Connect with us

FILM

ಯಾವತ್ತೂ ನಿನ್ನ ಕ್ಷಮಿಸೊಲ್ಲ ಡ್ರೋನ್…ನಮೃತಾ ಕಣ್ಣೀರು

Published

on

ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ ಈಗ ಎಂಟನೇ ವಾರದ ಟಾಸ್ಕ್‌ಗಳು ಹಾಗೂ ಕ್ಯಾಪ್ಟೆನ್ಸಿ ಆಯ್ಕೆಯ ಪ್ರಕ್ರಿಯೆ, ನಾಮಿನೇಷನ್ ಪ್ರಕ್ರಿಯೆ ಎಲ್ಲವೂ ಸಹ ಶುರುವಾಗಿದೆ.  ನಾನಿಮಿನೇಷನ್ ಮುಗಿದಿದ್ದು, ಹೊಸದಾಗಿ  ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಯಾರನ್ನು ಹೊರಗಡೆ ಇಡಬೇಕು ಎಂದು ಪ್ರತಾಪ್‌ರನ್ನು ಬಿಗ್ ಬಾಸ್ ಕೇಳಿದ್ದಾರೆ. ಇದಕ್ಕೆ ಪ್ರತಾಪ್, ನಮ್ರತಾ ಹೆಸರನ್ನು ತೆಗೆದುಕೊಂಡಿದ್ದಾರೆ. ಆದರೆ, ಪ್ರತಾಪ್‌ ತಮ್ಮ ಹೆಸರನ್ನು ಹೇಳೋದಿಲ್ಲ ಎಂದು ನಮ್ರತಾ ನಿರೀಕ್ಷೆ ಮಾಡಿದ್ದರು. ಅನಿರೀಕ್ಷಿತವಾಗಿ ಪ್ರತಾಪ್, ನಮ್ರತಾ ಹೆಸರು ಹೇಳಿದ್ದು ಅವರಿಗೆ ಬೇಸರವನ್ನು ತರಿಸಿದೆ. ಪ್ರತಾಪ್ ತಗೆದುಕೊಂಡ ನಿರ್ಧಾರ ನಮ್ರತಾ ಕಣ್ಣಲ್ಲಿ ನೀರು ತರಿಸಿದೆ.

ಬಿಗ್ ಬಾಸ್ ಮನೆಯಲ್ಲಿ ಈಗ ನಮ್ರತಾ ಕಣ್ಣೀರನ್ನು ಹಾಕುತ್ತಾ ಇದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್ ಆಯ್ಕೆಯ ವೇಳೆ ನಾನು ಪ್ರತಾಪ್ ತಂಡವನ್ನು ಸೇರಿಕೊಳ್ಳುತ್ತೇನೆ ಎಂದು ನಗುನಗುತ್ತಲೇ ನಮ್ರತಾ ಹೇಳಿದ್ದರು. ಈ ವೇಳೆಯಾದರೂ ಪ್ರತಾಪ್ ಹೇಳಬಹುದಾಗಿತ್ತು. ನನ್ನ ತಂಡವನ್ನು ಸೇರಿಸಿಕೊಳ್ಳಲು ನನಗೆ ಇಷ್ಟವಿಲ್ಲವೆಂದು. ಆಗ ಏನು ಮಾತನಾಡದ ಪ್ರತಾಪ್ ಬಿಗ್ ಬಾಸ್ ನೀವು ಯಾರನ್ನು ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಡೆ ಇಡಲು ಇಚ್ಚಿಸುತ್ತೀರಾ ಎಂದು ಕೇಳಿದಾಗ. ನಾನು ನಮ್ರತಾ ಅವರನ್ನು ಹೊರಗಡೆ ಇಡಲು ಇಚ್ಚಿಸುತ್ತೇನೆ ಎಂದು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಆದರೆ, ಇದು ನಮ್ರತಾಗೆ ಇಷ್ಟವಾಗಲಿಲ್ಲ.

ಇದಕ್ಕೂ ಮೊದಲು ಪ್ರತಾಪ್, ನಮ್ರತಾರಲ್ಲಿ ನಿಮ್ಮೊಳಗೆ ಬೇರೆಯೊಬ್ಬ ನಮ್ರತಾ ಇದ್ದಾರೆ. ಅವರ ಶಕ್ತಿಯನ್ನು ಹೊರಗೆ ತಂದೆ ತರುತ್ತೇನೆ ಎಂಬ ಮಾತನ್ನು ಆಡಿದ್ದರು. ಇದೇ ಮಾತುಗಳು ನಮ್ರತಾಗೆ ನೋವನ್ನು ಮಾಡಿದೆ. ಪ್ರತಾಪ್ ನನ್ನ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ ಎಂಬ ಮಾತನ್ನು ನಮ್ರತಾ ಆಡಿದ್ದಾರೆ.

ಇನ್ಯಾಚತ್ತೂ ನಿನ್ನ ಕ್ಷಮಿಸೊಲ್ಲ ಡ್ರೋನ್ ಎಂದು ಗಳ ಗಳನೇ ಅತ್ತಿದ್ದಾರೆ.

FILM

ತೆರೆಗೆ ಬರಲು ಸಿದ್ಧವಾಯ್ತು ‘ಪಿಲಿಪಂಜ’; ಇಂದು ನಡೆಯಲಿದೆ ಪ್ರಥಮ ಪ್ರೀಮಿಯರ್ ಶೋ!

Published

on

ಮಂಗಳೂರು : ಬಹುನಿರೀಕ್ಷಿತ ‘ಪಿಲಿ ಪಂಜ’ ತುಳು ಚಲನಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರದ ಪ್ರಥಮ ಪ್ರೀಮಿಯರ್ ಶೋ ಇಂದು(ಡಿ.6) ಸಂಜೆ 7 ಗಂಟೆಗೆ ಪುತ್ತೂರಿನ ಭಾರತ್ ಸಿನೆಮಾದಲ್ಲಿ ನಡೆಯಲಿದೆ.

ಪ್ರತೀಕ್ ಯು. ಪೂಜಾರಿ ಕಾವೂರು ನಿರ್ಮಾಣದ ಪಿಲಿಪಂಜ ಚಿತ್ರಕ್ಕೆ ಭರತ್ ಶೆಟ್ಟಿ ನಿರ್ದೇಶನವಿದೆ. ರಮೇಶ್‌ ರೈ ಕುಕ್ಕುವಳ್ಳಿ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಎಸ್.ಬಿ. ಗ್ರೂಪ್‌ ಪ್ರಸ್ತುತ ಪಡಿಸುವ ಶಿಯಾನಾ ಪ್ರೊಡಕ್ಷನ್ ಹೌಸ್ ನಿರ್ಮಾಣದ ಈ ಚಿತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ಭೋಜರಾಜ ವಾಮಂಜೂರು, ಸುಂದರ್ ರೈ ಮಂದಾರ, ರವಿ ರಾಮಕುಂಜ, ಶಿವ ಪ್ರಕಾಶ್ ಪೂಂಜಾ ಹರೇಕಳ,  ಪ್ರತೀಕ್ ಯು ಪೂಜಾರಿ, ಪ್ರವೀಣ್ ಕೊಡಕ್ಕಲ್, ರಂಜನ್ ಬೋಳೂರು, ಪ್ರಕಾಶ್ ಶೆಟ್ಟಿ ಧರ್ಮನಗರ, ರಕ್ಷಣ್ ಮಾಡೂರು, ಭಾಸ್ಕರ ಮಣಿಪಾಲ, ರೂಪಾ ವರ್ಕಾಡಿ, ಜಯಶೀಲ ಮೊದಲಾದವರು ಪಾತ್ರವಾಗಿದ್ದಾರೆ.

ಇದನ್ನೂ ಓದಿ : ಆ ಐಷಾರಾಮಿ ಮನೆಯಲ್ಲಿ ನಾಲ್ಕು ಸಾ*ವು…ಒಂದೂವರೆ ವರ್ಷದಲ್ಲಿ ಸರಣಿ ಆ*ತ್ಮಹ*ತ್ಯೆ!

ಉದಯ್ ಬಳ್ಳಾಲ್ ಕ್ಯಾಮರಾ ವರ್ಕ್, ಎಲ್ ವಿ ಯಸ್ ಸಂಗೀತ, ಶ್ರೀನಾಥ್ ಪವಾರ್ ಸಂಕಲನ ಚಿತ್ರಕ್ಕಿದೆ. ಅಂದಹಾಗೆ,  ಡಿ. 12 ರಂದು ಚಿತ್ರ ತೆರೆಗಪ್ಪಳಿಸಲಿದೆ.

Continue Reading

FILM

ರಾಜ್ಯದಾದ್ಯಂತ ಡೆವಿಲ್ ಚಿತ್ರದ ಟ್ರೇಲರ್‌ ಔಟ್‌; ಗಿಲ್ಲಿ ಖಡಕ್‌ ಡೈಲಾಗ್‌

Published

on

ಮಿಲನ ಪ್ರಕಾಶ್‌ ನಿರ್ದೇಶನದ, ದರ್ಶನ್‌ ಅಭಿನಯದ ಡೆವಿಲ್‌ ಸಿನಿಮಾದ ಟ್ರೇಲರ್‌ ಇಂದು (ಡಿ.5)ಬೆಳಿಗ್ಗೆ 10.05 ಕ್ಕೆ ರಿಲೀಸ್‌ ಆಗಿದ್ದು, ಭಾರೀ ಮೆಚ್ಚುಗೆಯನ್ನು ಪಡೆದಿದೆ. ಈ ಟ್ರೇಲರ್‌ನಲ್ಲಿ ದರ್ಶನ್‌ ಮಾಸ್‌ ಲುಕ್‌ನಲ್ಲಿ ಕಾಣಿಸಿ, ಎಲ್ಲರ ಗಮನ ಸೆಳೆದಿದ್ದಾರೆ.

ಬಿಗ್‌ಬಾಸ್‌ನಲ್ಲಿರೋ ಗಿಲ್ಲಿ ನಟ ಕೂಡ ಡೆವಿಲ್‌ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಟ್ರೇಲರ್‌ನಲ್ಲಿ ಗಿಲ್ಲಿ ಅವರ ಪಾತ್ರದ ಝಲಕ್‌ ತೋರಿಸಲಾಗಿದೆ. ಟ್ರೇಲರ್‌ನಲ್ಲಿ ತೋರಿಸಲಾದ ಒಂದು ಡೈಲಾಗ್‌ಗೆ ಮತ್ತು ಅವರ ಗೆಟಪ್ ನೋಡಿ ಫ್ಯಾನ್ಸ್‌ ಫುಲ್‌ ಖುಷಿಪಟ್ಟಿದ್ದಾರೆ.


ಖಡಕ್‌ ಲುಕ್‌ನಲ್ಲಿ ಪೊಲೀಸ್‌ ಠಾಣೆಗೆ ಬಂದು ಪೊಲೀಸ್‌ ಅಧಿಕಾರಿ ಮುಂದೆ ಕಾಲ್ಮೇಲೆ ಕಾಲಾಕಿ ಕೂತು, ‘ಎಕ್ಸ್‌ಕ್ಯೂಸ್‌ ಮೀ ಪಿಸಿ, ಎಸಿ ಹಾಕಮ್ಮ. ಲಾಟ್ಸ್‌ ಆಫ್‌ ಸೆಖೆ’ ಎಂದು ಡೈಲಾಗ್‌ ಹೊಡೆಯುತ್ತಾರೆ. ಸಿನಿಮಾದಲ್ಲಿ ಅವರ ಪಾತ್ರ ಎಷ್ಟು ಹೊತ್ತು ಇರುತ್ತದೆ ಎಂಬ ಕುತೂಹಲ ಇದೆ.

 

ಡೆವಿಲ್‌ ಸಿನಿಮಾದಲ್ಲಿ ದರ್ಶನ್‌ಗೆ ಜತೆಯಾಗಿ ರಚನಾ ರೈ ಅಭಿನಯಿಸಿದ್ದಾರೆ. ಮಹೇಶ್‌ ಮಂಜ್ರೇಕರ್‌, ಅಚ್ಯುತ್‌ ಕುಮಾರ್‌, ಶರ್ಮಿಳಾ ಮಾಂಡ್ರೆ ಮೊದಲಾದವರಿದ್ದಾರೆ. ಶೋಭರಾಜ್‌ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಡಿದ್ದಾರೆ. ಬಿಗ್‌ಬಾಸ್‌ ಖ್ಯಾತಿಯ ವಿನಯ್‌ ಗೌಡ ಕೂಡ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

 

ಇದನ್ನೂ ಓದಿ: ಡೆವಿಲ್ ಸಿನಿಮಾ ಸೆಟ್‌ನಲ್ಲಿ ಮರೆಯಲಾಗದ ಕ್ಷಣಗಳು ಇವು : ಚಂದು ಗೌಡ ಪೋಸ್ಟ್

 

ಡಿಸೆಂಬರ್ 11ರಂದು ಡೆವಿಲ್‌ ಸಿನಿಮಾ ರಾಜ್ಯಾದಾದ್ಯಂತ ಬಿಡುಗಡೆ ಆಗಲಿದೆ. ದರ್ಶನ್‌ ಜೈಲಿನಲ್ಲಿ ಇರುವಾಗಲೇ ಡೆವಿಲ್‌ ಸಿನಿಮಾ ತೆರೆಗೆ ಬರುತ್ತಿದೆ. ಎಲ್ಲರೂ ಪ್ಯಾನ್‌ ಇಂಡಿಯಾ ಹಿಂದೆ ಓಡುತ್ತಿರುವಾಗ ಡೆವಿಲ್‌ ಕನ್ನಡದಲ್ಲಿ ಮಾತ್ರ ರಿಲೀಸ್‌ ಆಗುತ್ತಿದೆ.

Continue Reading

FILM

ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್‌ ವತಿಯಿಂದ ಬಾರೆಬೈಲ್‌ನಲ್ಲಿ ಹರಕೆ ನೇಮೋತ್ಸವ

Published

on

ಮಂಗಳೂರು: ಕಾಂತಾರ-1 ಸಿನಿಮಾದ ಯಶಸ್ಸಿನ ಹಿನ್ನೆಲೆಯಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಚಿತ್ರತಂಡದಿಂದ ಗುರುವಾರ ರಾತ್ರಿ ಹರಕೆಯ ಕೋಲ ಸಮರ್ಪಿಸಲಾಯಿತು.

ಮಂಗಳೂರಿನ ಬಾರೆಬೈಲ್ ವರಾಹ ಪಂಜುರ್ಲಿ, ಜಾರಂದಾಯ ಮತ್ತು ಬಂಟ ದೈವಸ್ಥಾನದಲ್ಲಿ ಹರಕೆ ನೇಮ ನೆರವೇರಿತು. ನಟ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್‌ ವತಿಯಿಂದ ಹರಕೆ ನೇಮೋತ್ಸವ ಆಯೋಜನೆಗೊಂಡಿತ್ತು.

 

ಪತ್ನಿ ಮಕ್ಕಳ ಜತೆಗೆ ರಿಷಬ್ ಶೆಟ್ಟಿ ಭಾಗವಹಿಸಿದರು. ಚಿತ್ರದ ನಿರ್ಮಾಪಕ ವಿಜಯ್ ಕಿರಂಗದೂರು, ನಿರ್ದೇಶಕ ಸಂತೋಷ್ ಆನಂದ ರಾಮ್ ಸೇರಿದಂತೆ ಚಿತ್ರರಂಗದ ಹಲವರು ಭಾಗವಹಿಸಿದ್ದರು.

 

ಕಳೆದ ಏಪ್ರಿಲ್ ನಲ್ಲಿ ಇದೇ ದೈವಸ್ಥಾನದ ನೇಮೋತ್ಸವದಲ್ಲಿ ರಿಷಬ್ ಶೆಟ್ಟಿ ಹಾಗೂ ಕುಟುಂಬ ಭಾಗವಹಿಸಿತ್ತು. ಗುರುವಾರ ಅದೇ ದೈವಸ್ಥಾನದಲ್ಲಿ ಹರಕೆ ನೇಮೋತ್ಸವ ಸಲ್ಲಿಸಲಾಯಿತು.

Continue Reading
Advertisement

Trending

Copyright © 2025 Namma Kudla News

You cannot copy content of this page