Connect with us

LATEST NEWS

ತಾರ್ಕಿಕ ಅಂತ್ಯ ಕಂಡ ಮೈಸೂರು IAS ಜಟಾಪಟಿ : ಡಿಸಿ ರೋಹಿಣಿ ಸಿಂಧೂರಿ ಪಾಲಿಕೆ ಕಮಿಷನರ್ ಶಿಲ್ಪ ಎತ್ತಂಗಡಿ..!

Published

on

ಮೈಸೂರು :  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬೀದಿಗೆ ಬಂದ ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಯುಕ್ತರ ಜಗಳಕ್ಕೆ ಸರ್ಕಾರ ತಾರ್ಕಿಕ ಅಂತ್ಯ ಕಾಣಿಸಿದೆ.

ನಿನ್ನೆ ತಡರಾತ್ರಿ ಸರ್ಕಾರ ಈ ಕುರಿತು ಆದೇಶ ಹೊರಡಿಸಿದ್ದು ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ಡಾ. ಬಗಾದಿ ಗೌತಮ್ ಮತ್ತು ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಲಕ್ಷ್ಮೀಕಾಂತ್ ರೆಡ್ಡಿ ನೇಮಕ ಮಾಡಿ ಸರ್ಕಾರ ಆದೇಶಮಾಡಿದೆ.

ರೋಹಿಣಿ ಸಿಂಧೂರಿಯನ್ನು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಹೆಚ್ಚುವರಿ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. 2020ರಲ್ಲಿ ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗುವ ಮೊದಲು ರೋಹಿಣಿ ಇದೇ ಇಲಾಖೆಯ ಆಯುಕ್ತರಾಗಿದ್ದರು.

ಮೈಸೂರು ಮಹಾನಗರ ಪಾಲಿಕೆ ಆಯುಕ್ತೆಯಾಗಿದ್ದ ಶಿಲ್ಪಾನಾಗ್‌ರನ್ನು ಆರ್‌ಡಿ ಅಂಡ್ ಪಿಆರ್ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.

ಮೈಸೂರು ಜಿಲ್ಲೆಯಲ್ಲಿ ಈ ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳ ನಡುವಿನ ಜಟಾಪಟಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಇಬ್ಬರು ಐಎಎಸ್​ ಅಧಿಕಾರಿಗಳ ನಡುವಿನ ಕಿತ್ತಾಟವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಸರ್ಕಾರ ತ್ವರಿತ ಕ್ರಮ ಕೈಗೊಂಡಿದೆ.

ಇತ್ತ ವರ್ಗಾವಣೆ ಆದೇಶ ಕೈ ಸೇರುತ್ತಿದ್ದಂತೆ ರೋಹಿಣಿ ಸಿಂಧೂರಿ ಅವರು ಇಂದು ಮುಂಜಾನೆ ಬೆಂಗಳೂರಿಗೆ ಆಗಮಿಸಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ.

ಸಿಎಂ ಸರ್ಕಾರಿ ನಿವಾಸ ಕಾವೇರಿಗೆ ನಿವಾಸಕ್ಕೆ ಇಂದು ಬೆಳಗ್ಗೆ ತಮ್ಮ ಖಾಸಗಿ ವಾಹನದಲ್ಲಿ ಆಗಮಿಸಿದ ರೋಹಿಣಿ ಸಿಂಧೂರಿ ಅವರು ಸಿಎಂ ರನ್ನು ಭೇಟಿಯಾಗಿ ವರ್ಗವಾಣೆ ಆದೇಶವನ್ನು ಹಿಂಪಡೆಯುವಂತೆ ಮನವಿ ಮಾಡಿದ್ದಾರೆ.

ಪ್ರಕರಣದಲ್ಲಿ ತನ್ನದೇನು ತಪ್ಪಿಲ್ಲ, ವರ್ಗಾವಣೆಯಾದರೆ ತನ್ನದೇ ತಪ್ಪು ಎಂದು ಬಿಂಬಿಸಿದಂತಾಗುತ್ತದೆ ಎಂದು ರೋಹಿಣಿ ಸಿಂಧೂರಿಯವರು ಹೇಳಿದ್ದಾರೆ ಎನ್ನಲಾಗಿದೆ. ರೋಹಿಣಿ ಸಿಂಧೂರಿಯವರು ಸುಮಾರು ಅರ್ಧ ಗಂಟೆಗಳ ಕಾಲ ಸಿಎಂ ನಿವಾಸದಲ್ಲಿದ್ದರು.

ಆದರೆ ಯಾವುದೇ ಕಾರಣಕ್ಕೂ ವರ್ಗಾವಣೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಸಿಎಂ ಬಿಎಸ್ ವೈ ಹೇಳಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ನಿರಾಸೆಯಿಂದಲೇ ರೋಹಿಣಿ ಸಿಂಧೂರಿ ಸಿಎಂ ನಿವಾಸದಿಂದ ತೆರಳಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ 4ನೇ ಬಾರಿಗೆ ರೋಹಿಣಿ ಸಿಂಧೂರಿ ವರ್ಗಾವಣೆಯಾಗಿದೆ. 2020ರ ಸೆಪ್ಟೆಂಬರ್‌ನಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಕೆಲವೇ ದಿನಗಳು ಬಾಕಿ ಇದ್ದಾಗ ಜಿಲ್ಲಾಧಿಕಾರಿ ಶರತ್ ವರ್ಗಾವಣೆ ಮಾಡಿ ರೋಹಿಣಿ ಸಿಂಧೂರಿ ನೇಮಕ ಮಾಡಲಾಗಿತ್ತು.

ಈಗ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಮತ್ತು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಜಟಾಪಟಿ ಸರ್ಕಾರಕ್ಕೆ ತಲೆನೋವಾಗಿತ್ತು. ಆದ್ದರಿಂದ ಇಬ್ಬರನ್ನು ಸಹ ವರ್ಗಾವಣೆ ಮಾಡಲಾಗಿದೆ.

LATEST NEWS

ಕೊನೆಗೂ ಭೂಮಿಗೆ ಮರಳಲಿದ್ದಾರೆ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್

Published

on

ಮಂಗಳೂರು/ವಾಷಿಂಗ್ಟನ್: ಸುಮಾರು ತಿಂಗಳುಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶನಿಲ್ದಾಣದಲ್ಲೇ ಉಳಿದುಕೊಂಡಿರುವ ಭಾರತದ ಮೂಲದ ಅಮೆರಿಕದ ಖಗೋಳ ವಿಜ್ಞಾನಿ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರನ್ನು ಯಶಸ್ವಿಯಾಗಿ ಭೂಮಿಗೆ ವಾಪಸ್ ಕರೆತರಲು ಸ್ಪೇಸ್ ಎಕ್ಸ್ ನೆರವಿನಿಂದ ನಾಸಾ ಕಾರ್ಯಾಚರಣೆಯನ್ನು ಆರಂಭಿಸಿದೆ.


ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಶುಕ್ರವಾರ ಸಂಜೆ ಸ್ಥಳೀಯ ಕಾಲಮಾನ 7.03ಕ್ಕೆ ಸರಿಯಾಗಿ ಸ್ಪೇಸ್ ಎಕ್ಸ್‌ನ ಫಾಲ್ಕನ್‌-9 ರಾಕೆಟ್ ಉಡಾವಣೆಯಾಗಿದೆ.

ಈ ಸಂಬಂಧ ನಾಸಾ ಹಾಗೂ ಸ್ಪೇಸ್ ಎಕ್ಸ್ ಮಾಹಿತಿ ಹಾಗೂ ವೀಡಿಯೋವನ್ನು ಹಂಚಿಕೊಂಡಿದೆ. ನಾಸಾದ ಸ್ಪೇಸ್ ಎಕ್ಸ್ ಡ್ರ್ಯಾಗನ್ ಸ್ಪೇಸ್ ಕ್ರಾಫ್ಟ್ ಕ್ರೂ 10 ಉಡ್ಡಯನ ಯಶಸ್ವಿಯಾಗಿದೆ ಎಂದು ನಾಸಾ ಘೋಷಿಸಿದೆ.

ಇದನ್ನೂ ಓದಿ: ಬ್ಯಾಹ್ಯಾಕಾಶದಲ್ಲಿರುವ ಸುನೀತಾ ವಿಲಿಯಮ್ಸ್‌ ಈಗ ಹೇಗಿದ್ದಾರೆ ಗೊತ್ತಾ ?

ಈ ಕಾರ್ಯಾಚರಣೆ ಹಲವು ದಿನಗಳ ಹಿಂದೆಯೇ ಆರಂಭವಾಗಬೇಕಿತ್ತು. ಆದರೆ, ಹಲವಾರು ತಾಂತ್ರಿಕ ಕಾರಣಗಳಿಂದಾಗಿ ಇದನ್ನು ಪದೇ ಪದೇ ಮುಂದೂಡುತ್ತಲೇ ಬರಲಾಗಿತ್ತು. ಕಡೆಗೂ ಅದಕ್ಕೆ ಕಾಲ ಕೂಡಿಬಂದಿದೆ.

 

Continue Reading

LATEST NEWS

ಎಸ್‌.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಪ್ರಥಮ ಬಂದವರಿಗೆ 100 ಗ್ರಾಂ. ಚಿನ್ನ ಬಹುಮಾನ

Published

on

ಪ್ರಸ್ತುತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಯಾವ ವಿದ್ಯಾರ್ಥಿ ಪಡೆಯುತ್ತಾನೋ/ಪಡೆಯುತ್ತಾಳೋ ಅವರಿಗೆ 100 ಗ್ರಾಂ. ಚಿನ್ನ ನೀಡುವಂತೆ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ ಘೋಷಿಸಿದೆ.

 

ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸುವ ಶಿಗ್ಗಾಂವಿ ಕ್ಷೇತ್ರದ ವಿದ್ಯಾರ್ಥಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದರೆ 15 ಗ್ರಾಂ ಚಿನ್ನದ ಪದಕ, ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ 8,9 ನೇ ತರಗತಿ ಓದಿರಬೇಕು. ಶಿಗ್ಗಾಂವಿ ಕ್ಷೇತ್ರದ ವಿದ್ಯಾರ್ಥಿಗಳು ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಅಂಕ ಗಳಿಸುವ ಉದ್ದೇಶದಿಂದ ಈ ಬಹುಮಾನ ಘೊಷಣೆ ಮಾಡಿರುವುದಾಗಿ ನಿನ್ನೆ (ಮಾ.14) ನಡೆದ ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಪ್ರೇಮಿ, ಹಂಪಿ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಮಾಜಿ ಸದಸ್ಯ ಡಾ.ಫಕೀರ ಗೌಡ್ರ ಪಾಟೀಲ ತಿಳಿಸಿದ್ದಾರೆ.

Continue Reading

LATEST NEWS

ಅಯ್ಯೋ ಪಾಪಾ..! ಕಣ್ಣೀರಿಡುತ್ತಾ ತನ್ನ ಬ್ರೇಕಪ್ ಸ್ಟೋರಿ ಹಂಚಿಕೊಂಡ ಕಿಪ್ಪಿ ..!

Published

on

ಇಂದಿನ ಯುವ ಜನಾಂಗವು ಪ್ರೀತಿಯ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ಹಂಚಿಕೊಳ್ಳುತ್ತಾರೆ. ಆದರೆ ಅದು ಬ್ರೇಕಪ್ ಆದರೆ ಬೇಸರದ ಸ್ಟೇಟಸ್ ಹಾಕಿಕೊಂಡು ಸುಮ್ಮನಾಗುತ್ತಾರೆ. ಬಳಿಕ ಮತ್ತೊಂದು ಪ್ರೀತಿಗೆ ಹುಡುಕಾಡುತ್ತಾರೆ. ಆದರೆ ಇಲ್ಲೊಬ್ಬರು ನಿಜವಾಗಿ ಪ್ರೇಮಿಸಿದ ವ್ಯಕ್ತಿಯಿದ್ದು, ಅವರ ಲವ್ ಬ್ರೇಕಪ್ ಆಗಿದೆ. ಸ್ವತಃ ತಾವೇ ವಿಡಿಯೋ ಮಾಡಿ ವಿರಹ ಕಥೆಯನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ. ಅವರು ಮತ್ತಾರೂ ಅಲ್ಲ, ರೀಲ್ಸ್ ಮೂಲಕವೇ ಫುಲ್ ಹವಾ ಸೃಷ್ಠಿಸಿರುವ ಕಿಪ್ಪಿ ಕೀರ್ತಿ. ಅಷ್ಟಕ್ಕೂ ಕಿಪ್ಪಿ ಜೀವನದಲ್ಲಿ ನಡೆದಿದ್ದದೇನು ? ಇಲ್ಲಿದೆ ನೋಡಿ.

ಸೋಶಿಯಲ್‌ ಮೀಡಿಯಾದಲ್ಲಿ ರೀಲ್ಸ್‌ ಮಾಡುತ್ತಾ, ಫುಲ್ ಟ್ರೋಲ್ ಆಗಿರುವ ಕಿಪ್ಪಿ ಕೀರ್ತಿಗೆ ಒಂದು ಲವ್ ಇತ್ತು. ಆದರೆ, ಈಗ ಅದು ಬ್ಏಕಪ್ ಆಗಿದೆ. ಈ ವಿಚಾರವನ್ನು ಸ್ವತಃ ಕಿಪ್ಪಿಯೇ ಸೋಶಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇದಕ್ಕೆ ಕಾರಣವನ್ನೂ ಸ್ಪಷ್ಠೀಕರಿಸಿದ್ದಾರೆ. ಕಿಪ್ಪಿ ಕೀರ್ತಿ ಅವರು ಮುತ್ತು ಎನ್ನುವವರನ್ನು ಪ್ರೀತಿಸುತ್ತಿದ್ದರಂತೆ.

ಕಿಪಿ ವಿಡಿಯೋದಲ್ಲಿ ಹೇಳಿದ್ದೇನು ?

“ಎಲ್ಲೇ ಇರು, ಚೆನ್ನಾಗಿರು, ಖುಷಿಯಾಗಿರು ಅಷ್ಟೇ ಯಾವತ್ತೂ ಪ*** ಮುಖ ತೋರ್ಸೋದಿಲ್ಲ. ನೀನು ನನ್ನ ಬಗ್ಗೆ ತಪ್ಪು ತಿಳ್ಕೊಂಡು ದೂರ ಮಾಡಿದೆ ಅಲ್ವಾ ? ಹೇಗಿರಲಿ ನಾನು ಅಂತ ಗೊತ್ತಿಲ್ಲ. ಎಲ್ಲರಿಗೂ ಹಾಲು ಕುಡಿದಷ್ಟು ಸಂತೋಷ ಆಗಿರಬಹುದು , ಚೆನ್ನಾಗಿರಿ ಅಂತ ಅಷ್ಟೇ ಬಯಸೋದು. ನನಗೆ ಇನ್ನೇನು ಬೇಡ. ನಿನ್ನ ಮರೆಯೋಕೆ ಕಷ್ಟ ಆಗಬಹುದು. ಆದರೆ ಮರೆಯೋದಿಲ್ಲ, ಇನ್ಮುಂದೆ ನಾನು ಯಾರನ್ನೂ ಮದುವೆನೂ ಆಗಲ್ಲ. ಇದು ಪ್ರೀತಿ ಮೇಲೆ ಆಣೆ . ಸ್ವಲ್ಪ ಆದ್ರೂ ನೀನು ನನ್ನ ಮಾತು ಕೇಳಬಹುದಿತ್ತು, ಆದ್ರೆ ನೀನು ನನ್ ಮೇಲೆ ಅನುಮಾನ ಪಟ್ಟೆ” ಎಂದು ಕಿಪ್ಪಿ ಕೀರ್ತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಕಿಪ್ಪಿ ಪೋಸ್ಟ್‌ಗೆ ಬಂದ ಕೆಲವು ಕುತೂಹಲಕಾರಿ ಕಾಮೆಂಟ್‌ಗಳು :

  • ಯಾಕೆ ಕಿಪ್ಪಿ ಇದೆಲ್ಲಾ? ಓದು ಚೆನ್ನಾಗಿ, ಕೆಲಸ ಮಾಡು, ದುಡ್ಡು ಮಾಡು, ಜಗತ್ತಿನಲ್ಲಿ ದುಡ್ಡೇ ದೊಡ್ಡಪ್ಪ… ಮತ್ತೆ ನಿನ್ನ ಇಟ್ಕೊಂಡು ಕೆಲಸಕ್ಕೆ ಬಾರದೇ ಯೂಟ್ಯೂಬ್ ಚಾನೆಲ್ ಅವರು ನಿನ್ನಿಂದ ದುಡ್ಡು ಮಾಡಿಕೊಂಡು ಅವರು ಜಾಲಿಯಾಗಿ ಇರುತ್ತಾರೆ, ಇದೆಲ್ಲಾ ಬಿಟ್ಟು ದುಡ್ಡು ಮಾಡಿ, ನಿನ್ನ ತಾಯಿಗೆ ಚೆನ್ನಾಗಿ ನೋಡಿಕೋ.
  • ನಂಗೆ ಯಾಕೋ ಡೌಟ್ ಹೊಡಿತಾ ಇದೆ. ಇಬ್ರು ಪಬ್ಲಿಸಿಟಿಗೆ ಹೀಗೆ ಮಾಡ್ತಾ ಇದ್ದಾರೆ ಆಂತ. ಮಾಡೋಕೆ ಕ್ಯಾಮೆನೂ ಇಲ್ಲ. ಮನೆಯವರು ನೋಡಿದ ಸಂಬಂಧಗಳೆ ಜಾಸ್ತಿ ದಿನ ಉಳಿಯದ ಕಾಲ ತಲುಪಿಬಿಟ್ಟಿದ್ದೀವಿ. ಇನ್ನೂ ಸೋಶಿಯಲ್ ಮೀಡಿಯಾದ್ದು ಉಳಿತದ ಒಳ್ಳೆ ಮಕ್ಕಳಾಟ ಬಿಟ್ಟು ಉದ್ಧಾರ ಆಗೋದು ಹೇಗೆ ಆಂತ ನೋಡ್ಕೊಳ್ಳಿ
  • ಮುಂದೆ ಯಾರನ್ನು ನಂಬಿ ಮೋಸ ಹೋಗ್ಬೇಡ, ಇದೊಂದು ಜೀವನದ ಪಾಠ ಅಂತ ತಿಳ್ಕೊ. ಇವನಿಗಿಂತ ಒಳ್ಳೆ ಮನಸ್ಸೂ ಹುಡುಗ ಸಿಕ್ತಾನೆ.
  • ಯಾರು ಯಾರಿಗೆ ಮೋಸ ಮಾಡಿದ್ರು ಅನ್ನೋದು ಆ ಭಗವಂತ ಇದ್ದಿದ್ರೆ ಗೊತ್ತು ಮಾಡ್ಲಿ…..
  • ಯಾವುದೇ ಕಾರಣಕ್ಕೂ ಕೆಟ್ಟ ನಿರ್ಧಾರ ತಗೋಬೇಡ, ಹೋದ್ರೆ ಹೋಗ್ತಾನೆ ಬಿಡು. ಅವನನ್ನು ನೋಡಿ ಹೊಟ್ಟೆ ಉರ್ಕೋಬೇಕು. ಆತರ ಬೆಳಿ. ನೀನು ನಿನ್ನ ಬುದ್ಧಿ ನಿನ್ನ ಕಲಿತುಕೊಂಡೆ, ಯಾರನ್ನು ನಂಬಬೇಡ.
  • ಹೋಗ್ಲಿ ಬಿಡು, ಕಿಪಿ ಖುಷಿಯಾಗಿ ಇರು, ನಿನ್ ಪ್ರೀತಿ ನಿಂಗೆ ಸಿಗುತ್ತೆ
  • ದಯವಿಟ್ಟು ಈ ತಪ್ಪು ಯಾರು ಮಾಡಬೇಡಿ ಪ್ಲೀಸ್. ಪ್ರೀತಿ ಹೆಸರು ಹೇಳಿಕೊಂಡು ಇನ್ನೊಬ್ಬರ ಲೈಫ್ ಅಲ್ಲಿ ಆಟ ಆಡಬೇಡಿ.
  • ನೋಡಿ ಇದೆಲ್ಲ ನಾಟಕ, ನಿಂಗೆ ಅರ್ಥ ಆಗಲ್ವಾ? ನೀನು ಆರಾಮಾಗಿ ಇರು ಅಷ್ಟೇ. ನಿಮ್ಮ ಅಮ್ಮನನ್ನು ಚೆನ್ನಾಗಿ ನೋಡ್ಕೋ…

Continue Reading
Advertisement

Trending

Copyright © 2025 Namma Kudla News

You cannot copy content of this page