ಹೆತ್ತವರ ಕೊನೆಯ ಆಸೆಯನ್ನು ನೇರವೇರಿಸಿದ ದುಬೈ ಕನ್ನಡಿಗಸ್ ಹೆಲ್ಪ್‌ಲೈನ್ – ಅನಿವಾಸಿ ಕನ್ನಡಿಗರ ಒಕ್ಕೂಟ..!
ದುಬೈ : ದುಬೈ ಕನ್ನಡಿಗಸ್ ಹೆಲ್ಪ್‌ಲೈನ್ , ಅನಿವಾಸಿ ಕನ್ನಡಿಗರ ಒಕ್ಕೂಟ (AKO) ಸಹಾಯದಿಂದ ದುಬೈಯಲ್ಲಿ ಸಾವನ್ನಪ್ಪಿದ ಭಾರತೀಯ ವಲಸಿಗರೊಬ್ಬರ ಪಾರ್ಥಿವ ಶರೀರವನ್ನು ತವರೂರಿಗೆ ವಾಪಾಸು ಕಳುಹಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ,

ಕೊರೋನ ಸಂಕಷ್ಟದ ಸಮಯದಲ್ಲಿ ಮಾನವೀಯತೆ ಮೆರೆದ, ಸೌಹಾರ್ದತೆಯನ್ನು ಎತ್ತಿಹಿಡಿಯುವಂತಹ ಶ್ಲಾಘನೀಯ ಕಾರ್ಯವನ್ನು ಯುಎಈಯ ಕನ್ನಡಿಗರು ನಡೆಸಿದ್ದಾರೆ.
ಅಬುಧಾಬಿಯಲ್ಲಿ ಮೃತರಾಗಿದ್ದ ಕರಾವಳಿಯ ಯುವಕ ಯಶವಂತ್ ಪೂಜಾರಿಯ ಮೃತದೇಹವನ್ನು ಯುಎಇ ಸರ್ಕಾರದ ಎಲ್ಲಾ ನಿಯಮ ಪಾಲಿಸಿ, ಹಲವಾರು ಪರವಾನಗಿಗಳನ್ನು ಪಡೆದು ತಾಯ್ನಾಡಿಗೆ ರವಾನಿಸಲು ಯಶಸ್ವಿಯಾಗಿದೆ.
ಈ ಯಶಸ್ವಿಯ ಹಿಂದೆ ನಡೆಸಿದಂತಹ ಸತತ 13 ದಿನಗಳು ನಡೆಸಿದ ಪರಿಶ್ರಮ ಎಲ್ಲರಿಗೂ ಮಾದರಿಯಾಗಿದೆ.
ಅಬುಧಾಬಿಯಲ್ಲಿ ಕರಾವಳಿಯ ಯುವಕ ಯಶವಂತ ಪೂಜಾರಿಗೆ ಅಫಘಾತವಾಗಿದೆ ಎಂದು ಸುದ್ದಿ ತಿಳಿದು ಅವರ ಕುಟುಂಬದವರ ಸ್ಥಿತಿ ಶೋಚನೀಯವಾಗಿದೆ,
ಸ್ವಲ್ಪ ಸಹಾಯ ಮಾಡಿ ಎಂದಾಗ ಇದನ್ನು ಸವಾಲಾಗಿ ಸ್ವೀಕರಿಸಿ ಅನಿವಾಸಿ ಕನ್ನಡಿಗರ ಒಕ್ಕೂಟ (AKO) ಮತ್ತು ದುಬೈ ಕನ್ನಡಿಗಸ್ ಹೆಲ್ಪ್‌ಲೈನ್ ತಂಡ ಕಾರ್ಯಪ್ರವೃತ್ತರಾದರು.
ಯಶವಂತ್ ಕುರಿತು ಮಾಹಿತಿ ಕಲೆ ಹಾಕಲು ಹೊರಟಾಗ ಆತ ಮೃತಪಟ್ಟಿದ್ದು, ಅನಾಥ ಶವವಾಗಿ ಶವಾಗಾರದಲ್ಲಿ ಇರುವುದು ತಿಳಿದುಬಂದಿದೆ. ಯಶವಂತ್ ಹೆತ್ತವರು ಅವರ ಮಗನ ಮುಖವನ್ನು ಕೊನೆಯ ಬಾರಿಗೆ ನೋಡಬೇಕು,
ಹೇಗಾದರೂ ಮಾಡಿ ಊರಿಗೆ ಮೃತದೇಹವನ್ನು ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದು ಬೇಡಿಕೊಂಡಿದ್ದಾರೆ, ಇದನ್ನು ಚರ್ಚಿಸಿ ಕಾರ್ಯರೂಪಕ್ಕೆ ತರಲು ಅನಿವಾಸಿ ಕನ್ನಡಿಗರ ಒಕ್ಕೂಟದ ರಶೀದ್ ಬಿಜೈ, ಶರೀಫ್ ಸರ್ವೆ, ಬಶೀರ್ ಕೊಡ್ಲಿಪೇಟೆ ಕನ್ನಡಿಗಾಸ್ ಹೆಲ್ಪ್ ಲೈನ್ ನ ಹಿದಾಯತ, ಸಿರಾಜ್ ಪರ್ಲಡ್ಕ, ದಯಾ ಕಿರೋಡಿಯನ್, ನವೀದ್ ಮಾಗುಂಡಿ, , ಅಬುಧಾಬಿಯ ಪ್ರದೀಪ್ ಕಿರೋಡಿಯನ್, ಶ್ರೀಧರ್, ದೀಪ ಹಾಗೂ ಊರಿನಿಂದ ಆಸಿಫ್, ಮುಝಮ್ಮಿಲ್, ಭಾಗ್ಯರಾಜ್, ದೀಪಕ್, ರಾಜೇಶ್ ಮರೋಳಿ ಮತ್ತಿತರನ್ನು ಸೇರಿಸಿ ಮುನ್ನಡೆದರು.
ಕೊರೋನ ಸಂಕಷ್ಟದ ಈ ಸೂಕ್ಷ್ಮ ಸಮಯದಲ್ಲಿ ಪೋಸ್ಟ್ ಮಾರ್ಟಮ್ ನಡೆಸಿ ಸಹಜ ಸಾವು ಎಂದು ಖಚಿತಪಡಿಸಿ, ಕೋವಿಡ್ ಟೆಸ್ಟ್ ನಡೆಸಿ ನೆಗೆಟಿವ್ ವರದಿ ಬಂದ ನಂತರವೂ ಯಶವಂತ ಪಾಸ್ಪೋರ್ಟ್, ವಿಸಾ, ಎಮಿರೇಟ್ಸ್ ಕಾರ್ಡ್ ಯಾವುದೂ ಇರದೇ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಲು ಪರವಾನಗಿ ಪಡೆಯುವುದು ಅಸಾಧ್ಯ ಎಂಬಂತಿದ್ದಾಗ ಭಾರತೀಯ ರಾಯಭಾರಿ ಕಚೇರಿಯಲ್ಲಿ ರಶೀದ್ ಬಿಜೈ ನೇತೃತ್ವದಲ್ಲಿ ತಾತ್ಕಾಲಿಕ ಪಾಸ್ಪೋರ್ಟ್ ಮತ್ತು ಎಲ್ಲಾ ಪರವಾನಗಿ ಕೆಲಸ ತ್ವರಿತವಾಗಿ ನಡೆಯಿತು,
ಈ ಸಂದರ್ಭದಲ್ಲಿ ದುಬೈ ಕಾನ್ಸುಲೇಟ್ ಮತ್ತು ಕಾರ್ಗೋ ಸಂಬಂಧಿಸಿದ ಎಲ್ಲಾ ಕೆಲಸಕ್ಕೂ ಅನಿವಾಸಿ ಕನ್ನಡಿಗರ ಒಕ್ಕೂಟ ಮತ್ತು ಕನ್ನಡಿಗಾಸ್ ಹೆಲ್ಪ್ ಲೈನ್ ತಂಡ ಸಂಪೂರ್ಣ ಸಹಕಾರ ನೀಡಿದೆ.
ಅದೇ ರೀತಿ ಊರಿನಲ್ಲಿ ಬೇಕಾದ ಎಲ್ಲಾ ಕಾನೂನಾತ್ಮಕ ಕೆಲಸವನ್ನು ನ್ಯಾಯವಾದಿ ಉಲ್ಲಾಸ್ ಪಿಂಟೋ ಮಾಡಿದರೆ, ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯವರನ್ನು ಕಂಡು ಬೇಕಾದ ಎಲ್ಲಾ ದಾಖಲೆ ಪತ್ರಗಳನ್ನು ನೀಡಿ ಸಹಕರಿಸಿದ ಅಥಾವುಲ್ಲಾ ಜೋಕಟ್ಟ (SDPI) ಮತ್ತು ಜಿಲ್ಲಾಧಿಕಾರಿಗಳ ಆದೇಶದಂತೆ ಸಹಕರಿಸಿದ ಅಧಿಕಾರಿಗಳಾದ ಯತೀಶ್ ಉಳ್ಳಾಲ, ಪ್ರವೀಣ್ ಕುಮಾರ್ ಸರ್ ಸೇವೆ ಅನನ್ಯವಾಗಿದೆ,
ಮೃತದೇಹ ರವಾನಿಸಲು ಉಂಟಾಗುವ ಖರ್ಚುನ್ನು ಕನ್ನಡಿಗರ ತಂಡವೇ ಸಂಪೂರ್ಣವಾಗಿ ಭರಿಸಲಿದೆ ಎಂದು ಭರವಸೆ ನೀಡಿದರು, ಅಬುಧಾಬಿಯಲ್ಲಿದ್ದ ಮೃತದೇಹ ದುಬೈ ಮೂಲಕ ತಾಯ್ನಾಡಿಗೆ ತಲುಪಬೇಕೆಂದು ಅಂತಿಮವಾದಾಗ ದುಬೈನಲ್ಲಿ ಪೊಲೀಸ್ ಮತ್ತು ಇತರ ಪರವಾನಗಿ ಕೆಲಸವನ್ನು ಹಮೀದ್ ಸತ್ತಿಕಲ್ಲ್ ನಡೆಸಿಕೊಟ್ಟು ಅಬುಧಾಬಿಯಿಂದ ದುಬೈ ತಲುಪಿ ದುಬೈನಲ್ಲಿ ನವೀದ್ ಮಾಗುಂಡಿ, ದಯಾ ಕಿರೋಡಿಯನ್, ಇಮ್ರಾನ್ ಖಾನ್, ಯಶವಂತ್ ಕರ್ಕೇರಾರವರು ಜೊತೆಗೂಡಿ ವಿಮಾನದಲ್ಲಿ ರವಾನಿಸುವ ಅಂತಿಮ ಕೆಲಸದಲ್ಲಿ ಪಾಲ್ಗೊಂಡು ಸಹಕರಿಸಿದರು.
ಅದೇ ರೀತಿ ಮ್ರತ ದೇಹ ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ತಲುಪಿದಾಗ ಖಲೀಲ್ ತಂಡ ಸಹಕರಿಸಿತು.
ಈ ಕುರಿತು ಮಾತನಾಡಿದ ಅನಿವಾಸಿ ಕನ್ನಡಿಗರ ಒಕ್ಕೂಟದ ಅಧ್ಯಕ್ಷ ರಶೀದ್ ಬಿಜೈ, ಎಲ್ಲಕ್ಕಿಂತಲೂ ಮಿಗಿಲಾದದ್ದು ಮಾನವಧರ್ಮ,ಯಶವಂತ್ ನಮ್ಮ ಊರಿನ ಹುಡುಗ, ಕನ್ನಡಿಗ, ಹಾಗಾಗಿ ಇದು ನಮ್ಮ ಕರ್ತವ್ಯ, ಕೊನೆಗೂ ಯಶವಂತನ ತಾಯಿಗೆ ಆತನ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಿಲಿದೆ ಎಂಬ ಖುಷಿ ಇದೆ,
ಈ ಕೆಲಸದಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತ ಹೀಗೆ ಎಲ್ಲಾ ಸಹೃದಯಿ ಸಹೋದರರು ಸಹಕಾರ ನೀಡಿದ್ದಾರೆ, ವಿಶೇಷವಾಗಿ ಹಿದಾಯತ್ ಹಾಗೂ ಇತರ ಎಲ್ಲರಿಗೂ ಧನ್ಯವಾದಗಳು ತಿಳಿಸಿದರು, ಅಲ್ಲದೇ ಯಶವಂತ್ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡಲು ಅನಿವಾಸಿ ಕನ್ನಡಿಗರು ಮುಂದೆ ಬಂದಿದ್ದು, ಅದನ್ನೂ ಶೀಘ್ರದಲ್ಲೇ ತಲುಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
https://www.youtube.com/watch?v=XhLuxvWui8Y