Connect with us

LATEST NEWS

ಕಾಲೇಜಿಗೆ ತೆರಳಿದ್ದ ನವ ವಿವಾಹಿತೆ ಶವ ನದಿಯಲ್ಲಿ ಪತ್ತೆ..!

Published

on

ಕಲಬುರಗಿ: ಕಾಲೇಜಿಗೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದ ನವವಿವಾಹಿತೆ ನದಿ‌ಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

ಕಲಬುರಗಿಯ ಕಮಲಾಪುರ ತಾಲೂಕಿನ ಕುರಿಕೋಟಾದಲ್ಲಿ ಈ ಘಟನೆ ನಡೆದಿದೆ. ಮೃತಳನ್ನು ನಾವದಗಿ ಗ್ರಾಮದ ಸೃಷ್ಟಿ‌ ಮಾರುತಿ (21) ಎಂದು ಗುರುತಿಸಲಾಗಿದೆ.

ಡಿಗ್ರಿ ಐದನೇಯ ಸೇಮಿಸ್ಟರ್‌ನಲ್ಲಿ ಓದುತ್ತಿದ್ದ ಸೃಷ್ಟಿಗೆ ಇತ್ತೀಚೆಗೆ ಮದುವೆಯಾಗಿತ್ತು.

ಅತ್ತೆಯ ಮನೆಯಲ್ಲಿದ್ದೇ ವ್ಯಾಸಂಗ ಮಾಡುತ್ತಿದ್ದ ಸೃಷ್ಟಿ ಡಿಸೆಂಬರ್ 13 ರಂದು ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿದ್ದರು.

ಸಂಜೆಯಾದ್ರೂ ಮನೆಗೆ ಬಾರದ ಹಿನ್ನೆಲೆ ಗಂಡ ಮತ್ತು ಆತನ ಕುಟುಂಬಸ್ಥರು ಗಾಬರಿಗೊಂಡು ಗ್ರಾಮವೆಲ್ಲ ಹುಡುಕಾಟ ನಡೆಸಿದ್ದಾರೆ.

ಅಷ್ಟೇ ಅಲ್ಲ, ಸಂಬಂಧಿಕರಿಗೆ ಮತ್ತು ಸೃಷ್ಟಿ ಗೆಳತಿಯರಿಗೆ ಫೋನ್​ ಮಾಡಿ ವಿಚಾರರಿಸಿದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಹೀಗಾಗಿ ಸೃಷ್ಟಿ ಗಂಡನ ಕುಟುಂಬಸ್ಥರು ಡಿಸೆಂಬರ್​ 14ರ ಬೆಳಗ್ಗೆ ಮಹಾಗಾಂವ್​ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿದ್ದರು.

ಮನೆಯಿಂದ ಕಾಣೆಯಾಗಿ ಮೂರು ದಿನಗಳ ನಂತರ ಸೃಷ್ಟಿ ಕುರಿಕೋಟಾ ಸೇತುವೆ ಬಳಿ ಶವವಾಗಿ ಪತ್ತೆಯಾಗಿದ್ದಾರೆ.

ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಮಹಾಗಾಂವ್​ ಪೊಲೀಸರು ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆ ರವಾನಿಸಿದ್ದು ತನಿಖೆ ಆರಂಭಿಸಿದ್ದಾರೆ.

LATEST NEWS

ಹಾರಿಸಿದ್ದ ಗಾಳಿಪಟ ಹಿಡಿಯಲು ಹೋಗಿ ಯುವಕ ಸಾ*ವು

Published

on

ಮಂಗಳೂರು/ಬೀದರ್ : ಹಾರಿಸಿದ್ದ ಗಾಳಿಪಟ ಹಿಡಿಯಲು ಹೋಗಿ ಕಟ್ಟಡದ ಮೇಲಿಂದ ಬಿ*ದ್ದು ಯುವಕ ಮೃ*ತಪಟ್ಟಿರುವ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ವಾಂಜರಿ ಬಡಾವಣೆಯಲ್ಲಿ ನಡೆದಿದೆ.

19 ವರ್ಷದ ಶಶಿಕುಮಾ‌ರ್ ಶಿವಾನಂದ ಮೃ*ತ ಯುವಕ. ಶಶಿ ಕುಮಾರ್ ಖಾಸಗಿ ಕಾಲೇಜಿನ ಕಟ್ಟಡದ ಮೇಲೆ ಗಾಳಿಪಟ ಹಾರಿಸಲು ಹೋಗಿದ್ದ. ಗಾಳಿಪಟ ಹಾರಿಸುವಾಗ ದಾರ ತುಂ*ಡಾಗಿದ್ದು. ಈ ವೇಳೆ ಹಾರಿ ಹೋಗುತ್ತಿದ್ದ ಗಾಳಿಪಟ ಹಿಡಿಯಲು ಹೋಗಿ, ಕಟ್ಟಡದ ಮೇಲಿಂದ ಬಿ*ದ್ದಿದ್ದಾನೆ.

ಇದನ್ನೂ ಓದಿ : ಗಿಲ್ಲಿ ಫ್ಯಾನ್ಸ್ ಅಬ್ಬರ ಕಂಡು ಬೆಚ್ಚಿಬಿದ್ದ ಬಿಗ್ ಬಾಸ್ ಮನೆ ಮಂದಿ; ಸುದೀಪ್ ಕೊಟ್ಟ ಸುಳಿವೇನು?

ಪರಿಣಾಮ ಸ್ಥಳದಲ್ಲೇ ಕೊನೆ*ಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Continue Reading

LATEST NEWS

ವಾಷಿಂಗ್ ಮಷಿನ್ ದಿಢೀರ್ ಸ್ಫೋಟ; ತಪ್ಪಿದ ಭಾರಿ ಅನಾಹುತ

Published

on

ಹೈದರಾಬಾದ್: ಮನೆಯೊಂದರಲ್ಲಿ ವಾಷಿಂಗ್‌ ಮಷಿನ್‌ ಸ್ಫೋಟಗೋಡಿರುವ ಘಟನೆ ಹೈದಾರಾಬಾದಿನ ಕೃಷ್ಣ ನಗರ ಪ್ರದೇಶದಲ್ಲಿರುವ ಜೈನ ದೇವಾಲಯದ ಬಳಿ ಶನಿವಾರ(ಜ.17) ನಡೆದಿದೆ.


ಸ್ಯಾಮ್‌ಸಂಗ್ ವಾಷಿಂಗ್ ಮೆಷಿನ್ ಸ್ಫೋಟಗೊಂಡಿದ್ದು, ಘಟನೆಯ ಸಮಯದಲ್ಲಿ ಅದರ ಹತ್ತಿರ ಯಾರೂ ಇಲ್ಲದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಶಾರ್ಟ್ ಸರ್ಕ್ಯೂಟ್ ಅಥವಾ ತಾಂತ್ರಿಕ ದೋಷದಿಂದಾಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಸ್ಫೋಟದ ತೀವ್ರತೆಗೆ ಮನೆಯ ಕಿಟಕಿ ಗಾಜುಗಳು ಪುಡಿಯಾಗಿವೆ ಮತ್ತು ಗೋಡೆಗಳಿಗೆ ಹಾನಿಯಾಗಿದೆ. ಆದರೆ ಶಬ್ದ ಕೇಳಿ ಎಲ್ಲರೂ ಬಾಂಬ್ ಸ್ಫೋಟವಾದಂತೆ ಭಯಪಟ್ಟು ಮನೆಯಿಂದ ಓಡಿ ಬಂದಿದ್ದರು.

ಇದನ್ನೂ ಓದಿ: ಮೂಡುಬಿದಿರೆ : ಸ್ವಂತ ಉದ್ಯಮದ ಸಿದ್ಧತೆಯಲ್ಲಿದ್ದ ಯುವಕ ಆ*ತ್ಮಹ*ತ್ಯೆ

ಈ ಕುರಿತು ಮಾಹಿತಿ ತಿಳಿದ ಬಳಿಕ ಮಧುರಾನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

Continue Reading

DAKSHINA KANNADA

ಮೂಡುಬಿದಿರೆ : ಸ್ವಂತ ಉದ್ಯಮದ ಸಿದ್ಧತೆಯಲ್ಲಿದ್ದ ಯುವಕ ಆ*ತ್ಮಹ*ತ್ಯೆ

Published

on

ಮೂಡುಬಿದಿರೆ : ಸ್ವಂತ ಉದ್ಯಮ ಸ್ಥಾಪಿಸುವ ಕನಸು ಹೊತ್ತು ಸಿದ್ಧತೆ ನಡೆಸುತ್ತಿದ್ದ ಯುವಕನೋರ್ವ ಆ*ತ್ಮಹ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮೂಡುಬಿದಿರೆಯ ರಿಂಗ್‌ರೋಡ್ ಬಳಿ ನಡೆದಿದೆ.  ಮೂಡುಬಿದಿರೆ ರಿಂಗ್ ರೋಡ್‌ನ ನಾಗರಕಟ್ಟೆ-ಒಂಟಿಕಟ್ಟೆ ಕ್ರಾಸ್ ಬಳಿ ಕಬ್ಬಿನ ಜ್ಯೂಸ್ ವ್ಯಾಪಾರ ಮಾಡುತ್ತಿರುವ ಶ್ರೀನಿವಾಸ್ ಎಂಬುವವರ ಪುತ್ರ ದೀಕ್ಷಿತ್ (35) ಮೃ*ತಪಟ್ಟ ಯುವಕ.

ಹಲವು ವರ್ಷಗಳ ಕಾಲ ದುಬೈನಲ್ಲಿ ಉದ್ಯೋಗದಲ್ಲಿದ್ದ ದೀಕ್ಷಿತ್, ಒಂದೂವರೆ ವರ್ಷದ ಹಿಂದೆ ತವರಿಗೆ ಮರಳಿದ್ದರು. ಮೂಡುಬಿದಿರೆಯ ರಿಂಗ್‌ರೋಡ್ ಬಳಿ ಹೋಟೆಲ್ ಉದ್ಯಮ ಪ್ರಾರಂಭಿಸಬೇಕೆಂಬ ಹಂಬಲ ಹೊಂದಿದ್ದ ಅವರು, ಅದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಆದರೆ ಶನಿವಾರ(ಜ.17) ಮಧ್ಯಾಹ್ನ, ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಮಲಗಿದ್ದ ಸಮಯದಲ್ಲಿ, ಮನೆಯ ಕೋಣೆಯ ಕಿಟಕಿಗೆ ನೇ*ಣು ಬಿಗಿದುಕೊಂಡು ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : ರಸ್ತೆ ವಿಭಜಕಕ್ಕೆ ಎಸ್ ಯುವಿ ಡಿ*ಕ್ಕಿ; 5 ಮಂದಿ ಸಾ*ವು

ದೀಕ್ಷಿತ್ ಅವರ ಈ ತೀವ್ರ ನಿರ್ಧಾರಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಉತ್ತಮ ಭವಿಷ್ಯದ ಕನಸು ಕಂಡಿದ್ದ ಯುವಕನ ಆ*ತ್ಮಹ*ತ್ಯೆಯು ಕುಟುಂಬಸ್ಥರಲ್ಲಿ ಮತ್ತು ಸ್ನೇಹಿತರಲ್ಲಿ ಭಾರೀ ಶೋಕವನ್ನುಂಟು ಮಾಡಿದೆ.

 

 

Continue Reading
Advertisement

Trending

Copyright © 2025 Namma Kudla News

You cannot copy content of this page