Connect with us

LATEST NEWS

ಮನೆಯಲ್ಲಿ ತಾಯಿಯ ಶವವಿದ್ದರೂ ಪತ್ರಿಕಾ ಧರ್ಮ ಪಾಲಿಸಿದ ವಿತರಕ..!

Published

on

ಹಾವೇರಿ:  ಮನೆಯಲ್ಲಿ ತಾಯಿ ಮೃತಪಟ್ಟಿದ್ದರೂ ಪತ್ರಿಕಾ ವಿತರಕರೊಬ್ಬರು ಒದುಗರಿಗೆ ಸಮಸ್ಯೆಯಾಗಬಾರದು ಎಂದು ಮನೆಮನೆಗೆ  ನ್ಯೂಸ್ ಪೇಪರ್ ತಲುಪಿಸುವ ಮೂಲಕ ಕರ್ತವ್ಯಪ್ರಜ್ಞೆ ಮೆರೆದಿದ್ದಾರೆ.

ಹಾವೇರಿಯ ಸಂಜಯ ಮಲ್ಲಪ್ಪ ಏಳುಕೊಳದ ಅವರು ರಾಜ್ಯಮಟ್ಟ ಮತ್ತು ಸ್ಥಳೀಯ, ಪ್ರಾದೇಶಿಕ ದಿನಪತ್ರಿಕೆಗಳನ್ನು ಮನೆ ಮನೆಗೆ ಹಾಕುತ್ತಾರೆ. ಅವರ ತಾಯಿ ಶಾಂತವ್ವ ಏಳುಕೊಳದ ಅವರು ಬೆಳಗಿನ ಜಾವ 4 ಗಂಟೆ ವೇಳೆಗೆ ನಿಧನರಾಗಿದ್ದಾರೆ.

ತಾಯಿ ನಿಧನರಾದರೂ ಪತ್ರಿಕೆ ಓದುಗರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಸಂಜಯ ಸರಿಯಾದ ಸಮಯಕ್ಕೆ ಕೆಲಸಕ್ಕೆ ತೆರಳಿದ್ದಾರೆ.

ರಾಜ್ಯ ಮತ್ತು ಸ್ಥಳೀಯ ಪತ್ರಿಕೆ, ಪ್ರಾದೇಶಿಕ ಪತ್ರಿಕೆಗಳನ್ನು ಓದುಗರಿಗೆ ತಲುಪಿಸಿದ್ದಾರೆ. ಇವತ್ತು ಪತ್ರಿಕೆ ಹಾಕುವುದು ಬೇಡ, ಮನೆಗೆ ಹೋಗಿ ತಾಯಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಪತ್ರಿಕೆ ಸಂಪಾದಕರು, ವಿತರಕರು ತಿಳಿಸಿದ್ದಾರೆ.

ಆದರೂ. ಸಂಜಯ ಓದುಗರಿಗೆ ತೊಂದರೆಯಾಗದಿರಲೆಂದು ಬಸವೇಶ್ವರ ನಗರ, ವಿದ್ಯಾನಗರದ ತಮ್ಮ ರೂಟ್ ನಲ್ಲಿ ಚಂದಾದಾರರ ಮನೆಗಳಿಗೆ ಪತ್ರಿಕೆ ತಲುಪಿಸಿದ ನಂತರ ಮನೆಗೆ ತೆರಳಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

LATEST NEWS

ಕಂಗಲಾದ ರೈತರು; ಕರ್ನಾಟಕದಲ್ಲಿ ಹಸುಗಳನ್ನು ಕಾಡ್ತಾ ಇದೆ ಮಾರಣಾಂತಿಕ ಕಾಯಿಲೆ !

Published

on

ಮಂಗಳೂರು/ಬೆಂಗಳೂರು: ರಾಜ್ಯದಲ್ಲಿ ಹಸುಗಳಿಗೆ ಮಾರಣಾಂತಿಕ ಕಾಯಿಲೆ ಕಾಡುತ್ತಿದ್ದು, ಕಾಯಿಲೆಯ ಸುಳಿವೆ ಗೊತ್ತಾಗದೇ ಏಕಾಏಕಿ ಹಸುಗಳು ಸಾವನ್ನಪ್ಪುತ್ತಿವೆ.

ರಾಜಧಾನಿ ಬೆಂಗಳೂರಿನಲ್ಲಿಯೂ ಢವ ಢವ ಶುರುವಾಗಿದೆ. ರಾಮನಗರ ಪುಣ್ಯಕೋಟಿ ಗೋಶಾಲೆಯಲ್ಲಿ ಕೇವಲ 11ದಿನಗಳಲ್ಲಿ‌ 25 ಹಸುಗಳು ಸಾವನ್ನಪ್ಪುತ್ತಿವೆ. ತೀವ್ರ ಹೊಟ್ಟೆ ನೋವಿನಿಂದ ಬಳಲಿ ಸಾವನ್ನಪ್ಪುತ್ತಿವೆ.

ತೀವ್ರ ಹೊಟ್ಟೆ ನೋವಿನಿಂದ ಬಳಲಿ ಕೇವಲ ಒಂದು ದಿನದಲ್ಲೇ ಜಾನುವಾರುಗಳು ಸಾವನ್ನಪ್ಪುತ್ತಿವೆ. ಜಾನುವಾರುಗಳ ಶವ ಪರೀಕ್ಷೆಯಲ್ಲಿ ಹೆಮಾರಾಜಿಕ್ ಬೋವೆಲ್ ಸಿಂಡ್ರೋಮ್ ಇರುವ ಶಂಕೆ ವ್ಯಕ್ತವಾಗಿದೆ. ಈ ಹೆಮಾರಾಜಿಕ್ ಬೋವೆಲ್ ಸಿಂಡ್ರೋಮ್ ಅಂದ್ರೆ ತೀವ್ರ ಕರುಳಿನ ರಕ್ತ ಸ್ರಾವದಿಂದ ಸಾವನ್ನಪ್ಪಿರುವ ಹಸುಗಳ ಸಗಣಿಯಲ್ಲಿ ಮ್ಯೂಕಸ್ ಅಂಶ ಪತ್ತೆಯಾಗಿದೆ.

ಇದನ್ನೂ ಓದಿ: ಬಾಲಕನ ಕತ್ತು ಹೊಕ್ಕು ಎದೆ ಸೀಳಿದ್ದ ತೆಂಗಿನ ಗರಿ; ವೆನ್ಲಾಕ್ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ

ಹಸುಗಳಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡ 24 ಗಂಟೆಯಿಂದ 72 ಗಂಟೆಯೊಳಗೆ ಬಳಲಿ ಹಸುಗಳು ಸಾವನ್ನಪ್ಪುತ್ತಿವೆ. ಶಿವಮೊಗ್ಗ, ಶಿರಸಿ, ಚಿತ್ರದುರ್ಗ ಸೇರಿದಂತೆ ರಾಜ್ಯದ ಅನೇಕ ಭಾಗಗಳಲ್ಲಿ ಜಾನುವಾರುಗಳಿಗೆ ಈ ಕಾಯಿಲೆ ಕಾಣಿಸಿಕೊಳ್ಳುತ್ತಿದೆ.

ಏಕಾಏಕಿ ಹಸುಗಳ ಸಾವಿನಿಂದ ಗೋಶಾಲೆಗಳು ಹಾಗೂ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಕಾಯಿಲೆ ಬಂದ 100 ಹಸುಗಳಲ್ಲಿ 85ರಿಂದ90 ಹಸುಗಳು ಸಾವನ್ನಪ್ಪುವ ಸಂಭವ ಇದೆ ಎಂದು ಹೇಳಲಾಗಿದೆ. ಹೀಗಾಗಿ ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಬೇಕೆಂದು ಗೋಪಾಲಕರು ಮನವಿ ಮಾಡುತ್ತಿದ್ದಾರೆ. ಕೂಡಲೇ ಈ ಕಾಯಿಲೆ ಬಗ್ಗೆ ತಜ್ಞರ ಸಮಿತಿ ರಚಿಸಿ ರೋಗ ತಡೆಗಟ್ಟುವ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.

Continue Reading

DAKSHINA KANNADA

ಬಾಲಕನ ಕತ್ತು ಹೊಕ್ಕು ಎದೆ ಸೀಳಿದ್ದ ತೆಂಗಿನ ಗರಿ; ವೆನ್ಲಾಕ್ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ

Published

on

ಮಂಗಳೂರು: ಆಡುವಾಗ ಬಿದ್ದು ಗಂಭೀರ ಗಾಯಗೊಂಡಿದ್ದ ಯುವಕನಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆಯನ್ನು ಮಂಗಳೂರು ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಮಾಡಲಾಗಿದೆ.

ಮಡಿಕೇರಿ ಆಸ್ಪತ್ರೆಯಿಂದ ಆಗಮಿಸಿದ 12 ವರ್ಷದ ಬಾಲಕನಿಗೆ ಈ ಯಶಸ್ವಿ ಚಿಕಿತ್ಸೆ ನಡೆಸಲಾಗಿದ್ದು, ಬಾಲಕನ ಕುತ್ತಿಗೆಯಲ್ಲಿ ಹೊಕ್ಕಿ ಎದೆಯನ್ನು ಸೀಳಿದ್ದ ಮರದ ತುಂಡನ್ನು ಯಶಸ್ವಿಯಾಗಿ ತೆಗೆಯಲಾಗಿದೆ. ವೆನ್ಲಾಕ್ ಆಸ್ಪತ್ರೆಯ ಕಾರ್ಡಿಯೋಥೋರ್ಯಾಸಿಕ್ ಮತ್ತು ವಾಸ್ಕುಲರ್ ಸರ್ಜರಿ ವಿಭಾಗ ಡಾ. ಸುರೇಶ್ ಪೈ ಅವರ ನೇತೃತ್ವದಲ್ಲಿ ಈ ಸರ್ಜರಿ ನಡೆಸಲಾಗಿತ್ತು.

ಇದೊಂದು ತೀರಾ ಕ್ಲಷ್ಟಕರ ಶಸ್ತ್ರಚಿಕಿತ್ಸೆಯಾಗಿದ್ದು, ಸಿಟಿವಿಎಸ್ ತಂಡ ಇಂದು ಮುಂಜಾನೆ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ. ವೆನ್ಲಾಕ್ ಆಸ್ಪತ್ರೆಯ ವೈಧ್ಯರ ತಂಡದ ಈ ಕಾರ್ಯಕ್ಕೆ ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಮತ್ತು ಅಧೀಕ್ಷರರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Continue Reading

LATEST NEWS

ಚಾಲಕನಿಗೆ ಮೂರ್ಛೆ: ಮರಕ್ಕೆ ಢಿಕ್ಕಿ ಹೊಡೆದು 5 ಪ್ರಯಾಣಿಕರಿಗೆ ಗಾಯ

Published

on

ಚಾಮರಾಜನಗರ: ಬಸ್‌ ಚಲಾಯಿಸುತ್ತಿದ್ದ ಸಂದರ್ಭ ಚಾಲಕ ಮೂರ್ಛೆ ಬಿದ್ದು ನಿಯಂತ್ರಣ ತಪ್ಪಿದ ಕೆಎಸ್ಸಾರ್ಟಿಸಿ ಬಸ್​ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಐವರು ಪ್ರಯಾಣಿಕರು ಗಾಯಗೊಂಡ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಒಡೆಯರಪಾಳ್ಯ ಗ್ರಾಮದಿಂದ ಮೈಸೂರಿಗೆ ತೆರಳುತ್ತಿದ್ದ ಬಸ್​​ ಚಿಕ್ಕರಂಗಶೆಟ್ಟಿ ದೊಡ್ಡಿ ಗ್ರಾಮದ ಸಮೀಪ ತಲುಪಿದಾಗ ಬಸ್‌ ಚಾಲಕನಿಗೆ ದಿಢೀರ್ ಮೂರ್ಛೆ ರೋಗ ಕಾಣಿಸಿಕೊಂಡಿದೆ. ಪರಿಣಾಮ, ರಸ್ತೆ ಬದಿಯ ಮರಕ್ಕೆ ಬಸ್‌ ಢಿಕ್ಕಿ ಹೊಡೆದಿದೆ.

ಬಸ್‌ನಲ್ಲಿ 40ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಮುಂಭಾಗದಲ್ಲಿ ಕುಳಿತಿದ್ದ ಐವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅದೃಷ್ಟವಶಾತ್​​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Continue Reading
Advertisement

Trending

Copyright © 2025 Namma Kudla News

You cannot copy content of this page