Connect with us

LATEST NEWS

ಗೋಪಾನ್ ಸ್ವಾಮಿ ಅವರ ದೇಹದಲ್ಲಿ ಯಾವುದೇ ಗಾಯಗಳಿಲ್ಲ: ಪ್ರಾಥಮಿಕ ವರದಿ

Published

on

ಮಂಗಳೂರು/ತಿರುವನಂತಪುರ : ಗೋಪಾನ್‌ಸ್ವಾಮಿಯದು ಸಹಜ ಸಾವು ಎಂದು ಪ್ರಾಥಮಿಕ ವರದಿಯಲ್ಲಿ ಕಂಡುಬಂದಿದೆ.

ಸ್ವಯಂ ಘೋಷಿತ ಗುರು ಗೋಪನ್ ಸ್ವಾಮಿಯ “ಸಮಾಧಿ” ವಿಚಾರವಾಗಿ ಕೇರಳ ಹೈಕೋರ್ಟ್ ಬುಧವಾರ ಕಾಂಕ್ರಿಟ್ ಚೇಂಬರ್ ಅನ್ನು ತೆರೆಯಲು ಅನುಮತಿ ನೀಡಿತ್ತು. ಇಂದು ಬೆಳಗ್ಗೆ ವಿವಾದಕ್ಕಿಡಾಗಿದ್ದ ಗೋಪಾನ್‌ಸ್ವಾಮಿಯವರ ಗೋರಿಯನ್ನು ಕೆಡವಿ ಪಾರ್ಥಿವ ಶರೀರವನ್ನು ಹೊರ ತೆಗೆಯಲಾಯಿತು.

ಕುಳಿತ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹವನ್ನು ಕುತ್ತಿಗೆಯವರೆಗೂ ಪೂಜಾ ಸಾಮಾಗ್ರಿಗಳಿಂದ ಮುಚ್ಚಲಾಗಿತ್ತು. ಬೆಳಗ್ಗೆ 7 ಗಂಟೆಗೆ ಪೊಲೀಸ್ ಬಂದೋಬಸ್ತ್‌ನಲ್ಲಿ ಸಮಾಧಿ ಕೆಡವಲು ಆರಂಭವಾಯಿತು. ಒಂದೂವರೆ ಗಂಟೆಯಲ್ಲಿ ವಿಚಾರಣೆ ಮುಗಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.

ಮೃತದೇಹದ ಪ್ರಾಥಮಿಕ ಪರೀಕ್ಷೆಯಲ್ಲಿ ಗೋಪಾನ್ ಸ್ವಾಮಿಯದು ಸಹಜ ಸಾವು ಎಂದು ವೈದ್ಯರು ಧೃಡಪಡಿಸಿದ್ದಾರೆ. ದೇಹದ ಮೇಲೆ ಯಾವುದೇ ಮಾರಣಾಂತಿಕ ಗಾಯಗಳಿಲ್ಲ ಎಂದು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ಗೊತ್ತಾಗಲಿದೆ. ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗುತ್ತಿದ್ದು, ವಿಧಿ ವಿಧಾನಗಳ ಪ್ರಕಾರ ಕುಟುಂಬಸ್ಥರು ಅಂತ್ಯ ಸಂಸ್ಕಾರ ನಡೆಸಲಿದ್ದಾರೆ.

ಇದನ್ನೂ ಓದಿ: ಕೋಟಿ ಬೆಲೆಯ ಕಾರಿದ್ರೂ ಆಟೋದಲ್ಲಿ ಆಸ್ಪತ್ರೆಗೆ ಹೋದ್ರಾ ಸೈಫ್? ಈಗ ಹೇಗಿದ್ದಾರೆ ನಟ?

ಏನಿದು ಪ್ರಕರಣ ?
ತಿರುವನಂತಪುರ ಜಿಲ್ಲೆಯ ನೆಯ್ಯತ್ತಿಂಕರದಲ್ಲಿನ ಗೋಪನ್ ಕಳೆದ ಶುಕ್ರವಾರ ಕಾಣೆಯಾಗಿದ್ದಾರೆ ಎನ್ನಲಾಗಿತ್ತು. ಗೋಪನ್ ಸ್ವಾಮಿಗಳ ಮಕ್ಕಳಾದ ಸನಂದನ್ ಮತ್ತು ರಾಜಸೇನನ್ ಅವರು ಸ್ಥಳೀಯ ಸಮುದಾಯ ಅಥವಾ ಸಂಬಂಧಿಕರಿಗೆ ತಿಳಿಸದೆ ತಮ್ಮ ತಂದೆಯನ್ನು ನೆಯ್ಯಟಿಂಕರಾದ ದೇವಸ್ಥಾನದ ಬಳಿ ಸಮಾಧಿ ಮಾಡಿದ ನಂತರ ಈ ವಿವಾದ ಭುಗಿಲೆದ್ದಿತ್ತು.

ಈ ಬಗ್ಗೆ ಗೋಪನ್ ಅವರ ಮಕ್ಕಳು, ‘ತಮ್ಮ ತಂದೆ ಕುಳಿತ ಭಂಗಿಯಲ್ಲಿ ಧ್ಯಾನ ಮಾಡುತ್ತಿದ್ದಾಗ ನಿಧನರಾದರು ಮತ್ತು ಅವರ ಸಾವಿಗೆ ಯಾರಿಗೂ ಅವಕಾಶ ನೀಡದಂತೆ ಸೂಚನೆ ನೀಡಿದ್ದರು’ ಎಂದು ಹೇಳಿದ್ದಾರೆ. ನಂತರ ಅವರು ತಮ್ಮ ತಂದೆಯ ಸಮಾಧಿಯ ಕುರಿತ ಪೋಸ್ಟರ್ ಗಳನ್ನು ಕುಟುಂಬದವರು ಹಾಕಿದ್ದರು. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ್ದರಿಂದ ಪೊಲೀಸರು ತನಿಖೆ ಆರಂಭಿಸಿದ್ದರು.

ಹಾಗಾಗಿ ಕಂದಾಯ ಅಧಿಕಾರಿಯ ಆದೇಶ ಪತ್ರದೊಂದಿಗೆ ಪೊಲೀಸರು ತಪಾಸಣೆಗೆ ಮುಂದದಾಗ ಕುಟುಂಬವು ಆಕ್ಷೇಪ ವ್ಯಕ್ತಪಡಿಸಿತ್ತು. ಜತೆಗೆ ಕೆಲವು ಹಿಂದೂ ಸಂಘಟನೆಗೆಳೂ ಕುಟುಂಬದ ಪರ ನಿಂತಿದ್ದವು.
ಜತೆಗೆ ಪೊಲೀಸರು ತಪಾಸಣೆಗೆ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಸಮಾಧಿ ತೆರೆಯಲು ಪೊಲೀಸರಿಗೆ ಅನುಮತಿ ನೀಡಿತ್ತು.

 

DAKSHINA KANNADA

ಗುರುಪುರ: ಮಣ್ಣು ಲಾರಿ ಬಸ್‌ಸ್ಟ್ಯಾಂಡ್‌ಗೆ ಡಿಕ್ಕಿ ಹೊಡೆದು ಅಪಾರ ಹಾನಿ

Published

on

ಕೈಕಂಬ: ಮಣ್ಣು ಸಾಗಿಸುತ್ತಿದ್ದ 12 ಚಕ್ರದ ಲಾರಿಯೊಂದು ಬಸ್‌ಸ್ಟ್ಯಾಂಡ್‌ಗೆ ಡಿಕ್ಕಿ ಹೊಡೆದು ಅಪಾರ ಹಾನಿಯಾದ ಘಟನೆ ಗುರುಪುರ ಪೇಟೆಯಲ್ಲಿ ನಡೆದಿದೆ.

ಲಾರಿಯು ಕೈಕಂಬದಿಂದ ಮಂಗಳೂರು ಕಡೆಗೆ ಮಣ್ಣನ್ನು ಸಾಗಿಸಿಕೊಂಡು ಹೋಗುತ್ತಿತ್ತು. ಬಸ್‌ ಸ್ಟ್ಯಾಂಡ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ತಂಗುದಾಣದ ಛಾವಣಿಗೆ ಅಪಾರ ಹಾನಿಯಾಗಿದೆ. ಅಲ್ಲಿನ ಆಸನ, ಕಲ್ಲುಗಳೆಲ್ಲವೂ ಪುಡಿಯಾಗಿವೆ. ಬಸ್‌ ಸ್ಟ್ಯಾಂಡ್‌ದ ಹಿಂಬದಿ ಇದ್ದ ಶ್ರೀ ಶನೈಶ್ವರ ಪೂಜಾ ಸಮಿತಿಯ ಕಚೇರಿಯ ಮೇಲ್ಛಾವಣಿಗೂ ಹಾನಿಯಾಗಿದೆ.

ಬಸ್‌ ತಂಗುದಾಣದಲ್ಲಿ ಜನರಿಲ್ಲದ ಕಾರಣ ಯಾರಿಗೂ ಜೀವ ಹಾನಿಯಾಗಿಲ್ಲ. ಘಟನೆಯಲ್ಲಿ ಇಬ್ಬರಿಗೆ ಗಾಯವಾಗಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್‌ಸ್ಟ್ಯಾಂಡ್‌ಗೆ ಡಿಕ್ಕಿ ಹೊಡೆದ ಲಾರಿ ಚಾಲಕ ಪರಾರಿಯಾಗಲು ಯತ್ನಿಸಿದ್ದು, ಬಳಿಕ ಅಲ್ಲಿನ ಜನರು ಸೇರಿ ಆತನನ್ನು ಹಿಡಿದಿದ್ದಾರೆ. ಬಜ್ಪೆ ಪೊಲೀಸ್ ಠಾಣೆಯಲ್ಲಿ ಈ ಕೇಸ್ ದಾಖಲಾಗಿದೆ.

Continue Reading

LATEST NEWS

ಕೇಜ್ರಿವಾಲ್ ಸೋಲಿಗೆ ಕಾರಣ ಬಿಚ್ಚಿಟ್ಟ ಅಣ್ಣಾ ಹಜಾರೆ !

Published

on

ಮಂಗಳೂರು/ಮುಂಬೈ : ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸೋಲನುಭವಿಸಿದೆ. 27 ವರ್ಷಗಳ ಬಳಿಕ ಬಿಜೆಪಿಗೆ ಅಧಿಕಾರ ಸಿಗುವಂತಾಗಿದೆ. ಈ ಮೂಲಕ ಆಡಳಿತರೂಢ ಆಮ್ ಆದ್ಮಿ ಪಕ್ಷ ನಿರ್ಗಮಿಸುತ್ತಿದೆ. ದೆಹಲಿ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಮಾತನಾಡಿದ್ದಾರೆ.

ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ 87ರ ಹರೆಯದ ಅಣ್ಣಾ ಹಜಾರೆ, “ಕೇಜ್ರಿವಾಲ್ ನಾನು ಹೇಳಿದಕ್ಕೆ ಕಿವಿಗೊಡಲಿಲ್ಲ ಮತ್ತು ಮದ್ಯದ ಮೇಲೆ ಮಾತ್ರ ಗಮನಹರಿಸಿದರು. ಅವರು ಹಣದ ದುರಾಸೆಯಲ್ಲಿ ಮುಳುಗಿದರು” ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: 27 ವರ್ಷಗಳ ಬಳಿಕ ದೆಹಲಿಯಲ್ಲಿ ಅರಳಿದ ಕಮಲ; ದಿಲ್ಲಿಯ ದಿಲ್ ಗೆದ್ದ ಬಿಜೆಪಿ

“ಅಭ್ಯರ್ಥಿಯ ನಡವಳಿಕೆ ಮತ್ತು ಆಲೋಚನೆಗಳು ಶುದ್ದವಾಗಿರಬೇಕು, ಜೀವನವು ದೋಷರಹಿತವಾಗಿರಬೇಕು ಮತ್ತು ತ್ಯಾಗ ಇರಬೇಕು ಎಂದು ನಾನು ಯಾವಾಗಲೂ ಹೇಳುತ್ತೇನೆ. ಈ ಗುಣಗಳಿದ್ದವರ ಮೇಲೆ ಮತದಾರರು ನಂಬಿಕೆ ಇಡುತ್ತಾರೆ. ಆದರೆ ಅವರು ಮದ್ಯ ಹಗರಣದಲ್ಲಿ ಶಾಮೀಲಾಗಿದ್ದಾರೆ ಎಂದು ಜನರು ಭಾವಿಸಿದ್ದಾರೆ. ರಾಜಕೀಯದಲ್ಲಿ ಆರೋಪಗಳನ್ನು ಮಾಡಲಾಗುತ್ತದೆ. ಆಗ ತಪ್ಪಿತಸ್ಥನಲ್ಲ ಎಂದು ಸಾಬೀತುಪಡಿಸಬೇಕು. ಸತ್ಯವು ಸತ್ಯವಾಗಿ ಉಳಿಯುತ್ತದೆ” ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.

 

Continue Reading

LATEST NEWS

ಮದುವೆ ಆಗುವ ಹುಡುಗರೇ ಎಚ್ಚರ; ನಿಮ್ಮ ಸಿಬಿಲ್ ಸ್ಕೋರ್‌ ಅನ್ನು ಒಮ್ಮೆ ನೋಡಿಕೊಳ್ಳಿ..!

Published

on

ಮಹಾರಾಷ್ಟ್ರ: ಇತ್ತೀಚಿನ ದಿನದಲ್ಲಿ ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡುತ್ತಾರೆ. ವಧುವಿನ ಕಡೆಯವರು ವರನನ್ನು ಹುಡುಕುವಾಗ ವರನ ಪೂರ್ವಪರ ವಿಚಾರಗಳನ್ನು ನೋಡುವುದುಂಟು. ಮೊದಲು ವರ ಧೂಮಪಾನ, ಮಧ್ಯಪಾನ ಮಾಡುತ್ತಿದ್ದರೆ ಆಕೆಗೆ ಹುಡುಗಿ ಕೊಡುತ್ತಿರಲಿಲ್ಲ. ಆದರೆ ಈಗ ವರನ ಕೆಲಸ, ಗುಣ, ನಡತೆ, ಜಾತಕವನ್ನು ನೋಡಿ ಹುಡುಗಿಯನ್ನು ಕೊಡುವುದುಂಟು. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ.

ಮಹಾರಾಷ್ಟ್ರದ ಮುರ್ಜಿಜಾಪುರದಲ್ಲಿ ಈ ಘಟನೆ ನಡೆದಿದ್ದು, ಮದುವೆ ಮಾತುಕತೆಗೆ ಬಂದ ಎರಡು ಕಡೆಯವರು ಚೆನ್ನಾಗಿಯೇ ಎಲ್ಲಾ ರೀತಿಯ ಮಾತುಕತೆಗಳನ್ನು ಮುಗಿಸಿದ್ದರು. ಕೊನೆಗೆ ನಿಶ್ಚಿತಾರ್ಥದ ದಿನಾಂಕವನ್ನು ನಿಗದಿ ಮಾಡಲೂ ಮುಂದಾಗಿದ್ದರು.

ಬಳಿಕ ಹುಡುಗಿಯ ಅಂಕಲ್ ಒಬ್ಬರು ಅನಿರೀಕ್ಷಿತವಾದ ಬೇಡಿಕೆಯೊಂದನ್ನು ಇಡುತ್ತಾರೆ. ನಾನು ಹುಡುಗನ ಸಿಬಿಲ್ ಸ್ಕೋರ್ ಚೆಕ್ ಮಾಡಬೇಕು ಎನ್ನುತ್ತಾರೆ. ಇದನ್ನು ಕೇಳಿದ ಅಲ್ಲಿದ್ದ ಎಲ್ಲರಿಗೂ ಒಂದು ಕ್ಷಣ ಅಚ್ಚರಿಯಾಗುತ್ತದೆ. ಯಾವಾಗ ಹುಡುಗನ ಸಿಬಿಲ್ ಸ್ಕೋರ್ ಚೆಕ್ ಮಾಡುತ್ತಾರೋ ಹುಡುಗ ಹಲವು ಕಡೆ ಸಾಲ ಮಾಡಿ ಆರ್ಥಿಕವಾಗಿ ಒದ್ದಾಡುತ್ತಿದ್ದಾನೆ ಎಂಬುದು ಕಂಡು ಬರುತ್ತದೆ. ಇದರಿಂದ ನನ್ನ ಮಗಳ ಬದುಕು ಹಾಳಾಗುತ್ತದೆ ಈ ಮದುವೆ ಬೇಡ ಎಂದು ನಿರ್ಧರಿಸಿದ ಹುಡುಗಿಯ ಕುಟುಂಬ ಹುಡುಗನ ಮನೆಯಿಂದ ಎದ್ದು ಬರುತ್ತದೆ.

ಈಗಾಗಲೇ ಸಾಲದಲ್ಲಿ ಮುಳುಗಿ ಹೋಗಿರುವ ಈ ಹುಡುಗನಿಗೆ ಮದುವೆ ಯಾಕೆ ಬೇಕು ? ಎಂದು ಪ್ರಶ್ನಿಸಿದ ಹುಡುಗಿಯ ಅಂಕಲ್​ ವಾದ ಮಾಡುತ್ತಾನೆ. ಉಳಿದವರು ಕೂಡ ಅವರ ಮಾತಿಗೆ ಸಮ್ಮತಿಯನ್ನು ನೀಡಿ ಮದುವೆಯ ಮಾತುಕತೆಯನ್ನು ಅಲ್ಲಿಗೆ ನಿಲ್ಲಿಸಿ ಮನೆಯಿಂದ ಎದ್ದು ಬರುತ್ತಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page