Connect with us

FILM

ಮಾಣಿಕ್ಯ ಬೆಡಗಿಯ ಮನೆಯಲ್ಲಿ ಸಿಕ್ಕ ನಗ, ನಗದು ನೋಡಿ ಅಧಿಕಾರಿಗಳಿಗೆ ಶಾಕ್! ಇಲ್ಲಿದೆ ನಟಿಯ ಸ್ಮಗ್ಲಿಂಗ್ ಸ್ಟೋರಿ

Published

on

ಮಂಗಳೂರು/ಬೆಂಗಳೂರು : ಕಿಚ್ಚ ಸುದೀಪ್ ಜೊತೆ ರನ್ನ ಚಿತ್ರದಲ್ಲಿ ನಟಿಸಿ ಗಮನಸೆಳೆದಿದ್ದ ನಟಿ ರನ್ಯಾ ರಾವ್. ಅದಾದ ಬಳಿಕ ಯಾವ ಚಿತ್ರವೂ ರನ್ಯಾಗೆ ಅಷ್ಟೊಂದು ಹೆಸರು ತಂದು ಕೊಟ್ಟಿರಲಿಲ್ಲ. ಇದೀಗ ಮತ್ತೆ ನಟಿ ಸುದ್ದಿಯಾಗಿದ್ದು, ಸ್ಮಗ್ಲಿಂಗ್ ವಿಚಾರದಲ್ಲಿ.

ದುಬೈನಿಂದ ಅಕ್ರಮ ಚಿನ್ನ ತಂದಿದ್ದಾರೆಂದು ಕಸ್ಟಮ್ಸ್ ಅಧಿಕಾರಿಗಳು ಆಕೆಯನ್ನು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದರು. ತಪಾಸಣೆ ವೇಳೆ ರನ್ಯಾ ಬಳಿ 14.80 ಕೆಜಿ ಚಿನ್ನ ಪತ್ತೆಯಾಗಿತ್ತು. ಸದ್ಯ ರನ್ಯಾ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಮನೆಯಲ್ಲಿ ಸಿಕ್ತು ಕೋಟಿಗಟ್ಟಲೆ ನಗ – ನಗದು  :

ಯಾವಾಗ ರನ್ಯಾ ವಿಮಾನ ನಿಲ್ದಾಣದಲ್ಲಿ ಸೆರೆ ಸಿಕ್ಕರೋ, ಆದಾದ ಮೇಲೆ ಆಕೆಯ ಮನೆಯ ಮೇಲೂ ದಾ*ಳಿ ನಡೆಸಲಾಗಿದೆ. ಅಲ್ಲಿ ಸಿಕ್ಕ ಹಣ, ಚಿನ್ನಗಳನ್ನು ನೋಡಿ ಅಧಿಕಾರಿಗಳಿಗೆ ಶಾ*ಕ್ ಆಗಿದೆ. ಹೌದು,  ರನ್ಯಾ ಅವರ ಲ್ಯಾವೆಲ್ಲೆ ರಸ್ತೆಯಲ್ಲಿರುವ ಐಷಾರಾಮಿ ಫ್ಲ್ಯಾಟ್‌ನಲ್ಲಿ 2.06 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು 2.67 ಕೋಟಿ ರೂಪಾಯಿ ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆ ಫ್ಲ್ಯಾಟ್‌ಗೆ ರನ್ಯಾ 4.5 ಲಕ್ಷ ರೂಪಾಯಿ ಬಾಡಿಗೆ ಪಾವತಿಸುತ್ತಿದ್ದರು ಎಂಬ ವಿಚಾರ ಬಹಿರಂಗವಾಗಿದೆ.

ರನ್ಯಾ ರಾವ್ ಅವರು ಪೊಲೀಸ್ ಮಹಾನಿರ್ದೇಶಕ (ಪೊಲೀಸ್ ವಸತಿ ನಿಗಮ) ರಾಮಚಂದ್ರ ರಾವ್ ಅವರ ಪುತ್ರಿ.  ನಾಲ್ಕು ತಿಂಗಳ ಹಿಂದೆಯಷ್ಟೇ ಆಕೆಗೆ ಮದುವೆಯಾಗಿತ್ತು. ವಿಪರ್ಯಾಸ ಅಂದ್ರೆ ಅದಾದ ಮೇಲೆ ಆಕೆಗೆ ತನ್ನ ತಂದೆಯ ಜೊತೆ ಸಂಪರ್ಕವೇ ಇರಲಿಲ್ಲವಂತೆ.

ತಗಲಾಕ್ಕೊಂಡಿದ್ದು ಹೇಗೆ?

ದುಬೈನ ಚಿನ್ನ ಕಳ್ಳಸಾಗಣೆ ಜಾಲದಲ್ಲಿ ಕನ್ನಡದ ನಟಿಯೊಬ್ಬರು ಸಕ್ರಿಯರಾಗಿರುವ ಬಗ್ಗೆ ಡಿಆರ್ ಐ ಅಧಿಕಾರಿಗಳಿಗೆ ಕೆಲವು ದಿನಗಳ ಹಿಂದಷ್ಟೇ ಮಾಹಿತಿ ದೊರೆತಿತ್ತಂತೆ. ಈ ನಡುವೆ ರನ್ಯಾ ಪದೇ ಪದೇ ದುಬೈಗೆ ಹೋಗಿ ಬರುತ್ತಿದ್ದುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಅದರಲ್ಲೂ ರನ್ಯಾ ಕಳೆದ 15 ದಿನಗಳಲ್ಲಿ ನಾಲ್ಕು ಬಾರಿ ದುಬೈಗೆ ಹೋಗಿ ಬಂದಿದ್ದರು ಎಂಬುದು ನಿಜಕ್ಕೂ  ಶಾಕಿಂಗ್ ವಿಚಾರ.

ರನ್ಯಾ ಅವರು ಡಿಜಿಪಿ ಹೆಸರನ್ನು ಬಳಸಿಕೊಂಡು ತನ್ನ ಬೆಲ್ಟ್ ಮತ್ತು ಬಟ್ಟೆಯಲ್ಲಿ ಬಚ್ಚಿಟ್ಟು ಚಿನ್ನದ ತುಂಡುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದರು ಎಂದು ಹೇಳಲಾಗಿದೆ. ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಳಿಕ ಆಕೆಯನ್ನು ಕರೆದೊಯ್ಯಲು ಪೊಲೀಸ್ ಸಿಬ್ಬಂದಿ ಬರುತ್ತಿದ್ದರು ಎಂಬುದು ಮತ್ತೊಂದು ಶಾ*ಕಿಂಗ್ ವಿಚಾರ.

ಇದನ್ನೂ ಓದಿ : ‘ಮದುವೆ ಒಂದು ದೊಡ್ಡ ಜವಾಬ್ದಾರಿ’ ಎಂದಿದ್ದ ಮಿಲ್ಕಿ ಬ್ಯೂಟಿ ಬ್ರೇಕಪ್ ಮಾಡಿಕೊಂಡಿದ್ದೇಕೆ?

ಹೀಗಾಗಿ ಪೊಲೀಸ್ ಸಿಬ್ಬಂದಿ ಅಥವಾ ಐಪಿಎಸ್ ಅಧಿಕಾರಿ ಚಿನ್ನ ಕಳ್ಳಸಾಗಣೆ ಕಾರ್ಯಾಚರಣೆಯಲ್ಲಿ ಈಕೆಯೊಂದಿಗೆ ಕೈ ಜೋಡಿಸಿದ್ದಾರಾ ಎಂಬ ಅನುಮಾನವೂ ಇದ್ದು, ಈ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಸದ್ಯ ರನ್ಯಾಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಮಾರ್ಚ್ 18ರ ವರೆಗೆ ಆಕೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ರನ್ಯಾ ಕಿಚ್ಚ ಸುದೀಪ್ ನಟನೆಯ ‘ಮಾಣಿಕ್ಯ’ ಸಿನಿಮಾದಲ್ಲಿ ನಟಿಸುವ ಮೂಲಕ ಖ್ಯಾತರಾಗಿದ್ದರು. ತಮಿಳಿನಲ್ಲೂ ಸಿನಿಮಾ ಮಾಡಿದ್ದು ಅದೇನೂ ಸಕ್ಸಸ್ ಕೊಟ್ಟಿರಲಿಲ್ಲ. ಬಳಿಕ 2017ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ‘ಪಟಾಕಿ’ ಚಿತ್ರದಲ್ಲಿ ನಟಿಸಿದ್ದರು.

DAKSHINA KANNADA

ಮೇ 23 ರಿಂದ ತುಳುನಾಡಿನಾದ್ಯಂತ “ಗಂಟ್ ಕಲ್ವೆರ್’ ತುಳು ಚಿತ್ರ ತೆರೆಗೆ

Published

on

ಮಂಗಳೂರು: ಸ್ನೇಹ ಕೃಪಾ ಮೂವೀಸ್ ಲಾಂಛನದಲ್ಲಿ ತಯಾರಾದ ಕಲಾಸಾರ್ವಭೌಮ ಸುಧಾಕರ ಬನ್ನಂಜೆ ಕತೆ ಚಿತ್ರಕತೆ ಸಂಭಾಷಣೆ ಹಾಡು ಬರೆದು ನಿರ್ಮಿಸಿ ನಿರ್ದೇಶಿಸಿರುವ “ಗಂಟ್ ಕಲ್ವೆರ್” ತುಳು ಚಿತ್ರ ಮೇ 23 ರಂದು ತುಳುನಾಡಿನಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ.

ನಗರದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಚಿತ್ರ ನಿರ್ಮಾಪಕರು, ಮಂಗಳೂರಿನಲ್ಲಿ ಭಾರತ್ ಸಿನಿಮಾಸ್, ಸಿನಿಪೋಲಿಸ್ ಪಿವಿ ಆರ್ ,ರೂಪವಾಣಿ , ಉಡುಪಿಯಲ್ಲಿ ಭಾರತ್ ಸಿನಿಮಾಸ್, ಕಲ್ಪನಾ, ಮಣಿಪಾಲ, ಪಡುಬಿದ್ರೆ ಪುತ್ತೂರು, ದೇರಳಕಟ್ಟೆಯ ಭಾರತ್ ಸಿನಿಮಾಸ್, ಮಣಿಪಾಲದ ಐನಾಕ್ಸ್, ಕಾರ್ಕಳದ ರಾಧಿಕಾ, ಪ್ಲಾನೆಟ್ ಬೆಳ್ತಂಗಡಿಯ ಭಾರತ್, ಸುರತ್ಕಲ್ ನ ನಟರಾಜ್ ಹಾಗೂ ಸಿನಿ ಗ್ಯಾಲಕ್ಸಿ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೊಳ್ಳಲಿದೆ ಎಂದರು.

ಇದನ್ನೂ ಓದಿ: 35 ವರ್ಷದ ನಟಿಯನ್ನು ವರಿಸಲಿದ್ದಾರೆ ವಿಶಾಲ್..! ಅಷ್ಟಕ್ಕೂ ಹುಡುಗಿ ಯಾರು ಗೊತ್ತಾ..?

ತುಳು ಚಿತ್ರರಂಗದ ಖ್ಯಾತ ನಟರು ಇದರಲ್ಲಿ ನಟಿಸಿದ್ದಾರೆ ಎಂದು ವಿವರಿಸಿದರು. ವೇದಿಕೆಯಲ್ಲಿ ರಾಕೇಶ್ ಆಚಾರ್ಯ, ಸುಧಾಕರ್, ಪ್ರಶಾಂತ್ ಆಚಾರ್ಯ, ತಮ್ಮ ಲಕ್ಷ್ಮಣ ಮೊದಲಾದವರಿದ್ದರು.

Continue Reading

FILM

35 ವರ್ಷದ ನಟಿಯನ್ನು ವರಿಸಲಿದ್ದಾರೆ ವಿಶಾಲ್..! ಅಷ್ಟಕ್ಕೂ ಹುಡುಗಿ ಯಾರು ಗೊತ್ತಾ..?

Published

on

ಮಂಗಳೂರು/ಚೆನ್ನೈ: ವಯಸ್ಸು 47 ಆಗಿದ್ದರೂ ಬ್ಯಾಚುಲರ್ ಆಗಿಯೇ ಉಳಿದಿದ್ದ ನಟ ವಿಶಾಲ್ ಕೊನೆಗೂ ಏಕಾಂಗಿ ಜೀವನಕ್ಕೆ ವಿದಾಯ ಹೇಳುವ ಸಮಯ ಬಂದಿದೆ. ಕೊನೆಗೂ ವಿಶಾಲ್ ಅವರು ಮದುವೆಯಾಗುವುದಾಗಿ ಘೋಷಣೆ ಮಾಡಿದ್ದಾರೆ. ಅವರು ಕೈ ಹಿಡಿಯಲಿರುವ ವಧು ಯಾರು ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.

ಹೌದು, ವಿಶಾಲ್ ಕೃಷ್ಣ ಅವರು ಮದುವೆ ಆಗಲು ಸಜ್ಜಾಗಿದ್ದಾರೆ. ಹಾಗಾದರೆ ಹುಡುಗಿ ಯಾರು ಎಂಬ ಪ್ರಶ್ನೆ ಮೂಡುವುದು ಸಹಜ. ತಮಿಳು ಚಿತ್ರರಂಗದ ಖ್ಯಾತ ನಟಿ ಸಾಯಿ ಧನ್ಶಿಕಾ ಜೊತೆ ವಿಶಾಲ್ ಹಸೆಮಣೆ ಏರಲಿದ್ದಾರೆ. ಇದು ಲವ್ ಮ್ಯಾರೇಜ್ ಕೂಡ ಹೌದು. ಆಗಸ್ಟ್‌ನಲ್ಲಿ ಮದುವೆ ಆಗೋದಾಗಿ ಸಿಹಿಸುದ್ದಿ ಕೊಟ್ಟಿದ್ದಾರೆ.

ಕಳೆದ 15 ವರ್ಷಗಳಿಂದ ಪರಿಚಿತರಾಗಿರುವ ಧನ್ಶಿಕಾ ಜೊತೆ ವಿಶಾಲ್ ಮದುವೆಗೆ ಸಜ್ಜಾಗಿದ್ದಾರೆ. ಈ ಬಗ್ಗೆ ಚೆನ್ನೈನಲ್ಲಿ ನಡೆದ ಧನ್ಶಿಕಾ ನಟನೆಯ ‘ಯೋಗಿದ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶಾಲ್, ನನಗೆ ಧನ್ಶಿಕಾ ಜೊತೆ ಮದುವೆ ಫಿಕ್ಸ್ ಆಗಿದೆ. ಅವರ ತಂದೆ ಕೂಡ ಇಲ್ಲಿಯೇ ಇದ್ದಾರೆ. ಅವರ ಆಶೀರ್ವಾದೊಂದಿಗೆ ನಾನು ಅವಳನ್ನು ಪರಿಚಯಿಸುತ್ತಿದ್ದೇನೆ. ಧನ್ಶಿಕಾ ಅದ್ಭುತ ನಟಿ. ಮದುವೆ ಬಳಿಕವೂ ಆಕೆ ನಟನೆ ಮಾಡುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ: ಮತ್ತೆ ಪವಿತ್ರಾ ಪ್ರೀತಿಯಲ್ಲಿ ಬಿದ್ರಾ ದರ್ಶನ್‌!?

ಬಳಿಕ ಮಾತನಾಡಿದ ಧನ್ಶಿಕಾ, ನಮ್ಮ ಸುದ್ದಿ ವರದಿ ವೈರಲ್ ಆದ ನಂತರ ನಮ್ಮ ಸಂಬಂಧವನ್ನು ಅಧಿಕೃತಗೊಳಿಸುವಂತೆ ಒತ್ತಾಯಿಸಲಾಯಿತು ಎಂದರು. ನಾವಿಬ್ಬರು ಪತ್ರಿಕಾಗೋಷ್ಠಿಯಲ್ಲಿ ಘೋಷಣೆ ಮಾಡಲು ಬಯಸಿರಲಿಲ್ಲ. ಆದಾಗ್ಯೂ, ಇಂದು ಬೆಳಗ್ಗೆ ಸುದ್ದಿ ವರದಿ ವೈರಲ್ ಆಯಿತು. ಹೀಗಾಗಿ ಮರೆಮಾಡಲು ಏನೂ ಉಳಿದಿಲ್ಲ. ಕಳೆದ 15 ವರ್ಷಗಳಿಂದಲೂ ಇಬ್ಬರ ನಡುವೆ ಒಳ್ಳೆಯ ಸಂಬಂಧ ಇದೆ. ನಡಿಗರ್ ಸಂಘದ ಕಟ್ಟಡ ಆ.15ರಂದು ಉದ್ಘಾಟನೆ ಮಾಡಲು ಪ್ಲ್ಯಾನ್ ಮಾಡಿದ್ದೇವೆ. ಆಗಸ್ಟ್‌ 29ರಂದು ವಿಶಾಲ್ ಅವರ ಹುಟ್ಟುಹಬ್ಬ. ಅದೇ ದಿನ ವಿವಾಹ ನಿಶ್ಚಯ ಮಾಡಲಾಗಿದೆ ಎಂದು ಹೇಳಿದ್ದಾರೆ. ಈ ಸುದ್ದಿ ಕೇಳಿ ಫ್ಯಾನ್ಸ್ ಫುಲ್‌ ಖುಷ್‌ ಆಗಿದ್ದಾರೆ.

Continue Reading

FILM

ಮತ್ತೆ ಪವಿತ್ರಾ ಪ್ರೀತಿಯಲ್ಲಿ ಬಿದ್ರಾ ದರ್ಶನ್‌!?

Published

on

ಮಂಗಳೂರು/ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ವಿಚಾರಣೆ ನಡೆದಿದೆ. ಈ ವೇಳೆ ಒಂದಷ್ಟು ಅಚ್ಚರಿಯ ಘಟನೆ ನಡೆದಿದೆ.

ಕೋರ್ಟ್‌ಗೆ ಎ1 ಪವಿತ್ರ ಗೌಡ, ಎ2 ನಟ ದರ್ಶನ್‌ ಸೇರಿದಂತೆ ಇತರೆ ಆರೋಪಿಗಳು ಹಾಜರಾಗಿದ್ದರು. ಮೊದಲೇ ಕೋರ್ಟ್ ಹಾಲ್ ಒಳಗೆ ಪವಿತ್ರಗೌಡ ಅವರು ನಿಂತಿದ್ದರು. ನಟ ಧನ್ವೀರ್ ಜೊತೆ ನಟ ದರ್ಶನ್ ಅವರು ಕಪ್ಪು ಟೀ ಶರ್ಟ್‌ನಲ್ಲಿ ಆಗಮಿಸಿದರು.

ಮೊದಲಿಗೆ ಪವಿತ್ರಾಗೌಡ ಅವರಿಂದ ದೂರ ನಿಂತಿದ್ದ ದರ್ಶನ್, ನ್ಯಾಯಾಧೀಶರು 1ನೇ ಆರೋಪಿತೆ ಪಕ್ಕ ನಿಲ್ಲಿ ಎಂದು ಸೂಚಿಸಿದ್ದಾರಂತೆ. ಬಳಿಕ ದರ್ಶನ್ ಹಾಗೂ ಪವಿತ್ರಾ ಗೌಡ ಕೋರ್ಟ್‌ನಲ್ಲಿ ಅಕ್ಕ-ಪಕ್ಕದಲ್ಲಿ ನಿಂತಿದ್ದರು. ಈ ವೇಳೆ ದಾಸ ಗಪ್‌ ಚುಪ್ ಆಗಿದ್ದರಂತೆ. ಕೋರ್ಟ್‌ನಿಂದ ಹೊರ ಬರುತ್ತಿದ್ದಂತೆ ದರ್ಶನ್‌ ಕೈನ ಪವಿತ್ರಾ ಹಿಡಿದುಕೊಂಡಿದ್ದರು.

ಆದರೆ ಕೋರ್ಟ್​ನಿಂದ ಹೊರಹೋಗುವಾಗ ಜನ ಜಂಗುಳಿ ಇತ್ತು. ಈ ಕಾರಣಕ್ಕೆ ದರ್ಶನ್ ಹಾಗೂ ಪವಿತ್ರಾ ಕೈ ಕೈ ಹಿಡಿದು ಬಂದಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.

ಇನ್ನೂ ಲಿಫ್ಟ್‌ನಲ್ಲಿ ನಟ ದರ್ಶನ್‌ಗೆ ಪವಿತ್ರಾಗೌಡ ಅವರು ದುಂಬಾಲು ಬಿದ್ದು ಮಾತನಾಡಿಸಿದರು. ಕೈ ಹಿಡಿದು ಫೋನ್ ನಂಬರ್ ನೀಡುವಂತೆ ಒತ್ತಾಯ ಮಾಡಿದರು. ಕೊನೆಗೆ ದರ್ಶನ್ ಅವರು ತನ್ನ ಮೊಬೈಲ್‌ ಸಂಖ್ಯೆಯನ್ನೂ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Continue Reading
Advertisement

Trending

Copyright © 2025 Namma Kudla News

You cannot copy content of this page