Connect with us

kerala

ಬಾವಿಗೆ ಬಿದ್ದ ಪತಿಯನ್ನು ರಕ್ಷಿಸಿ ಕಲಿಯುಗದ ಸೀತೆಯಾದ ಪದ್ಮಾ

Published

on

ಕೇರಳ : ಆಕಸ್ಮಿಕವಾಗಿ 40 ಅಡಿ ಆಳದ ಬಾವಿಗೆ ಪತಿಯನ್ನು ಪತ್ನಿಯೊಬ್ಬಾಕೆ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಣೆ ಮಾಡಿದ ಘಟನೆ ಕೇರಳದ ಪಿರವಂನಲ್ಲಿ ನಡೆದಿದೆ.

ಬಾವಿಗೆ ಬಿದ್ದಿದ್ದ ರಮೇಶನ್‌ (64) ಅನ್ನು ಅವರ ಪತ್ನಿ ಪದ್ಮಾ (56) ಕಂಡು ತಕ್ಷಣ ಬಾವಿಗಿಳಿದು ರಕ್ಷಿಸಿದ್ದಾರೆ. ಪತಿ ಬಾವಿಗೆ ಬಿದ್ದಿರುವುದನ್ನು ಕಂಡ ಪದ್ಮ ತಕ್ಷಣ ಹಗ್ಗದ ಸಹಾಯದಿಂದ ಬಾವಿಗೆ ಇಳಿದಿದ್ದು, ಅಗ್ನಿಶಾಮಕ ತಂಡ ಬರುವವರೆಗೂ ಆಕೆ ತನ್ನ ಗಂಡನನ್ನು ಹಿಡಿದು ಎದೆಯ ಆಳದ ನೀರಿನಲ್ಲಿ ಸುಮಾರು 15-20 ನಿಮಿಷಗಳ ಕಾಲ ಇದ್ದರು. ”ಹಗ್ಗವನ್ನು ಬಿಗಿಯಾಗಿ ಹಿಡಿದಿದ್ದರಿಂದ ಆಕೆಯ ಕೈಗಳಿಗೆ ತೀವ್ರ ಪೆಟ್ಟಾಗಿದೆ. ಪತಿಯನ್ನು ರಕ್ಷಿಸುವತ್ತ ಮಾತ್ರ ಆಕೆಯ ಗಮನವಿತ್ತು. ಆಕೆ ತನ್ನ ಗಂಡನನ್ನು ಹಿಡಿದುಕೊಂಡು ಎದೆಯ ಆಳದ ನೀರಿನಲ್ಲಿ ಸುಮಾರು 15-20 ನಿಮಿಷಗಳ ಕಾಲ ರಕ್ಷಣಾ ತಂಡ ಬರುವವರೆಗೂ ನೀರಿನಲ್ಲಿ ತೇಲುತ್ತಿದ್ದರು” ಎಂದು ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : ವಯನಾಡ್ : ಮೂರು ಹುಲಿಗಳ ಶ*ವ ಪತ್ತೆ; ತನಿಖೆಗೆ ಆದೇಶಿಸಿದ ಅರಣ್ಯ ಇಲಾಖೆ

ನೀರಿನಲ್ಲಿಯೇ ಇದ್ದು ತನ್ನ ಪತಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ ಮಹಿಳೆಯ ಧೈರ್ಯವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಆಕೆಯ  ಮತ್ತು ಬುದ್ಧಿವಂತಿಕೆಯಿಂದಾಗಿ ತನ್ನ ಗಂಡನ ಜೀವ ಉಳಿಸಿದ್ದಾಳೆ ಎಂಬ ಶ್ಲಾಘನೆ ವ್ಯಕ್ತವಾಗಿದೆ. ಘಟನೆಯಲ್ಲಿ ದಂಪತಿಗೆ ಯಾವುದೇ ಗಾಯಗಳಾಗಿಲ್ಲ. ಪತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪತ್ನಿ ಕಲಿಯುಗದ ಸಾವಿತ್ರಿ ಎಂದು ಜನ ಕೊಂಡಾಡುತ್ತಿದ್ದಾರೆ.

DAKSHINA KANNADA

ಮಂಗಳೂರು : 9 ವರ್ಷದಿಂದ ತಲೆಮರಿಸಿಕೊಂಡಿದ್ದ ಆರೋಪಿ ಸೆರೆ

Published

on

ಮಂಗಳೂರು: ಕೇರಳದ ಕಾಸರಗೋಡಿನಿಂದ ಮಾದಕ ವಸ್ತುಗಳನ್ನು ತಂದು ಮಂಗಳೂರಿನ ನಂತೂರು ಪರಿಸರದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಕಾಸರಗೋಡು ಜಿಲ್ಲೆಯ ಮೊಗ್ರಾಲ್ ನಿವಾಸಿ ಅಬ್ದುಲ್ ಅಶೀರ್ ಯಾನೆ ಮಾಯ (32) ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ, ಆರೋಪಿಯಿಂದ ನಿಷೇಧಿತ ಮಾದಕ ವಸ್ತು ಎಂಡಿಎಂಎಯನ್ನು ವಶಪಡಿಸಿಕೊಂಡಿದ್ದಾರೆ.

ಸುಮಾರು ವರ್ಷಗಳಿಂದ ತಲೆಮರೆಸಿ ಕೊಂಡಿದ್ದ ಆರೋಪಿ ಭೂಗತ ಪಾತಕಿ ಕಲಿ ಯೋಗೀಶನು ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಇದಿಗ ಆತ ವಿದೇಶದಲ್ಲಿ ತಲೆಮರಿಸಿಕೊಮಡಿದ್ದು, ಬಂಧಿತ ಆರೋಪಿ ಯೋಗೀಶನ ಸಹಚರ ಎಂದು ತಿಳಿದು ಬಂದಿದೆ. ಸುಮಾರು 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೊಪಿಯನ್ನು ಪೊಲಿಸರು ಬಂಧಿಸಿ, ಆತನಿಂದ 5 ಲಕ್ಷ ರೂ.ಮೌಲ್ಯದ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.

ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ನೇತೃತ್ವದಲ್ಲಿ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕ ರಫೀಕ್ ಕೆ.ಎಂ., ಎಸ್ಸೈಗಳಾದ ಶರಣಪ್ಪ ಭಂಡಾರಿ, ಸುದೀಪ್ ಎಂ.ವಿ, ನರೇಂದ್ರ ಹಾಗೂ ಎಸ್ಸೈಗಳಾದ ಮೋಹನ್ ಕೆ.ವಿ., ರಾಮ ಪೂಜಾರಿ, ಶೀನಪ್ಪ, ಸುಜನ್ ಶೆಟ್ಟಿ ಮತ್ತು ಸಿಸಿಬಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Continue Reading

kerala

ಕಾಸರಗೋಡು: ಕೊನೆಯ ಹಂತದಲ್ಲಿದೆ ಮಧೂರು ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಿದ್ಧತೆ

Published

on

ಕಾಸರಗೋಡು: ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ವರುಷ ಹಲವಾರು ದೇವಸ್ಥಾನಗಳಲ್ಲಿ ಬ್ರಹ್ಮಕಲಶೋತ್ಸವವು ನಡೆಯುತ್ತಿದ್ದು, ಇದೀಗ ಕಾಸರಗೋಡಿನ ಮಧುವಾಹಿನಿ ನದಿಯ ತಟದಲ್ಲಿರುವ ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ 33 ವರ್ಷಗಳ ಬಳಿಕ ಬ್ರಹ್ಮಕಲಶೋತ್ಸವವು ನಡೆಯಲಿದೆ. ಮಾ.27 ರಿಂದ ಎ.7ರ ವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ ನಡೆಯಲಿದ್ದು, ಇದರ ಪೂರ್ವ ಸಿದ್ಧತೆಗಳು ಅಂತಿಮ ಹಂತದಲ್ಲಿವೆ.

ಮೂಡು ಗೋಪುರಕ್ಕೆ ಗ್ರಾನೈಟ್ ಹಾಸಲಾಗಿದೆ. ಮುರುಡೇಶ್ವರದ ಶಂಕರ್ ಮತ್ತು ಬಳಗ ಅತ್ಯಾಕರ್ಷಕವಾಗಿ ಕೆತ್ತನೆ ಕೆಲಸ ನಿರ್ವಹಿಸಿದ್ದು, ಕಾಷ್ಠ ಶಿಲ್ಪವನ್ನು ಮೂಡುಬಿದಿರೆ ಸಂಪಿಗೆಯ ನಾರಾಯಣ ಆಚಾರ್ಯ ಮತ್ತು ಅವರ ಪುತ್ರ ಹರೀಶ ಆಚಾರ್ಯ ಮಾಡಿದ್ದಾರೆ. ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ದೇಗುಲದ ನವೀಕರಣ ಕಾಮಗಾರಿ ನಡೆದಿದ್ದು, ರಾಜಾಂಗಣ, ಹೊರಾಂಗಣದ ಕಾಮಗಾರಿಗಳು ಸಂಪೂರ್ಣಗೊಂಡಿವೆ. ಗಣಪತಿ ನಡೆ, ಶಿವನ ನಡೆ, ದುರ್ಗಾ ಗುಡಿ, ಸುತ್ತು ಪೌಳಿಗೆ ಕೆಂಪುಕಲ್ಲು ಹಾಸಲಾಗಿದೆ. ನೂತನವಾಗಿ ಕಗ್ಗಲ್ಲಿನಿಂದ ನಿರ್ಮಾಣಗೊಂಡ ಕೆತ್ತನೆ ಕೆಲಸದ ಕಂಬಗಳು, ಕಾಷ್ಠ ಶಿಲ್ಪಗಳು ಆಕರ್ಷಿಸುತ್ತಿವೆ.

ಅನ್ನಛತ್ರ, ಉಗ್ರಾಣ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ, ಸಭಾ ಕಾರ್ಯಕ್ರಮಕ್ಕೆ ವೇದಿಕೆ, ಕಾರ್ಯಾಲಯ ಇತ್ಯಾದಿಗಳ ಕಾರ್ಯ ಪ್ರಗತಿಯಲ್ಲಿದೆ. ವಾಹನ ಪಾರ್ಕಿಂಗ್‌ಗೂ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ. 2-3 ತಿಂಗಳುಗಳಿಂದ ಮಕ್ಕಳು, ಮಹಿಳೆಯರು ಸಹಿತ ಎಲ್ಲರೂ ರಾತ್ರಿ ಹಗಲೆನ್ನದೆ ಕರ ಸೇವೆಯಲ್ಲಿ ನಿರತರಾಗಿದ್ದಾರೆ. ದೇವಸ್ಥಾನದ ಪರಿಸರದಲ್ಲಿ ಚಪ್ಪರದ ಕಾರ್ಯ ನಡೆಯುತ್ತಿದೆ. ಈ ಬಾರಿ ಮಧೂರು ದೇವಾಲಯದ ಅಷ್ಟಬಂದ ಬ್ರಹ್ಮಕಲಶೋತ್ಸವವು ಒಂದು ಇತಿಹಾಸ ಸೃಷ್ಠಿಗೆ ಕಾರಣವಾಗಲಿದೆ.

Continue Reading

kerala

45 ವರ್ಷದ ಆಟೋ ಚಾಲಕನ ಜೊತೆ ನಾಪತ್ತೆಯಾಗಿದ್ದ 15 ವರ್ಷದ ವಿದ್ಯಾರ್ಥಿನಿ ಶವವಾಗಿ ಪತ್ತೆ…!

Published

on

ಕಾಸರಗೋಡು : ಇತ್ತೀಚಿಗೆ ಅಟೋ ಚಾಲಕನ ಜೊತೆ ಅಪ್ರಾಪ್ತ ವಿದ್ಯಾರ್ಥಿನಿ ನಾಪತ್ತೆಯಾಗಿರುವ ಘಟನೆ ಕಾಸರಗೋಡಿನಲ್ಲಿ ನಡೆದಿತ್ತು. ಈ ಜೋಡಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇದೀಗ ಅಚ್ಚರಿಯೆಂಬಂತೆ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ.

ಕೇರಳದ ಕಾಸರಗೋಡು ಜಿಲ್ಲೆಯ ಮಂಡೆಕಾಪು ಗ್ರಾಮದ ಸಮೀಪ 15 ವರ್ಷದ ವಿದ್ಯಾರ್ಥಿನಿ ಮತ್ತು ಆಟೋ ಚಾಲಕ ಪ್ರದೀಪ್(42) ಶವ ಪತ್ತೆಯಾಗಿದೆ. ಪ್ರದೀಪ್‌ನ ಮನೆಯಿಂದ ಅರ್ಧ ಕಿ. ಮೀ ದೂರದ ಕಾಡಿನಲ್ಲಿ ಆದಿತ್ಯವಾರ ಬೆಳಿಗ್ಗೆ 10.30 ರ ವೇಳೆಗೆ ಮೃತದೇಹ ಪತ್ತೆಯಾಗಿದೆ.

ಫೆಬ್ರವರಿ 11ರಂದು ರಾತ್ರಿ ಪ್ರದೀಪ್ ಮತ್ತು ಅಪ್ರಾಪ್ತ ವಿದ್ಯಾರ್ಥಿನಿ ನಾಪತ್ತೆಯಾಗಿದ್ದು ಕುಂಬಳೆ ಪೊಲೀಸರಿಗೆ ಬಾಲಕಿಯ ತಾಯಿ ದೂರು ನೀಡಿದ್ದರು. ಇದರ ಆಧಾರದಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದರು ಆದರೆ ಅವರು ಪತ್ತೆಯಾಗಿರಲಿಲ್ಲ. ಪೋಷಕರು ಹೈಕೋರ್ಟ್ ಮೊರೆ ಹೋಗಿ ಹೇಬಿಯಸ್ ಕಾರ್ಪಸ್‌ಗೆ ಅರ್ಜಿ ಸಲ್ಲಿಸಿದ್ದರು. ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಹುಡುಕಾಟ ನಡೆಸಿದಾಗ ಆಕೆಶಿಯಾ ಅರಣ್ಯದಲ್ಲಿ ಒಂದೇ ಮರಕ್ಕೆ ಪ್ಲಾಸ್ಟಿಕ್ ಹಗ್ಗದಿಂದ ನೇಣು ಬಗಿದ ಸ್ಥಿತಿಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿವೆ. ಈ ಸಾವಿನ ಹಿಂದಿನ ಕಾರಣ ನಿಗೂಢವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page