Connect with us

DAKSHINA KANNADA

ಮಂಗಳೂರು ನಗರಕ್ಕೂ ವ್ಯಾಪಿಸಿದ ಪಚ್ಚನಾಡಿ ಬೆಂಕಿಯ ಸುಟ್ಟ ಘಾಟು ವಾಸನೆ : ಕೆಮ್ಮು,ದಮ್ಮು,ಕಣ್ಣುರಿಯಿಂದ ಜನ ಹೈರಾಣು..!

Published

on

ಈ ನರಕ ಸದೃಶ ಜೀವನದಲ್ಲಿ ಬದುಕಲು ಸಾಧ್ಯವಿಲ್ಲ. ಯಾವ ಜನಪ್ರತಿನಿಧಿಗಳು ನಮ್ಮಲ್ಲಿಗೆ ಬಂದಿಲ್ಲ‌. ಪಾಲಿಕೆ ಅಧಿಕಾರಿಗಳೂ, ಜನಪ್ರತಿನಿಧಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲವೆಂದು ಅಳಲು ತೋಡಿಕೊಂಡಿದ್ದಾರೆ. ನಮ್ಮ ಬದುಕು ನರಕವಾಗಿದೆ. ನಮಗೆ ಇಂತಹ ಜೀವನದಿಂದ ಒಂದು ಸಲ ಮುಕ್ತಿ ಕೊಡಿ ಹೊಗೆಯ ಬೇಗೆಯಲ್ಲಿ ಬೆಂದ ಸಂತ್ರಸ್ಥಳ ಅಳಲು.
ಮಂಗಳೂರು : ಕಳೆದ ಶುಕ್ರವಾರ ಮಂಗಳುರು ಮಹಾನಗರ ಪಾಲಿಕೆಯ ಪಚ್ಚನಾಡಿ ಡಂಪಿಂಗ್ ಯಾರ್ಡ್‌ಗೆ ಬಿದ್ದಿರುವ ಬೆಂಕಿ ಇನ್ನೂ ಆರಿಲ್ಲ ಬದಲಾಗಿ ಸಮಸ್ಯೆ ಇನ್ನೂ ತೀವ್ರಗೊಂಡಿದ್ದು. ಬೆಂಕಿ ಬಿದ್ದ ಪ್ರದೇಶದಿಂದ ಹೊಗೆ ಮುಗಿಲೆತ್ತರಕ್ಕೆ ಏರುತ್ತಲೇ ಇದೆ.   

ವಿಷಮಯವಾಗಿರುವ ಹೊಗೆ ಪರಿಸರ ಇಡೀ ವ್ಯಾಪಿಸಿ ಇದೀಗ ಮಂಗಳೂರು ನಗರ ಪ್ರದೇಶಕ್ಕೂ ಹರಡತೊಡಗಿದೆ.

ವಿಷಮಯ ಹೊಗೆಯಿಂದ ಜರರಲ್ಲಿ ಕೆಮ್ಮು, ದಮ್ಮು, ಕಣ್ಣುರಿ ಯಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಜನರನ್ನು ಕಾಡತೊಡಗಿದೆ.

ಮಂಗಳೂರು ಪಾಲಿಕೆಯ ಬೇಜಾಬ್ದಾರಿ ಮತ್ತು ನಿರ್ಲಕ್ಷಕ್ಕೆ ಪಚ್ಚನಾಡಿ ಮತ್ತು ಆಸುಪಾಸಿನ ಜನತೆ ಬೆಲೆ ತೆರಬೇಕಾಗಿ ಬಂದಿದೆ.

ಬೀಸುವ ಗಾಳಿಗೆ ವಿಷಗಾಳಿ ಮಂಗಳೂರು ನಗರದ ಮೇರಿಹಿಲ್, ವಾಮಾಂಜೂರು, ಯೆಯ್ಯಾಡಿ ಪ್ರದೇಶಗಳಿಗೆ ಪಸರಿಸುತ್ತಿದ್ದು ಕಣ್ಣುರಿ, ಉಸಿರಾಟದ ಸಮಸ್ಯೆ, ಗಂಟಲು ಕಟ್ಟುವ ಸಮಸ್ಯೆಯಿಂದ ಬಳಲುತ್ತಿದ್ದಾರೆ.ಅದರಲ್ಲೂ ಅಸ್ತಮ ಮತ್ತು ಹಿರಿಯ ನಾಗರಿಗ ಯಾತನೆಯಂತೂ ಹೇಳ ತೀರದಾಗಿದೆ.

ಈ ಸಮಸ್ಯೆ ಜನರ ಆರೋಗ್ಯದ ಪರಿಣಾಮ ಬೀರುತ್ತಿದ್ದು, ಎಲ್ಲರೂ ವೈದ್ಯರಲ್ಲಿಗೆ ಧಾವಿಸುತ್ತಿದ್ದಾರೆ. ಕೆಲವರು ಮನೆಯನ್ನೇ ತೊರೆದು ಬೇರೆಡೆಗೆ ಹೋಗಿದ್ದಾರೆ.

ಸಮೀಪದಲ್ಲಿಯೇ ಮಂಗಳಜ್ಯೋತಿ ಶಾಲೆಯಿದ್ದು, ಇಲ್ಲಿನ ವಿದ್ಯಾರ್ಥಿಗಳು ಕಣ್ಣುರಿ, ದಮ್ಮು, ಕೆಮ್ಮು ಅನುಭವಿಸಿ ಪಾಠ ಕೇಳುತ್ತಿದ್ದಾರೆ. ಈ ನರಕ ಸದೃಶ ಜೀವನದಲ್ಲಿ ಬದುಕಲು ಸಾಧ್ಯವಿಲ್ಲ.

ಯಾವ ಜನಪ್ರತಿನಿಧಿಗಳು ನಮ್ಮಲ್ಲಿಗೆ ಬಂದಿಲ್ಲ‌. ಪಾಲಿಕೆ ಅಧಿಕಾರಿಗಳೂ, ಜನಪ್ರತಿನಿಧಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲವೆಂದು ಅಳಲು ತೋಡಿಕೊಂಡಿದ್ದಾರೆ.

ನಮ್ಮ ಬದುಕು ನರಕವಾಗಿದೆ. ನಮಗೆ ಇಂತಹ ಜೀವನದಿಂದ ಒಂದು ಸಲ ಮುಕ್ತಿ ಕೊಡಿ ಹೊಗೆಯ ಬೇಗೆಯಲ್ಲಿ ಬೆಂದ ಸಂತ್ರಸ್ಥಳ ಅಳಲು.

ಖಂಡಿತಾ ಇದು ತನ್ನಷ್ಟಕ್ಕೆ ಸೃಷ್ಟಿಯಾಗುವ ಬೆಂಕಿಯಲ್ಲ. ತ್ಯಾಜ್ಯ ರಾಶಿ ಹೆಚ್ಚಾದಾಗ ಡಂಪಿಂಗ್ ಯಾರ್ಡ್‌ನವರೇ ತ್ಯಾಜ್ಯಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಸ್ಥಳಿಯರು ಆರೋಪಿಸಿದ್ದು ಅವರ ಮೇಲೆ ಕೇಸು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

DAKSHINA KANNADA

ಸುರತ್ಕಲ್-ನಂತೂರು ಜಂಕ್ಷನ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗಮಿತಿ ನಿಗದಿ

Published

on

ಮಂಗಳೂರು: ಕರಾವಳಿ ಭಾಗದಲ್ಲಿ ಮಳೆ ತೀವ್ರವಾಗಿದ್ದು, ಈ ಹಿನ್ನೆಲೆಯಲ್ಲಿ ಸುರತ್ಕಲ್-ನಂತೂರು ಜಂಕ್ಷನ್‌ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗಮಿತಿಯನ್ನು ಗಂಟೆಗೆ 50 ಕಿಲೋ ಮೀಟರ್‌ ಗೆ ನಿಗದಿಪಡಿಸಲಾಗಿದೆ. ಈ ಮಿತಿ ಸಪ್ಟೆಂಬರ್‌ ಅಂತ್ಯದ ವರೆಗೆ ಚಾಲ್ತಿಯಲ್ಲಿ ಇರಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.

ಅತಿವೃಷ್ಟಿಯಿಂದಾಗಿ ರಾಷ್ಟ್ರೀಯ ಹೆದ್ದಾರಿಯ ಹಲವು ಭಾಗಗಳು ಕೆಟ್ಟು ಹೋಗಿವೆ. ಹಾಗಾಗಿ ಅಂತಹ ಭಾಗಗಳು ಅತಿ ವೇಗದ ಚಾಲನೆಗೆ ಸುರಕ್ಷಿತವಾಗಿಲ್ಲ. ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು ಸಾಧ್ಯವಾದಷ್ಟು ಎಲ್ಲೆಲ್ಲಿ ಸರ್ವೀಸ್‌ ರಸ್ತೆಗಳಿವೆಯೋ ಅಲ್ಲಿ ಅದನ್ನೇ ಬಳಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಚಿಸಿದೆ.

ಇದನ್ನೂ ಓದಿ: ಭಾರೀ ಮಳೆಗೆ ಕದ್ರಿ ಕೈಬಟ್ಟಲ್ ಪರಿಸರದಲ್ಲಿ ಮನೆ ಮೇಲೆ ಗುಡ್ಡ ಕುಸಿತ

ಸುರತ್ಕಲ್‌- ನಂತೂರು ನಡುವಣ ಹೆದ್ದಾರಿ ಕೆಟ್ಟು ಹೋಗಿದ್ದು, ಘನ ವಾಹನ, ಲಘುವಾಹನ, ದ್ವಿಚಕ್ರ, ತ್ರಿಚಕ್ರ ಸೇರಿದಂತೆ ಎಲ್ಲಾ ವಾಹನಗಳು ಈ ಹೆದ್ದಾರಿಯನ್ನೇ ಬಳಸುತ್ತಿವೆ. ಕೆಲವೊಮ್ಮೆ ಹೊಂಡ ತಪ್ಪಿಸಲು ವಾಹನಗಳು ಅಡ್ಡಾದಿಡ್ಡಿ ಸಂಚರಿಸಿ ಅಪಘಾತಕ್ಕೆ ಕಾರಣವಾಗುತ್ತಿವೆ.

ಈ ಕಾರಣಕ್ಕಾಗಿ ಸರ್ವೀಸ್‌ ರಸ್ತೆ ಇರುವ ಪಣಂಬೂರು, ಸುರತ್ಕಲ್‌, ಬೈಕಂಪಾಡಿ, ಕೂಳೂರು ಭಾಗಗಳಲ್ಲಿ ಈ ಸರ್ವೀಸ್‌ ರಸ್ತೆಯನ್ನೇ ಬಳಸಿ ದ್ವಿಚಕ್ರ ವಾಹನಗಳು ಸಂಚರಿಸುವುದು ಸೂಕ್ತ ಎಂದು ಎನ್ಎಚ್ಎಐ ಅಧಿಕಾರಿಗಳು ತಿಳಿಸಿದ್ದಾರೆ.

Continue Reading

DAKSHINA KANNADA

ಭಾರೀ ಮಳೆಗೆ ಕದ್ರಿ ಕೈಬಟ್ಟಲ್ ಪರಿಸರದಲ್ಲಿ ಮನೆ ಮೇಲೆ ಗುಡ್ಡ ಕುಸಿತ

Published

on

ಮಂಗಳೂರಿನಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಹಲವು ಕಡೆಗಳಲ್ಲಿ ಅಪಾರ ಹಾನಿಗೂ ಕಾರಣವಾಗಿದೆ. ನಗರದ ಕದ್ರಿ ಕೈಬಟ್ಟಲ್ ಎಂಬಲ್ಲಿ ಮನೆಯ ಒಂದು ಭಾಗ ಕುಸಿತಕ್ಕೊಳಗಾಗಿದೆ.

ಇದನ್ನೂ ಓದಿ: ಇಸ್ರೇಲ್-ಇರಾನ್ ಸಂಘರ್ಷ: ಅಡುಗೆ ಎಣ್ಣೆ ಬೆಲೆ 3-4ರೂ. ದಿಢೀರ್ ಹೆಚ್ಚಳ

ಉಷಾ ಅಶೋಕ್ ಎಂಬವರಿಗೆ ಸೇರಿದ ಮನೆ ಇದಾಗಿದ್ದು, ಮನೆಯ ಅಡುಗೆ ಕೋಣೆಯಲ್ಲಿ ಗೋಡೆ ಕುಸಿತಕ್ಕೊಳಗಾಗಿದೆ. ಮನೆಯ ಹಲವು ಸಾಮಾಗ್ರಿಗೆ ಹಾನಿ ಉಂಟಾಗಿದೆ.

ಮನೆಯಲ್ಲಿ ಜನರಿದ್ದ ವೇಳೆ ಅಡುಗೆ ಕೋಣೆಯಲ್ಲಿ ಗೋಡೆ ಕುಸಿತವಾಗಿದ್ದರೂ ಮನೆ ಮಂದಿ ಪ್ರಾಣಾಪಾಯದಿಂದ ಪಾರು ಆಗಿದ್ದಾರೆ.

Continue Reading

DAKSHINA KANNADA

ಪುತ್ತೂರು: 7 ತಿಂಗಳ ಗರ್ಭಿಣಿ ಆತ್ಮ*ಹತ್ಯೆ

Published

on

ಪುತ್ತೂರು: 7 ತಿಂಗಳ ಗರ್ಭಿಣಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಚಿಕ್ಕಪುತ್ತೂರಿನಲ್ಲಿ ನಡೆದಿದೆ.

 

ರೇಶ್ಮಾ(28) ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದು ಬಂದಿದೆ. ಸುರತ್ಕಲ್ ಮೂಲದ ರೇಶ್ಮಾ ನಾಲ್ಕು ವರ್ಷಗಳ ಹಿಂದೆಯಷ್ಟೇ ಚಿಂತನ್ ಅವರೊಂದಿಗೆ ವಿವಾಹವಾಗಿದ್ದರು. ಅಲ್ಲದೇ ಈ ದಂಪತಿಗೆ ಓರ್ವ ಪುತ್ರಿಯೂ ಇದ್ದಾಳೆ. ಏಳು ತಿಂಗಳ ಗರ್ಭಿಣಿ ಆಗಿದ್ದ ಈಕೆ ತಾವು ವಾಸವಿದ್ದ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

READ IN ENGLISH : https://www.nammakudlaenglish.com/puttur-7-month-pregnant-woman-dies-by-suicide/

ಇದನ್ನೂ ಓದಿ: ಬೈಕಂಪಾಡಿಯಲ್ಲಿ ರಸ್ತೆಗೆ ಉರುಳಿದ ಮರ; ತಪ್ಪಿದ ಅನಾಹುತ

ವಿಷಯ ತಿಳಿಯುತ್ತಿದ್ದಂತೆಯೇ ಪುತ್ತೂರು ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

Continue Reading
Advertisement

Trending

Copyright © 2025 Namma Kudla News

You cannot copy content of this page