Connect with us

FILM

ನಟ ಸೋನು ಸೂದ್ 20 ಕೋಟಿಗೂ ಅಧಿಕ ತೆರಿಗೆ ವಂಚಿಸಿದ್ದಾರೆ: ಐಟಿ ಇಲಾಖೆ

Published

on

ಮುಂಬೈ: ಬಾಲಿವುಡ್​ನ ಖ್ಯಾತ ನಟ ಸೋನು ಸೋದ್ 20 ಕೋಟಿಗೂ ಅಧಿಕ ಮೊತ್ತದ ತೆರಿಗೆಯನ್ನು ವಂಚಿಸಿದ್ಧಾರೆ ಎಂದು ಐಟಿ ಇಲಾಖೆ ತಿಳಿಸಿದೆ.


ಸತತ ಮೂರು ದಿನಗಳ ಕಾಲ ಸೋನು ಅವರ ಮನೆ, ಕಚೇರಿಗಳ ಮೇಲೆ ಸಮೀಕ್ಷೆ ನಡೆಸಿದ ಐಟಿ ಅಧಿಕಾರಿಗಳು,

ನಟನಿಗೆ ಸಂಬಂಧಿಸಿದ ನಾನ್ ಪ್ರಾಫಿಟ್ ಸಂಸ್ಥೆಯು, ₹ 2.1 ಕೋಟಿಗಳನ್ನು ವಿದೇಶಿ ಮೂಲಗಳಿಂದ ಸಂಗ್ರಹಿಸಿದೆ ಎಂದಿದೆ. ಇದು ಸರ್ಕಾರದ ವಿದೇಶಿ ಹಣ ಸ್ವೀಕಾರದ ಕಾನೂನಿಗೆ ವಿರುದ್ಧವಾಗಿದೆ ಎಂದು ಇಲಾಖೆ ತಿಳಿಸಿದೆ.
ಸೋನು ಅವರ ಮನೆಯ ಮೇಲಿನ ಸಮೀಕ್ಷೆಯ ವೇಳೆ ಅವರು ತಮ್ಮ ಸಹವರ್ತಿಗಳೊಂದಿಗೆ ಕೂಡಿ ತೆರಿಗೆ ವಂಚನೆ ನಡೆಸಿದ್ದರ ಕುರಿತು ಸಾಕ್ಷ್ಯಗಳು ಪತ್ತೆಯಾಗಿವೆ. ಇದರಲ್ಲಿ ಮುಖ್ಯವಾಗಿ ಲೆಕ್ಕವಿಲ್ಲದ ಆದಾಯವನ್ನು ನಕಲಿ ಸಂಸ್ಥೆಗಳ ಮೂಲಕ ಸಾಗಿಸಲಾಗಿದೆ ಎಂದು ಸಿಬಿಡಿಟಿ ಮಾಹಿತಿ ನೀಡಿದೆ.

ಐಟಿ ಇಲಾಖೆಯು ಸೋನು ಸೂದ್ ಹಾಗೂ ಲಕ್ನೋ ಮೂಲದ ಸಂಸ್ಥೆಯೊಂದರ ಮೇಲೆ ಸಮೀಕ್ಷೆ ನಡೆಸಿತ್ತು.ಇದಕ್ಕೆ ಸಂಬಂಧಪಟ್ಟಂತೆ, ಮುಂಬೈ, ಲಕ್ನೋ, ಕಾನ್ಪುರ, ಜೈಪುರ, ದೆಹಲಿ, ಗುರುಗ್ರಾಮಗಳಲ್ಲಿ ಶೋಧ ನಡೆಸಲಾಗಿತ್ತು

ಎಂದು ಕೇಂದ್ರ ಆದಾಯ ತೆರಿಗೆ ಮಂಡಳಿ ತಿಳಿಸಿದೆ.
ಇತ್ತೀಚೆಗಷ್ಟೇ ದೆಹಲಿಯ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದ ಸೋನು, ವಿರುದ್ಧ ಐಟಿ ಅಧಿಕಾರಿಗಳು ದಾಳಿ ನಡೆಸಿರುವುದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

ಈ ಕುರಿತು ಎಎಪಿ ಹಾಗೂ ಶಿವಸೇನಾ ಟೀಕೆ ಮಾಡಿದ್ದು, ಬಿಜೆಪಿ ಇದರಲ್ಲಿ ರಾಜಕೀಯ ಕೈವಾಡವಿಲ್ಲ ಎಂದಿದೆ.

FILM

ಹೊಸ ಧಾರಾವಾಹಿಯಲ್ಲಿ ರಾಮಾಚಾರಿಯ ‘ಚಾರು’

Published

on

ಮಂಗಳೂರು/ಬೆಂಗಳೂರು : ರಾಮಾಚಾರಿ ಅದೆಷ್ಟೋ ಕಿರುತೆರೆ ಪ್ರಿಯರ ಮನಗೆದ್ದ ಧಾರಾವಾಹಿ. ಕಥೆ, ಪಾತ್ರಗಳು ಎಲ್ಲವೂ ವೀಕ್ಷಕರ ಮನಗೆದ್ದಿತ್ತು. ಧಾರಾವಾಹಿಯಲ್ಲಿ ಅಭಿನಯಿಸಿದ್ದ  ಕಲಾವಿದರು ಕೂಡ ಜನರಿಗೆ ಇಷ್ಟವಾಗಿದ್ದರು. ನಾಯಕಿಯಾಗಿ, ಚಾರು ಆಗಿ ಮಿಂಚಿದ್ದ ಮೌನ ಗುಡ್ಡೆಮನೆ ತನ್ನ ಸೌಂದರ್ಯ,  ನಟನೆಯ ಮೂಲಕ ಜನರ ಹೃದಯ ಕದ್ದಿದ್ದರು. ರಾಮಾಚಾರಿ  ಮುಕ್ತಾಯಗೊಂಡಿದ್ದು, ಇದೀಗ ಹೊಸ ಧಾರಾವಾಹಿಯಲ್ಲಿ ಮೌನ ಕಾಣಿಸಿಕೊಳ್ಳುತ್ತಿದ್ದಾರೆ.

ರುಕ್ಕು ಆದ ‘ಚಾರು’ :

ಚಾರು ಆಗಿ ಗಮನ ಸೆಳೆದಿದ್ದ ಮೌನ, ಇದೀಗ ಹೊಸ ಧಾರಾವಾಹಿಯ ಮೂಲಕ ಲಗ್ಗೆ ಇಡುತ್ತಿದ್ದಾರೆ. ಝೀ ಕನ್ನಡದಲ್ಲಿ ಪ್ರಸಾರವಾಗಲಿರುವ ಹೊಸ ಧಾರಾವಾಹಿ ‘ಕೃಷ್ಣ ರುಕ್ಕು’ವಿನಲ್ಲಿ ನಟಿಸುತ್ತಿದ್ದಾರೆ. ರುಕ್ಕುವಾಗಿ ಜನರ ಮುಂದೆ ಬರಲಿದ್ದಾರೆ.

ಈಗಾಗಲೇ ಧಾರಾವಾಹಿಯ ಪ್ರೋಮೋ ಬಿಡುಗಡೆಯಾಗಿದ್ದು, ಮೌನ ಸಿಂಪಲ್ ಲುಕ್‌ನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಚೂರಾದ ಕನ್ನಡೀಲೂ ನಗು ಕಾಣೋಳು ರುಕ್ಕು ಎಂಬುದಾಗಿ ಪಾತ್ರವನ್ನು ಪರಿಚಯಿಸಲಾಗಿದೆ.

ಇದನ್ನೂ ಓದಿ : ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದ ‘ರಾಧಾ ರಮಣ’ ನಟಿ

ಇನ್ನು ನಾಯಕನಾಗಿ ಒಲವಿನ ನಿಲ್ದಾಣ ಧಾರಾವಾಹಿ ಖ್ಯಾತಿಯ ಅಕ್ಷಯ್ ನಾಯಕ್ ನಟಿಸುತ್ತಿದ್ದಾರೆ. ಕಾಡೋ ನೆನಪಲ್ಲಿ ಬದುಕನ್ನೇ ಚೂರಾಗಿಸಿಕೊಂಡಿರೋನು ಕೃಷ್ಣ ಎಂಬುದಾಗಿ ತೋರಿಸಲಾಗಿದೆ. ಸದ್ಯ ಬಿಡುಗಡೆಯಾಗಿರುವ ಪ್ರೋಮೋಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಕಿರುತೆರೆಯಲ್ಲಿ ಈ ಜೋಡಿಯನ್ನು ನೋಡಲು ಕಾಯುತ್ತಿರೋದಾಗಿ ಕಮೆಂಟ್ಸ್ ಮಾಡುತ್ತಿದ್ದಾರೆ.

 

Continue Reading

FILM

ಹಸೆಮಣೆ ಏರಿದ ‘ನಂದಗೋಕುಲ’ ನಟಿ

Published

on

ಬೆಳ್ತಂಗಡಿ : ನಂದಗೋಕುಲ ಸದ್ಯ ಜನರ ಮೆಚ್ಚುಗೆ ಗಳಿಸುತ್ತಿರುವ ಧಾರಾವಾಹಿ. ಕುಟುಂಬವೊಂದರ ಕಥೆ, ವ್ಯಥೆಯನ್ನೊಳಗೊಂಡ ಸೀರಿಯಲ್. ಅಪ್ಪ, ಅಮ್ಮ, ಮಕ್ಕಳ ಕುರಿತು, ಭಾವನಾತ್ಮಕ ಸಂಬಂಧಗಳ ಕುರಿತು ಚಿತ್ರಿಸಲಾಗುತ್ತಿದೆ. ಈ ಧಾರಾವಾಹಿಯ ಕಥಾ ಹಂದರ ಜನಮೆಚ್ಚುಗೆ ಪಡೆಯುತ್ತಿದ್ದು, ಜೊತೆಗೆ ಕಲಾವಿದರೂ ವೀಕ್ಷಕರ ಮನ ಗೆದ್ದಿದ್ದಾರೆ. ಅತ್ತ ನಂದಗೋಕುಲದಲ್ಲಿ ಮದುವೆ ಸಂಭ್ರಮವಿದ್ರೆ, ಇತ್ತ ನಂದಗೋಕುಲದ ನಟಿಯೊಬ್ಬರು ನಿಜ ಜೀವನದಲ್ಲಿ ಸಪ್ತಪದಿ ತುಳಿದಿದ್ದಾರೆ.

ನಂದಗೋಕುಲದಲ್ಲಿ ನಟಿಸುತ್ತಿರುವ ಕೃಷ್ಣಪ್ರಿಯಾ ಭಟ್ ವೈವಾಹಿಕ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ. ನಂದಗೋಕುಲದಲ್ಲಿ ರಕ್ಷಾ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ. ನಂದನ ಕೊನೆಯ ಮಗಳಾಗಿ, ಮಾಧವ, ಕೇಶವ, ವಲ್ಲಭರ ಮುದ್ದಿನ ತಂಗಿಯಾಗಿ ಅಭಿನಯಿಸುತ್ತಿದ್ದಾರೆ. ಇದೀಗ ಅಮೋಘ ಕುಂಟಿನಿ ಜೊತೆ ಹಸೆಮಣೆ ಏರಿದ್ದಾರೆ.

ಕಳೆದ ವರ್ಷ ಆಗಸ್ಟ್ 24 ರಂದು ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಂದಹಾಗೆ ಕೃಷ್ಣಪ್ರಿಯಾ ವರಿಸಿರುವ ಅಮೋಘ್ ಕುಂತಿಣಿ ಯಾವುದೇ ಧಾರಾವಾಹಿ, ಸಿನಿಮಾ ನಂಟಿರುವವರಲ್ಲ, ಅವರು ಇಂಜಿನಿಯರಿಂಗ್ ಪದವೀಧರ. ಸದ್ಯ  ಟಾಟಾ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಜೊತೆಗೆ ಯಕ್ಷಗಾನ ಕಲಾವಿದ.

ಇದನ್ನೂ ಓದಿ : ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದ ‘ರಾಧಾ ರಮಣ’ ನಟಿ

ಬೆಳ್ತಂಗಡಿಯ ನಾರಾವಿಯಲ್ಲಿ ಮದುವೆ ನಡೆದಿದೆ. ಧರ್ಮಸ್ಥಳ ಸಮೀಪದ ಕನ್ಯಾಡಿ ಶ್ರೀರಾಮ ಮಂದಿರದಲ್ಲಿ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

Continue Reading

BIG BOSS

ಮತ್ತೆ ವಿವಾದಕ್ಕೆ ಗುರಿಯಾದ ಬಿಗ್ ಬಾಸ್ ರಜತ್!

Published

on

ಮಂಗಳೂರು/ಮೈಸೂರು : ಬಿಗ್ ಬಾಸ್ ಮನೆಯೊಳಗೆ ಸಕತ್ ಸದ್ದು ಮಾಡುತ್ತಿದ್ದ ರಜತ್ ಕಿಶನ್, ದೊಡ್ಮನೆಯ ಹೊರಗೂ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಆಗಾಗ ಒಂದಿಲ್ಲೊಂದು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಇದೀಗ ಮತ್ತೊಂದು ವಿವಾದಕ್ಕೆ ಕಾರಣರಾಗಿದ್ದಾರೆ.

ಏನು ವಿವಾದ?

ಮೈಸೂರಿನ ಪ್ರಮುಖ ಪಾರಂಪರಿಕ ಕಟ್ಟಡವಾದ ಹಳೇ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ರಜತ್ ಫೋಟೋಶೂಟ್ ಮಾಡಿದ್ದಾರೆ. ಕಾರಿನಿಂದ ಕೆಳಗಿಳಿದು ಕೈನಲ್ಲಿ ಸಿಗರೇಟ್ ಹಿಡಿದು ಹೊಗೆ ಬಿಡುತ್ತಾ, ವಿಲನ್‌ನಂತೆ ಪೋಸ್ ಕೊಟ್ಟಿದ್ದಾರೆ. ಈ ವೀಡಿಯೋ, ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧವಿದ್ದರೂ ರೀಲ್ಸ್‌ಗಾಗಿ ರಜತ್ ಈ ರೀತಿ ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪಾರಂಪರಿಕ ಕಟ್ಟಡದ ಹಿರಿಮೆಗೆ ರಜತ್ ಧಕ್ಕೆ ತಂದಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಮಚ್ಚು ಹಿಡಿಯಲು ಹೋಗಿ ಜೈಲಿಗೆ ಹೋಗಿ ಬಂದಿದ್ದ ರಜತ್:

ರಜತ್ ಈ ಹಿಂದೆಯೂ  ವಿವಾದಕ್ಕೊಳಗಾಗಿದ್ದರು. ಲಾಂ*ಗ್ ಹಿಡಿದು ಫೋಟೋ ಶೂಟ್ ಮಾಡಿಸಿಕೊಂಡಿದ್ದಕ್ಕಾಗಿ ಪೊಲೀಸರು ಬಂಧಿಸಿದ್ದರು. ಬಳಿಕ ಬೇಲ್ ಮೇಲೆ ರಜತ್ ಹೊರಬಂದಿದ್ದರು.

ಇದನ್ನೂ ಓದಿ : ಕಂಡೀಷನ್‌ಗೆ ಒಪ್ಪದ ಹುಡುಗರು…ಮದುವೆಯಾಗದ ಚಿಂತೆಗೆ ಪ್ರಾ*ಣ ಬಿ*ಟ್ಟ ಟೆಕ್ಕಿ

ಈಗ ಮತ್ತೆ ಅಂತಹುದೇ ಪೋಸ್ಟ್ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜೈಲಿಗೆ ಹೋಗಿ ಬಂದ್ರೂ ಬುದ್ಧಿ ಕಲ್ತಿಲ್ವಾ ರಜತ್ ಎಂದು ಟ್ರೋಲ್ ಮಾಡಲಾಗುತ್ತಿದೆ.

 

 

Continue Reading
Advertisement

Trending

Copyright © 2025 Namma Kudla News

You cannot copy content of this page