Connect with us

LATEST NEWS

ಬಾವಿಯಲ್ಲಿ ತೇಲುತ್ತಿದ್ದ ತಾಯಿ ಮಕ್ಕಳ ಶವಗಳು: ಕೊಲೆಯೋ/ಆಕಸ್ಮಿಕವೋ

Published

on

ತುಮಕೂರು: ತನ್ನ ಇಬ್ಬರು ಮಕ್ಕಳೊಂದಿಗೆ ತಾಯಿ ಬಾವಿಗೆ ಬಿದ್ದು ಪ್ರಾಣ ತೆತ್ತ ಘಟನೆ ತುಮಕೂರು ತಾಲೂಕು ತಿರುಮಲ ಪಾಳ್ಯದಲ್ಲಿ ನಡೆದಿದೆ.

ಮೃತರನ್ನ ಹೇಮಲತಾ (34) ಹಾಗೂ ಮಕ್ಕಳಾದ ಮಾನಸ(6), ಪೂರ್ವಿಕ(3) ಎಂದು ಗುರುತಿಸಲಾಗಿದೆ.
ಇಂದು  ಹುಣ್ಣಿಮೆ ಪ್ರಯುಕ್ತ ತುಳಸಿಪುರ ಗ್ರಾಮ ವ್ಯಾಪ್ತಿಯಲ್ಲಿ ತಮ್ಮ ಅಡಿಕೆ ತೋಟಕ್ಕೆ ಪೂಜೆಗೆ ಹೇಮಲತಾ ತನ್ನ ಇಬ್ಬರು ಮಕ್ಕಳೊಂದಿಗೆ ತೆರಳಿದ್ದರು. ಹೋದವರು ಬೆಳಗ್ಗೆ 9 ಗಂಟೆ ಆದರೂ ಮನೆಗೆ ವಾಪಸ್ ಬಾರದ ಕಾರಣ ಪತಿ ಕುಮಾರ್ ತೋಟಕ್ಕೆ ಹೋಗಿ ನೋಡಿದಾಗ, ಬಾವಿಯಲ್ಲಿ ಮಗುವಿನ ಶವ ತೇಲುತ್ತಿತ್ತು.

ಇದನ್ನು ಗಮನಿಸಿದ ಅಕ್ಕ ಪಕ್ಕದ ಜಮೀನು ಮಾಲೀಕರು ಬಂದು ನೋಡಿದಾಗ ಮಗುವಿನ ಶವ ಮಾತ್ರ ಬಾವಿಯಲ್ಲಿ ತೇಲುತ್ತಿತ್ತು. ನಂತರ ಕೋರಾ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ.  ಪೊಲೀಸರು ಅಗ್ನಿಶಾಮಕ ದಳ ದೊಂದಿಗೆ ಸ್ಥಳಕ್ಕೆ ಬಂದು ಬಾವಿಯಲ್ಲಿ ಪರಿಶೀಲಿಸಿದಾಗ ಹೇಮಲತ ಹಾಗೂ ಮತ್ತೊಂದು ಮಗುವಿನ ಶವ ಪತ್ತೆಯಾಗಿದೆ. 3 ಶವಗಳನ್ನು ಬಾವಿಯಿಂದ ಹೊರ ತೆಗೆದು ಶವಪರೀಕ್ಷೆಗೆ ಕಳುಹಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯ ಉದ್ದೇಶಪೂರ್ವಕವಾಗಿಯೇ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರಾ? ಎಂಬುದನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಆತ್ಮಹತ್ಯೆ ಅಥವಾ ಆಕಸ್ಮಿಕವೇ?

ಪೋಲಿಸ್ ಮೂಲದ ಪ್ರಕಾರ ಮೊದಲನೆ ಮಗಳು ಮಾನಸ ಬಾವಿಯ ದಡದಲ್ಲಿದ್ದ ಸೀಬೆಹಣ್ಣಿನ ಮರದಲ್ಲಿ ಸೀಬೆಹಣ್ಣು ಕೀಳಲು ಹೋಗಿ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾಳೆ. ಆ ಸಂದರ್ಭದಲ್ಲಿ ಜತೆಯಲ್ಲೇ ಇದ್ದ ಮತ್ತೊಂದು ಮಗು ಪೂರ್ವಿಕಾಳು ಅಕ್ಕನಂತೆಯೇ ಬಾವಿಗೆ ಬಿದ್ದಿದ್ದಾಳೆ. ತನ್ನ ಇಬ್ಬರು ಮಕ್ಕಳು ಬಾವಿಗೆ ಬಿದ್ದಿದ್ದನ್ನು ನೋಡಿದ ತಾಯಿ ಹೇಮಲತಾ ಮಕ್ಕಳನ್ನು ರಕ್ಷಿಸಲೆಂದು ಬಾವಿಗೆ ಹಾರಿದ್ದಾರೆ. ದುರಾದೃಷ್ಟವಶಾತ್ ತಾಯಿ ಮತ್ತು ಇಬ್ಬರು ಮಕ್ಕಳು ಬಾವಿಯಿಂದ ಮೇಲೆ ಬರಲು ಸಾಧ್ಯವಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಪೂರವಾಡ್, ಡಿವೈಎಸ್ಪಿ ಶ್ರೀನಿವಾಸ್, ಸರ್ಕಲ್ ಇನ್​ಸ್ಪೆಕ್ಟರ್ ರಾಮಕೃಷ್ಣಯ್ಯ, ಕೋರಾ ಪಿಎಸ್ಐ ಹರೀಶ್‌ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

LATEST NEWS

ಉದ್ಯಮಿಯನ್ನು ‘ಹನಿಟ್ರ್ಯಾಪ್’ ಮಾಡಲು ಹೋಗಿ ತಗಲಾಕ್ಕೊಂಡ ನರ್ಸ್ & ಗ್ಯಾಂಗ್

Published

on

ಮಂಗಳೂರು/ದಾವಣಗೆರೆ : ಖಾಸಗಿ ಆಸ್ಪತ್ರೆ ನರ್ಸ್​​ ಒಬ್ಬಳು ಕಷ್ಟ ಎಂದು ಹೇಳಿಕೊಂಡು ಬಂದು ಉದ್ಯಮಿಗೆ ಗಾಳ ಹಾಕಿದ್ದಳು. ಆದರೆ, ಹಾಳು ಬುದ್ದಿ  ತೋರಿಸಿ ಇದೀಗ ಜೈಲು ಪಾಲಾಗಿದ್ದಾಳೆ. ಈ ಘಟನೆ ನಡೆದಿರೋದು ದಾವಣಗೆರೆಯಲ್ಲಿ.

ಸುಶ್ಮಿತಾ, ಬೆಕ್ಕಿನಕಣ್ಣು ಕೃಷ್ಣ, ರಾಹುಲ್, ಚನ್ನಬಸಪ್ಪ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಪರಿಚಯ…ಸಲುಗೆ…ಹನಿಟ್ರ್ಯಾಪ್ :

ಉದ್ಯಮಿ ಪ್ರಭು ಎನ್ನುವರನ್ನು ಪರಿಚಯ ಮಾಡಿಕೊಂಡ ನರ್ಸ್ ಸುಶ್ಮಿತಾ, ಮಕ್ಕಳ ಶಾಲಾ ಶುಲ್ಕ ಕಟ್ಟಬೇಕು, ಸಹಾಯ ಮಾಡುವಂತೆ ಕೇಳಿಕೊಂಡಿದ್ದಳು. ಬಳಿಕ ಈ ಪರಿಚಯ ಸ್ನೇಹವಾಗಿ ಬದಲಾಗಿತ್ತು. ಸುಶ್ಮಿತಾ ಒಂದು ತಿಂಗಳ ಹಿಂದೆ ಮೊದಲ ಬಾರಿಗೆ ಪ್ರಭುರನ್ನು ಅಪಾರ್ಟ್ಮೆಂಟ್‌ಗೆ ಕರೆಯಿಸಿಕೊಂಡಿದ್ದಳು. ಹೀಗೆ ಹಲವು ಬಾರಿ ಸರ್ವಿಸ್ ಅಪಾರ್ಟ್ಮೆಂಟ್‌ನಲ್ಲಿ ಇಬ್ಬರ ಭೇಟಿ ನಡೆಯುತ್ತಿತ್ತು.

ಇದನ್ನೂ ಓದಿ : ಆದಿಲಕ್ಷ್ಮೀ ಪುರಾಣ ಸೀರಿಯಲ್‌ನಿಂದ ಹೊರನಡೆದ ನಟಿ!

ಸುಶ್ಮಿತಾ ಹಾಗೂ ಪ್ರಭು ಒಟ್ಟಿಗೆ ಇದ್ದ ವೀಡಿಯೋವನ್ನು ಇತರ ಆರೋಪಿಗಳು ಮಾಡಿಕೊಂಡಿದ್ದರು. ಬಳಿಕ ಇದನ್ನೇ ಅಸ್ತ್ರವನ್ನಾಗಿಸಿಕೊಂಡಿದ್ದಾರೆ. ರೂಮಿಗೆ ನುಗ್ಗಿ, ವೀಡಿಯೋವನ್ನು ಸೋಷಿಯಲ್ ಮೀಡಿಯಾಗೆ ಹಾಕುತ್ತೇವೆ ಎಂದು ಹೆದರಿಸಿ  25 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಕೊನೆಗೆ ಪ್ರಭು, 12 ಲಕ್ಷಕ್ಕೆ ಒಪ್ಪಿಕೊಂಡಿದ್ದು, ಎರಡು ದಿನದಲ್ಲಿ ಹಣ ಕೊಡುವುದಾಗಿ ಹೇಳಿ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾರೆ. ಆರೋಪಿಗಳ ಬೆ*ದರಿಕೆಗೆ ಬೇಸತ್ತು ಠಾಣೆಗೆ ಪ್ರಭು ದೂರು ನೀಡಿದ್ದು,  ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Continue Reading

LATEST NEWS

ರಿಪ್ಪನ್‌ ಪೇಟೆ ಬಳಿ ಬೀಕರ ಅಗ್ನಿ ಅವಘಡ, ರಸ್ತೆ ಮಧ್ಯೆಯೇ ಬೆಂಕಿಗಾಹುತಿಯಾದ ಕಾರು

Published

on

ಶಿವಮೊಗ್ಗ: ಚಲಿಸುತ್ತಿದ್ದ ಮಾರುತಿ ಓಮ್ನಿ ಕಾರು ಆಕಸ್ಮಿಕವಾಗಿ ಬೆಂಕಿಗಾಹುತಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆ ಸಮೀಪದ ಬೆಳ್ಳೂರು ಬಳಿ ಶನಿವಾರ ತಡರಾತ್ರಿ ನಡೆದಿದೆ.


ಶಿವಮೊಗ್ಗದಿಂದ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಸಮೀಪದ ದೆಮ್ಲಾಪುರಕ್ಕೆ ಮದುವೆ ಕಾರ್ಯದ ನಿಮಿತ್ತವಾಗಿ ಕಾರಿನಲ್ಲಿ ದಿನಸಿ ಸಾಮಗ್ರಿಗಳನ್ನು ತುಂಬಿಕೊಂಡು ಹೋಗುತ್ತಿರುವಾಗ ಈ ಘಟನೆ ನಡೆದಿದೆ. ಕಾರಿನ ಎಂಜಿನ್ ಭಾಗದಲ್ಲಿ ಕಾಣಿಸಿಕೊಂಡ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣ ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: ಮಲಗಿದ್ದಲ್ಲೇ ಆರೋಗ್ಯ ಇಲಾಖೆ ನೌಕರ ಹೃದಯಾ*ಘಾತಕ್ಕೆ ಬ*ಲಿ

ಚಾಲಕ ಶ್ರೀಕಾಂತ್ ಮತ್ತು ಮತ್ತೊಬ್ಬ ಪ್ರಯಾಣಿಕ ಗಂಗಾಧರ ಗೌಡ ಅವರು ಹೊಗೆ ಕಾಣಿಸಿಕೊಂಡ ತಕ್ಷಣ ಕಾರಿನಿಂದ ಕೆಳಗಿಳಿದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಕಾರು ರಸ್ತೆ ಮಧ್ಯೆಯೇ ಧಗಧಗನೆ ಉರಿದು ಸಂಪೂರ್ಣವಾಗಿ ಭಸ್ಮವಾಗಿದೆ.

Continue Reading

FILM

‘ನಮ್ಮನ್ನ ಯಾಕೆ ಮದುವೆಗೆ ಕರೆದಿಲ್ಲ?’: ವಿಜಯ್-ರಶ್ಮಿಕಾ ವಿರುದ್ಧ ಮುನಿಸಿಕೊಂಡ ಪುಟ್ಟ ಅಭಿಮಾನಿ!

Published

on

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇತ್ತೀಚೆಗೆ ಉದಯಪುರದಲ್ಲಿ ವಿವಾಹವಾದರು. ಈ ಮದುವೆಗೆ ತನ್ನನ್ನು ಕರೆದಿಲ್ಲ ಎಂದು ಪುಟ್ಟ ಅಭಿಮಾನಿಯೊಬ್ಬರು ಕೋಪದಿಂದ ವಿಡಿಯೋ ಮಾಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಆ ಪುಟ್ಟ ಬಾಲಕಿ ವಿಡಿಯೋದಲ್ಲಿ, “ನಾನು ಕೂಡ ನಿಮ್ಮ ಅಭಿಮಾನಿಯಲ್ಲವೇ? ನಮ್ಮನ್ನು ಯಾಕೆ ಮದುವೆಗೆ ಕರೆಯಲಿಲ್ಲ?” ಎಂದು ಮುಗ್ಧವಾಗಿ ಪ್ರಶ್ನಿಸಿದ್ದಾಳೆ.
ಈ ವಿಡಿಯೋಗೆ ವಿಜಯ್ ಅವರು ತುಂಬಾ ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ. “ಬುಜ್ಜಿ ತಲ್ಲಿ.. ನಿನ್ನನ್ನು ಮನೆಗೆ ಊಟಕ್ಕೆ ಕರೆಯುತ್ತೇನೆ. ನಿನಗೆ ಇಷ್ಟವಾದ ಅಡುಗೆ ಮತ್ತು ಸಿಹಿತಿಂಡಿಗಳನ್ನು ಹೇಳು, ಮನೆಯಲ್ಲಿ ಎಲ್ಲವನ್ನೂ ಮಾಡಿಸಿ ಒಟ್ಟಿಗೆ ತಿನ್ನೋಣ” ಎಂದು ಕಮೆಂಟ್ ಮಾಡಿದ್ದಾರೆ.

ನಟಿ ರಶ್ಮಿಕಾ ಕೂಡ ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದು, ಆ ಬಾಲಕಿಗೆ ವಿಶೇಷ ಉಡುಗೊರೆ ನೀಡುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ತರಗತಿಯಲ್ಲೇ ಮಲಗಿ ವಿದ್ಯಾರ್ಥಿನಿಯರಿಂದ ಮಸಾಜ್ ಮಾಡಿಸಿಕೊಂಡ ಶಿಕ್ಷಕಿ; ವಿಡಿಯೋ ವೈರಲ್!

ಈ ದಂಪತಿಗಳು ತಮ್ಮ ಮದುವೆಯ ನಂತರ ದೇವಸ್ಥಾನಗಳಲ್ಲಿ ಸಿಹಿತಿಂಡಿ ಹಂಚುವ ಮೂಲಕ ಮತ್ತು ಅಭಿಮಾನಿಗಳೊಂದಿಗೆ ವಿಶೇಷ ಊಟ ಮಾಡುವ ಮೂಲಕ ಸಂಭ್ರಮವನ್ನು ಆಚರಿಸಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page