ಫ್ರಿಜ್ಜಿನ್ನಲ್ಲಿರಿಸಿದ ಅಹಾರಗಳು ತಾಜಾತನವನ್ನು ಉಳಿಸಿಕೊಳ್ಳಲು ಕಾರಣವೆಂದರೆ ಶೀತಲೀಕರಣ. ಆದರೆ, ಈ ಪರಿ ಎಲ್ಲಾ ಬಗೆಯ ಅಹಾರಗಳಿಗೆ ಅನ್ವಯಿಸಲಾರದು. ಕೆಲವು ಫಲಗಳಂತೂ ಫ್ರಿಜ್ಜಿನಲ್ಲಿಟ್ಟರೇ ಸಾಕು, ಚೆನ್ನಾಗಿರುವ ಬದಲು ಹಾಳಾಗಲು ತೊಡಗುತ್ತವೆ. ಇಂದಿನ ಲೇಖನದಲ್ಲಿ ಈ ಗುಣವಿರುವ ಕೆಲವು ಫಲಗಳ ಬಗ್ಗೆ ವಿವರಿಸಲಾಗಿದೆ. ಇವನ್ನು ಫ್ರಿಜ್ಜಿನಲ್ಲಿಡುವ ಬದಲು ತಣ್ಣನೆಯ ಸ್ಥಳದಲ್ಲಿ ಗಾಳಿಯಾಡದಂತೆ ಶೇಖರಿಸಬೇಕು. ಈ ಫಲಗಳು ಯಾವುವು ಎಂಬುದನ್ನು ನೋಡೋಣ.

ಬಾಳೆಹಣ್ಣು
ಬಾಳೆಹಣ್ಣುಗಳನ್ನು ಎಂದಿಗೂ ಫ್ರಿಜ್ಜಿನಲ್ಲಿ ಸಂಗ್ರಹಿಸಬಾರದು. ಏಕೆಂದರೆ ಬಾಳೆಹಣ್ಣಿನ ತಾಪಮಾನ ಸಾಮಾನ್ಯ ತಾಪಮಾನಕ್ಕಿಂತ ಕಡಿಮೆಯಾದರೆ, ಇದರ ಸಿಪ್ಪೆ ಶೀಘ್ರವೇ ಕಪ್ಪಾಗುತ್ತದೆ ಹಾಗೂ ಸಿಪ್ಪೆಯ ಅಡಿಯಲ್ಲಿನ ತಿರುಳು ಕೂಡಾ ಕೊಳೆಯಲು ತೊಡಗುತ್ತದೆ.

ಕಲ್ಲಂಗಡಿ
ಬೇಸಿಗೆಯಲ್ಲಿ ಜನರು ಅತಿ ಹೆಚ್ಚಾಗಿ ಇಷ್ಟಪಡುವ ಫಲವಾದ ಕಲ್ಲಂಗಡಿಯನ್ನೂ ಫ್ರಿಜ್ಜಿನಲ್ಲಿ ಇರಿಸಬಾರದು. ಆದರೆ, ಸಾಮಾನ್ಯವಾಗಿ ಕಲ್ಲಗಂಡಿ ದೊಡ್ಡ ಗಾತ್ರದಲ್ಲಿದ್ದು ಇದನ್ನು ಕತ್ತರಿಸಿದಾಗ ದೊರಕುವ ಆಗಾಧ ಪ್ರಮಾಣವನ್ನು ಫ್ರಿಜ್ಜಿನಲ್ಲಿ ಸಂಗ್ರಹಿಸದೇ ಬೇರೆ ಮಾರ್ಗವಿಲ್ಲ. ಆದರೆ, ನಿಸರ್ಗಕ್ಕೆ ನಿಮ್ಮ ಈ ಅಗತ್ಯತೆಯ ಅರಿವಿಲ್ಲ. ಸೇಬನ್ನು ಕತ್ತರಿಸಿ ಕೊಂಚ ಹೊತ್ತು ಇರಿಸಿದಾಗ ಗಾಳಿಗೆ ತೆರೆದ ಭಾಗ ಕಪ್ಪಗಾಗುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿಯೂ ಹೀಗೇ, ಗಾಳಿಗೆ ಒಡ್ಡಿದ ಭಾಗದ ಆಂಟಿ ಆಕ್ಸಿಡೆಂಟುಗಳು ರಾಸಾಯನಿಕ ಕ್ರಿಯೆಗೆ ಒಳಪಟ್ಟು ಶೀಘ್ರವೇ ಹುಳಿಯಾಗುತ್ತದೆ.

ಸೇಬು
ಸೇಬು ಹಣ್ಣುಗಳು 90% ತೇವಾಂಶವನ್ನು ಹೊಂದಿರುವ ಪರಿಸರದಲ್ಲಿ ಹೆಚ್ಚು ಹೊತ್ತು ಕೆಡದೇ ತಾಜಾತನವನ್ನುಉಳಿಸಿಕೊಳ್ಳುತ್ತವೆ. ಆದರೆ ನಮ್ಮ ರೆಫ್ರಿಜರೇಟರ್ ನೈಸರ್ಗಿಕ ಡಿಹೈಡ್ರೇಟರ್ ಅಥವಾ ತೇವಾಂಶ ಇರದ ಸ್ಥಳವಾಗಿದೆ. ಹಾಗಾಗಿ, ಫ್ರಿಜ್ಜಿನಲ್ಲಿಟ್ಟ ಸೇಬು ತೇವಾಂಶದ ಕೊರತೆಗೆ ಒಡ್ಡಿಕೊಳ್ಳುತ್ತವೆ. ಈ ಸ್ಥಿತಿಯಲ್ಲಿ ಸೇಬಿನಲ್ಲಿರುವ ಇಥೈಲೀನ್ ಹಾಗೂ ಇತರ ಕಿಣ್ವಗಳು ತಿರುಳನ್ನು ಅತಿ ಶೀಘ್ರವಾಗಿ ಹಣ್ಣಾಗಿಸುತ್ತವೆ ಹಾಗೂ ಕೊಳೆಯಲು ಪ್ರಾರಂಭಿಸುತ್ತದೆ.

ಮಾವಿನ ಹಣ್ಣು
ಮಾವಿನ ಹಣ್ಣನ್ನು ಫ್ರಿಜ್ಜಿನಲ್ಲಿ ಇರಿಸಿದರೆ ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳ ಪ್ರಮಾಣ ತಗ್ಗತೊಡಗುತ್ತದೆ. ಹಾಗಾಗಿ ಮಾವಿನ ಹಣ್ಣಿನ ಪೌಷ್ಟಿಕ ಮೌಲ್ಯಗಳು ಕಡಿಮೆಯಾಗುತ್ತವೆ. ಈ ಹಣ್ಣುಗಳನ್ನು ಫ್ರಿಜ್ಜಿನಲ್ಲಿರಿಸಿದರೆ ಮಾವಿನ ಹಣ್ಣು ವಿಷಕಾರಿ ಯಾಗ ಬಹುದು. ಬದಲಿಗೆ ಇನ್ನೂ ಕಾಯಿಯಾಗಿರುವ ಮಾವು ಗಳನ್ನು ತಂದು ಬೆಚ್ಚಗಿರುವ ಮತ್ತು ನೆರಳಿನ ಸ್ಥಳದಲ್ಲಿ ಇರಿಸಿ ಒಂದೆರಡು ದಿನಗಳ ಬಳಿಕ ಸ್ವಾಭಾವಿಕವಾಗಿ ಹಣ್ಣಾಗುವಂತೆ ಮಾಡಿ ಸೇವಿಸಿ.

ಲಿಚ್ಚಿ
ಬೇಸಿಗೆಯಲ್ಲಿ ಸೇವಿಸಲು ರುಚಿಕರವಾದ ಚಿಕ್ಕ ಗೋಲಿಗ ಳಂತಿರುವ ಲಿಚ್ಚಿ ಹಣ್ಣುಗಳನ್ನು ಎಂದಿಗೂ ಫ್ರಿಜ್ಜಿನಲ್ಲಿ ಇರಿಸ ಬಾರದು. ಏಕೆಂದರೆ, ತಂಪಾದ ತಾಪಮಾನದಲ್ಲಿ ಇದರ ತಿರುಳು ಕೊಳೆಯಲು ಆರಂಭಿಸುತ್ತದೆ. ಆದರೆ, ಸಿಪ್ಪೆ ಮಾತ್ರ ಹಾಳಾಗದೇ ಹಾಗೇ ಉಳಿದಿರುತ್ತದೆ. ಫ್ರಿಜ್ಜಿ ನಿಂದ ತೆಗೆದು ನೋಡಿದ ಲಿಚ್ಚಿಯ ಸಿಪ್ಪೆ ಚೆನ್ನಾಗಿರು ವಂತೆಯೇ ಕಂಡುಬಂದರೂ ಒಳಗಿನ ತಿರುಳು ಕೊಳೆತಿರುತ್ತದೆ.
