Connect with us

ಮುಂಬೈ-ಚೆನೈಯ 80 ಕ್ಕೂ ಅಧಿಕ ಪತ್ರಕರ್ತರಲ್ಲಿ ಕೊರೊನಾ ಪಾಸಿಟಿವ್..!

Published

on

 ಮುಂಬೈ-ಚೆನೈಯ 80 ಕ್ಕೂ ಅಧಿಕ ಪತ್ರಕರ್ತರಲ್ಲಿ ಕೊರೊನಾ ಪಾಸಿಟಿವ್..!

ಮುಂಬೈ: ದಿನ ಬೆಳಗಾದರೆ ಜನರಿಗೆ ಸುದ್ದಿ ನೀಡುವ ಧಾವಂತದಲ್ಲಿದ್ದ ಪತ್ರಕರ್ತರನ್ನು ಕೂಡ ಕೊರೊನಾ ಬಿಟ್ಟಿಲ್ಲ.

ಮುಂಬೈ ಮತ್ತು ತಮಿಳು ನಾಡಿನ 80ಕ್ಕೂ ಹೆಚ್ಚು ಪತ್ರಕರ್ತರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ ಎಂಬ ಅಘಾತಕಾರಿ ಅಂಶ ಬಯಲಾಗಿದೆ. 

ಟಿವಿ ವಾಹಿನಿಯ ವರದಿಗಾರರು, ಕ್ಯಾಮೆರಾಮೆನ್‌ಗಳು, ವಾಹಿನಿಯ ಕ್ಯಾಬ್‌ ಚಾಲಕರು, ಫೊಟೋಗ್ರಾಫ್‌ಗಳೂ ಇದರಲ್ಲಿ ಸೇರಿದ್ದಾರೆ.

170 ಜನರ ತಪಾಸಣೆಯಲ್ಲಿ ಸದ್ಯ 53 ಪತ್ರಕರ್ತರ ಟೆಸ್ಟ್ ಪಾಸಿಟಿವ್ ಬಂದಿದ್ದು, ಇನ್ನೂ ಈ ಸಂಖ್ಯೆ ಹೆಚ್ಚಳವಾಗಲಿದೆ ಎಂದು ವರದಿಗಳು ತಿಳಿಸಿವೆ.

ಕೊರೊನಾ ವೈರಸ್ ಹಿನ್ನಲೆ ಇತ್ತ ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಯಾವುದೇ ಪ್ರೆಸ್ ಮೀಟ್ ಮಾಡದಂತೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮನವಿ ಮಾಡಿದ್ದಾರೆ.

ಕೊರೊನಾ ಮಹಾಮಾರಿ ವಿಶ್ವವನ್ನೇ ತಲ್ಲಣಗೊಳಿಸಿದೆ. ಭಾರತದಲ್ಲೂ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ಪತ್ರಕರ್ತರು ಗಂಭೀರವಾಗಿ ಪರಿಗಣಿಸಬೇಕಿದೆ.

ಪತ್ರಕರ್ತರು ಕೊರೊನಾ ಜಾಗೃತಿ ಮೂಡಿಸಲು ಮತ್ತು ಸುದ್ದಿಯ ಧಾವಂತದಲ್ಲಿ ಜೀವದ ಹಂಗು ತೊರೆದು ದುಡಿಯುತ್ತಿದ್ದಾರೆ.

ಇದರ ಪರಿಣಾಮ ಜನರಲ್ಲಿ ದೊಡ್ಡ ಮಟ್ಟದಲ್ಲಿ ಜಾಗೃತಿ ಮೂಡಿರುವುದು ಒಪ್ಪತಕ್ಕಂತಹ ಸತ್ಯ. ಅದೇ ರೀತಿ ಪತ್ರಕರ್ತರು ತಮ್ಮ ಬಗ್ಗೆಯೂ ಎಚ್ಚರ ವಹಿಸಬೇಕಾಗಿದೆ.

ಮುಂಬಯಿಯಲ್ಲಿ 6 ಮಂದಿ ಪತ್ರಕರ್ತರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಮಧ್ಯಪ್ರದೇಶದಲ್ಲಿ ಪತ್ರಕರ್ತರೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು, ಕಾಸರಗೋಡಿನಲ್ಲೂ ಪತ್ರಕರ್ತರು ತೀವ್ರ ನಿಗಾದಲ್ಲಿದ್ದದ್ದು ನಮಗೆ ನಿದರ್ಶನ.

ಇನ್ನು ಪಕ್ಕದ ತಮಿಳುನಾಡಿನಲ್ಲೂ 27 ಮಂದಿ ದಸುದ್ದಿ ವಾಹಿನಿಯ ಪತ್ರಕರ್ತರಿಗೆ ಕೊರೊನಾ ಪಾಸಿಟಿವ್ ಸೋಂಕು ಧೃಡಪಟ್ಟಿದೆ. ಇನ್ನು ಉಳಿದ 92 ಮಂದಿ ಪತ್ರಕರ್ತರ ಗಂಟಲ ದ್ರವವನ್ನು ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ. ದೇಶದ ಅನೇಕ ಭಾಗಗಳಲ್ಲಿ ಪತ್ರಕರ್ತರಲ್ಲಿ ಕೊರೊನಾ ಸೋಂಕು ಹಬ್ಬುತ್ತಿರುವುದಕ್ಕೆ ಸಂವಿಂಧಾನದ ನಾಲ್ಕನೇ ಅಂಗವಾದ ಪತ್ರಿಕೋದ್ಯಮ ಅತಂಕದ ಕ್ಷಣಗಳನ್ನು ಎದುರಿಸುತ್ತದೆ,

ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರು ಹೆಚ್ಚು ಜಾಗರೂಕರಾಗಬೇಕಾಗಿದೆ. ಇದಕ್ಕಾಗಿ ಜಿಲ್ಲಾಡಳಿತ, ಜನಪ್ರತಿನಿಧಿಗಳಲ್ಲಿ ಮೇ 3 ಲಾಕ್‌ಡೌನ್ ಮುಗಿಯುವವರೆಗೆ ಪತ್ರಿಕಾಗೋಷ್ಠಿ ನಡೆಸದಿರುವಂತೆ ಮನವಿ ಮಾಡಲಾಗಿದೆ.

ಯಾವುದೇ ಸೂಚನೆ ನೀಡುವುದಿದ್ದರೂ ವಿಡಿಯೋ ಸಂದೇಶ, ಪತ್ರಿಕಾ ಪ್ರಕಟಣೆ ನೀಡಬೇಕೆಂದು ಆಗ್ರಹಿಸಲಾಗಿದೆ.

ಇದಕ್ಕೆ ಎಲ್ಲ ಪತ್ರಕರ್ತರ ಸಹಕಾರ ಅಗತ್ಯವಾಗಿದೆ. ನಿಮ್ಮ ಸಲಹೆ ಸೂಚನೆಗಳು ಇದ್ದಲ್ಲಿ ಕೂಡಲೇ ತಿಳಿಸಿ ಅಂತ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ನಾಯಕ್ ಇಂದಾಜೆ ತಿಳಿಸಿದ್ದಾರೆ.

ವಿಡಿಯೋಗಾಗಿ..

Advertisement
Click to comment

Leave a Reply

Your email address will not be published. Required fields are marked *

bangalore

6 ತಿಂಗಳಿನಿಂದ ಒಂದೇ ಮನೆಗೆ ಸ್ಕೆಚ್, 3.5 ಕೋಟಿ ಮೌಲ್ಯದ ಚಿನ್ನ ಎಗರಿಸಿದ ಯುವಕ ಅರೆಸ್ಟ್

Published

on

ಬೆಂಗಳೂರು: ಮನೆಯವರು ಅಮೇರಿಕಾದಲ್ಲಿ ಇರುವುದನ್ನು ಖಚಿತಪಡಿಸಿಕೊಂಡ  ಕಳ್ಳನೋರ್ವ ಸುಮಾರು 3.5 ಕೋಟಿ ಮೌಲ್ಯದ ಚಿನ್ನ ಎಗರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸಿನಿಮೀಯ ಶೈಲಿಯಲ್ಲಿಕಳ್ಳತನಗೈದ ರಾಜಸ್ಥಾನ ಮೂಲದ ವೇಲಾರಾಮ್ (19) ಬಂಧಿತ ಆರೋಪಿ. ನಿರ್ಮಾಣ ಹಂತದ ಕಟ್ಟಡದಲ್ಲಿ ಟೈಲ್ಸ್ ಕಟ್ ಮಾಡುತ್ತಿದ್ದ ವೇಲಾರಾಮ್ ಪಕ್ಕದ ಮನೆಯಲ್ಲಿ ಯಾರೂ ಇಲ್ಲದನ್ನ ಗಮನಿಸಿದ್ದ. ದಂಪತಿ ಅಮೇರಿಕಾದಲ್ಲಿ ಸೆಟಲ್ ಆಗಿರೋದನ್ನು ಖಚಿತಪಡಿಸಿಕೊಂಡು  ಬರೋಬ್ಬರಿ ಆರು ತಿಂಗಳು ಸ್ಕೆಚ್ ಹಾಕಿ ಒಮ್ಮೆಗೆ 3 ಕೋಟಿ ಬೆಲೆಬಾಳುವ ಚಿನ್ನಾಭರಣ ಕಳ್ಳತನ ಮಾಡಿದ್ದ.

ಲಾಕರ್ ಓಪನ್ ಮಾಡಿ 1.8 ಕೆಜಿಯ ಚಿನ್ನಾಭರಣ, ಡೈಮಂಡ್ ಹಾಗೂ ನಗದು ಎಲ್ಲವನ್ನು ದೋಚಿಕೊಂಡು ಹೋಗಿದ್ದ. ನಿರೀಕ್ಷೆಗಿಂತ ಹೆಚ್ಚು ಪ್ರಮಾಣದಲ್ಲಿ ಚಿನ್ನಾಭರಣ ಸಿಕ್ಕ ಖುಷಿಗೆ ಯಾರಿಗೂ ಹೇಳದೆ ಕೇಳದೆ ನೇರವಾಗಿ ರಾಜಸ್ಥಾನಕ್ಕೆ ಚಿನ್ನಾಭರಣ ಕೊಂಡೊಯ್ದು, ಮನೆಯಲ್ಲಿ ಬಚ್ಚಿಟ್ಟಿದ್ದ.

ಮನೆಯ ಸಿಸಿಟಿವಿಯನ್ನ ಅಮೆರಿಕದಲ್ಲಿದ್ದ ದಂಪತಿ ಮೊಬೈಲ್ ನಲ್ಲಿ ಪರಿಶೀಲಿಸಿದ ಸಂದರ್ಭ ಕೃತ್ಯ ಬೆಳಕಿಗೆ ಬಂದಿದ್ದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ಸಿಸಿಟಿವಿ ಆಧರಿಸಿ ಆರೋಪಿ ವೇಲಾರಾಮ್‌ ನನ್ನ ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.

Continue Reading

LATEST NEWS

ಸೆಕೆ ತಾಳಲಾರದೆ ತಂಪಾಗಲು ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು!

Published

on

ಹುಬ್ಬಳ್ಳಿ: ಇಬ್ಬರು ಕಾಲೇಜು ವಿದ್ಯಾರ್ಥಿಗಳು ಈಜಲು ಹೋಗಿ ನೀರಿನ ಗುಂಡಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಹೊರವಲಯದಲ್ಲಿ ನಡೆದಿದೆ.


ಮೃತಪಟ್ಟ ವಿದ್ಯಾರ್ಥಿಗಳನ್ನು ಸಮರ್ಥ್ ಮತ್ತು ಹರೀಶ್ ಎಂದು ಗುರುತಿಸಲಾಗಿದೆ. ಇವರಿಬ್ಬರು ಗೋಪನಕೊಪ್ಪದ ಸರ್ಕಾರಿ ಪದವಪೂರ್ವ ಕಾಲೇಜಿನಲ್ಲಿ ಕಾಮರ್ಸ್ ವಿಭಾಗದಲ್ಲಿ ವಿದ್ಯಾರ್ಥಿಗಳು, ಪ್ರಥಮ ಪಿಯುಸಿ ಪರೀಕ್ಷೆ ಮುಗಿದಿರುವ ಕಾರಣ ಮನೆಯಲ್ಲಿದ್ದರು ಎನ್ನಲಾಗಿದೆ.

ಬೇಸಿಗೆಯ ಸೆಕೆ ತಾಳಲಾರದೆ ತಂಪಾಗಲು ಇಬ್ಬರು ಸ್ನೇಹಿತರು ಮನೆ ಸಮೀಪ ಇರುವ ನಿರ್ಮಾಣ ಹಂತದ RNS ಗಾಲ್ಫ್​​ ಮೈದಾನದಲ್ಲಿರೋ ಹೊಂಡಕ್ಕೆ ಈಜಲು ತೆರಳಿದ್ದರು. ಮಧ್ಯಾಹ್ನ ಮನೆಯಿಂದ ಹೋದವರು, ಸಂಜೆಯಾದರೂ ಮನೆಗೆ ಮರುಳಲಿಲ್ಲ. ಆ ವೇಳೆ ಇಬ್ಬರು ಹೊಂಡದಲ್ಲಿ ಬಿದ್ದಿರೋದನ್ನು ಗಮನಿಸಿದ ಅಲ್ಲಿನ ಕೆಲಸಗಾರರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಇದನ್ನೂ ಓದಿ: ಮದುವೆ ಹಾಲ್​​ನಲ್ಲಿ ಬುರ್ಖಾಧಾರಿ ಕಳ್ಳಿಯ ಕರಾಮತ್ತು..! ವಿಚಾರಣೆ ವೇಳೆ ಆಘಾತಕಾರಿ ವಿಚಾರ ಬೆಳಕಿಗೆ..!?

ಅಷ್ಟರಲ್ಲಾಗಲೇ ವಿದ್ಯಾರ್ಥಿಗಳು ಮೃತಪಟ್ಟಿದ್ದರು ಎನ್ನಲಾಗಿದೆ. ಘಟನನಾ ಸ್ಥಳಕ್ಕೆ ಭೇಟಿ ನೀಡಿದ ನವನಗರ ಪೊಲೀಸ್ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಯ ನೆರವಿನೊಂದಿಗೆ ಮೃತದೇಹಗಳನ್ನು ಹೊರತೆಗೆಯಲಾಗಿದೆ.

Continue Reading

LATEST NEWS

ಮದುವೆ ಹಾಲ್​​ನಲ್ಲಿ ಬುರ್ಖಾಧಾರಿ ಕಳ್ಳಿಯ ಕರಾಮತ್ತು..! ವಿಚಾರಣೆ ವೇಳೆ ಆಘಾತಕಾರಿ ವಿಚಾರ ಬೆಳಕಿಗೆ..!?

Published

on

ಶಿವಮೊಗ್ಗ: ಮದುವೆ ಸಮಾರಂಭಗಳಲ್ಲಿ ಸಂಚಲನ ಮೂಡಿಸಿದ್ದ ಸರಣಿ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಶಿವಮೊಗ್ಗ ಪೊಲೀಸರು ಯಶಸ್ವಿಯಾಗಿದ್ದಾರೆ.


ಬುರ್ಖಾ ಧರಿಸಿ, ವ್ಯಾನಿಟಿ ಬ್ಯಾಗ್ ಹಿಡಿದು ಗಪ್‌ಚುಪ್ ಆಗಿ ಚಿನ್ನಾಭರಣ ಎಗರಿಸುತ್ತಿದ್ದ ರುಕ್ಸಾರ್ ಫಿರ್ದೋಸ್ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗದ ಪ್ರಸಿದ್ಧ ‘ಶಾದಿ ಮಹಲ್’ನಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಕಳ್ಳತನ ವರದಿಯಾಗುತ್ತಿದ್ದು, ಮದುವೆಗೆ ಬಂದವರು ತಮ್ಮ ಆಭರಣಗಳನ್ನು ಬ್ಯಾಗ್‌ನಲ್ಲಿ ಇಡುವುದನ್ನೇ ಸಂಚು ಹೂಡಿ ಕಾಯುತ್ತಿದ್ದ ಈ ಮಹಿಳೆ, ಕ್ಷಣಾರ್ಧದಲ್ಲಿ ಅವುಗಳನ್ನು ಎಗರಿಸಿ ಪರಾರಿಯಾಗುತ್ತಿದ್ದಳು.

ಕಳೆದ ಒಂದು ತಿಂಗಳ ಹಿಂದೆ ನಡೆದ ಮದುವೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಹಗಲಿರುಳು ಪರಿಶೀಲಿಸಿದಾಗ, ಆಕೆಯ ಕೈಯಲ್ಲಿದ್ದ ವಿಶಿಷ್ಟವಾದ ವ್ಯಾನಿಟಿ ಬ್ಯಾಗ್ ಕಳ್ಳಿಯನ್ನು ಪತ್ತೆಹಚ್ಚಲು ಪ್ರಮುಖ ಸುಳಿವು ನೀಡಿತು.

ಇದನ್ನೂ ಓದಿ: ಗ್ಯಾಸ್ ಟ್ರಬಲ್: ಚನ್ನಪಟ್ಟಣದ ಮನೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಕಳವು!

ಇನ್ನು ಬಂಧಿತವಾಗಿರುವ ಕಳ್ಳಿ ರುಕ್ಸಾರ್ 18 ಲಕ್ಷ ರೂ ಮೌಲ್ಯದ ಒಟ್ಟು 120 ಗ್ರಾಂ ಚಿನ್ನಾಭರಣ ಕದ್ದಿದ್ದಾಳೆ. ಈಕೆಯ ಬಂಧನದಿಂದ 4 ಪ್ರಮುಖ ಕಳ್ಳತನ ಪ್ರಕರಣ ಪತ್ತೆಯಾಗಿವೆ. ವಿಚಾರಣೆ ವೇಳೆ ಆಘಾತಕಾರಿ ವಿಷಯವೊಂದು ಬೆಳಕಿಗೆ ಬಂದಿದೆ.

ಈ ಹಿಂದೆ ಕೆಲವು ಮದುವೆ ಮನೆಗಳಲ್ಲಿ ಕಳ್ಳತನ ಮಾಡುವಾಗ ಈಕೆ ಸ್ಥಳೀಯರಿಗೆ ಸಿಕ್ಕಿಬಿದ್ದಿದ್ದಳು. ಆದರೆ, ಮಹಿಳೆಯೆಂದು ಅನುಕಂಪ ತೋರಿಸಿದ ಜನರು ವಾರ್ನಿಂಗ್ ಮಾಡಿ ಬಿಟ್ಟು ಕಳಿಸಿದ್ದರು. ಇದನ್ನೇ ಲಾಭವನ್ನಾಗಿ ಮಾಡಿಕೊಂಡ ಈ ಕಿಲಾಡಿ ಕಳ್ಳಿ, ತನ್ನ ಕಳ್ಳತನದ ಕಾಯಕವನ್ನು ಮುಂದುವರಿಸಿ ಐಷಾರಾಮಿ ಜೀವನ ನಡೆಸುತ್ತಿದ್ದಳು.

Continue Reading
Advertisement

Trending

Copyright © 2025 Namma Kudla News

You cannot copy content of this page