Connect with us

BELTHANGADY

ಪುಂಜಾಲಕಟ್ಟೆ ಸರಕಾರಿ ಆಸ್ಪತ್ರೆಗೆ ಹೋದ ರೋಗಿಗೆ ಶಾಕ್..!!

Published

on

ಬೆಳ್ತಂಗಡಿ : ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕಿನ ಬಹುತೇಕ ಗ್ರಾಮದ ನಿವಾಸಿಗಳು ಅವಲಂಬಿತರಾಗಿರುವ ಪುಂಜಾಲಕಟ್ಟೆಯಲ್ಲಿರುವ ಸರಕಾರಿ ಆಸ್ಪತ್ರೆಯು ಇದ್ದೂ ಇಲ್ಲದಂಗೆ ಇರುವ ಆಸ್ಪತ್ರೆ ಎಂದು ಭಾಸವಾಗುತ್ತಿದೆ.

ಯಾಕೆಂದರೆ ರಜಾದಿನವಾದ ಇಂದು ಭಾನುವಾರ ಒಂದು ಕುಟುಂಬ ಶೀಘ್ರ ಚಿಕಿತ್ಸೆಗೆ ಬೆಳಿಗ್ಗೆ 11:24 ರ ಹೊತ್ತಿಗೆ ಪುಂಜಾಲಕಟ್ಟೆಯಲ್ಲಿರುವ ಸರಕಾರಿ ಆಸ್ಪತ್ರೆಗೆ ಹೋದಾಗ ರೋಗಿಯನ್ನು ಸ್ವೀಕರಿಸಲು ಒಂದೇ ಒಂದು ಸಿಬ್ಬಂದಿಗಳೂ,ವೈದ್ಯರೂ ಆಸ್ಪತ್ರೆಯಲ್ಲಿಲ್ಲ.

ಸಾರ್ವಜನಿಕರ ತೆರಿಗೆ ಹಣದಿಂದ ಕಟ್ಟಿದ ಅಷ್ಟು ದೊಡ್ಡ ಆಸ್ಪತ್ರೆಯಲ್ಲಿ ಇಂತಹ ಅವ್ಯವಸ್ಥೆಯು ನಿಜಕ್ಕೂ ಪ್ರಶ್ನಿಸುವಂಥದ್ದಾಗಿದೆ. ಅಷ್ಟಕ್ಕೂ ಇಂದು ಆದಿತ್ಯವಾರ ಅಲ್ಲವೇ..ರಜೆಯಲ್ಲಿರಬಹುದು ಎಂದು ನಾವು ಭಾವಿಸಿದರೆ ಅದು ತಪ್ಪು.

ಆದಿತ್ಯವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 2ಗಂಟೆಯ ವರೆಗೆ ಸಮಯ ಆಸ್ಪತ್ರೆಯಲ್ಲಿ ನಿಗದಿತವಾಗಿದ್ದರೂ ಇಂತಹ ಒಂದು ನಡೆ ನಾವು ಖಂಡಿಸಬೇಕಾಗಿದೆ. ಇದು ನಿರ್ಲಕ್ಷ್ಯತನವೋ ಅಥವಾ ಆಲಸ್ಯತನವೋ ಎಂದು ನಾವೇ ತೀರ್ಮಾನಿಸಬೇಕಿದೆ.

ಇಂತಹ ಸಂದಿಗ್ಧತೆಯಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಇಂತಹ ಅವ್ಯವಸ್ಥೆಯು ಉಂಟಾದರೆ ತುರ್ತು ಅವಶ್ಯಕತೆಯಿದ್ದರೆ ಇವರ ಈ ಅವ್ಯವಸ್ಥೆಯಿಂದ ಹಲವು ಜೀವಗಳು ಅಸುನೀಗಬಹುದು.

ಈ ಕಡೆ ಬಂಟ್ವಾಳ ಸರಕಾರಿ ಆಸ್ಪತ್ರೆ ಮತ್ತು ಆ ಕಡೆ ಬೆಳ್ತಂಗಡಿ ಸಕರಾರಿ ಆಸ್ಪತ್ರೆ ಬಿಟ್ಟರೆ ಮಧ್ಯದಲ್ಲಿ ಪುಂಜಾಲಕಟ್ಟೆ ಸರಕಾರಿ ಆಸ್ಪತ್ರೆ ಇರುವಂಥದ್ದು. ಇದು ಅನೇಕ ಹಳ್ಳಿ,ಗ್ರಾಮಗಳಿಗೆ ಅವಲಂಬಿತವಾಗಿರುವ ಆಸ್ಪತ್ರೆ .

ಹೀಗಿರುವಾಗ ಜನ ಹೇಗೆ ಅವಲಂಬಿತರಾಗಿದ್ದಾರೆಯೋ ಅದಕ್ಕೆ ತಕ್ಕಂತೆ ಈ ಆಸ್ಪತ್ರೆಯು ಸ್ಪಂದಿಸಬೇಕಾಗಿದೆ.ಈ ಬಗ್ಗೆ ಸ್ಥಳೀಯ ಶಾಸಕರು,ಆರೋಗ್ಯ ಇಲಾಖೆಯವರು ಅಥವಾ ಸರಕಾರವು ಎಚ್ಚೆತ್ತಕೊಂಡು ಇದಕ್ಕೆ ಸೂಕ್ತ ವ್ಯವಸ್ಥೆಯನ್ನು ಮಾಡಬೇಕು.

ಹೆಚ್ಚುವರಿ ಆರೋಗ್ಯ ಸಿಬ್ಬಂದಿಗಳು,ವೈದ್ಯರನ್ನು ಪುಂಜಾಲಕಟ್ಟೆ ಆಸ್ಪತ್ರೆಗೆ ನೇಮಿಸಬೇಕು. ರೋಗಕ್ಕೆ ಆದಿತ್ಯವಾರ ,ಸೋಮವಾರ, ಶುಕ್ರವಾರ ಎಂದು ನಿರ್ದಿಷ್ಟ ದಿನ ಇಲ್ಲ.

ಅದು ಯಾವಾಗ ಬೇಕಾದರೂ ಬರಬಹುದು. ಕನಿಷ್ಠ ಪಕ್ಷದ ಸ್ಪಂದನೆಯಾದರೂ ಸರಕಾರಿ ಆಸ್ಪತ್ರೆ ನೀಡಬೇಕು.ಇದರ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ.

ಒಂದು ವೇಳೆ ಇಂತಹ ಅವ್ಯವಸ್ಥೆ ಮುಂದುವರಿದರೆ, ಆಸ್ಪತ್ರೆಯ ನಿರ್ಲಕ್ಷ್ಯತನ ಅಥವಾ ಆಲಸ್ಯತನದಿಂದ ಜೀವಗಳು ಹೋದರೆ ಅದಕ್ಕೆ ಸ್ಥಳೀಯ ಶಾಸಕರು ಮತ್ತು ಆರೋಗ್ಯ ಅಧಿಕಾರಿಗಳೇ ನೇರ ಹೊಣೆ ಸಾರ್ವಜನಿಕರು ಎಚ್ಚರಿಕೆ ಕೂಡ ನೀಡಿದ್ದಾರೆ.

BELTHANGADY

ಬೆಳ್ತಂಗಡಿ: ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಆರೋಪಿಯ ಸೆರೆ

Published

on

ಬೆಳ್ತಂಗಡಿ: ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಆರೋಪಿಯೊಬ್ಬ ಮನೆ ಕಳವು ಕೃತ್ಯದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಜನರ ಕೈಗೆ ಸಿಕ್ಕಿ ಬಿದ್ದು ಪೊಲೀಸರ ಅತಿಥಿಯಾಗಿದ್ದಾನೆ. ಮನೆಗೆ ಅಳವಡಿಸಿದ್ದ ಸಿ.ಸಿ ಟಿ.ವಿ. ಈತನ ಬಂಧನಕ್ಕೆ ಸಹಕಾರಿಯಾಗಿದೆ.


ಕೇರಳ ಮೂಲದ, ತಲಪಾಡಿ ನಿವಾಸಿ ಕಿರಣ್ ಬಂಧಿತ ಆರೋಪಿ. ಬೆಳ್ತಂಗಡಿ, ಮಾಲಾಡಿ ಗ್ರಾಮದ ಪ್ರೇಮ ಎಂಬುವವರ ಮನೆಯಿದ್ದು, ಪ್ರಸ್ತುತ ಮಹಿಳೆ ವಿದೇಶದಲ್ಲಿದ್ದಾರೆ. ಆದಿತ್ಯವಾರ ಬೆಳಿಗ್ಗೆ ಮನೆಗೆ ಅಪರಿಚಿತ ವ್ಯಕ್ತಿಯೊಬ್ಬ ಬಂದಿದ್ದು, ಇದನ್ನು ಪ್ರೇಮರವರ ಮಗಳು ಸಿಸಿಟಿವಿಯಲ್ಲಿ ಗಮನಿಸಿ ಪಕ್ಕದ ಮನೆಯ ಪ್ರಕಾಶ್‌ ಶೆಟ್ಟಿ ಅವರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣವೇ ಮನೆಯ ಬಳಿ ಬಂದು ನೋಡಿದಾಗ ಅಪರಿಚಿತ ವ್ಯಕ್ತಿ ಮನೆಯ ಮೇಲ್ಚಾವಣಿಯಲ್ಲಿ ರಾಡ್ ಹಿಡಿದು ನಿಂತಿರುವುದನ್ನ ನೋಡುತ್ತಾರೆ. ಈ ವೇಳೆ ಅಪರಿಚಿತ ಎಸ್ಕೇಪ್ ಆಗಲು ಯತ್ನಿಸುತ್ತಾನೆ. ಪ್ರಕಾಶ್‌ ಶೆಟ್ಟಿ ಅವರು ಹಿಡಿಯಲು ಪ್ರಯತ್ನಿಸುವಾಗ, ಆತ ರಾಡ್‌ನಿಂದ ಹಲ್ಲೆ ಮಾಡಲು ಮುಂದಾಗುತ್ತಾನೆ. ಬಳಿಕ ಸ್ಥಳೀಯರ ಸಹಾಯದಿಂದ ಕಳ್ಳನನ್ನು ಹಿಡಿಯುತ್ತಾರೆ. ನಂತರ ಆತನನ್ನು ಪುಂಜಾಲಕಟ್ಟೆ ಠಾಣಾ ಪೊಲೀಸರ ವಶಕ್ಕೆ ಒಪ್ಪಿಸುತ್ತಾರೆ.

ಇದನ್ನೂ ಓದಿ: ಗ್ರಾಹಕರು ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿ ಸಿಕ್ಕಿಬಿದ್ದರೆ ಬಾರ್‌ ಮೇಲೆ ಕಾನೂನು ಕ್ರಮ!

ಪೊಲೀಸರ ಪ್ರಾಥಮಿಕ ವಿಚಾರಣೆಯ ವೇಳೆ ಆರೋಪಿಯ ವಿರುದ್ದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ಹಾಗೂ ಕೇರಳ ರಾಜ್ಯದಲ್ಲಿ ಸೇರಿದಂತೆ, ಒಟ್ಟು 13 ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದ್ದು, ತನಿಖೆ ಮುಂದುವರಿದಿರುತ್ತದೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

BELTHANGADY

ಜಂಕ್ ಫುಡ್ ತಿನ್ತೀರಾ.. ಹುಷಾರ್..! ತಿಂಡಿ ಪೊಟ್ಟಣದಲ್ಲಿ ಸತ್ತ ಹಾವಿನ ಮರಿ ಪತ್ತೆ..!!

Published

on

ಬೆಳ್ತಂಗಡಿ: ಇದು ಜಂಕ್ ಫುಡ್‌ ತಿನ್ನುವವರು ನೋಡಲೇಬೇಕಾದ ಬೆಚ್ಚಿಬೀಳಿಸುವ ಸ್ಟೋರಿ..ಜಂಕ್ ಫುಡ್‌ ಬಗ್ಗೆ ಎಚ್ಚರಿಕೆಯ ಮಾತುಗಳು ಆಗಿಂದಾಗ್ಗೆ ಕೇಳಿ ಬರುತ್ತವೆ. ಇದೀಗ ಅದಕ್ಕೊಂದು ಸೇರ್ಪಡೆ ಎಂಬಂತೆ ಇದೀಗ ಜಂಕ್ ಫುಡ್ ಪೊಟ್ಟಣದಲ್ಲಿ ಸಣ್ಣ ಹಾವಿನ ಮಾದರಿಯ ರೀತಿಯ ವಸ್ತುವೊಂದು ಪತ್ತೆಯಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಕುರಿತ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಮುಂಡಾಜೆಯ ಸೋಮಂತಡ್ಕ ಎಂಬಲ್ಲಿ ಗೂಡಂಗಡಿಯಿಂದ ಖರೀದಿಸಿದ ಹೈದರಾಬಾದ್ ವೆಜ್‌ ಬಿರಿಯಾನಿ- ಜಂಕ್‌ ಫುಡ್ ಪೊಟ್ಟಣದಲ್ಲಿ ಇದು ಪತ್ತೆಯಾಗಿದೆ ಎನ್ನಲಾಗಿದೆ. ಅಬ್ದುಲ್ ಮುಸ್ಲಿಯಾರ್ ಎಂಬವರ ಮಗಳು ಖರೀದಿಸಿದ್ದ ಜಂಕ್ ಫುಡ್ ಪೊಟ್ಟಣವನ್ನು ಬಿಡಿಸಿ ತಿನ್ನುವ ವೇಳೆ ಅದರಲ್ಲಿ ಹಾವಿನ ಮಾದರಿಯ ವಸ್ತು ಪತ್ತೆಯಾಗಿದೆ ಎಂದು ಆರೋಪಿಸಲಾಗಿದೆ.

ಅಬ್ದುಲ್ ಮುಸ್ಲಿಯಾರ್ ಅವರು ಈ ಬಗ್ಗೆ ಆರೋಗ್ಯ ಇಲಾಖೆಗೆ ದೂರು ನೀಡಿದ್ದು, ಅರೋಗ್ಯ ಇಲಾಖೆಯ ಅಧಿಕಾರಿಗಳು ಹಾವಿನ ಮಾದರಿಯ ವಸ್ತುವನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ತಿಂಡಿ ತಿಂದ‌ ಮಕ್ಕಳ ಆರೋಗ್ಯ ತಪಾಸಣೆಯನ್ನು ವೈದ್ಯರು ನಡೆಸಿದ್ದು, ಸದ್ಯಕ್ಕೆ  ಮಕ್ಕಳ ಆರೋಗ್ಯಕ್ಕೆ ಯಾವುದೇ ಸಮಸ್ಯೆಯಿಲ್ಲ ವೈದ್ಯರ ಮಾಹಿತಿ ನೀಡಿದ್ದಾರೆ.

Continue Reading

BELTHANGADY

ಎರಡು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆ ಮೆರೆಸಿಕೊಂಡಿದ್ದ ಆರೋಪಿ ಬಂಧನ

Published

on

ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ 2014 ರಲ್ಲಿ ಐಪಿಸಿ ಕಲಂ 406,420, 468, 478, 201 ಅಡಿಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಎರಡು ವರ್ಷಗಳಿಂದ ತಲೆ ಮೆರೆಸಿಕೊಂಡಿದ್ದ ಹಾಗೂ ಬೆಳ್ತಂಗಡಿ ನ್ಯಾಯಾಲಯವು ವಾರೆಂಟ್ ಹೊರಡಿಸಿದ್ದ ಆರೋಪಿ ಕಮಲಾಕ್ಷ ಮಂಜೇಶ್ವರ ಎಂಬಾತ ಇದೀಗ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ.

ಪೊಲೀಸರು ಆತನನ್ನು ಅಕ್ಟೋಬರ್ 30 ರಂದು ಕಾಸರಗೋಡು ಜಿಲ್ಲೆಯ ವಿದ್ಯಾನಗರ ಎಂಬಲ್ಲಿ ಪತ್ತೆ ಹಚ್ಚಿ ದಸ್ತಗಿರಿ ಮಾಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page