Connect with us

bengaluru

Banglore:ಬೆಸ್ಕಾಂ ನಿರ್ಲಕ್ಷಕ್ಕೆ ಬಲಿಯಾದ ಎರಡು ಜೀವಗಳು..!

Published

on

ಬೆಂಗಳೂರು: ತಮಿಳುನಾಡಿನಿಂದ ಬೆಂಗಳೂರಿನ ಮನೆಗೆ ತರಳುವ ಸಂದರ್ಭ ತಾಯಿ ಮಗಳಿಬ್ಬರು ದಾರುಣವಾಗಿ ಮರಣ ಹೊಂದಿದ್ದಾರೆ. ಬೆಂಗಳೂರಿನ ವೈಟ್ ಫೀಲ್ಡ್ ಕಾಡುಗೋಡಿಯಲ್ಲಿ ಈ ದುರ್ದೈವ ಘಟನೆ ನಡೆದಿದೆ.ಬೆಸ್ಕಾಂ ನಿರ್ಲಕ್ಷವೇ ಈ ಅನಾಹುತಕ್ಕೆ ಕಾರಣವಾಗಿದೆ.

ತಾಯಿ ಲೀಲಾ ಹಾಗೂ ಮಗಳು ಸೌಂದರ್ಯ ಇವರಿಬ್ಬರು ಇಂದು ಮುಂಜಾನೆ 5 ರ ವೇಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ನೆಲದಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಕಾಣಿಸದೆ ಕತ್ತಲಿದ್ದರಿಂದ ಅದನ್ನು ತುಳಿದ ಕಾರಣ ವಿದ್ಯುತ್ ಪ್ರವಹರಿಸಿ ಸಾವನ್ನಪ್ಪಿದ್ದಾರೆ.

Advertisement
Click to comment

Leave a Reply

Your email address will not be published. Required fields are marked *

bengaluru

ತಲೆ ಮೇಲೆ ಹರಿದ ಟ್ರಕ್‌; ವೃದ್ಧೆ ಮೃತ್ಯು

Published

on

ಬೆಂಗಳೂರು: ಶೇಷಾದ್ರಿಪುರ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯ ಓಕಳಿಪುರ ರೈಲ್ವೆ ರಸ್ತೆಯನ್ನು ದಾಟುತ್ತಿದ್ದ ವೇಳೆ ಟ್ರಕ್‌ ಡಿಕ್ಕಿ ಹೊಡೆದ ಪರಿಣಾಮ ವೃದ್ಧೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶುಕ್ರವಾರ(ಡಿ.12)ಸಂಜೆ ನಡೆದಿದೆ.


ಶ್ರೀರಾಂಪುರದ ನಿವಾಸಿ, ಲಲಿತಮ್ಮ (61) ಮೃತರು.

ಹೌಸ್‌ ಕೀಪಿಂಗ್‌ ಕೆಲಸ ಮಾಡುತ್ತಿದ್ದ ಲಲಿತಮ್ಮ ಶುಕ್ರವಾರ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್‌ ಬರುತ್ತಿದ್ದರು. ಆ ವೇಳೆ ವೇಗವಾಗಿ ಬಂದ ಟ್ರಕ್‌ ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಅವರು ಕೆಳಗೆ ಬಿದ್ದಾಗ ಅವರ ತಲೆ ಮೇಲೆಯೇ ಟ್ರಕ್‌ನ ಚಕ್ರ ಹರಿದ ಪರಿಣಾಮ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.

ಇದನ್ನೂ ಓದಿ: ಮಂಗಳೂರು| ಆತ್ಮಹತ್ಯೆ ಮಾಡಿಕೊಂಡ ಯುವಕ

ಟ್ರಕ್‌ನ್ನು ಜಪ್ತಿ ಮಾಡಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.

Continue Reading

bengaluru

ವಿಶೇಷ ಚೇತನ ಯುವತಿಯನ್ನೂ ಬಿಡದ ಕಾಮುಕ, ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ ಸ್ಥಳೀಯರು

Published

on

ಬೆಂಗಳೂರು: ಗಾಂಜಾ ನಶೆಯಲ್ಲಿದ್ದ ಕಾಮುಕನೊಬ್ಬ ವಿಶೇಷ ಚೇತನ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಅಮಾನವೀಯ ಘಟನೆ ಬೆಂಗಳೂರಿನ ಆಡುಗೋಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿಘ್ನೇಶ್ ಅಲಿಯಾಸ್​​ ದಾಡು ಎಂಬಾತನಿಂದ ಕೃತ್ಯ ನಡೆದಿದ್ದು, ಆರೋಪಿಯನ್ನು ಹಿಡಿದು ಥಳಿಸಿರುವ ಸ್ಥಳೀಯರು ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಆರೋಪಿ ಅತ್ಯಾಚಾರಕ್ಕೆ ಯತ್ನಿಸಿದ್ದ ಎನ್ನಲಾಗಿದೆ. ಮದುವೆಗೆ ಎಂದು ಸಂತ್ರಸ್ತೆ ಕುಟುಂಬಸ್ಥರು ತೆರಳಿದ್ದು, ವಿಶೇಷ ಚೇತನ ಯುವತಿಯನ್ನು ಮನೆಯಲ್ಲೇ ಬಿಟ್ಟು ಹೋಗಿದ್ದರು. ಬೆಳಗ್ಗೆ 11 ಗಂಟೆ ಸುಮಾರಿಗೆ ಬಂದ ಗಾಂಜಾ ನಶೆಯಲ್ಲಿದ್ದ ಆರೋಪಿ ವಿಘ್ನೇಶ್, ಚಿಲಕ ಹಾಕಿದ್ದ ಮನೆಗೆ ನುಗ್ಗಿದ್ದಾನೆ.

ಬಳಿಕ ಮನೆಯ ಒಳಗಿನಿಂದ ಚಿಲಕ ಹಾಕಿಕೊಂಡಿದ್ದಾನೆ. ಈ ವೇಳೆ ಮಗಳನ್ನು ನೋಡಿಕೊಂಡು ಹೋಗೋಣ ಎಂದು ತಾಯಿ ಬಂದಾಗ ಮನೆ ಒಳಗಿನಿಂದ ಚಿಲಕ ಹಾಕಿರುವುದು ಗೊತ್ತಾಗಿದೆ. ಹೀಗಾಗಿ ಕಾಲಿನಿಂದ ಒದ್ದು ಆಕೆ ಬಾಗಿಲನ್ನು ತೆರೆದಿದ್ದು, ಮಗಳ ಸ್ಥಿತಿ ಕಂಡು ಶಾಕ್​ ಆಗಿದ್ದಾಳೆ.

ವಿಶೇಷ ಚೇತನ ಯುವತಿ ಮೇಲೆ ಅತ್ಯಾಚಾರ ನಡೆಸಲು ಆರೋಪಿ ಮುಂದಾಗಿದ್ದನು. ಘಟನೆ ಬಳಿಕ ತಕ್ಷಣ ಅಲರ್ಟ್​ ಆದ ಸ್ಥಳೀಯರು ಆರೋಪಿ ವಿಘ್ನೆಶ್​ನನ್ನು ಹಿಡಿದು ಮನಸೋ ಇಚ್ಛೆ ತಳಿಸಿದ್ದಾರೆ. ಬಳಿಕ ಪೊಲೀಸರಿಗೆ ವಿಘ್ನೇಶ್​​ನನ್ನು ಒಪ್ಪಿಸಲಾಗಿದ್ದು, ಆರೋಪಿಯನ್ನ ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.

 

 

Continue Reading

bengaluru

ಪತ್ನಿಯ ಮಿತಿಮೀರಿದ ಅನುಮಾನ, ನೇಣಿಗೆ ಶರಣಾದ ಬ್ಯಾಂಕ್ ಉದ್ಯೋಗಿ..!

Published

on

ಬೆಂಗಳೂರು: ಪತ್ನಿಯಿಂದ ಕಿರುಕುಳ ತಾಳಲಾರದೇ ಬ್ಯಾಂಕ್‌ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಗಿರಿನಗರದಲ್ಲಿ ನಡೆದಿದೆ.

ಗಗನ್ ರಾವ್ ನೇಣಿಗೆ ಶರಣಾದ ಪತಿ. 8 ತಿಂಗಳ ಹಿಂದಷ್ಟೇ ಮೇಘನಾ ಜಾವ್‌ ಅವರೊಂದಿಗೆ ಗಗನ್‌ ರಾವ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬ್ಯಾಂಕ್‌ ಉದ್ಯೋಗಿಯಾಗಿದ್ದ ಗಗನ್‌ ಪತ್ನಿ ವಿರುದ್ಧ ಕಿರುಕುಳ ಆರೋಪ ಮಾಡಿ ನೇಣಿಗೆ ಶರಣಾಗಿದ್ದಾರೆ. ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇಘನಾ, ಗಗನ್‌ ಮೇಲೆ ಅನುಮಾನ ಪಡುತ್ತಿದ್ದಳಂತೆ. ಇದೇ ವಿಚಾರಕ್ಕೆ ಮನೆಯಲ್ಲಿ ಹಲವು ಬಾರಿ ಗಲಾಟೆ ಆಗಿತ್ತು. ಬಳಿಕ ಕೋಪಿಸಿಕೊಂಡು ತವರಿಗೆ ಹೋಗಿದ್ದ ಮೇಘನಾ, ಇತ್ತೀಚೆಗಷ್ಟೇ ಗಂಡನ ಮನೆಗೆ ವಾಪಸ್‌ ಬಂದಿದ್ದಳು.

ನಿನ್ನೆ ರಾತ್ರಿ ಮತ್ತೆ ಗಲಾಟೆ ನಡೆದಿದೆ. ಇದರಿಂದ ಬೇಸತ್ತ ಗಗನ್‌ ನೇಣಿಗೆ ಶರಣಾಗಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page