Connect with us

DAKSHINA KANNADA

ದ.ಕ ಜಿಲ್ಲೆಯತ್ತ ಗಮನ ನೀಡ್ತೇನೆ, ಮತ್ತೆ ಆಶೀರ್ವಾದ ಮಾಡಿ ಎಂದ ಸಂಸದ ನಳಿನ್

Published

on

Bantwal: ಸಂಸದ ನಳಿನ್ ಕುಮಾರ್ ಕಟೀಲ್ ಮತ್ತೆ ಲೋಕಸಭೆಗೆ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಬಂಟ್ವಾಳದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಭಾವುಕ ನುಡಿಗಳನ್ನಾಡಿದ ಅವರು, ನನ್ನ ವಿರುದ್ಧದ ಹಲವು ಟೀಕೆ, ಟಿಪ್ಪಣಿಯನ್ನ ಕೇಳಿದ್ದೇನೆ. ಹತ್ತಾರು ಬಾರಿ ನನಗಾದಂತಹ ಅಪಮಾನಗಳನ್ನ ಸಹಿಸಿಕೊಂಡಿದ್ದೇನೆ.

ನಾನು ಬಿಜೆಪಿಯ ವಿಚಾರಧಾರೆ ಒಪ್ಪಿದ ಕಾರಣ ಎಷ್ಟೇ ಅಪಮಾನವಾದರೂ ಸಹಿಸಿಕೊಂಡಿದ್ದೇನೆ. ನಿಮ್ಮ ಆಶಯಕ್ಕೆ ನಾನು ಕೈ ಮುಗಿಯುತ್ತೇನೆ. ಹಲವು ನೋವನ್ನ ಅನುಭವಿಸಿದ್ದೇನೆ. ಮುಂದಿನ ಲೋಕಸಭಾ ಸದಸ್ಯ ಸ್ಥಾನ ನನಗೆ ಸಿಗಬೇಕೆಂದಿಲ್ಲ. ಲೋಕಸಭಾ ಅಭ್ಯರ್ಥಿ ಯಾರೇ ಆದರೂ ನನ್ನ ಬೆಂಬಲವಿದೆ. ನನಗೂ ದುಃಖವಿದೆ. ಸಂಸದನಾದ ಬಳಿಕ ಹಳ್ಳಿ ಹಳ್ಳಿಗಳಿಗೆ ಬರಲು ಆಗಲಿಲ್ಲ.


ರಾಜ್ಯಾಧ್ಯಕ್ಷನ ನೆಲೆಯಲ್ಲಿ ಇಡೀ ರಾಜ್ಯದ ಜವಾಬ್ದಾರಿಯಿತ್ತು. ಪ್ರಾಮಾಣಿಕವಾಗಿ ಬಿಜೆಪಿಯನ್ನ ಹಳ್ಳಿ ಹಳ್ಳಿಗಳಿಗೆ ತಲುಪಿಸುವ ಕೆಲಸ ಮಾಡಿದ್ದೇನೆ. ಆದರೆ ನೀವು ತಲೆ ತಗ್ಗಿಸುವ ರೀತಿಯ ಕೆಲಸ ಮಾಡಲಿಲ್ಲ. ಈಗ ಮತ್ತೆ ನಾನು ದಕ್ಷಿಣ ಕನ್ನಡ ಜಿಲ್ಲೆಯತ್ತ ಗಮನ ನೀಡುತ್ತೇನೆ.

ನಿಮ್ಮ ಗೌರವಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಕೆಲಸ ಮಾಡುತ್ತೇನೆ. ಇನ್ನೂ ಉಳಿದಿರುವ 6 ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ನಿಮ್ಮ ಗ್ರಾಮಕ್ಕೆ ಬರುತ್ತೇನೆ. ಮತ್ತೆ ನಿಮ್ಮ ಆಶೀರ್ವಾದವನ್ನ ಕಾಲು ಮುಟ್ಟಿ ನಮಸ್ಕಾರ ಮಾಡುವ ಮೂಲಕ ಕೇಳುತ್ತೇನೆ ಎಂದಿದ್ದಾರೆ.

Advertisement
Click to comment

Leave a Reply

Your email address will not be published. Required fields are marked *

DAKSHINA KANNADA

ಕುಂಭದ್ರೋಣ ಮಳೆಗೆ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ತ

Published

on

ಬಂಟ್ವಾಳ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಾಗಾರಿ ಆರಂಭಗೊಂಡು ಹಲವು ವರ್ಷವಾದ್ರೂ ಇನ್ನೂ ಕೂಡಾ ಪೂರ್ಣಗೊಂಡಿಲ್ಲ. ಕೆಲವಡೆ ಸಂಚಾರಕ್ಕೆ ಯೋಗ್ಯವಾದ ರಸ್ತೆ ಏನೋ ನಿರ್ಮಾಣ ಮಾಡಲಾಗಿದೆಯಾದರೂ ಮಳೆಗಾಲದಲ್ಲಿ ನೀರು ಹರಿದು ಹೋಗುವ ವ್ಯವಸ್ಥೆಯೇ ಮಾಡಿಲ್ಲ.

 

ಕಳೆದ ವರ್ಷ ಇದೇ ಸಮಸ್ಯೆಯಿಂದ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಸಾಕಷ್ಟು ಸಮಸ್ಯೆ ಅನುಭವಿಸಿದ್ದರು. ಇದೀಗ ಮಳೆಗಾಲ ಸಮೀಪಿಸ್ತಾ ಇದ್ದು , ಅಕಾಲಿಕ ಮಳೆ ಕೂಡಾ ಆರಂಭವಾಗಿದೆ. ಭಾನುವಾರ ಬಂಟ್ವಾಳ ತಾಲೂಕಿನಲ್ಲಿ ಧಾರಾಕಾರವಾಗಿ ಮಳೆ ಸುರಿದಿದ್ದು, ಮತ್ತೆ ಹೆದ್ದಾರಿ ಪ್ರಯಾಣಿಕರಿಗೆ ಸಂಕಷ್ಟ ತಂದೊಡ್ಡಿದೆ. ಮಳೆಯಿಂದಾಗಿ ಹೆದ್ದಾರಿಯಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಪರದಾಡಿದ್ದಾರೆ.

ಬಂಟ್ವಾಳ ತಾಲೂಕಿ ಕಲ್ಲಡ್ಕ ಸಮೀಪದ ಸೂರಿಕುಮೇರು ಎಂಬಲ್ಲಿ ಹೆದ್ದಾರಿಯಲ್ಲಿ ನೀರು ತುಂಬಿಕೊಂಡು ಇಡೀ ರಸ್ತೆಯೇ ನದಿಯಂತಾಗಿ ಹೋಗಿದೆ. ಇದರ ನಡುವೆ ಸಣ್ಣಪುಟ್ಟ ವಾಹನಗಳು ಸಂಚರಿಸಲು ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗಿದ್ದು, ವಾಹನ ಸವಾರರು ಹೆದ್ದಾರಿ ಕಾಮಗಾರಿಗೆ ಹಿಡಿ ಶಾಪ ಹಾಕಿದ್ದಾರೆ.

ಇದನ್ನೂ ಓದಿ: ಉಡುಪಿ : ಹುಲಿ ವೇಷದಾರಿ ಹೃದಯಾಘಾತಕ್ಕೆ ಬಲಿ

ಹೆದ್ದಾರಿಯ ಇಕ್ಕೆಲೆಯಲ್ಲಿ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡದೇ ಇರುವುದು ಈ ಅವ್ಯವಸ್ಥೆಗೆ ಕಾರಣವಾಗಿದ್ದು, ತಕ್ಷಣವೇ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.

Continue Reading

DAKSHINA KANNADA

ರೈಲ್ವೇ ಇಲಾಖೆ ಪರೀಕ್ಷೆಯಲ್ಲೂ ಎಡವಟ್ಟು; ಜನಿವಾರದ ಜೊತೆ ತಾಳಿಗೂ ಕಂಟಕ

Published

on

ಮಂಗಳೂರು : ಇತ್ತಿಚೆಗೆ ಸಿಇಟಿ ಪರೀಕ್ಷೆಯ ವೇಳೆ ಜನಿವಾರ ತೆಗೆಸಿದ ವಿಚಾರವಾಗಿ ಬ್ರಾಹ್ಮಣ ಸಮೂದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಹಿಂದೂ ಸಂಘಟನೆಗಳೂ ಕೂಡ ಪರೀಕ್ಷಾರ್ಥಿಗಳಿಗೆ ಜನಿವಾರ ತೆಗೆಸಿದ ವಿಚಾರವಾಗಿ ಪ್ರತಿಭಟನೆ ನಡೆಸಿತ್ತು. ಇದೀಗ ರೈಲ್ವೇ ಇಲಾಖೆ ಕೂಡಾ ಇಂತಹದೇ ಒಂದು ಯಡವಟ್ಟು ಮಾಡಿದೆ. ಅದೇನು ಗೊತ್ತಾ ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಜನಿವಾರ ಪ್ರಕರಣ ತೀವ್ರ ಸುದ್ಧಿಯಾಗುತ್ತಿರುವ ಬೆನ್ನಲ್ಲೇ ಇದೀಗ ಪರೀಕ್ಷೆ ಬರೆಯಲು ಜನಿವಾರ ಮತ್ತು ಮಂಗಳ ಸೂತ್ರ ತೆಗೆದು ಬರುವಂತೆ ಸೂಚಿಸಿದೆ. ರೈಲ್ವೇ ಇಲಾಖೆಯ ನರ್ಸಿಂಗ್ ಸುಪರಿಂಟೆಂಡೆಂಟ್ ಹುದ್ದೆಗೆ ಏಪ್ರಿಲ್ 29 ರಂದು ಪರೀಕ್ಷೆ ನಡೆಯಲಿದ್ದು, ಹಾಲ್ ಟಿಕೇಟ್ ನಲ್ಲೇ ಈ ಸೂಚನೆಯನ್ನು ನೀಡಿದೆ.

ಮಂಗಳೂರು ನಗರದ ಬೋಂದೇಲ್‌ ಸಮೀಪದ ಮಣೇಲ್ ಶ್ರೀನಿವಾಸ್ ನಾಯಕ್ ಬೆಸೆಂಟ್ ವಿದ್ಯಾಕೇಂದ್ರದಲ್ಲಿ ರೈಲ್ವೇ ಇಲಾಖೆಯ ನರ್ಸಿಂಗ್ ಸುಪರಿಂಟೆಂಡೆಂಟ್ ಹುದ್ದೆಗೆ ಪರೀಕ್ಷೆ ನಡೆಯಲಿದ್ದು, ಹಾಲ್ ಟಿಕೇಟ್ ನಲ್ಲಿ ನಮೂದಿಸಿದ ವಿಚಾರ ಧಾರ್ಮಿಕ ಸ್ವಾತಂತ್ರ್ಯಕ್ಕೆ ದಕ್ಕೆ ತರುವ ವಿಚಾವಾಗಿದೆ. ಹೀಗಾಗಿ ಈ ಸೂಚನೆಯನ್ನು ರದ್ದು ಪಡಿಸುವಂತೆ ರೈಲ್ವೇ ಇಲಾಖೆಗೆ ಸೂಚಿಸಬೇಕು ಎಂದು ಹಿಂದೂ ಸಂಘಟನೆಯ ಪ್ರಮುಖರು ಒತ್ತಾಯಿಸಿದ್ದಾರೆ.

Continue Reading

DAKSHINA KANNADA

ವರುಣನ ಆರ್ಭಟಕ್ಕೆ ಮಂಗಳೂರು ಫುಲ್ ಕೂಲ್.. ಕೂಲ್.. !

Published

on

ಮಂಗಳೂರು : ಬೆಂದಿದ್ದ ಧರೆಯ ತಂಪಾಗಿಸಲು ಭುವಿಗಿಳಿದ ವರುಣ… ರಾತ್ರಿ ಮಲಗುವ ವೇಳೆ “ಎಂಥಾ ಸೆಕೆ ಮಾರ್ರೆ ?” ಎನ್ನುತ್ತಿದ್ದವರೂ ಸಹ ಫ್ಯಾನ್ ಆಫ್ ಮಾಡಿ ಮಲಗಿದ್ದಾರೆ. ಹೌದು .. ನಿನ್ನೆ(ಏ.27) ಕರ್ನಾಟಕದ ವಿವಿಧೆಡೆ ಭಾರಿ ಮಳೆಯಾಗಿದೆ. ಹವಾಮಾನ ಇಲಾಖೆ ಈ ಕುರಿತು ಮೊದಲೇ ಮುನ್ಸೂಚನೆ ನೀಡಿದೆ. ಅದರಲ್ಲೂ ದಕ್ಷಿಣ ಕನ್ನಡದ ಹಲವೆಡೆ ನಿನ್ನೆ ಹಾಗೂ ಮೊನ್ನೆ (ಏ.26) ಗುಡುಗು ಮಿಂಚು ಸಹಿತ ವರುಣನ ಆರ್ಭಟ ಜೊರಾಗಿಯೇ ಇತ್ತು,

ನಿನ್ನೆ ಹಗಲು ಬಿಸಿಲು ಇತ್ತು. ಆದರೆ ಸಂಜೆ ಹೊತ್ತಿಗೆ ಯಾರೂ ಊಹಿಸದ ರೀತಿ ಮಳೆ ಸುರಿದಿದೆ. ಧಾರಕಾರ ಮಳೆಯಿಂದ ಬಿಸಿ ಬಿಸಿಯಾಗಿದ್ದ ನಗರ ಫುಲ್ ಕೂಲ್ ಆಗಿದೆ. ಬಿಸಿ ವಾತಾವರಣ ಪೂರ್ತಿ ನಿವಾರಣೆಯಾಗಿದೆ.

ಎರಡು ಮೂರು ದಿನಗಳಿಂದ ದಕ್ಷಿಣ ಕನ್ನಡ ಹಲವು ಕಡೆಗಳಲ್ಲಿ ಆಗಾಗ ಮಳೆ ಕಾಣಿಸಿಕೊಳ್ಳುತ್ತಿದೆ. ಇಂದು (ಏ.28) ಮಂಗಳೂರು ನಗರದಲ್ಲಿ ಸಂಜೆ ವೇಳೆ ಮಳೆಯಾಗುವ ಸಾಧ್ಯತೆ ಇದೆ ಎಂಬುವುದಾಗಿ ಹವಮಾನ ಇಲಾಖೆ ಸೂಚಿಸಿದ್ದು, ಸಂಜೆ ತನಕ ಕಾದು ನೋಡಬೇಕಷ್ಟೇ.

Continue Reading
Advertisement

Trending

Copyright © 2025 Namma Kudla News

You cannot copy content of this page