Connect with us

bangalore

ತವರಿನಲ್ಲಿಯೇ ಟಾರ್ಗೇಟ್; ಆರ್‌ಸಿಬಿ ಅಬ್ಬರಕ್ಕೆ ಬೆಚ್ಚಿಬಿದ್ದ ಮುಂಬೈ

Published

on

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯ 20ನೇ ಪಂದ್ಯದಲ್ಲಿ ಸೋಮವಾರ ಮುಂಬೈ ಇಂಡಿಯನ್ಸ್ ವಿರುದ್ಧ ಚಾಯಲ್‌ ಚಾಲೆಂಜರ್ಸ್‌ ಬೆಂಗಳೂರು 12 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಬರೋಬ್ಬರಿ 10 ವರ್ಷಗಳ ಬಳಿಕ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ವಿರುದ್ಧ ಗೆಲುವು ಸಾಧಿಸುವ ಮೂಲಕ ಆರ್‌ಸಿಬಿ ಹೊಸ ಇತಿಹಾಸ ಸೃಷ್ಟಿಸಿದೆ.

ಟಾಸ್‌ ಗೆದ್ದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಫೀಲ್ಡಿಂಗ್‌ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 221 ರನ್‌ ಗಳಿಸಿತು. ಬೃಹತ್‌ ಮೊತ್ತದ ಟಾರ್ಗೆಟ್‌ ಬೆನ್ನತ್ತಿದ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 209 ರನ್‌ ಗಳಿಸಲಷ್ಟೇ ಶಕ್ತಿವಾಯಿತು.

ಆರ್‌ಸಿಬಿ ಇನ್ನಿಂಗ್ಸ್ :

ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಉತ್ತಮ ಪ್ರದರ್ಶನ ನೀಡಿತ್ತು. ವಿರಾಟ್ ಕೊಹ್ಲಿ 67 ರನ್ ಸಿಡಿಸಿದರು. ದೇವದತ್ ಪಡಿಕ್ಕಲ್ 37 ರನ್ ಸಿಡಿಸಿದರೆ, ನಾಯಕ ರಜತ್ ಪಾಟೀದಾರ್ 64 ರನ್ ಸಿಡಿಸಿದರು. ಜಿತೇಶ್ ಶರ್ಮಾ 40 ರನ್ ಸಿಡಿಸಿದರು. ಈ ಮೂಲಕ ಈ ಮೂಲಕ ಆರ್‌ಸಿಬಿ 221 ರನ್ ಸಿಡಿಸಿತ್ತು.

ಮುಂಬೈ ಇನ್ನಿಂಗ್ಸ್ : 

ಆರ್‌ಸಿಬಿ 222ರನ್ ಟಾರ್ಗೆಟ್ ಮುಂಬೈ ತಂಡಕ್ಕೆ ಕಠಿಣ ಸವಾಲು ನೀಡಿತ್ತು. ಆರ್‌ಸಿಬಿ ಆರಂಭದಲ್ಲೇ ಉತ್ತಮ ದಾಳಿ ಸಂಘಟಿಸಿತ್ತು. ರೋಹಿತ್ ಶರ್ಮಾಹಾಗೂ ರಿಯಾನ್ ರಿಕೆಲ್ಟನ್ ಆರಂಭ ನಿರೀಕ್ಷಿತ ಮಟ್ಟ ತಲುಪಲಿಲ್ಲ. ರೋಹಿತ್ ಶರ್ಮಾ 17 ರನ್ ಹಾಗೂ ರಿಯಾನ್ 17 ರನ್ ಸಿಡಿಸಿ ನಿರ್ಗಮಿಸಿದರು. ಜೋಶ್ ಹೇಜಲ್‌ವುಡ್, ಯಶ್ ದಯಾಳ್ ಹಾಗೂ ಕ್ರುನಾಲ್ ಪಾಂಡ್ಯ ದಾಳಿಯಿಂದ ಆರ್‌ಸಿಬಿ ಮೇಲುಗೈ ಸಾಧಿಸಿತು. ವಿಲ್ ಜ್ಯಾಕ್ಸ್ ಕೂಡ ಅಬ್ಬರಿಸಲಿಲ್ಲ. 22 ರನ್ ಸಿಡಿಸಿ ನಿರ್ಗಮಿಸಿದರು. ಸೂರ್ಯಕುಮಾರ್ ಕೂಡ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಲು ಆರ್‌ಸಿಬಿ ಅವಕಾಶ ನೀಡಲಿಲ್ಲ. 28 ರನ್‌ಗೆ ವಿಕೆಟ್ ಕೈಚೆಲ್ಲಿದರು.

ತಿಲಕ್ ವರ್ಮಾ ಹಾಗೂ ಹಾರ್ದಿಕ್ ಬ್ಯಾಟಿಂಗ್ ಆರ್‌ಸಿಬಿ ತಲೆನೋವು ಹೆಚ್ಚಿಸಿತು. ಹಾರ್ದಿಕ್ ಒಂದರ ಮೇಲೊಂದರಂತೆ ಸಿಕ್ಸರ್ ಮೂಲಕ ಅಬ್ಬರಿಸಿದರೆ, ತಿಲಕ್ ವರ್ಮಾ ಬೌಂಡರಿ ಮೂಲಕ ಮುಂಬೈ ಇಂಡಿಯನ್ಸ್‌ಗೆ ನೆರವಾದರು. ಇವರಿಬ್ಬರ ಜೊತೆಯಾಟ ಆರ್‌ಬಿಯಿಂದ ಪಂದ್ಯವನ್ನು ನಿಧಾನವಾಗಿ ಕೈಜಾರುವಂತೆ ಮಾಡಿತು. ತಿಲಕ್ ವರ್ಮಾ 26 ಎಸೆತದಲ್ಲಿ ಹಾಫ್ ಸೆಂಚುರಿ ಪೂರೈಸಿದರು.

ಭುವನೇಶ್ವರ್ ಸ್ವಿಂಗ್ : 

ಅಬ್ಬರಿಸುತ್ತಿದ್ದ ಈ ಜೊತೆಯಾಟಕ್ಕೆ ಭುವನೇಶ್ವರ್ ಕುಮಾರ್ ಬ್ರೇಕ್ ಹಾಕಿದರು. ತಿಲಕ್ ವರ್ಮಾ 56 ರನ್ ಸಿಡಿಸಿ ಔಟಾದರು. ಈ ವೇಳೆ ಮುಂಬೈ ಇಂಡಿಯನ್ಸ್ ಗೆಲುವಿಗೆ 14 ಎಸೆತದಲ್ಲಿ 34 ರನ್ ಬೇಕಿತ್ತು. ಜೊತೆಗೆ ಹಾರ್ದಿಕ್ ಪಾಂಡ್ಯ ಕ್ರೀಸ್‌ನಲ್ಲಿದ್ದರು. ಪಾಂಡ್ಯ 42 ರನ್ ಸಿಡಿಸಿ ಔಟಾಗುತ್ತಿದ್ದಂತೆ ಮುಂಬೈ ಸಪ್ಪೆಯಾಯಿತು. ಬಳಿಕ ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹಾರ್ ವಿಕೆಟ್ ಪತನಗೊಂಡಿತು. ಕೊನೆಗೂ ಮುಂಬೈ 9 ವಿಕೆಟ್ ಕಳೆದುಕೊಂಡು 209 ರನ್ ಸಿಡಿಸಿತು. ಇದರೊಂದಿಗೆ ಆರ್‌ಸಿಬಿ 12 ರನ್ ಗೆಲುವು ದಾಖಲಿಸಿತು

bangalore

ಬರಹದ ಮೂಲಕ ಮಹಿಳೆಯರಿಗೆ ಧೈರ್ಯ ತುಂಬಿದ ಆಟೋ ಡ್ರೈವರ್; ಅಂತದ್ದೇನಿದೆ?

Published

on

ಬೆಂಗಳೂರು: ಇತ್ತೀಚೆಗೆ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಹಾಗೂ ವಿವಿಧ ವಾಹನಗಳಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿರುವ ಹಲವು ಉದಾಹರಣೆಗಳು ಇದೆ. ರಾತ್ರಿ ವೇಳೆ ಕೆಲಸ ಮುಗಿಸಿ ಮನೆಗೆ ಬರುವ ಮಹಿಳೆಯರಲ್ಲಿ ಅಸುರಕ್ಷತೆಯ ಭಾವನೆ ಹೆಚ್ಚಾಗಿದೆ.


ಇಂತಹ ವಾತಾವರಣದ ನಡುವೆ ಬೆಂಗಳೂರಿನಲ್ಲಿ ಓರ್ವ ಆಟೋ ಚಾಲಕನ ವ್ಯಕ್ತಿತ್ವ ಎಲ್ಲರ ಗಮನ ಸೆಳೆದಿದೆ. ಚಾಲಕನ ಹಿಂದಿನ ಭಾಗದಲ್ಲಿ, ನಾನೂ ಒಬ್ಬ ಅಣ್ಣ/ತಂದೆ. ನಿಮ್ಮ ಸುರಕ್ಷತೆಯೇ ಮುಖ್ಯ. ಆರಾಮವಾಗಿ ಕುಳಿತುಕೊಳ್ಳಿ ಎಂದು ಬರೆದು ಆಟೋ ಚಾಲಕರೊಬ್ಬರು ಪ್ರಯಾಣಿಕರಿಗೆ ಧೈರ್ಯ ತುಂಬಿದ್ದಾರೆ.

ಈ ರೀತಿಯ ಬರಹವನ್ನು ಗಮನಿಸಿದ ಯುವತಿಯೊಬ್ಬರು, ರಾತ್ರಿ 12 ಗಂಟೆಗೆ ರ್ಯಾಪಿಡೊ ಆಟೋದಲ್ಲಿ ಪ್ರಯಾಣಿಸುತ್ತಿದ್ದೆ. ಆಟೋದಲ್ಲಿ ಕುಳಿತ ತಕ್ಷಣ ಈ ಬರಹ ಓದಿದೆ. ಆಗ ನನಗೆ ನಿಜವಾಗಿಯೂ ಸುರಕ್ಷಿತ ಭಾವನೆ ಮೂಡಿತು ಎಂದು ತಮ್ಮ ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ವಿಳಾಸ ಕೇಳುವ ನೆಪದಲ್ಲಿ ವೃದ್ಧೆ ಕುತ್ತಿಗೆಯಿಂದ ಚಿನ್ನದ ಸರ ದೋಚಿದ ಕಳ್ಳರು

ಆದರೆ, ಆಟೋ ಚಾಲಕನ ಹೆಸರು, ವಿವರಗಳನ್ನು ಅವರು ಹಂಚಿಕೊಂಡಿಲ್ಲ. ಆತನ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

Continue Reading

bangalore

ಲಕ್ಷಾಂತರ ಬೆಲೆ ಬಾಳುವ ಗಿಳಿಯನ್ನು ಕಾಪಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವಕ

Published

on

ಬೆಂಗಳೂರು : ಹೈಟೆಕ್ಷನ್ ವೈರ್ ಕಂಬದ ಮೇಲೆ ಕುಳಿತಿದ್ದ ಸುಮಾರು 2 ಲಕ್ಷ ರೂ. ಬೆಲೆ ಬಾಳುವ ಫಾರಿನ್ ಗಿಳಿಯನ್ನು ಕಾಪಾಡಲು ಹೋಗಿ ವಿದ್ಯುತ್ ಶಾಕ್ ಹೊಡೆದು ಯುವಕನೋರ್ವ ಸಾವನ್ನಪ್ಪಿರುವಂತಹ ಘಟನೆ ಗಿರಿನಗರದ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.


ಅರುಣ್ ಕುಮಾರ್(32) ಮೃತಪಟ್ಟವರು.

ಗಿಳಿಯೊಂದು ಗಿರಿನಗರದ ಖಾಸಗಿ ಅಪಾರ್ಟ್‌ಮೆಂಟ್‌ ಒಳಭಾಗದಲ್ಲಿರುವ ಹೈಟೆಕ್ಷನ್ ವೈರ್ ಕಂಬದ ಮೇಲೆ ಕುಳಿತಿತ್ತು. ಅದನ್ನು ಕಂಡ ಅರುಣ್ ಕುಮಾರ್ ಅಪಾರ್ಟ್‌ಮೆಂಟ್‌ ಕಾಪೌಂಡ್ ಮೇಲೆ ನಿಂತು ಸ್ಟೀಲ್ ಪೈಪ್‌ಗೆ ಕಟ್ಟಿಗೆ ಸೇರಿಸಿ ಓಡಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ 66 ಸಾವಿರ ಕೆವಿ ವಿದ್ಯುತ್ ವೈರ್‌ನಿಂದ ಹೊಡೆದ ಶಾಕ್‌ಗೆ ಅರುಣ್ ಕಾಪೌಂಡ್‌ನಿಂದ ಕೆಳಗೆ ಬಿದ್ದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ತಾಯಿಯನ್ನು ನಿಂದಿಸಿದ ಅಣ್ಣ; ಕೊಂ*ದೇ ಬಿಟ್ಟ ತಮ್ಮ!

ಘಟನಾ ಸ್ಥಳಕ್ಕೆ ಬೆಸ್ಕಾಂ ಮತ್ತು ಕೆಇಬಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಪಾರ್ಟ್‌ಮೆಂಟ್ ಒಳಗೆ 65 ಸಾವಿರ ಕೆವಿ ಸಾಮರ್ಥ್ಯದ ವೈರ್​ಗಳು ಇರುವುದಕ್ಕೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Continue Reading

bangalore

ಬೆಂಗಳೂರನ್ನು ಭಾರತದಲ್ಲೇ ಅತ್ಯುತ್ತಮ ಆಹಾರ ನಗರ ಎಂದ ವಿದೇಶಿಗ!

Published

on

ಬೆಂಗಳೂರು : ಅದೇಷ್ಟೋ ಮಂದಿ ಆಹಾರ ಪ್ರೇಮಿಗಳು ಇದ್ದಾರೆ. ಪ್ರವಾಸಿ ತಾಣ ವೀಕ್ಷಿಸುವ ಜತೆಗೆ ಅಲ್ಲಿಯ ಆಹಾರವನ್ನು ಸವಿಯಲೆಂದು ಪ್ರವಾಸ ಹೋಗುತ್ತಾರೆ. ಅದೇ ರೀತಿ ವಿದೇಶಿ ಪ್ರಜೆಯೊಬ್ಬರು ಬೆಂಗಳೂರಿನ ಗರಿಗರಿಯಾದ ದೋಸೆ ಹಾಗೂ ಮೃದುವಾದ ಇಡ್ಲಿಯನ್ನು ಸವಿದು ಬೆಂಗಳೂರು ಭಾರತದ ಅತ್ಯುತ್ತಮ ಆಹಾರ ನಗರ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲ್ಲಿನ ತಿಂಡಿ ತಿನಿಸುಗಳಿಗೆ ಫುಲ್ ಫಿದಾ ಆಗಿರುವ ವಿದೇಶಿ ಪ್ರಜೆ ತನ್ನ ಅಭಿಪ್ರಾಯವನ್ನು ಹೇಳುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನೆಟ್ಟಿಗರು ಈ ವಿದೇಶಿಗನ ಅಭಿಪ್ರಾಯವನ್ನು ಒಪ್ಪಿಕೊಂಡಿದ್ದಾರೆ.


ಭಾರತದ ವಿವಿಧ ನಗರಗಳು ಸೇರಿದಂತೆ ಪಾಕಿಸ್ತಾನಕ್ಕೂ ತೆರಳಿ ಅಲ್ಲಿನ ಪ್ರವಾಸಿ ತಾಣಗಳು ಹಾಗೂ ಆಹಾರಗಳನ್ನು ಸವಿದಿದ್ದರು. ಹಗ್ (hugh.abroad) ಹೆಸರಿನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರಶ್ನೋತ್ತರ ಸರಣಿಯನ್ನು ನಡೆಸಿದ್ದು, ಈ ವೇಳೆ ಬಳಕೆದಾರರೊಬ್ಬರು ಪ್ರತಿಯೊಂದು ದೇಶದಲ್ಲೂ ಅತ್ಯುತ್ತಮವಾದ ಆಹಾರ ನಗರವನ್ನು ಆಯ್ಕೆ ಮಾಡಿ ಎಂದು ಹೇಳಿದ್ದಾರೆ.

ಕೇವಲ ಬೆಳಗ್ಗಿನ ಉಪಾಹಾರ ಸಂಸ್ಕೃತಿಯಿಂದಾಗಿ ಭಾರತದ ಅತ್ಯುತ್ತಮ ಆಹಾರ ನಗರ ಬೆಂಗಳೂರು. ಬೆಂಗಳೂರಿನ ಬೆಳಗ್ಗಿನ ಉಪಾಹಾರವಾದ ಇಡ್ಲಿ ಸಾಂಬಾರ್, ಮಸಾಲಾ ದೋಸೆಯನ್ನು ಫಿಲ್ಟರ್ ಕಾಫಿಯೊಂದಿಗೆ ಸವಿದಿದ್ದಾರೆ. ದೋಸೆಗಳು ತುಂಬಾ ಗರಿಗರಿಯಾಗಿವೆ. ಇಡ್ಲಿಯನ್ನು ಬಾಯಿಲ್ಲಿಟ್ಟರೆ ಕರಗುತ್ತದೆ ಎಂದಿದ್ದಾರೆ. ಇನ್ನು ಕರಾಚಿಯನ್ನು ಪಾಕಿಸ್ತಾನದ ಅತ್ಯುತ್ತಮ ಆಹಾರ ನಗರವೆಂದು ಆಯ್ಕೆ ಮಾಡಿದ್ದಾರೆ.

ಇದನ್ನೂ ಓದಿ: IND vs SA: ರೋಹಿತ್-ಕೊಹ್ಲಿ ಆರ್ಭಟ; 2ನೇ ODI ಪಂದ್ಯಕ್ಕೂ ಮುನ್ನ ಬಿಸಿಸಿಐ ದಿಢೀರ್ ಸಭೆ!

ಈ ವೀಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರ, ಒಮ್ಮೆ ಈ ತಿನಿಸುಗಳನ್ನು ಆಸ್ವಾದಿಸಿದರೆ ಮತ್ತೆ ಮತ್ತೆ ನೀವು ಬರುತ್ತೀರಿ ಎಂದಿದ್ದಾರೆ. ಮತ್ತೊಬ್ಬರು, ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಎಂದು ಕಾಮೆಂಟ್ ಮಾಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page