Connect with us

LATEST NEWS

2ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಮುಂಬೈ; ಸಿಕ್ಕ ಬಹುಮಾನ ಮೊತ್ತ ಎಷ್ಟು?

Published

on

ಮಂಗಳೂರು/ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್‌ನ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅದು ಕೂಡ ಮೂರನೇ ಬಾರಿ ಫೈನಲ್‌ಗೇರಿದ್ದ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸುವ ಮೂಲಕ. ಫೈನಲ್‌ನಲ್ಲಿ ಮತ್ತೆ ಸೋತಿದ್ದಕ್ಕೆ ಡೆಲ್ಲಿ ಆಟಗಾರ್ತಿಯರು ಕಣ್ಣೀರು ಹಾಕಿದ್ದಾರೆ.


ಚಾಂಪಿಯನ್ ಮುಂಬೈ ತಂಡಕ್ಕೆ ಬಿಸಿಸಿಐ ಎಷ್ಟು ಹಣ ಘೋಷಣೆ ಮಾಡಿದೆ ಎಂಬುದು ಎಲ್ಲರ ಕೂತುಹಲಕ್ಕೆ ಕಾರಣವಾಗಿತ್ತು. ನಿನ್ನೆ (ಮಾ.15) ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಕ್ಯಾಪ್ಟನ್ ಮೆಗ್ ಲ್ಯಾನಿಂಗ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 149 ರನ್ ಕಲೆಹಾಕಿತು.

ಈ ಸುಲಭ ಟಾರ್ಗೆಟ್​ ಬೆನ್ನು ಬಿದ್ದ ಡೆಲ್ಲಿ ಕ್ಯಾಪಿಟಲ್ಸ್​ ಬ್ಯಾಟಿಂಗ್​ನಲ್ಲಿ ಭಾರೀ ಹಿನ್ನಡೆ ಅನುಭವಿಸಿ, ಗುರಿ ಮುಟ್ಟಲಾಗಲಿಲ್ಲ. 9 ವಿಕೆಟ್​ಗೆ​ 141 ರನ್​ ಮಾತ್ರ ಗಳಿಸಿ, ಕೇವಲ 8 ರನ್​ನಿಂದ ಟ್ರೋಫಿ ಕೈ ಚೆಲ್ಲಿತು. ಇದಕ್ಕೂ ಮುನ್ನ 2023 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಮುಂಬೈ ಪಡೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

ಇದನ್ನೂ ಓದಿ: ಆರ್‌ಸಿಬಿಗೆ ಆಘಾತ; ಕೈಕೊಟ್ಟ ಸ್ಟಾರ್ ಪ್ಲೇಯರ್

ಇದೀಗ ಮತ್ತೊಮ್ಮೆ ಡೆಲ್ಲಿ ವಿರುದ್ಧ ಗೆದ್ದು ಮುಂಬೈ ಇಂಡಿಯನ್ಸ್ ಟ್ರೋಫಿ ಎತ್ತಿ ಹಿಡಿದಿದೆ. ಫೈನಲ್‌ನಲ್ಲಿ ರೋಚಕ ಗೆಲುವು ಪಡೆದ ಮುಂಬೈ ಇಂಡಿಯನ್ಸ್ ಆಟಗಾರ್ತಿಯರು ಮೈದಾನದಲ್ಲಿ ಸಂಭ್ರಮಿಸಿದರು. ಕಪ್ ಗೆದ್ದ ಖುಷಿಯಲ್ಲಿ ಆಟಗಾರ್ತಿಯರ ಜೊತೆ ನಿತಾ ಅಂಬಾನಿ ಸೇರಿದಂತೆ ಸಿಬ್ಬಂದಿ ವರ್ಗ ಎಲ್ಲರೂ ಎಂಜಾಯ್ ಮಾಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಗೆದ್ದುಬೀಗಿದ ಮುಂಬೈ ಇಂಡಿಯನ್ಸ್‌ಗೆ 6 ಕೋಟಿ ರೂಪಾಯಿಗಳ ಬಹುಮಾನ ಮೊತ್ತವನ್ನು ನೀಡಲಾಗಿದೆ. ಇನ್ನು ರನ್ನರ್‌ ಅಪ್ ಡೆಲ್ಲಿ ತಂಡ 3 ಕೋಟಿ ರೂಪಾಯಿ ಪಡೆದಿದೆ.

LATEST NEWS

ಸಿಡಿಲು ಬಡಿದು ಕೂಲಿ ಕಾರ್ಮಿಕ ಸಾವು

Published

on

ಹರಪನಹಳ್ಳಿ: ಸಿಡಿಲು ಬಡಿದು ಕೂಲಿ ಕಾರ್ಮಿಕನೊಬ್ಬ ಸಾವನ್ನಪ್ಪಿದ ಘಟನೆ ಹರಪನಹಳ್ಳಿಯ ತೆಲಿಗಿ ಗ್ರಾಮದ ಚೆನ್ನಗಿರಿಯಲ್ಲಿ ನಡೆದಿದೆ.

ಹಾಲೇಶಪ್ಪ (48) ಮೃತಪಟ್ಟ ಕಾರ್ಮಿಕ. ಜೊತೆಗೆ ಆತನೊಂದಿಗಿದ್ದ ಆಕಳು ಕೂಡ ಸಿಡಿಲು ಬಡಿದು ಸತ್ತು ಹೋಗಿದೆ.

ಜಮೀನೊಂದರಲ್ಲಿ ಹಾಲೇಶಪ್ಪನು ಆಕಳನ್ನು ಮೇಯಿಸುತ್ತಿದ್ದ. ಈ ವೇಳೆ ಗುಡುಗು ಮಿಂಚು ಸಹಿತ ಸುರಿದ ಭಾರೀ ಮಳೆಗೆ ಹಾಲೇಶಪ್ಪನಿಗೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸ್ಥಳಕ್ಕೆ ತಹಶೀಲ್ದಾರ ಬಿ ವಿ ಗಿರೀಶ್ ಬಾಬು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಲುವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

LATEST NEWS

ಕ್ರಿಕೆಟಿಗ ಅಖ್ತರ್ ಸೇರಿದಂತೆ ಪಾಕಿಸ್ತಾನದ 16 ಯೂಟ್ಯೂಬ್‌ ಚಾನೆಲ್‌ಗಳು ಬ್ಯಾನ್

Published

on

ಮಂಗಳೂರು/ನವದೆಹಲಿ : ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯಿಂದ ಭಾರತ  ಹಾಗೂ ಪಾಕ್ ನಡುವಿನ ಸಂಬಂಧ ಇನ್ನಷ್ಟು ಹದಗೆಟ್ಟಿದೆ. ಭಾರತ ಪಾಕ್ ವಿರುದ್ಧ ಹಲವು ಕ್ರ,ಮಕ್ಕೆ ಮುಂದಾಗಿದೆ.  ಈ ನಡುವೆ ಭಾರತದ ವಿರುದ್ಧ ದ್ವೇಷ ಹಾಗೂ ನಕಲಿ ಸುದ್ದಿ ಪ್ರಸಾರ ಮಾಡುತ್ತಿರುವ ಪಾಕಿಸ್ತಾನದ 16 ಯೂಟ್ಯೂಬ್ ಚಾನೆಲ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ ಎಂದು ವರದಿಯಾಗಿದೆ.

ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುವ, ಸೇನೆಯ ವಿರುದ್ಧ ಪ್ರಚೋದನಕಾರಿ, ಭಾರತದ ಸಾರ್ವಭೌಮತ್ವ ಮತ್ತು ಭದ್ರತೆಯನ್ನು ದುರ್ಬಲಗೊಳಿಸುವ ಗುರಿಯನ್ನು ಹೊಂದಿರುವ ಸುಳ್ಳು ಸುದ್ದಿಗಳನ್ನು ಹರಡಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.

ಪಾಕಿಸ್ತಾನದ ಪ್ರಮುಖ ಸುದ್ದಿ ಸಂಸ್ಥೆಗಳು ಮತ್ತು ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಸೇರಿದಂತೆ 16 ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಶಿಕ್ಷಕನಾಗಿದ್ದ ಆದಿಲ್ ಹುಸೇನ್ ಉಗ್ರನಾಗಿದ್ದು ಹೇಗೆ?

ದಿ ಪಾಕಿಸ್ತಾನ್ ರೆಫರೆನ್ಸ್, ಸಮಾ ಸ್ಪೋರ್ಟ್ಸ್, ಉಜೈರ್ ಕ್ರಿಕೆಟ್. ರಾಜಿ ನಾಮಾ, ಡಾನ್ ನ್ಯೂಸ್, ಸಮಾ ಟಿವಿ, ಎಆರ್‌ವೈ ನ್ಯೂಸ್, ಬೋಲ್ ನ್ಯೂಸ್, ಜಿಯೋ ನ್ಯೂಸ್, ರಫ್ತಾರ್ ಮತ್ತು ಸುನೋ ನ್ಯೂಸ್‌ನಂತಹ ಪ್ರಮುಖ ಪಾಕಿಸ್ತಾನಿ ಸುದ್ದಿವಾಹಿನಿಗಳನ್ನು ನಿಷೇಧಿಸಲಾಗಿದೆ.

 

 

 

Continue Reading

LATEST NEWS

ಶಿಕ್ಷಕನಾಗಿದ್ದ ಆದಿಲ್ ಹುಸೇನ್ ಉಗ್ರನಾಗಿದ್ದು ಹೇಗೆ?

Published

on

ಮಂಗಳೂರು/ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯ ‘ಮಾಸ್ಟರ್‌ಮೈಂಡ್‌’ಗಳ ಪೈಕಿ ಕಾಶ್ಮೀರದ ಸ್ಥಳೀಯ ನಿವಾಸಿ ಆದಿಲ್ ಹುಸೇನ್ ಥೋಕರ್ ಹೆಸರು ಕೂಡ ಕೇಳಿ ಬಂದಿದೆ.

ಆದಿಲ್ ಹುಸೇನ್, ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದಾನೆ ಎಂದು ಎನ್‌ಐಎ ಹೇಳಿದೆ.

ಮಾಧ್ಯಮಗಳ ವರದಿಯ ಪ್ರಕಾರ, ಆದಿಲ್ ಅನಂತನಾಗ್ ಜಿಲ್ಲೆಯ ಗುರಿ ಗ್ರಾಮಕ್ಕೆ ಸೇರಿದವನು ಎಂದು ತಿಳಿದುಬಂದಿದೆ. ಮೃದು ಭಾಷಿಯಾಗಿದ್ದ ಆತ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕನಾಗಿದ್ದ. ಆದರೆ ಈತ ಇಂತಹ ದೊಡ್ಡ ಪ್ರಮಾಣದ ದಾಳಿಗೆ ಸಂಚು ರೂಪಿಸುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

ಶಿಕ್ಷಕನಾಗಿದ್ದ ಆದಿಲ್ ಹುಸೇನ್ ಕ್ರಮೇಣ ಮೂಲಭೂತವಾದದತ್ತ ಆಕರ್ಷಿತನಾಗಿದ್ದ. 2010ರಲ್ಲಿ, ಗುಂಡಿನ ಚಕಮಕಿಗಳಲ್ಲಿ ಹತರಾದ ಉಗ್ರರ ಅಂತ್ಯಕ್ರಿಯೆಗಳಲ್ಲಿ ಈತ ಪಾಲ್ಗೊಳ್ಳುತ್ತಿದ್ದ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಪಹಲ್ಗಾಮ್ ಉಗ್ರ ದಾಳಿ ವಿರೋಧಿಸಿ ಪ್ರತಿಭಟನೆ; ಕುತ್ತಿಗೆ ಕತ್ತರಿಸುವುದಾಗಿ ಬೆದರಿಕೆ ಹಾಕಿದ ಪಾಕ್ ಸೇನಾ ಅಧಿಕಾರಿ

2018ರಲ್ಲಿ ಕಾನೂನುಬದ್ದವಾಗಿಯೇ ವೀಸಾ ಪಡೆದು ಆತ ಪಾಕಿಸ್ತಾನಕ್ಕೆ ತೆರಳಿದ್ದ. ವೈಯಕ್ತಿಕ ಕಾರಣಗಳಿಗಾಗಿ ಅಲ್ಲಿಗೆ ತೆರಳಿದ್ದ ಎಂದು ತೋರಿಕೆಗೆ ಕಂಡುಬಂದರೂ ನಂತರ ಆತ ಎಲ್‌ಇಟಿ ಸೇರಿದ್ದ. ಕಳೆದ ವರ್ಷ ಗುಪ್ತವಾಗಿ ಭಾರತ ಪ್ರವೇಶಿಸಿದ್ದ. ದೋಡಾ ಮತ್ತು ಕಿಶ್ತವಾಡ ಪ್ರದೇಶಗಳಲ್ಲಿ ಸಕ್ರಿಯವಾಗಿದ್ದ ಎಂದು ವರದಿಯಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page