Connect with us

LATEST NEWS

ಹೊಸದಿಲ್ಲಿ: ಕೋಚಿಂಗ್ ಸೆಂಟರ್‌ನಲ್ಲಿ ಬೆಂಕಿ ಅವಘಡ- ಕಟ್ಟಡದಿಂದ ಜಿಗಿದು ಪಾರಾದ ವಿದ್ಯಾರ್ಥಿಗಳು..!

Published

on

ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೋಚಿಂಗ್ ಸೆಂಟರ್‌ನ ಒಳಗಿದ್ದ ವಿದ್ಯಾರ್ಥಿಗಳು ಕಟ್ಟಡದಿಂದ ಜಿಗಿದು ಪ್ರಾಣ ಉಳಿಸಿಕೊಂಡ ಘಟನೆ ಹೊಸದಿಲ್ಲಿಯ ಮುಖರ್ಜಿ ನಗರದಲ್ಲಿ ಗುರುವಾರ ನಡೆದಿದೆ. 

ಹೊಸದಿಲ್ಲಿ: ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೋಚಿಂಗ್ ಸೆಂಟರ್‌ನ ಒಳಗಿದ್ದ ವಿದ್ಯಾರ್ಥಿಗಳು ಕಟ್ಟಡದಿಂದ ಜಿಗಿದು ಪ್ರಾಣ ಉಳಿಸಿಕೊಂಡ ಘಟನೆ ಹೊಸದಿಲ್ಲಿಯ ಮುಖರ್ಜಿ ನಗರದಲ್ಲಿ ಗುರುವಾರ ನಡೆದಿದೆ.

ಮಧ್ಯಾಹ್ನ 12.30 ರ ವೇಳೆಗೆ ಬೆಂಕಿ ಕಾಣಿಸಿಕೊಂಡು ಕಟ್ಟಡದ ಮೇಲಿನ ಮಹಡಿಯಿಂದ ಹೊಗೆ ಹೊರ ಬರುತ್ತಿರುವುದನ್ನು ಗಮನಿಸಿದ ವಿದ್ಯಾರ್ಥಿಗಳು ತಮ್ಮ ಬೆನ್ನಿನ ಮೇಲೆ ಬ್ಯಾಗ್‌ಗಳನ್ನು ಹಾಕಿಕೊಂಡು ತಂತಿಗಳನ್ನು ಬಳಸಿ ಒಬ್ಬರ ಹಿಂದೆ ಒಬ್ಬರಂತೆ ಕೆಳಗೆ ಇಳಿದಿದ್ದಾರೆ.

ಈ ಸಂದರ್ಭದಲ್ಲಿ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀaಸರು ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಕೆಳಗಿಳಿಯುವಾಗ ಇತರ ಮಹಡಿಗಳಲ್ಲಿ ಅಳವಡಿಸಲಾದ ಎಸಿಗಳನ್ನು ಕೂಡಾ ಬಳಸಿಕೊಂಡು ಪ್ರಾಣ ಉಳಿಸಿಕೊಂಡರು.

ಅಗ್ನಿಶಾಮಕ ದಳದ ಸಿಬಂದಿ 11 ವಾಹನಗಳೊಂದಿಗೆ ತೆರಳಿ ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿಗಳನ್ನು ಅಪಾಯದಿಂದ ಪಾರು ಮಾಡುವಲ್ಲಿ ನೆರವಾದರು.

ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ದಿಲ್ಲಿ ಅಗ್ನಿಶಾಮಕ ಸೇವೆಗಳ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ವಿದ್ಯುತ್ ಮೀಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ಉಪಕರಣದಿಂದ ಹೊಗೆ ಹೊರಹೊಮ್ಮಿತು.

ಇದರಿಂದಾಗಿ ವಿದ್ಯಾರ್ಥಿಗಳು ಭಯ ಭೀತರಾದರು ಮತ್ತು ಕೋಚಿಂಗ್ ಸೆಂಟರ್‌ನ ಹಿಂಭಾಗದಿಂದ ಕೆಳಗೆ ಇಳಿಯಲು ಪ್ರಾರಂಭಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

LATEST NEWS

ಹಾಲಿನ ಟ್ಯಾಂಕರ್‌ಗೆ ಡಿ*ಕ್ಕಿಯಾಗಿ ಸುಟ್ಟು ಕರಕಲಾದ ಕಾರು

Published

on

ಮಂಗಳೂರು/ರಾಮನಗರ : ಹಾಲಿನ ಟ್ಯಾಂಕರ್‌ ಗೆ ಹಿಂಬದಿಯಿಂದ ಡಿ*ಕ್ಕಿಯಾಗಿ ಕಾರೊಂದು ಹೊ*ತ್ತಿ ಉರಿದ ಘಟನೆ ರಾಮನಗರದ ಸಂಗಬಸವನದೊಡ್ಡಿ ಗ್ರಾಮದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಡಸ್ಟರ್ ಕಾರು ಮೈಸೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿತ್ತು. ವೇಗವಾಗಿ ಹೋಗುತ್ತಿದ್ದ ಚಾಲಕ ಸಂಗಬಸವನದೊಡ್ಡಿ ಬಳಿ ನಿಯಂತ್ರಣ ಕಳೆದುಕೊಂಡು ಮುಂದಿನಿಂದ ಹೋಗುತ್ತಿದ್ದ ಹಾಲಿನ ಟ್ಯಾಂಕರ್‌ ಗೆ ಗು*ದ್ದಿದ್ದಾನೆ. ಕೂಡಲೇ ಕಾರಿನಲ್ಲಿ ದಟ್ಟ ಹೊಗೆ ಕಾಣಿಸಿಕೊಳ್ಳತೊಡಗಿದೆ. ಅಪಾಯ ಅರಿತ ಕಾರಿನಲ್ಲಿದ್ದವರು ತಕ್ಷಣ ಕೆಳಕ್ಕಿಳಿದು ದೂರಕ್ಕೆ ಓಡಿದ್ದಾರೆ.  ಅದಾದ ಕೆಲವೇ ಕ್ಷಣದಲ್ಲಿ ಕಾರಿನಲ್ಲಿ ಬೆಂ*ಕಿ ಕಾಣಿಸಿಕೊಂಡು ಹೊ*ತ್ತಿ ಉ*ರಿದಿದೆ.

ಇದನ್ನೂ ಓದಿ : ಇಂದೆಂಥ ದುರವಸ್ಥೆ! 108 ಆ್ಯಂಬುಲೆನ್ಸ್ ಸಿಗದೆ ಪರದಾಟ; ಗೂಡ್ಸ್ ಟೆಂಪೋ ಮೂಲಕ ರೋಗಿ ಆಸ್ಪತ್ರೆಗೆ!

ಸ್ಥಳಕ್ಕೆ ಬಂದ ಅ*ಗ್ನಿಶಾಮಕ ದಳದ ಸಿಬ್ಬಂದಿ ಬೆಂ*ಕಿ ನಂದಿಸಿದ್ದಾರೆ. ಕಾರು ಸು*ಟ್ಟು ಕರಕಲಾಗಿದ್ದು, ಟ್ಯಾಂಕರ್‌ ನ ಹಿಂಭಾಗ ಜಖಂಗೊಂಡಿದೆ.  ಘಟನೆ ಬಗ್ಗೆ ರಾಮನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

LATEST NEWS

ಇಂದೆಂಥ ದುರವಸ್ಥೆ! 108 ಆ್ಯಂಬುಲೆನ್ಸ್ ಸಿಗದೆ ಪರದಾಟ; ಗೂಡ್ಸ್ ಟೆಂಪೋ ಮೂಲಕ ರೋಗಿ ಆಸ್ಪತ್ರೆಗೆ!

Published

on

ಉಡುಪಿ : ತೀವ್ರ ಅಸ್ವಸ್ಥಗೊಂಡಿದ್ದ ವೃದ್ಧ ರೋಗಿಯೊಬ್ಬರಿಗೆ  ಸಕಾಲಕ್ಕೆ ಆ್ಯಂಬುಲೆನ್ಸ್ ಸಿಗದೆ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ತನ್ನ ಗೂಡ್ಸ್ ಟೆಂಪೋದಲ್ಲಿ ಸಾಗಿಸಿ ಆಸ್ಪತ್ರೆಗೆ ದಾಖಲಿಸಿದ ಆಘಾತಕಾರಿ ಘಟನೆ ಉಡುಪಿಯ ಉದ್ಯಾವರದಲ್ಲಿ ನಡೆದಿದೆ.

ರೋಗಿಗೆ ಸಂಬಂಧಪಟ್ಟವರು ರಾತ್ರಿ 7 ಗಂಟೆಗೆ 108 ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದರೆ, 9.30 ಆದರೂ ಆ್ಯಂಬುಲೆನ್ಸ್ ಲಭ್ಯವಾಗಿಲ್ಲ. ಹೀಗಾಗಿ ಅವರು ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿಯವರನ್ನು ಸಂಪರ್ಕಿಸಿದ್ದಾರೆ. ರೋಗಿಯ ಚಿಂತಾಜನಕ ಸ್ಥಿತಿ ಕಂಡ ವಿಶು ಶೆಟ್ಟಿ ಬೇರೆ ದಾರಿ ಕಾಣದೆ ತನ್ನ ಗೂಡ್ಸ್ ಟೆಂಪೋದಲ್ಲಿ ಮಂಚ ಇರಿಸಿ ಅದರಲ್ಲಿ ರೋಗಿಯನ್ನು ಮಲಗಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸುವಲ್ಲಿ ನೆರವಾಗಿದ್ದಾರೆ.

ಇದನ್ನೂ ಓದಿ : ಸುರತ್ಕಲ್‌: ದೇವರಿಗೆ ಕೈಮುಗಿವ ನೆಪದಲ್ಲಿ ಭಕ್ತರೊಬ್ಬರ ಬ್ಯಾಗಿಗೆ ಕನ್ನ ಹಾಕಿದ ಕಳ್ಳ

ಕಳೆದ ಒಂದು ವರ್ಷದಿಂದ 108 ಆ್ಯಂಬುಲೆನ್ಸ್  ಸಮಸ್ಯೆ ತಲೆದೋರುತ್ತಿದ್ದು, ಇನ್ನೂ ಪರಿಹಾರ ಕಂಡಿಲ್ಲ. ಇನ್ನಾದರೂ ಸರ್ಕಾರ, ಜಿಲ್ಲಾಡಳಿತ ಕ್ರಮ ಕೈಗೊಂಡು ಸಹಕರಿಸಿ.  ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡಬೇಡಿ ಎಂದು  ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಮನವಿ ಮಾಡಿದ್ದಾರೆ.

Continue Reading

DAKSHINA KANNADA

ಸುರತ್ಕಲ್‌: ದೇವರಿಗೆ ಕೈಮುಗಿವ ನೆಪದಲ್ಲಿ ಭಕ್ತರೊಬ್ಬರ ಬ್ಯಾಗಿಗೆ ಕನ್ನ ಹಾಕಿದ ಕಳ್ಳ

Published

on

ಮಂಗಳೂರು: ನಗರದ ಹೊರವಲಯದ ಸುರತ್ಕಲ್ ಬಳಿ ಇರುವ ದೇವಸ್ಥಾನದಲ್ಲಿ ಶನಿವಾರ ಸಂಜೆ ಅಪರಿಚಿತನೊಬ್ಬ ಭಕ್ತನ ನೋಗಿನಲ್ಲಿ ಆಗಮಿಸಿ ಕಳವು ಕ್ಯತ್ಯ ಎಸಗಿದ್ದಾನೆ.

ದೇವಸ್ಥಾನ ಒಳಗೆ ಬಂದಿದ್ದ ಈತ ದೇವಸ್ಥಾನಕ್ಕೆ ಬಂದು ಅಲ್ಲಿ ಭಕ್ತರೊಬ್ಬರು ಇಟ್ಟಿದ್ದ ಬ್ಯಾಗಿನಿಂದ ನಗದು ಹಣವನ್ನು ದೋಚಿ ಪರಾರಿಯಾಗಿದ್ದಾನೆ.

ದೇವರಿಗೆ ಕೈಮುಗಿವ ನೆಪದಲ್ಲಿ ಬ್ಯಾಗಿನ ಪಕ್ಕದಲ್ಲೇ ನಿಂತು ಹಣವನ್ನು ಕಳವು ಮಾಡಿದ್ದಾನೆ. ದೇವಸ್ಥಾನದ ಒಳಗಡೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಆತನ ಕಳವು ಕೃತ್ಯದ ದೃಶ್ಯಾವಳಿಗಳು ದಾಖಲಾಗಿವೆ.

ಇದನ್ನೂ ಓದಿ: ಸುರತ್ಕಲ್: ಬಾಲಕನಿಗೆ ಲೈಂ*ಗಿಕ ಕಿರುಕುಳ; ಆರೋಪಿ ಬಂಧನ

ಇದೀಗ ಹಣವನ್ನು ಕಳೆದುಕೊಂಡಿರುವರು ಸುರತ್ಕಲ್‌ ಠಾಣಾ ಪೊಲೀಸರಿಗೆ ದೂರು ನೀಡಿದ್ದು, ಸಿಸಿಟಿವಿ ಫೂಟೇಜ್ ಆಧಾರದಲ್ಲಿ ಆರೋಪಿಯನ್ನು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page