Connect with us

DAKSHINA KANNADA

ನೂತನ್ ಕ್ಲೋತ್ ಸೆಂಟರ್‌ನ ಲಕ್ಕಿ ಕೂಪನ್ ಡ್ರಾ; ಫೆ.4 ರಂದು ಬಹುಮಾನ ವಿತರಣಾ ಸಮಾರಂಭ

Published

on

ಬೆಳ್ತಂಗಡಿ :  74 ವರ್ಷಗಳಿಂದ ಗ್ರಾಹಕರ ವಿಶ್ವಾಸ ಹಾಗೂ ಪ್ರೀತಿಯನ್ನು ಗಳಿಸಿರುವ ನೂತನ್ ಕ್ಲೋತ್ ಸೆಂಟರ್  ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ಘೋಷಣೆ ಮಾಡಿತ್ತು. ಗ್ರಾಹಕರ ಪ್ರತಿ ಖರೀದಿಗೂ ಆಕರ್ಷಕ ಬಹುಮಾನಗಳನ್ನು ಹೊಂದಿರುವ ಕೂಪನ್ ನೀಡಿದ್ದು, ಇದರ ಡ್ರಾ  ಶನಿವಾರ(ಜ. 25) ನಡೆದಿದೆ. ಮೂವರು ಅದೃಷ್ಟಶಾಲಿಗಳಿಗೆ 10 ಗ್ರಾಂ ಚಿನ್ನ, ಟಿವಿಎಸ್ ಜ್ಯುಪಿಟರ್ ಹಾಗೂ 5 ಗ್ರಾಂ ಚಿನ್ನದ  ಜೊತೆಗೆ 75 ಗ್ರಾಹಕರಿಗೆ ವಿಶೇಷ ಸಮಾಧಾನಕರ ಬಹುಮಾನ ಘೋಷಿಸಲಾಗಿದೆ.

ಯಾರು ವಿನ್ನರ್?

ಮೊದಲ ಬಹುಮಾನ 10 ಗ್ರಾಮ್ ಚಿನ್ನವನ್ನು ಕೂಪನ್ ನಂಬರ್  98391 ನ ಪ್ರಿಜಿತ್ ಕಡಬ, ದ್ವಿತೀಯ ಬಹುಮಾನ ಟಿವಿಎಸ್ ಜ್ಯುಪಿಟರ್  ಕೂಪನ್ ನಂಬರ್ 76686 ನ ಹರೀಶ್ ವೇಣೂರು ಹಾಗೂ 5 ಗ್ರಾಂ ಚಿನ್ನವನ್ನು ಕೂಪನ್ ನಂಬರ್ 74857  ನ ಸುನಿತಾ ಬಂಟ್ವಾಳ ಅವರು ಪಡೆದುಕೊಂಡಿದ್ದಾರೆ.  ಇದಲ್ಲದೆ, 75 ಅದೃಷ್ಟಶಾಲಿಗಳು ಸಮಾಧಾನಕರ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಗ್ರಾಹಕರ ಸಹಿತವಾಗಿ ಊರಿನ ಹಲವು ಗಣ್ಯರು ಈ ಲಕ್ಕಿ ಕೂಪನ್ ಡ್ರಾದಲ್ಲಿ ಭಾಗವಹಿಸಿದ್ದರು.

ಮಡಂತ್ಯಾರು ಪುಂಜಾಲಕಟ್ಟೆ ವರ್ತಕ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ, ಉಪಾಧ್ಯಕ್ಷ ಯೋಗೀಶ್ ಕಡ್ತಿಲ , ಎಂ . ಹೈದರ್ , ಸೇಕ್ರೆಡ್ ಹಾರ್ಟ್‌ ಚರ್ಚ್ ಪಾಲನಾ ಮಂಡಳಿಯ ಅಧ್ಯಕ್ಷ ಜೆರಾಲ್ಡ್ ಮೋರಸ್, ಕಾರ್ಯದರ್ಶಿ ನೆಲ್ಸನ್ ಲಸ್ರಾದೋ , ಮುಖ್ಯಮಂತ್ರಿ ಅವರ ಉಪ ಕಾರ್ಯದರ್ಶಿ ಅರುಣ್ ಪುರ್ತಾಡೋ , ಮಡಂತ್ಯಾರಿನ ವರ್ಕರಾದ ಶಶಿಧರ್ ಆಚಾರ್, ಎಡ್ವಿನ್ ಡಯಾಸ್, ಉದಯ ಕುಮಾರ್, ಸೂರಜ್ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.

 

ಇದನ್ನೂ ಓದಿ : ಯಶ್ ಬಗ್ಗೆ ಕಾಮೆಂಟ್ ಮಾಡಿದ ಬಾಲಿವುಡ್ ಬಾದ್ ಶಾ! ದುಬೈನಲ್ಲಿ ಶಾರುಖ್ ಹೇಳಿದ್ದೇನು?

ನೂತನ್ ಕ್ಲೋತ್ ಸೆಂಟರ್ ಮಾಲಕರುಗಳಾದ ವಿ.ಯಂ ರೋಡ್ರಿಗಸ್, ವೆಲ್ರಿನ್ ರೋಡ್ರಿಗಸ್, ರಾಜೇಶ್ ರೋಡ್ರಿಗಸ್ , ಪ್ರಕಾಶ್ ರೋಡ್ರಿಗಸ್ ಅತಿಥಿಗಳನ್ನು ಸ್ವಾಗತಿಸಿದರು.

ಬಹುಮಾನ ವಿತರಣಾ ಸಮಾರಂಭ:

ಈ ಲಕ್ಕಿ ಡ್ರಾದಲ್ಲಿ ಗೆದ್ದಿರುವ ಅದೃಷ್ಟಶಾಲಿಗಳಿಗೆ ಫೆಬ್ರವರಿ 4 ರಂದು ಮಧ್ಯಾಹ್ನ 2 ಗಂಟೆಗೆ  ಅದ್ಧೂರಿ ಸಮಾರಂಭದಲ್ಲಿ ಬಹುಮಾನ ವಿತರಣೆ ಮಾಡಲಾಗುತ್ತದೆ. ಮಂಗಳೂರಿನ ಖ್ಯಾತ ಸಂಗೀತ ಕಲಾವಿದರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ಕೂಡ ಆಯೋಜಿಸಲಾಗಿದೆ.

DAKSHINA KANNADA

ಕಂಬಳಕ್ಕೆ ವಿದಾಯ ಹೇಳಿದ ‘ಚಾಂಪಿಯನ್ ಕುಟ್ಟಿ’ ; 17 ವರ್ಷದಿಂದ ಕಂಬಳಾಭಿಮಾನಿಗಳ ಫೇವರೇಟ್ ಆಗಿದ್ದ ‘ಕುಟ್ಟಿ’..!

Published

on

ಮಂಗಳೂರು : ಕಳೆದ ಹದಿನೇಳು ವರ್ಷಗಳಿಂದ ಕಂಬಳ ಕ್ಷೇತ್ರವನ್ನು ಆಳಿದ ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದ ‘ಚಾಂಪಿಯನ್ ಕುಟ್ಟಿ’ ಕಂಬಳ ಕ್ಷೇತ್ರಕ್ಕೆ ವಿದಾಯ ಹೇಳಿದ್ದಾನೆ. ಈ ಮೂಲಕ ಸುದೀರ್ಘ ಕಾಲ ಕಂಬಳ ಕರೆಯಲ್ಲಿ ತನ್ನ ಗಾಂಭೀರ್ಯ ಓಟದ ಮೂಲಕ ಕಂಬಳಾಭಿಮಾನಿಗಳ ಹೃದಯ ಗೆದ್ದಿದ್ದ ಪ್ರಸಿದ್ಧ ‘ಕುಟ್ಟಿ’ ಕಂಬಳ ಕ್ಷೇತ್ರದಿಂದ ದೂರ ಉಳಿಯಲಿದ್ದಾನೆ.


17 ವರ್ಷದ ಹಿಂದೆ ಮುಲ್ಕಿಯಲ್ಲಿ ಮೊದಲ ಬಾರಿಗೆ ಜ್ಯೂನಿಯರ್ ವಿಭಾಗದಲ್ಲಿ ಕಂಬಳ ಕರೆಗೆ ಇಳಿದು ಮೊದಲ ಓಟದಲ್ಲೇ ಬಹುಮಾನ ಪಡೆಯುವ ಮೂಲಕ ‘ಕುಟ್ಟಿ’ ತನ್ನ ಗೆಲುವಿನ ನಾಗಾಲೋಟ ಆರಂಭಿಸಿತ್ತು. ಇದಾದ ಬಳಿಕ ಸತತ ಎರಡು ವರ್ಷ ಜ್ಯೂನಿಯರ್ ವಿಭಾಗದಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯೊಂದಿಗೆ ‘ಚಾಂಪಿಯನ್ ಕುಟ್ಟಿ’ ಕಂಬಳಾಭಿಮಾನಿಗಳ ಹೃದಯ ಗೆದ್ದಿತ್ತು. ಬಾರ್ಕೂರು ಶಾಂತಾರಾಮ ಶೆಟ್ಟಿ ಅವರ ಬಳಿ ಇದ್ದ ‘ಕುಟ್ಟಿ’ ಕೋಪಿಷ್ಠನಾಗಿದ್ದು, ಯಾರ ನಿಯಂತ್ರಣಕ್ಕೂ ಸಿಗುವ ಕೋಣ ಅಲ್ಲ. ಹೀಗಾಗಿ ‘ಚಾಂಪಿಯನ್ ಕುಟ್ಟಿ’ ನಂದಳಿಕೆ ಶ್ರೀಕಾಂತ ಭಟ್ಟರ ತಂಡ ಸೇರಿಕೊಂಡಿತ್ತು. ನಂದಳಿಕೆ ಶ್ರೀಕಾಂತ ಭಟ್ಟರ ಬಳಿ ಮತ್ತಷ್ಟು ಪಳಗಿದ ‘ಕುಟ್ಟಿ’ ಹಲವಾರು ಬಹುಮಾನಗಳನ್ನು ಪಡೆಯುವ ಮೂಲಕ ‘ಚಾಂಪಿಯನ್ ಕುಟ್ಟಿ’ಯಾಗಿ ಬದಲಾಗಿತ್ತು.

ಯಾವುದೇ ಕೋಣಗಳ ಜೊತೆ ಕಟ್ಟಿ ಓಡಿಸಿದ್ರೂ ಬಹುಮಾನ ತಂದು ಕೊಡುವ ಶಕ್ತಿ ಚಾಂಪಿಯನ್ ‘ಕುಟ್ಟಿ’ಗೆ ಇತ್ತು ಅನ್ನೋದೇ ವಿಶೇಷ. ಈ ಕೋಣವನ್ನು ಓಡಿಸಿದ ನಾಲ್ವರು ಓಟಗಾರರು ಕೂಡಾ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಯನ್ನು ಪಡೆದುಕೊಂಡಿರುವುದು ಮತ್ತೊಂದು ವಿಶೇಷ. ಸಾಮಾನ್ಯವಾಗಿ ಓಟದಲ್ಲಿ ಹಿಂದೆ ಬಿದ್ದಾಗ ಕೋಣಗಳಿಗೆ ನಿವೃತ್ತಿ ಘೊಷಣೆ ಮಾಡಲಾಗುತ್ತದೆ. ಆದ್ರೆ ಉಪ್ಪಿನಂಗಡಿಯಲ್ಲಿ ನಡೆದ ಕಂಬಳದಲ್ಲಿ ಭಾಗವಹಿಸಿದ ‘ಚಾಂಪಿಯನ್ ಕುಟ್ಟಿ’ ಇಲ್ಲೂ ಕೂಡಾ ಹಗ್ಗ ಹಿರಿಯ ವಿಭಾಗದಲ್ಲಿ ಬಹುಮಾನ ಗಳಿಸಿ ತಾನು ಇನ್ನೂ ಚಾಂಪಿಯನ್ ಅಂತ ತೋರಿಸಿಕೊಟ್ಟಿದೆ. ಆದ್ರೆ ಇದಾದ ಬಳಿಕ ನಂದಳಿಗೆ ಶ್ರೀಕಾಂತ್ ಭಟ್ಟರು ‘ಚಾಂಪಿಯನ್ ಕುಟ್ಟಿ’ಯ ನಿವೃತ್ತಿ ಘೋಷಣೆ ಮಾಡಿದ್ದರೆ. ಕಂಬಳ ಅಭಿಮಾನಿಗಳ ಕರತಾಡನದೊಂದಿಗೆ ‘ಚಾಂಪಿಯನ್ ಕುಟ್ಟಿ’ಗೆ ಗೌರವ ನೀಡಿ ವಿಶೇಷ ರೀತಿಯಲ್ಲಿ ಬೀಳ್ಕೊಡಲಾಗಿದೆ.

Continue Reading

DAKSHINA KANNADA

ಬಡವರ ಬ್ಯಾಂಕ್ ಖಾತೆ ಬಳಸಿ ಸೈಬರ್ ವಂಚನೆ ; ಇಬ್ಬರು ಅರೆಸ್ಟ್

Published

on

ಮಂಗಳೂರು : ಹೊಸ ಹೊಸ ಕಾನೂನುಗಳನ್ನು ಜಾರಿಗೊಳಿಸಿದರು ಕೂಡ ಸೈಬರ್ ವಂಚನೆ ಜಾಲ ದಿನದಿಂದ ದಿನಕ್ಕೆ ದೊಡ್ಡದಾಗಿ ಕಡಿವಾಣವೇ ಇಲ್ಲವೋ ಏನೋ ಎಂಬ ಆತಂಕ ಎದುರಾಗುತ್ತಿದೆ. ಇದರ ನಡುವೆಯೇ ಮಂಗಳೂರಿನಲ್ಲಿ ನಡೆದ ಘಟನೆಯೊಂದು ಭಾರೀ ಸದ್ದು ಮಾಡುತ್ತಿದೆ. ಮಂಗಳೂರಿನ ಸೈಬರ್‌ ಕ್ರೈಂ ಪ್ರಕರಣದ ತನಿಖೆ ವೇಳೆ ಆರೋಪಿಗಳ ಖತರ್ನಾಕ್ ಪ್ಲ್ಯಾನ್​ ಬೆಳಕಿಗೆ ಬಂದಿದೆ. ಸೈಬರ್ ವಂಚನೆಗಾಗಿ ಬಡವರ ಬ್ಯಾಂಕ್ ಖಾತೆಯನ್ನು ಬಳಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಏನದು ಘಟನೆ ? ಇಲ್ಲಿದೆ ಸಂಪೂರ್ಣ ಮಾಹಿತಿ.

ಆಲೈನ್‌ ವಂಚನೆಗಾಗಿ ಬಡ ಜನರ ಬ್ಯಾಂಕ್‌ ಖಾತೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಇಬ್ಬರು ಆರೋಪಿಗಳಾದ ಅವಿನಾಶ್‌ ಸುತಾರ್ (‌28), ಅನೂಪ್‌ ಕಾರೇಕರ್‌ (42) ಎಂಬುವವರನ್ನು ದಕ್ಷಿಣ ಕನ್ನಡ ಜಿಲ್ಲೆ ಪೊಲೀಸರು ಬಂಧಿಸಿದ್ದಾರೆ.

ಅವಿನಾಶ್ ಹಾಗೂ ಅನೂಪ್ ಅಮಾಯಕರಿಗೆ ಚಿಲ್ಲರೆ ಹಣ ನೀಡಿ ಬ್ಯಾಂಕ್‌ ಖಾತೆ ತೆರೆಯಲು ಹೇಳುತ್ತಾರೆ. ಬಳಿಕ, ಆರೋಪಿಗಳು ಆ ಬ್ಯಾಂಕ್‌ ಖಾತೆಗಳ ಮಾಹಿತಿಯನ್ನು ಪಡೆದುಕೊಂಡು, ಆನ್‌ ಲೈನ್‌ ಬ್ಯುಸಿನೆಸ್‌ ಮಾಡುವುದಾಗಿ ಹೇಳುತ್ತಿದ್ದರು. ಬಳಿಕ ಅವರ ಬ್ಯಾಂಕ್‌ ಖಾತೆ ಮಾಹಿತಿಯನ್ನು ಸೈಬರ್‌ ವಂಚಕರ ಕೈಗಿಡುತ್ತಿದ್ದರು. ನಂತರ, ಸೈಬರ್​ ವಂಚಕರು ಈ ಬ್ಯಾಂಕ್​ ಖಾತೆಗಳನ್ನು ಇಟ್ಟುಕೊಂಡು, ಶ್ರೀಮಂತ ಜನರಿಗೆ ವಿಡಿಯೊ ಕಾಲ್‌, ಡಿಜಿಟೆಲ್‌ ಅರೆಸ್ಟ್‌ ಸೇರಿದಂತೆ ಹಲವು ವಿಧಾನಗಳಲ್ಲಿ ಬ್ಲ್ಯಾಕ್‌ ಮೇಲ್‌ ಮಾಡುತ್ತಾರೆ. ಬಳಿಕ, ವಂಚಕರ ಜಾಲಕ್ಕೆ ಸಿಲುಕಿದವರ ಕಡೆಯಿಂದ ಮುಗ್ದ ಜನರ ಬ್ಯಾಂಕ್​ ಖಾತೆಗೆ ಹಣ ವರ್ಗಾವಣೆ ಮಾಡಿಸುತ್ತಾರೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ ..?

ಮಂಗಳೂರಿನ ರಾಧಾಕೃಷ್ಣ ನಾಯಕ್ ಎಂಬುವರಿಗೆ ವಿಡಿಯೋ ಕಾಲ್ ಮಾಡಿ ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗುತ್ತಿದೆ ಎಂದು ಬರೋಬ್ಬರಿ 40 ಲಕ್ಷವನ್ನು ಪಡೆದಿದ್ದರು. ಕೊನೆಗೆ ಅನುಮಾನ ಗೊಂಡ ರಾಧಾಕೃಷ್ಣ ಅವರು ಪೊಲೀಸರಿಗೆ ದೂರ ನೀಡಿ ವಿಚಾರಣೆ ನಡೆಸಿದಾಗ ಬೆಳಗಾವಿಯ ಯಾರದು ಅಕೌಂಟ್‌ಗೆ ಹಣ ವರ್ಗಾವಣೆ ಆಗಿರುವುದು ಕಂಡುಬಂದಿದೆ. ಇದರ ಜಾಡು ಹಿಡಿದ ಪೊಲೀಸರು ಪ್ರಕರಣ ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Continue Reading

DAKSHINA KANNADA

ಅಮಾನತಾದ ಶಾಸಕರಿಗೆ ಸ್ಪೀಕರ್ ಎಚ್ಚರಿಕೆ; ಪುನರಾವರ್ತಿಸಿದ್ರೆ ಡಿಸ್ಮಿಸ್ ಎಂದ ಖಾದರ್

Published

on

ಮಂಗಳೂರು : ವಿಧಾನಸಭೆಯ ಕೊನೆಯ ದಿನದ ಕಲಾಪಕ್ಕೆ ಅಡ್ಡಿಪಡಿಸಿ ಸ್ಪೀಕರ್ ಪೀಠ ಏರಿದ್ದ ಹದಿನೆಂಟು ಶಾಸಕರು ಆರು ತಿಂಗಳ ಕಾಲ ಅಮಾನತು ಶಿಕ್ಷೆಗೆ ಒಳಗಾಗಿದ್ದಾರೆ. ಅಮಾನತಾಗಿರುವ ಶಾಸಕರು ಮುಂದಿನ ಅಧಿವೇಶನದಲ್ಲಿ ಇದೇ  ರೀತಿಯ ವರ್ತನೆ ಪುನರಾವರ್ತಿಸಿದ್ರೆ ಅವರನ್ನು ಡಿಸ್ಮಿಸ್ ಮಾಡುವುದಾಗಿ ಸ್ಪೀಕರ್ ಯು.ಟಿ. ಖಾದರ್ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸ್ಪೀಕರ್ ಖಾದರ್, ಸದನದಲ್ಲಿ ಕೊನೆಯ ದಿನ ಧನವಿನಿಯೋಗ ಬಿಲ್ ಪಾಸ್ ಮಾಡಲೇ ಬೇಕಿದ್ದು, ಅದು ಪಾಸ್ ಆಗಿಲ್ಲಾ ಅಂದ್ರೆ ಇಡೀ ರಾಜ್ಯಕ್ಕೆ ತೊಂದರೆ ಇದೆ. ಆದ್ರೆ, ಧನವಿನಿಯೋಗ ಬಿಲ್ ಪಾಸ್ ಮಾಡಲು ಶಾಸಕರು ಅಡ್ಡಿ ಪಡಿಸಿದ್ದಾರೆ. ಅವರ ಎಲ್ಲಾ ತೊಂದರೆ ಸಹಿಸಿ ನಾನು ಬಿಲ್ ಪಾಸ್ ಮಾಡಿದ್ದು, ಬಳಿಕ ಚರ್ಚಿಸಿ ಅವರ ದುರ್ನಡತೆಗೆ ಅಮಾನತು ಶಿಕ್ಷೆ ನೀಡಿದ್ದೇನೆ. ಕೊನೆಯ ದಿನ ಅಮಾನತು ಆದ್ರೆ ಏನು ಆಗೋದಿಲ್ಲ ಅನ್ನೋದು ಶಾಸಕರ ಮನಸಿನಲ್ಲಿ ಇದೆ.  ಹೀಗಾಗಿ ಆರು ತಿಂಗಳು ಅಮಾನತು ಮಾಡಿದ್ದೇನೆ.

ಇದನ್ನೂ ಓದಿ : ಅಂದು ನಾಗವಲ್ಲಿಯಾಗಿ ಗುರುತಿಸಿಕೊಂಡಿದ್ದ ಚೈತ್ರಕ್ಕ… ಇಂದು ನ್ಯಾಷನಲ್ ಕ್ರಶ್ ಆಗ್ಬಿಟ್ರಾ ??

ಹಿಂದೆಯೂ ಇಂತಹ ಘಟನೆ ನಡೆದಾಗ ಇದೇ ರೀತಿಯ ಕಠಿಣ ಕ್ರಮ ಕೈಗೊಂಡಿದ್ದರೆ ಈ ರೀತಿ ಆಗ್ತಾ ಇರಲಿಲ್ಲ. ಆದ್ರೆ, ಹಿಂದಿನವರು ಇಂತಹ ಧೈರ್ಯ ತೋರಿಸಿಲ್ಲ. ನಾನು ಸ್ಪೀಕರ್ ಪೀಠಕ್ಕೆ ಇರುವ ಅಧಿಕಾರವನ್ನು ಅದರ ಘನತೆ ಕಾಪಾಡುವ ಸಲುವಾಗಿ ಚಲಾಯಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಕಲಾಪದಲ್ಲಿ ನಡೆದ ಚರ್ಚೆಗಳು ಹಾಗೂ ಇತರ ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದು, ಸದನ ಸುಸೂತ್ರವಾಗಿ ನಡೆಸಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page