Connect with us

bangalore

ಹೆಸರು ಬದಲಿಸಿಕೊಂಡು ಬೆಂಗಳೂರಲ್ಲಿ ವಾಸವಿದ್ದ ಪಾಕಿಸ್ತಾನಿ ಕುಟುಂಬ ಅರೆಸ್ಟ್

Published

on

ಮಂಗಳೂರು / ಬೆಂಗಳೂರು :  ಪಾಕಿಸ್ತಾನದ ವ್ಯಕ್ತಿಯೊಬ್ಬ ತನ್ನ ಕುಟುಂಬದೊಂದಿಗೆ ಆನೇಕಲ್‌ ಬಳಿಯ ಜಿಗಣಿಯಲ್ಲಿ ವಾಸವಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಜಿಗಣಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಇತ್ತೀಚೆಗಷ್ಟೇ ಎನ್​ಐಎ ಅಧಿಕಾರಿಗಳು ಜಿಗಣಿಯಲ್ಲಿ ಒಬ್ಬ ಶಂಕಿತ ಉಗ್ರನನ್ನು ಬಂಧಿಸಿದ್ದರು. ಈಗ ಇಲ್ಲಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಪಾಕಿಸ್ತಾನದ ವ್ಯಕ್ತಿ ವಾಸ್ತವ್ಯವಿದ್ದ ವಿಚಾರ ಗೊತ್ತಾಗಿದೆ. ಒಟ್ಟು ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಾಕಿಸ್ತಾನದ ರಷೀದ್ ಸಿದ್ದಿಕಿ ಅಲಿಯಾಸ್​ ಶಂಕರ್ ಶರ್ಮಾ, ಆಯುಷಾ ಅನಿಫ್ ಅಲಿಯಾಸ್​ ಆಶಾ ಶರ್ಮಾ, ಮೊಹಮ್ಮದ್ ಹನೀಫ್ ಅಲಿಯಾಸ್​ ರಾಮ್ ಬಾಬಾ ಶರ್ಮಾ, ರುಬೀನಾ ಅಲಿಯಾಸ್​ ರಾಣಿ ಶರ್ಮಾ ಬಂಧಿತರು. ಹೆಸರು ಬದಲಿಸಿಕೊಂಡು ಇವರು ಬೆಂಗಳೂರಿನಲ್ಲಿ ನೆಲೆಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಪಾಕ್ ನಿಂದ ಬಾಂಗ್ಲಾ, ಭಾರತದತ್ತ:

ಪಾಕಿಸ್ತಾನದಲ್ಲಿದ್ದಾಗ ಧರ್ಮದ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಈತ ಪಾಕಿಸ್ತಾನ ತೊರೆದಿದ್ದ. ಬಳಿಕ ಬಾಂಗ್ಲಾದೇಶದ ಢಾಕಾದಲ್ಲಿ ಕೆಲವು ಸಮಯದವರೆಗೆ ನೆಲೆಸಿದ್ದ. ಕೊನೆಗೆ ಅಲ್ಲಿಯೇ ಒಬ್ಬ ಮಹಿಳೆಯನ್ನು ಮದುವೆ ಮಾಡಿಕೊಂಡಿದ್ದ. ಇದಾದ ನಂತರ ಆತ ತನ್ನ ಹಾಗೂ ಮಕ್ಕಳೊಂದಿಗೆ ಮತ್ತೆ 2014ರಲ್ಲಿ ದೆಹಲಿಗೆ ಬಂದಿದ್ದ ಎನ್ನಲಾಗಿದೆ.

ಅಲ್ಲಿ ಕೆಲವರ ಸಹಾಯದಿಂದ ಆಧಾರ್‌ ಕಾರ್ಡ್‌, ಡ್ರೈವಿಂಗ್‌ ಲೈಸೆನ್ಸ್‌, ಪಾಸ್‌ಪೋರ್ಟ್‌ ಸೇರಿದಂತೆ ಇನ್ನಿತರ ದಾಖಲೆಗಳನ್ನು ಮಾಡಿಸಿಕೊಂಡು, ಕುಟುಂಬದೊಂದಿಗೆ ಬೆಂಗಳೂರಿನ ಜಿಗಣಿಗೆ ಬಂದು ನೆಲೆಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಧರ್ಮದ ವಿಚಾರವಾಗಿಯೇ ರಷೀದ್‌ನನ್ನು ಪಾಕಿಸ್ತಾನದಿಂದ ಹೊರದಬ್ಬಲಾಗಿತ್ತು. ಬಳಿಕ ಬಾಂಗ್ಲಾದಿಂದ ನೇಪಾಳಕ್ಕೆ ಹೋಗಿದ್ದಾಗ ಅಲ್ಲಿನ ಧಾರ್ಮಿಕ ಸಂಸ್ಥೆಗೆ ಸೇರಿಕೊಂಡು, ಧರ್ಮ ಪ್ರಚಾರದಲ್ಲಿ ನಿರತನಾಗಿದ್ದ. ಅಲ್ಲಿನ ಧರ್ಮಗುರು ಸೂಚನೆ ಮೇರೆಗೆ ಧರ್ಮಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿಳಿದಿದ್ದ ಎನ್ನಲಾಗಿದೆ.

ಇದನ್ನೂ ಓದಿ : 500ರ ನೋಟಿನಲ್ಲಿ ಗಾಂಧಿ ಜಾಗದಲ್ಲಿ ನಟ ಅನುಪಮ್‌ ಖೇರ್‌..!?

ಬೆಂಗಳೂರಿಗೆ ಬಂದಿದ್ದ ರಷೀದ್‌ ಮೊದಲಿಗೆ ಇಬ್ಬರನ್ನು ಪರಿಚಯ ಮಾಡಿಕೊಂಡು ಅವರನ್ನೂ ಧರ್ಮ ಸಂಸ್ಥೆಗೆ ಸೇರ್ಪಡೆ ಮಾಡಿಕೊಂಡಿದ್ದ. ಅವರ ಸಹಕಾರದಿಂದಲೇ ಜಿಗಣಿಯಲ್ಲಿ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಂಡಿದ್ದ. ಕೊನೆಗೆ ಜಿಗಣಿಯಲ್ಲಿ ಮನೆ ಮಾಡಿಕೊಂಡು ಡೆಲಿವರಿ ಬಾಯ್‌ ಕೆಲಸ ಕೂಡ ಮಾಡುತ್ತಿದ್ದ. ಬಿರಿಯಾನಿ ತಯಾರಿಸಿ ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಈತನ ಮೇಲೆ ಕಣ್ಣಿಟ್ಟು ಚಲನವಲನ ಗಮನಿಸುತ್ತಿತ್ತು. ಬಳಿಕ ಗುಪ್ತಚರ ಅಧಿಕಾರಿಗಳೇ ರಷೀದ್ ಜಿಗಣಿಯಲ್ಲಿ ವಾಸವಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದನ್ನು ಆಧರಿಸಿ ಜಿಗಣಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು, ಕೊನೆಗೆ ಇಡೀ ಕುಟುಂಬವನ್ನು ಬಂಧಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement
Click to comment

Leave a Reply

Your email address will not be published. Required fields are marked *

bangalore

ಇವಳು ಹೆಣ್ಣೋ…ಹೆಮ್ಮಾರಿಯೋ..! ಸಾಕಿದ ನಾಯಿ ಮರಿಯನ್ನೇ ನೆಲಕ್ಕೆ ಬಡಿದು ಸಾಯಿಸಿದ ಕೇರ್ ಟೇಕರ್..!

Published

on

ಬೆಂಗಳೂರು: ಮಹಿಳೆಯೋರ್ವಉ ಎಸಗಿದ  ಕೃತ್ಯ ಬೆಂಗಳೂರಿಗರನ್ನೇ ಬೆಚ್ಚಿ ಬೀಳಿಸಿದೆ. ಮನೆಕೆಲಸದಾಕೆಯೊಬ್ಬಳು ಲಿಫ್ಟ್‌ನಲ್ಲಿ ನಾಯಿಮರಿಯನ್ನು ನೆಲಕ್ಕೆ ಬಡಿದು ಭೀಕರವಾಗಿ ಕೊಲೆ ಮಾಡಿರುವ ದಾರುಣ ಘಟನೆ ಬಾಗಲೂರಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ನಡೆದಿದೆ.

ಅಕ್ಟೋಬರ್ 31ರಂದು ಕೃತ್ಯ ನಡೆದಿದ್ದು, ಮನೆ ಕೆಲಸದಾಕೆ ನಡೆಸಿರುವ ಅಮಾನವೀಯ ಕೃತ್ಯ ಲಿಫ್ಟ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಾಯಿ ನೋಡಿಕೊಳ್ಳಲೆಂದೇ ಪುಷ್ಪಾಲತಾಳನ್ನು ನೇಮಿಸಲಾಗಿತ್ತು. ನಾಯಿ ಸಾಯಿಸಿದ ಬಳಿಕ ಲಿಫ್ಟ್ ಹೊರಗೆ ಹೋಗಿ ಪ್ರಜ್ಞೆ ತಪ್ಪಿ ಬಿತ್ತು ಎಂದು ಮಹಿಳೆ ಕಥೆ ಕಟ್ಟಿದ್ದಳು.

ಈ ಬಗ್ಗೆ ಶ್ವಾನದ ಮಾಲಕಿ ಸೆಕ್ಯೂರಿಟಿ ಬಳಿ ವಿಚಾರಿಸಿದಾಗ ಮಾಹಿತಿ ದೊರಕಿದೆ. ಅನುಮಾನ ಬಂದು ಸಿಸಿಟಿವಿ ಪರಿಶೀಲನೆ ಮಾಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ಈ ಸಂಬಂಧ ಮಹಿಳೆ ವಿರುದ್ಧ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Continue Reading

bangalore

ಪತಿಯನ್ನೇ ಮುಗಿಸಲು ಸಿನಿಮಾ ಸ್ಟೈಲ್ ನಲ್ಲಿ ಸ್ಕೆಚ್ ಹಾಕಿದ ಪತ್ನಿ, ಅಪ್ರಾಪ್ತ ಸೇರಿ ನಾಲ್ವರು ಅರೆಸ್ಟ್

Published

on

ಮೈಸೂರು: ಸಿನಿಮೀಯ ಶೈಲಿಯಲ್ಲಿ ಪ್ಲ್ಯಾನ್ ರೂಪಿಸಿ ಮಹಿಳೆಯೋರ್ವಳು ತಾಳಿ ಕಟ್ಟಿದ ಗಂಡನನ್ನೇ ಮುಗಿಸಲು ಯತ್ನಿಸಿದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ. ಸಂಗೀತಾ ಗಂಡನ ಮುಗಿಸಲು ಪ್ಲಾನ್ ಮಾಡಿದ ಆರೋಪಿ. ಈಕೆ ಪತಿಯ ಜೀವ ತೆಗೆಯಲು ಸಹೋದರರನ್ನೇ ಬಳಸಿಕೊಂಡಿರುವ ಆರೋಪ ಇದೆ.

ಪ್ರಕರಣ ಸಂಬಂಧ ಈಕೆಯ ಸಹೋದರ ಸಂಜಯ್, ಸಹೋದರನ ಸ್ನೇಹಿತ ವಿಘ್ನೇಶ್ ಹಾಗೂ ಓರ್ವ ಅಪ್ರಾಪ್ತ ಸೇರಿ ನಾಲ್ವರನ್ನು ನಂಜನಗೂಡು ಪೊಲೀಸರು ಬಂಧಿಸಿದ್ದಾರೆ. ಸಂಗೀತಾ, ರಾಜೇಂದ್ರ ಎಂಬಾತನನ್ನು ಮದುವೆ ಆಗಿದ್ದಳು. ಇಬ್ಬರ ಸಂಸಾರ ಆರಂಭದಲ್ಲಿ ಚೆನ್ನಾಗಿಯೇ ಇತ್ತು. ಕೆಲವು ತಿಂಗಳುಗಳಿಂದ ಕೌಟುಂಬಿಕ ಕಲಹ ಉಂಟಾಗಿತ್ತು. ಅದೇ ಕಾರಣಕ್ಕೆ ಸಂಗೀತಾ ಗಂಡನ ಮುಗಿಸಲು ಪ್ಲಾನ್ ಮಾಡಿದ್ದಾಳೆ.

ಸಹೋದರನ ಜೊತೆ ಸೇರಿಕೊಂಡು ದರೋಡೆ ಪ್ಲಾನ್ ರೂಪಿಸಿ ಹತ್ಯೆ ಮಾಡಲು ನಿರ್ಧರಿಸಿದ್ದಳು. ಅದರಂತೆ ಅಕ್ಟೋಬರ್ 25 ರಂದು ರಾಜೇಂದ್ರ- ಸಂಗೀತಾ ಸ್ಕೂಟರ್​ನಲ್ಲಿ ತೆರಳುತ್ತಿದ್ದರು. ಸ್ಕೂಟರ್​ನಲ್ಲಿ ಹೋಗ್ತಿದ್ದಾಗ ಪ್ಲಾನ್ ಪ್ರಕಾರವೇ ದರೋಡೆ ಗ್ಯಾಂಗ್ ಎಂಟ್ರಿಯಾಗಿತ್ತು. ಸಂಗೀತಾಳ ಚಿನ್ನದ ಸರ ಕಸಿಯಲು ಪ್ರಯತ್ನಿಸುತ್ತಾರೆ.

ಅದನ್ನು ತಡೆಯಲು ರಾಜೇಂದ್ರ ಮುಂದೆ ಬಂದಿದ್ದಾನೆ. ಆಗ ರಾಜೇಂದ್ರನಿಗೆ ಡ್ರ್ಯಾಗರ್​​ನಿಂದ ಓರ್ವ ಇರಿದಿದ್ದಾನೆ. ನಂತರ ದರೋಡೆ ಗ್ಯಾಂಗ್ ಅಲ್ಲಿಂದ ಪರಾರಿ ಆಗಿತ್ತು. ಘಟನೆಯ ನಂತರ ರಾಜೇಂದ್ರ ನಂಜನಗೂಡು ಪೊಲೀಸರಿಗೆ ಮಾಹಿತಿ ನೀಡಿದ್ದ. ಪ್ರಕರಣವನ್ನು ಕೂಲಂಕುಶವಾಗಿ ತನಿಖೆ ಮಾಡಿದಾಗ ಪೊಲೀಸರಿಗೆ ಒಂದಷ್ಟು ಅನುಮಾನ ಬಂದಿದೆ. ಕೊನೆಗೆ ತಮ್ಮದೇ ಶೈಲಿಯಲ್ಲಿ ಸಂಗೀತಾಳನ್ನ ವಿಚಾರಣೆಗೆ ಒಳಪಡಿಸಿದಾಗ ಅಸಲಿ ಸತ್ಯ ಬೆಳಕಿಗೆ ಬಂದಿದೆ.

 

 

 

Continue Reading

bangalore

ನೆಲಮಂಗಲ ಹೈವೇಯಲ್ಲಿ ಭೀಕರ ಅಪಘಾತ-ಇಬ್ಬರು ಸಾವು, ಮೂವರಿಗೆ ಗಂಭೀರ ಗಾಯ

Published

on

ನೆಲಮಂಗಲ: ತುಮಕೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಕಾರು ಮಧ್ಯೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟ ಘಟನೆ ನೆಲಮಂಗಲ ತಾಲೂಕಿನ ಟಿ.ಬೇಗೂರು ಬಳಿ ನಡೆದಿದೆ. ಗದಗ ಜಿಲ್ಲೆಯ ರೋಣಾದಿಂದ ಬೆಂಗಳೂರಿಗೆ ಮಾರುತಿ ಎರ್ಟಿಗಾ ಕಾರು ಬರುತ್ತಿತ್ತು. ಲಾರಿ ಚಾಲಕ ಸಡನ್ ಬ್ರೇಕ್ ಹಾಕಿದ ಹಿನ್ನೆಲೆಯಲ್ಲಿ ಕಾರು ಹಿಂಬದಿಯಿಂದ ಢಿಕ್ಕಿ ಹೊಡೆದಿದೆ.

ಕಾರಿನಲ್ಲಿದ್ದ ಐವರ ಪೈಕಿ ಇಬ್ಬರು ಸಾವನ್ನಪ್ಪಿ ಮೂವರು ಗಂಭೀರ ಗಾಯಗೊಂಡಿದ್ದಾರೆ. ಶಿವಲಿಂಗ ಗೌಡ(60), ಪ್ರಮೀಳಾ (55) ಮೃತಪಟ್ಟ ದುರ್ದೈವಿಗಳು.

ಕಾರಿನಲ್ಲಿ ಕುಟುಂಬ ಸದಸ್ಯರು ಬೆಂಗಳೂರಿನ ನಾರಾಯಣ ಆಸ್ಪತ್ರೆಗೆ ಬರುತ್ತಿದ್ದರು. ಅದೇ ಸಂದರ್ಭ ಈ ದುರಂತ ನಡೆದಿದೆ. ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page