Connect with us

health

ಹಲವಾರು ಕಾಯಿಲೆಗಳಿಗೆ ಪಾರಿಜಾತ ಎಲೆ ರಾಮಬಾಣ..!

Published

on

Health: ಪಾರಿಜಾತ ಹೂವು ಒಂದು ಸುಗಂಧ ದ್ರವ್ಯ ಎಂದು ನಮಗೆಲ್ಲ ತಿಳಿದಿದೆ. ಆದರೆ ಪಾರಿಜಾತ ಎಲೆಗಳನ್ನು ಔಷಧವಾಗಿ ಬಳಸಿಕೊಳ್ಳಬಹುದು.

ಅದು ಹೇಗೆ ಅಂತಾ ಕೇಳ್ತೀರಾ.. ?ಮಲೇರಿಯಾ ಜ್ವರವನ್ನು ಪಾರಿಜಾತ ಎಲೆಗಳು ನಿವಾರಿಸುತ್ತದೆ. ಮಹಿಳೆಯರ ಮುಟ್ಟಿನ  ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹಾಗೂ ಹಲ್ಲಿನ ಸಮಸ್ಯೆಗಳನ್ನು ತಡೆಯುತ್ತದೆ. ಹೈಪರ್ ಆಸಿಡಿಟಿ,ವಾಕರಿಕೆ ಇತ್ಯಾದಿ ಜೀರ್ಣಕಾರಿ ಸಮಸ್ಯೆಗಳನ್ನುನಿವಾರಿಸುತ್ತದೆ. ಪೌರಾಣಿಕ ಕಥೆಗಳ ಪ್ರಕಾರ ಪಾರಿಜಾತವು ಶ್ರೀಕೃಷ್ಣ ದೇವರು ಭೂಮಿಗೆ ತಮದ ಸ್ವರ್ಗೀಯ ಮರವಾಗಿದೆ.

ಪಾರಿಜಾತವನ್ನು ಸಾಮಾನ್ಯವಾಗಿ ರಾತ್ರಿ ಮಲ್ಲಿಗೆ ಎಂದು ಕರೆಯಲಾಗುತ್ತದೆ. ಪಾರಿಜಾತ ಪರಿಮಳಯುಕ್ತ ಹೂವುಗಳನ್ನು ಹೊಂದಿರುವ ಸಣ್ಣ ಪೊದೆ ರೀತಿಯ ಮರವಾಗಿದೆ. ಪಾರಿಜಾತ ಹೊವುಗಳು ಕಿತ್ತಳೆ ಬಣ್ಣದ ಕಾಂಡದ ಮೇಲೆ 7 ರಿಂದ 8 ದಳಗಳನ್ನು ಹೊಂದಿರುತ್ತದೆ. ಬಿಳಿ ಎಸಳಿನ ನಡುವೆ ಕೇಸರಿ ಬಣ್ಣದ ಚುಕ್ಕೆ ಇದ್ದು, ಈ ಸುಂದರವಾದ ಹೂವುಗಳನ್ನು ಅನೇಕ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಬಳಸಲಾಗುತ್ತದೆ. ಪಾರಿಜಾತ ಹೂವು ಹಗಲಿನಲ್ಲಿ ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ ಮತ್ತು ರಾತ್ರಿಯಲ್ಲಿ ಅರಳುತ್ತದೆ. ಪಾರಿಜಾತದ ಆರೋಗ್ಯ ಪ್ರಯೋಜನಗಳು ಹೀಗಿವೆ. ಪಾರಿಜಾತವು ಆಯುರ್ವೇದದಲ್ಲಿ ಅದ್ಭುತವಾದ ಸಸ್ಯವಾಗಿದ್ದು, ವಿಶೇಷವಾಗಿ ಅದರ ಅಗಾಧವಾದ ಅರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ.

ಈ ಉತ್ಕರ್ಷಣ ನಿರೋಧಕ, ಔಷಧೀಯ ಸಸ್ಯವು ನೋವನ್ನು ನಿವಾರಿಸುವುದರಿಂದ ಜ್ವರವನ್ನು ಕಡಿಮೆ ಮಾಡುವವರೆಗೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಪಾರಿಜಾತವನ್ನು ಮಹಾನ್ ಆಂಟಿಪೈರೆಟಿಕ್ ಎಂದು ಕರೆಯಲಾಗುತ್ತದೆ. ಇದು ಮಲೇರಿಯಾ, ಡೆಂಗ್ಯೂ ಮತ್ತು ಚಿಕನ್ ಗುನ್ಯಾ ಜ್ವರ ಸೇರಿದಂತೆ ವಿವಿದ ಜ್ವರಗಳನ್ನು ಗುಣಪಡಿಸುತ್ತದೆ. ಸಂಧಿವಾತ ಮತ್ತು ಸಿಯಾಟಿಕಾ ಅತ್ಯಂತ ನೋವಿನ ಸಮಸ್ಯೆಗಳಾಗಿವೆ. ಪಾರಿಜಾತದ ಎಲೆಗಳು ಮತ್ತು ಹೂವುಗಳು ಉರಿಯೂತದ ಗುಣಲಕ್ಷಣಗಳನ್ನು ಹೊಂದಿವೆ. ನಿರ್ದಿಷ್ಟ ಸಾರಭೂತ ತೈಲಗಳನ್ನು ಸಂಧಿವಾತ, ಮೊಣಕಾಲು ನೋವಿನ ಚಿಕಿತ್ಸೆಯನ್ನು ಬಳಸಲಾಗುತ್ತದೆ. ನೀವು ನಿರಂತರ ಕೆಮ್ಮು ಮತ್ತು ಗಂಟಲಿನ ಕಿರಿಕಿರಿಯಿಂದ ಬಳಲುತ್ತಿದ್ದೀರಾ? ಪಾರಿಜಾತದ ಎಲೆಗಳು ಮತ್ತು ಹೂವುಗಳಿಂದ ಮಾಡಿದ ಚಹಾವನ್ನು ಕೆಮ್ಮು ಶೀತ ಮತ್ತು ಬ್ರಾಂಕೈಟಿಸ್ ಅನ್ನು ಕಡಿಮೆ ಮಾಡಲು ಬಳಸಲಾಗುತ್ತದೆ. ಅಲರ್ಜಿ ವಿರೋಧಿ, ಆಂಟಿವೈರಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಿದ್ದರೆ ಪಾರಿಜಾತದ ತೈಲವನ್ನು ಬಳಸಬಹುದು. ಚರ್ಮದ ವಿವಿಧ ಶಿಲೀಂಧ್ರಗಳ ಸೋಂಕಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ.

ಡೆಂಗ್ಯೂ ಮತ್ತು ಚಿಕನ್ ಗುನ್ಯಾ ಜ್ವರದಲ್ಲಿ ಪ್ಲೇಟ್ ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಪಾರಿಜಾತ ಸಹಾಯ ಮಾಡುತ್ತದೆ. ಇದು ಜ್ವರವನ್ನು ಉಂಟುಮಾಡುವ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ. ಪಾರಿಜಾತದ ಪ್ರಮುಖ ಆರೋಗ್ಯ ಪ್ರಯೋಜನವೆಂದರೆ ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಪಾರಿಜಾತದ ಹೂವುಗಳು ಮತ್ತು ಎಲೆಗಳು ಅದರಲ್ಲಿ ಎಥೆನಾಲ್ ಇರುವ ಕಾರಣ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇಮ್ಯುನೊಸ್ಟಿಮ್ಯುಲೇಟರಿಯಾಗಿ ಕಾರ್ಯನಿರ್ವಹಿಸುತ್ತದೆ. ಪಾರಿಜಾತದ ಹೂವುಗಳು ಕೂದಲಿನ ಟಾನಿಕ್ ಆಗಿ ಕಾರ್ಯನಿರ್ವಹಿಸುತ್ತದೆ. ಕೂದಲನ್ನು ಬಲಪಡಿಸಲು ಮತ್ತು ಕೂದಲು ಉದುರುವಿಕೆಯನ್ನು ತಡೆಯಲು ಬಳಸಲಾಗುತ್ತದೆ. ಕೋದಲು ಬಿಳಿಯಾಗುವುದನ್ನು ಮತ್ತು ಇತರ ನೆತ್ತಿ ಸಂಬಂಧಿತ ಸಮಸ್ಯೆಗಳನ್ನು ತಡೆಯಲು ಪಾರಿಜಾತವು ಸಹಾಯ ಮಾಡುತ್ತದೆ.

health

ಕಿಂಡರ್ ಜಾಯ್ ಪ್ರಿಯರೇ ಎಚ್ಚರ! ಇಷ್ಟದ ಚಾಕಲೇಟ್‌ನಲ್ಲಿ ಬ್ಯಾಕ್ಟೀರಿಯಾ ಪತ್ತೆ

Published

on

By

ಕಿಂಡರ್ ಜಾಯ್ ಮಕ್ಕಳ ಫೆವರೇಟ್ ತಿಂಡಿಯಲ್ಲಿ ಒಂದಾಗಿದ್ದು, ಇದೀಗ ಮಕ್ಕಳು ಅದರಿಂದಲೇ ಕಾಯಿಲೆಗೆ ತುತ್ತಾಗುವ ಸದ್ಯತೆ ಹೆಚ್ಚಾಗುತ್ತಿದೆ. ಕಿಂಡರ್ ಜಾಯ್‌ನಲಗಲಿ ಅತ್ಯಂತ ವಿಷಕಾರಿ ಅಂಶ ಇರುವುದನ್ನು ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಪತ್ತೆ ಹಚ್ಚಿದ್ದು, ಈ ತಿಂಡಿಯನ್ನು ಮಕ್ಕಳಿಗೆ ತಿನ್ನಿಸಬಾರದೆಂದು ಎಚ್ಚರಿಕೆ ನೀಡಿದೆ.

ಸಾಲ್ಮೋನಿಲ್ಲ ಎಂಬ ಅತ್ಯಂತ ವಿಷಕಾರಿ ಅಂಶವಿರುವ ಬ್ಯಾಕ್ಟೀರಿಯಾ ಕಿಂಡರ್ ಜಾಯ್ ತಿಂಡಿಯಲ್ಲಿ ಇದೆ ಎಂಬ ಅಂಶವನ್ನು ವಿಶ್ವ ಆರೋಗ್ಯ (Health) ಸಂಸ್ಥೆ ಬಹಿರಂಗಪಡಿಸಿದೆ.

 

ಇದನ್ನೂ ಓದಿ : ಬಾಹ್ಯಾಕಾಶ ಇತಿಹಾಸದಲ್ಲಿ ಸಾಧನೆ ಮೆರೆದ ಭಾರತ; ಸ್ಪೇಡೆಕ್ಸ್ ಕಾರ್ಯಾಚರಣೆ ಯಶಸ್ವಿ 

 

ಸಾಮಾನ್ಯವಾಗಿ ಹಂದಿ, ಕೋಳಿ,ದನ ಹಾಗೂ ಇನ್ನಿತರ ಕಾಡು ಪ್ರಾಣಿಗಳಲ್ಲಿ ಇರುವ ಕೊಬ್ಬಿನಂಶದ ಈ ಸಾಲ್ಮೋನಿಲ್ಲ ಬ್ಯಾಕ್ಟೀರಿಯ ಇದೀಗ ಮಕ್ಕಳ ಫೇವರೆಟ್ ತಿಂಡಿ ಕಿಂಡರ್ ಜಾಯ್ ನಲ್ಲೂ ಪತ್ತೆಯಾಗಿದ್ದು ಈ ತಿಂಡಿಯನ್ನು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ತಿಂದಲ್ಲಿ ಮಕ್ಕಳಿಗೆ ವಿಪರೀತ ಜ್ವರ, ತಲೆನೋವು,ಹೊಟ್ಟೆ ನೋವು, ಅತಿಸಾರ, ಪಿತ್ತಕೋಶ,ಕರುಳು ಸಂಬಂಧಿ ರೋಗ,ನಿಶಕ್ತತೆ, ದೇಹದ ಬೆಳವಣಿಗೆ ಕುಂಠಿತ ಇತ್ಯಾದಿ ರೋಗಗಳು ಬಾಧಿಸುತ್ತವೆ. ಅದೇ ರೀತಿ 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಕೂಡ ಈ ರೋಗ ಲಕ್ಷಣಗಳು ಕಾಣಿಸಿಕೊಳ್ಳುವುದರಿಂದ ಈ ತಿಂಡಿಯನ್ನು ಮಕ್ಕಳಿಗೆ ತಿನ್ನಿಸಬೇಡಿ ಎಂದು ಸ್ವತಃ ವಿಶ್ವ ಆರೋಗ್ಯ ಸಂಸ್ಥೆಯೇ ಎಚ್ಚರಿಕೆ ನೀಡಿದೆ.

Continue Reading

health

ಸೈಬರ್ ವಂಚನೆಯ ನಷ್ಟಕ್ಕೆ ಬ್ಯಾಂಕುಗಳೇ ಹೊಣೆ ಎಂದ ಸುಪ್ರೀಂ ಕೋರ್ಟ್

Published

on

By

ಮಂಗಳೂರು/ನವದೆಹಲಿ : ಸೈಬರ್ ವಂಚನೆ ಪ್ರಕರಣದಲ್ಲಿ ಗ್ರಾಹಕನಿಗೆ ನಷ್ಟ ಸಂಭವಿಸಿದ್ರೆ ಅದಕ್ಕೆ ಬ್ಯಾಂಕುಗಳೇ ಹೊಣೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

ಬ್ಯಾಂಕುಗಳಲ್ಲಿ ಗ್ರಾಹಕನ ಖಾತೆಯಲ್ಲಿ ಯಾವುದೇ ಅನಧಿಕೃತ ವಹಿವಾಟು ನಡೆದು ನಷ್ಟ ಸಂಭವಿಸಿದರೆ ಅದಕ್ಕೆ ಬ್ಯಾಂಕುಗಳೇ ನೇರವಾಗಿ ಹೊಣೆ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಅಸ್ಸಾಂನ ಸೈಬರ್ ವಂಚನೆಗೆ ಒಳಗಾದ ಪಲ್ಲಭ್ ಭೌಮಿಕ್ ಅವರಿಗೆ 94,000 ರೂ. ಗಳನ್ನು ಮರುಪಾವತಿಸುವಂತೆ ಭಾರತದ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಹೊರಡಿಸಿದೆ.

ಈ ಪ್ರಕರಣವು ಬ್ಯಾಂಕುಗಳು ತಮ್ಮ ಗ್ರಾಹಕರ ಹಣವನ್ನು ವಂಚನೆಯ ಚಟುವಟಿಕೆಗಳಿಂದ ರಕ್ಷಿಸುವಲ್ಲಿ ಹಣಕಾಸು ಸಂಸ್ಥೆಗಳ ಜವಾಬ್ದಾರಿಗಳನ್ನು ತೀವ್ರವಾಗಿ ಎತ್ತಿ ತೋರಿಸಿದೆ.

ಪ್ರಕರಣದ ಹಿನ್ನೆಲೆ

ಪಲ್ಲಭ್ ಭೌಮಿಕ್ ಎನ್ನುವವರು ಆನ್ ಲೈನ್ ನಲ್ಲಿ ವಸ್ತುವೊಂದನ್ನು ಖರೀದಿಸಿದ್ದರು. 4,000 ರೂ. ಮೌಲ್ಯದ ಲೂಯಿಸ್ ಫಿಲಿಪ್ ಬ್ಲೇಜರ್ ಅನ್ನು ಹಿಂದಿರುಗಿಸಲು ಪ್ರಯತ್ನಿಸಿದಾಗ ಸೈಬರ್ ವಂಚನೆ ಸಂಭವಿಸಿದೆ. ಗ್ರಾಹಕ ಸೇವಾ ಪ್ರತಿನಿಧಿಯಾಗಿ ನಟಿಸಿ, ವಂಚಕರು ಪಲ್ಲಭ್ ಅವರನ್ನು ದುರುದ್ದೇಶಪೂರಿತ ಅಪ್ಲಿಕೇಶನ್ ಅನ್ನು ಸ್ಥಾಪಿಸುವಂತೆ ಹೇಳಿ ವಂಚನೆ ಮಾಡಿದ್ದರು.

ಇದನ್ನೂ ಓದಿ: ಓಂ ಶಕ್ತಿ ದರ್ಶನ ಪಡೆದು ವಾಪಾಸಾಗುತ್ತಿದ್ದಾಗ ದುರಂ*ತ; ಐವರು ಸಾ*ವು

ಇದು ಅವರ ಎಸ್ ಬಿಐ ಉಳಿತಾಯ ಖಾತೆಯಿಂದ 94,204 ರೂ. ಗಳನ್ನು ಕಳವು ಮಾಡಲು ಕಾರಣವಾಯಿತು. ಕದ್ದ ಹಣವನ್ನು ಯುಪಿಐ ವಹಿವಾಟುಗಳ ಮೂಲಕ ಬಹು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಯಿತು.

ಈ ಸಮಸ್ಯೆಯ ಮೂಲ ಯಾವುದೆಂದರೆ ಲೂಯಿಸ್ ಫಿಲಿಪ್ ಅವರ ವೆಬ್ ಸೈಟ್ ನಲ್ಲಿ 2021 ರಲ್ಲಿ ನಡೆದ ಡೇಟಾ ಉಲ್ಲಂಘನೆಯಾಗಿದ್ದು, ಇದರಿಂದ ಗ್ರಾಹಕರ ಸೂಕ್ಷ್ಮ ಮಾಹಿತಿಗಳು ಸೋರಿಕೆಯಾಗಿದೆ. ಈ ಡೇಟಾವನ್ನು ದುರುಪಯೋಗಪಡಿಸಿಕೊಂಡು, ವಂಚಕನು ವಂಚನೆ ನಡೆಸಿದ್ದಾನೆ.

ಕಾನೂನು ಹೋರಾಟ ನಡೆಸಿದ ಪಲ್ಲಭ್
ಈ ವಿಷಯವನ್ನು ನಿಯಮದಂತೆ 24 ಗಂಟೆಯೊಳಗೆ ಪಲ್ಲಭ್ ಬ್ಯಾಂಕ್ ಗಮನಕ್ಕೆ ತಂದಿದ್ದರು. ಆದರೆ ನ್ಯೂ ಒಟಿಪಿ, ಎಂಪಿನ್ ಸೇರಿದಂತೆ ರಹಸ್ಯ ಮಾಹಿತಿಯನ್ನು ವಂಚಕರಿಗೆ ನೀಡಿದ್ದೀರಿ. ಹೀಗಾಗಿ ಇದರಲ್ಲಿ ಬ್ಯಾಂಕ್ ನ ತಪ್ಪಿಲ್ಲ. ಹಣ ಮರಳಿಸಲಾಗಲ್ಲ ಎಂದು ಬ್ಯಾಂಕ್ ಹೇಳಿತ್ತು. ಈ ಬಗ್ಗೆ ಪಲ್ಲಭ್ ಹೈಕೋರ್ಟ್ ಮೊರೆ ಹೋಗಿದ್ದರು. ಗುವಾಹಟಿ ಹೈಕೋರ್ಟ್ ಪಲ್ಲಭ್ ಪರ ತೀರ್ಪು ನೀಡಿತ್ತು. ಇದನ್ನು ಎಸ್ ಬಿಐ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿತ್ತು.

ಈ ಕುರಿತು ಇದೀಗ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ‘ಮೂರನೇ ವ್ಯಕ್ತಿಯಿಂದಾದ ವಂಚನೆ ಪ್ರಕರಣಕ್ಕೆ ಗ್ರಾಹಕ ಹೊಣೆಯಾಗುವುದಿಲ್ಲ ಎಂದು ಆರ್ ಬಿಐ ನಿಯಮಗಳೇ ಹೇಳಿವೆ. ಸೈಬರ್ ವಂಚನೆಯಂಥ ಪ್ರಕರಣದಲ್ಲಿ ಗ್ರಾಹಕರ ಹಿತ ಕಾಪಾಡುವುದು ಬ್ಯಾಂಕ್ ಗಳ ಹೊಣೆಗಾರಿಕೆ. ಈ ಪ್ರಕರಣದಲ್ಲಿ ತಾಂತ್ರಿಕ ಸಂಪನ್ಮೂಲ ಲಭ್ಯವಿದ್ದರೂ ವಂಚನೆ ತಡೆಯುವಲ್ಲಿ ಎಸ್ ಬಿಐ ವಿಫಲವಾಗಿದೆ’. ಈ ಹಿನ್ನೆಲೆ ಗ್ರಾಹಕನಿಗೆ ಹಣ ಮರಳಿಸುವಂತೆ ಎಸ್ ಬಿಐಗೆ ನ್ಯಾಯಪೀಠ ಸೂಚಿಸಿದೆ.

Continue Reading

health

ನಿಮ್ಮ ಮಕ್ಕಳಲ್ಲಿ ಇಂತಹ ಗುಣಲಕ್ಷಣ ಇದೆಯಾ..? ಹಾಗಿದ್ರೆ ವೈದ್ಯರನ್ನು ಸಂಪರ್ಕಿಸಿ..!

Published

on

By

ಮಂಗಳೂರು: ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತ ಅದೊಂದು ಕಾಯಿಲೆ ಮಕ್ಕಳನ್ನು ವೇಗವಾಗಿ ಆವರಿಸಿಕೊಳ್ಳುತ್ತಿದೆ. ಪ್ರಪಂಚದ ಪ್ರತಿ ಮೂರನೇ ಮಗು ಈ ಕಾಯಿಲೆಗೆ ತುತ್ತಾಗುತ್ತಿದೆ ಎಂದು ಬ್ರಿಟೀಷ್ ಜರ್ನಲ್ ಆಫ್‌ ಐಸೈನ್ಸ್‌ ನಲ್ಲಿ ಪ್ರಕಟವಾದ ವರದಿಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಪೋಷಕರು ಎಚ್ಚೆತ್ತುಕೊಳ್ಳದೇ ಇದ್ದಲ್ಲಿ 2050ರ ವೇಳೆ ಸುಮಾರು 40% ಮಕ್ಕಳು ಈ ಸಮಸ್ಯೆಗೆ ತುತ್ತಾಗಲಿದ್ದಾರೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.


ಮಕ್ಕಳು ತುಂಬಾ ಸೂಕ್ಷ್ಮವಾಗಿರುವ ಕಾರಣ ಅವರು ಸುಲಭವಾಗಿ ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ಕಣ್ಣಿನ ಸಂಬಂಧಿತ ಈ ಕಾಯಿಲೆ ಮಕ್ಕಳಲ್ಲಿ ವ್ಯಾಪಕವಾಗಿ ಕಾಣಿಸುತ್ತಿದ್ದು, ಸಮೀಪ ದೃಷ್ಟಿ ದೋಷಕ್ಕೆ ಒಳಗಾಗುತ್ತಿದ್ದಾರೆ. ಸಮೀಪ ದೃಷ್ಟಿ ದೋಷಕ್ಕೆ ಒಳಗಾದ ಮಕ್ಕಳಿಗೆ ದೂರದ ವಸ್ತುಗಳು ಸ್ಪಷ್ಟವಾಗಿ ಗೋಚರಿಸುವುದಿಲ್ಲವಾದ್ರೂ ಹತ್ತಿರದ ವಸ್ತುಗಳನ್ನು ಸ್ಪಷ್ಟವಾಗಿ ಗುರುತಿಸಬಲ್ಲರು. ಹೀಗಾಗಿ ಸಣ್ಣ ವಯಸ್ಸಿನಲ್ಲೇ ಮಕ್ಕಳಿಗೆ ಕನ್ನಡಕದ ಅವಶ್ಯತೆ ಹೆಚ್ಚಾಗುತ್ತಿದೆ. ಈ ಮಕ್ಕಳಿಗೆ ಶಾಲೆ ಬೋರ್ಡ್‌, ರಸ್ತೆಯ ಸೈನ್ ಬೋರ್ಡ್‌ ಹಾಗೂ ಟಿವಿ ವೀಕ್ಷಣೆಗೆ ಕನ್ನಡಕ ಬೇಕೇ ಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಈ ಕಾಯಿಲೆಯ ಲಕ್ಷಣ ನಿಮ್ಮ ಮಕ್ಕಳಲ್ಲಿದ್ದರೆ ವೈದ್ಯರನ್ನು ಸಂಪರ್ಕಿಸಿ :
ಮಕ್ಕಳು ದೂರದ ವಸ್ತುಗಳನ್ನು ನೋಡಲು ಕಷ್ಟ ಪಡುವುದು, ಕಣ್ಣುಗಳು ಆಯಾಸಗೊಳ್ಳುವುದು, ಒತ್ತಡದ ಅನುಭವ ಆಗುವುದು, ವಿಷಯದಲ್ಲಿ ಗಮನ ಹರಿಸಲಾಗದೇ ಇರುವುದು, ನಿರಂತರ ತಲೆ ನೋವು ಮುಂತಾದ ಲಕ್ಷಣಗಳು ಈ ಕಾಯಿಲೆಯಲ್ಲಿ ಕಾಣಿಸಿಕೊಳ್ಳುತ್ತದೆ. ಹತ್ತು ವರ್ಷದ ಮಕ್ಕಳಲ್ಲಿ ಈ ರೀತಿಯ ಗುಣಲಕ್ಷಣ ಕಾಣಿಸುವುದು ಒಳ್ಳೆಯ ಲಕ್ಷಣ ಅಲ್ಲ. ಮಕ್ಕಳು ಮೊಬೈಲ್ ಪರದೆಗಳನ್ನು ನಿರಂತರ ನೋಡುತ್ತಿದ್ದರೆ ಅದನ್ನು ನಿಲ್ಲಿಸುವ ಪ್ರಯತ್ನ ಮಾಡುವುದು ಪೋಷಕರ ಜವಾಬ್ದಾರಿ. ಮೊಬೈಲ್‌ನಲ್ಲಿ ಕಾರ್ಟೂನ್‌ ನೋಡುವುದು ಕೂಡಾ ಮಕ್ಕಳ ಕಣ್ಣುಗಳ ಮೇಲೆ ನೆಗೆಟಿವ್ ಇಂಪ್ಯಾಕ್ಟ್‌ ಮಾಡುತ್ತದೆ.

ಇದನ್ನೂ ಓದಿ: ಮಕ್ಕಳು ಓದಲ್ಲ ಅಂತ ಬೈಬೇಡಿ; ಜಸ್ಟ್ ಹೀಗೆ ಮಾಡಿ ಸಾಕು !!

ಸಮೀಪದೃಷ್ಟಿಯ ದೊಡ್ಡ ಕಾರಣಗಳು ಇವು :
1. ನ್ಯಾಷನಲ್ ಐ ಇನ್ಸ್ಟಿಟ್ಯೂಟ್ ಪ್ರಕಾರ, ಸಮೀಪದೃಷ್ಟಿ ಸಾಮಾನ್ಯವಾಗಿ 6 ​​ರಿಂದ 14 ವರ್ಷ ವಯಸ್ಸಿನ ನಡುವೆ ಪ್ರಾರಂಭವಾಗುತ್ತದೆ ಮತ್ತು ಅದರ ರೋಗಲಕ್ಷಣಗಳು 20 ನೇ ವಯಸ್ಸಿನಲ್ಲಿ ಉಲ್ಬಣಗೊಳ್ಳಬಹುದು. ಇದಕ್ಕೆ ಪ್ರಮುಖ ಕಾರಣ ಮೊಬೈಲ್ ವೀಕ್ಷಣೆ
2. ಮಧುಮೇಹ ಕಾಯಿಲೆ ಇದ್ದಲ್ಲಿಯೂ ಇದು ಸಮೀಪ ದೃಷ್ಟಿ ದೋಷಕ್ಕೆ ಕಾರಣವಾಗಬಹುದು. ದೊಡ್ಡವರಲ್ಲಿ ಬಹುತೇಕ ಈ ಕಾಯಿಲೆಗೆ ಮಧುಮೇಹ ಕಾರಣವಾಗುತ್ತದೆ.
3. ದೃಷ್ಟಿ ಒತ್ತಡ, ಸ್ಮಾರ್ಟ್‌ ಫೋನ್‌ ಅಥವಾ ಲ್ಯಾಪ್ಟಾಪ್ ಪರದೆಯ ಮೇಲೆ ನಿರಂತರ ಸಮಯವನ್ನು ಕಳೆಯುವುದರಿಂದ ಸಮೀಪದೃಷ್ಟಿ ಉಂಟಾಗುತ್ತದೆ.
4. ಕುಟುಂಬದ ಇತಿಹಾಸ ಅಂದರೆ ಆನುವಂಶಿಕ ಸ್ಥಿತಿ ಕೂಡ ಸಮೀಪದೃಷ್ಟಿಗೆ ಕಾರಣವಾಗಬಹುದು.

ಸಮೀಪದೃಷ್ಟಿಯಿಂದ ಮಕ್ಕಳ ಕಣ್ಣುಗಳನ್ನು ಹೇಗೆ ರಕ್ಷಿಸುವುದು :
1. ಹೊರಾಂಗಣ ಚಟುವಟಿಕೆಗಳನ್ನು ಹೆಚ್ಚಿಸಿ. 2. ಮಕ್ಕಳನ್ನು ಹಸಿರು ಸ್ಥಳಗಳಿಗೆ ಕರೆದೊಯ್ಯಿರಿ. 3. ಮೊಬೈಲ್‌ ನೋಡುವ ಸಮಯವನ್ನು ಕಡಿಮೆ ಮಾಡಿ. 4. ಅಧ್ಯಯನದ ನಡುವೆ ವಿರಾಮಗಳನ್ನು ತೆಗೆದುಕೊಳ್ಳಲು ಹೇಳಿ. 5. ಸ್ಕ್ರೀನ್ ಅಥವಾ ಪುಸ್ತಕವನ್ನು ತುಂಬಾ ಹತ್ತಿರದಿಂದ ನೋಡಲು ಬಿಡಬೇಡಿ. 6. ಪರದೆಯ ಮುಂದೆ ಆಂಟಿಗ್ಲೇರ್ ಅಥವಾ ನೀಲಿ ಬಣ್ಣದ ಕನ್ನಡಕವನ್ನು ಧರಿಸಿ. 7. ವಿಟಮಿನ್ ಎ ಮತ್ತು ಸಿ ಸಮೃದ್ಧವಾಗಿರುವ ವಸ್ತುಗಳನ್ನು ಸೇವಿಸಿ.

ಗಮನಿಸಿ :ಈ ಸುದ್ದಿಯಲ್ಲಿ ನೀಡಲಾದ ಮಾಹಿತಿಯು ಮಾಧ್ಯಮ ವರದಿಗಳನ್ನು ಆಧರಿಸಿದೆ. ಯಾವುದೇ ಸಲಹೆಯನ್ನು ಕಾರ್ಯಗತಗೊಳಿಸುವ ಮೊದಲು, ನೀವು ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸಬೇಕು.

Continue Reading
Advertisement

Trending

Copyright © 2025 Namma Kudla News

You cannot copy content of this page