Connect with us

FILM

‘ನ್ಯಾಷನಲ್​ ಸಿನೆಮಾ ಡೇ’ : ಕೇವಲ 99 ರೂಗಳಲ್ಲಿ ಸಿನೆಮಾ ಟಿಕೆಟ್..!

Published

on

ಅಕ್ಟೋಬರ್ 13ರ ಶುಕ್ರವಾರದಂದು  ಮಲ್ಟಿಫ್ಲೆಕ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (MAI) ಭಾರತದಾದ್ಯಂತ ಇರುವ ಚಿತ್ರಮಂದಿರಗಳಲ್ಲಿ  99 ರೂಪಾಯಿಗೆ ಸಿನೆಮಾ ಪ್ರದರ್ಶನಕ್ಕೆ ಅವಕಾಶ ನೀಡಿದೆ. 

 

ಬೆಂಗಳೂರು : ಈ ವರ್ಷವೂ ರಾಷ್ಟ್ರೀಯ ಸಿನಿಮಾ ದಿನದಂದು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ  ಪ್ರಮುಖ ಸಿನಿಮಾ ಮಂದಿರಗಳಲ್ಲಿ ಕೇವಲ 99 ರೂಪಾಯಿಗೆ ಯಾವುದೇ ಸಿನಿಮಾವನ್ನು ನೋಡುವ ಅವಕಾಶ ಕಲ್ಪಿಸಿದೆ.


ಅಕ್ಟೋಬರ್​ 13ರಂದು ‘ನ್ಯಾಷನಲ್​ ಸಿನಿಮಾ ಡೇ’ ಆಚರಿಸಲಾಗುತ್ತದೆ. ಅದರಲ್ಲಿ ಪಿವಿಆರ್​, ಐನಾಕ್ಸ್​, ಸಿನಿಪೊಲಿಸ್, ಮಿರಾಜ್​, ಸಿಟಿಪ್ರೈಡ್​, ಏಷ್ಯನ್​, ಮೂವೀ ಟೈನ್​ ಮುಂತಾದ ಮಲ್ಟಿಪ್ಲೆಕ್ಸ್​ಗಳು ಭಾಗವಹಿಸುತ್ತಿದ್ದು, ಅಂದು ದೇಶಾದ್ಯಂತ ಎಲ್ಲ ಸಿನಿಮಾಗಳ ಟಿಕೆಟ್​ಗಳು ಕೇವಲ 99 ರೂಪಾಯಿಗೆ ಸಿಗಲಿವೆ.

ಅ. 13ರಂದು ತಿಂಡಿ ಮತ್ತು ಪಾನೀಯಗಳ ಬೆಲೆಯನ್ನೂ ಇಳಿಕೆ ಮಾಡಲಾಗುತ್ತದೆ. ಈ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಸಿನಿ ರಸಿಕರು ಸಿನೆಮಾ ಮಂದಿರಕ್ಕೆ ಬರುವ ಸಾಧ್ಯತೆ ಇದೆ.

ಸಿಂಗಲ್ ಸ್ಕ್ರೀನ್ ಮಂದಿರಗಳಲ್ಲೂ ಸಹ ಈ ಅವಕಾಶ ಸಿಗುವ ನಿರೀಕ್ಷೆಯಿದೆ.

ರಾಷ್ಟ್ರೀಯ ಸಿನಿಮಾ ದಿನದಂದು PVR INOX, CINEPOLIS, MIRAJ, CITYPRIDE, ASIAN, MUKTA AZ, MOVIE TIME, WAVE, M2K, ಮತ್ತು ಅನೇಕ DELITE ನಂತಹ ಪ್ರಸಿದ್ಧ ಚಿತ್ರಮಂದಿರಗಳನ್ನು ಒಳಗೊಂಡಂತೆ 4000 ಕ್ಕೂ ಹೆಚ್ಚು ಸಿನೆಮಾ ಮಂದಿರಗಳಲ್ಲಿ 99 ರೂಪಾಯಿಗೆ ಸಿನಿಮಾ ವೀಕ್ಷಿಸಬಹುದಾಗಿದೆ.

‘ನ್ಯಾಷನಲ್​ ಸಿನಿಮಾ ಡೇ’ ಪ್ರಯುಕ್ತ 99 ರೂಪಾಯಿಗೆ ಎಲ್ಲ ಸಿನಿಮಾಗಳ ಟಿಕೆಟ್​ ಸಿಗುವುದರಿಂದ ಅಂದು ಬಹುತೇಕ ಚಿತ್ರ ಮಂದಿರಗಳಲ್ಲಿ ಹೌಸ್​ ಫುಲ್​ ಆಗುವ ಸಾಧ್ಯತೆ ಇದೆ.

FILM

ರೆಬೆಲ್‌ ಸ್ಟಾರ್‌ ಅಂಬರೀಶ್ ಮೊಮ್ಮಗನ ಹೆಸರೇನು ಗೊತ್ತಾ?

Published

on

ಬೆಂಗಳೂರು: ಅಭಿಷೇಕ್-ಅವಿವಾಗೆ 2024ರ ನವೆಂಬರ್ 12ರಂದು ಗಂಡು ಮಗು ಜನಿಸಿತ್ತು. ಈ ಮಗುವಿಗೆ ಇಂದು ನಾಮಕರಣ ಶಾಸ್ತ್ರ ಆಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ ಒಂದರಲ್ಲಿ ಬಹಳ ಅದ್ದೂರಿಯಾಗಿ ನಾಮಕರಣ ಶಾಸ್ತ್ರ ನೆರವೇರಿದೆ.

ಇನ್ನು ರಬೆಲ್ ಅಂಬರೀಶ್ ಮೊಮ್ಮಗನಿಗೆ ರಾಣಾ ಅಮರ್ ಅಂಬರೀಶ್ ಎಂದು ನಾಮಕರಣ ಮಾಡಲಾಗಿದೆ. ಅಭೀಷೇಕ್ ಅವರು ತಮ್ಮ ಮಗುವಿಗೆ ಅಪ್ಪನ ಮೂಲ ಹೆಸರನ್ನೇ ಹಿಟ್ಟಿದ್ದಾರೆ. ಅಂಬರೀಶ್ ಅವರ ಮೂಲ ಹೆಸರು ಅಮರ್‌ನಾಥ್ ಎಂದು ಆಗಿತ್ತು. ಹೀಗಾಗಿ ಈ ಹೆಸರನ್ನೇ ಆಯ್ಕೆ ಮಾಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಅಂಬರೀಶ್‌ನ ಆಪ್ತವಲಯದವರು ಹಾಗೂ ಕುಟುಂಬಸ್ಥರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.

Continue Reading

FILM

ಎಆರ್ ರೆಹಮಾನ್ ಆರೋಗ್ಯದಲ್ಲಿ ಏರು-ಪೇರು; ಆಸ್ಪತ್ರೆಗೆ ದಾಖಲು

Published

on

ಮಂಗಳೂರು/ಚೆನ್ನೈ: ಖ್ಯಾತ ಸಂಗೀತ ಕ್ಷೇತ್ರದ ದಿಗ್ಗಜ ಎಆರ್ ರೆಹಮಾನ್ ಅವರ ಆರೋಗ್ಯದಲ್ಲಿ ಏರು-ಪೇರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


ಇಂದು (ಮಾ.16) ಬೆಳಗ್ಗೆ 7.30ರ ಸುಮಾರಿಗೆ ರೆಹಮಾನ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ರೆಹಮಾನ್ ಅವರನ್ನು ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎದೆನೋವಿನ ಹಿನ್ನೆಲೆಯಲ್ಲಿ ಎ.ಆರ್ ರೆಹಮಾನ್ ಅವರಿಗೆ ECG, ಎಕೋಕಾರ್ಡಿಯೋಗ್ರಾಮ್ ಸೇರಿ ವಿವಿಧ ಪರೀಕ್ಷೆಗಳನ್ನು ಮಾಡಲಾಗಿದೆ. ಸದ್ಯಕ್ಕೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷೆ ಮಾಡಲಾಗುತ್ತಿದೆ. ಇನ್ನೂ ಕೆಲ ದಿನ ಅಪೋಲೊ ಆಸ್ಪತ್ರೆಯಲ್ಲಿಯೇ ಕಳೆಯಲಿರುವ ಎಆರ್ ರೆಹಮಾನ್ ಆಂಜಿಯೋಗ್ರಾಂ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ರಾಷ್ಟ್ರಪ್ರಶಸ್ತಿ ವಿಜೇತ, ಖ್ಯಾತ ಸಂಗೀತ ನಿರ್ದೇಶಕನ ದಾಂಪತ್ಯ ಜೀವನದಲ್ಲಿ ಬಿರುಕು!

ಎಆರ್ ರೆಹಮಾನ್ ಅವರಿಗೆ ಈಗ 58 ವರ್ಷ ವಯಸ್ಸಾಗಿದೆ. ಇತ್ತೀಚೆಗಷ್ಟೆ ಅವರು ಪತ್ನಿ ಸಾಯಿರಾ ಬಾನು ಅವರಿಂದ ದೂರಾಗಿದ್ದಾರೆ. ಪತ್ನಿಯಿಂದ ವಿಚ್ಛೇದನ ಪಡೆದಿರುವ ಎಆರ್ ರೆಹಮಾನ್ ಏಕಾಂಗಿಯಾಗಿದ್ದಾರೆ. ಅಂದಹಾಗೆ ರೆಹಮಾನ್ ಅವರಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ರೆಹಮಾನ್ ಪುತ್ರ ಮತ್ತು ಪುತ್ರಿ ಇಬ್ಬರೂ ಸಹ ಗಾಯಕರೇ ಆಗಿದ್ದಾರೆ.

Continue Reading

FILM

ಕಿಚ್ಚ ಸುದೀಪ್ ಮಗಳು ಸಾನ್ವಿ ಓದಿದ್ದು ಇಷ್ಟೇನಾ..!

Published

on

ಬೆಂಗಳೂರು: ನಟ ಕಿಚ್ಚ ಸುದೀಪ್‌ ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿರುವ ಮುಂಚೂಣಿ ನಟರಲ್ಲಿ ಪ್ರಮುಖರು ಎನ್ನುವುದರಲ್ಲಿ ಎರಡು ಮಾತಿಲ್ಲ. ಇತ್ತೀಚೆಗೆ ಅವರ ಮ್ಯಾಕ್ಸ್‌ ಸಿನಿಮಾ ಚಿತ್ರರಂಗದಲ್ಲಿ ಸಖತ್‌ ಫೇಮಸ್ ಆಗಿತ್ತು. ತಂದೆಯಂತೆ ಮಗಳು ಎನ್ನುವ ಹಾಗೆ ಕಿಚ್ಚ ಸುದೀಪ್ ಮಗಳು ಸಾನ್ವಿ ಶೀಘ್ರದಲ್ಲೇ ನಟನಾ ಕ್ಷೇತ್ರದಲ್ಲೂ ಮಿಂಚಲಿದ್ದಾರೆ.

 

ಸದ್ಯ ಸಂಗೀತ ಮತ್ತು ನಟನಾ ಕ್ಷೇತ್ರದಲ್ಲಿ ಅತ್ಯಂತ ಒಲವು ಮೂಡಿಸಿಕೊಂಡಿರುವ ಸಾನ್ವಿ ಸುದೀಪ್ ಇತ್ತೀಚೆಗಷ್ಟು ಝೀ ಕನ್ನಡ ಸರಿಗಮಪ ಶೋ ನಲ್ಲಿ ತನ್ನ ತಂದೆಯ ಎದುರೇ ಪದ್ಯವನ್ನು ಹಾಡಿದ್ದರು. ಮಗಳ ಪ್ರಯತ್ನಕ್ಕೆ ಸುದೀಪ್ ಖುಷಿಯಾಗಿದ್ದರು.

ಇನ್ನು 21 ವರ್ಷದ ಸಾನ್ವಿ ಏನು ಓದಿದ್ದಾರೆ ಎಂಬುವುದೇ ಎಲ್ಲಾರಿಗೆ ಕುತೂಹಲ ಮೂಡಿಸಿದೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಸಾನ್ವಿ ತನ್ನ ವಿದ್ಯಾರ್ಹತೆಯ ಬಗ್ಗೆ ಮಾತನಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, “ನನ್ನ ಶಿಕ್ಷಣದ ಬಗ್ಗೆ ಅನೇಕರು ಪ್ರಶ್ನೆ ಕೇಳುತ್ತಿದ್ದಾರೆ. ಆದರೆ ಯಾಕೆ ಅಂತ ಅರ್ಥ ಆಗುತ್ತಿಲ್ಲ. ನಾನು ಇನ್ನೂ ಏನೂ ಸಾಧನೆ ಮಾಡಿಲ್ಲ. ನಾನು ಬೆಂಗಳೂರಿನಲ್ಲಿ ಪಿಯುಸಿವರೆಗೆ ಓದಿದೆ. ಆಗಲೇ ನನಗೆ ಸಾಕಾಗಿತ್ತು. ಮನರಂಜನೆ ಕ್ಷೇತ್ರದಲ್ಲಿ ಇರುವವರಲ್ಲಿ ಅನೇಕರಿಗೆ ಶಿಕ್ಷಣದ ಬಗ್ಗೆ ಆಸಕ್ತಿ ಇರೋದಿಲ್ಲ. ಪಿಯುಸಿ ಮುಗಿಸಿ ನಾನು ನಾಲ್ಕು ತಿಂಗಳುಗಳ ಕಾಲ ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಆಕ್ಸಿಂಗ್ ಕೋರ್ಸ್ ಮಾಡಿದೆ” ಎಂದು ಹೇಳಿದ್ದಾರೆ.

ಅಲ್ಲದೇ ಸಾನ್ವಿ ಈಗ ಚಿತ್ರರಂಗದಲ್ಲಿ ಆಕ್ಟಿವ್ ಆಗುತ್ತಿದ್ದಾರೆ. ಅಪ್ಪ ಸುದೀಪ್ ಮುಂದೆ ಖಡಕ್‌ ವಿಲನ್‌ ಆಗಿ ಸಾನ್ವಿಗೆ ನಟಿಸುವ ಆಸೆ ಇದೆ. ಆದರೆ ಹಿರೋಯಿನ್ ಮಾತ್ರ ಆಗೋದಿಲ್ಲ ಎಂದು ಹೇಳಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page