Connect with us

LATEST NEWS

ಕ್ರೇನ್ ತೊಟ್ಟಿಲಿನಿಂದ ಉರುಳಿ ಬಿದ್ದು ಓರ್ವ ಸಾ*ವು; ಮಹಿಳೆ ಸ್ಥಿತಿ ಗಂಭೀರ

Published

on

ಉಡುಪಿ: ಕ್ರೇನ್ ಬಳಸಿಕೊಂಡು, ಅದರ ತೊಟ್ಟಿಲಿನಲ್ಲಿ ಮನೆಯ ಸ್ಲಾಬ್ ಸೋರಿಕೆ ಸ್ಥಳವನ್ನು ಪರೀಕ್ಷಿಸಲು ಹೋಗಿದ್ದ ಇರ್ವರು‌ ತೊಟ್ಟಿಲು ವಾಲಿಕೊಂಡು ನೆಲಕ್ಕೆ ಬಿದ್ದು ಓರ್ವ ಸಾವನ್ನಪ್ಪಿ, ಕೆಲಸದಾಕೆ ಗಂಭೀರ ಗಾಯಗೊಂಡಿರುವ ದುರ್ಘಟನೆ ಉಡುಪಿ ನಗರದ ಕೋರ್ಟ್ ಹಿಂಭಾಗ ರಸ್ತೆಯ ಲೋಕೋಪಯೋಗಿ ಇಲಾಖೆ ಕಚೇರಿ ಸನಿಹ‌ ಶನಿವಾರ ನಡೆದಿದೆ.

ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಮಾಜ ಸೇವಕ ನಿತ್ಯಾನಂದ‌ ಒಳಕಾಡು ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಗಾಯಾಳುಗಳನ್ನು ಸಾಗಿಸಿದ್ದರು. ಆದರೆ ಅದಾಗಲೇ ಫ್ರಾನ್ಸಿಸ್ ಪಟೊರ್ಡೋ (65) ಸಾವನ್ನಪ್ಪಿದ್ದಾರೆ.

READ IN ENGLISH : https://www.nammakudlaenglish.com/one-dead-after-falling-from-crane-basket-woman-critically-injured/

ಇದನ್ನೂ ಓದಿ: ಕಾಪು ಹೊಸ ಮಾರಿಗುಡಿಗೆ ಗೃಹ ಸಚಿವ ಜಿ.ಪರಮೇಶ್ವರ್ ಭೇಟಿ

ಮೃತರು ಮನೆ ಮಾಲಕರ ಸಹೋದರ ಎಂದು ತಿಳಿದುಬಂದಿದೆ. ಇವರೊಂದಿಗೆ ಕ್ರೇನ್‌ನಲ್ಲಿ ತೆರಳಿದ್ದ ಮನೆ ಕೆಲಸದಾಕೆ ಗೀತಾ (35)ಗೆ ಗಂಭೀರ ಗಾಯಗಳಾಗಿದ್ದು, ಈಕೆ ಕಲ್ಮಾಡಿ ನಿವಾಸಿ ಎಂದು ತಿಳಿದು ಬಂದಿದೆ. ಈ ನಡುವೆ ದುರಂತ ಸಂಭವಿಸಿದ ಬಳಿಕ ಕ್ರೇನ್‌ ಚಾಲಕ ಗಾಯಾಳುಗಳ ನೆರವಿಗೆ ಬಾರದೇ ಕ್ರೇನ್ ನೊಂದಿಗೆ ಪರಾರಿಯಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

LATEST NEWS

ಆರ್ ಎಸ್ ಎಸ್ ಕುರಿತು ಯಾರೂ ಲಘುವಾಗಿ ಮಾತನಾಡುವುದು ಬೇಡ: ಸಂಸದ ಕೋಟ ಶ್ರೀನಿವಾಸ ಪೂಜಾರಿ

Published

on

ಉಡುಪಿ: ಆರ್ ಎಸ್ ಎಸ್ ಕುರಿತಂತೆ ಯಾರೂ ಕೂಡಾ ಲಘುವಾಗಿ ಮಾತನಾಡುವುದು ಸರಿಯಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಲೋಚನೆ, ರಾಷ್ಟ್ರೀಯತೆ, ರಾಷ್ಟ್ರ ಭಕ್ತಿಯ ಬಗ್ಗೆ ಶಾಖೆಗೆ ಬಂದು ಗಮನಿಸಿ ಬಳಿಕ ಮಾತನಾಡ ಬೇಕು. ಕಾಂಗ್ರೆಸ್‌ ನಾಯಕರು ಆರೆಸ್ಸೆಸ್‌ ಶಾಖೆಗೆ ಬಂದು ವಿಷಯ ತಿಳಿದುಕೊಳ್ಳಲಿ ಎಂದು ಸಂಸದ ಕೊಟ ಶ್ರೀನಿವಾಸ ಪೂಜಾರಿ ಆಹ್ವಾನ ನೀಡಿದ್ದಾರೆ.

ಉಡುಪಿಯಲ್ಲಿ ನಿನ್ನೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಆರ್ ಎಸ್ ಎಸ್ ನಿಷೇಧಿಸುವ ಕುರಿತಂತೆ ದಿನಕ್ಕೊಂದು ಹೇಳಿಕೆ ಕೇಳಿ ಬರುತ್ತಿದೆ. ಜವಾಹರಲಾಲ್‌ ನೆಹರೂ ಅವರೇ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಬರುವಂತೆ ಆರ್ ಎಸ್ ಎಸ್ ಗೆ ಆಹ್ವಾನ ನೀಡಿದ್ದರು.

ಇದನ್ನೂ ಓದಿ: ಸುಳ್ಳು ಸುದ್ದಿ, ದ್ವೇಷ ಭಾಷಣಗಳ ವಿರುದ್ದ ಮಸೂದೆ ಮಂಡನೆ ಮಾಡ್ತೇವೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇನ್ನು ಅಂಬೇಡ್ಕರ್ ಅವರು ಆರ್ ಎಸ್ ಎಸ್ ಅಸ್ಪೃಶ್ಯತೆ- ಜಾತೀಯತೆ ಇಲ್ಲದ ಸಂಘಟನೆ ಎಂದಿದ್ದರು. ಆರ್ ಎಸ್ ಎಸ್ ನಿಷೇಧಕ್ಕೆ ಸ್ವತಃ ನೆಹರೂ ಅವರೇ ಒಮ್ಮೆ ಪ್ರಯತ್ನ ಮಾಡಿದ್ದರೂ ಪ್ರಯತ್ನ ಕೈಗೂಡದೇ ಇದ್ದಾಗ ನೆಹರೂ ಅವರೇ ಆರೆಸ್ಸೆಸ್‌ ನ್ನು ಸ್ವಾಗತಿಸಿದ್ದರು. ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ಅವರಿಂದಲೂ ಆರೆಸ್ಸೆಸ್‌ ನಿಷೇಧಿಸುವ ಪ್ರಯತ್ನ ಫಲಿಸಿಲ್ಲ. ರಾಹುಲ್ ಗಾಂಧಿ ಕೂಡಾ ಅದೇ ಮಾತನ್ನ ಆಡಿದ್ದಾರೆ. ಇನ್ನು ಪ್ರಿಯಾಂಕಾ ಗಾಂಧಿ ಅವರಿಂದಲೂ ಸಾಧ್ಯವಾಗದು. ಹಾಗಾಗಿ ಇಂತಹ ಗೊಂದಲಗಳ ಬಗ್ಗೆ ಸಮಯ ವ್ಯರ್ಥ ಮಾಡುವ ಬದಲು ಕಾಂಗ್ರೆಸ್ ಮುಖಂಡರು ತಮ್ಮ ಇಲಾಖೆಗಳ ಅಭಿವೃದ್ಧಿ, ಬಡವರ ಕಲ್ಯಾಣದ ಕಡೆಗೆ ಗಮನ ಹರಿಸಲಿ ಎಂದು ಸಲಹೆ ಮಾಡಿದ್ದಾರೆ.

Continue Reading

DAKSHINA KANNADA

ಸುಳ್ಳು ಸುದ್ದಿ, ದ್ವೇಷ ಭಾಷಣಗಳ ವಿರುದ್ದ ಮಸೂದೆ ಮಂಡನೆ ಮಾಡ್ತೇವೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್

Published

on

ಮಂಗಳೂರು: ಸುಳ್ಳು ಸುದ್ದಿ ಹರಡುವುದು ಹಾಗೂ ದ್ವೇಷ ಭಾಷಣ ಮಾಡುವವರ ವಿರುದ್ದ ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡನೆ ಮಾಡುವುದಾಗಿ ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.


ಈ ಸಭೆಯನ್ನು ನಾವು ಯಾವುದೇ ದುರುದ್ದೇಶದಿಂದ ಕರೆದಿಲ್ಲ ಅಥವಾ ‌ದ.ಕ ಜಿಲ್ಲೆಗೆ ಯಾವುದೇ ಲೇಬಲ್ ಹಚ್ಚಲು ನಾವು ಕರೆದಿಲ್ಲ. ಇತಿಹಾಸ ನೋಡಿದ್ರೆ ಇಡೀ ರಾಜ್ಯದಲ್ಲಿ ದ.ಕ ಜಿಲ್ಲೆಯಂಥ ಜಿಲ್ಲೆ ಮತ್ತೊಂದಿಲ್ಲ. ನೀವು ಬುದ್ದಿವಂತರು ಮಾತ್ರವಲ್ಲ, ಬಹಳಷ್ಟು ಕ್ರಿಯಾಶೀಲರು, ಪ್ರಪಂಚದ ಯಾವುದೇ ಮೂಲೆಯಲ್ಲಿ ಬದುಕಬಹುದಾದ ಚಾಕಚಕ್ಯತೆ ಉಳ್ಳವರು. ಇಡೀ ದೇಶದ ಶಿಕ್ಷಣ ವ್ಯವಸ್ಥೆನ್ನ ನಿಯಂತ್ರಣ ಮಾಡೋರು ನೀವು, ಎಂದು ಮಂಗಳೂರು ಶಾಂತಿ ಸಭೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕರಾವಳಿಯನ್ನು ಹಾಡಿ ಹೊಗಳಿದ್ದಾರೆ.

ಲಕ್ಷಾಂತರ ಜನರು ವಿದ್ಯಾರ್ಥಿಗಳು ಇಲ್ಲಿ ಕಲಿತು ಹೋಗಿ ಜೀವನ ಕಟ್ಟುಕೊಂಡಿದ್ದಾರೆ. ದೇಶದ ಮೊದಲ ಬ್ಯಾಂಕಿಂಗ್ ವ್ಯವಸ್ಥೆಗೆ ದೊಡ್ಡ ಕೊಡುಗೆ ಕೊಟ್ಟ ಜಿಲ್ಲೆ ದ.ಕ. ಸುಮಾರು‌ 38 ಜನರು ಇಂದು ತಮ್ಮ ಅಭಿಪ್ರಾಯ ಹೇಳಿದ್ದೀರಿ. ಬಹಳಷ್ಟು ಜನರು ಒಳ್ಳೆಯ ಸಲಹೆ ಕೊಟ್ಟಿದ್ದೀರಿ, ಸರ್ಕಾರದ ಜವಾಬ್ದಾರಿ ತಿಳಿಸಿದ್ದೀರಿ. ಹರೀಶ್ ಪೂಂಜಾ, ಭರತ್ ಶೆಟ್ಟಿ, ಕಾಮತ್ ಸತ್ಯ ಹೇಳಿದ್ದೀರಿ ಇದೊಂದು ಸೈದ್ದಾಂತಿಕ ಜಗಳ ಅಂತ ನಿಜವಾದ ಸತ್ಯ ಹೇಳಿದ್ದೀರಿ, ಆದರೆ ನಮ್ಮ‌‌ ಮಕ್ಕಳು ಇಂಥ ಭಯದಲ್ಲೇ ಬದುಕಬೇಕಾ? ನಾನು ನೆಹರೂ ಮೈದಾನಕ್ಕೆ ಚಿಕ್ಕಂದಿನಲ್ಲಿ ಅಥ್ಲೀಟ್ ಆಗಿ ಬಂದಿದ್ದೆ, ಆಗ ಯಾರೂ ಇಲ್ಲಿ ಹಿಂದೂ ಮುಸ್ಲಿಂ ಅಂದಿದ್ದನ್ನ ನಾನು ನೋಡಿಲ್ಲ. ಹಾಗಾಗಿ ಇತಿಹಾಸ ಸ್ಮರಿಸಿಕೊಳ್ಳಿ, ದ.ಕ ಜಿಲ್ಲೆಯ ಅವಶ್ಯಕತೆ ಇದೆ. ನಾವು ನಿಮ್ಮ ಸಲಹೆಗಳನ್ನು ತೆಗೆದುಕೊಂಡು ಚರ್ಚೆ ಮಾಡಬೇಕಿದೆ. ಆ ಬಳಿಕ ಏನೆಲ್ಲಾ ಕ್ರಮ ವಹಿಸಬೇಕೋ ಅದನ್ನ ವಹಿಸ್ತೇನೆ. ಮುಖ್ಯಮಂತ್ರಿಗಳು ಸದನದಲ್ಲೇ ಡ್ರಗ್ಸ್ ವಿರುದ್ದ ಯುದ್ದ ಸಾರಿದ್ದಾರೆ. ನಾವು ಯಾವುದೇ ಕಾರಣಕ್ಕೂ ಮತ್ತೊಂದು ಉಡ್ತಾ ಪಂಜಾಬ್ ಆಗಲು ಬಿಡಲ್ಲ. ಮಂಗಳೂರು ಕಮಿಷನರ್, ಎಸ್ಪಿಗೂ ಅದನ್ನ ಖಡಕ್ ಆಗಿ ಹೇಳಿದ್ದೇನೆ.

ಇದನ್ನೂ ಓದಿ: ಸುಳ್ಯ: ಘನತ್ಯಾಜ್ಯ ಘಟಕಕ್ಕೆ ಬೆಂಕಿ; ನಾಲ್ಕು ಲಕ್ಷ ಮೌಲ್ಯದ ಯಂತ್ರ ಹಾನಿ

ಬಹಳ ಸಾಂಸ್ಕೃತಿಕವಾಗಿ ಐಶ್ವರ್ಯವಂತ ಜಿಲ್ಲೆ ದ.ಕ ಜಿಲ್ಲೆಯಲ್ಲಿ ಸೌಹಾರ್ದ ಸಮಾವೇಶ ಮಾಡುವ ಬಗ್ಗೆಯೂ ಚಿಂತನೆ ಇದ್ದು, ಶಾಂತಿಯ ವಾತಾವರಣ ಕರಾವಳಿ ಪ್ರದೇಶದಲ್ಲಿ ಬರಬೇಕು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಅವಕಾಶ ಕೊಡಬಾರದು. ಪೊಲೀಸರು ಇನ್ನೂ ಕಠಿಣವಾಗಿ ಹೋಗಲು ಅವಕಾಶ ಕೊಡಬೇಡಿ. ಸುಳ್ಳು ಸುದ್ದಿ, ದ್ವೇಷ ಭಾಷಣಗಳ ವಿರುದ್ದ ಮಸೂದೆ ಮಂಡನೆ ಮಾಡ್ತೇವೆ. ಮುಂದಿನ ಅಧಿವೇಶನದಲ್ಲಿ ಹೊಸ ಕಾನೂನು ಮಂಡನೆ ಮಾಡ್ತೇವೆ ಎಂದು ಪರಮೇಸ್ವರ್ ಇದೇ ಸಂಧರ್ಭ ತಿಳಿಸಿದ್ದಾರೆ.

 

Continue Reading

DAKSHINA KANNADA

ಉಳ್ಳಾಲ: ರಕ್ತದೊತ್ತಡದಿಂದ ಕುಸಿದು ಬಿದ್ದು ನವ ವಿವಾಹಿತ ಸಾ*ವು

Published

on

ಉಳ್ಳಾಲ: ರಕ್ತದೊತ್ತಡದಿಂದ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ವಿವಾಹಿತ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಸಾ*ವನ್ನಪ್ಪಿದ ಘಟನೆ ಬುಧವಾರ ನಡೆದಿದೆ.

ಮೃ*ತ ಯುವಕನನ್ನು ಉಳ್ಳಾಲ ತಾಲೂಕಿನ ಮಂಜನಾಡಿ ಪೆರಡೆ ದಿ. ವೆಂಕಪ್ಪ ಹಾಗೂ ಪಾರ್ವತಿ ದಂಪತಿಯ ಪುತ್ರ 32 ವರ್ಷದ ಭರತ್ ಎಂದು ತಿಳಿದುಬಂದಿದೆ.

ನಗರದ ಮಾಲ್ ಒಂದರಲ್ಲಿ ಟೈಲರ್ ಕೆಲಸ ಮಾಡುತ್ತಿದ್ದ ಭರತ್ ನಾಲ್ಕು ದಿನದ ಹಿಂದೆ ರಕ್ತದೊತ್ತಡದಿಂದ ಕುಸಿದು ಬಿದ್ದಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಸಾ*ವನ್ನಪ್ಪಿದ್ದಾರೆ.

ಇದನ್ನೂ ಓದಿ: ಸುಳ್ಯ: ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ತುಳಿದು ವ್ಯಕ್ತಿ ಸಾವು

ಕಳೆದ ಏಪ್ರಿಲ್ 22ರಂದು ಭರತ್ ವಿವಾಹ ಸಮಾರಂಭ ನಡೆದಿದ್ದು ಪತ್ನಿ ನಗರದ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೃ*ತ ಯುವಕ ಭರತ್ ತಾಯಿ, ಪತ್ನಿ ಹಾಗೂ ಮೂವರು ಸೋದರಿಯರು ಅಗಲಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page