Connect with us

DAKSHINA KANNADA

ಮೂಡುಬಿದಿರೆ : ತಾಯಿ ಮೊಬೈಲ್ ಕೊಡಲಿಲ್ಲವೆಂದು ಬಾವಿಗೆ ಹಾರಿ ವಿದ್ಯಾರ್ಥಿನಿ ಜೀವಾಂತ್ಯ..!

Published

on

ಮೂಡುಬಿದಿರೆ : ತಾನು ಕೇಳಿದಾಗ ತಾಯಿ ಮೊಬೈಲ್‌ ಕೊಡಲಿಲ್ಲ ಎನ್ನುವ ಸಿಟ್ಟಿನಲ್ಲಿ ತಂದೆ-ತಾಯಿ ಹೊರಗೆ ಹೋಗಿದ್ದ ವೇಳೆ ಅಪ್ರಾಪ್ತ ವಯಸ್ಕ ಮಗಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡುಬಿದಿರೆಯ ವಾಲ್ಪಾಡಿ ಗ್ರಾಮದ ನಾಗಂದಡ್ಡದಲ್ಲಿ ನಡೆದಿದೆ.

ಉಮೇಶ್‌ ಪೂಜಾರಿ ಅವರ ಪುತ್ರಿ ಯುತಿ (15) ಆತ್ಮಹತ್ಯೆ ಮಾಡಿಕೊಂಡಾಕೆ. ಅಳಿಯೂರು ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದರು.

ಭಾನುವಾರ ಬೆಳಗ್ಗೆ ತಂದೆ ಕೂಲಿ ಕೆಲಸಕ್ಕೆಂದು ಹೊರಹೋಗಿದ್ದರು. ಸ್ವಲ್ಪ ಹೊತ್ತಿನ ಬಳಿಕ ತಾಯಿ ಮತ್ತು ಕಿರಿಯ ಮಗಳು ಶಿರ್ತಾಡಿಗೆ ಹೊರಟು ಹಿರಿಯ ಮಗಳು ಯುತಿಯನ್ನು ಕೂಡ ಬರಲು ಹೇಳಿದಾಗ ನನಗೆ ಬರೆಯಲು ಇದೆ.

ನಾನು ಬರುವುದಿಲ್ಲ ಎಂದ ಅವಳು ತಾಯಿಯ ಕೈಯಲ್ಲಿದ್ದ ಮೊಬೈಲ್‌ ಕೊಡುವಂತೆ ಕೇಳಿದ್ದಳು. ಮೊಬೈಲ್‌ ಈಗ ಕೊಡುವುದಿಲ್ಲ,

ಶಿರ್ತಾಡಿಯಿಂದ ವಾಪಸು ಬಂದ ಮೇಲೆ ಕೊಡುತ್ತೇನೆ ಎಂದು ಹೇಳಿ ತಾಯಿ ಹಾಗೂ ಕಿರಿಯ ಮಗಳು ಹೊರಟು ಹೋದರೆನ್ನಲಾಗಿದೆ.

ಅವರು ನಂತರ ಮನೆಗೆ ವಾಪಸಾದಾಗ ಮನೆಯಲ್ಲಿ ಮಗಳು ಇರಲಿಲ್ಲ. ಹುಡುಕಾಡಿದಾಗ ಅಪರಾಹ್ನ ಸುಮಾರು 4 ಗಂಟೆ ಹೊತ್ತಿಗೆ ಮನೆ ಹತ್ತಿರದ ಬಾವಿಯಲ್ಲಿ ಆಕೆಯ ಶವ ಪತ್ತೆಯಾಗಿದೆ.

ಓದಿನಲ್ಲಿ ಪ್ರತಿಭಾನ್ವಿತಳಾಗಿದ್ದ ಯುತಿ ಪಠ್ಯೇತರ ವಿಷಯಗಳಲ್ಲೂ ಮುಂದಿದ್ದಳು. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

DAKSHINA KANNADA

ಪ್ರಿಯಾಂಕ್ ಖರ್ಗೆ ಅವರಿಗೆ ಸರ್ವಜ್ಙ ಸಿಂಡ್ರೋಮ್ ಇದೆ: ಶಾಸಕ ಭರತ್ ಶೆಟ್ಟಿ

Published

on

ಮಂಗಳೂರು: ಗೃಹಸಚಿವರು ಮಂಗಳೂರನ್ನು ಉಡ್ತಾ ಪಂಜಾಬ್ ಆಗ್ಲಿಕ್ಕೆ ಬಿಡೋದಿಲ್ಲ ಎಂಬುವುದಾಗಿ ಹೇಳಿಕೆ ನೀಡಿದ್ದರು. ವಿಧಾನಸಭೆಯಲ್ಲಿ ಪ್ರತೀ ಬಾರಿ ನಮ್ಮ ಕೋರಿಕೆ ಇದ್ದದ್ದು ಕೂಡಾ ಅದೇ. ಜಿಲ್ಲೆಯಲ್ಲಿ ಡ್ರಗ್ಸ್ ಪೂರೈಕೆಗೆ ಕಡಿವಾಣ ಹಾಕಬೇಕು ಅಂತ. ಪೊಲೀಸರು ಡ್ರಗ್ಸ್ ಸೀಜ್ ಮಾಡ್ತಾರೆ. ಆರೋಪಿಗಳನ್ನು ಅರೆಸ್ಟ್ ಮಾಡ್ತೀರಿ. ಆದರೆ 6 ತಿಂಗಳ ಬಳಿಕ ಮತ್ತೆ ಸೀಜ್ ಬಗ್ಗೆ ಸುದ್ದಿ ಇರೋದಿಲ್ಲ. ಡ್ರಗ್ಸ್ ಸಪ್ಲೈ ನಿರಂತರವಾಗಿ ಆಗ್ತಾನೇ ಇದೆ ಎಂದು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಅವರು ವಾಗ್ದಾಳಿಯನ್ನು ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗೆದ್ದ ಕೂಡಲೇ ಬಿಜೆಪಿಗರಿಗೆ, ಆರೆಸ್ಸೆಸ್ ನವರಿಗೆ ಬೈಯ್ಯೋದನ್ನು ಪ್ರಿಯಾಂಕ್ ಖರ್ಗೆ ಅವರು ಅಭ್ಯಾಸ ಮಾಡಿಕೊಂಡಿದ್ದಾರೆ. ಅವರಿಗೆ ಸ್ವಲ್ಪ ಸರ್ವಜ್ಞ ಸಿಂಡ್ರೋಮ್ ಇದೆ. ಅಂದ್ರೆ ಎಲ್ಲಾ ತಿಳಿದವರು ಅನ್ನೋ ಭಾವನೆ. ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ಲಿಂಗರಾಜು ಕಣ್ಣಿ ಅವರನ್ನು ಡ್ರಗ್ಸ್ ವ್ಯವಹಾರದ ಆರೋಪದಲ್ಲಿ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಅವರ ಡ್ರಗ್ಸ್ ಕೇಸನ್ನು ಡೈವರ್ಟ್ ಮಾಡಲು ಕಾಂಗ್ರೆಸ್ ಸರ್ಕಾರದಿಂದ ವಿವಿಧ ರೀತಿಯ ಪ್ರಯತ್ನ ಮಾಡುತ್ತಿದೆ. ಪ್ರಿಯಾಂಕ್ ಖರ್ಗೆ ಅವರು ಸಾಧ್ಯವಾದರೆ ತನಿಖೆಗೆ ಸಹಕರಿಸಲಿ ಇಲ್ಲವಾದಲ್ಲಿ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

ಪ್ರಕರಣದ ಹಿಂದೆ ಸ್ಥಾಪಿತ ಹಿತಾಸಕ್ತಿಗಳು, ದೊಡ್ಡವರ ಕೈವಾಡವಿದೆ. ಪ್ರಕರಣವನ್ನು ಸರಕಾರ ಲಘುವಾಗಿ ಪರಿಗಣಿಸಿದೆ. ಇಷ್ಟು ದೊಡ್ಡ ಪ್ರಕರಣವನ್ನು ವಿಷಯಾಂತರ ಮಾಡಲು ಮಾಜಿ ಸಚಿವ ಬೈರತಿ ಬಸವರಾಜ್ ಅವರನ್ನು ಪ್ರಕರಣವೊಂದರಲ್ಲಿ ಫಿಕ್ಸ್ ಮಾಡಲಾಗಿದೆ ಎಂದು ಆರೋಪಿಸಿದರು. ಮಂಗಳೂರಿನಲ್ಲಿ ಐಟಿ ಪಾರ್ಕ್ ಸ್ಥಾಪಿಸುತ್ತೇವೆ ಎಂದು ಭರವಸೆ ನೀಡಿದ ಪ್ರಿಯಾಂಕ್ ಖರ್ಗೆ ಇದುವರೆಗೆ ಕ್ರಮ ಕೈಗೊಂಡಿಲ್ಲ ಎಂದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಮುಖಂಡ ವಿಕಾಸ್ ಪುತ್ತೂರು, ಜಿಲ್ಲಾ ವಕ್ತಾರ ರಾಜಗೋಪಾಲ ರೈ, ಕಾರ್ಯಾಲಯ ಕಾರ್ಯದರ್ಶಿ ಗುರುಚರಣ್ ಉಪಸ್ಥಿತರಿದ್ದರು.

Continue Reading

DAKSHINA KANNADA

ಉಪ್ಪಿನಂಗಡಿ: ಪತ್ನಿಯನ್ನು ಚೂ*ರಿಯಿಂದ ಇ*ರಿದು ಕೊಂ*ದ ಪತಿ

Published

on

ಉಪ್ಪಿನಂಗಡಿ: ಮಗ ಮತ್ತು ಮಗಳ ಮುಂದೆಯೇ ಪತ್ನಿಯ ಎದೆಗೆ ಚಾಕುವಿನಿಂದ ಇ*ರಿದು ಅಮಾನವೀಯವಾಗಿ ಹತ್ಯೆ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಉಪ್ಪಿನಂಗಡಿ ಪೊಲೀಸ್‌ ಠಾಣೆ ವ್ಯಾಪ್ತಿಯ ತೆಕ್ಕಾರು ಗ್ರಾಮದ ಬಾಜಾರು ಎಂಬಲ್ಲಿ ನಡೆದಿದೆ. ಝೀನತ್ (40) ಕೊಲೆಗೀಡಾದ ಮಹಿಳೆಯಾಗಿದ್ದು ಪತಿ ರಫೀಕ್ (47) ಹತ್ಯೆಯ ಆರೋಪಿಯಾಗಿದ್ದಾನೆ.


ರಫೀಕ್‌ ಮತ್ತು ಝೀನತ್ ಅವರ ಮದುವೆ 18 ವರ್ಷದ ಹಿಂದೆ ನೆರವೇರಿತ್ತು. ವಿದೇಶದಲ್ಲಿ ಉದ್ಯೋಗದಲ್ಲಿದ್ದ ರಫೀಕ್ ಎರಡು ವರ್ಷಗಳ ಹಿಂದೆ ಅಲ್ಲಿನ ಉದ್ಯೋಗ ತ್ಯಜಿಸಿ ಊರಿಗೆ ಬಂದು ತೆಕ್ಕಾರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಂಪತಿಯ ಮಧ್ಯೆ ಕಳೆದ ಕೆಲವು ತಿಂಗಳಿಂದ ಮನಸ್ತಾಪ ಉಂಟಾಗಿತ್ತು. ಇಂದು ಬೆಳಗ್ಗೆ ಇಬ್ಬರ ಮಧ್ಯೆ ನಡೆದ ಜಗಳ ವಿಕೋಪಕ್ಕೆ ಹೋಗಿ ರಫೀಕ್‌ ಪತ್ನಿ ಝೀನತ್‌ ಳನ್ನು ಚಾಕುವಿನಿಂದ ಇರಿದಿದ್ದಾನೆ.

ಇದನ್ನೂ ಓದಿ: ಮಂಗಳೂರು: ಹೃದಯಾಘಾತದಿಂದ ಯುವಕ ಸಾವು

ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಝೀನತ್‌ ಳನ್ನು ಸ್ಥಳೀಯರು ಮತ್ತು ಸಂಬಂಧಿಕರು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಝೀನತ್‌ ಮೃ*ತ ಪಟ್ಟಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

DAKSHINA KANNADA

ಮಂಗಳೂರು: ಹೃದಯಾಘಾತದಿಂದ ಯುವಕ ಸಾವು

Published

on

ಮಂಗಳೂರು: ಟಯರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಹೃದಯಾಘಾತಕ್ಕೊಳಗಾಗಿ ಉಳ್ಳಾಲದ ಪಂಡಿತ್ ಹೌಸ್ ನಿವಾಸಿಯೋರ್ವರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಮಂಗಳೂರು ಪದವಿನಂಗಡಿ ಅಜ್ಜನಕಟ್ಟೆ ಸಮೀಪದ ಟಯರ್ ಅಂಗಡಿಯಲ್ಲಿ ನಡೆದಿದೆ.

ವಿಜೇತ ನಗರ ಗಂಡಿ ನಿವಾಸಿ ವೇಣುಗೋಪಾಲ ಅವರು ಮೃತಪಟ್ಟ ಅವಿವಾಹಿತರಾಗಿದ್ದಾರೆ.

ಇದನ್ನೂ ಓದಿ: ಇರಾಕ್‌ನ ಶಾಪಿಂಗ್ ಮಾಲ್‌ನಲ್ಲಿ ಏಕಾಏಕಿ ಬೆಂಕಿ – 50 ಮಂದಿ ಸಾವು

ಇವರು ಹಲವು ವರ್ಷಗಳಿಂದ ಟಯರ್ ಅಂಗಡಿಯಲ್ಲಿ ಟೆಕ್ನಿಷಿಯನ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಇದೀಗ ಇವರು ತಾಯಿ, ಸೋದರಿ ಮತ್ತು ಸಹೋದರನನ್ನು ಅಗಲಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page