Connect with us

LATEST NEWS

ಮೈಸೂರು:ಮದುವೆಯಾದ ಒಂದೇ ತಿಂಗಳಲ್ಲಿ ಹೆಣವಾದ ನವ ವಧು:ಗಂಡನ ವಿರುದ್ಧ ವರದಕ್ಷಿಣೆ ಕೇಸು ದಾಖಲು..!

Published

on

ಮೈಸೂರು:ಒಂದು ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ಯುವತಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿರುವ ಘಟನೆ ಮೈಸೂರಿನ  ಶ್ರೀರಾಂಪುರ ಎಸ್‌.ಬಿ.ಎಂ ಕಾಲನಿಯಲ್ಲಿ ನಡೆದಿದೆ. ಆಶಾರಾಣಿ  ಎನ್ನುವಾಕೆಯೇ  ಮೃತ ದುರ್ದೈವಿ. ಮೂಲತಃ ನಂಜನಗೂಡು ತಾಲೂಕಿನ ಸರಗೂರು ಗ್ರಾಮದ ನಿವಾಸಿ. ಕೇವಲ ಒಂದು ತಿಂಗಳ ಹಿಂದಷ್ಟೇ ಟಿಕ್ಕಿ ಪ್ರದೀಪ್ ಎಂಬಾತನ ಜತೆ ವಿವಾಹವಾಗಿತ್ತು.ಸದ್ಯ ಸಾವಿಗೀಡಾದ ಯುವತಿ ಪೋಷಕರು ಇದೊಂದು ಕೊಲೆ ಎಂಬ ಆರೋಪ ಮಾಡಿದ್ದು,  ಕುವೆಂಪುನಗರ ಪೊಲೀಸ್ ಠಾಣೆಗೆ ದೂರನ್ನು ಕೊಟ್ಟಿದ್ದಾರೆ.

ವರದಕ್ಷಿಣೆ ತರುವಂತೆ ಮಾನಸಿಕ, ದೈಹಿಕ‌ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆಂದು ಪ್ರದೀಪ್​ ವಿರುದ್ಧ ದೂರು ನೀಡಲಾಗಿದೆ.5 ಲಕ್ಷ ರೂ. ನಗದು ಮತ್ತು 130 ಗ್ರಾಂ ಚಿನ್ನ ವರದಕ್ಷಿಣೆಯಾಗಿ ನೀಡಲಾಗಿತ್ತು.

ಆದರೆ, ಮತ್ತಷ್ಟು ವರದಕ್ಷಿಣೆಗಾಗಿ ಪ್ರದೀಪ್ ​ಮತ್ತವರ ಕುಟುಂಬದ ಬೇಡಿಕೆ ಇಟ್ಟಿತ್ತು ಎಂದು ಆಶಾರಾಣಿ ಕುಟುಂಬ ಆರೋಪಿಸಿದೆ. ಪ್ರದೀಪ್​ನನ್ನು ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ.

FILM

ನಟ ದರ್ಶನ್ ಹುಟ್ಟುಹಬ್ಬ…’ಜೀವ ಹೂವಾಗಿದೆ’ ಎಂದು ಹೊಸ ಪೋಸ್ಟರ್ ಹಂಚಿಕೊಂಡ ಪವಿತ್ರಾ ಗೌಡ!

Published

on

ಮಂಗಳೂರು/ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊ*ಲೆ ಪ್ರಕರಣದಲ್ಲಿ ನಟ ದರ್ಶನ್‌, ಪವಿತ್ರಾ ಗೌಡ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ದರ್ಶನ್ ಮೈಸೂರಿನ ತಮ್ಮ  ಫಾರ್ಮ್ ಹೌಸ್ ನಲ್ಲಿ ಸಮಯ ಕಳೆಯುತ್ತಿದ್ದಾರೆ. ಇತ್ತ ಪವಿತ್ರಾ ಗೌಡ ತನ್ನ ಬ್ಯುಸಿನೆಸ್‌ನತ್ತ ಗಮನ ಹರಿಸಿದ್ದಾರೆ. ಪ್ರೇಮಿಗಳ ದಿನದಂದು ಬೆಂಗಳೂರಿನ ಆರ್ ಆರ್ ನಗರದಲ್ಲಿ ರೆಡ್ ಕಾರ್ಪೆಟ್ ಬೊಟೀಕ್‌ನ್ನು ರೀ ಲಾಂಚ್ ಮಾಡಿದ್ದಾರೆ.

ರೆಡ್ ಕಾರ್ಪೆಟ್ ಶಾಪ್ ರೀ ಓಪನ್ ಹಿನ್ನೆಲೆ ಪೂಜೆ ಹಮ್ಮಿಕೊಂಡಿದ್ದು,  ಪವಿತ್ರಾ ಗೌಡ ಕುಟುಂಬಸ್ಥರ ಜೊತೆಗೆ ಕಿರುತೆರೆ ನಟಿಯರು ಭಾಗಿಯಾಗಿದ್ರು. ಪವಿತ್ರಾಗೆ ಶುಭಕೋರಿದ್ರು. ಇದೀಗ ಅವರು ಮಾಡಿರುವ ಪೋಸ್ಟ್ ವೈರಲ್ ಆಗುತ್ತಿದೆ.

ಪೋಸ್ಟ್ ಏನು?

ಇಂದು (ಫೆಬ್ರವರಿ 16) ನಟ ದರ್ಶನ್‌ ಜನ್ಮದಿನ. ಇದು ಅವರ ಅಭಿಮಾನಿಗಳ ಪಾಲಿಗೆ ಹಬ್ಬವೇ ಸರಿ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ದರ್ಶನ್‌ಗೆ ರೀತಿಯಲ್ಲಿ ಶುಭಕೋರಿದ್ದಾರೆ. ಹಾಗೆಯೇ ಪವಿತ್ರಾ ಗೌಡ ಕೂಡ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಸ ಪೋಸ್ಟರ್‌ವೊಂದನ್ನು ಹಂಚಿಕೊಂಡಿದ್ದಾರೆ.

ಜೈಲಿನಿಂದ ಬಂದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಪವಿತ್ರಾ ಗೌಡ, ಹಲವಾರು ಪೋಸ್ಟರ್ ಹಂಚಿಕೊಂಡಿದ್ದಾರೆ. ಇಂದು ಕೂಡ ಹಂಚಿದ್ದಾರೆ. ಅಂದ್ಹಾಗೆ ಅವರು ಹಂಚಿಕೊಂಡಿದ್ದು, ಅವರ ತಾಯಿಯೊಂದಿಗಿನ ಫೋಟೋ ವೀಡಿಯೋವನ್ನು.

ಇದನ್ನೂ ಓದಿ : ಲಕ್ಷ್ಮೀ ಬಾರಮ್ಮ ‘ವೈಷ್ಣವ್’ ನಿಶ್ಚಿತಾರ್ಥ; ಬ್ರೋ ಗೌಡ ಹುಡುಗಿ ಯಾರು ಗೊತ್ತಾ?

ಜೀವ ಹೂವಾಗಿದೆ ಹಾಡಿಗೆ ಫೋಟೋಗಳನ್ನು ಎಡಿಟ್ ಮಾಡಿ ಪೋಸ್ಟರ್‌ ಅನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ಅಮ್ಮ ನನ್ನ ದೊಡ್ಡ ಶಕ್ತಿ.  ಬದುಕಿನ ಏರಿಳಿತಗಳಲ್ಲಿ ಅಮ್ಮ ನನ್ನನ್ನು ಇನ್ನಷ್ಟು ಶಕ್ತಿಶಾಲಿಯನ್ನಾಗಿಸಿದ್ದಾರೆ. ಅವಳ ತಾಳ್ಮೆಯಲ್ಲಿ ವಿಶೇಷತೆ ಇದೆ ಎಂದು ಬರೆದಿದ್ದಾರೆ. ಕೊನೆಯಲ್ಲಿ ಲವ್ ಯೂ ಮಾ ಎಂದು ಬರೆದುಕೊಂಡಿದ್ದಾರೆ. ಆದರೆ, ಕಮೆಂಟ್ ಆಪ್ಷನ್ ಆಫ್ ಮಾಡಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗುತ್ತಿದೆ.

Continue Reading

FILM

ಲಕ್ಷ್ಮೀ ಬಾರಮ್ಮ ‘ವೈಷ್ಣವ್’ ನಿಶ್ಚಿತಾರ್ಥ; ಬ್ರೋ ಗೌಡ ಹುಡುಗಿ ಯಾರು ಗೊತ್ತಾ?

Published

on

ಮಂಗಳೂರು/ಬೆಂಗಳೂರು: ‘ಲಕ್ಷ್ಮೀ ಬಾರಮ್ಮ’ ಸೀರಿಯಲ್ ಖ್ಯಾತಿಯ, ಬಿಗ್‌ಬಾಸ್ ಸೀಸನ್ 8ರ ಸ್ಪರ್ಧಿ ಶಮಂತ್ ಬ್ರೋ ಗೌಡ ತನ್ನ ಅಭಿಮಾನಿಗಳಿಗೆ ಗುಡ್​ನ್ಯೂಸ್ ಕೊಟ್ಟಿದ್ದಾರೆ. ನಟ ಶಮಂತ್ @ ಬ್ರೋ ಗೌಡ ಎಂಗೇಜ್ ಮೆಂಟ್ ಆಗಿದ್ದಾರೆ.

ಪ್ರೇಮಿಗಳ ದಿನದಂದು ಇವರಿಬ್ಬರ ಪ್ರೀತಿಯ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಪ್ರೀತಿಸಿದ ಹುಡುಗಿಯ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಶಮಂತ್ ಗೌಡ.

ನಟ ಶಮಂತ್ ತನ್ನ ಬಹುದಿನದ ಗೆಳತಿ ಮೇಘನಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಶಮಂತ್, ಮೇಘನಾ ಬಹುಕಾಲದ ಪ್ರೀತಿಗೆ ಇಂದು ಅಧಿಕೃತ ಮುದ್ರೆ ಬಿದ್ದಿದೆ.

ಬ್ರೋ ಗೌಡ ಹುಡುಗಿ ಯಾರು ಗೊತ್ತಾ?

ನಟ ಶಮಂತ್ ಬ್ರೋ ಗೌಡ ಅವರನ್ನು ಮದುವೆಯಾಗುತ್ತಿರುವ ಹುಡುಗಿಯ ಹೆಸರು ಮೇಘಾನಾ. ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಈ ಹಿಂದೆ ಸಾಕಷ್ಟು ಭಾರೀ ಜೊತೆಯಾಗಿ ರೀಲ್ಸ್‌ಗಳನ್ನು ಸಹ ಮಾಡುತ್ತಿದ್ದರು.

ಇದನ್ನೂ ಓದಿ: ತಾಳಿ ಕಟ್ಟುವಾಗ ನನಗೆ… ಮದುವೆಯ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟ ಧನಂಜಯ 

ಶಮಂತ್, ಮೇಘನಾ ಮದುವೆಗೂ ತಯಾರಿ ನಡೆದಿದ್ದು, ಶೀಘ್ರವೇ ಬ್ರೋಗೌಡ ಅವರ ಮದುವೆ ಯಾವಾಗ ಅನ್ನುವ ಬಗ್ಗೆ ಮಾಹಿತಿ ನೀಡಲಿದ್ದಾರೆ. ‘ಲಕ್ಷ್ಮೀ ಬಾರಮ್ಮ’ ಧಾರವಾಹಿಯಲ್ಲಿ ಹೀರೋ ಆಗಿ ಕಾಣಿಸಿಕೊಂಡ ಶಮಂತ್ ಬ್ರೋ ಗೌಡ ಅವರು ಕಿರುತೆರೆಯಿಂದ ಬೆಳ್ಳಿ ತೆರೆಗೆ ಕಾಲಿಡೋಕೆ ಸಜ್ಜಾಗಿದ್ದಾರೆ. ಒಂದು ತಿಂಗಳ ಹಿಂದಷ್ಟೇ ಹೊಸ ಕನ್ನಡ ಸಿನಿಮಾವೊಂದರಲ್ಲಿ ಶಮಂತ್ ಹೀರೋ ಆಗುವುದರ ಬಗ್ಗೆ ಅಪ್ಡೇಟ್ ಕೊಟ್ಟಿದ್ದರು.

 

 

 

 

Continue Reading

FILM

ತಾಳಿ ಕಟ್ಟುವಾಗ ನನಗೆ… ಮದುವೆಯ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟ ಧನಂಜಯ

Published

on

ಮಂಗಳೂರು/ಮೈಸೂರು : ನಟ ಡಾಲಿ ಧನಂಜಯ್ ಅವರು ಡಾ|| ಧನ್ಯಾತಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಭಾನುವಾರ (ಫೆ.16ರಂದು) ಮೈಸೂರಿನ ವಸ್ತು ಸಂಗ್ರಹಾಲಯ ಮೈದಾನದಲ್ಲಿ ಎರಡೂ ಕುಟುಂಬದ ಹಿರಿಯರು ಮತ್ತು ಆತ್ಮೀಯರ ಸಮ್ಮುಖದಲ್ಲಿ ವಿವಾಹ ಕಾರ್ಯಕ್ರಮ ನೆರವೇರಿತು.

ಧನಂಜಯ-ಧನ್ಯತಾ ಅವರ ಅದ್ದೂರಿ ವಿವಾಹ ಸಂಭ್ರಮಕ್ಕೆ ನೂರಾರು ಸಿನಿಮಾ ತಾರೆಯರು, ರಾಜಕೀಯ ಗಣ್ಯರು, ಸಾವಿರಾರು ಅಭಿಮಾನಿಗಳು ಆಗಮಿಸಿ ಶುಭಕೋರಿದ್ದಾರೆ.

ಇದನ್ನೂ ಓದಿ: ಧನ್ಯತಾಗೆ ಡಾಲಿ ಇಷ್ಟ ಆಗಿದ್ದು ಯಾಕೆ ಗೊತ್ತಾ ? ಈ ಬಗ್ಗೆ ಏನಂದ್ರು ಧನಂಜಯ್ ಅವರ ಭಾವಿ ಪತ್ನಿ

ಮದುವೆ ಮುಗಿದ ನಂತರ ಡಾಲಿ ಧನಂಜಯ ಅವರು ಮೊದಲ ಬಾರಿಗೆ ಮಾಧ್ಯಮಗಳ ಎದುರಲ್ಲಿ ಮಾತನಾಡಿದ್ದಾರೆ. ‘ಎಲ್ಲರಿಗೂ ಧನ್ಯವಾದಗಳು. ಸಣ್ಣ-ಪುಟ್ಟ ತಪ್ಪುಗಳು ಆಗಿದ್ದರೆ ಕ್ಷಮೆ ಇರಲಿ. ಶಾಂತಿಯುತವಾಗಿ ಸಮಾರಂಭ ನಡೆಯಿತು. ಅಭಿಮಾನಿಗಳಿಗೆ ವಿಶೇಷ ಧನ್ಯವಾದ. ಮನೆಯವರು ತುಂಬಾ ಖುಷಿ ಆಗಿದ್ದಾರೆ. ಸಾವಿರಾರು ಜನರು ಬಂದು ಹರಸಿದ್ದು ಖುಷಿ ಆಯಿತು. ಅಭಿಮಾನಿಗಳ ಪ್ರೀತಿಗೆ ಸಾವಿರಾರು ಜನ ಬಂದು ಹಾರೈಸಿದ್ದು ಖುಷಿ ಆಯಿತು. ಅಭಿಮಾನಿಗಳ ಪ್ರೀತಿಗೆ ಏನು ವಾಪಾಸ್ ನೀಡವಬೇಕೆಂದು ಗೊತ್ತಿಲ್ಲ. ಅವರ ಪ್ರೀತಿಯನ್ನು ಉಳಿಸಿಕೊಳ್ಳುತ್ತೇನೆ ಎಂದು ಡಾಲಿ ಹೇಳಿದರು.

ತುಂಬಾನೆ ಖುಷಿ ಆಗುತ್ತಿದೆ. ಇಷ್ಟು ಜನರನ್ನು ನಾನು ಯಾವತ್ತೂ ನೋಡಿರಲಿಲ್ಲ. ಇವರಿಗೆ ಸ್ವಲ್ಪ ಪರಿಚಯ ಇರುತ್ತದೆ. ನಾನು ತುಂಬಾ ಭಾವುಕಳಾದೆ. ಎಲ್ಲರ ಆಶೀರ್ವಾದ ಪಡೆದು ತುಂಬಾನೇ ಖುಷಿ ಆದೆ ಎಂದು ಧನ್ಯತಾ ಹೇಳಿದರು.

ಅವರ ಕುಟುಂಬ ನನ್ನ ಕುಟುಂಬ ಇದ್ದಹಾಗೆ. ಒಂದು ವರ್ಷದಿಂದ ಇದ್ದೇವೆ. ನನ್ನ ಮನೆಗೆ ಹೋಗುವ ತರಾ ಫೀಲಿಂಗ್ ಇದೆ. ತುಂಬಾ ಖುಷಿಯಿಂ ನಾನು ಹೋಗೋಕೆ ಕಾಯ್ತಾ ಇದ್ದೇನೆ ಎಂದು ಧನ್ಯತಾ ಹೇಳಿದರು.

ತಾಳಿ ಕಟ್ಟುವಾಗ ನನಗೇನು ಭಯ ಆಗಿಲ್ಲ. ನಾನು ಹೇಗೆ ಇದ್ನೋ ಹಾಗೆಯೇ ಇದ್ದೆ. ಎಲ್ಲವೂ ಚೆನ್ನಾಗಿಯೇ ಆಯಿತು. ಮನೆಯವರು ಅಂದುಕೊಂಡ ಹಾಗೆಯೇ ಮದುವೆ ನಡೆಯಿತು. ಕುಟುಂಬದವರ ಬಹುದಿನದ ಕನಸು ನನಸಾಗಿದೆ ಎಂದು ಡಾಲಿ ಧನಂಜಯ ಹೇಳಿದರು.

Continue Reading
Advertisement

Trending

Copyright © 2025 Namma Kudla News

You cannot copy content of this page