Connect with us

FILM

‘ಸೆಕೆಂಡ್ ಹ್ಯಾಂಡ್, ಬಳಕೆಯಾದವಳು ಎಂದು ಕರೆದರು’; ಸಮಂತಾ ನೋವಿನ ಮಾತು

Published

on

ಸಮಂತಾ ರುತ್ ಪ್ರಭು ವಿಚ್ಛೇದನದ ಬಳಿಕ ಸಾಕಷ್ಟು ನೋವು ಅನುಭವಿಸಿದ್ದರು. ನಾಲ್ಕು ವರ್ಷಗಳ ಕಾಲ ನಾಗ ಚೈತನ್ಯ ಜೊತೆ ಸಂಸಾರ ನಡೆಸಿದ ಸಂಸಾರ ಈಗ ಕೊನೆಯಾಗಿ ಕೆಲವು ವರ್ಷಗಳೇ ಕಳೆದು ಹೋಗಿವೆ. ನಾಗ ಚೈತನ್ಯ ಮತ್ತೊಂದು ಮದುವೆ ಆಗುತ್ತಿದ್ದಾರೆ. ವಿಚ್ಛೇದನದ ಬಳಿಕ ಸಮಂತಾ ಸಾಕಷ್ಟು ನೋವು ಅನುಭವಿಸಿದ್ದರು. ಸಮಂತಾ ಎದುರಿಸಿದ ತೊಂದರೆಗಳ ಬಗ್ಗೆ, ಕೇಳಿದ ಪದಗಳ ಬಗ್ಗೆ ಬಹಳ ದುಖದಿಂದ ಹೇಳಿಕೊಂಡಿದ್ದಾರೆ.

‘ನಾನು ವಿಚ್ಛೇದನ ಪಡೆದಾಗ ಜನರು ಸೆಕೆಂಡ್ ಹ್ಯಾಂಡ್, ಬಳಕೆ ಆದವಳು ಎಂದು ಕರೆಯುತ್ತಿದ್ದರು. ಈ ರೀತಿಯ ಸಾಕಷ್ಟು ಕಮೆಂಟ್​ಗಳು ಬರುತ್ತಿದ್ದವು. ವಿಚ್ಛೇದನ ಪಡೆದ ಬಳಿಕ ಮಹಿಳೆಯರು ಹಾಗೂ ಕುಟುಂಬದವರು ತುಂಬಾನೇ ಕಷ್ಟ ಅನುಭವಿಸಬೇಕಾಗುತ್ತದೆ’ ಎಂದಿದ್ದಾರೆ ಸಮಂತಾ.

‘ಆರಂಭದಲ್ಲಿ ಇದು ಸಾಕಷ್ಟು ನೋವುಂಟು ಮಾಡಿತ್ತು. ನಾನು ವಿಚ್ಛೇದನ ಪಡೆದಿರುವುದು ಕಾಲ್ಪನಿಕ ಕಥೆಯಲ್ಲ. ಹಾಗೆಂದು ನಾನು ಮೂಲೆಯಲ್ಲಿ ಕುಳಿತು ಅಳುತ್ತಾ ಇರುತ್ತೇನೆ ಎಂದರ್ಥವಲ್ಲ. ಅದನ್ನು ಮರೆ ಮಾಚುವ ಅಗತ್ಯವಿಲ್ಲ. ನನ್ನ ಜೀವನ ಇಲ್ಲಿಗೆ ಕೊನೆಯಾಗಿದೆ ಎಂದರ್ಥವಲ್ಲ. ಎಲ್ಲಿ ಕೊನೆಯಿದೆಯೋ ಅಲ್ಲಿಂದಲೇ ಆರಂಭವಿರುತ್ತದೆ’ ಎಂದಿದ್ದಾರೆ ಸಮಂತಾ. ಈ ಮೂಲಕ ನಡೆದ ಘಟನೆಯನ್ನು ಒಪ್ಪಿ ಮುಂದೆ ಸಾಗಿರುವುದಾಗಿ ತಿಳಿಸಿದ್ದಾರೆ.

ಸಿನಿಮಾ ವಿಚಾರದಲ್ಲಿ ಸಮಂತಾ ಗುಡ್​ನ್ಯೂಸ್ ನೀಡಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. 2017ರಲ್ಲಿ ನಾಗ ಚೈತನ್ಯ ಜೊತೆ ಸಮಂತಾ ಮದುವೆ ಗೋವಾದಲ್ಲಿ ಅದ್ದೂರಿಯಾಗಿ ನೆರವೇರಿತ್ತು. 2021ರಲ್ಲಿ ವಿಚ್ಚೇಧನವಾಗಿತ್ತು. ಸದ್ಯ ನಾಗ ಚೈತನ್ಯ ಅವರು ಶೋಭಿತಾ ದುಲಿಪಾಲ್​ನ ವಿವಾಹ ಆಗುತ್ತಿದ್ದಾರೆ.

BIG BOSS

ಅಂತ್ಯ ಅಲ್ಲ….ಇದು ಹೊಸ ಆರಂಭ..ಧ್ರುವಂತ್ ಗೆಟಪ್ ಚೇಂಜ್

Published

on

ಮಂಗಳೂರು/ಬೆಂಗಳೂರು : ಬಿಗ್ ಬಾಸ್ ಸೀಸನ್ 12 ಮುಕ್ತಾಯದ ಹಂತದಲ್ಲಿದೆ. ಒಬ್ಬೊಬ್ಬರೇ ಹೊರ ನಡೆದಿದ್ದಾರೆ. ಈಗ ಉಳಿದಿರೋದು ಕೇವಲ ಐದು ಮಂದಿ. ಮಿಡ್ ವೀಕ್ ಎಲಿಮಿನೇಷನ್‌ ಮೂಲಕ ಧ್ರುವಂತ್ ಹೊರಬಂದಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಲೇ ಧ್ರುವಂತ್ ಬದಲಾಗಿದ್ದಾರೆ.

ಬದಲಾಯ್ತು ಗೆಟಪ್:

ಬಿಗ್ ಬಾಸ್ ಮನೆಯೊಳಗಿದ್ದಾಗ ತಮ್ಮದೇ ಆದ ರೀತಿಯಲ್ಲಿ ಆಟವಾಡಿದ್ದರು ಧ್ರುವಂತ್. ಚರ್ಚೆ, ಜಗಳ, ವಾದದಲ್ಲೂ ಧ್ರುವಂತ್ ಇದ್ದರು. ಎಲ್ಲರೊಂದಿಗೆ ಜಗಳವಾಡುತ್ತಿದ್ದ ಧ್ರುವಂತ್‌ರನ್ನು ಕಿಚ್ಚ ಕ್ಲಾಸ ತೆಗೆದುಕೊಂಡಿದ್ದೂ ಇದೆ. ದೊಡ್ಮನೆಯೊಳಗೆ ‘ಜೈ ಮಹಾಕಾಳ್’ ಎನ್ನುತ್ತಾ ಖ್ಯಾತರಾಗಿದ್ದ ಧ್ರುವಂತ್ ಸೀಕ್ರೆಟ್ ರೂಮಿಗೂ ಹೋಗಿದ್ದರು. ಅಲ್ಲೂ ರಕ್ಷಿತಾ ಶೆಟ್ಟಿ ಜೊತೆ ಅವರ ಜಗಳ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.

ಬಿಗ್ ಬಾಸ್ ಮನೆಯಲ್ಲಿ ತನ್ನ ಉದ್ದ ಕೂದಲನ್ನು ಜುಟ್ಟು ಕಟ್ಟಿಕೊಂಡು ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದ ಧ್ರುವಂತ್, ಇದೀಗ ಜುಟ್ಟಿಗೆ ಕತ್ತರಿ ಹಾಕಿಸಿಕೊಂಡಿದ್ದಾರೆ. ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಕಣ್ಣು ಬಣ್ಣದ ಥಾರ್‌ನಲ್ಲಿ ಬಂದಿಳಿದ ಧ್ರುವಂತ್, ಅಭಿಮಾನಿಗಳನ್ನು ಭೇಟಿಯಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಬಳಿಕ ಸೆಲೂನ್‌ಗೆ ಹೋದ ಅವರು ಕೂದಲು ಕತ್ತರಿಸಿಕೊಂಡಿದ್ದಾರೆ. ಸ್ಟೈಲಿಷ್ ಹೇರ್ ಸ್ಟೈಲ್ ಮಾಡಿಕೊಂಡು ಡಿಫರೆಂಟ್ ಲುಕ್‌ನಲ್ಲಿ ಕಂಗೊಳಿಸಿದ್ದಾರೆ. ಅಂತ್ಯ ಅಲ್ಲ….ಇದು ಹೊಸ ಆರಂಭ ಎಂಬುದಾಗಿ ಟ್ಯಾಗ್ ಲೈನ್‌ನೊಂದಿಗೆ ವೀಡಿಯೋ ಹಂಚಿಕೊಂಡಿದ್ದು, ಅವರ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ : ‘ಅಶ್ವಿನಿ ಗೌಡಗೆ ಕನ್ನಡ ಬರೆಯೋಕೆ ಬರಲ್ಲ’ ಎಂಬ ಟೀಕೆಗೆ ಸ್ಪಷ್ಟೀಕರಣ ಕೊಟ್ಟ ಕರವೇ ನಾರಾಯಣ ಗೌಡ!

ಅಂದಹಾಗೆ, ಇಂದು(ಜ.17) ಬಿಗ್ ಬಾಸ್ ಪ್ರಿ ಫಿನಾಲೆ ನಡೆಯಲಿದೆ. ನಾಳೆ(ಜ.18) ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ರಕ್ಷಿತಾ ಶೆಟ್ಟಿ, ಗಿಲ್ಲಿ ನಟ, ಕಾವ್ಯಾ,ರಘು, ಧನುಷ್, ಅಶ್ವಿನಿ ಗೌಡರಲ್ಲಿ ಯಾರು ಬಿಗ್ ಬಾಸ್ ಟ್ರೋಫಿ ಗೆಲ್ತಾರೆ ಅನ್ನೋದು ಸದ್ಯದ ಕುತೂಹಲ.

Continue Reading

DAKSHINA KANNADA

ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಭೇಟಿ; ಮಗನಿಗಾಗಿ ಪ್ರಾರ್ಥನೆ

Published

on

ಉಳ್ಳಾಲ : ಕರಾವಳಿಯ ಕಾರಣಿಕ ಕ್ಷೇತ್ರ ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಶುಕ್ರವಾರ(ಜ.17) ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಗಳೂರಿಗೆ ಯಾರು ಬಂದರು ಕೊರಗಜ್ಜನ ಕ್ಷೇತ್ರಕ್ಕೆ ಬಂದೇ ಬರ್ತಾರೆ. ಯಾರೇ ಬಂದರೂ ಕೊರಗಜ್ಜ ಅವರ ಬಯಕೆಗಳನ್ನು ಈಡೇರಿಸುತ್ತಾರೆ. ನನ್ನ ಮಗ, ಮಗಳು, ಅಳಿಯ ಎಲ್ಲರೂ ಇಲ್ಲಿಗೆ ಬಂದಿದ್ದಾರೆ. ನನಗೂ ಇಲ್ಲಿಗೆ ಬರಲು ಬಹಳ ಆಸೆ ಇತ್ತು ಅದು ಇಂದು ನೆರವೇರಿದೆ. ಪುತ್ರ ಅಹಾನ್ ಶೆಟ್ಟಿ ನಟನೆಯ ಬಹುನಿರೀಕ್ಷಿತ ಬಾರ್ಡರ್ -2 ಚಿತ್ರ ಬಿಡುಗಡೆಯಾಗುತ್ತಿದೆ. ಅದರ ಯಶಸ್ಸಿಗಾಗಿ ಆಶೀರ್ವಾದ ಬೇಡಲು ಇಲ್ಲಿಗೆ ಬಂದಿದ್ದೇನೆ.

ತುಳು ಭಾಷೆ, ಸಂಸ್ಕೃತಿಯನ್ನು ಜಗತ್ತಿಗೆ ಪಸರಿಸುವ ಉದ್ದೇಶದಿಂದ ಈಗಾಗಲೇ ‘ಜೈ’ ತುಳು  ಸಿನಿಮಾದಲ್ಲಿ ನಟಿಸಿದ್ದೇನೆ. ತುಳು,ಕನ್ನಡ ಸಿನೆಮಾದಲ್ಲಿ ಸದ್ಯಕ್ಕೆ ಬೇರೆ ಯೋಜನೆಗಳಿಲ್ಲ ಎಂದರು.

ಇದನ್ನೂ ಓದಿ : ರಚಿತಾ ರಾಮ್ ಅಭಿಮಾನಿಗಳಿಗೆ ಡಬಲ್ ಧಮಾಕಾ: ಒಂದೇ ದಿನ ಎರಡು ಸಿನಿಮಾಗಳು ತೆರೆಗೆ!

ಕುತ್ತಾರು ಕೊರಗತನಿಯ ಆದಿಸ್ಥಳ ಕ್ಷೇತ್ರದ ಪರವಾಗಿ ನಟ ಸುನೀಲ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಮುಂಬಯಿ ಉದ್ಯಮಿ ವಿವೇಕ್ ಶೆಟ್ಟಿ ಬೊಲ್ಯಗುತ್ತು,ಕುತ್ತಾರು ಕೊರಗತನಿಯ ಆದಿಕ್ಷೇತ್ರದ ಮಹಾಬಲ ಹೆಗ್ಡೆ, ದೇವಿಪ್ರಸಾದ್ ಶೆಟ್ಟಿ, ಶ್ರೀರಾಮ್ ರೈ ಮೊದಲಾದವರು ಉಪಸ್ಥಿತರಿದ್ದರು.

Continue Reading

FILM

ರಚಿತಾ ರಾಮ್ ಅಭಿಮಾನಿಗಳಿಗೆ ಡಬಲ್ ಧಮಾಕಾ: ಒಂದೇ ದಿನ ಎರಡು ಸಿನಿಮಾಗಳು ತೆರೆಗೆ!

Published

on

ಹೀರೋ/ಹೀರೋಯಿನ್‌ಗಳ ಸಿನಿಮಾಗಳು ಸಾಮಾನ್ಯವಾಗಿ ಒಂದೇ ದಿನ ಬಿಡುಗಡೆ ಆಗೊದು ಕಡಿಮೆ. ಆದರೆ, ಕೆಲವೊಮ್ಮೆ ಈ ರೀತಿ ಆಗಿದ್ದು ಇದೆ. ಇದೀಗ ಜನವರಿ 23ರಂದು ಸ್ಯಾಂಡಲ್‌ವುಡ್‌ ‘ಡಿಂಪಲ್‌ ಕ್ವೀನ್‌’ ರಚಿತಾ ರಾಮ್‌ ನಟಿಸಿರುವ ಎರಡು ಸಿನಿಮಾಗಳು ರಿಲೀಸ್‌ ಆಗುತ್ತಿದೆ. ಒಂದರಲ್ಲಿ ರಚಿತಾ ಸಖತ್‌ ರಗಡ್‌ ಆಗಿ ಕಾಣಿಸಿಕೊಂಡರೆ, ಮತ್ತೊಂದರಲ್ಲಿ ಹಳ್ಳಿ ಹುಡುಗಿಯಾಗಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಒಂದೇ ದಿನ ಎರಡು ಭಿನ್ನ ಪಾತ್ರಗಳಲ್ಲಿ ರಚಿತಾ ರಾಮ್ ಅಬ್ಬರಿಸಲು ಸಜ್ಜಾಗಿದ್ದಾರೆ.


ರಚಿತಾ ರಾಮ್‌, ಅನಿಲ್‌ ಕುಮಾರ್ ನಿರ್ದೇಶನದ ‘ಕಲ್ಟ್‌’ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಜನವರಿ 16ರಂದು ಸಿನಿಮಾದ ಟ್ರೇಲರ್‌ ಬಿಡುಗಡೆ ಆಗಿದ್ದು, ಜನರ ಮನಸ್ಸನ್ನು ಸೆಳೆದಿದೆ. ಮಲೈಕಾ ಮಸುಪಾಲ್ ಕೂಡ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇದೀಗ ಈ ಸಿನಿಮಾ ಜನವರಿ 23ರಂದು ತೆರೆಕಾಣಲಿದೆ.

ಈ ಸಿನಿಮಾದಲ್ಲಿ ರಚಿತಾ ರಾಮ್‌ ಎರಡು ಶೇಡ್‌ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟ್ರೇಲರ್‌ನಲ್ಲಿ ಒಂದು ಶೇಡ್‌ ಮಾತ್ರ ತೋರಿಸಲಾಗಿದೆ. ಇನ್ನೊಂದು ಶೇಡ್‌ನನ್ನು ಸಿನಿಮಾದಲ್ಲಿ ನೋಡಬೇಕು ಎಂಬುದು ರಚಿತಾ ರಾಮ್‌ ಅಭಿಪ್ರಾಯ.

ಇದನ್ನೂ ಓದಿ: ಪೀಕಬೂ ಮೂಲಕ ಅಮೂಲ್ಯ ಕಂಬ್ಯಾಕ್; ಹೀರೋ ಯಾರು ಗೊತ್ತಾ!?

ದುನಿಯಾ ವಿಜಯ್, ರಾಜ್‌ ಬಿ ಶೆಟ್ಟಿ ಮೊದಲಾದವರು ಅಭಿನಯಿಸಿರುವ, ಜಡೇಶ್​ ಕುಮಾರ್ ಹಂಪಿ ನಿರ್ದೇಶನದ ‘ಲ್ಯಾಡ್‌ಲಾರ್ಡ್‌’ ಸಿನಿಮಾವು ಕೂಡ ಜನವರಿ 23ರಂದೇ ಬಿಡುಗಡೆಗೊಳ್ಳಲಿದೆ. ಇದು ಅಳಿದು ಉಳಿದವರ ಕಥೆ ಎನ್ನಲಾಗಿದೆ. ಹೇಮಂತ್‌ ಗೌಡ ಕೆಎಸ್‌ ಸಂಗೀತ ಸಂಯೋಜನೆ ಮಾಡಿದ್ದು, ಇದರ ಟಿಸರ್‌ ಜನರ ಗಮನ ಸೆಳೆದಿದೆ. ದೊಡ್ಡ ಮಟ್ಟದಲ್ಲಿ ಸತ್ಯ ಪ್ರಕಾಶ್‌ ನಿರ್ಮಾಣದ ಈ ಸಿನಿಮಾ ಜನರಲ್ಲಿ ನಿರೀಕ್ಷೆಯನ್ನು ಹುಟ್ಟುಹಾಕಿದೆ. ರಚಿತಾ ರಾಮ್‌ ನಟೆನೆಯ ಎರಡು ಸಿನಿಮಾಗಳು ಒಂದೇ ದಿನ ತೆರೆ ಕಾಣುತ್ತಿದೆ ಎಂಬುದೇ ವಿಶೇಷ.

Continue Reading
Advertisement

Trending

Copyright © 2025 Namma Kudla News

You cannot copy content of this page