Connect with us

LATEST NEWS

ಉಡುಪಿ: ಅಮೇರಿಕಾದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಗೆ ಲಕ್ಷಾಂತರ ರೂ. ವಂಚನೆ

Published

on

ಉಡುಪಿ: ಅಮೇರಿಕಾದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೋರ್ವ ಯುವತಿಯೊಬ್ಬಳಿಂದ ಲಕ್ಷಾಂತರ ರೂ. ವಂಚಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.


ಮೂಲತಃ ಉಡುಪಿಯವರಾದ ಶಾಲಿನಿ ಅವರು ಬಿಸಿಎ ಪದವೀಧರೆಯಾಗಿದ್ದು, ಬೆಂಗಳೂರಿನ ಧನಿರಾಮ್ ಕಂಪೆನಿಯಲ್ಲಿ ಕಲೆಕ್ಷನ್ ಎಕ್ಸಿಕ್ಯೂಟಿವ್ ಆಗಿದ್ದಾರೆ.

ಅಮೇರಿಕಾದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಕೋಲಾರ ಜಿಲ್ಲೆಯ ಮಾಲೂರಿನ ನಿವಾಸಿ ನಿತಿನ್ ಕುಮಾರ್ ಎಂಬಾತ ಲಕ್ಷಾಂತರ ರುಪಾಯಿ ವಂಚಿಸಿದ ಘಟನೆ ನಡೆದಿದೆ.

ಇವರು ಶಾಲಿನಿ ಅವರ ಸಹೋದ್ಯೋಗಿಯಾಗಿದ್ದು, ಅವರಿಗೆ ದುಬೈ ಕಂಪೆನಿಯಲ್ಲಿ ಅಮೇರಿಕಾದ ಮನಿಮೇಕರ್ ಟೆಕ್ಸ್ ಝೋನ್‌ ಪ್ರೈ ಲಿ ಕಂಪೆನಿಯಲ್ಲಿ ಮ್ಯಾನೇಜರ್ ಕೆಲಸ ಕೊಡಿಸುವುದಾಗಿ ನಂಬಿಸಿದ್ದ.

ಅದರಂತೆ ಶಾಲಿನಿ ಅವರು ತಮ್ಮ ಖಾತೆಯಲ್ಲಿದ್ದ 22,63,999 ರೂ ಮತ್ತು 5,85500 ರೂ ಹಾಗೂ ಅವರ ತಂದೆಯ ಖಾತೆಯಲ್ಲಿದ್ದ 5,16,302 ರೂ ಸೇರಿ ಒಟ್ಟು 33,65,801 ಲಕ್ಷ ರೂ.ಗಳನ್ನು ನಿತಿನ್ ಅವರ ಖಾತೆಗೆ ನೆಫ್ಟ್ ಮತ್ತು ಫೋನ್ ಫೇ ಮೂಲಕ ವರ್ಗಾವಣೆ ಮಾಡಿದ್ದರು.

ಆದರೆ ಈಗ ಕೆಲಸ ಕೊಡಿಸದೇ ಹಣವನ್ನು ಹಿಂದಕ್ಕೆ ನೀಡದೇ ನಂಬಿಕೆದ್ರೋಹ ಮಾಡಿ ವಂಚಿಸಿದ್ದಾನೆ ಎಂದು ಶಾಲಿನಿ ಅವರು ನೀಡಿದ ದೂರಿನಂತೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Click to comment

Leave a Reply

Your email address will not be published. Required fields are marked *

LATEST NEWS

ಕೊಹ್ಲಿ ಎದುರಿಸಿದ ಕಠಿಣ ಬೌಲರ್ ಇವರಂತೆ ?

Published

on

ಮಂಗಳೂರು/ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನ ಫೀವರ್ ಕ್ರಿಕೆಟ್ ಲೋಕವನ್ನು ಆವರಿಸಿದೆ. ಮಾರ್ಚ್ 22ರಂದು ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ಐಪಿಎಲ್ 2025ರ ಉದ್ಘಾಟನಾ ಪಂದ್ಯ ನಡೆಯಲಿದ್ದು, ಈ ಮ್ಯಾಚ್‌ನಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ಮತ್ತು ಆರ್‌ಸಿಬಿ ತಂಡಗಳು ಮುಖಾಮುಖಿಯಾಗಲಿದೆ.


ಸೀಸನ್ 18ಕ್ಕೆ ಎಲ್ಲಾ ತಂಡಗಳು ಅಭ್ಯಾಸ ಪ್ರಾರಂಭಿಸಿದ್ದು, ಆರ್‌ಸಿಬಿ ಕೂಡ ಈ ಸೀಸನ್‌ಗೆ ಸಜ್ಜಾಗಿ ನಿಂತಿದೆ. ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೂಡ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ಇದೆಲ್ಲದರ ನಡುವೆ ಕೊಹ್ಲಿ ಐಪಿಎಲ್‌ನಲ್ಲಿ ನಾನೆದುರಿಸಿದ ಅತ್ಯಂತ ಕಠಿಣ ಬೌಲರ್ ಯಾರೆಂಬುದನ್ನು ಹೇಳಿದ್ದಾರೆ.

ಆರ್‌ಸಿಬಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ನಾನೆದುರಿಸಿದ ಕಠಿಣ ಬೌಲರ್ ಎಂದರೆ ಅದು ಜಸ್‌ಪ್ರೀತ್ ಬುಮ್ರಾ ಎಂದಿದ್ದಾರೆ. ಬುಮ್ರಾ ವಿಶ್ವದ ಅತ್ಯುತ್ತಮ ಬೌಲರ್. ಅವರನ್ನು ಎದುರಿಸುವುದು ಅಂದುಕೊಂಡಷ್ಟು ಸುಲಭವಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ: IML 2025: ಇಂಡಿಯಾ ಮಾಸ್ಟರ್ಸ್‌ಗೆ ಚಾಂಪಿಯನ್‌ ಕಿರೀಟ

ಬುಮ್ರಾ ಐಪಿಎಲ್‌ನಲ್ಲಿ ಹಲವು ಬಾರಿ ನನ್ನನ್ನು ಔಟ್ ಮಾಡಿದ್ದಾರೆ. ಅವರನ್ನು ನೆಟ್ಸ್‌ನಲ್ಲೂ ಎದುರಿಸುವುದು ಅತ್ಯಂತ ಕಠಿಣವಾಗಿರುತ್ತದೆ. ಅವರನ್ನು ಎದುರಿಸಲು ನಾವು ಯಾವಾಗಲೂ, ಪ್ರತಿ ಚೆಂಡಿಗೂ ಮೈಂಡ್ ಗೇಮ್‌ನೊಂದಿಗೆ ಸಿದ್ದವಾಗಿರಬೇಕು ಎಂದು ಕೊಹ್ಲಿ ಬುಮ್ರಾ ಬೌಲಿಂಗ್ ಅನ್ನು ಹೊಗಲಿದ್ದಾರೆ.

 

 

ವಿರಾಟ್ ಕೊಹ್ಲಿ ಹಾಗೂ ಬುಮ್ರಾ ಐಪಿಎಲ್‌ನ 16 ಇನಿಂಗ್ಸ್‌ಗಳಲ್ಲಿ ಮುಖಾಮುಖಿಯಾಗಿದ್ದಾರೆ. ಈ ವೇಳೆ ಬುಮ್ರಾ ಎಸೆದ 95 ಎಸೆತಗಳನ್ನು ಎದುರಿಸಿರುವ ಕೊಹ್ಲಿ 140 ರನ್​ ಗಳಿಸಿದ್ದಾರೆ. ಇದರ ನಡುವೆ 5 ಬಾರಿ ವಿಕೆಟ್​ ಅನ್ನು ಸಹ ಒಪ್ಪಿಸಿದ್ದಾರೆ. ಇನ್ನು ಬುಮ್ರಾ-ಕೊಹ್ಲಿ ಮುಖಾಮುಖಿಯಲ್ಲಿ ಮೂಡಿಬಂದಿರುವ ಫೋರ್​ಗಳ ಸಂಖ್ಯೆ 15. ಹಾಗೆಯೇ ಬುಮ್ರಾ ಎಸೆತಗಳಲ್ಲಿ ಕೊಹ್ಲಿ ಕೇವಲ 5 ಸಿಕ್ಸ್ ಮಾತ್ರ ಬಾರಿಸಿದ್ದಾರೆ.

 

Continue Reading

LATEST NEWS

ಕಾರು ಡಿ*ಕ್ಕಿಯಾಗಿ ಟಿಪ್ಪರ್‌ನಡಿ ಸಿಲುಕಿದ ಸ್ಕೂಟಿ; ಅದೃಷ್ಟವಶಾತ್ ಮಹಿಳೆ, ಮಕ್ಕಳು ಪಾರು

Published

on

ಕುಂದಾಪುರ : ಇತ್ತೀಚೆಗೆ ಅಪಘಾ*ತ ಪ್ರಕರಣಗಳು ಹೆಚ್ಚುತ್ತಿದ್ದು, ಅನೇಕರು ಪ್ರಾ*ಣ ಕಳೆದು ಕೊಳ್ಳುತ್ತಿದ್ದಾರೆ. ಇದೀಗ ಮತ್ತೊಂದು ಅಪ*ಘಾತ ಪ್ರಕರಣ ವರದಿಯಾಗಿದ್ದು, ಅದೃಷ್ಟವಶಾತ್ ದುರಂ*ತವೊಂದು ತಪ್ಪಿದೆ.

ಸ್ಕೂಟಿಗೆ ಕಾರು ಡಿ*ಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ‌‌ ನಿಂತಿದ್ದ ಟಿಪ್ಪರ್ ಚಕ್ರದಡಿ ಸ್ಕೂಟಿ ಸಿಲುಕಿದೆ. ಅದೃಷ್ಟವಶಾತ್ ಮಹಿಳೆ ‌ಮತ್ತು ಮಕ್ಕಳಿಬ್ಬರು ಸಣ್ಣ ಪುಟ್ಟ ಗಾ*ಯಗಳೊಂದಿಗೆ ಪಾರಾಗಿದ್ದಾರೆ. ಈ ಘಟನೆ ನಡೆದಿರೋದು ಕುಂದಾಪುರದ ಹೆಮ್ಮಾಡಿಯಲ್ಲಿ.

ಸ್ಕೂಟಿಗೆ ಕಾರು ಡಿ*ಕ್ಕಿ ಹೊಡೆದು  ರಸ್ತೆಯ ಬದಿಗೆ ತಳ್ಳಲ್ಪಟ್ಟಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟಿ ನಿಂತಿದ್ದ ಟಿಪ್ಪರ್‌ನಡಿ ಬಿದ್ದಿದೆ.

ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

Continue Reading

DAKSHINA KANNADA

ಮೊಡಂಕಾಪು ಕಾರ್ಮೆಲ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಚೀಂವ್ ಚೀಂವ್ ಅಭಿಯಾನ

Published

on

ಬಂಟ್ವಾಳ: ಬೇಸಗೆಯಲ್ಲಿ ಮನುಷ್ಯನಿಗೆ ಹೇಗೆ ಬಾಯಾರಿಕೆ ಆಗುತ್ತದೆಯೋ ಅದೇ ರೀತಿ ಪ್ರಾಣಿ ಪಕ್ಷಿಗಳಿಗೂ ಬಾಯಾರಿಕೆ ಆಗುತ್ತದೆ. ಆದರೆ ಬೇಸಗೆಯಲ್ಲಿ ನೀರು ಸಿಗದೆ ಪ್ರಾಣಿ ಪಕ್ಷಿಗಳು ಸಾಕಷ್ಟು ಸಂಕಷ್ಟ ಎದುರಿಸುತ್ತಿರುವ ಕಾರಣ ಅವುಗಳಿಗೂ ನೀರುಣಿಸುವುದು ನಮ್ಮ ಜವಾಬ್ದಾರಿ. ಈ ಬಗ್ಗೆ ಬಿ.ಸಿ.ರೋಡ್ ನ ಮೊಡಂಕಾಪಿನ ಕಾರ್ಮೆಲ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಚೀಂವ್ ಚೀಂವ್ ಅಭಿಯಾನ ನಡೆಸಿದ್ದಾರೆ.

ನೀರು ಸಿಗದೆ ಪರದಾಡುವ ಪಕ್ಷಿಗಳಿಗೆ ಶಾಲಾ ಆವರಣದಲ್ಲಿ ತೆಂಗಿನ ಗೆರಟೆಗಳನ್ನು ಇರಿಸಿ ನೀರುಣಿಸುವ ಕೆಲಸ ಮಾಡುತ್ತಿದ್ದಾರೆ. ಸುಮಾರು 252 ಈ ರೀತಿಯ ಗೆರಟೆಗಳನ್ನು ಇರಿಸಿ ನಿತ್ಯ ಇದಕ್ಕೆ ನೀರು ಹಾಕಿ ಪಕ್ಷಿಗಳಿಗೆ ಕುಡಿಯಲು ನೀರು ಸಿಗುವಂತೆ ಮಾಡಿದ್ದಾರೆ.

ಇಲ್ಲಿನ ಶಿಕ್ಷಕ ರೋಶನ್ ಪಿಂಟೋ ಅವರ ಮಾರ್ಗದರ್ಶನದಲ್ಲಿ ಈ ಪರಿಸರ ಸ್ನೇಹಿ ಕೆಲಸ ನಡೆಸಲಾಗಿದೆ. ಕಳೆದ ಐದು ವರ್ಷಗಳಿಂದ ಇಲ್ಲಿನ ವಿದ್ಯಾರ್ಥಿಗಳು ಬೇಸಗೆಯಲ್ಲಿ ಪಕ್ಷಿಗಳಿಗೆ ಆಹಾರ ಇಡಲು ಪಾತ್ರೆ ತಯಾರಿಸಿ ಶಾಲೆಯ ಸುತ್ತ ಮುತ್ತ ಹಾಗೂ ಮನೆಗಳ ಸುತ್ತಮುತ್ತ ಇಟ್ಟು ಪಕ್ಷಿಗಳ ಬಾಯಾರಿಕೆ ನೀಗಿಸುತ್ತಿದ್ದಾರೆ. ಇದು ವಿದ್ಯಾರ್ಥಿಗಳಿಗೆ ಪಕ್ಷಿಗಳ ಬಗ್ಗೆ ಅಧ್ಯಯನಕ್ಕೂ ಸಹಕಾರಿಯಾಗಿದ್ದು, ಶಾಲೆಯ ವತಿಯಿಂದ ಪಕ್ಷಿಗಳು ಆಹಾರ ನೀರು ಸೇವಿಸುವ ಫೋಟೋ ಸ್ಪರ್ಧೆಯನ್ನೂ ಏರ್ಪಡಿಸಿ ಬಹುಮಾನ ನೀಡಲಾಗಿದೆ. ಮಕ್ಕಳ ಈ ಜಾಗೃತಿ ಅಭಿಯಾನ ಪ್ರತಿಯೊಬ್ಬರು ಕನಿಷ್ಟ ತಮ್ಮ ಮನೆಯ ಕಿಟಕಿಯಲ್ಲಿ ಪಕ್ಷಿಗಳಿಗೆ ನೀರಿಡುವಂತೆ ಪ್ರೇರೇಪಿಸಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page