Connect with us

LATEST NEWS

‘ಅಭಿಮನ್ಯು’ ನೇತೃತ್ವದಲ್ಲಿ ಕಾರ್ಯಾಚರಣೆ – ರಾಮನಗರದಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ಕಾಡಾನೆ ಸೆರೆ..!

Published

on

ಒಂದು ವಾರದಲ್ಲಿ ಇಬ್ಬರನ್ನು ಬಲಿ ಪಡೆದಿದ್ದ 45 ವರ್ಷದ ಕಾಡಾನೆಯನ್ನು ಚನ್ನಪಟ್ಟಣ ತಾಲೂಕಿನ ತೆಂಗಿನಕಲ್ಲು ಕಾಡು ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ರಾಮನಗರ: ಒಂದು ವಾರದಲ್ಲಿ ಇಬ್ಬರನ್ನು ಬಲಿ ಪಡೆದಿದ್ದ 45 ವರ್ಷದ ಕಾಡಾನೆಯನ್ನು ಚನ್ನಪಟ್ಟಣ ತಾಲೂಕಿನ ತೆಂಗಿನಕಲ್ಲು ಕಾಡು ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ನಾಲ್ಕು ದಿನಗಳ ಹಿಂದೆ ಕಾಡಾನೆ ಸೆರೆಗೆ ಮತ್ತಿಗೋಡು ಆನೆ ಶಿಬಿರದಿಂದ ಆಗಮಿಸಿದ್ದ ಅಭಿಮನ್ಯು ನೇತೃತ್ವದ 5 ಸಾಕಾನೆಗಳಾದ ಭೀಮ, ಅರ್ಜುನ, ಮಹೇಂದ್ರ, ಶ್ರೀಕಂಠ ನೆರವಿನಿಂದ ಸಿಬ್ಬಂದಿ ಆನೆ ಸೆರೆಗೆ ಮೂರು ದಿನಗಳಿಂದ ಸತತ ಪ್ರಯತ್ನ ನಡೆಸುತ್ತಿದ್ದರು.

ಕಾಡಾನೆ ದಾಳಿಗೆ ಮೇ 30ರಂದು ಕನಕಪುರ ತಾಲೂಕಿನ ಕಬ್ಬಾಳು ಗ್ರಾಮದ ರೈತ ಕಾಳಯ್ಯ ಹಾಗೂ ಜೂನ್ 3ರಂದು ಚನ್ನಪಟ್ಟಣ ತಾಲೂಕಿನ ವಿರುಪಸಂದ್ರದಲ್ಲಿ ಮಾವಿನ ತೋಟದ ಕಾವಲುಗಾರ ವೀರಭದ್ರಯ್ಯ ಎಂಬುವರು ಮೃತಪಟ್ಟಿದ್ದರು.

DAKSHINA KANNADA

ಮಂಗಳೂರು: ಮಾಸ್ಟರ್ ಚೆಫ್ ಮಹಮ್ಮದ್ ಆಶಿಕ್‌ಗೆ “ಸೌತ್ ಇಂಡಿಯಾ ಯಂಗ್ ಚೆಫ್ ಆಫ್ ದಿ ಇಯರ್” ಪ್ರಶಸ್ತಿ

Published

on

ಮಂಗಳೂರು: ಭಾರತದ ಅತ್ಯುತ್ತಮ ಆಹಾರ ಮತ್ತು ಪಾನೀಯಗಳನ್ನು ಗುರುತಿಸುವ *ಫುಡ್ “ಕನೋಸರ್ಸ್ ಇಂಡಿಯಾ ಅವಾರ್ಡ್ಸ್ (FCIA)* ನ ಏಳನೇ ಆವೃತ್ತಿಯಲ್ಲಿ ಮಂಗಳೂರಿನ ಮಾಸ್ಟರ್ ಚೆಫ್ *ಮಹಮ್ಮದ್ ಆಶಿಕ್* ಅವರಿಗೆ *’ಸೌತ್ ಇಂಡಿಯಾ ಯಂಗ್ ಚೆಫ್ ಆಫ್ ದಿ ಇಯರ್’* ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಬೆಂಗಳೂರಿನ *ತಾಜ್ ಯಶವಂತಪುರ ಹೋಟೆಲ್* ಸಭಾಂಗಣದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಬಂದ ಅತ್ಯುತ್ತಮ ಶೆಫ್ಗಳು, ರೆಸ್ಟೋರೆಂಟ್ಗಳು ಮತ್ತು ಫುಡ್ ಬ್ರಾಂಡ್ಗಳು ಪಾಲ್ಗೊಂಡಿದ್ದರು. ಮಂಗಳೂರಿನ ಪ್ರತಿಭೆ ಮಾಸ್ಟರ್ ಚೆಫ್ ಮಹಮ್ಮದ್ ಆಶಿಕ್ ಈ ಪ್ರಶಸ್ತಿ ಪಡೆಯುವ ಮೂಲಕ ಜಿಲ್ಲೆಯ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಹೆಗ್ಗಳಿಸಿದ್ದಾರೆ.

ಪ್ರಶಸ್ತಿ ಪಡೆದ ನಂತರ ಮಾಸ್ಟರ್ ಚೆಫ್ ಮಹಮ್ಮದ್ ಆಶಿಕ್ ಅವರು ಮಾತನಾಡುತ್ತಾ, “ಈ ಪ್ರಶಸ್ತಿಯನ್ನು ಪ್ರಮುಖವಾಗಿ ಆಹಾರದ ಗುಣಮಟ್ಟ, ಸೃಜನಾತ್ಮಕತೆ ಮತ್ತು ಅನುಭವಗಳನ್ನು ಆಧರಿಸಿ ನೀಡಲಾಗುತ್ತದೆ. ಈ ಬಾರಿ ಕನ್ನಡನಾಡಿನ ಹಲವಾರು ರೆಸ್ಟೋರೆಂಟ್ಗಳು ಮತ್ತು ಶೆಫ್ಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನನಗೆ ಈ ಪ್ರಶಸ್ತಿ ಲಭಿಸಿದ್ದು ಗೌರವದ ಸಂಗತಿ. ಇದು ನನ್ನ ಕುಟುಂಬ, ಸ್ನೇಹಿತರು ಮತ್ತು ಜಿಲ್ಲೆಯ ಜನರ ಸಹಕಾರದ ಫಲವಾಗಿದೆ. ಈ ಪ್ರಶಸ್ತಿ ನನಗೆ ಇನ್ನಷ್ಟು ಸಾಧನೆ ಮಾಡಲು ಸ್ಪೂರ್ತಿ ನೀಡಿದೆ” ಎಂದರು.

ಈ ಕಾರ್ಯಕ್ರಮದ ಮೂಲಕ ಭಾರತದ ವೈವಿಧ್ಯಮಯ ಆಹಾರ ಸಂಸ್ಕೃತಿ ಮತ್ತು ಪ್ರತಿಭಾವಂತ ಶೆಫ್ಗಳ ಸಾಧನೆಗಳನ್ನು ಗುರುತಿಸಲಾಯಿತು. ಮಂಗಳೂರಿನ ಮಾಸ್ಟರ್ ಚೆಫ್ ಮಹಮ್ಮದ್ ಆಶಿಕ್ ಅವರ ಈ ಸಾಧನೆ ಜಿಲ್ಲೆಯ ಆಹಾರ ಕ್ಷೇತ್ರದ ಹೆಮ್ಮೆಯಾಗಿದೆ.

Continue Reading

LATEST NEWS

ಶೇ.75 ಹಾಜರಾತಿ ಇಲ್ಲದ ವಿದ್ಯಾರ್ಥಿಗಳಿಗೆ ಪಬ್ಲೀಕ್ ಪರೀಕ್ಷೆ ಬರೆಯಲು ಅವಕಾಶವಿಲ್ಲ : ರಾಜ್ಯ ಸರ್ಕಾರ

Published

on

ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ 2024 ನೇ ಸಾಲಿನಲ್ಲಿ ಮೂರು ಪರೀಕ್ಷೆಗಳನ್ನು ಪರಿಚಯಿಸಿದ್ದು, ಮೊದಲ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದವರು, ಇನ್ನಷ್ಟು ಅಂಕಗಳನ್ನು ಪಡೆಯಲು ಬಯಸುವವರು ಹಾಗೂ ಅನುತ್ತೀರ್ಣರಾದವರು ಉಳಿದ ಎರಡು ಪರೀಕ್ಷೆಗಳನ್ನು ಬರೆಯಬಹುದು. ಅಂತೆಯೇ  ಹಾಜರಾತಿ ಕೊರತೆ ಕಾರಣಕ್ಕೆ ಮೊದಲ ಪರೀಕ್ಷೆಯಿಂದ ವಂಚಿತರಾದವರಿಗೆ ಉಳಿದ ಎರಡು ಪರೀಕ್ಷೆ ತೆಗೆದುಕೊಳ್ಳಲು ಕಳೆದ ವರ್ಷ ಅವಕಾಶ ನೀಡಲಾಗಿತ್ತು.

ಆದರೆ, ಈ ಬಾರಿ ಮಹತ್ತರವಾದ ಆದೇಶವೊಂದನ್ನು ಜಾರಿಗೊಳಿಸಿದ್ದು, ಶೇ 75ರಷ್ಟು ಹಾಜರಾತಿ ಕೊರತೆ ಇರುವವರಿಗೆ ಮೂರೂ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿದೆ. ಕಡಿಮೆ ಹಾಜರಾತಿ ಇರುವ ಮಕ್ಕಳ ಆಂತರಿಕ ಮೌಲ್ಯಮಾಪನದ ಅಂಕಗಳನ್ನೂ ಎಸ್‌ಎಟಿಎಸ್‌ ತಂತ್ರಾಂಶದಲ್ಲಿ ದಾಖಲಿಸದಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿದೆ.

 

ಇದನ್ನೂ ಓದಿ : 2025 ರ ಬೋರ್ಡ್ ಪರೀಕ್ಷೆಯ ದಿನಾಂಕ ಘೋಷಣೆ: ಜ 1 ರಿಂದ 10 ಮತ್ತು 12 ನೇ ತರಗತಿ ಪ್ರಾಯೋಗಿಕ ಪರೀಕ್ಷೆಗಳು ಆರಂಭ

 

ಮರು ದಾಖಲಾತಿ :

ಹಾಜರಾತಿ ಕೊರತೆಯಿಂದ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳು ಹಾಗೂ ಅನುತ್ತೀರ್ಣರಾದವರನ್ನು 2025-26ನೇ ಸಾಲಿನಲ್ಲಿ 10ನೇ ತರಗತಿಗೆ ಮರುದಾಖಲು ಮಾಡುವಂತೆ ಮಂಡಳಿ ಸೂಚಿಸಿದೆ. 2024ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಹಾಜರಾತಿ ಕೊರತೆ ಇದ್ದ 15 ಸಾವಿರ ವಿದ್ಯಾರ್ಥಿಗಳು ಎರಡನೇ ಮತ್ತು ಮೂರನೇ ಪರೀಕ್ಷೆ ಬರೆದಿದ್ದರು. 2025ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್ 21ರಿಂದ ಏ.4ರವರೆಗೆ ನಡೆಯಲಿದೆ.

Continue Reading

BIG BOSS

ಮದುವೆಯ ಬಗ್ಗೆ ಕ್ಲೂ ನೀಡಿದ ಬಿಗ್ ಬಾಸ್ ಐಶ್ವರ್ಯ

Published

on

ಬೆಂಗಳೂರು: ಬಿಗ್ ಬಾಸ್ ಸೀಸನ್ 11 ರಲ್ಲಿ ತನ್ನ ಕ್ಯೂಟ್ ಎಕ್ಸ್‌ಪ್ರೇಶನ್ ಮೂಲಕ ಕನ್ನಡ ಜನಮನ ಗೆದ್ದಿದ್ದಲ್ಲದೆ ಕರ್ನಾಟಕದ ಮನೆಮಗಳು ಎಂದೆನಿಸಿಕೊಂಡಿದ್ದಾರೆ. ಬಿಗ್ ಮನೆಯಲ್ಲಿ ಇವರ ಆಟ ನಡೆ ನುಡಿ ಜೊತೆಗೆ ಇವರ ಡ್ರೆಸ್ಸಿಂಗ್ ಸೆನ್ಸ್ ಬಹಳಷ್ಟು ಗಮನ ಸೆಳೆದಿತ್ತು. ಬರೋಬ್ಬರಿ 91 ದಿನಗಳ ಕಾಲ ಬಿಗ್ ಬಾಸ್ ಮನೆಯೊಳಗಿದ್ದ ಐಶ್ವರ್ಯ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಗಳಿಸಿದ್ದಾರೆ.

ಇದೀಗ ಐಶ್ವರ್ಯನಲ್ಲಿ ಪ್ರತಿಯೊಬ್ಬರೂ ನಿಮಗೆ ಮದುವೆ ಯಾವಾಗ? ಬಾಯ್‌ಫ್ರೆಂಡ್ ಇದ್ದಾರಾ? ಶಿಶಿರ್‌ನ ಲವ್ ಮಾಡ್ತಿದ್ದೀರಾ? ಶಿಶಿರ್‌ ಕಡೆಯಿಂದ ಪ್ರಪೋಸಲ್ ಬಂದರೆ ನೀವು ಒಪ್ಪಿಕೊಳ್ಳುತ್ತೀರಾ ? ಹೀಗೆ ಹಲವು ಪ್ರಶ್ನೆಗಳನ್ನು ಜನರು ಕೇಳುತ್ತಿದ್ದಾರೆ. ಈಗ ಅದಕ್ಕೆಲ್ಲಾ ಸ್ವತಃ ಐಶ್ವರ್ಯ ಅವರೇ ಉತ್ತರ ನೀಡಿದ್ದಾರೆ.

ಮದುವೆ ಆಗುವ ಯೋಚನೆ ಸದ್ಯಕ್ಕೆ ಇಲ್ಲ. ಒಳ್ಳೆಯ ಗುಣ, ನಡತೆ, ನನ್ನನ್ನು ಅತಿಯಾಗಿ ಪ್ರೀತಿಸುವ, ಕಾಳಜಿ ವಹಿಸುವ, ಗೌರವಿಸುವ ಹುಡುಗ ನನಗೆ ಬೇಕು. ಈ ಎಲ್ಲಾ ನಡತೆಗಳು ಇರುವ ಹುಡುಗ ಸಿಕ್ಕರೆ ನಾನು ಖಂಡಿತವಾಗಿಯೂ ಮದುವೆ ಆಗುತ್ತೇನೆ. ಆ ತರಹದ ಹುಡುಗ ಸಿಕ್ಕರೆ ಬೇಗನೇ ಅವನ ಹೆಸರನ್ನು ರಿವೀಲ್ ಮಾಡಲ್ಲ ಎಂದು ಹೇಳಿದ್ದಾರೆ.

ಇದೀಗ ಬಿಗ್ ಬಾಸ್ ನಿಂದ ಹೊರ ಬರುತ್ತಿದ್ದಂತೆಯೇ ಹೊಸ ರಿಯಾಲಿಟಿ ಶೋನಲ್ಲಿ ಐಶ್ವರ್ಯ ಶಿಂಧೋಗಿ ಕಾಣಿಸಿಕೊಂಡಿರುವುದು ಅವರ ಅಭಿಮಾನಿಗಳಿಗಂತೂ ಬಹಳ ಸಂತೋಷ ತಂದಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆಕ್ಟಿವ್ ಐಶ್ವರ್ಯ ಶಿಂಧೋಗಿ ತಮ್ಮದೇ ಯೂಟ್ಯೂಬ್ ಚಾನೆಲ್ ಅನ್ನು ಕೂಡ ಹೊಂದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿಯೂ ಆಗಾಗ ತಮ್ಮ ವೃತ್ತಿ ಬದುಕಿನ ಬಗೆಗಿನ ಬಹಳಷ್ಟು ಅಪ್ ಡೇಟ್‌ಗಳನ್ನು ನೀಡುತ್ತಿರುತ್ತಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page