ್ಸವ

Published

on

ಬಂಟ್ವಾಳ : ವೆಲಂಕಣಿ ಮಾತೆ ದೇವಾಲಯ ಫರ್ಲ ಇದರ ವಾರ್ಷಿಕ ಮಹೋತ್ಸವ ನಡೆಯಿತು. ದಿವ್ಯ ಬಲಿ ಪೂಜೆಯ ಪ್ರಧಾನ ಗುರುಗಳಾಗಿ ಮಂಗಳೂರು ಧರ್ಮಪ್ರಾಂತ್ಯದ ವಿಶ್ರಾಂತ ಧರ್ಮಾಧ್ಯಕ್ಷ ಅತೀ ವಂದನೀಯ ಅಲೋಶಿಯಸ್ ಪಾವ್ಲ್ ಡಿಸೋಜ, ವ್ಯಕ್ತಿಗಳ ನಡುವೆ ಉತ್ತಮ ಬಾಂಧವ್ಯ ಬೆಳೆಸಲು ಪ್ರೀತಿ, ತ್ಯಾಗ ಮತ್ತು ಏಕತೆಯೊಂದಿಗೆ ದೇವರ ಅನುಗ್ರಹವು ಬೇಕು. ಇದಕ್ಕಾಗಿ ಪ್ರತಿದಿನ ಮಾತೆ ಮರಿಯಮ್ಮನ ಜಪಮಾಲೆಯನ್ನು ಪಠಿಸುವುದರಿಂದ  ಇದನ್ನು ಗಳಿಸಬಹುದು ಎಂದರು.

ಬಂಟ್ವಾಳ ವಲಯದ ಹಾಗೂ ಪಾಲಟಾಯ್ನ್ ಸಭೆಯ ಧರ್ಮಗುರುಗಳು ಬಲಿಪೂಜೆಯಲ್ಲಿ ಭಾಗವಹಿಸಿದರು.

ಇದನ್ನೂ ಓದಿ : ಕಾವ್ಯಾ ನಾಮಿನೇಟ್ ಮಾಡಿದ್ಯಾರನ್ನ ಗೊತ್ತಾ!? ರಣರಂಗವಾಯ್ತು ‘ಬಿಗ್’ ಮನೆ

ಫರ್ಲಾ ಧರ್ಮಕೇಂದ್ರದ ಧರ್ಮಗುರು ವಂದನೀಯ  ಮಾರ್ಕ್ ಅರುಣ್ ಡಿಸೋಜ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು ಹಾಗೂ ಹಾಗೂ ಗೌರವಾರ್ಥವಾಗಿ ಆಶೀರ್ವದಿಸಿದ ಮೇಣದ ಬತ್ತಿಯನ್ನು ವಿತರಿಸಲಾಯಿತು. ಊರ, ಪರವೂರ  ಅನೇಕ ಭಕ್ತರು ಭಾಗವಹಿಸಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page