Connect with us

DAKSHINA KANNADA

ಇನ್ನು ಡ್ರೈವಿಂಗ್‌ ಟೆಸ್ಟ್‌ಗಾಗಿ ಆರ್‌ಟಿಒಗೆ ಹೋಗಬೇಕಿಲ್ಲ; ಡ್ರೈವಿಂಗ್ ಸ್ಕೂಲಲ್ಲೇ ಪರೀಕ್ಷೆ

Published

on

ನವದೆಹಲಿ: ವಾಹನ ಚಾಲನಾ ಪರವಾನಿಗೆ ಪಡೆಯಲು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಹೊಸ ನಿಯಮಾವಳಿ ರೂಪಿಸಿದ್ದು, ಜೂನ್ 1 ರಿಂದ ಜಾರಿಗೆ ಬರಲಿವೆ.

ಹೊಸ ನಿಯಮಗಳ ಪ್ರಕಾರ, ವಾಹನ ಚಾಲನಾ ಪರವಾನಿಗೆ ಪಡೆಯಲು ಇಚ್ಛಿಸುವವರು ಆರ್‌ಟಿಒ ಕಚೇರಿಗೆ ಹೋಗಿ ವಾಹನ ಚಾಲನೆ ಮಾಡಿ ತೋರಿಸುವ ಅವಶ್ಯಕತೆ ಇಲ್ಲ. ಈ ಟೆಸ್ಟ್ ನಡೆಸುವ ಹೊಣೆಯನ್ನು ಸರಕಾರ ಇನ್ನು ಮುಂದೆ ಖಾಸಗಿ ಡ್ರೈವಿಂಗ್‌ ಸ್ಕೂಲ್‌ಗಳಿಗೆ ನೀಡಲಿದೆ.

ಸರಕಾರದಿಂದ ಅಧಿಕೃತ ಪರವಾನಿಗೆ ಪಡೆದ ಖಾಸಗಿ ತರಬೇತಿ ಸಂಸ್ಥೆಗಳಲ್ಲಿ ಕಾರು, ದ್ವಿಚಕ್ರ ವಾಹನ ಅಥವಾ ಇತರ ವಾಹನಗಳ ಚಾಲನೆಯನ್ನು ಕಲಿತು ಅದೇ ಸಂಸ್ಥೆಯ ಅಧಿಕಾರಿಗಳ ಮುಂದೆ ಟೆಸ್ಟ್ ನೀಡಬೇಕು. ಅದರಲ್ಲಿ ಪಾಸಾದರೆ ಆ ಖಾಸಗಿ ಸಂಸ್ಥೆಯವರೇ ಡ್ರೈವಿಂಗ್‌ ಲೈಸನ್ಸ್ ನೀಡಲಿದ್ದಾರೆ.

ದಂಡ ಶುಲ್ಕದಲ್ಲಿ ಬದಲಾವಣೆ:

ಇದರ ಜತೆಗೆ ಟ್ರಾಫಿಕ್‌ ನಿಯಮ ಉಲ್ಲಂಘಿಸುವವರಿಗೆ ವಿಧಿಸಲಾಗುತ್ತಿದ್ದ ದಂಡದ ಪ್ರಮಾಣದಲ್ಲೂ ಬದಲಾವಣೆ ಮಾಡಲಾಗಿದೆ. ಅತಿ ವೇಗದ ಚಾಲನೆಗೆ 1000 ರೂ. ನಿಂದ 2000 ರೂ. ವರೆಗೆ ದಂಡ ವಿಧಿಸಲಾಗುತ್ತದೆ. ಅಪ್ರಾಪ್ತ ವಯಸ್ಕರು ಕಾರು ಚಲಾಯಿಸಿದರೆ 25,000 ರೂ. ದಂಡ ವಿಧಿಸುವುದಲ್ಲದೆ ಆ ಕಾರು ಮಾಲಕರ ರಿಜಿಸ್ಟ್ರೇಶನ್‌ ರದ್ದಾಗಲಿದೆ. ತಪ್ಪಿತಸ್ಥ ಅಪ್ರಾಪ್ರ ವಯಸ್ಕನಿಗೆ 25 ವರ್ಷಗಳ ವರೆಗೆ ಲೈಸನ್ಸ್‌ ನೀಡಲಾಗುವುದಿಲ್ಲ.

ಡ್ರೈವಿಂಗ್ ಸ್ಕೂಲ್‌ಗಳಿಗೂ ಹೊಸ ನಿಯಮ:

ಇದೇ ವೇಳೆ ಖಾಸಗಿ ಡ್ರೈವಿಂಗ್ ಸ್ಕೂಲ್‌ಗಳಿಗೂ ಹೊಸ ಮಾನದಂಡ ರೂಪಿಸಲಾಗಿದೆ. ಡ್ರೈವಿಂಗ್‌ ಸ್ಕೂಲ್‌ ಗಳು ಕನಿಷ್ಠ 1 ಎಕರೆ ಭೂಮಿಯನ್ನು ಹೊಂದಿರಬೇಕು. ನಾಲ್ಕು ಚಕ್ರಗಳ ತರಬೇತಿಗೆ 2 ಎಕರೆ ಭೂಮಿ ಬೇಕು. ತರಬೇತುದಾರರು ಹೈಸ್ಕೂಲ್, ಡಿಪ್ಲೊಮಾ ಅಥವಾ ತತ್ಸಮಾನ ವಿದ್ಯಾರ್ಹತೆ, ಕನಿಷ್ಠ 5 ವರ್ಷಗಳ ಚಾಲನಾ ಅನುಭವವನ್ನು ಹೊಂದಿರಬೇಕು. ಬಯೋಮೆಟ್ರಿಕ್ಸ್ ಮತ್ತು ಐಟಿ ವ್ಯವಸ್ಥೆ ತಿಳಿದಿರಬೇಕು.

ತರಬೇತಿ ಅವಧಿಯನ್ನೂ ಬದಲಾಯಿಸಲಾಗಿದೆ. ಲಘು ಮೋಟಾರು ವಾಹನಕ್ಕೆ 4 ವಾರಗಳಲ್ಲಿ 29 ಗಂಟೆಗಳು, 8 ಗಂಟೆಗಳ ಥಿಯರಿ ಮತ್ತು 21 ಗಂಟೆಗಳ ಪ್ರಾಕ್ಟಿಕಲ್‌ ಎಂದು ವಿಂಗಡಿಸಲಾಗಿದೆ. ಘನ ವಾಹನಗಳಿಗೆ 6 ವಾರಗಳಲ್ಲಿ 38 ಗಂಟೆಗಳು. 8 ಗಂಟೆಗಳ ಥಿಯರಿ ಮತ್ತು 31 ಗಂಟೆಗಳ ಪ್ರಾಕ್ಟಿಕಲ್‌ ತರಬೇತಿ ಇರುತ್ತದೆ.

ಲೈಸನ್ಸ್‌ ಸಂಬಂಧಿತ ಶುಲ್ಕಗಳು:

ಲೈಸನ್ಸ್‌ ಸಂಬಂಧಿತ ಶುಲ್ಕಗಳನ್ನು ಕೂಡಾ ಪರಿಷ್ಕರಿಸಲಾಗಿದೆ. ಲರ್ನರ್ಸ್‌ ಲೈಸನ್ಸ್‌ ಗೆ 150 ರೂ., ಲರ್ನರ್ಸ್‌ ಲೈಸನ್ಸ್‌ ಟೆಸ್ಟ್‌ ಶುಲ್ಕ 50 ರೂ., ಡ್ರೈವಿಂಗ್‌ ಟೆಸ್ಟ್‌ ಶುಲ್ಕ 300 ರೂ., ಡ್ರೈವಿಂಗ್‌ ಲೈಸನ್ಸ್‌ ನೀಡಿಕೆ 200 ರೂ., ಇಂಟರ್‌ ನ್ಯಾಶನಲ್ ಡ್ರೈವಿಂಗ್ ಪರ್ಮಿಟ್‌ 1000 ರೂ., ಲೈಸನ್ಸ್‌ ನವೀಕರಣ 200 ರೂ., ಡ್ರೈವಿಂಗ್ ಲೈಸೆನ್ಸ್‌ನಲ್ಲಿ ವಿಳಾಸ ಅಥವಾ ಇತರ ವಿವರಗಳ ಬದಲಾವಣೆಗೆ 200 ರೂ. ನಿಗದಿ ಪಡಿಸಲಾಗಿದೆ.

DAKSHINA KANNADA

ಫುಟ್‌ಬಾತ್ ಮೇಲೆ ಹತ್ತಿದ ಕಾರು; ಸದ್ಯ ಪ್ರಯಾಣಿಕರು ಪಾರು

Published

on

ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿಯ ಫುಟ್‌ಬಾತ್ ಮೇಲೆ ಚಲಿಸಿದ ಘಟನೆ ಸುಳ್ಯ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣ ಮುಂಭಾಗದ ನಂದಿನಿ ಸ್ಟಾಲ್ ಬಳಿ ನಿನ್ನೆ ರಾತ್ರಿ (ಫೆ.9) ಸಂಭವಿಸಿದೆ.

ಪುತ್ತೂರು ಕಡೆಯಿಂದ ಮಡಿಕೇರಿ ಕಡೆ ಹೋಗುತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಫುಟ್‌ಬಾತ್ ಮೇಲೆ ಹತ್ತಿದ ಪರಿಣಾಮ ಅಲ್ಲೇ ಪಕ್ಕದಲ್ಲಿ ಇರಿಸಲಾಗಿದ್ದ ಹಾಲಿನ ಪ್ಯಾಕೇಟ್‍ನ ಖಾಲಿ ಬಾಕ್ಸ್ ಗಳು ಚೆಲ್ಲಾಪಿಲ್ಲಿಯಾಗಿದೆ.

ಇದನ್ನೂ ಓದಿ : ಮಲ್ಪೆ : ಸಮುದ್ರಕ್ಕೆ ಬಿದ್ದು ಮೀನುಗಾರ ದುರಂತ ಅಂತ್ಯ

ಅದೃಷ್ಟವಶಾತ್ ಸ್ಥಳದಲ್ಲಿ ಸಾರ್ವಜನಿಕರು ಯಾರು ಇಲ್ಲದ ಕಾರಣ ದೊಡ್ಡ ಅಪಾಯ ತಪ್ಪಿದೆ. ಕಾರಿನಲ್ಲಿ ಮಕ್ಕಳು, ಮಹಿಳೆಯರು ಇದ್ದು ಯಾರಿಗೂ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

Continue Reading

DAKSHINA KANNADA

ಬಾಲಕನ ಕತ್ತು ಹೊಕ್ಕು ಎದೆ ಸೀಳಿದ್ದ ತೆಂಗಿನ ಗರಿ; ವೆನ್ಲಾಕ್ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ

Published

on

ಮಂಗಳೂರು: ಆಡುವಾಗ ಬಿದ್ದು ಗಂಭೀರ ಗಾಯಗೊಂಡಿದ್ದ ಯುವಕನಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆಯನ್ನು ಮಂಗಳೂರು ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಮಾಡಲಾಗಿದೆ.

ಮಡಿಕೇರಿ ಆಸ್ಪತ್ರೆಯಿಂದ ಆಗಮಿಸಿದ 12 ವರ್ಷದ ಬಾಲಕನಿಗೆ ಈ ಯಶಸ್ವಿ ಚಿಕಿತ್ಸೆ ನಡೆಸಲಾಗಿದ್ದು, ಬಾಲಕನ ಕುತ್ತಿಗೆಯಲ್ಲಿ ಹೊಕ್ಕಿ ಎದೆಯನ್ನು ಸೀಳಿದ್ದ ಮರದ ತುಂಡನ್ನು ಯಶಸ್ವಿಯಾಗಿ ತೆಗೆಯಲಾಗಿದೆ. ವೆನ್ಲಾಕ್ ಆಸ್ಪತ್ರೆಯ ಕಾರ್ಡಿಯೋಥೋರ್ಯಾಸಿಕ್ ಮತ್ತು ವಾಸ್ಕುಲರ್ ಸರ್ಜರಿ ವಿಭಾಗ ಡಾ. ಸುರೇಶ್ ಪೈ ಅವರ ನೇತೃತ್ವದಲ್ಲಿ ಈ ಸರ್ಜರಿ ನಡೆಸಲಾಗಿತ್ತು.

ಇದೊಂದು ತೀರಾ ಕ್ಲಷ್ಟಕರ ಶಸ್ತ್ರಚಿಕಿತ್ಸೆಯಾಗಿದ್ದು, ಸಿಟಿವಿಎಸ್ ತಂಡ ಇಂದು ಮುಂಜಾನೆ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ. ವೆನ್ಲಾಕ್ ಆಸ್ಪತ್ರೆಯ ವೈಧ್ಯರ ತಂಡದ ಈ ಕಾರ್ಯಕ್ಕೆ ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಮತ್ತು ಅಧೀಕ್ಷರರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Continue Reading

DAKSHINA KANNADA

ಪಾಲೆಮಾರ್ ಗಾರ್ಡನ್ ನಲ್ಲಿ ಪ್ರೆಸ್ ಕ್ಲಬ್ ದಿನಾಚರಣೆ..! ಗೌರವ ಪ್ರಶಸ್ತಿ ಪ್ರದಾನ..!

Published

on

ಮಂಗಳೂರು : ಮಂಗಳೂರು ಪ್ರೆಸ್ ಕ್ಲಬ್ ಇದರ ಪ್ರೆಸ್ ಕ್ಲಬ್ ದಿನಾಚರಣೆ ಮತ್ತು ಪ್ರೆಸ್ ಕ್ಲಬ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಭಾನುವಾರ ನಡೆದಿದೆ.

ಮೋರ್ಗನ್ಸ್ ಗೇಟ್‌ ಸಮೀಪದ ಪಾಲೆಮಾರ್ ಗಾರ್ಡನ್‌ ಎಂಫಸೀಸ್ ಇಲ್ಲಿ ಕಾರ್ಯಕ್ರಮ ಆಯೋಜಸಲಾಗಿತ್ತು. 2024 ನೇ ಸಾಲಿನ ಪ್ರೆಸ್ ಕ್ಲಬ್ ಗೌರವ ಸನ್ಮಾನ ಕಾರ್ಯಕ್ರಮ ನಡೆದಿದ್ದು, ವಿಜಯ ಕರ್ನಾಟಕದ ಮಹಮ್ಮದ್ ಆರೀಫ್ ಪಡುಬಿದ್ರೆ, ವಿಶ್ವವಾಣಿಯ ಜಿತೇಂದ್ರ ಕುಂದೇಶ್ವರ, ಸುದ್ದಿ ಬಿಡುಗಡೆ ಪತ್ರಿಕೆಯ ಭಾಸ್ಕರ್ ರೈ ಕಟ್ಟ, ಹೊಸದಿಂಗತದ ರಘುರಾಮ್ ನಾಯಕ್, ಪತ್ರಿಕಾ ಛಾಯಾಗ್ರಾಹಕ ಸತೀಶ್ ಇರಾ ಇವರುಗಳನ್ನು ಸನ್ಮಾನಿಸಲಾಗಿದೆ.

ಈ ಗೌರವ ಪುರಸ್ಕಾರ ಹತ್ತು ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದ  ಮಂಗಳೂರು, ಇಬ್ರಾಹಿಂ ಅಡ್ಕಸ್ಥಳ ಮತ್ತು ವಿಜಯಕೋಟ್ಯಾನ್ ಪಡು ಅವರನ್ನು ಕೂಡಾ ಗೌರವಿಸಲಾಗಿದೆ.

ಇದಲ್ಲದೆ ಜಿಲ್ಲಾ ಪ್ರಶಸ್ತಿ ಪಡೆದ ಹಿರಿಯ ಪತ್ರಕರ್ತ ಪುಷ್ಪರಾಜ್, ಸಂದೀಪ್ ಮತ್ತು ಸುಖಪಾಲ್ ಪೊಳಲಿ ಅವರನ್ನೂ ಕೂಡಾ ಸನ್ಮಾನಿಸಲಾಗಿದೆ. 2024 ರ ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಗಣೇಶ್ ಕುಲಾಲ್ ಅವರಿಗೆ ಲಭಿಸಿದ್ದು , ಮಾಜಿ ಸಚಿವ ಕೃಷ್ಣ ಪಾಲೆಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ಪ್ರೆಸ್ ಕ್ಲಬ್ ಆಧ್ಯಕ್ಷ ಪಿ.ಬಿ.ಹರೀಶ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರೆಸ್ ಕ್ಲಬ್ ದಿನಾಚರಣೆಯನ್ನು ಮಾಜಿ ಮೇಯರ್ ದಿವಾಕರ್ ಕದ್ರಿ ಅವರು ಉದ್ಘಾಟಿಸಿದ್ದಾರೆ.ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಪತ್ರಿಕಾ ಭವನ ಟ್ರಸ್ಟ್ ಇದರ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page