Connect with us

FILM

ಧನುಷ್‌ ಜೊತೆ ಮೃಣಾಲ್‌ ಠಾಕೂರ್‌ ಮದುವೆ..? ಮೌನ ಮುರಿದು ನಟಿ ಹೇಳಿದ್ದೇನು!?

Published

on

Film: ತಮಿಳು ನಟ ಹಾಗೂ ನಟಿ ಮೃಣಾಲ್‌ ಠಾಕುರ್‌ ಡೇಟಿಂಗ್‌ನಲ್ಲಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಇವರಿಬ್ಬರು ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ನಟಿ ಮೃಣಾಲ್‌ ಠಾಕುರ್‌ ತಮ್ಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ಈ ವಿಚಾರದ ಕುರಿತು ಮೌನ ಮುರಿದಿದ್ದಾರೆ.


ಇತ್ತೀಚೆಗೆ, ನಟಿ ಮೃಣಾಲ್‌ ಠಾಕೂರ್‌ ತಮ್ಮ ವೃತ್ತಿ ಬದುಕಿಗಿಂತ ಹೆಚ್ಚಾಗಿ ವೈಯಕ್ತಿಕ ಜೀವನದ ಕಾರಣಕ್ಕಾಗಿಯೇ ಆಗಾಗ ಸುದ್ದಿಯಾಗುತ್ತಿದ್ದಾರೆ. ಇದೀಗ ನಟ ಧನುಷ್‌ ಅವರೊಂದಿಗೆ ಮೃಣಾಲ್‌ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಧನುಷ್‌-ಮೃಣಾಲ್‌ ಮದುವೆ ವದಂತಿಗೆ ಕಾರಣವೇನು?
ಕೆಲ ತಿಂಗಳ ಹಿಂದೆ ಸೋಶಿಯಲ್‌ ಮೀಡಿಯಾದಲ್ಲಿ ನಟ ಧನುಷ್‌ ಅವರು ಹಂಚಿಕೊಂಡ ಫೋಟೋಗೆ ಮೃಣಾಲ್‌ ಠಾಕೂರ್‌ ಅವರು, ಸರ್‌.. ಎಂಥ ಅದ್ಬುತ ಪಯಣ. ಬ್ಲಾಕ್‌ ಬಸ್ಟರ್‌, ಕಲ್ಟ್‌, ಲೆಗೆಸಿ ಎಂದು ಕಾಮೆಂಟ್‌ ಮಾಡಿದ್ದರು. ಅದಕ್ಕೆ ಧನುಷ್‌ ಪ್ರತಿಕ್ರಿಯೆ ನೀಡಿದ್ದಾರೆ. ಅಪ್ಪುಗೆ ಮತ್ತು ಬಿಳಿ ಹಾರ್ಟ್‌ ಎಮೋಜಿಯನ್ನು ಧನುಷ್‌ ಕಾಮೆಂಟ್‌ ಮಾಡಿದ್ದಾರೆ. ಈ ಪೋಸ್ಟ್‌ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಸೌತ್‌ನಿಂದ ಹಿಡಿದು ಬಾಲಿವುಡ್‌ವರೆಗೂ ಈ ಸುದ್ದಿ ಗಾಳಿಯಲ್ಲಿ ಗುಲ್ಲೆಬ್ಬಿಸಿತ್ತು.

ಡೇಟಿಂಗ್‌ ಗಾಸಿಪ್‌
ಸನ್ ಆಫ್ ಸರ್ದಾರ್-2′ ಸಿನಿಮಾದ ಪ್ರೀಮಿಯರ್ ವೇಳೆ ಮೃಣಾಲ್ ಠಾಕೂರ್ ಮತ್ತು ಧನುಷ್ ಅವರು ಜೊತೆಯಾಗಿ ಕಾಣಿಸಿಕೊಂಡಿದ್ದರು. `ತೇರೆ ಇಷ್ಕ್ ಮೇ’ ಸಿನಿಮಾದ ಶೂಟಿಂಗ್ ಮುಗಿದಾಗಲೂ ಧನುಷ್ ಜೊತೆ ಮೃಣಾಲ್ ಠಾಕೂರ್ ಅವರು ಇದ್ದರು. ಧನುಷ್ ಅವರ ಸಹೋದರಿಯ ಇನ್‌ಸ್ಟಾಗ್ರಾಮ್ ಖಾತೆಯನ್ನು ಕೂಡ ಮೃಣಾಲ್ ಅವರು ಫಾಲೋ ಮಾಡಲು ಆರಂಭಿಸಿದ್ದಾರೆ. ಈ ಎಲ್ಲ ಕಾರಣದಿಂದ ಧನುಷ್ ಮತ್ತು ಮೃಣಾಲ್ ಬಗ್ಗೆ ಡೇಟಿಂಗ್ ಗಾಸಿಪ್ ಹಬ್ಬಿತ್ತು.

ವದಂತಿ ಬಗ್ಗೆ ಮೌನ ಮುರಿದ ಮೃಣಾಲ್!‌
ಇದೀಗ ಈ ಎಲ್ಲಾ ವಿಚಾರಗಳ ಕುರಿತು ಮೌನ ಮುರಿದಿರುವ ಮೃಣಾಲ್‌ ಠಾಕುರ್‌, ನನ್ನ ಕೆಲಸವು ನನ್ನನ್ನು ಪರಿಚಯಿಸಬೇಕೇ ಹೊರತು ಗಾಸಿಪ್‌ನಿಂದ ಅಲ್ಲ ಎಂದು ನಾನು ಯಾವಾಗಲು ನಂಬಿದ್ದೇನೆ. ಆದರೆ, ಇಂದು ನಾನು ಎಂದಿಗೂ ಬರೆಯದ ಕಥೆಗಳು, ಎಂದಿಗೂ ಮಾತನಾಡದ ಸಂಭಾಷಣೆಗಳು ಮತ್ತು ಎಂದಿಗೂ ತೆಗೆದುಕೊಳ್ಳದ ನಿರ್ಧಾರಗಳೊಂದಿಗೆ ನನ್ನ ಹೆಸರು ಬರುತ್ತಿರುವುದನ್ನು ನಾನು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮದುವೆ ವಿವಾದ ಎಂದು ಕರೆಯಲ್ಪಡುವ ಒಂದು ವಿಷಯ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ಆದರೆ, ಧನುಷ್ ಯಾವಾಗಲು ನನಗೆ ಸಹೋದರನಿದ್ದಂತೆ. ನಾವಿಬ್ಬರೂ ಹಂಚಿಕೊಳ್ಳುವುದು ಪರಸ್ಪರ ಗೌರವ ಮತ್ತು ವೃತ್ತಿಪರತೆ, ಅದಕ್ಕಿಂತ ಬೇರೇನೂ ಇಲ್ಲ. ಆದರೆ, ಜನರು ಮಹಿಳೆಯ ಪ್ರಯಾಣವನ್ನು ಒಪ್ಪಿಕೊಳ್ಳುವ ಬದಲು ಆಕೆಯ ವೈಯಕ್ತಿಕ ಜೀವನದ ಬಗ್ಗೆ ಕಥೆಗಳನ್ನು ರಚಿಸಲು ಏಕೆ ಉತ್ಸುಕರಾಗಿದ್ದಾರೆ ಎಂದು ನಾನು ಆಶ್ಚರ್ಯ ಪಡುತ್ತೇನೆ ಎಂದರು.

ನಾನು ಮೌನವಾಗಿರಲು ಕಾರಣ ಎಲ್ಲವನ್ನೂ ಮರೆಮಾಡುವ ಸಲುವಾಗಿ ಅಲ್ಲ. ಬದಲಾಗಿ ನನ್ನ ವೈಯಕ್ತಿಕ ಜೀವನಕ್ಕೆ ಸಾರ್ವಜನಿಕ ಸಮ್ಮತಿ ಅಗತ್ಯವಿಲ್ಲ ಎಂದು ನಾನು ನಂಬಿದ್ದೇನೆ. ಆದಾಗ್ಯೂ, ಆಡಿಷನ್‌ಗಳು, ನಿರಾಕರಣೆಗಳು, ದೀರ್ಘ ರಾತ್ರಿಗಳ ಹೋರಾಟ, ನಿರಂತರ ಆತ್ಮವಿಶ್ವಾಸದ ಮೂಲಕ ನಾನು ಇಂದು ಈ ಹಂತವನ್ನು ತಲುಪಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: BBK 12 ಜಾಹ್ನವಿ ಅವರ ಈ ಕೆಲಸಕ್ಕೆ ಈಗ ಎಲ್ಲೆಡೆ ಮೆಚ್ಚುಗೆಯ ಸುರಿಮಳೆ

ಮುಂದುವರಿದು.. ಆದರೆ, ನನ್ನ ಈ ಪ್ರಯಾಣವನ್ನು ವದಂತಿಯಾಗಿ ಕಡಿಮೆ ಮಾಡುವುದು ಅನ್ಯಾಯ. ಸಾಮಾಜಿಕ ಮಾಧ್ಯಮವು ಎಲ್ಲರಿಗೂ ಧ್ವನಿ ನೀಡುತ್ತದೆ. ಅದು ಜವಾಬ್ದಾರಿಯನ್ನು ಸಹ ಬಯಸುತ್ತದೆ. ಕೆಲವು ಕ್ಲಿಕ್‌ಗಳು, ಲೈಕ್‌ಗಳು ಮತ್ತು ಹಂಚಿಕೆಗಳು ಮನಸ್ಸಿಗೆ ಘಾಸಿ ಮಾಡುತ್ತಿವೆ. ಆದರೆ, ಅವು ಕೆಲವೊಂದು ಜನರ ಮೇಲೆ ಪರಿಣಾಮ ಬೀರುತ್ತವೆ. ನಾನು ಸ್ಪಷ್ಟವಾಗಿ ತಿಳಿಸುತ್ತಿದ್ದೇನೆ ಈ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಹೇಳಿದ್ದಾರೆ.

FILM

ನಟ ರಕ್ಷಿತ್ ಶೆಟ್ಟಿ ಸುಳಿವೇ ಇಲ್ಲ..ಎಲ್ಲಿದ್ದಾರೆ, ಏನು ಮಾಡ್ತಿದ್ದಾರೆ-ಗೆಳೆಯ ಹೇಮಂತ್ ಏನಂದ್ರು ಗೊತ್ತಾ…?

Published

on

ಕರಾವಳಿ ಮೂಲದ ಸಿಂಪಲ್ ಸ್ಟಾರ್, ಅದ್ಭುತ ಸಿನಿಮಾ ಪ್ರೇಮಿ ರಕ್ಷಿತ್ ಶೆಟ್ಟಿ ಅವರ ಸಪ್ತ ಸಾಗರದಾಚೆ ಎಲ್ಲೊ-ಸೈಡ್ ಬಿ’ ಸಿನಿಮಾ ಬಿಡುಗಡೆ ಆಗಿ ಮೂರು ವರ್ಷಗಳಾಗುತ್ತಾ ಬಂದಿದೆ. ಆ ಸಿನಿಮಾದ ಬಿಡುಗಡೆ ವೇಳೆ ಕಾಣಿಸಿಕೊಂಡಿದ್ದ ರಕ್ಷಿತ್ ಶೆಟ್ಟಿ ನಂತರ ಸುಳಿವೇ ಸಿಗದೇ ಕಣ್ಮರೆಯಾಗಿದ್ದಾರೆ.

‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾಕ್ಕೆ ಮುಂಚೆಯೇ ‘ರಿಚರ್ಡ್ ಆಂಟೊನಿ’ ಸಿನಿಮಾ ಘೋಷಿಸಿದ್ದ ರಕ್ಷಿತ್ ಶೆಟ್ಟಿ ಅದರ ಚಿತ್ರೀಕರಣ ಇನ್ನೂ ಆರಂಭಿಸಿಲ್ಲ. ರಕ್ಷಿತ್ ಅಭಿಮಾನಿಗಳು ನೆಚ್ಚಿನ ನಟನ ಬಗ್ಗೆ ಪೋಸ್ಟ್​​ಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ  ರಕ್ಷಿತ್ ಕಾಣೆ ಆಗಿರುವ ಬಗ್ಗೆ ಮೀಮ್​​ಗಳು ಸಹ ಹರಿದಾಡುತ್ತಿರುತ್ತವೆ.

ಇದೀಗ ರಕ್ಷಿತ್ ಅವರ ಆಪ್ತ ಗೆಳೆಯ ಹೇಮಂತ್ ರಾವ್, ರಕ್ಷಿತ್ ಶೆಟ್ಟಿಯ ಬಗ್ಗೆ ಮಾತನಾಡಿದ್ದಾರೆ. ಹೇಮಂತ್ ರಾವ್ ಭಾಗವಹಿಸಿದ್ದ ಸಂದರ್ಶನವೊಂದರಲ್ಲಿ ವ್ಯಕ್ತಿಯೊಬ್ಬರು, ‘ರಕ್ಷಿತ್ ಶೆಟ್ಟಿ ಅವರು ಹೇಗಿದ್ದಾರೆ? ಅವರಿಗೆ ಒಂದು ಕರೆ ಮಾಡಿ’ ಎಂದು ಮನವಿ ಮಾಡಿದ್ದಾರೆ. ಅಭಿಮಾನಿಯ ಮನವಿಗೆ ಹೇಮಂತ್ ರಾವ್ ಸ್ಪಂದಿಸಿದ್ದಾರೆ. ಹೇಮಂತ್ ರಾವ್ ಅವರು, ರಕ್ಷಿತ್ ಶೆಟ್ಟಿ ಅವರಿಗೆ ಕರೆ ಮಾಡಲು ನಿರಾಕರಿಸಿದ್ದಾರೆ. ನಾನು ಅವರ ಖಾಸಗಿತನವನ್ನು ಹಾಳು ಮಾಡಲು ಇಷ್ಟಪಡುವುದಿಲ್ಲ, ಅವರ ಖಾಸಗಿತನವನ್ನು ಗೌರವಿಸಬೇಕಾದುದು ನನ್ನ ಕರ್ತವ್ಯ ಎಂದಿದ್ದಾರೆ.

ಜೊತೆಗೆ  ‘ರಕ್ಷಿತ್ ಶೆಟ್ಟಿ ಆರಾಮವಾಗಿದ್ದಾರೆ. ಬಹಳ ಚೆನ್ನಾಗಿದ್ದಾರೆ. ಯಾರೂ ಅದರ ಬಗ್ಗೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಅವರು ಒಂದು ಅದ್ಭುತವಾದ ಚಿತ್ರಕತೆಯನ್ನು ಬರೆಯುತ್ತಿದ್ದಾರೆ. ‘ಗೇಮ್ ಆಫ್ ಥ್ರೋನ್ಸ್’ನಲ್ಲಿ ಒಂದು ಡ್ರ್ಯಾಗನ್ ಬರುತ್ತದಲ್ಲ, ಅದೇ ರೀತಿ ರಕ್ಷಿತ್ ಸಹ ಅದ್ಧೂರಿಯಾಗಿ ಎಂಟ್ರಿ ಕೊಡಲಿದ್ದಾರೆ’ ಎಂದು ಅಭಿಮಾನಿಗಳಿಗೆ ರಕ್ಷಿತ್ ಶೆಟ್ಟಿ ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ.

 

 

Continue Reading

FILM

‘ಪ್ರತಿದಿನ ನನ್ನನ್ನೇ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ’; ಅಭಿಮಾನಿಗಳ ಮನಗೆದ್ದ ರಾಧಿಕಾ ಪಂಡಿತ್ ಪೋಸ್ಟ್!

Published

on

ಕನ್ನಡ ಚಿತ್ರರಂಗದ ಮಾದರಿ ದಂಪತಿಗಳಾದ ಯಶ್ ಮತ್ತು ರಾಧಿಕಾ ಪಂಡಿತ್ ಈ ಬಾರಿಯ ವ್ಯಾಲೆಂಟೈನ್ಸ್ ದಿನವನ್ನು ಪ್ರೀತಿಯಿಂದ ಆಚರಿಸಿದ್ದಾರೆ. ರಾಧಿಕಾ ಪಂಡಿತ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪತಿ ಯಶ್ ಅವರೊಂದಿಗೆ ಇರುವ ಸುಂದರವಾದ ಫೋಟೋವನ್ನು ಹಂಚಿಕೊಳ್ಳುವ ಮೂಲಕ ವಿಶ್ ಮಾಡಿದ್ದಾರೆ.


ರಾಧಿಕಾ ಪಂಡಿತ್‌ ಮತ್ತು ಯಶ್‌ ಇಬ್ಬರೂ ಧಾರಾವಾಹಿ ಮೂಲಕ ಪರಿಚಯ ಆಗಿದ್ದು, ಅಲ್ಲಿ ಇಬ್ಬರೂ ಒಟ್ಟಿಗೆ ನಟಿಸಿ, ಬಳಿಕ ಒಟ್ಟಾಗಿ ಸಿನಿಮಾ ಮಾಡಿದರು. ತೆರೆಮೇಲೆ ಜೋಡಿಯಾಗಿದ್ದ ಇವರು ತೆರೆಹಿಂದೆಯೂ ಕಪಲ್‌ ಆಗಿದ್ದಾರೆ. ಇದೀಗ ಯಶ್‌ ಅವರ ಕುರಿತು ರಾಧಿಕಾ ಪಂಡಿತ್‌ ಹಂಚಿಕೊಂಡಿರೋ ಪೋಸ್ಟ್‌ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಯಶ್ ಅವರಿಗೆ ಧನ್ಯವಾದ ಅರ್ಪಿಸಿರುವ ರಾಧಿಕಾ, ‘ನನ್ನ ಅಭದ್ರತೆಯನ್ನು ತೆಗೆದು ಹಾಕಿದವನು ನೀನು. ನಿನ್ನ ಕಣ್ಣುಗಳಲ್ಲಿ ದಣಿವು, ಬೇರೆ ಯಾರೂ ಗಮನಿಸದ ತ್ಯಾಗ, ದೂರು ನೀಡದೆ ನೀನು ಹೊತ್ತುಕೊಂಡ ದೀರ್ಘ ಭಾರ ನನಗೆ ಕಾಣುತ್ತಿದೆ. ಅದು ನಮಗಾಗಿ ಎಂದು ನನಗೆ ತಿಳಿದಿದೆ. ನನ್ನನ್ನು ದಿನವೂ ಆಯ್ಕೆ ಮಾಡಿದ್ದಕ್ಕೆ ನಿನಗೆ ಧನ್ಯವಾದ, ಹ್ಯಾಪಿ ವ್ಯಾಲೆಂಟೈನ್ಸ್ ಡೇ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮದುವೆಗೆಂದು ಬಂದಿದ್ದ ಮಹಿಳೆ ನಾಪತ್ತೆ: ಪೊಲೀಸರ ವಿರುದ್ಧ ಕುಟುಂಬಸ್ಥರ ಆಕ್ರೋಶ

ಇಬ್ಬರೂ ಜೊತೆಯಾಗಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಪ್ರೇಮಿಗಳ ದಿನದ ಶುಭಾಶಯ ಕೋರಿದ್ದಾರೆ. ರಾಧಿಕಾ ಪಂಡಿತ್ ಅವರ ಈ ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಸಾವಿರಾರು ಅಭಿಮಾನಿಗಳು ಈ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.

Continue Reading

FILM

ಅವಳಿ ಮಕ್ಕಳ ಹೆಸರು ರಿವೀಲ್ ಮಾಡಿದ ನಟ ರಾಮ್ ಚರಣ್; ವ್ಹಾವ್ ಅಂದ್ರು ಫ್ಯಾನ್ಸ್!

Published

on

ಮಂಗಳೂರು/ತೆಲಂಗಾಣ : ಸದ್ಯ ನಟ ರಾಮ್ ಚರಣ್ ಮನೆಯಲ್ಲಿ ಡಬಲ್ ಸಂಭ್ರಮವಿದೆ. ಇತ್ತೀಚೆಗಷ್ಟೆ ರಾಮ್  ಚರಣ್ ಪತ್ನಿ ಉಪಾಸನಾ ಕೊನಿಡೆಲ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಒಂದು ಹೆಣ್ಣು, ಒಂದು ಗಂಡು ಮಗು ಆಗಿರುವ ಬಗ್ಗೆ ನಟ ಚಿರಂಜೀವಿ  ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.

ಇದೀಗ ಮಕ್ಕಳ ಹೆಸರನ್ನು ರಿವೀಲ್ ಮಾಡಲಾಗಿದೆ. ಸಾಂಪ್ರದಾಯಿಕ ಹೆಸರನ್ನು ಮಕ್ಕಳಿಗೆ ಆಯ್ಕೆ ಮಾಡಿಕೊಂಡಿದ್ದಾರೆ ದಂಪತಿ. ಮಕ್ಕಳ ಸುಂದರ ಹೆಸರನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹೆಸರೇನು?

ಗಂಡು ಮಗುವಿಗೆ ಶಿವರಾಮ್ ಎಂದು ಹೆಸರಿಟ್ಟರೆ,  ಹೆಣ್ಣು ಮಗುವಿಗೆ ಅನ್ವೀರಾ ದೇವಿ ಎಂದು ನಾಮಕರಣ ಮಾಡಲಾಗಿದೆ.  ಹೆಸರಿನ ವಿಶೇಷತೆ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ. ಅಪರಿಮಿತ ಸಂತೋಷ ಮತ್ತು ದೈವಿಕ ಅನುಗ್ರಹದಿಂದ ನಮ್ಮ ಎರಡು  ಪುಟ್ಟ ಆಶೀರ್ವಾದಗಳ ಸುಂದರ ಹೆಸರುಗಳನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ

‘ಶಿವ ರಾಮ ಕೊನಿಡೆಲ  ಮತ್ತು ಅನ್ವೀರಾ ದೇವಿ ಕೊನಿಡೆಲ’

ಶಿವ ರಾಮ ಎರಡು ಶಾಶ್ವತ ಆದರ್ಶಗಳ ಆಳವಾದ ಸಂಗಮವಾಗಿದೆ. ‘ಶಿವ’ ಶಿವ ಶಂಕರ ವರ ಪ್ರಸಾದ್(ಮೆಗಾಸ್ಟಾರ್ ಚಿರಂಜೀವಿ ಅವರ ಮೂಲ ಹೆಸರು) ಅವರಿಂದ ಪ್ರೇರಿತವಾಗಿದೆ. ಇದು ಆಂತರಿಕ ಶಕ್ತಿ, ಆಧ್ಯಾತ್ಮಿಕ ಆಳ ಮತ್ತು ಸ್ಥಿರತೆಯನ್ನು ಪ್ರತಿಬಿಂಬಿಸುತ್ತದೆ.

ರಾಮ್ ಚರಣ್ ಹೆಸರಿನ ‘ರಾಮ’ ಪದವನ್ನು ಆಯ್ಕೆ ಮಾಡಲಾಗಿದ್ದು, ರಾಮ ಎನ್ನುವುದು ಸದಾಚಾರ, ಕರುಣೆ ಮತ್ತು ನೈತಿಕ ಧೈರ್ಯವನ್ನು ಸಾಕಾರಗೊಳಿಸುತ್ತದೆ. ಒಟ್ಟಿನಲ್ಲಿ, ಈ ಹೆಸರು ಆಂತರಿಕ ಶಕ್ತಿ ಮತ್ತು ಜವಾಬ್ದಾರಿಯುತ ಕ್ರಿಯೆಯ ನಡುವಿನ ಸಾಮರಸ್ಯವನ್ನು ಸೂಚಿಸುತ್ತದೆ.

ಅನ್ವೀರಾ ದೇವಿ ದೈವಿಕ ಸ್ತ್ರೀತ್ವದ ಅಪರೂಪದ ಮತ್ತು ಶಕ್ತಿಯುತ ಅಭಿವ್ಯಕ್ತಿ. ಕನಕ ದುರ್ಗಾ ದೇವಿಯ ಆಶೀರ್ವಾದದಿಂದ ಪ್ರೇರಿತವಾದ ಅನ್ವೀರಾ ನಿರ್ಭಯತೆ, ಸ್ಥಿತಿಸ್ಥಾಪಕತ್ವ ಮತ್ತು ದೈವಿಕ ರಕ್ಷಣೆಯನ್ನು ಪ್ರತಿನಿಧಿಸುತ್ತದೆ. ಅನುಗ್ರಹ, ಧೈರ್ಯ ಮತ್ತು ಅಚಲ ಶಕ್ತಿಯನ್ನು ಪ್ರತಿಬಿಂಬಿಸುವ ಹೆಸರು.

ಇದನ್ನೂ ಓದಿ : ಕಾವ್ಯ ಶೈವ ಹಿಂದೆ ಬಿದ್ದ ಗಿಲ್ಲಿ ನಟ: ರಕ್ಷಿತಾ ಶೆಟ್ಟಿಗೆ ಶುರುವಾಯ್ತಾ ಅಸೂಯೆ?

ಶಿವ ರಾಮ ಮತ್ತು ಅನ್ವೀರಾ ದೇವಿ ತಮ್ಮ ಸುಂದರ ಜೀವನ ಪ್ರಯಾಣವನ್ನು ಪ್ರಾರಂಭಿಸುತ್ತಿರುವಾಗ ನಾವು ಅವರಿಗೆ ನಿಮ್ಮ ಆಶೀರ್ವಾದವನ್ನು ಕೋರುತ್ತೇವೆ ಎಂದು ಮನವಿ ಮಾಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page