Connect with us

DAKSHINA KANNADA

ಪುತ್ತೂರಿನಲ್ಲಿ “ನಮ್ಮ ಓಟು ನೋಟಾಕ್ಕೆ” ಭಾರೀ ಟ್ರೆಂಡಿಂಗ್‌: ಪುತ್ತಿಲಗೆ ಟಿಕೆಟ್‌ ತಪ್ಪಿದ್ದಕ್ಕೆ ಆಕ್ರೋಶ..!

Published

on

ಪುತ್ತೂರಿಗೆ ಟಿಕೆಟ್‌ ಘೊಷಣೆಯಾಗುತ್ತಿದಂತೆ “ನಮ್ಮ ಓಟು ನೋಟಾಕ್ಕೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್‌ ಮಾಡುತ್ತಿದ್ದಾರೆ.

ಮಂಗಳೂರು: ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳಿಗೆ ಟಿಕೆಟ್‌ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ರಾಜ್ಯ  ರಾಜಕೀಯದಲ್ಲಿ ಭಾರೀ ಸಂಚಲನ ಉಂಟಾಗುತ್ತಿದೆ.

ಈ ಮಧ್ಯೆ ಕರಾವಳಿಯಲ್ಲಿ ಅದರಲ್ಲೂ ಪುತ್ತೂರು ಕ್ಷೇತ್ರದಲ್ಲಿ ಹಿಂದೂ ಮುಖಂಡ ಅವರಿಗೆ ಟಿಕೆಟ್‌ ತಪ್ಪಿದ್ದಕ್ಕೆ ಯುವ ಕಾರ್ಯಕರ್ತರು ಭಾರೀ ಆಕ್ರೋಶಗೊಂಡಿದ್ದಾರೆ.

ಪುತ್ತೂರಿಗೆ ಟಿಕೆಟ್‌ ಘೊಷಣೆಯಾಗುತ್ತಿದಂತೆ “ನಮ್ಮ ಓಟು ನೋಟಾಕ್ಕೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್‌ ಮಾಡುತ್ತಿದ್ದಾರೆ.

ಈ ಬಾರಿ ಕರಾವಳಿಯಲ್ಲಿ ಹಾಲಿ ಶಾಸಕರ ಪೈಕಿ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರಿಗೆ ಸ್ವಪಕ್ಷಿಯರಿಂದಲೇ ಭಾರೀ ವಿರೋದ ವ್ಯಕ್ತವಾಗಿತ್ತು.

ಜೊತೆಗೆ ಈ ಬಾರಿಗೆ ಅವರಿ ಮತ್ತೆ ಟಿಕೆಟ್‌ ನೀಡಿದರೆ ನಾವು ತಟಸ್ಥರಾಗುತ್ತೇವೆ ಎಂದು ಹಲವರು ನೇರವಾಗಿ ಹೇಳಿಕೊಂಡಿದ್ದರು.

ಈ ಬಾರಿ ಏನಿದ್ದರೂ ಹಿಂದೂ ಮುಖಂಡ ಅರುಣ್‌ ಪುತ್ತಿಗೆ ಅವರಿಗೆ ಟಿಕೆಟ್‌ ನೀಡಲೇಬೇಕು ಎಂದು ಕಾರ್ಯಕರ್ತರು ಕಳೆದೊಂದು ವರ್ಷದಿಂದ ಹಠ ಹಿಡಿದಿದ್ದರು.

ಕ್ಷೇತ್ರದಲ್ಲಿ ಸಂಜೀವ ಮಠಂದೂರು ಅವರ ಮೇಲಿನ ಕಾರ್ಯಕರ್ತರ ಭಾರಿ ಮಟ್ಟದ ಆಕ್ರೋಶ ಸ್ಪೋಟಗೊಂಡಿದ್ದು ಪ್ರವೀಣ್‌ ನೆಟ್ಟಾರು ಶವಯಾತ್ರೆ ವೇಳೆ.

ಅಂದು ಬಿಜೆಪಿ ಸಂಸದ ಹಾಗೂ ರಾಜ್ಯಾಧ್ಯಕ್ಷ ಅವರ ಕಾರನ್ನು ಅಲುಗಾಡಿಸಿದ ಕಾರ್ಯಕರ್ತರು ಪುತ್ತೂರಿನಲ್ಲಿ ನಾಯಕರು ಹೇಳಿದ್ದಕ್ಕಿಂತ ಕಾರ್ಯಕರ್ತರಾದ ನಾವು ಹೇಳಿದ್ದೇ ಆಗಬೇಕು ಎಂಬ ನಿಲುವಿಗೆ ಬಂದಿದ್ದರು.

ಅದರ ಬಿಸಿ ತಟ್ಟಿದ ಪರಿಣಾಮ ಈ ಬಾರಿ ಸಂಜೀವ ಮಠಂದೂರು ಅವರಿಗೆ ಟಿಕೆಟ್‌ ಮಿಸ್‌ ಆಗುವುದು ಬಹುತೇಕ ಖಚಿತವಾಗಿತ್ತು.

ಆದರೆ ಯಾರಿಗೆ ಟಿಕೆಟ್‌ ನೀಡುತ್ತಾರೆ ಎಂಬ ಪ್ರಶ್ನೆಯೂ ಕಾರ್ಯಕರ್ತರಲ್ಲಿ ಮೂಡಿತ್ತು.

ಅವರ ಆಯ್ಕೆ ಅರುಣ್‌ ಕುಮಾರ್‌ ಪುತ್ತಿಲ ಒಂದೇ ಆಗಿತ್ತು. ಕಳೆದ ಬಾರಿ ಪುತ್ತಿಗೆ ಅವರಿಗೆ ಟಿಕೆಟ್‌ ಮಿಸ್ಸಾಗಿದ್ದಕ್ಕೆ ಕಾರ್ಯಕರ್ತರು ಆಕ್ರೋಶಗೊಂಡರೂ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬೇಕೆಂದು ಸಂಜೀವ ಮಠಂದೂರು ಅವರಿಗೆ ಓಟು ನೀಡಿದ್ದರು.

ಕಳೆದ ಬಾರಿ ಗೌಡ ಸಮುದಾಯದವರಿಗೆ ಪುತ್ತೂರಿನ ಟಿಕೆಟ್‌ ನೀಡಿದ್ದ ಪಕ್ಷ ಈ ಬಾರಿಯೂ ಅಭ್ಯರ್ಥಿ ಬದಲಿಸಿದ್ದರೂ ಮತ್ತೆ ಅದೇ ಸಮುದಾಯಕ್ಕೆ ಟಿಕೆಟ್‌ ನೀಡಿದ್ದಾರೆ.

ಆದ್ದರಿಂದ ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂದು ಹೇಳಿ ನಮಗೆಲ್ಲಾ ಮೋಸ ಮಾಡುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ “ನಮ್ಮ ಓಟು ನೋಟಾಕ್ಕೆ” ಎನ್ನುತ್ತಿದ್ದಾರೆ. ಟಿಕೆಟ್‌ ಘೊಷಣೆಯಾಗಿರುವ ಅಭ್ಯರ್ಥಿ ಅಶಾ ತಿಮ್ಮಪ್ಪ ಅವರಿಗೆ ಯಾರ ವಿರೋಧವೂ ಇಲ್ಲ.

ಆದರೆ ಹಿಂದುತ್ವ ನಾಯಕನಿಗೆ ಪ್ರತೀ ಬಾರಿಯೂ ಮೋಸವಾಗುತ್ತಿದೆ. ಈ ಕಾರಣದಿಂದ ಕಾರ್ಯಕರ್ತರೇ ನಾಯಕರಿಗೆ ಈ ಬಾರಿ ತಕ್ಕ ಪಾಠ ಕಲಿಸುತ್ತೇವೆ ಎಂದು ಹೇಳುತ್ತಿದ್ದಾರೆ.

ಈ ಮೂಲಕ ಕಾರ್ಯಕರ್ತರ ಈ ಕೋಪ ಮತದಾನದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂದು ಮೇ.13ರ ವರೆಗೂ ಕಾಯಲೇಬೇಕು.

DAKSHINA KANNADA

ಪುತ್ತೂರು: 33ನೇ ವರ್ಷದ ಕೋಟಿ-ಚೆನ್ನಯ ಜೋಡುಕೆರೆ ಕಂಬಳ

Published

on

ಪುತ್ತೂರು: ಇತಿಹಾಸ ಪ್ರಸಿದ್ಧ ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ 33ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳ ಜನವರಿ 24 ಮತ್ತು 25ರಂದು ನಡೆಯಲಿದೆ.


ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಂಬಳ ಕೂಟಗಳ ಪೈಕಿ ಹಲವು ಪ್ರಥಮಗಳನ್ನು ಸ್ಥಾಪಿಸಿದ ಕೂಟವೆಂಬ ಹೆಗ್ಗಳಿಕೆ ಪುತ್ತೂರು ಕಂಬಳಕ್ಕಿದ್ದು, ಈ ಬಾರಿ 200ಕ್ಕಿಂತಲೂ ಹೆಚ್ಚು ಜೋಡಿ ಕೋಣಗಳು ಭಾಗವಹಿಸಲಿವೆ ಎಂದು ಕಂಬಳ ಸಮಿತಿ ಅಧ್ಯಕ್ಷ ಎನ್ ಚಂದ್ರಹಾಸ ಶೆಟ್ಟಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10.32ಕ್ಕೆ ಶ್ರೀ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯ ಜೋಡುಕರೆಯಲ್ಲಿ ಕಂಬಳವನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ವಹಿಸಲಿದ್ದಾರೆ ಎಂದರು.

ಇದನ್ನೂ ಓದಿ: ಪಡುಬಿದ್ರೆಗೆ ಆಗಮಿಸಿದ ಬಿಗ್ಬಾಸ್ ರನ್ನರ್ ಅಪ್ ರಕ್ಷಿತಾ, ಕೈಯಲ್ಲಿ ಬಂಗುಡೆ ಹಿಡಿದು ಭರ್ಜರಿ ಡ್ಯಾನ್ಸ್

ಸಂಜೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಅಶೋಕ್ ರೈ ವಹಿಸಲಿದ್ದಾರೆ ಹಲವು ಮಂದಿ ಗಣ್ಯರು ಭಾಗವಹಿಸಲಿರುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ., ಕೋಶಾಕಾರಿ ಪಂಜಿಗುಡ್ಡೆ ಈಶ್ವರ ಭಟ್, ಉಪಾಧ್ಯಕ್ಷರಾದ ನಿರಂಜನ ರೈ ಮಠಂತಬೆಟ್ಟು ಮೊದಲಾದವರಿದ್ದರು.

Continue Reading

DAKSHINA KANNADA

ದ್ವೇಷ ಭಾಷಣ ಆರೋಪ; ಕಲ್ಲಡ್ಕ ಪ್ರಭಾಕರ ಭಟ್‌ ವಿರುದ್ದ ಎಫ್‌ಐಆರ್‌

Published

on

ಪುತ್ತೂರು: ಪುತ್ತೂರಿನ ಖಾಸಗಿ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ಧ ಹಾಗೂ ಆ ಭಾಷಣವನ್ನು ಪ್ರಸಾರ ಮಾಡಿದ ವಾಹಿನಿಯೊಂದರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕೋಮು ದ್ವೇಷ ಹಾಗೂ ಹಿಂಸೆಗೆ ಪ್ರಚೋದನೆಯಾಗುವ ರೀತಿಯಲ್ಲಿ ಭಾಷಣ ಮಾಡಿದ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಮತ್ತು ಭಾಷಣವನ್ನು ಪ್ರಸಾರ ಮಾಡಿದ ವಾಹಿನಿ ಹಾಗೂ ಕಾರ್ಯಕ್ರಮವನ್ನು ಆಯೋಜಿಸಿದ್ದ ಆಯೋಜಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಂದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

DAKSHINA KANNADA

ನಾಳೆ(ಜ.21) ಕದ್ರಿ ಮ್ಯೂಸಿಕಲ್ ನೈಟ್ಸ್ 2026 : ರಿಷಬ್ ಶೆಟ್ಟಿ ಭಾಗಿ

Published

on

ಮಂಗಳೂರು : ಕದ್ರಿ ಶ್ರೀಮಂಜುನಾಥ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ  ಪ್ರಯುಕ್ತ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾರ್ಗದರ್ಶನದಲ್ಲಿ ಕದ್ರಿ ಈವೆಂಟ್ಸ್ ಅರ್ಪಿಸುವ  ‘ಕದ್ರಿ ಮ್ಯೂಸಿಕಲ್ ನೈಟ್ಸ್ 2026’ ನಾಳೆ(ಜ.21) ಸಂಜೆ 7 ಗಂಟೆಯಿಂದ ಕದ್ರಿ ಮೈದಾನದಲ್ಲಿ ಅದ್ದೂರಿಯಾಗಿ ಜರುಗಲಿದೆ.

ಎಂದಿನಂತೆ ಈ ಬಾರಿಯೂ ತಾರಾ ಮೆರುಗು ಇರಲಿದ್ದು, ಕಾರ್ಯಕ್ರಮಕ್ಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಅವರ ಪತ್ನಿ ಪ್ರಗತಿ ಶೆಟ್ಟಿ ಆಗಮಿಸಲಿದ್ದಾರೆ.

ಆಯೋಜಕ ಜಗದೀಶ್ ಕದ್ರಿ ಈ ಬಗ್ಗೆ ಮಾತನಾಡಿ, ಪ್ರತೀ ವರ್ಷದಂತೆ ಈ ಬಾರಿಯೂ ಕೂಡ ಕದ್ರಿ ಮ್ಯೂಸಿಕಲ್ ನೈಟ್ ಆಯೋಜನೆ ಮಾಡಿದ್ದೇವೆ. ಸಿನಿಮಾ ಸೆಲೆಬ್ರಿಟಿಗಳು, ಗಣ್ಯರು ಸೇರಿದಂತೆ ಹೆಸರಾಂತ ಗಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಂಗಳೂರಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.

ಇದನ್ನೂ ಓದಿ : BBK12: ಟಾಪ್‌ 6ನಲ್ಲಿ ಕಾವ್ಯಾ ಇರಬಾರದಿತ್ತು: ಹೀಗ್ಯಾಕಂದ್ರು ರಕ್ಷಿತಾ..?

ಕನ್ನಡ, ತುಳು ಚಿತ್ರರಂಗದ ಕಲಾವಿದರಾದ ರೂಪೇಶ್ ಶೆಟ್ಟಿ, ದೇವದಾಸ್ ಕಾಪಿಕಾಡ್, ಭೋಜರಾಜ ವಾಮಂಜೂರು, ಅರ್ಜುನ್ ಕಾಪಿಕಾಡ್, ಶನಿಲ್ ಗುರು, ಪ್ರಕಾಶ್ ತೂಮಿನಾಡು, ಸ್ವರಾಜ್ ಶೆಟ್ಟಿ, ದೀಪಕ್ ರೈ ಪಾಣಾಜೆ, ವಿಜೆ ವಿನೀತ್, ಸಮತಾ ಅಮೀನ್ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page