Connect with us

LATEST NEWS

ರೋಗಿ ಕೊಳಲು ನುಡಿಸುತ್ತಿದ್ದಾಗಲೇ ಮೆದುಳಿನ ಆಪರೇಷನ್

Published

on

ಬೆಳಗಾವಿ: ರೋಗಿ ಕೊಳಲು ನುಡಿಸುತ್ತಾ ಮಾತನಾಡುತ್ತಿರುವಾಗಲೇ ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಿರುವ ಘಟನೆ ಬೆಳಗಾವಿಯ ಕೊಲ್ಲಾಪುರ ಕನೇರಿ ಮಠದ ಸಿದ್ದಗಿರಿ ಆಸ್ಪತ್ರೆಯಲ್ಲಿ ನಡೆದಿದೆ.

ಮೆದುಳು ಕ್ಯಾನ್ಸರ್ ನಿಂದ ಬಳಲುತ್ತಿದ್ದ ವ್ಯಕ್ತಿಯ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆ ನಡೆಸುವಾಗ ಮೆದುಳಿಗೆ ಅರಿವಳಿಕೆ ನೀಡಿರಲಿಲ್ಲ. ಹೀಗಾಗಿ ರೋಗಿ ಸಂಪೂರ್ಣವಾಗಿ ಪ್ರಜ್ಞಾಸ್ಥಿತಿಯಲ್ಲೇ ಇದ್ದರು. ಕೇವಲ ಮೆದುಳಿನ ಭಾಗದ ಹೊರಭಾಗದಲ್ಲಿ ಮಾತ್ರ ಅರಿವಳಿಕೆ ನೀಡಲಾಗಿತ್ತು. ಐದು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ವೇಳೆ ರೋಗಿ ನಿರಂತರವಾಗಿ ಕೊಳಲು ನುಡಿಸುತ್ತಿದ್ದರು.

ಸುದ್ದಿಗೋಷ್ಠಿಯಲ್ಲಿ ಶಸ್ತ್ರಚಿಕಿತ್ಸೆ ಕುರಿತು ಮಾಹಿತಿ ನೀಡಿದ ಡಾ| ಶಿವಶಂಕರ ಮರಜಕ್ಕೆ, ಹಳ್ಳಿ ಭಾಗದಲ್ಲಿ ಇಂಥ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಮಾಡಿರುವ ದೇಶದ ಕೆಲವೇ ಆಸ್ಪತ್ರೆಗಳಲ್ಲಿ ಇದೂ ಒಂದು. ಬೇರೆ ಕಡೆಗೆ ಇದಕ್ಕೆ 10 ರಿಂದ 15 ಲಕ್ಷ ರೂ. ವೆಚ್ಚ ಆಗುತ್ತದೆ. ನಮ್ಮಲ್ಲಿ ಕೇವಲ 1.20 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.

LATEST NEWS

ಬಸ್ ನಿಲ್ದಾಣಕ್ಕೆ ಕಾರು ಡಿ*ಕ್ಕಿ; ಚಾಲಕನಿಗೆ ಗಾ*ಯ

Published

on

ಕಾಪು : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಬಸ್ ನಿಲ್ದಾಣಕ್ಕೆ ಡಿ*ಕ್ಕಿಯಾದ ಘಟನೆ ಉಡುಪಿ ಜಿಲ್ಲೆಯ ಕಾಪು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಾನುವಾರ(ಡಿ.07) ಸಂಭವಿಸಿದೆ.

ಕಾರು ಚಾಲಕ ಕೊಪ್ಪಲಂಗಡಿಯ ಇಸ್ಮಾಯಿಲ್  ಗಾ*ಯಗೊಂಡಿದ್ದಾರೆ. ಕಾಪುನಿಂದ ಉಚ್ಚಿಲ ಕಡೆ ಬರುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯ ಬಸ್ ನಿಲ್ದಾಣಕ್ಕೆ ಡಿಕ್ಕಿಯಾಗಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡ ಇಸ್ಮಾಯಿಲ್‌ರನ್ನು  ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ : ಮಹಿಳೆಯ ಹ*ತ್ಯೆ ಪ್ರಕರಣ : ಪೊಲೀಸರು ಬೀಸಿದ ಬಲೆಗೆ ಹಂ*ತಕ ಸಿಕ್ಕಿ ಬಿದ್ದಿದ್ದು ಹೇಗೆ?

ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು

Continue Reading

LATEST NEWS

ನಾಗರಹಾವು ಕಡಿದು ವ್ಯಕ್ತಿ ಸಾ*ವು

Published

on

ಉಡುಪಿ : ನಾಗರಹಾವು ಕ*ಡಿದು ವ್ಯಕ್ತಿಯೊಬ್ಬರು ಸಾ*ವನ್ನಪ್ಪಿರುವ ಘಟನೆ ಉಡುಪಿ ಕುತ್ಯಾರು ಗ್ರಾಮದಲ್ಲಿ ನಡೆದಿದೆ. ಸುರೇಂದ್ರ ಕಿಟ್ಟು ಪೂಜಾರಿ(54) ಮೃ*ತಪಟ್ಟ ವ್ಯಕ್ತಿ.

ಸುರೇಂದ್ರ ಸ್ಥಳೀಯರೊಬ್ಬರಿಗೆ ಸೇರಿದ ತೋಟದಲ್ಲಿ ಕಳೆದ 6 ವರ್ಷಗಳಿಂದ ತೋಟ ನೋಡಿಕೊಳ್ಳುವ ಕೆಲಸ ಮಾಡಿಕೊಂಡಿದ್ದರು. ಡಿ. 5 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಅಡಕೆ ಮರಗಳಿಗೆ ಕ್ರಿಮಿನಾಶಕ ಸಿಂಪಡಿಸಲು ತೋಟಕ್ಕೆ ಹೋಗಿದ್ದಾಗ ನಾಗರಹಾವು ಕ*ಚ್ಚಿದೆ.

ಇದನ್ನೂ ಓದಿ : ನಾಲ್ಕು ತಿಂಗಳ ಹಿಂದಷ್ಟೇ ಮದುವೆ… ನವವಿವಾಹಿತೆಯ ದುರಂ*ತ ಅಂತ್ಯ!

ತಕ್ಷಣವೇ ಅವರನ್ನು ಕಿನ್ನಿಗೋಳಿಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆಯೇ ಸುರೇಂದ್ರ ಪೂಜಾರಿ ಮೃ*ತಪಟ್ಟಿದ್ದಾರೆಂದು ತಿಳಿದುಬಂದಿದೆ. ಮೃ*ತರ ಪುತ್ರ ಕಿರಣ್.ಎಸ್ ನೀಡಿದ ದೂರಿನ ಮೇರೆಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Continue Reading

LATEST NEWS

ನಾಲ್ಕು ತಿಂಗಳ ಹಿಂದಷ್ಟೇ ಮದುವೆ… ನವವಿವಾಹಿತೆಯ ದುರಂ*ತ ಅಂತ್ಯ!

Published

on

ಮಂಗಳೂರು/ಬೆಂಗಳೂರು : ಗ್ಯಾಸ್ ಗೀಸರ್​ ಸೋರಿಕೆಯಿಂದ ನವ ವಿವಾಹಿತೆ ಸಾ*ವನ್ನಪ್ಪಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ತೋಟದ ಗುಡ್ಡದಹಳ್ಳಿಯಲ್ಲಿ ನಡೆದಿದೆ. 24 ವರ್ಷದ ಭೂಮಿಕಾ ಮೃ*ತ ದುರ್ದೈವಿ.

ಭೂಮಿಕಾ ಹಾಸನ ಮೂಲದವರಾಗಿದ್ದು ನಾಲ್ಕು ತಿಂಗಳ ಹಿಂದಷ್ಟೇ ಕೃಷ್ಣಮೂರ್ತಿ ಎಂಬುವವರ ಜೊತೆ ಮದುವೆಯಾಗಿದ್ದರು. ಪತಿ ಕೆಲಸಕ್ಕೆ ಹೋದ ಬಳಿಕ ಭೂಮಿಕಾ ಸ್ನಾನಕ್ಕೆ ಹೋಗಿದ್ದಳಂತೆ. ಗ್ಯಾಸ್​ ಲೀಕ್​ ಆದ ಹಿನ್ನೆಲೆ ಭೂಮಿಕಾಗೆ ಉಸಿರುಗಟ್ಟಿದ್ದು, ಬಾತ್‌ ರೂಂನಲ್ಲೇ ಕೊನೆಯು*ಸಿರೆಳೆದಿದ್ದಾಳೆ.

ಇದನ್ನೂ ಓದಿ : ‘ಮದುವೆಯನ್ನು ರದ್ದುಗೊಳಿಸಲಾಗಿದೆ’ ಕೊನೆಗೂ ವದಂತಿಗೆ ಫುಲ್ ಸ್ಟಾಪ್ ನೀಡಿದ ಸ್ಮೃತಿ ಮಂಧಾನ

ಪತಿ ಕೆಲಸ ಮುಗಿಸಿ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page