Connect with us

BANTWAL

ಬಂಟ್ವಾಳ: MRPL ಪೈಪ್‌ ಕೊರೆದು ಡಿಸೇಲ್‌ ಕಳವು-ಆರೋಪಿ ಪರಾರಿ

Published

on

ಬಂಟ್ವಾಳ: ಮಂಗಳೂರಿನಿಂದ ಬೆಂಗಳೂರಿಗೆ  ಹಾದು ಹೋಗುವ ಭೂಮಿಯಡಿಯ ಕೊಳವೆಯನ್ನು ಕೊರೆದು ಡೀಸೆಲ್‌ ಕಳವು ಮಾಡಿ, ಮಾರಾಟ ಮಾಡುತ್ತಿದ್ದ ಪ್ರಕರಣವೊಂದು ತಾಲೂಕಿನ ಅರಳ ಗ್ರಾಮದ ಸೋರ್ನಾಡು ಎಂಬಲ್ಲಿ ಪತ್ತೆಯಾಗಿದೆ. ಆರೋಪಿ ಪರಾರಿಯಾಗಿದ್ದಾನೆ.


ಸೋರ್ನಾಡು ಸಮೀಪದ ಅರ್ಬಿ ಎಂಬಲ್ಲಿನ ನಿವಾಸಿ, ಆರೋಪಿ ಐವನ್ ಎಂಬಾತ ತನಗೆ ಸೇರಿದ ಖಾಸಗಿ ಜಮೀನಿನ ರಸ್ತೆಯಲ್ಲಿ ಸುಮಾರು 20 ಅಡಿ ಆಳದಲ್ಲಿ ಹಾದು ಹೋಗಿರುವ ಡೀಸೆಲ್ ಸಾಗಾಟದ ಪೈಪ್ ಅನ್ನು ಅಗೆದು ಆ ಪೈಪ್ ಗೆ ಇನ್ನೊಂದು ಪೈಪ್ ಅಳವಡಿಸಿ ಸುಮಾರು ಅರ್ಧ ಕಿಲೋ ಮೀಟರ್ ದೂರದಲ್ಲಿ ಗೇಟ್ ವಾಲ್ ಅಳವಡಿಸಿ ಟ್ಯಾಪ್ ಮೂಲಕ ಡೀಸೆಲ್ ಕಳ್ಳತನ ಮಾಡಲಾಗುತ್ತಿತ್ತು. ಬಳಿಕ ಆರೋಪಿ ಕಳವು ಮಾಡಿದ ಡೀಸೆಲ್‌ ಅನ್ನು ವಾಹನಕ್ಕೆ ತುಂಬಿಸಿ ಮಾರಾಟ ಮಾಡುತ್ತಿದ್ದ.


ಕಂಪೆನಿಯಲ್ಲಿ ಕೆಲವು ದಿನಗಳಿಂದ ಪೈಪ್ ಲೈನ್ ನಲ್ಲಿ ಸಾಗುತ್ತಿದ್ದ ಡಿಸೇಲ್ ನ ಅಳತೆಯಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಸ್ವತಃ ಕಂಪೆನಿಯವರು ಮಂಗಳೂರು ಕಮೀಷನರ್ ಗೆ ದೂರು ನೀಡಿದ್ದರು. ಬಳಿಕ ಕಂಪೆನಿಯ ಅಧಿಕಾರಿಗಳು ಈ ಬಗ್ಗೆ ಕಂಪೆನಿಯ ತಂತ್ರಜ್ಞಾನ ಯಂತ್ರದಲ್ಲಿ ಪರಿಶೀಲನೆ ನಡೆಸಿದಾಗ ಡೀಸೆಲ್ ಸೋರಿಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಕಂಪೆನಿಯವರು ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆಗೆ ದೂರು ನೀಡಿದ್ದರು.


ದೂರಿನ ಮೇರೆಗೆ ಪೊಲೀಸರು ರಸ್ತೆಯನ್ನು ಅಗೆದು ಪರಿಶೀಲನೆ ನಡೆಸಿದಾಗ ಪೈಪ್ ಕೊರೆದು ಡೀಸೆಲ್‌ ಕಳವು ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ತನಿಖೆ ಆರಂಭಿಸಿದ್ಧಾರೆ.

BANTWAL

ಬಿ.ಸಿ.ರೋಡ್‌ ಸರ್ಕಲ್ ನಲ್ಲಿ ಭೀ*ಕರ ಕಾರು ಅಪ*ಘಾತ; ಮೂವರು ಸಾ*ವು, ಆರು ಮಂದಿಗೆ ಗಂ*ಭೀರ ಗಾಯ

Published

on

ಬಂಟ್ವಾಳ: ಬಿಸಿರೋಡ್‌ ಸರ್ಕಲ್ ನಲ್ಲಿ ಇಂದು ಮುಂಜಾನೆ ವೇಳೆ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಮೂವರು ಮೃತಪಟ್ಟು, ಆರು ಮಂದಿ ಗಾಯಗೊಂಡಿದ್ದಾರೆ.


ಬೆಂಗಳೂರಿನ 64 ವರ್ಷ ಪ್ರಾಯದ ರವಿ, 74 ವರ್ಷ ಪ್ರಾಯದ ನಂಜಮ್ಮ ಮತ್ತು 23 ವರ್ಷ ಪ್ರಾಯದ ರಮ್ಯ ಮೃತ ಪಟ್ಟವರು. ಕೀರ್ತಿ, ಸುಶೀಲ, ಬಿಂದು ಮತ್ತು ಪ್ರಶಾಂತ್‌ ಎಂಬ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಚಿಂತಾಜನಕ ಸ್ಥಿತಿಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಲಕ ಸುಬ್ರಹ್ಮಣ್ಯ ಮತ್ತು ಕಿರಣ್ ಎಂಬಿಬ್ಬರು ಸಾಮಾನ್ಯ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರಿನಿಂದ ಇನ್ನೋವಾ ಕಾರಿನಲ್ಲಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಕೃಷ್ಣನ ದರ್ಶನಕ್ಕೆಂದು ಹೊರಟಿದ್ದರು ಎಂದು ಹೇಳಲಾಗಿದೆ. ಒಂಬತ್ತು ಮಂದಿಯಲ್ಲಿ ರಮ್ಯಾ ಅವರು ಪೋಲೀಸ್ ಅಧಿಕಾರಿಯೊಬ್ಬರ ಪತ್ನಿ ಎಂದು ಹೇಳಲಾಗಿದೆಯಾದರೂ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ.

ಮುಂಜಾನೆ ಸುಮಾರು 4.40 ರ ಸಮಯದಲ್ಲಿ ಬೆಂಗಳೂರಿನ ಕಡೆಯಿಂದ ಬರುತ್ತಿದ್ದ ಕಾರು ಬಿಸಿರೋಡಿನ ಎನ್.ಜಿ.ಸರ್ಕಲ್ ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಓರ್ವ ಸ್ಥಳದಲ್ಲಿಯೇ ಮೃತಪಟ್ಟ್ಟಿದ್ದು ಉಳಿದಂತೆ ಇಬ್ಬರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಇದನ್ನೂ ಓದಿ: ಕೆಲಸ ಮಾಡುತ್ತಿದ್ದ ಹೋಟೆಲ್‌ನಲ್ಲಿಯೇ ನಡೆಯಿತು ಯುವಕನ ಭೀಕರ ಹ*ತ್ಯೆ

ಅವೈಜ್ಞಾನಿಕ ಮಾದರಿಯ ಸರ್ಕಲ್ ಅಪಘಾತಕ್ಕೆ ಕಾರಣ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದ್ದು, ಬಿ.ಸಿ.ರೋಡು – ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ನಿರ್ಮಾಣವಾದ ನೂತನ‌ ಸರ್ಕಲ್ ಗೆ ಪ್ರಥಮ ಬಲಿಯಾಗಿದೆ.

ಘಟನಾ ಸ್ಥಳಕ್ಕೆ ಟ್ರಾಫಿಕ್ ಎಸ್.ಐ.ಸುತೇಶ್ ಹಾಗೂ ಬಂಟ್ವಾಳ ಟ್ರಾಫಿಕ್ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading

BANTWAL

ಬಂಟ್ವಾಳ: ಅಶಕ್ತ ಕುಟುಂಬಕ್ಕೆ ಯುವವಾಹಿನಿ ಸಂಸ್ಥೆಯಿಂದ ಮನೆ ಹಸ್ತಾಂತರ

Published

on

ಬಂಟ್ವಾಳ: ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ ಮಾಣಿ ಘಟಕದ ಆತಿಥ್ಯದಲ್ಲಿ  ಅನಂತಾಡಿ ಗ್ರಾಮದ ಪೆಲತ್ತಡಿ ಕಮಲ ಪೂಜಾರ್ತಿ‌ಯವರಿಗೆ “ಯುವಾಶ್ರಯ, ”  ಮನೆ ಹಸ್ತಾಂತರ ಹಾಗೂ ತುಳಸಿ ಪೂಜೆ ಕಾರ್ಯಕ್ರಮ ಬುಧವಾರ ನಡೆಯಿತು. ಅಖಿಲ ಭಾರತ ಬಿಲ್ಲವ ಯೂನಿಯನ್ (ರಿ.) ಅಧ್ಯಕ್ಷ ಅಧ್ಯಕ್ಷ ನವೀನ್ ಚಂದ್ರ ಡಿ ಸುವರ್ಣ ಸಮಾರಂಭ ಉದ್ಘಾಟಿಸಿ ಶುಭ ಹಾರೈಕೆ ಮಾಡಿದರು.

ನೂತನ ಮನೆಯ ಕೀ ಹಸ್ತಾಂತರ ಮಾಡಿ ಮಾತನಾಡಿದ ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಪೂಜಾರಿ ಒಂದು ಬಡ ಕುಟುಂಬಕ್ಕೆ ಆಶ್ರಯವೆಂದರೆ ಅವರ ಬದುಕಿನ ಅತ್ಯಂತ ದೊಡ್ಡ ಕನಸು. ಆ ಕನಸನ್ನು ನಿಜಗೊಳಿಸುವ ಮೂಲಕ ಯುವವಾಹಿನಿಯ  ಯುವಕರು ಸಾಮಾಜಿಕ ಜವಾಬ್ದಾರಿ ಪ್ರದರ್ಶಿಸಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿದ್ದ ಯುವವಾಹಿನಿ (ರಿ.) ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ಮಾತನಾಡಿ ಯುವವಾಹಿನಿಯ ಪ್ರತಿಷ್ಠಿತ ಘಟಕವಾದ ಮಾಣಿ ಘಟಕದ ಸಾಧನೆ ಶ್ಲಾಘನೀಯ ಎಂದು ಹೇಳಿದರು. ಆಶ್ರಯ ಮನೆಯ ಫಲಾನುಭವಿಗಳ ಪರವಾಗಿ ಸತೀಶ್ ಪೂಜಾರಿ ಕೃತಜ್ಞತೆ ಸಲ್ಲಿಸಿದರು. ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷ ಶಿವರಾಜ್ ಪಿ ಆರ್  ಹಾಗೂ ಯುವವಾಹಿನಿ ಕೇಂದ್ರ ಸಮಿತಿಯ ಸಮಾಜ ಸೇವಾ ನಿರ್ದೇಶಕ ರವಿಚಂದ್ರರವರನ್ನು ಫಲಾನುಭವಿಗಳ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮನೆ ನಿರ್ಮಿಸಲು ಸಹಕಾರ ನೀಡಿದ ದಾನಿಗಳನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ, ಮಾಣಿ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಸುರೇಶ್ ಪೂಜಾರಿ ಸೂರ್ಯ, ವಕೀಲ ರಂಜಿತ್ ಪೂಜಾರಿ ಮೈರ ಸೇರಿದಂತೆ ಮಾಣಿ ಘಟಕದ ಸಮಾಜ ಸೇವಾ ನಿರ್ದೇಶಕ ಕಿರಣ್ ಗೋಳಿಕಟ್ಟೆ ಉಪಸ್ಥಿತರಿದ್ದರು.

 

 

 

Continue Reading

BANTWAL

ಬಂಟ್ವಾಳ: ಅವಿವಾಹಿತ ಯುವತಿ ಮನೆಯಿಂದ ನಾಪತ್ತೆ

Published

on

ಬಂಟ್ವಾಳ: ಅವಿವಾಹಿತ ಯುವತಿಯೋರ್ವಳು ಮನೆಯಿಂದ ಕಾಣೆಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಜನಪದವು ಎಂಬಲ್ಲಿ ನಡೆದಿದೆ.

ಆಲ್ಬರ್ಟ್ ಡಿ’ಸೋಜಾ ಎಂಬವರ ಪುತ್ರಿ ಮರಿಯಾ ಆಲ್ಬರ್ಟ್ ಡಿ’ ಸೋಜಾ ಎಂಬವಳು ಕಾಣೆಯಾದ ಯುವತಿ.

ಮೂಲತಃ ಮುಂಬಯಿ ನಿವಾಸಿಯಾಗಿದ್ದ ಮರಿಯಾ ಕಳೆದ ಐದು ತಿಂಗಳುಗಳಿಂದ ಬೆಂಜನಪದವು ಶಿವಾಜಿ ನಗರದಲ್ಲಿ ಅತ್ತೆ ಮೋಲಿ ಟೆಲ್ಲಿಸ್ ಅವರ ಮನೆಯಲ್ಲಿ ವಾಸವಾಗಿದ್ದಳು. ಒಂದು ವರ್ಷದ ಹಿಂದೆ ಆಕೆಯ ತಾಯಿ ಮೃತಪಟ್ಟಿದ್ದು, ತಂದೆ ಮುಂಬಯಿಯಲ್ಲಿದ್ದಾರೆ.

ಇದನ್ನೂ ಓದಿ: ಲಿವ್ ಇನ್ ರಿಲೇಶನ್ಶಿಪ್ ನಲ್ಲಿದ್ದ ಮಾಡೆಲ್ ನಿಗೂಢ ಸಾವು, ಪ್ರಿಯಕರ ಖಾಸಿಂ ನಾಪತ್ತೆ

ಹಾಗಾಗಿ ಮರಿಯಾ ಬೆಂಜನಪದವು ಅತ್ತೆ ಮನೆಯಲ್ಲಿ ವಾಸವಾಗಿದ್ದರು. ನವೆಂಬರ್ 9 ರಂದು ಮೋಲಿ ಟೆಲ್ಲಿಸ್ ಅವರು ಬೆಳಗ್ಗೆ ಚರ್ಚ್‌ ಗೆ ತೆರಳಿ ಪೂಜೆ ಮುಗಿಸಿ ವಾಪಸ್ ಮನೆಗೆ ಬಂದಾಗ ಮರಿಯಾ ಮನೆಯಲ್ಲಿ ಇಲ್ಲದೆ ಕಾಣೆಯಾಗಿದ್ದಾಳೆ ಎಂದು ಅವರು ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page