Connect with us

LATEST NEWS

ಮೂಡುಶೆಡ್ಡೆ ಹಲ್ಲೆ, ಪ್ರತೀಕಾರ ಪ್ರಕರಣ- ಉಳಿದ ಆರೋಪಿಗಳ ಶೀಘ್ರ ಬಂಧನ: ಎನ್‌.ಶಶಿಕುಮಾರ್‌

Published

on

ಮಂಗಳೂರು: ನಗರದ ಹೊರವಲಯದ ಮೂಡುಶೆಡ್ಡೆಯಲ್ಲಿ ಬುಧವಾರ ತಡರಾತ್ರಿ ಯುವಕನೋರ್ವನಿಗೆ ನಡೆದ ಹಲ್ಲೆ ಹಾಗೂ ಪ್ರತೀಕಾರದ ಹಲ್ಲೆಯಲ್ಲಿ ತಂಡ ಚಾಕು ತೋರಿಸಿ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂಬ ದೂರು ದಾಖಲಾದ ಹಿನ್ನೆಲೆ ಈಗಾಗಲೇ 7 ಜನರ ಬಂಧನವಾಗಿದೆ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌ ಮಾಹಿತಿ ನೀಡಿದ್ದಾರೆ.
ಬಂಧಿತರನ್ನು ನಿಝಾಮ್, ಶಾರುಖ್, ದಾವೂದ್ ಹಕೀಮ್ ಹಾಗು ರೌಡಿ ಶೀಟರ್ ಗಳಾದ ರಿಝ್ವಾನ್, ಮುಸ್ತಫಾ ಎಂದು ಗುರುತಿಸಲಾಗಿದೆ.
ಅ.6ರಂದು ರಾತ್ರಿ 11ರ ವೇಳೆಗೆ ವ್ಯಕ್ತಿಯೋರ್ವ ತನ್ನ ಸ್ನೇಹಿತರ ಜತೆ ನಿಂತಿರುವಾಗ ನಾಲ್ಕು ಮಂದಿ ಆರೋಪಿಗಳು ಬಂದು

‘ಒಬ್ಬ ರಾಜಕೀಯ ಪಕ್ಷದ ಮುಖಂಡನ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪೋಸ್ಟ್‌ ಹಾಕ್ತೀಯಾ’ ಎಂದು ಬೆದರಿಸಿ ಕೈಗಳಿಂದ ಹಲ್ಲೆ ನಡೆಸಿದ್ದರು. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಇದಕ್ಕೆ ಪ್ರತಿಯಾಗಿ ಮರುದಿನ ಸಂಜೆ ಹಲ್ಲೆಗೊಳಗಾದವ,

ಆತನ ಸಹೋದರ ಹಾಗೂ ಇತರ ಹಲವರು ಮೂಡುಶೆಡ್ಡೆ ಪರಿಸರಕ್ಕೆ ಮಾರಕಾಯುಧದೊಂದಿಗೆ ಬೆದರಿಸಿ, ಹಲ್ಲೆಗೆ ಯತ್ನಿಸಿದ್ದಾರೆ. ಈ ಬೆದರಿಕೆ ವೀಡಿಯೊ ವೈರಲ್ ಆಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿ 5 ಮಂದಿಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಶಶಿಕುಮಾರ್‌ ತಿಳಿಸಿದ್ದಾರೆ.
ಈ ಪೈಕಿ ಇಬ್ಬರಿಗೆ ಅಪರಾಧ ಹಿನ್ನೆಲೆ ಇದೆ. ಇವರಿಬ್ಬರು ಕಾವೂರು ಠಾಣೆಯ ರೌಡಿ ಶೀಟರ್‌ ಗಳಾಗಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ.


ಇನ್ನುಳಿದಂತೆ ಮೊದಲು ಹಲ್ಲೆ ಮಾಡಿದವರ ವಿರುದ್ಧ ಈಗಾಗಲೇ ಎಫ್‌ಐಆರ್‌ ದಾಖಲಾಗಿದ್ದು, ಈ ಪ್ರಕರಣದ ಆರೋಪಿಗಳನ್ನೂ ಬಂಧಿಸಲು ಸೂಚನೆ ನೀಡಿದ್ದೇನೆ ಎಂದು ಮಾಹಿತಿ ನೀಡಿದ್ದೇನೆ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಮಾಹಿತಿ ನೀಡಿದ್ದಾರೆ.

LATEST NEWS

ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ; ಸವಾರ ಸಾವು

Published

on

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಚಲಿಸುತ್ತಿದ್ದ ಬೈಕ್ ಸವಾರನ ಮೇಲೆ ಮರವೊಂದು ಬಿದ್ದು, ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಎನ್.ಆರ್. ಪುರ ಬಳಿ ನಡೆದಿದೆ.

ಬಿಳುಕೊಪ್ಪ ಗ್ರಾಮದ ಅನಿಲ್ (53) ಮೃತ ದುರ್ದೈವಿ. ಮೃತ ಅನಿಲ್ ಬೈಕ್‌ನಲ್ಲಿ ಬಾಳೆಹೊನ್ನೂರಿಗೆ ಹೋಗುತ್ತಿದ್ದರು. ಈ ವೇಳೆ ಎಲೆಕಲ್ ಘಾಟಿ ಬಳಿ ಹೋಗುವಾಗ ಭಾರೀ ಗಾಳಿ-ಮಳೆಗೆ ಮರ ಬಿದ್ದಿದ್ದು, ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದರು.

ಇದನ್ನೂ ಓದಿ: ಇಂದಿನಿಂದ ಬೆಳ್ತಂಗಡಿಯ ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧ

ಈ ವೇಳೆ ಸ್ಥಳಕ್ಕೆ ಬಾಳೆಹೊನ್ನೂರು ಪಿಎಸ್‌ಐ ರವೀಶ್ ಭೇಟಿ ನೀಡಿ, ಅಗ್ನಿಶಾಮಕ ವಾಹನದಲ್ಲೇ ಗಾಯಾಳುವನ್ನು ಆಸ್ಪತ್ರೆಗೆ ರವಾನಿಸಿದ್ದರು. ಆದರೆ ತಲೆಗೆ ಭಾರೀ ಪೆಟ್ಟು ಬಿದ್ದ ಪರಿಣಾಮ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

Continue Reading

LATEST NEWS

ಮಹಿಳೆಯ ಬೆತ್ತಲೆ ವೀಡಿಯೋ ಮಾಡಿ ಬ್ಲ್ಯಾಕ್ ಮೇಲ್: ಅರ್ಚಕ ಅರೆಸ್ಟ್..!

Published

on

ಮಂಗಳೂರು/ಬೆಂಗಳೂರು: ಕೇರಳದ ತ್ರಿಶೂರ್‌ನ ಪೆರಿಗೊಟ್ಟುಕ್ಕಾರ ದೇವಾಲಯದ ಅರ್ಚಕ ಅರುಣ್‌ನನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯೊಬ್ಬರ ಬೆತ್ತಲೆ ವಿಡಿಯೋ ರೆಕಾರ್ಡ್‌ ಮಾಡಿಕೊಂಡು ಬ್ಲ್ಯಾಕ್‌ಮೇಲ್‌ ಮಾಡಿದ ಆರೋಪದ ಮೇಲೆ ಈ ಬಂಧನ ನಡೆದಿದೆ. ಆದರೆ, ಪ್ರಕರಣದ ಮುಖ್ಯ ಆರೋಪಿ, ದೇವಾಲಯದ ಮುಖ್ಯ ಅರ್ಚಕ ಉನ್ನಿ ದಾಮೋದರನ್‌ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.


ಬೆಂಗಳೂರಿನ ಮಹಿಳೆಯೊಬ್ಬರು ಕುಟುಂಬದಲ್ಲಿ ನಾನಾ ಸಮಸ್ಯೆ ಆಗ್ತಿದೆ. ಯಾರೋ ಮಾಟಮಂತ್ರ ಮಾಡಿದ್ದಾರೆ ಅಂತ ನಿವಾರಣೆ ಪೂಜೆ ಮಾಡಿಸಲು ಕೇರಳದ ತ್ರಿಶೂರ್​ನ ಪೆರಿಗೊಟ್ಟುಕ್ಕಾರ ದೇವಸ್ಥಾನಕ್ಕೆ ತೆರಳಿದ್ರು. ಇನ್ಸ್ಟಾಗ್ರಾಂ ನೋಡಿ ಈ ದೇವಾಲಯಕ್ಕೆ ಹೋಗಿದ್ರಂತೆ ಈ ಮಹಿಳೆ, ಆಗ ದೇವಾಲಯದ ಅರ್ಚಕ ಅರುಣ್ ಪರಿಚಯ ಆಗಿದೆ. ಆಕೆಗೆ ಗಂಡ ಇಲ್ಲ ಅನ್ನೋದನ್ನು ಅರಿತ ಅರ್ಚಕರು ತಮ್ಮ ಕಳ್ಳಾಟ ಶುರು ಮಾಡಿದ್ದಾರೆ ಎನ್ನಲಾಗ್ತಿದೆ.

24 ಸಾವಿರ ಹಣ ಕೊಟ್ಟರೇ ಪೂಜೆ ಮಾಡೋದಾಗಿ ಅರುಣ್ ಹೇಳಿದ್ದರಂತೆ. ಬಳಿಕ ಮಹಿಳೆ ನಂಬರ್ ಪಡೆದು ಹೇಳಿದ ದಿನ ಬರುವಂತೆ ಸೂಚನೆ ನೀಡಿದ್ದ. ಇದಾದ ಬಳಿಕ ಅರ್ಚಕ ಮಹಿಳೆಗೆ ತಡರಾತ್ರಿಯಲ್ಲಿ ನಿರಂತರ ವಾಟ್ಸಾಪ್ ಕರೆ ಮಾಡಿದ್ದಾರೆ. ತಾನು ಬೆತ್ತಲಾಗಿ, ಮಹಿಳೆಯನ್ನು ಬೆತ್ತಲಾಗುವಂತೆ ಬಲವಂತ ಮಾಡಿದ್ದಾನೆ ಎಂದು ಮಹಿಳೆ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಪ್ರೀತಿಸುತ್ತಿದ್ದವಳನ್ನೇ ಕೊ*ಲೆ ಮಾಡಿದ ಪ್ರಿಯಕರ 6 ತಿಂಗಳ ಬಳಿಕ ಸಿಕ್ಕಿಬಿದ್ದ

ಆದರೆ ಸಂತ್ರಸ್ತೆ ಅದಕ್ಕೆ ಒಪ್ಪಿರಲಿಲ್ಲ. ಇದರಿಂದ ಕೋಪಗೊಂಡಿದ್ದ ಆತ, ಮಕ್ಕಳ ಮೇಳೆ ಮಾಟ ಮಂತ್ರ ಮಾಡಿಸುವೆ ಎಂದು ಬೆದರಿಕೆ ಹಾಕಿ, ಮಹಿಳೆ ನಗ್ನಳಾಗುವಂತೆ ಮಾಡಿದ್ದ. ಅದಾದ ನಂತರ ಮತ್ತೆ ವಿಶೇಷ ಪೊಜೆಗೆಂದು ದೇವಸ್ಥಾನಕ್ಕೆ ಬರುವಂತೆ ತಿಳಿಸಿದ್ದ. ಬ್ಲ್ಯಾಕ್​ಮೇಲ್​​ಗೆ ಹೆದರಿ ಮಹಿಳೆ ದೇಗುಲಕ್ಕೆ ತೆರಳಿದ್ದರು. ಆಕೆಯ ಬಳಿ ಪೂಜೆ ಮಾಡಿಸಿದ್ದ ಅರುಣ್ ಹಾಗೂ ಮುಖ್ಯ ಅರ್ಚಕ, ಧಾರ್ಮಿಕ ಕ್ರಿಯೆ ಇದೆ ಎಂದು ಬಲವಂತವಾಗಿ ಕಾರಿನಲ್ಲಿ ಕಾಡಿಗೆ ಕರೆದುಕೊಂಡು ಹೋಗಿ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಮುಂದಾಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇಬ್ಬರು ಅರ್ಚಕರ ಕಿರುಕುಳಕ್ಕೆ ಬೇಸತ್ತ ಮಹಿಳೆ ಬೆಳ್ಳಂದೂರು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಅರ್ಚಕ ಅರುಣ್ ಬಂಧನವಾಗಿದ್ದು, ಮುಖ್ಯ ಅರ್ಚಕ ಉನ್ನಿ ದಾಮೋದರನ್ ಪರಾರಿ ಆಗಿದ್ದಾರೆ. ತಡರಾತ್ರಿ ಅರುಣ್ ಮಾಡ್ತಾ ಇದ್ದ ಮೆಸೇಜ್ ಸ್ಕ್ರೀನ್ ಶಾಟ್ ಗಳನ್ನು ಮಹಿಳೆ ಪೊಲೀಸರಿಗೆ ನೀಡಿದ್ದಾರೆ.

Continue Reading

BELTHANGADY

ಇಂದಿನಿಂದ ಬೆಳ್ತಂಗಡಿಯ ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧ

Published

on

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಬೆಳ್ತಂಗಡಿಯ ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧಿಸಲಾಗಿದೆ.

 

ಜಮಲಾಬಾದ್ ಗಡ (ಗಡಾಯಿಕಲ್ಲು), ಬಂಡಾಜೆ, ಬೊಳ್ಳೆ, ದಿಡುಪೆ ಜಲಪಾತ ಪ್ರವಾಸಿ ತಾಣಗಳಿಗೆ ಜೂ.16ರಿಂದ ಮುಂದಿನ ಆದೇಶದವರೆಗೆ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಿ ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

READ IN ENGLISH : https://www.nammakudlaenglish.com/entry-to-tourist-spots-in-belthangady-banned-from-today/

ಇದನ್ನೂ ಓದಿ: ಉಡುಪಿ: ಮಲಗಿದ್ದಾತನ ಮೇಲೆ ಕತ್ತಿಯಿಂದ ಹ*ಲ್ಲೆ ನಡೆಸಿದ ದುಷ್ಕರ್ಮಿ

Continue Reading
Advertisement

Trending

Copyright © 2025 Namma Kudla News

You cannot copy content of this page