Connect with us

BIG BOSS

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಅಬ್ಬರಿಸಿದ ಮ್ಯೂಟಂಟ್ ರಘು!

Published

on

ಮಂಗಳೂರು/ಬೆಂಗಳೂರು : ಕನ್ನಡ ಬಿಗ್ ಬಾಸ್ ಸೀಸನ್ 12 ಆರಂಭವಾಗಿ ನಾಲ್ಕು ವಾರ ಕಳೆದಿದೆ. ಬಿಗ್ ಬಾಸ್ ಮನೆಯಿಂದ ಮೂವರು ಹೊರಹೋಗಿದ್ದಾರೆ. ಮೂವರು ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದಾರೆ.

ಬಿಗ್ ಬಾಸ್ ಮನೆಗೆ ಬೆಳ್ಳಂಬೆಳಗ್ಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಮ್ಯೂಟಂಟ್ ರಘು ಎಂಟ್ರಿಕೊಟ್ಟಿದ್ದಾರೆ. ಎಂಟ್ರಿ ಕೊಡುತ್ತಲೆ ಅಬ್ಬರಿಸಿದ ರಘುವನ್ನು ಕಂಡು ಸ್ಪರ್ಧಿಗಳು ದಂಗಾಗಿದ್ದಾರೆ. ಅಷ್ಟೇ ಅಲ್ಲ, ಅಶ್ವಿನಿ ಜೊತೆ ಸಂಘರ್ಷವೇ ನಡೆದಿದೆ.

ಕಲರ್ಸ್ ಕನ್ನಡ ವಾಹಿನಿ ಇಂದು ಪ್ರೋಮೋ ಬಿಡುಗಡೆ ಮಾಡಿದೆ. ಅದ ರಲ್ಲಿ ಮ್ಯೂಟಂಟ್ ರಘು ಅಬ್ಬರ ಕಾಣಬಹುದು. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಅವರು, ನಿದ್ದೆಯಲ್ಲಿದ್ದ ಮನೆ ಮಂದಿಯನ್ನು ಎಬ್ಬಿಸಿದ್ದಾರೆ. ಇದು ರೆಸಾರ್ಟ್ ಅಲ್ಲ, ಬಿಗ್ ಬಾಸ್ ಮನೆ. ಎದ್ದೇಳಿ ಎಂದು ಕಿರುಚಿದ್ದಾರೆ.

ಅಲ್ಲದೇ, ಗಾರ್ಡನ್ ಏರಿಯಾದಲ್ಲಿ ಸ್ಪರ್ಧಿಗಳ ಮೇಲೆ ನೀರು ಸುರಿದು ಕಾರಣ ಕೊಟ್ಟಿದ್ದಾರೆ. ಇದೇ ವೇಳೆ ಅಶ್ವಿನಿ ಗೌಡ ಮೇಲೆಯೂ ನೀರು ಹಾಕುತ್ತಾರೆ. ಬಳಿಕ ಏಕವಚನದಲ್ಲಿಯೇ ಮಾತನಾಡಿಸುತ್ತಾರೆ. ಇದರಿಂದ ಕೋಪಗೊಂಡ ಅಶ್ವಿನಿ ಗೌಡ, ನೀವು ಒಬ್ಬ ಸ್ಪರ್ಧಿ, ಹಾಗೇ ಇರಿ’ ಎಂದು ರೇಗಿದ್ದಾರೆ. ಆಗ ಜಾಹ್ನವಿ, ನಮ್ಮ ಹತ್ತಿರ ಬಂದು ಏಕವಚನದಲ್ಲಿ ಮಾತನಾಡಿದರೆ ಇಲ್ಲಿಂದ ಹೋಗಬಹುದು ಎಂದಿದ್ದಾರೆ.

ಇದನ್ನೂ ಓದಿ : ದೊಡ್ಮನೆಯಿಂದ ಹೊರಬರುತ್ತಿದ್ದಂತೆ ಬೇಸರ ಹೊರಹಾಕಿದ ಮಂಜು ಭಾಷಿಣಿ

ಮ್ಯೂಟಂಟ್ ರಘು ಆಗಮನ ಮೊದಲ ದಿನವೇ ಕೋಲಾಹಲ ಸೃಷ್ಟಿಸಿದೆ. ಮುಂದೆ ಹೇಗಿರಲಿದೆ ಅನ್ನೋದು ಸದ್ಯದ ಕುತೂಹಲ.

 

BIG BOSS

ಕ್ಲೋಸ್‌ ಫ್ರೆಂಡ್ಸ್‌ ಈಗ ವೈರಿಗಳು; ಸೂರಜ್‌-ರಾಶಿಕಾ ಮಧ್ಯೆ ವಾರ್‌!

Published

on

BBK12: ಬಿಗ್‌ಬಾಸ್‌ ಮನೆಯಲ್ಲಿ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟ ಸೂರಜ್‌ ಹಾಗೂ ರಾಶಿಕಾ ಮಧ್ಯೆ ಆಪ್ತತೆ ಬೆಳೆದಿದೆ. ನಾವಿಬ್ಬರೂ ಲವರ್ಸ್‌ ಅಲ್ಲ ಎಂದು ಅವರು ಅನೇಕ ಬಾರಿ ಸ್ಪಷ್ಟನೆ ಕೊಟ್ಟರೂ, ಒಂದು ಬಾಂಧವ್ಯ ಅಂತೂ ಇದ್ದೇ ಇದೆ.


ಹೆಚ್ಚಾಗಿ ಸೂರಜ್‌ ಜತೆಯಲ್ಲೇ ಕಾಲ ಕಳೆಯುತ್ತಿದ್ದುದ್ದನ್ನು ಕಂಡು ಅವರಿಬ್ಬರ ನಡುವೆ ಪ್ರೀತಿ-ಪ್ರೇಮ ಮೂಡಿರುವುದಾಗಿ ವೀಕ್ಷಕರು ಅಭಿಪ್ರಾಯ ಪಟ್ಟಿದ್ದರು. ರಾಶಿಕಾ ಮತ್ತು ಸೂರಜ್‌ ನಡೆದುಕೊಳ್ಳುವ ರೀತಿ ತುಂಬಾ ಮುಜುಗರ ತರಿಸುತ್ತೆ ಎಂದೆಲ್ಲ ಕಮೆಂಟ್‌ ಮಾಡಿದ್ದರು.

ಮನೆಮಂದಿ ನಾಮಿನೇಟ್‌ ಮಾಡಲೂ ಮುಂದಾಗಿದ್ದರು. ಯಾವುದಕ್ಕೂ ತಲೆಕೆಡಿಸದೇ ಅವರ ಬಾಂಧವ್ಯ ಅದೇ ರೀತಿ ಮುಂದುವರಿಸಿದ್ದಾರೆ. ಅಷ್ಟೇ ಅಲ್ಲದೇ, ಬಿಗ್‌ಬಾಸ್‌ ಮನೆಯಲ್ಲಿ ರಾಶಿಕಾ ಆಟವನ್ನು ಬಹಳ ಚೆನ್ನಾಗಿ ಆಡುತ್ತಾರೆ. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲೂ ಸೂರಜ್‌ ಮತ್ತು ರಾಶಿಕಾ ಉತ್ತಮವಾಗಿ ಆಡಿದ್ದಾರೆ.

ಇದನ್ನೂ ಓದಿ: ವೀಕೆಂಡ್‌ನಲ್ಲಿ ಯಾವೆಲ್ಲಾ ವಿಷಯಗಳು ಚರ್ಚೆಗೆ ಬರಲಿವೆ?

ಆದರೆ, ಈ ವಾರ ರಾಶಿಕಾ ಕ್ಯಾಪ್ಟನ್‌ ಆಗುತ್ತಿದ್ದಂತೆ ಇಬ್ಬರೂ ಬದಲಾಗಿದ್ದಾರೆ. ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ರಾಶಿಕಾ ರಜತ್‌ ಜತೆ ಬೆರೆಯುತ್ತಿರುವುದು ಸೂರಜ್‌ಗೆ ಕೋಪ ತರಿಸಿದೆ. ಆ ಸಂದರ್ಭದ ಪ್ರೋಮೋನ ಕಲರ್ಸ್‌ ಕನ್ನಡ ಹಂಚಿಕೊಂಡಿದೆ.

Continue Reading

BIG BOSS

ವೀಕೆಂಡ್‌ನಲ್ಲಿ ಯಾವೆಲ್ಲಾ ವಿಷಯಗಳು ಚರ್ಚೆಗೆ ಬರಲಿವೆ?

Published

on

BBK12: ಎಂದರೆ ಸುದೀಪ್ ಸರ್ ಯಾವೆಲ್ಲ ವಿಷಯಗಳನ್ನು ಚರ್ಚೆಗೆ ತೆಗದುಕೊಳ್ಳುತ್ತಾರೆ ಎಂಬುದರ ಕುರಿತು ಬಿಗ್‌ಬಾಸ್ ಪ್ರಿಯರಲ್ಲಿ ಮೂಡುತ್ತದೆ. ಈ ವಾರವೂ ಅದು ಮುಂದುವರಿಯಲಿವೆ. ಈ ವೀಕೆಂಡ್‌ನಲ್ಲಿ ಚರ್ಚೆ ಮಾಡಲು ಸಾಕಷ್ಟು ವಿಷಯಗಳು ಇವೆ.


ಅಶ್ವಿನಿ ರಜತ್ ಕಿತ್ತಾಟ

ಬಿಗ್‌ಬಾಸ್ ಮನೆಯಲ್ಲಿ ಈ ವಾರ ನಾಮಿನೇಷನ್ ಪ್ರಕ್ರಿಯೆಯಲ್ಲಿ ಅಶ್ವಿನಿ ಗೌಡ ಮತ್ತು ರಜತ್ ಜಗಳ ಮಾಡಿಕೊಂಡಿದ್ದರು. ಮಾತುಗಳು ಮಿತಿ ಮೀರಿದ್ದವು. ಅಶ್ವಿನಿ ಗೌಡ ಕಚಡ ಎಂಬ ಕೆಟ್ಟ ಶಬ್ದ ಬಳಕೆ ಮಾಡಿದ್ದರು. ರಜತ್ ಕೂಡ ಆ ಸಂದರ್ಭದಲ್ಲಿ ತನ್ನ ನಾಲಿಗೆಯನ್ನು ಹರಿಬಿಟ್ಟಿದ್ದರು. ಧ್ರುವಂತ್‌ಗೂ ಬೈದಿದ್ದರು. ಅಶ್ವಿನಿ ಗೌಡ ಇಷ್ಟು ದಿನ ಸೈಲೆಂಟ್ ಆಗಿದ್ದು, ಈ ವಾರ ಅವರ ಮಾತುಗಳು ಹಿಡಿತ ತಪ್ಪಿತ್ತು. ಈ ವಿಷಯಗಳು ಪ್ರಮುಖವಾಗಿ ಚರ್ಚೆಗೆ ಬರಲಿವೆ ಎಂದೆನಿಸುತ್ತಿದೆ.

ಚೈತ್ರಾ ಕ್ಯಾಪ್ಟನ್ಸಿ

ಚೈತ್ರಾ ಉಸ್ತುವಾರಿಯಲ್ಲಿ ರಜತ್‌ಗೆ ಫೇವರಿಸಂ ಮಾಡಿದರು ಎಂಬ ಮಾತು ಕೇಳಿ ಬಂದಿತ್ತು. ಈ ವಿಷಯವನ್ನು ಅಶ್ವಿನಿ ಗೌಡ ಚರ್ಚೆಗೆ ತೆಗೆದಿದ್ದರು. ಹೀಗಾಗಿ, ಈ ವಿಷಯ ಪ್ರಸ್ತಾಪ ಆಗಬಹುದು. ಇನ್ನು ಬಜರ್ ಒತ್ತುವ ಕೊನೆಯ ರೌಂಡ್‌ನಲ್ಲಿ ಚೈತ್ರಾ ಎಡವಿದ್ದರು. ಮೊದಲು ಬಜರ್ ಒತ್ತಿದ್ದು ರಜತ್ ಆಗಿದ್ದರೂ, ಚೈತ್ರಾ ಅವಕಾಶವನ್ನು ಅಶ್ವಿನಿಗೆ ನೀಡಿದ್ದರು. ಈ ಎಡವಟ್ಟಿನ ಬಗ್ಗೆ ವೀಕೆಂಡ್‌ನಲ್ಲಿ ಚರ್ಚೆಗೆ ಪ್ರಮುಖ ವಿಷಯವಾಗಿದೆ.

ಗಿಲ್ಲಿ ಸೀಕ್ರೆಟ್ ಟಾಸ್ಕ್

ಈ ವಾರದಲ್ಲಿ ವಿಲನ್ ಗಿಲ್ಲಿಗೆ ಕೊಟ್ಟ ಸೀಕ್ರೆಟ್ ಟಾಸ್ಕ್‌ನಲ್ಲಿ ಕಾವ್ಯಾ ಶೈವ ಅವರನ್ನು ಅಳಿಸಿ ಉತ್ತಮವಾಗಿ ಆಡಿದ್ದರು. ಹಾಗೂ ಫೋಟೋಗಳನ್ನು ಕದಿಯುವ ಟಾಸ್ಕ್ ಕೂಡ ಉತ್ತಮವಾಗಿ ಮಾಡಿದ್ದಾರೆ. ಗಿಲ್ಲಿ ಭಾವನಾತ್ಮಕವಾಗಿ ಅನುಭವಿಸಿದ ಚಾಲೆಂಜ್ ಬಗ್ಗೆ ಈ ವಾರ ಚರ್ಚೆ ಆಗಬಹುದು.

ಇದನ್ನೂ ಓದಿ: ಕಾವ್ಯಾ ಅನುಮಾನ ನಿಜವಾಯ್ತು; ಎಲ್ಲರ ಮುಂದೆ ಗಿಲ್ಲಿ ಸೀಕ್ರೆಟ್‌ ರಿವೀಲ್‌!

ಅಷ್ಟೇ ಅಲ್ಲದೇ, ಮನೆಯಲ್ಲಿ ಈ ವಾರ ಎಲ್ಲರೂ ಉತ್ತಮವಾಗಿ ಟಾಸ್ಕ್ ಆಡಿದ್ದರು. ಈ ಬಗ್ಗೆ ಸುದೀಪ್ ಅವರು ಎಲ್ಲರಿಗೂ ಮೆಚ್ಚುಗೆ ಸೂಚಿಸುವ ಸಾಧ್ಯತೆಯೂ ಇದೆ. ಜತೆಗೆ ಕ್ಯಾಪ್ಟನ್ ರೂಂ ಬಾಗಿಲನ್ನು ಸುದೀಪ್ ಮುಚ್ಚಿಸಿದ್ದರು. ಈ ವಾರ ವಿಲನ್ ತೆಗಿಸಿದ್ದಾರೆ. ಈ ವಿಷಯದ ಬಗ್ಗೆ ಚರ್ಚೆ ಆಗಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಲ್ಲಿದ್ದರೂ, ಇದು ಬಿಗ್‌ಬಾಸ್ ಆಟದ ಸ್ಟ್ರೆಟಜಿ ಆಗಿರುವುದರಿಂದ ಈ ವಿಷಯ ಚರ್ಚೆ ಆಗೋದು ಅನುಮಾನವೇ.

Continue Reading

BIG BOSS

ಕಾವ್ಯಾ ಅನುಮಾನ ನಿಜವಾಯ್ತು; ಎಲ್ಲರ ಮುಂದೆ ಗಿಲ್ಲಿ ಸೀಕ್ರೆಟ್‌ ರಿವೀಲ್‌!

Published

on

BBK12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ರಿಯಾಲಿಟಿ ಶೋನಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಜತೆ ಒಳ್ಳೆಯ ಸ್ನೇಹ ಬೆಳೆದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅವರ ಮಧ್ಯೆ ಬಿರುಕು ಮೂಡಿತ್ತು. ಕಾವ್ಯಾ ಮನಸ್ಸಿಗೆ ನೋವಾಗುವ ರೀತಿಯಲ್ಲಿ ಗಿಲ್ಲಿ ನಡೆದುಕೊಂಡಿದ್ದರು. ಸತತವಾಗಿ ಚುಚ್ಚು ಮಾತುಗಳನ್ನಾಡಿದ ಗಿಲ್ಲಿಯ ವರ್ತನೆ ಕಂಡು ಕಾವ್ಯಾಗೆ ಸೀಕ್ರೆಟ್‌ ಟಾಸ್ಕ್ ಆಗಿರಬಹುದು ಎಂದು ಅನುಮಾನ ಮೂಡಿತ್ತು. ನಿಜವಾಗಿಯೂ ಗಿಲ್ಲಿ ಈ ರೀತಿ ಮಾತನಾಡುತ್ತಾರಾ ಎಂಬ ಸಂಶಯ ಎಲ್ಲರಿಗೂ ಕಾಡಿತ್ತು. ಆದರೆ ಈ ಅನುಮಾನ ನಿನ್ನೆಯ ಸಂಚಿಕೆಯಲ್ಲಿ ನಿಜ ಆಗಿದೆ.


ಬಿಗ್‌ಬಾಸ್‌ ಆಟದಲ್ಲಿ ಕಾವ್ಯಾ ಅವರನ್ನು ಅಳಿಸಬೇಕು ಎಂದು ಗಿಲ್ಲಿಗೆ ಸೀಕ್ರೆಟ್‌ ಟಾಸ್ಕ್ ನೀಡಲಾಗಿತ್ತು. ಆ ಕಾರಣದಿಂದ ಗಿಲ್ಲಿ ಚುಚ್ಚು ಮಾತುಗಳಿಂದ ಕಾವ್ಯಾನ ಹೀಯಾಳಿಸಿದ್ದರು. ಮಾತುಗಳನ್ನು ಸಹಿಸಿಕೊಳ್ಳಲಾಗದೇ ಕಾವ್ಯಾ ಕಣ್ಣೀರು ಹಾಕಿದ್ದರು. ಸ್ಪಂದನಾ ಜತೆ ಕಾವ್ಯಾ ತನ್ನ ನೋವನ್ನು ಹೇಳಿಕೊಂಡು ಅತ್ತಿದ್ದರು.

ಗಿಲ್ಲಿ ನಟ ನಿಜವಾಗಿಯೂ ಅಥವಾ ಸೀಕ್ರೆಟ್‌ ಟಾಸ್ಕ್‌ ನೀಡಿದ್ದಕ್ಕೆ ಈ ರೀತಿ ವರ್ತಿಸಿದ್ದರೋ ಎಂಬುದು ಕಾವ್ಯಾ ಅವರ ಅನುಮಾನ ಆಗಿತ್ತು. ಆದರೆ ಇದು ಸೀಕ್ರೆಟ್‌ ಟಾಸ್ಕ್‌ ಎಂದು ಎಲ್ಲರ ಎದುರು ಪ್ರಸ್ತಾಪಿಸಲಾಗಿದೆ. ಕಾವ್ಯಾ ಆ ರೀತಿ ಹೀಯಾಳಿಸುವಂತೆ ಮಾತನಾಡಿದ್ದು ಗಿಲ್ಲಿಯ ನಿಜವಾದ ವ್ಯಕ್ತಿತ್ವ ಅಲ್ಲ ಎಂಬುದು ಎಲ್ಲರ ಎದುರು ಸಾಬೀತಾಗಿದೆ.

ಇದನ್ನೂ ಓದಿ: ಅಭಿಮಾನಿಗಳ ಒತ್ತಾಯದ ಮೇರೆಗೆ ಗಿಲ್ಲಿಗೆ ಸಿಗುತ್ತಾ ಕಿಚ್ಚನ ಚಪ್ಪಾಳೆ..!?

ಗಿಲ್ಲಿ ನಟ ಅವರು ಈ ವಾರ ಚೆನ್ನಾಗಿ ಆಟ ಆಡಿದ್ದಾರೆ ಎಂದು ವೀಕ್ಷಕರು ತಿಳಿಸಿದ್ದಾರೆ. ಕಿಚ್ಚನ ಚಪ್ಪಾಳೆಯ ಫೋಟೋಗಳನ್ನು ಕದಿಯಬೇಕು ಎಂದು ಕೂಡ ಗಿಲ್ಲಿಗೆ ಸೀಕ್ರೆಟ್‌ ಟಾಸ್ಕ್‌ ನೀಡಲಾಗಿತ್ತು. ಅದನ್ನು ಕೂಡ ಗಿಲ್ಲಿ ಯಶಸ್ವಿಯಾಗಿ ಮಾಡಿದ್ದಾರೆ. ಈ ಎಲ್ಲ ಕಾರಣಗಳನ್ನು ಇಟ್ಟುಕೊಂಡು ಗಿಲ್ಲಿಗೆ ಈ ವಾರದ ಕಿಚ್ಚನ ಚಪ್ಪಾಳೆ ಸಿಗಬೇಕು ಎಂದು ವೀಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page