Connect with us

FILM

ಒಂದೇ ಧಾರಾವಾಹಿಯಲ್ಲಿ ತಾಯಿ, ಮಗ, ಮಗಳು; ಲಕ್ಷ್ಮೀ ನಿವಾಸಕ್ಕೆ ಬಂದ ಹೊಸ ನಟಿ ಯಾರು ಗೊತ್ತಾ?

Published

on

ಮಂಗಳೂರು/ಬೆಂಗಳೂರು : ಕೌಟುಂಬಿಕ ಕಥಾಹಂದರ ಹೊಂದಿರುವ ಧಾರಾವಾಹಿ ‘ಲಕ್ಷ್ಮೀ ನಿವಾಸ’. ಮಧ್ಯಮ ವರ್ಗದ ಬದುಕು, ಬವಣೆ ಈ ಧಾರಾವಾಹಿಯ ಜೀವಾಳ. ತಂದೆ – ತಾಯಿ ತಮ್ಮ ಮಕ್ಕಳಿಗಾಗಿ ಪಡುವ ಪಾಡು, ಗಂಡು ಮಕ್ಕಳ ದರ್ಪ, ಹೆಣ್ಣು ಮಕ್ಕಳ ಅಸಹಾಯಕತೆ, ಶ್ರೀಮಂತರ ದಬ್ಬಾಳಿಕೆ ಇತ್ಯಾದಿಯನ್ನೊಳಗೊಂಡ ಲಕ್ಷ್ಮೀನಿವಾಸ ಜನರ ಮನಮುಟ್ಟುವಂತೆ ಚಿತ್ರೀಕರಿಸಲಾಗುತ್ತಿದೆ.

ಈ ಧಾರಾವಾಹಿಯಲ್ಲಿ ದೊಡ್ಡ ತಾರಾಬಳಗವೇ ಇದೆ. ಮತ್ತೊಂದು ಅಪರೂಪದ ಸಂಗತಿ ಅಂದ್ರೆ ಲಕ್ಷ್ಮೀ ನಿವಾಸದಲ್ಲಿ ಒಂದೇ ಕುಟುಂಬದ ಮೂವರು ನಟಿಸಿರೋದು. ಕಣ್ಣು ಕಾಣದ ಮಹಿಳೆಯಾಗಿ ನಟಿಸುತ್ತಿರುವ ಚೆಲ್ವಿಯ ತಾಯಿ ಬೇರ್ಯಾರು ಅಲ್ಲ. ಅದು, ಸಿದ್ದೇಗೌಡರ ಅಂದ್ರೆ ಧನಂಜಯ್ ಅವರ ತಾಯಿ. ಬಣ್ಣದ ಲೋಕದಲ್ಲಿ ಹಲವು ವರ್ಷಗಳಿಂದ ಮಿನುಗುತ್ತಿರೋ ಹಿರಿಯ ನಟಿ ಅನ್ನಪೂರ್ಣ.

ಸಿದ್ದೇಗೌಡರ ಅಭಿನಯಕ್ಕೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದು, ತಾಯಿ ಅನ್ನಪೂರ್ಣ ಅಭಿನಯಕ್ಕೂ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಇದೀಗ ಈ ಕುಟುಂಬದ ಮತ್ತೊಂದು ಕುಡಿ  ಲಕ್ಷ್ಮೀ ನಿವಾಸಕ್ಕೆ ಲಗ್ಗೆ ಇಟ್ಟಿದೆ. ಹೌದು, ಅನ್ನಪೂರ್ಣ ಅವರ ಮಗಳು ಲಕ್ಷ್ಮೀನಿವಾಸದಲ್ಲಿ ಪಾತ್ರವಾಗುತ್ತಿದ್ದಾರೆ.

ತನು ಪಾತ್ರಕ್ಕೆ ಎಂಟ್ರಿಕೊಟ್ಟ ಧನಂಜಯ್ ತಂಗಿ:

ವಿಶ್ವ ವಿಶ್ವ ಎಂದು ತನ್ನ ಮಾವನ ಮಗನ ಹಿಂದೆ ಅಲೆಯುತ್ತಾ ತಲೆಹರಟೆ ಮಾಡುವವಳು ತನು. ಆದರೆ, ವಿಶ್ವಂಗೆ ಮಾತ್ರ ಜಾನು ಜಪ.  ಈ ತನು ಪಾತ್ರದಲ್ಲಿ ಮಿಂಚಿರೋದು ಯುಕ್ತಾ. ಇದೀಗ ಯುಕ್ತಾ ಧಾರಾವಾಹಿಯಿಂದ ಹೊರನಡೆದಿದ್ದಾರೆ. ಆ ಜಾಗಕ್ಕೆ ಬಂದಿರೋರು ಬೇರ್ಯಾರೂ ಅಲ್ಲ ಧನಂಜಯ್ ತಂಗಿ ಮಹಾಲಕ್ಷ್ಮೀ.

ಮಹಾಲಕ್ಷ್ಮೀ ಮಾಡೆಲ್. ಈಗಾಗಲೇ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕುಬುಸ, ಥಗ್ಸ್ ಆಫ್ ರಾಮಘಡ, ಸ್ವಪ್ನ ಮಂಟಪ ಮೊದಲಾದ ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಇದೀಗ ತನ್ನ ತಾಯಿ, ಅಣ್ಣ ನಟಿಸುತ್ತಿರುವ ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ : ಆರ್‌ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ; ವಿರಾಟ್ ಕೊಹ್ಲಿ ವಿರುದ್ಧ ಪೊಲೀಸರಿಗೆ ದೂರು

ಯುಕ್ತಾ ಧಾರಾವಾಹಿ ತೊರೆದಿದ್ದೇಕೆ?

ತನು ಪಾತ್ರದಲ್ಲಿ ಯುಕ್ತಾ ಚೆನ್ನಾಗಿ ಅಭಿನಯಿಸುತ್ತಿದ್ದರು. ಪ್ರೇಕ್ಷಕರಿಗೆ ಇಷ್ಟವಾಗಿದ್ದರು. ಆದರೆ, ಇದ್ದಕ್ಕಿಂದ್ದಂತೆ ಧಾರಾವಾಹಿ ತೊರೆದಿದ್ದೇಕೆ ಎಂಬ ಪ್ರಶ್ನೆ ಅವರ ಅಭಿಮಾನಿಗಳದ್ದು. ಇದೀಗ ಯುಕ್ತಾ ಸೋಶಿಯಲ್ ಮೀಡಿಯಾದಲ್ಲಿ  ಉತ್ತರ ಕೊಟ್ಟಿದ್ದಾರೆ.

ನಾನು ಧಾರಾವಾಹಿ ತೊರೆದಿರುವ ಬಗ್ಗೆ ಅನೇಕ ಮಂದಿ ಮೆಸೇಜ್ ಮಾಡುತ್ತಿದ್ದಾರೆ. ನಾನು ಧಾರಾವಾಹಿಯಿಂದ ಹೊರ ಬಂದಿದ್ದು ಹೌದು, ಅದಕ್ಕೆ ಕಾರಣ ಆರೋಗ್ಯ ಸಮಸ್ಯೆ. ಧನ್ಯವಾದ ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ ಸ್ಟೋರಿ ಹಾಕಿದ್ದಾರೆ.

FILM

ರಾಕ್ ಸ್ಟಾರ್ ರೂಪೇಶ್ ಶೆಟ್ಟಿಯ ‘ಜೈ’ ಸಿನಿಮಾ ಬಿಡುಗಡೆಗೆ ಡೇಟ್ ಫಿಕ್ಸ್

Published

on

ಮಂಗಳೂರು: ನಟ, ನಿರ್ದೇಶಕ ರಾಕ್ ಸ್ಟಾರ್ ರೂಪೇಶ್ ಶೆಟ್ಟಿಯವರ ಬಹುನಿರೀಕ್ಷಿತ ಸಿನಿಮಾ ‘ಜೈ’. ಗಿರಿಗಿಟ್, ಗಮ್ಜಾಲ್, ಸರ್ಕಸ್ ನಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ರೂಪೇಶ್ ಶೆಟ್ಟಿ ಇದೀಗ ‘ಜೈ’ ಮೂಲಕ ಎಂಟ್ರಿ ಕೊಡುತ್ತಿದ್ದಾರೆ.

ಬಿಗ್ ಬಜೆಟ್ ಸಿನಿಮಾವಾಗಿರುವ ‘ಜೈ’ ಚಿತ್ರ ಯಾವಾಗ ತೆರೆಗೆ ಬರುತ್ತೋ ಎಂದು ಕಾದವರಿಗೆ ಸಿಹಿ ಸುದ್ದಿ ಕೊಟ್ಟಿದೆ ಚಿತ್ರತಂಡ. ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ.

ನವೆಂಬರ್ 14 ರಂದು ಚಿತ್ರ ತುಳು ಹಾಗೂ ಕನ್ನಡ ಎರಡೂ ಭಾಷೆಗಳಲ್ಲೂ ತೆರೆಗೆ ಅಪ್ಪಳಿಸಲಿದೆ. ಅಂದಹಾಗೆ, ಈ ಚಿತ್ರದಲ್ಲಿ ರೂಪೇಶ್ ಶೆಟ್ಟಿ ನಟನಾಗಿದ್ದು, ಜೊತೆಗೆ ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದು, ಅದ್ವಿತಿ ಶೆಟ್ಟಿ ನಾಯಕಿಯಾಗಿ ಮಿಂಚಿದ್ದಾರೆ. ಇನ್ನು ಬಾಲಿವುಡ್ ನಟ ಸುನಿಲ್ ಶೆಟ್ಟಿ ಈ ಚಿತ್ರದ ಮೂಲಕ ಕೋಸ್ಟಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದು ಸುದ್ದಿಯಾಗಿತ್ತು. ಇವರೊಂದಿಗೆ ದೇವದಾಸ್ ಕಾಪಿಕಾಡ್, ರಾಜ್ ದೀಪಕ್ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ ವಾಮಂಜೂರ್ ಮೊದಲಾದವರು ಪಾತ್ರವಾಗಿದ್ದಾರೆ.

ಕತೆ, ಸಂಭಾಷಣೆ ಪ್ರಸನ್ನ ಶೆಟ್ಟಿ ಬೈಲೂರು ಬರೆದಿದ್ದು, ವಿನುತ್ ಕೆ. ಕ್ಯಾಮರಾ ವರ್ಕ್, ಲೊಯ್ ವೆಲೆಂಟಿನ್ ಸಲ್ದಾನ ಸಂಗೀತ ಚಿತ್ರಕ್ಕಿದೆ. ಆರ್. ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಡಿ ಚಿತ್ರ ನಿರ್ಮಾಣವಾಗಿದೆ.

Continue Reading

FILM

ಕುಂದಾಪುರದಲ್ಲಿ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ನಟ ರಿಷಬ್ ಶೆಟ್ಟಿ

Published

on

ಕುಂದಾಪುರ: ಕಾಂತಾರ’ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿರುವ ರಿಷಬ್ ಶೆಟ್ಟಿ ಅವರು ಇಂದು (ಜುಲೈ 7) ತಮ್ಮ 42ನೇ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ.

‘ಕಾಂತಾರ ಅಧ್ಯಾಯ-1 ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿ ಇರುವ ಅವರು, ಸದ್ಯ ಕುಂದಾಪುರದಲ್ಲೇ ಬೀಡುಬಿಟ್ಟಿದ್ದಾರೆ. ಅಲ್ಲಿಯೇ ಅವರು ಹುಟ್ಟುಹಬ್ಬ ಆಚರಣೆಯನ್ನು ಮಾಡಿಕೊಂಡಿದ್ದಾರೆ. ಪ್ರೀತಿಯ ಮಡದಿ ಪ್ರಗತಿ ಶೆಟ್ಟಿ ಅವರು ಪತಿ ರಿಷಬ್ ಕೇಕ್ ತಿನ್ನಿಸಿ, ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಹುಟ್ಟುಹಬ್ಬ ಆಚರಿಸಿಕೊಂಡ ರಿಷಬ್ ಅವರಿಗೆ ದುರ್ಗಾಸ್ತಮಾನ ಮತ್ತು ಸೀತಾ ಪುಸ್ತಕಗಳನ್ನು ಗಿಫ್ಟ್ ನೀಡಲಾಯಿತು.

ಇದನ್ನೂ ಓದಿ: ಮದುವೆಯಾದ 6 ತಿಂಗಳಿಗೆ ಪೊಲೀಸ್ ಪೇದೆ ಹಣದಾಸೆಗೆ ಬಲಿಯಾದ್ಲು ಪತ್ನಿ?

ನಟ ರಿಷಬ್ ಶೆಟ್ಟಿ ಬರ್ತ್ ಡೇಯಲ್ಲಿ ವಿಜಯ್ ಕಿರಗಂದೂರು, ಚೆಲುವೇಗೌಡ ಸೇರಿದಂತೆ ಟೀಮ್ ಸದಸ್ಯರು ಭಾಗಿಯಾಗಿದ್ದಾರೆ. ಅಲ್ಲದೇ ನಟ ರಿಷಬ್ ಶೆಟ್ಟಿ ಹುಟ್ಟು ಹಬ್ಬದ ನಿಮಿತ್ತ ಹೊಂಬಾಳೆ ಸಂಸ್ಥೆಯು ಕಾಂತಾರ ಚಾಪ್ಟರ್ 1 ಸ್ಪೆಷಲ್ ಪೋಸ್ಟರ್ ರಿಲೀಸ್ ಮಾಡಿ ಅಭಿಮಾನಿಗಳಿಗೆ ಸರ್‌ಪ್ರೈಸ್ ಕೊಟ್ಟಿದ್ದಾರೆ.

Continue Reading

FILM

ಡಿವೈನ್ ಸ್ಟಾರ್ ಹುಟ್ಟುಹಬ್ಬಕ್ಕೆ ‘ಕಾಂತರ-1’ ಚಿತ್ರ ತಂಡದಿಂದ ಹೊರಬಿತ್ತು ಬಿಗ್ ಅಪ್‌ಡೇಟ್

Published

on

ಡಿವೈನ್ ಸ್ಟರ್ ರಿಷಭ್ ಶೆಟ್ಟಿ ಅವರ ಜನ್ಮದಿನದಂದೇ ‘ಕಾಂತರ: ಚಾಪ್ಟರ್1’ ಕಡೆಯಿಂದ ದೊಡ್ಡ ಅಪ್‌ಡೇಟ್ ಒಂದು ಬಂದಿದೆ. ಇದು ಅಭಿಮಾನಿಗಳಲ್ಲಿ ಭಾರಿ ಉತ್ಸಾಹ ಮೂಡಿಸಿದೆ.


ರಿಷಭ್ ಶೆಟ್ಟಿ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು ಹಾಗೂ ಸ್ನೇಹಿತರು ಅವರಿಗೆ ಬರ್ತ್‌ಡೇ ವಿಶ್ ಮಾಡುತ್ತಿದ್ದಾರೆ. ಈ ವಿಶೇಷ ದಿನದಂದು ‘ಕಾಂತಾರ-1’ ಕಡೆಯಿಂದ ಬಿಗ್ ಅಪ್ಡೇಟ್ ಹೊರಬಿದ್ದಿದೆ.

ನಟ ರಿಷಬ್​ ಶೆಟ್ಟಿ ಹುಟ್ಟು ಹಬ್ಬದ ನಿಮಿತ್ತ ಹೊಂಬಾಳೆ ಸಂಸ್ಥೆ ಕಾಂತಾರ ಚಾಪ್ಟರ್ 1​ ಸ್ಪೆಷಲ್ ಪೋಸ್ಟರ್ ರಿಲೀಸ್ ಮಾಡಿ ಅಭಿಮಾನಿಗಳಿಗೆ ಸರ್​ಪ್ರೈಸ್​ ಕೊಟ್ಟಿದ್ದಾರೆ. ರಿಲೀಸ್​ ಆಗಿರೋ ಪೋಸ್ಟರ್​ನಲ್ಲಿ ಕಲರಿಯಪಟ್ಟು ಲುಕ್​ನಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಅಕ್ಟೋಬರ್ 2ರಂದು ಸಿನಿಮಾ ರಿಲೀಸ್ ದಿನಾಂಕ ಫಿಕ್ಸ್ ಆಗಿದೆ.

ಇದನ್ನೂ ಓದಿ: ನಟ ದರ್ಶನ್ ಬಳಿ ಕ್ಷಮೆ ಕೇಳಿದ ಮಡೆನೂರು ಮನು

ಸಾಲು ಸಾಲು ಸರಣಿ ಅವಘಡಗಳಿಂದ ಸಿನಿಮಾ ರಿಲಿಸ್ ವಿಳಂಬ ಆಗಲಿದೆ ಎಂದು ಹೇಳಲಾಗುತ್ತಿತ್ತು. ಈ ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹಬ್ಬಿದ್ದವು. ಆದರೆ ಸಿನಿಮಾ ತಂಡ ಇದನ್ನು ಅಲ್ಲಗಳೆದಿದೆ. ಅಂದುಕೊಂಡ ದಿನಾಂಕದಂದೇ ಸಿನಿಮಾ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಬೆಂಗಾಲಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ‘ಕಾಂತಾರ-1’ ಅದ್ದೂರಿಯಾಗಿ ಅಕ್ಟೋಬರ್-2ರಂದು ರಿಲೀಸ್ ಆಗಲಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page