Connect with us

LATEST NEWS

ಭೀಕರ ಚಳಿಗೆ ಉತ್ತರ ಭಾರತ ತತ್ತರ: ನೂರಾರು ಜನ ಬಲಿ – ದೆಹಲಿಯಲ್ಲಿ ಜ.15ರವರೆಗೆ ಶಾಲೆಗಳಿಗೆ ರಜೆ ಘೋಷಣೆ..!

Published

on

ನವದೆಹಲಿ: ಕಳೆದ 15 ದಿನಗಳಿಂದ ಭೀಕರ ಚಳಿಗೆ ಉತ್ತರ ಭಾರತ ತತ್ತರಗೊಂಡಿದ್ದು ಜನ ಜೀವನವೇ ದುಸ್ತರವಾಗಿದೆ. ಭಾರಿ ಚಳಿ ಹಾಗೂ ಮಂಜು ಮುಸುಕಿದ ವಾತಾವರಣವು ಸದ್ದಿಲ್ಲದೆ ನೂರಾರು ಜನರನ್ನು ಬಲಿಪಡೆದುಕೊಂಡಿದೆ.  

ಭೀಕರ ಚಳಿ ಉತ್ತರಪ್ರದೇಶದ ಕಾನ್ಪುರ ಒಂದರಲ್ಲಿಯೇ 100 ಕ್ಕೂ ಅಧಿಕ ಜನರನ್ನು ಬಲಿ ಪಡೆದುಕೊಂಡಿದೆ.

ನಗರದ ಎಲ್’ಪಿಎಸ್ ಇನ್ ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ನೀಡಿರುವ ವರದಿ ಅನ್ವಯ ಕಳೆದೊಂದು ವಾರದಲ್ಲೇ ನಗರದಲ್ಲಿ 98 ಜನರು ಹೃದಯಾಘಾತ ಮತ್ತು ಮೆದುಳಿನ ಸಮಸ್ಯೆಯಿಂದಾಗಿ ಸಾವನ್ನಪ್ಪಿದ್ದಾರೆಂದು ಹೇಳಿದೆ.

ಮಂಜು ಮುಸುಕಿದ ವಾತಾವರಣ ಹಿನ್ನೆಲೆಯಲ್ಲಿ ಹಲವೆಡೆ ರೈಲು ಸಂಚಾರ ಹಾಗೂ ವಿಮಾನಗಳ ಹಾರಾಟದಲ್ಲಿ ವ್ಯತ್ಯಯಗಳು ಕಂಡು ಬಂದಿದೆ.

ಚಳಿಯ ತೀವ್ರತೆಗೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಜಮ್ಮು ಮತ್ತು ಕಾಶ್ಮೀರ, ದೆಹಲಿ, ಪಂಬಾಜ್, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಉಷ್ಣಾಂಶ ಭಾರೀ ಕುಸಿದಿದ್ದು, ಸಾಮಾನ್ಯ ಜನಜೀವನದ ಮೇಲೆ ವ್ಯತ್ಯಯ ಬೀರಿದೆ.

ಮಂಜು ಮುಸುಕಿದ ವಾತಾವರಣವಿರುವುದರಿಂದ ಗೋಚರತೆ ಪ್ರಮಾಣ ಭಾರೀ ಇಳಿಕೆಯಾಗಿದ್ದು. ಉತ್ತಪ್ರದೇಶದ ಆಗ್ರಾ, ಪಂಜಾಬ್’ನ ಭಟಿಂಡಾದಲ್ಲಿ ಗೋಚರತೆಯು ಶೂನ್ಯಕ್ಕೆ ತಲುಪಿದೆ.

ಪರಿಣಾಮ ಭಾನುವಾರ 480ಕ್ಕೂ ಹೆಚ್ಚು ರೈಲುಗಳ ಓಡಾಟದಲ್ಲಿ ಏರುಪೇರಾಗಿದೆ. ಜೊತೆಗೆ 25 ವಿಮಾನಗಳ ಹಾರಾಟದಲ್ಲೂ ವ್ಯತ್ಯಯಗಳು ಕಂಡು ಬಂದಿವೆ.

ನಗರದಲ್ಲಿ ಕಳೆದ 15 ದಿನಗಳಿಂದ ಕನಿಷ್ಠ ಉಷ್ಣಾಂಶ 4ರಿಂದ 6 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದೆ.

ಈ ನಡುವೆ ರಾಷ್ಟ್ರ ರಾಜಧಾನಿ ದೆಹಲಿಯ ಸಫ್ದರ್‍ಜಂಗ್‍ನಲ್ಲಿ ಕನಿಷ್ಠ ತಾಪಮಾನ 1.9 ಡಿಗ್ರಿ ಸೆಲ್ಸಿಯಸ್​ಗೆ ಕುಸಿದಿದೆ.

ಈ ಹಿನ್ನೆಲೆಯಲ್ಲಿ ಇಂದಿನಿಂದ ಜನವರಿ 15ರವರೆಗೆ ದೆಹಲಿಯಲ್ಲಿ ಎಲ್ಲಾ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಈ ಬಗ್ಗೆ ದೆಹಲಿ ಸರ್ಕಾರದ ಸೂಚನೆಯಂತೆ ಶಿಕ್ಷಣ ನಿರ್ದೇಶನಾಲಯ ಸುತ್ತೋಲೆ ಹೊರಡಿಸಿದೆ.9ನೇ ತರಗತಿಯಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಪರ್ಯಾಯ ತರಗತಿಗಳು ನಡೆಯಲಿವೆ.

ರಜೆ ಇದ್ದರೂ ಶೈಕ್ಷಣಿಕ ಕಾರ್ಯಕ್ಷಮತೆ ಬಗ್ಗೆ ಗಮನಹರಿಸಲಾಗುವುದು ಎಂದು ದೆಹಲಿ ಶಿಕ್ಷಣ ನಿರ್ದೇಶನಾಲಯ ತಿಳಿಸಿದೆ.

ಇಂದು ಬೆಳಗ್ಗೆ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಟ್ಟವಾದ ಮಂಜು ಆವರಿಸಿರುವುದರಿಂದ ಜನ ತೀವ್ರ ಚಳಿಯಿಂದ ತತ್ತರಿಸಿ ಹೋಗಿದ್ದು, ಯಾರು ಮನೆಯಿಂದ ಹೊರಬರುತ್ತಿಲ್ಲ.

ಪ್ರತಿಕೂಲ ಹವಾಮಾನ ಮತ್ತು ಇತರ ಕಾರ್ಯಾಚರಣೆಯ ಸಮಸ್ಯೆಗಳಿಂದಾಗಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 20 ವಿಮಾನಗಳ ಹಾರಾಟದಲ್ಲಿ ವ್ಯತ್ಯವಾಗಿತ್ತು.

ಅಲ್ಲದೇ, ಮಂಜು ಕವಿದ ವಾತಾವರಣದಿಂದಾಗಿ 42 ರೈಲುಗಳು ಸಂಚಾರದಲ್ಲೂ ವ್ಯತ್ಯಯವಾಗಿದೆ ಎಂದು ಉತ್ತರ ರೈಲ್ವೆ ವಕ್ತಾರರು ತಿಳಿಸಿದ್ದಾರೆ.

ಚಳಿ ಹೆಚ್ಚಾಗುತ್ತಲೆ ಇದ್ದು, ಇನ್ನು ಎರಡು ದಿನಗಳವರೆಗೆ ಪರಿಸ್ಥಿತಿ ವಿಕೋಪಕ್ಕೆ ತೆರಳುವ ಸಾಧ್ಯತೆ ಇರುವುದರಿಂದ ಜನ ಎಚ್ಚರವಹಿಸಬೇಕು ಎಂದು ಸರ್ಕಾರ ಮನವಿ ಮಾಡಿಕೊಂಡಿದೆ.

Advertisement
Click to comment

Leave a Reply

Your email address will not be published. Required fields are marked *

INTERNATIONAL

‘ಈಗಲೇ ಇರಾನ್‌ನಿಂದ ಹೊರಡಿ’ ಅಮೆರಿಕನ್‌ ಪ್ರಜೆಗಳಿಗೆ ಎಚ್ಚರಿಕೆ ಸಂದೇಶ

Published

on

ವಾಷಿಂಗ್ಟನ್:‌ ಅಮೆರಿಕ-ಇರಾನ್‌ ಉದ್ವಿಗ್ನತೆ ಮಹತ್ವದ ಘಟ್ಟ ತಲುಪುತ್ತಿರುವಂತೆ ತೋರುತ್ತಿದೆ. ಕಾರಣ, ಈಗಲೇ ಇರಾನ್‌ ನಿಂದ ಹೊರಡಿ, ಅಮೆರಿಕ ಸರ್ಕಾರದ ಸಹಾಯವನ್ನು ಅವಲಂಬಿಸಬೇಡಿ. ನಿಮ್ಮದೇ ಯೋಜನೆ ರೂಪಿಸಿಕೊಳ್ಳಿ ಎಂದು ಹೇಳಿದೆ. ಹೀಗಾಗಿ ಅಮೆರಿಕ ವಿದೇಶಾಂಗ ಇಲಾಖೆ ಹೊರಡಿಸಿದ ತುರ್ತು ಭದ್ರತಾ ಎಚ್ಚರಿಕೆ ಜಗತ್ತನ್ನೇ ಬೆಚ್ಚಿಬೀಳಿಸಿದೆ.


‌ಹೌದು, ಇರಾನ್‌ನ ಸರ್ವೋಚ್ಚ ನಾಯಕ ಆಯತೋಲ್ಲಾ ಖಮೇನಿ ಆಡಳಿತ ವಿರೋಧಿಸಿ ದೇಶಾದ್ಯಾಂತ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಎರಡು ವಾರಗಳನ್ನು ಪೂರೈಸಿರುವ ಪ್ರತಿಭಟನೆಯಿಂದ ಸಂಭವಿಸಿರುವ ಹಿಂಸಾಚಾರದಲ್ಲಿ 600 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಹಿಂಸಾಚಾರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಮೆರಿಕ ತನ್ನ ಪ್ರಜೆಗಳಿಗೆ ಇರಾನ್‌ ತೊರೆಯುವಂತೆ ಎಚ್ಚರಿಕೆ ನೀಡಿದೆ.

ಇರಾನ್‌ನಾದ್ಯಂತ ಪ್ರತಿಭಟನೆಗಳು ಉಲ್ಬಣಗೊಳ್ಳುತ್ತಿವೆ ಮತ್ತು ಹಿಂಸಾಚಾರ ಹೆಚ್ಚಾಗಬಹುದು ಎಂದು ಅಮೆರಿಕ ಎಚ್ಚರಿಸಿದೆ. ಇದು ಪ್ರತಿಭಟನಾಕಾರರ ಬಂಧನ, ಗಲಭೆಯಿಂದಾಗಿ ದೈನಂದಿನ ಜೀವನಕ್ಕೆ ತೀವ್ರ ಅಡ್ಡಿಗಳಿಗೆ ಕಾರಣವಾಗಬಹುದು ಎಂದು ಅಮೆರಿಕ ತಿಳಿಸಿದೆ.

ಇರಾನ್‌ ಸರ್ಕಾರವು ಮೊಬೈಲ್‌, ಲ್ಯಾಂಡ್‌ಲೈನ್‌ ಮತ್ತು ಇಂಟರ್ನೆಟ್‌ ನೆಟ್‌ವರ್ಕ್‌ ಅನ್ನು ನಿರ್ಬಂಧಿಸಿದೆ ಎಂದು ಹೇಳಿದೆ. ಅಲ್ಲದೆ ಹಲವಾರು ವಿಮಾನಯಾನ ಸಂಸ್ಥೆಗಳು ಇರಾನ್‌ಗೆ ಮತ್ತು ಅಲ್ಲಿಂದ ಬರುವ ವಿಮಾನಗಳನ್ನು ಸೀಮಿತಗೊಳಿಸಿವೆ ಅಥವಾ ರದ್ದುಗೊಳಿಸಿವೆ ಎಂದು ಅದು ತಿಳಿಸಿದೆ.

ಇದನ್ನೂ ಓದಿ: ಭಾರತೀಯರಿಗೆ ಗುಡ್ ನ್ಯೂಸ್ : ವೀಸಾ ಮುಕ್ತ ಪ್ರಯಾಣ ಘೋಷಿಸಿದ ಜರ್ಮನಿ

‘ನಿರಂತರ ಇಂಟರ್ನೆಟ್‌ ಕಡಿತ ಇರುವುದರಿಂದ ಪರ್ಯಾಯ ಸಂವಹನ ವಿಧಾನಗಳನ್ನು ಯೋಜಿಸಬೇಕು ಮತ್ತು ಸುರಕ್ಷಿತವಾಗಿದ್ದರೆ, ಅರ್ಮೇನಿಯಾ ಅಥವಾ ಟರ್ಕಿ ಮೂಲಕ ಭೂಮಾರ್ಗದಲ್ಲಿ ಇರಾನ್‌ನಿಂದ ಹೊರಡುವುದನ್ನು ಪರಿಗಣಿಸಬೇಕು’ ಎಂದು ಎಚ್ಚರಿಕೆಯಲ್ಲಿ ಸೂಚಿಸಲಾಗಿದೆ.

Continue Reading

LATEST NEWS

ಇತ್ತ ಯೋಧ ಸಾ*ವು…ಅತ್ತ ಹೆಣ್ಣು ಮಗು ಜನನ…ಹಸುಗೂಸಿನೊಂದಿಗೆ ಸ್ಟ್ರೆಚರ್‌ನಲ್ಲಿ ಬಂದು ಅಂತಿಮ ದರ್ಶನ ಪಡೆದ ಪತ್ನಿ!

Published

on

ಮಂಗಳೂರು/ಮಹಾರಾಷ್ಟ್ರ : ಆತ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ. ಪತ್ನಿ ಗರ್ಭಿಣಿಯಾಗಿದ್ದ ಕಾರಣ ಪಿತೃತ್ವ ರಜೆ ಪಡೆದು ಹುಟ್ಟೂರಿಗೆ ಬಂದಿದ್ರು. ಅತ್ತ ಪತ್ನಿಗೆ ಹೆರಿಗೆ ನೋ*ವು ಕಾಣಿಸಿಕೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿನ ಆಗಮನಕ್ಕಾಗಿ ಯೋಧನ ಕುಟುಂಬ ಕಾಯುತ್ತಿತ್ತು. ಆದ್ರೆ, ವಿಧಿಯಾಟ ಬೇರೆಯೇ ಆಗಿತ್ತು.

ಹೌದು, ಪತ್ನಿಗೆ ಬೇಕಾದ ಅಗತ್ಯ ವಸ್ತುಗಳನ್ನು ತರಲು ಬೈಕ್ ನಲ್ಲಿ ತೆರಳಿದ್ದ ಯೋಧ ಅಪ*ಘಾತಕ್ಕೀಡಾಗಿ ಪ್ರಾ*ಣ ಕಳೆದುಕೊಂಡಿದ್ದಾರೆ. ಈ ಹೃದಯ ವಿದ್ರಾವಕ ಘಟನೆ ನಡೆದಿರೋದು ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿ.

35 ವರ್ಷದ ಪ್ರಮೋದ್ ಜಾಧವ್ ಮೃ*ತ ಯೋಧ. ಮಿನಿ ಟ್ರಕ್  ಬೈಕ್‌ಗೆ ಡಿ*ಕ್ಕಿಯಾಗಿ ಪ್ರಮೋದ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವಾಗ ಕೊನೆಯು*ಸಿರೆಳೆದಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಅವರ ಪತ್ನಿ ರುತುಜಾ ಹೆಣ್ಣು ಮಗುವಿಗೆ ಜನ್ಮವಿತ್ತಿದ್ದಾರೆ.

ಇದನ್ನೂ ಓದಿ : ಶಬರಿಮಲೆಗೆ ಹೋಗಿ ಬಂದ ದಿನವೇ ಕ್ರೌ*ರ್ಯ ಮೆರೆದ ಪತಿ; ಪತ್ನಿಯ ಕೊಂ*ದು ನದಿಗೆ ಎಸೆದ ಪಾಪಿ

ಪತಿಗೆ ವಿದಾಯ ಹೇಳಲು ಪುಟ್ಟ ಕಂದಮ್ಮನೊಂದಿಗೆ ಪತ್ನಿ ಸ್ಟ್ರೆಚರ್ ನಲ್ಲಿ ಬಂದ ದೃಶ್ಯ ಕರುಳು ಹಿಂಡುವಂತಿತ್ತು.  ಈ ದೃಶ್ಯ  ಕಂಡು ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದೆ.

Continue Reading

hasana

ಹಾಸನ: ಕಾಡಾನೆ ದಾ*ಳಿಗೆ ಬ*ಲಿಯಾದ ಮಹಿಳೆ; ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ

Published

on

ಹಾಸನ: ಕಳೆದ ಕೆಲವು ವರ್ಷಗಳಿಂದ ಹಾಸನ ಜಿಲ್ಲೆಯಲ್ಲಿ ಕಾಡಾನೆ ದಾ*ಳಿಗಳು ಹೆಚ್ಚುತ್ತಿದ್ದು, ಅಮಾಯಕರು ಬ*ಲಿಯಾಗುತ್ತಿರುವುದು ಜನರಲ್ಲಿ ಭಯ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಮತ್ತೊಂದು ಘಟನೆ ನಡೆದಿದೆ. ಕಾಡಾನೆಯ ದಾ*ಳಿಗೆ ಕಾರ್ಮಿಕ ಮಹಿಳೆಯೊಬ್ಬರು ಬ*ಲಿಯಾಗಿರುವ ಘಟನೆ ಸಕಲೇಶಪುರ ತಾಲೂಕಿನ ಮೋಗಲಿ ಗ್ರಾಮದಲ್ಲಿ ಮಂಗಳವಾರ(ಜ.13) ನಡೆದಿದೆ. ಶೋಭಾ(40) ಮೃತಪಟ್ಟ ಮಹಿಳೆ.


ಮಂಗಳವಾರ ಮುಂಜಾನೆ ಕಾಫಿ ತೋಟದಲ್ಲಿ ಸುಣ್ಣ ಹಚ್ಚುವ ಕೆಲಸಕ್ಕೆ ಶೋಭ ಮತ್ತು ರಾಗಿಣಿ ಜತೆ ರಾಜಮ್ಮ ಹೋಗಿದ್ದರು. ಕೆಲಸದ ವೇಳೆ ಕಾಡಾನೆ ಏಕಾಏಕಿ ದಾ*ಳಿ ನಡೆಸಿದೆ. ಇದರಿಂದ ತಪ್ಪಿಸಿಕೊಳ್ಳಲು ಮೂವರು ಓಡಿದರೂ, ಶೋಭಾರನ್ನು ಬೆನ್ನಟ್ಟಿದ ಕಾಡಾನೆ ತುಳಿದು ಸ್ಥಳದಲ್ಲೇ ಸಾ*ಯಿಸಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ.

ಗ್ರಾಮಸ್ಥರ ಆಕ್ರೋಶ

ಕಾಡಾನೆ ದಾಳಿಯಿಂದ ಮಹಿಳೆ ಮೃ*ತಪಟ್ಟಿದ್ದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು, ಅರಣ್ಯ ಇಲಾಖೆಯ ನಿರ್ಲಕ್ಷ್ಯ ಖಂಡಿಸಿ, ಮೃ*ತದೇಹ ಕೊಂಡೊಯ್ಯಲು ನಿರಾಕರಿಸಿ ಪ್ರತಿಭಟನೆ ನಡೆಸಿದ್ದಾರೆ. ಅರಣ್ಯಾಧಿಕಾರಿಗಳು ಕಾಡಾನೆಗಳ ಸಂಚಾರದ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡುತ್ತಿಲ್ಲ. ಅಷ್ಟೇ ಅಲ್ಲದೇ ಪುಂಡಾಣೆಗಳನ್ನು ಸೆರೆಹಿಡಿಯುತ್ತಿಲ್ಲ. ಜತೆಗೆ ರೆಡಿಯೋ ಕಾಲರ್‌ ಅಳವಡಿಸಲಿಲ್ಲ ಎಂದು ಆರೋಪಿಸಿದರು.

ಘಟನಾ ಸ್ಥಳಕ್ಕೆ ಶಾಸಕ ಸಿಮೆಂಟ್‌ ಮಂಜು, ಮಾಜಿ ಶಾಸಕ ಎಚ್‌ಕೆ ಕುಮಾರಸ್ವಾಮಿ ಮತ್ತು ಡಿಎಫ್‌ಒ ಸೌರಭ್‌ ಕುಮಾರ್‌ ಭೇಟಿ ನೀಡಿ ಮೃ*ತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಆದರೆ, ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು, ‘ಪರಿಹಾರದ ಹಣ ನಮಗೆ ಬೇಡ, ಶಾಶ್ವತ ಪರಿಹಾರ ಬೇಕು ಎಂದು’ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನ ಮೇಲೆ ಹಲ್ಲೆ ಪ್ರಕರಣ; ಮೂವರು ಆರೋಪಿಗಳ ಬಂಧನ, ಇನ್ನೋರ್ವನಿಗಾಗಿ ಶೋಧ

ಪ್ರತಿಭಟನೆ ತೀವ್ರವಾಗಿದ್ದರಿಂದ ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಲತಾ ಕುಮಾರಿ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು. ಮೃ*ತ ಮಹಿಳೆಯ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು ಜತೆಗೆ ಕಾಡಾನೆ ದಾಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಹೇಳಿದರು. ಒಟ್ಟಾರೆಯಾಗಿ, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Continue Reading
Advertisement

Trending

Copyright © 2025 Namma Kudla News

You cannot copy content of this page