Connect with us

BANTWAL

ಬಂಟ್ವಾಳ: ವೃದ್ಧಾಪ್ಯದಲ್ಲೂ ಬಾಡದ ಸೇವಾಗುಣ-ಆಶ್ರಮ ಕಟ್ಟಲು ಮುಂದಾದ ಕುಮುದಜ್ಜಿ

Published

on

ಬಂಟ್ವಾಳ: ಸಮಾಜದಲ್ಲಿ ಯಾರಿಗೂ ಬೇಡವಾಗಿ ಅನಾಥವಾಗಿರುವ ಹೆಣ್ಣು ಮಕ್ಕಳು-ಮಹಿಳೆಯರಿಗೆ ಆಶ್ರಯ ಕಲ್ಪಿಸುವ ದೃಷ್ಟಿಯಿಂದ ಪಾಣೆಮಂಗಳೂರಿನ ಮಹಿಳೆಯೊಬ್ಬರು ಉಚಿತವಾಗಿ ಆಶ್ರಮ ನಿರ್ಮಾಣಕ್ಕೆ ಮುಂದಾಗಿದ್ದು, ನರಿಕೊಂಬು ರಸ್ತೆಯ ಮೊಗರ್ನಾಡಿನಲ್ಲಿ ತಮ್ಮ ಸ್ವಂತ ಜಮೀನಿನಲ್ಲಿ ಆಶ್ರಮಕ್ಕಾಗಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ.


ಪಾಣೆಮಂಗಳೂರಿನ ಕುಮುದಾ ಜೆ.ಕುಡ್ವ ಅವರೇ ಆಶ್ರಮ ನಿರ್ಮಾಣಕ್ಕೆ ಮುಂದಾಗಿರುವ ಮಹಿಳೆಯಾಗಿದ್ದು, ಸುಮಾರು 10 ವರ್ಷಗಳ ಹಿಂದೆಯೇ ಆಶ್ರಮ ನಿರ್ಮಾಣ ಮಾಡಬೇಕು ಎಂಬ ಇಚ್ಛೆಯೊಂದಿಗೆ 2011ರಲ್ಲಿ ಜೆ.ಕೆ.ಸೇವಾ ಟ್ರಸ್ಟ್ ಸ್ಥಾಪಿಸಿದ್ದರು.

ಆದರೆ ಹಲವು ಕಾರಣಕ್ಕೆ ಆಶ್ರಮ ನಿರ್ಮಾಣ ಸಾಧ್ಯವಾಗಿರಲಿಲ್ಲ. ಪ್ರಸ್ತುತ ಆರಂಭಿಸುವ ಆಶ್ರಮದಲ್ಲಿ ಗರಿಷ್ಠ ಅಂದರೆ 100 ಮಂದಿಗೆ ಅವಕಾಶ ನೀಡುವ ಗುರಿಯನ್ನು ಇಟ್ಟುಕೊಂಡಿದ್ದಾರೆ.

ಆದರೆ ಇದೀಗ ಮೊಗರ್ನಾಡಿನಲ್ಲಿ ತಮ್ಮ 53ಸೆಂಟ್ಸ್ ಜಮೀನಿನಲ್ಲಿ ಆಶ್ರಮಕ್ಕಾಗಿ ಸುಸಜ್ಜಿತ ವಸತಿ ವ್ಯವಸ್ಥೆ, ಶೌಚಾಲಯ, ನೀರು, ವಿದ್ಯುತ್ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದು, ಜೂನ್ ತಿಂಗಳಲ್ಲಿ ಆಶ್ರಮ ಆರಂಭಿಸುವ ಕುರಿತು ಸಿದ್ಧತೆ ನಡೆಸಿದ್ದಾರೆ. ಆ ಜಮೀನಿನಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡವೊಂದನ್ನು ಆಶ್ರಮಕ್ಕೆ ಹೊಂದಿಕೊಳ್ಳುವ ರೀತಿ ನವೀಕರಣಗೊಳಿಸಿದ್ದಾರೆ.

ಕುಮುದಾ ಜೆ.ಕುಡ್ವ ಅವರು ಪಾಣೆಮಂಗಳೂರಿನ ಕೇಂದ್ರ ಭಾಗದಲ್ಲಿ ವಾಣಿಜ್ಯ ಸಂಕೀರ್ಣವೊಂದನ್ನು ಹೊಂದಿದ್ದು, ಅದರ ಬಾಡಿಗೆ ಮೊತ್ತದಿಂದಲೇ ಆಶ್ರಮ ನಡೆಸುವುದಾಗಿ ತಿಳಿಸಿದ್ದಾರೆ.

ಅಂದರೆ ಕುಮುದಾ ಜೆ.ಕುಡ್ವ ಅವರ ಇಬ್ಬರು ಮಕ್ಕಳು ಹೊರಗಿದ್ದು, ಪ್ರಸ್ತುತ ಅವರು ಮನೆಯಲ್ಲೇ ಒಬ್ಬರೇ ವಾಸಿಸುತ್ತಿದ್ದಾರೆ. ಮುಂದೆ ಆಶ್ರಮ ಆರಂಭವಾದ ಬಳಿಕ ಅವರು ಕೂಡ ಅದೇ ಆಶ್ರಮದಲ್ಲಿ ಉಳಿದುಕೊಳ್ಳುವ ಹಾಗೆ ಪ್ರತ್ಯೇಕ ಕೊಠಡಿಯೊಂದನ್ನು ನಿರ್ಮಿಸಿದ್ದಾರೆ.

 

ಜಮೀನಿನಲ್ಲಿ ಒಂದಷ್ಟು ತೆಂಗಿನಮರಗಳಿದ್ದು, ಅದರ ಆದಾಯವನ್ನೂ ಅಶ್ರಮಕ್ಕೆ ಬಳಕೆ ಮಾಡುತ್ತೇವೆ. ಉಳಿದಂತೆ ಆಶ್ರಮವಾಸಿಗಳಿಗೆ ಪ್ರಾರಂಭದಲ್ಲಿ ಅಡುಗೆಗೆ ವ್ಯವಸ್ಥೆ ಮಾಡಿ ಮುಂದೆ ಅವರೇ ಅಡುಗೆ ತಯಾರಿ ಮಾಡುವ ಆಲೋಚನೆಯನ್ನೂ ಹೊಂದಿದ್ದಾರೆ.

ಹೆಣ್ಣು ಮಕ್ಕಳಿಂತ ಹಿರಿಯ ಮಹಿಳೆಯರಿಗೂ ಆಶ್ರಮದಲ್ಲಿ ಆಶ್ರಯ ನೀಡುವ ಆಲೋಚನೆ ಹೊಂದಿದ್ದು, ಆರೋಗ್ಯವಂತರಾಗಿರುವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎನ್ನುತ್ತಾರೆ.

ಪ್ರಾಣಿ ಪ್ರೇಮಿಯಾಗಿರುವ ಕುಮುದಾ ಅವರಿ ಹಿಂದೆ ಹತ್ತಾರು ನಾಯಿಗಳನ್ನು ಸಾಕುತ್ತಿದ್ದು, ಅದಕ್ಕೆ ಬೇಕಾದ ಆರೈಕೆಯನ್ನೂ ಸ್ವತಃ ಅವರೇ ಮಾಡುತ್ತಿದ್ದರು. ಆದರೆ ಪ್ರಸ್ತುತ ವಯಸ್ಸಾದ ಕಾರಣದಿಂದ ನಾಯಿಗಳನ್ನು ಸಾಕುವುದನ್ನು ಬಿಟ್ಟು ಬಿಟ್ಟಿದ್ದಾರೆ.

ಆದರೆ ಮುಂದೆ ಆಶ್ರಮವಾಸಿಗಳ ಜತೆ ನಾಯಿಗಳನ್ನೂ ಸಾಕುವ ಯೋಜನೆಯೊಂದಿಗೆ ಅದಕ್ಕಾಗಿ ಪ್ರತ್ಯೇಕ ಗೂಡಿನ ವ್ಯವಸ್ಥೆಗಳನ್ನು ಮಾಡಿದ್ದಾರೆ.

ಈ ಸೇವಾ ಯೋಜನೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ ಅವರು ‘ಆಶ್ರಮ ಸ್ಥಾಪನೆಯ ಉದ್ದೇಶದಿಂದ 10 ವರ್ಷಗಳ ಹಿಂದೆಯೇ ಜಗದೀಶ್ ಕುಡ್ವಾ, ಕುಮುದಾ ಹೆಸರಿನಲ್ಲಿ ಜೆ.ಕೆ.ಸೇವಾ ಟ್ರಸ್ಟ್ ಸ್ಥಾಪಿಸಿದ್ದು, ಮುಂದೆ ಜೆ.ಕೆ.ಮಹಿಳಾ ಸೇವಾಶ್ರಮವನ್ನು ಆರಂಭಿಸಲಿದ್ದೇವೆ.

ಆದರೆ ನಮ್ಮ ಆಶ್ರಮದಲ್ಲಿ ಒಬ್ಬರಿಂದ ಒಬ್ಬರಿಗೆ ತಗಲುವ ರೋಗದ ಲಕ್ಷಣವಿರುವವರನ್ನು, ಅತೀ ಹೆಚ್ಚು ಸಿಡುಕು ಸ್ವಭಾವ ಹೊಂದಿದವರನ್ನು ಸೇರಿಸಿಕೊಳ್ಳುವುದಿಲ್ಲ. ಅದರಿಂದ ಉಳಿದವರಿಗೆ ತೊಂದರೆ ಆಗುವ ಸಾಧ್ಯತೆ ಹೆಚ್ಚು.

ಅದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ. ಆಶ್ರಮವಾಸಿಗಳ ಆರೋಗ್ಯದ ದೃಷ್ಟಿಯಿಂದ ವೈದ್ಯರ ಜತೆಯೂ ಮಾತುಕತೆ ನಡೆಸಿದ್ದು, ಅವರು ಆಶ್ರಮಕ್ಕೆ ಬಂದು ಸೇವೆ ನೀಡುವ ಭರವಸೆ ನೀಡಿದ್ದಾರೆ’ ಎಂದು ಹೇಳಿದರು.

BANTWAL

ಎರಡನೇ ವರ್ಷದ ಮೂಳೂರು-ಅಡ್ಡೂರು ಕಂಬಳದ ಆಹ್ವಾನ ಪತ್ರಿಕೆ ಬಿಡುಗಡೆ

Published

on

ಮಂಗಳೂರು: ಎರಡನೇ ವರ್ಷದ ಮೂಳೂರು-ಅಡ್ಡೂರು ಜೋಡು ಕರೆ ಕಂಬಳ ಎಪ್ರಿಲ್ 12 ರ ಶನಿವಾರ ನಡೆಯಲಿದೆ.


ಸಮಾಜ ಸೇವಕ ಹಾಗೂ ರಾಜಕೀಯ ನಾಯಕ ಇನಾಯತ್ ಅಲಿಯವರ ನೇತೃತ್ವದಲ್ಲಿ ಈ ಕಂಬಳ ಆಯೋಜನೆಯಾಗಿದೆ. ವಿಜೃಂಭಣೆಯಿಂದ ನಡೆಯುವ ಮೂಳುರು-ಅಡ್ಡೂರು ಜೋಡುಕರೆ ಕಂಬಳದ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಲಾಗಿದೆ.

ನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರ ಸಮಕ್ಷಮದಲ್ಲಿ ಅಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಗಿದೆ. ಎರಡನೇ ವರ್ಷದ ಕಂಬಳವನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮಾಡಲಿದ್ದಾರೆ.

ಇದನ್ನೂ ಓದಿ: ಈ ದಿನದಂದು ನಿಮ್ಮ ಖಾತೆಗೆ ಸೇರಲಿದೆ 2 ತಿಂಗಳ ಗೃಹಲಕ್ಷ್ಮೀ ಹಣ 

ಸರ್ವ ಧರ್ಮಗಳ ಪ್ರಮುಖರ ಶುಭಾಶೀರ್ವಾದದೊಂದಿಗೆ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸ್ಪೀಕರ್ ಯು.ಟಿ. ಖಾದರ್, ಸಚಿವ ದಿನೇಶ್ ಗುಂಡೂರಾವ್ ಅವರು ಭಾಗವಹಿಸಲಿದ್ದಾರೆ. ಹಲವಾರು ಚಲನ ಚಿತ್ರ ನಟ ನಟಿಯರು ಕೂಡಾ ಸಂಜೆಯ ಸಭಾ ಕಾರ್ಯಕ್ರಮಕ್ಕೆ ಆಗಮಿಸಲಿರುವುದಾಗಿ ಕಂಬಳ ಸಮಿತಿಯ ಅಧ್ಯಕ್ಷ ಇನಾಯತ್ ಅಲಿ ಮಾಹಿತಿ ನೀಡಿದ್ದಾರೆ.

Continue Reading

BANTWAL

ಮಂಗಳೂರು : ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ ಬಸ್ ಪೊಲೀಸರ ವಶಕ್ಕೆ

Published

on

ಮಂಗಳೂರು : ವಿಟ್ಲ -ಮುಡಿಪು ಮಧ್ಯೆ 2 ದಿನಗಳಿಂದ ಅಪಾಯಕಾರಿ ಸ್ಥಿತಿಯಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್ಸೊಂದನ್ನು ತಡೆದು ಸಾರ್ವಜನಿಕರು ನಿನ್ನೆ (ಮಾ.23) ವಿಟ್ಲ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.

ಒಂದೇ ಟಯರಲ್ಲಿ ವಿಟ್ಲ-ಮುಡಿಪು-ಮಂಗಳೂರು ಮಧ್ಯೆ ಸಂಚರಿಸುವ ಖಾಸಗಿ ಬಸ್ಸೊಂದು ಹಿಂದಿನ ಎಡಬದಿ ಟಯರ್‌ನಲ್ಲಿ ಮಾತ್ರ ಸಂಚರಿಸುತ್ತಿತ್ತು‌. ಇನ್ನೊಂದು ಟಯರ್ ಒಡೆದು ಕರ್ಕಶ ಶಬ್ದ ಬರುತ್ತಿತ್ತು.ಬಸ್‌ನ ಚಾಲಕ, ಕಂಡಕ್ಟರ್ ಮುಂಜಾಗ್ರತೆ ವಹಿಸಿಲ್ಲ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ.

ಶನಿವಾರ (ಮಾ.22) ಮಧ್ಯಾಹ್ನದಿಂದ ನಿನ್ನೆ (ಮಾ.23) ಮಧ್ಯಾಹ್ನ ತನಕ ವಿಟ್ಲ – ಮುಡಿಪು – ಮಂಗಳೂರು ಮಧ್ಯೆ ಅಪಾಯಕಾರಿ ರೀತಿಯಲ್ಲಿ ಸಂಚರಿಸುತ್ತಾ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದರೆಂದು ಪ್ರಯಾಣಿಕರೇ ಆರೋಪಿಸಿದ್ದಾರೆ. ಈ ಕುರಿತು ಮಾಹಿತಿ ಪಡೆದ ಸಾರ್ವಜನಿಕರು ಸಾಲೆತ್ತೂರು ಪೇಟೆಯಲ್ಲಿ ಬಸ್ಸನ್ನು ತಡೆ ಹಿಡಿದು ವಿಟ್ಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಬಂಟ್ವಾಳ ಸಾರಿಗೆ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಆದಷ್ಟು ಶೀಘ್ರವೇ ಈ ನಿರ್ಲಕ್ಷ್ಯದ ಕುರಿತು ಕಠಿಣ ಕ್ರಮ ಕೈಗೊಳ್ಳುವಂತೆ ದೂರುದಾರರು ಒತ್ತಾಯಿಸಿದ್ದಾರೆ.

Continue Reading

BANTWAL

ಬಂಟ್ವಾಳ: ಕಾರಿಂಜ ಬೆಟ್ಟವನ್ನು ಏರುವ ಸಾಹಸಕ್ಕೆ ಮುಂದಾದ ಕೋತಿರಾಜ್

Published

on

ಬಂಟ್ವಾಳ: ಕರುನಾಡಿನ ಸ್ಪೈಡರ್ ಮ್ಯಾನ್ ಎಂದೇ ಹೆಸರು ಪಡೆದ ಕೋತಿರಾಜ್ ಅವರು ಪ್ರಥಮ ಬಾರಿಗೆ ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕಾರಿಂಜೇಶ್ವರ ಬೆಟ್ಟವನ್ನು ಏರುವ ಸಾಹಸಕ್ಕೆ ಮುಂದಾಗಿದ್ದಾರೆ.

ಮಾ.23 ರಂದು ಆದಿತ್ಯವಾರ ಬಂಡೆ ಏರುವುದಾಗಿ ಅಧಿಕೃತವಾಗಿ ತಿಳಿಸಿದ್ದಾರೆ. ಬಡವರ ಕಲ್ಯಾಣಕ್ಕಾಗಿ ಟ್ರಸ್ಟ್ ವೊಂದನ್ನು ನಡೆಸುವ ಕೋತಿರಾಜ್, ಆ ಮೂಲಕ ಇನ್ನಷ್ಟು ಸಮಾಜ ಸೇವೆ ಮಾಡಲು ಆರ್ಥಿಕ ಸಹಾಯ ಧನದ ಅವಶ್ಯಕತೆ ಇದೆ.

ಈ ಹಿನ್ನೆಲೆಯಲ್ಲಿ ಬಂಟ್ವಾಳದ ಪುರಾಣ ಪ್ರಸಿದ್ಧ ದೇವಾಲಯದ ಬೆಟ್ಟವನ್ನೇರಲು ಸಿದ್ಧತೆ ನಡೆಸಿದ್ದಾರೆ. ದೇವಸ್ಥಾನ ಹಾಗೂ ಪುಂಜಾಲಕಟ್ಟೆ ಪೋಲೀಸ್ ಠಾಣೆಗೆ ಈ ಬಗ್ಗೆ ಅಧಿಕೃತವಾಗಿ ಪತ್ರವನ್ನು ನೀಡಿದ ಅವರು ಬೆಳ್ತಂಗಡಿ ಬಂಟ್ವಾಳ ತಾಲೂಕಿನ ಜನರ ಸಹಕಾರ ಯಾಚಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page