Connect with us

DAKSHINA KANNADA

ಕರ್ತವ್ಯ ಲೋಪ: ಕಡಬದ ಶಿರಾಡಿ ಗ್ರಾಮ ಪಂಚಾಯತ್ ಪಿಡಿಒ ಅಮಾನತು

Published

on

ಕಡಬ: ದ.ಕ ಜಿಲ್ಲೆಯ ಕಡಬ ತಾಲೂಕಿನ ಶಿರಾಡಿ ಗ್ರಾಮ ಪಂಚಾಯತ್ ಪಿಡಿಒ ವೆಂಕಟೇಶ್‌ರನ್ನು ಕರ್ತವ್ಯ ಲೋಪ ಹಿನ್ನೆಲೆ ಅಮಾನತುಗೊಳಿಸಿ ದ.ಕ ಜಿಲ್ಲಾ ಪಂಚಾಯತ್‌ ಸಿಇಒ ಆದೇಶ ಹೊರಡಿಸಿದ್ದಾರೆ.


ಕರ್ತವ್ಯ ಲೋಪದ ಕಾರಣಕ್ಕಾಗಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ದೂರಿನ ಹಿನ್ನೆಲೆಯಲ್ಲಿ ಸಸ್ಪೆಂಡ್ ಮಾಡಲಾಗಿದೆ. ಜೂನ್ 7 ರಿಂದ ಅನ್ವಯವಾಗುವಂತೆ ಗುಂಡ್ಯದ ಸಾರ್ವಜನಿಕ ಶೌಚಾಲಯದ ಗುತ್ತಿಗೆದಾರರ ನೇಮಕಾತಿಯಲ್ಲಿ ಕರ್ತವ್ಯ ಲೋಪ, ಅಂಗಡಿ ಕಟ್ಟಡಗಳನ್ನು ಏಲಂ ಮಾಡುವ ಸಂದರ್ಭ ನಿಯಮಗಳ ಉಲ್ಲಂಘನೆ,

ಅಂಗವಿಕಲರ ನಿಧಿಯನ್ನು ನಿಯಮಾನುಸಾರ ಪಾವತಿ ಮಾಡದಿರುವುದು, ಸಿಸಿ ಕ್ಯಾಮರಾ ಖರೀದಿಯ ಸಂದರ್ಭ ದರ ಪಟ್ಟಿ, ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಪಾಲಿಸದಿರುವುದು, ಕಚೇರಿಗೆ ಸರಿಯಾಗಿ ಹಾಜರಾಗದಿರುವುದು, ಕೋವಿಡ್ ನಿರ್ವಹಣೆಗೆ ಬಿಡುಗಡೆಗೊಂಡ ಸರಕಾರದ ಮೊತ್ತವನ್ನು ನಿರ್ದಿಷ್ಠ ಉದ್ದೇಶಕ್ಕೆ ಬಳಸದೇ ಏಕಪಕ್ಷೀಯವಾಗಿ ಖರ್ಚು ಮಾಡಿರುವುದು,

ಹೈ ಮಾಸ್ಕ್ ಸೋಲಾರ್ ಅಳವಡಿಕೆಯ ಕಾಮಗಾರಿಯಲ್ಲಿ ಇ ಟೆಂಡರ್ ಕರೆಯದೇ ಕರ್ತವ್ಯ ಲೋಪ, ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿಷ್ಠಾಚಾರ ಉಲ್ಲಂಘನೆ, ವಿದ್ಯುತ್ ಇಲಾಖೆಗೆ ಪಾವತಿಸಬೇಕಾದ ಮೀಟರ್ ಡೆಪಾಸಿಟ್ ಮೊತ್ತವನ್ನು

ಎಲೆಕ್ಟ್ರೀಕಲ್ ಅಂಗಡಿಯವರಿಗೆ ಪಾವತಿಸಿ ಕರ್ತವ್ಯ ಲೋಪವೆಸಗಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತುಗೊಳಿಸುವುದು ಸೂಕ್ತವೆಂದು ಪರಿಗಣಿಸಿ ಶಿಸ್ತು ಪ್ರಾಧಿಕಾರವು ಅಮಾನತು ಆದೇಶವನ್ನು ಹೊರಡಿಸಿದೆ.

DAKSHINA KANNADA

ಕಲ್ಲರ್ಪೆಯಲ್ಲಿ ಮತ್ತೊಂದು ಅಪಘಾತ; ಕಾರು ಬೈಕ್ ಮುಖಾಮುಖಿ ಡಿಕ್ಕಿ, ಬೈಕ್‌ ಸವಾರ ಗಂಭೀರ

Published

on

ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕಲ್ಲರ್ಪೆ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಕಾರು ಬೈಕ್ ಮುಖಾಮುಖಿ ಡಿಕ್ಕಿಯೂ ಆ ಭಾಗದಲ್ಲಿನ ರಸ್ತೆ ಸುರಕ್ಷ ತಾ ಕ್ರಮಗಳ ವೈಫಲ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.

ಈ ದುರ್ಘಟನೆಯಲ್ಲಿ ದ್ವಿಚಕ್ರ ವಾಹನ ಸವಾರನ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ರಾತ್ರಿಯೂ ಇದೇ ಭಾಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾವೊಂದು ವಿದ್ಯುತ್ ಕಂಬಕ್ಕೆ ಅಪ್ಪಳಿಸಿ ಪಲ್ಟಿಯಾಗಿತ್ತು. ಅದೃಷ್ಟವಶಾತ್‌ ರಿಕ್ಷಾ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದರು.

ಇದನ್ನೂ ಓದಿ: ಗೂಗಲ್ ಮ್ಯಾಪ್ ನಂಬಿ ಪ್ರಯಾಣಿಸುವವರೇ ಎಚ್ಚರ; ಗದ್ದೆಗೆ ಬಿತ್ತು ಟಿಟಿ

ಇದೀಗ ಮತ್ತೊಂದು ಘಟನೆ ನಡೆದಿದ್ದು, ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಕಲ್ಲರ್ಪೆ ವಲಯವು ಅಪಘಾತಗಳ ಕೇಂದ್ರಬಿಂದುವಾಗಿ ಪರಿವರ್ತನೆಯಾಗುತ್ತಿರುವುದು ಸ್ಥಳಿಯರಲ್ಲಿ ಆತಂಕ ಮೂಡಿಸಿದೆ.

Continue Reading

DAKSHINA KANNADA

ಆಕಾಂಕ್ಷ ನಿಗೂಢ ಸಾವು ಪ್ರಕರಣ; ಸಮಗ್ರ ತನಿಖೆ ನಡೆಸುವಂತೆ ಶಾಸಕ ಹರೀಶ್‌ ಪೂಂಜಾ ಒತ್ತಾಯ

Published

on

ಬೆಳ್ತಂಗಡಿ: ಪಂಜಾಬ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಬೆಳ್ತಂಗಡಿಯ ವಿದ್ಯಾಥಿಧನಿ ಆಕಾಂಕ್ಷ ಮೃತದೇಹ ಇಂದು ಬೆಳಗ್ಗೆ ಆಕೆಯ ಬೊಳಿಯಾರ್ ಮನೆಗೆ ತಲುಪಿದೆ. ಸ್ಥಳಕ್ಕೆ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದ್ದಾರೆ.

 

ಈ ವೇಳೆ ಮಾತನಾಡಿದ ಶಾಸಕ ಹರೀಶ್ ಪೂಂಜಾ, ಈ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸ ಬೇಕು. ಆಕಾಂಕ್ಷಳ ಸಾವಿಗೆ ನ್ಯಾಯ ಸಿಗ ಬೇಕು. ಕರ್ನಾಟಕದ ಗೃಹ ಸಚಿವರಿಗೆ ಆಗ್ರಹ ಮಾಡ್ತೇನೆ ಎಂದರು. ಪ್ರಕರಣದ ಸಮಗ್ರ ತನಿಖೆ ನಡೆಸಿ ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎನ್ನುವುದನ್ನು ಪತ್ತೆ ಮಾಡುವಂತೆ ಕರ್ನಾಟಕ ಸರಕಾರವು ಪಂಜಾಬ್ ಸರಕಾರವನ್ನು ಆಗ್ರಹಿಸ ಬೇಕೆಂದು ಒತ್ತಾಯಿಸಿದರು.

 

Continue Reading

DAKSHINA KANNADA

ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದ ರಿಕ್ಷಾ

Published

on

ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾವೊಂದು ವಿದ್ಯುತ್ ಕಂಬಕ್ಕೆ ಅಪ್ಪಳಿಸಿ ಪಲ್ಟಿಯಾದ ಘಟನೆ ಪುತ್ತೂರಿನಲ್ಲಿ ಸಂಭವಿಸಿದೆ. ಅದೃಷ್ಟವಶಾತ್ ರಿಕ್ಷಾ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ನಿನ್ನೆ ರಾತ್ರಿ ರಾತ್ರಿ 10.30ರ ವೇಳೆಗೆ ಪರ್ಪುಂಜ ಭಾಗದಿಂದ ಆಗಮಿಸಿದ ರಿಕ್ಷಾ ಆರ್ಯಾಪು ಗ್ರಾಮದ ಕಲ್ಲರ್ಪೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಪಲ್ಟಿಯಾದ ರಿಕ್ಷಾ, ಪಕ್ಕದಲ್ಲೇ ಇದ್ದ ವಿದ್ಯುತ್ ಕಂಬಕ್ಕೆ ಅಪ್ಪಳಿಸಿ ಉರುಳಿ ಬಿದ್ದಿದೆ.

ಇದನ್ನೂ ಓದಿ: ಕಂಡೆಕ್ಟರ್ ಜೊತೆಗೂಡಿ ಹೈವೇಯಲ್ಲಿ ನಿಂತ ಸಾರಿಗೆ ಬಸ್ಸನ್ನು ತಳ್ಳಿದ ಮಹಿಳೆಯರು

ವಿದ್ಯುತ್ ತಂತಿಗಳು ಪರಸ್ಪರ ಸ್ಪರ್ಶಿಸಿ ಬೆಂಕಿಯ ಕಿಡಿ ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ವಿದ್ಯುತ್ ಕಂಬ ಸ್ವಲ್ಪವಾಲಿದೆ. ಅದೃಷ್ಟವಶಾತ್‌ ರಿಕ್ಷಾ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page